ವಿಷಯಕ್ಕೆ ಹೋಗು

ಸಾಲಿ ರಾಮಚಂದ್ರ ರಾಯರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಾಲ್ಯ ಜೀವನ

[ಬದಲಾಯಿಸಿ]

ಸಾಲಿ ರಾಮಚಂದ್ರ ರಾಯರು ಜನಿಸಿದ್ದು ೧೮೮೮ರ ಅಕ್ಟೋಬರ್ ೧೦ರಂದು. ರಾಮದುರ್ಗ ಅವರ ಹುಟ್ಟೂರು ತಂದೆ ಸುಬ್ರಾಯ ಸಾಲಿಯವರು. ಬಾಲ್ಯದಲ್ಲೇ ತಂದೆ-ತಾಯಿರನ್ನು ಕಳೆದುಕೊಂಡು ಅನಾಥರಾಗಿ ಬೆಳಗಾವಿ ಬಿಜಾಪುರಕ್ಕೆ ಬಂದು ವಾರಾನ್ನ ಮಾಡಿಕೊಂಡು ವಿದ್ಯಾಭ್ಯಾಸ ಮಾಡಿದರು.

ಉದ್ಯೋಗ

[ಬದಲಾಯಿಸಿ]

ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಂಚೆ ಕಛೇರಿಯಲ್ಲಿ ನೌಕರಿ ಹಿಡಿದರು. ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ನೌಕರಿ ಬಿಟ್ಟರು. ಕೆಲಕಾಲ ಹುಬ್ಬಳ್ಳಿಯ ತೊರವಿ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ದುಡಿದರು. ಪುನಃ ನೌಕರಿ ಬಿಟ್ಟು ಪುಣೆಗೆ ಹೋಗಿ ಬಿ.ಎ. ಪರೀಕ್ಷೆ ಪಾಸು ಮಾಡಿ ದರು. ನಂತರ ವಿಜಾಪುರದ ಶೀಕೃಷ್ಣ ಪಾಠಶಾಲೆಯಲ್ಲಿ ನೌಕರಿ ಮಾಡಿದರು. ಅಸಹಕಾರ ಆಂದೋಲನದಲ್ಲಿ ಭಾಗವಹಿಸಲು ಮತ್ತೆ ನೌಕರಿ ತ್ಯಜಿಸಿದರು.

ಸಾಹಿತ್ಯಕ್ಕೆ ಇತರ ಕೊಡುಗೆಗಳು

[ಬದಲಾಯಿಸಿ]

೧೯೨೪ ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೇಸ್ ಅಧಿವೇಶನದಲ್ಲಿ ಮಹಾತ್ಮ ಗಾಂಧಿಯವರು ಮಾಡಿದ ಭಾಷಣವನ್ನು ಕನ್ನಡಕ್ಕೆ ಅನುವಾದಿಸಿದವರು ಸಾಲಿಯವರು. ಅವರು ಕೆಲಕಾಲ ಆಲೂರಜಯಕರ್ನಾಟಕದಲ್ಲಿ ಉಪ ಸಂಪಾದಕರಾಗಿಯೂ ಸೇವೆ ಸಲ್ಲಿಸಿದರು. ಆಧುನಿಕ ಕನ್ನಡ ಕಾವ್ಯದ ಶ್ರೇಷ್ಠ ಗೀತ ಕವಿ ಎಂದು ಸಾಲಿಯವರನ್ನು ವಿಮರ್ಶಕರು ಬಣ್ಣಿಸಿದ್ದಾರೆ. ಶ್ರೀರಾಮಚರಿತವು ಎಂಬ ಮಹಾಕಾವ್ಯವನ್ನು ೧೯೩೪ರಿಂದ ಕೆಲವು ವರ್ಷಗಳ ಕಾಲ ಬರೆದು ಪ್ರಕಟಿಸಿದರು. ಬಂಗಾಲಿ, ಇಂಗ್ಲಿಷ್, ಗುಜರಾತಿ, ಮರಾಠಿ, ಹಿಂದಿಯಿಂದ ಹಲವಾರು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಇವರ ಕೆಲವು ಕೃತಿಗಳು

[ಬದಲಾಯಿಸಿ]
  1. ಬುಧ್ಧನ ಜಾತಕಗಳು
  2. ಸಿಪಾಯಪ್ಪ
  3. ಜಯಗುರುದೇವ
  4. ಯದುಪತಿ
  5. ತಿಲಾಂಜಲಿ
  6. ಅಭಸಾರ
  7. ಚಿಗುರೆಲೆ
  8. ಸುಕನ್ಯ

ಪ್ರಶಸ್ತಿ

[ಬದಲಾಯಿಸಿ]

೧೯೬೮ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಅವರು ಪಡೆದರು.

ಸಾಲಿ ರಾಮಚಂದ್ರರಾಯರು ನಿಧನ ಹೊದಿದ್ದು ೧೯೭೮ ಅಕ್ಟೋಬರ್ ೩೧ರಂದು.