ಸಲೇಶಿಯಾ
ಗೋಚರ
ಸಲೇಶಿಯಾ ಒಂದು ಅಳಿವಿನಂಚಿನಲ್ಲಿರುವ ಪಶ್ಚಿಮ ಘಟ್ಟ ಶ್ರೇಣಿಗಳಲ್ಲಿ ಕಂಡುಬರುವ ಸಸ್ಯ ಪ್ರಬೇಧ. ಇದನ್ನು ಏಕನಾಯಕನ ಬಳ್ಳಿಯೆಂದೂ ಕರೆಯುತ್ತಾರೆ. ಸಲೇಶಿಯಾ ರೆಟಿಕುಲೇಟ ಇದರ ವೈಜ್ಞಾನಿಕ ಹೆಸರು.
ಸಸ್ಯದ ರಚನೆ
[ಬದಲಾಯಿಸಿ]ಸಸ್ಯವು ಎರಡು ವಿಧದ ಕವಲೊಡೆಯುವ ಮಾದರಿಯನ್ನು ಹೊಂದಿದೆ. ತೊಗಟೆಯು ನಯವಾಗಿ ಹಸಿರು ಅಥವಾ ಬೂದು ಬಣ್ಣದಲ್ಲಿರುತ್ತವೆ. ಎಲೆಗಳು ಅಭಿಮುಖ ಮತ್ತು ಅಂಡಾಕಾರದಲ್ಲಿರುತ್ತವೆ. ಹೂವುಗಳು ಉಭಯಲಿಂಗಿಯಾಗಿರುತ್ತವೆ. ಹಣ್ಣು ಗೋಳಾಕಾರದಲ್ಲಿದ್ದು ೧-೪ರಷ್ಟು ಬೀಜಗಳಿರುತ್ತವೆ.
ಬೆಳೆಯುವ ಪ್ರದೇಶ
[ಬದಲಾಯಿಸಿ]ಶ್ರೀಲಂಕಾದಲ್ಲಿನ ಶುಷ್ಕ ವಲಯ ಕಾಡುಗಳಲ್ಲಿ ಸಲೇಶಿಯಾ ಬೆಳೆಯುತ್ತದೆ. ಭಾರತದ ಪಶ್ಚಿಮ ಘಟ್ಟ ಶ್ರೇಣಿಗಳಲ್ಲಿ ಇದರ ಪ್ರಬೇಧಗಳು ಇದ್ದು ಪ್ರಸ್ತುತ ಈ ಸಸ್ಯಗಳು ಅಳಿವಿನಂಚಿನಲ್ಲಿದೆ.[೧]
ಉಪಯೋಗ
[ಬದಲಾಯಿಸಿ]ಸಾಂಪ್ರದಾಯಿಕ ಭಾರತೀಯ ಔಷಧಿಯಾದ ಆಯುರ್ವೇದದಲ್ಲಿ ಸಲೇಶಿಯಾವನ್ನು ಮಧುಮೇಹದ ಚಿಕಿತ್ಸೆಗೆ ಬಳಸುತ್ತಾರೆ.[೨][೩]
ಉಲ್ಲೇಖ
[ಬದಲಾಯಿಸಿ]- ↑ https://www.prajavani.net/article/%E0%B2%AA%E0%B2%B6%E0%B3%8D%E0%B2%9A%E0%B2%BF%E0%B2%AE-%E0%B2%98%E0%B2%9F%E0%B3%8D%E0%B2%9F-%E0%B2%85%E0%B2%B3%E0%B2%BF%E0%B2%B5%E0%B2%BF%E0%B2%A8%E0%B2%82%E0%B2%9A%E0%B2%BF%E0%B2%A8%E0%B2%B2%E0%B3%8D%E0%B2%B2%E0%B2%BF-%E0%B2%B6%E0%B3%87-10-%E0%B2%B8%E0%B2%B8%E0%B3%8D%E0%B2%AF-%E0%B2%AA%E0%B3%8D%E0%B2%B0%E0%B2%AD%E0%B3%87%E0%B2%A6
- ↑ https://www.ncbi.nlm.nih.gov/pmc/articles/PMC4351933/
- ↑ https://examine.com/supplements/salacia-reticulata/