ವಿಷಯಕ್ಕೆ ಹೋಗು

ಸರ್ ಹೆನ್ರಿ ಬಾಟಲ್ ಎಡ್ವರ್ಡ್ ಫ್ರೇರ್'

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

(ಮಾರ್ಚ್ ೨೯, ೧೯೧೫- ಮೇ ೨೯, ೧೮೮೪)

ಸರ್ ಹೆನ್ರಿ ಬಾಟಲ್ ಎಡ್ವರ್ಡ್ ಫ್ರೇರ್', (Sir Henry Bartle Edward Frere), ಬ್ರಿಟನ್ ನ ಹೊರಗೆ ಕಾಲೋನಿಗಳ ಆಡಳಿತಗಾರರರಾಗಿ ಬಹುವರ್ಷ ಸೇವೆಸಲ್ಲಿಸಿದರಲ್ಲೊಬ್ಬರು, ತಮ್ಮ ೧೯ ನೆಯ ವಯಸ್ಸಿನಲ್ಲೇ ಬೊಂಬಾಯಿಗೆ ಬಂದು ಕಂಪೆನಿಯ ಸರಕಾರದಡಿಯಲ್ಲಿ ನೌಕರಿಮಾಡಿದರು.

'ವೃತ್ತಿಜೀವನ'

[ಬದಲಾಯಿಸಿ]

'ಸರ್ ಹೆನ್ರಿ ಬಾಟಲ್ ಎಡ್ವರ್ಡ್ ಫ್ರೇರ್', ರವರು, ೧೮೩೪ ರಲ್ಲಿ, ’ಸಿವಿಲ್ ಸರ್ವಿಸ್ ರೈಟರ್’ ಆಗಿನೇಮಕಗೊಂಡು, ಇಂಗ್ಲಿಷ್ ಭಾಷಾ ಪರೀಕ್ಷೆ ಪಾಸ್ ಮಾಡಿದನಂತರ, ೧೮೩೫ ರಲ್ಲಿ ಪುಣೆಯ ’ಸಹಾಯಕ ಕಲೆಕ್ಟರ್’ ಆಗಿ ನೇಮಕಗೊಂಡರು. ಆಗಿನ ಗವರ್ನರ್ ಆಗಿದ್ದ ’ಸರ್ ಜಾನ್ ಆರ್ಥರ್’, ರವರ್ ಆಪ್ತ ಕಾರ್ಯದರ್ಶಿಯಾಗಿ ೨ ವರ್ಷಗಳಕಾಲ ಕೆಲಸಮಾಡಿದರು. ಅವರನ್ನು ಸತಾರದ ರಾಜಗೃಹದಲ್ಲಿ ’ಪೊಲಿಟಿಕಲ್ ರೆಸಿಡೆಂಟ್’ ಆಗಿನೇಮಿಸಲಾಯಿತು. ೧೮೪೮ ರಲ್ಲಿ ಸತಾರ-ರಾಜನ ಮರಣವಾದಮೇಲೆ, ಅದನ್ನು ೧೮೪೯ ನಲ್ಲಿ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೇರಿಸಿಕೊಳ್ಳಲಾಯಿತು. ೧೮೫೦ ಯಲ್ಲಿ ಸಿಂಧ್ ಪ್ರಾಂತ್ಯದ ಕಮೀಶನರ್ ಆಗಿ, ಕಂಪೆನಿ ಸರ್ಕಾರದ ಅವಧಿಮುಗಿದು ಬ್ರಿಟನ್ನಿನ ರಾಣಿ ವಿಕ್ಟೋರಿಯರವರು ಭಾರತದ ರಾಜಗದ್ದುಗೆಯನ್ನು ಅಲಂಕರಿಸಿದರು. ಆಗ, ೧೮೫೭ ನಲ್ಲಿ ಭಾರತದ ಅಂಚೆ ವ್ಯವಸ್ಥೆಯನ್ನು ಆಧುನಿಕ ವ್ಯವಸ್ಥೆಯನ್ನಾಗಿ ಮಾರ್ಪಾಡು ಮಾಡಿದರು. ’ಝಾಂಜಿಬಾರ್’ ಗೆ ೧೮೭೨ ನಲ್ಲಿ ಕಳಿಸಲಾಯಿತು. ೧೮೭೫ ನಲ್ಲಿ ’ಪ್ರಿನ್ಸ್ ಆಫ್ ವೇಲ್ಸ್’ ಜೊತೆ ’ಈಜಿಪ್ಟ್’ ಮತ್ತು ’ಭಾರತ’ದ ಯಾತ್ರೆಯಲ್ಲಿ ಜೊತೆಯಾಗಿ ಬಂದರು.

ಫ್ಲೋರಾ ಫೌಂಟನ್’ ಆಗಿನ ಬೊಂಬಾಯಿನಗರದ ಗವರ್ನರ್ ’ಸರ್ ಹೆನ್ರಿ ಬಾಟಲ್ ಎಡ್ವರ್ಡ್ ಫ್ರೇರ್'’[] ರವರ ಸವಿ ನೆನಪಿನಲ್ಲಿ ನಿರ್ಮಿಸಲಾಯಿತು. ಅವರು ಭಾರತದಲ್ಲಿ ಹಲವುವರ್ಷಗಳ ಕಾಲ ’ಬ್ರಿಟನ್ನಿನ ಈಸ್ಟ್ ಇಂಡಿಯ ಕಂಪೆನಿಯ ಸೇವೆ’ಯಲ್ಲಿದ್ದರು. ೧೮೫೯ ರಲ್ಲಿ, ’ವೈಸ್ ರಾಯ್ ಕೌನ್ಸಿಲ್ ನ ಸದಸ್ಯ’ರಾದರು. ತಮ್ಮ ಅಸಾಧಾರಣ ಕಾರ್ಯ-ಕ್ಷಮತೆ ಮತ್ತು ಬುದ್ಧಿಮತ್ತೆಯಿಂದ ಕೊನೆಗೆ ಬೊಂಬಾಯಿನ ಗವರ್ನರ್ ಆದರು, ೧೮೬೨-೬೭, ಬೊಂಬಾಯಿನ ವಿಶಾಲ ಹೃದಯವಂತರು, ಬೊಂಬಾಯಿನ ನಾಗರಿಕ ಸೌಲಭ್ಯಗಳನ್ನು ಹೆಚ್ಚಿಸಿ ಜನರ ಕಷ್ಟಗಳಿಗೆ ಸ್ಪಂದಿಸಿದರು. ಬೊಂಬಾಯಿನಗರದ ಹಳೆ ಕೋಟೆಯ ಶಿಥಿಲವಾದ ಗೋಡೆಗಳನ್ನು ಕೆಡವಲು ಆಜ್ಞೆಹೊರಡಿಸಿ, ನಗರವನ್ನು ವಿಸ್ತಾರಗೊಳಿಸಿದರು. ಪುಣೆಯಲ್ಲಿ ’ಡೆಕ್ಕನ್ ಕಾಲೇಜ' ನ್ನು ಸ್ಥಾಪನೆಮಾಡಿದರು. ಸ್ಥಾನೀಯ ಜನರಿಗೆ ಶಿಕ್ಷಣಕೊಡಲು, ’ಸಿವಿಲ್ ಇಂಜಿನಿಯರಿಂಗ್ ಕಾಲೇಜ್.’ ನ್ನು ಸ್ಥಾಪಿಸಿದರು.

'ಹಾರ್ನ್ ಬಿ', ಮತ್ತೊಬ್ಬ ಪ್ರಗತಿಶೀಲ ಗವರ್ನರ್'

[ಬದಲಾಯಿಸಿ]

ಬೊಂಬಾಯಿನ ಹಿಂದಿನ ಗೌರ್ನರ್ ಆಗಿದ್ದ, ’ಹಾರ್ನ್ ಬಿ, ೧೮೬೪ ರಲ್ಲಿ, 'ಈಸ್ಟ್ ಇಂಡಿಯ ಕಂಪೆನಿ'ಯ ನೀತಿಗಳಿಗೆ ವಿರುದ್ಧವಾಗಿ, 'ವೊರ್ಲಿ' ಯ ಹತ್ತಿರದ ಸಮುದ್ರದ ಬಳಿ, ಒಂದು ದೊಡ್ಡ ಗೋಡೆಯನ್ನು ಕಟ್ಟಿಸಿದರು. ಇದರಿಂದ ಸಮುದ್ರದ ಪ್ರಚಂಡ ಅಲೆಗಳನ್ನು ಸ್ವಲ್ಪಮಟ್ಟಿಗೆ ತಡೆಯಲು ಅನುಕೂಲವಾಯಿತು.

ಪ್ರಶಸ್ತಿಗಳು

[ಬದಲಾಯಿಸಿ]
  • ’ಸರ್ ಹೆನ್ರಿ ಬಾಟಲ್ ಎಡ್ವರ್ಡ್ ಫ್ರೇರ್'’ ರಿಗೆ 'ಬ್ರಿಟನ್ನಿನ ವಿಖ್ಯಾತ ವಿಶ್ವವಿದ್ಯಾಲಯಗಳ ಗೌರವ ಪದವಿ'ಗಳನ್ನು ಕೊಟ್ಟು ಗೌರವಿಸಲಾಯಿತು,
  • ಭಾರತದಲ್ಲಿ ಅವರು ಮಾಡಿದ ಸೇವೆಗಳನ್ನು ಸ್ಮರಿಸಿ, ಅವರಿಗೆ ’ಜಿಸಿಎಸ್ ಐ’(GCSI)ಪದವಿಯನ್ನು ನೀಡಲಾಯಿತು. (ಪ್ರಥಮ ಬರೊನೆಟ್, GCB; GCSI)
  • ಆಕ್ಸ್ ಫರ್ಡ್,’ ಹಾಗೂ, ’ಕೇಂಬ್ರಿಡ್ಜ್,’ ವಿಶ್ವವಿದ್ಯಾಲಯಗಳಿಂದ ಗೌರವ ಪದವಿಗಳನ್ನು ಕೊಟ್ಟು ಗೌರವಿಸಲಾಯಿತು.
  • ಕೌನ್ಸಿಲ್ ಆಫ್ ಇಂಡಿಯ,’ ದ ಸಸ್ಯರಾಗಿ ಬಹಳಕಾಲ ಅತ್ಯುತ್ತಮ ಕಾರ್ಯಗಳನ್ನು ಮಾಡಿದರು.

ಫ್ಲೋರಾ ಫೌಂಟನ್,’ ನ 'ಉಧ್ಗಾಟನಾ ಸಮಾರಂಭ'

[ಬದಲಾಯಿಸಿ]

'ರೋಮನ್ ಪುಷ್ಪ-ದೇವತೆ ಶಿಲ್ಪ'ವನ್ನು 'ಆರ್. ನಾರ್ಮನ್ ಶಾ', ಪೊರ್ಟ್ ಲ್ಯಾಂಡ್ ಸ್ಟೊನ್. ಅದೇ ಕಲ್ಲುಗಳ ಬಳಕೆಯನ್ನು ಸೆಂಟ್ ಪಾಲ್ ಕೆಥೆಡ್ರೆಲ್, ದ ಬಕಿಂಗ್ ಹ್ಯಾಮ್ ಪ್ಯಾಲೆಸ್, ನ್ಯೂಯಾರ್ಕ್ ನ ಯುನೈಟೆಡ್ ನೇಷನ್ಸ್ ಹೆಡ್ ಕ್ವಾರ್ಟರ್ಸ್ ಸಹಿತ, ಕೆತ್ತಿದ ಶಿಲ್ಪಿ, ಜೇಮ್ಸ್, ಫೋರ್ ಸೈತ್, ಬೊಂಬಾಯಿನಲ್ಲಿ ಉದ್ಘಾಟನಾ ಸಮಾರಂಭ ಹತ್ತಿರಬರುತ್ತಿದ್ದಂತೆ, 'ಸರ್ ಹೆನ್ರಿ' ಯವರ ಹೆಸರನ್ನು ಕೈಬಿಡಲಾಯಿತು. ಈ ತರಹ, ನಿರ್ಣಯವನ್ನು ಹಟಾತ್ತನೆ ಬದಲಾಯಿಸಿದ್ದು ಎಲ್ಲರಿಗೂ ಆಶ್ಚರ್ಯವನ್ನುಂಟುಮಾಡಿತ್ತು. ೯,೦೦೦ ಪೌಂಡ್, (ರೂ. ೪೭,೦೦೦/)-ಮೊದಲಿದ್ದ ಚರ್ಚ್-ಗೇಟ್, ಬೊಂಬಾಯಿನ ಕೋಟೆ, ಅಗ್ರಿ ಹಾರ್ಟಿಕಲ್ಚರಲ್ ಸೊಸೈಟಿ ಆಫ್ ಇಂಡಿಯ, ಆಗ ದಾನವಾಗಿ ಹಣ ಕೊಟ್ಟು ಸಹಕರಿಸಿದವರು, 'ಕುರ್ಸೆಟ್ ಜಿ ಫರ್ದೂನ್ಜಿ, ಪರೆಖ್' ರವರು, ೨೦,೦೦೦/- ಮುಂಬೈನ ಪಿಕಡೆಲ್ಲಿ ಸರ್ಕಸ್ ೫ ರಸ್ತೆಗಳು ಕೂಡುವ ಜಾಗವಾಗಿತ್ತು. ೧೮೧೯ ರಲ್ಲಿ, ಲಂಡನ್ ನ ಪಿಕಡೆಲ್ಲಿ ಸರ್ಕಸ್, ಪ್ರದೇಶದಲ್ಲಿದ್ದ ಒಬ್ಬ ದರ್ಜಿಯವನ ಮನೆಯ ಹೆಸರು, ರಾಬರ್ಟ್ ಬೇಕರ್ಯೆಂದು.

ಮುಂಬಯಿನ ಕೋಟೆ ಪ್ರದೇಶವನ್ನು ದುರಸ್ತಿಮಾಡಿ ಸಮತಟ್ಟುಮಾಡಿದರು

[ಬದಲಾಯಿಸಿ]

ದಕ್ಷಿಣ ಬೊಂಬಾಯಿನ ಅಸ್ತವ್ಯಸ್ತವಾಗಿ ಪಾಳುಬಿದ್ದಿದ್ದ ಕೋಟೆ ಯನ್ನು ಕೆಡವಿ, ಆಪ್ರದೇಶವನ್ನು ಸಮತಟ್ಟುಮಾಡಿದರು. ಇದರಿಂದ ಅಲ್ಲಿ ಬ್ರಿಟಿಷ್ ಸರ್ಕಾರದ ಕೆಲವು ಪ್ರಮುಖ ಆಡಳಿತ ಶಾಖೆಯ ಕಟ್ಟಡಗಳನ್ನು ಕಟ್ಟಲು ಸ್ಥಳ ದೊರೆಯಿತು. ಆಫ್ರಿಕದ ಗವರ್ನರ್ ಆದರು, ೧೮೭೭-೭೯ ಆಂಗ್ಲೊ ಝುಲು ಯುದ್ಧ.

೧೯೬೦ ರಲ್ಲಿ ಹುತಾತ್ಮರ ನೆನೆಪಿನಲ್ಲಿ ೧೦೫ ಸಂಯುಕ್ತ ಮಹಾರಾಷ್ಟ್ರ ಸಮಿತಿಯ ಚಳುವಳಿಗಾರರು, ಶಾಂತಿಯಿಂದ ಧಾರಣೆಯ ಮೆರವಣಿಗೆಯಲ್ಲಿ ಧಾವಿಸುತ್ತಿದ್ದಾಗ ಪೋಲಿಸರ ಗುಂಡಿನೇಟಿಗೆ ಬಲಿಯಾದರು.’ಫ್ಲೋರಾ ಫೌಂಟನ್’ ವೃತ್ತದ ಬಳಿಯೇ 'ಹುತಾತ್ಮರ ಸ್ಮಾರಕವನ್ನೂ, ನಾವು ಕಾಣಬಹುದಾಗಿದೆ. ೧೯೬೦ ರ ಮೇ ೧ ರಂದು ಭಾರತಸರ್ಕಾರದ ನೀತಿಯಂತೆ ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯ ಪ್ರಕಾರ ಅನೇಕ ರಾಜ್ಯಗಳು ಅಸ್ತಿತ್ವಕ್ಕೆ ಬಂದಂತೆ,ಮಹಾರಾಷ್ಟ್ರ ರಾಜ್ಯವೂ ನಿರ್ಮಾಣವಾಯಿತು.

ಸನ್, ೧೮೭೭, ರಲ್ಲಿ 'ಸರ್ ಹೆನ್ರಿ ಬಾಟಲ್ ಎಡ್ವರ್ಡ್ ಫ್ರೇರ್'ರನ್ನು ’ಹೈ ಕಮೀಶನರ್ ಆಫ್ ಆಫ್ರಿಕ’, ಆಗಿ ನೇಮಿಸಲಾಯಿತು. ೧೮೭೯ ರಲ್ಲಿ ಝುಲು ಯುದ್ಧವಾಯಿತು. ೧೮೮೦ ಯಲ್ಲಿ 'ಸರ್ ಹೆನ್ರಿ ಬಾಟಲ್ ಫ್ರೇರ್' ' ರವರನ್ನು ಬ್ರಿಟನ್ ಗೆ ವಾಪಸ್ ಕರೆಸಿಕೊಳ್ಳಲಾಯಿತು. ಅವರು, ’ವಿಂಬಲ್ಡನ್’ ನಲ್ಲಿ ಮೃತರಾದರು. ’ಸೆಂಟ್ ಪಾಲ್ ಕೆಥೆಡ್ರಲ್’ ನಲ್ಲಿ ಅವರ ಮೃತದೇಹವನ್ನು ಹೂಳಿ, ಒಂದು ಸ್ಮಾರಕವನ್ನು ನಿರ್ಮಿಸಲಾಯಿತು.

ಉಲ್ಲೇಖಗಳು

[ಬದಲಾಯಿಸಿ]
  1. 'Henry Bartle Edward Frere'