ಸರ್. ಕವಾಸ್ ಜಿ ಜೆಹಾಂಗೀರ್ ರೆಡಿಮನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Sir Cawasji ready money.jpg
'ಸರ್. ಕವಾಸ್ ಜಿ ಜೆಹಾಂಗೀರ್ ರೆಡಿಮನಿ'

(೧೮೧೨-೧೮೭೮ )

'ಕವಾಸ್ ಜಿ', ನವ್ ಸಾರಿ ಯಿಂದ ಬೊಂಬಾಯಿಗೆ[ಬದಲಾಯಿಸಿ]

'ಸರ್. ಕವಾಸ್ ಜಿ ಜೆಹಾಂಗೀರ್ ರೆಡಿಮನಿ,ರವರು,[೧] ಅಂದಿನ ಮುಂಬಯಿನಗರದ ಪಾರ್ಸಿ ಸಮಾಜದ ಬಹುಮುಖ್ಯವ್ಯಕ್ತಿಯೆಂದು ಪರಿಗಣಿಸಲ್ಪಟ್ಟಿದ್ದರು. ಇವರ ಪರಿವಾರದ ಸದಸ್ಯರುಗಳು ಬಹಳ ಸಾಹುಕಾರರು, ಮತ್ತು ಅವರೆಲ್ಲಾ ಸಣ್ಣ-ದೊಡ್ಡ ಉದ್ಯೋಗಗಳನ್ನು ನಡೆಸುತ್ತಿದ್ದರು. 'ಕವಾಸ್ ಜಿ' ಯವರ ಅಜ್ಜ ಹಾಗೂ ದೊಡ್ಡಪ್ಪಂದಿರು ನವ್ ಸಾರಿ ಯಿಂದ ಬೊಂಬಾಯಿಗೆ ವಲಸೆಬಂದು ವಾಸ್ತವ್ಯಹೂಡಿದಾಗ ಅವರು ೧೫ ವರ್ಷದ ಬಾಲಕ. ಚೈನದೇಷದ ಜೊತೆಯಲ್ಲಿ ವ್ಯಾಪಾರೋದ್ಯೋಗದಿಂದ ಚೆನ್ನಾಗಿ ಹಣಗಳಿಸಿದ್ದರು. 'ಕವಾಸ್ ಜಿ'ಯವರಿಗೆ ಆ ಕಾಲದಲ್ಲಿ ಸಿಕ್ಕ ವಿದ್ಯೆ ಕೇವಲ ನೆಪಮಾತ್ರ. ಅನುಭವ ಮತ್ತು ನುರಿತ ವ್ಯಾಪಾರಗಾರರ ಸಹವಾಸದಿಂದ ಮನೆಯಲ್ಲಿ ಅಜ್ಜ ಮತ್ತು ಹಿರಿಯರಿಂದ ತಿಳಿದಿದ್ದು, ಕಲಿತಿದ್ದು, ಹೆಚ್ಚು.

'ಸರ್.ಕವಾಸ್ ಜಿ'ಯವರ ಬಳಿ ಸದಾಹಣವಿರುತ್ತಿತ್ತು[ಬದಲಾಯಿಸಿ]

ಬೊಂಬಾಯಿನ ಕೋಟೆ ಪ್ರದೇಶದಲ್ಲಿದ್ದ 'ಮಿ.ಸಾರ್ಜೆಂಟ್ ಸೈಕ್ಸ್' ಎಂಬುವರು'ಸರ್. ಕವಾಸ್ ಜಿ ಜೆಹಾಂಗೀರ್ ರೆಡಿಮನಿ'ಯವರಿಗೆ,[೨] ಓದು ಬರಹವನ್ನು ಹೇಳಿಕೊಟ್ಟರು. ಇದಾದಮೇಲೆ 'ಡನ್ಕನ್ ಗಿಟ್ಸ್' ಎಂಬ 'ಬ್ರಿಟಿಷ್ ಫರ್ಮ್' ನಲ್ಲಿ 'ಗೋಡೋನ್ ಮೇಲ್ವಿಚಾರಕ'ರಾಗಿ, ನಂತರ, ಗೋಡೋನ್ ಕಾರಕೂನರಾಗಿ, ತದನಂತರ ೧೮೩೭ ರಲ್ಲಿ ನಂಬಿಕಸ್ತ 'ಬ್ರೋಕರ್' ಆಗಿ ಕೆಲಸವನ್ನು ನಿರ್ವಹಿಸಿದರು. ೨ ಬ್ರಿಟಿಷ್ ಕಂಪೆನಿಗಳಿಗೆ ಸೇವೆಒದಗಿಸುತ್ತಿದ್ದ ಕವಾಸ್ ಜಿ ಯವರು, ಕ್ರಮೇಣ ತಮ್ಮದೇ ಆದ ಸ್ವಂತ ಕಂಪೆನಿಯನ್ನು ಸನ್, ೧೮೪೬ ರಲ್ಲಿ ತೆರೆದರು. ಸನ್, ೧೮೬೬ ರಲ್ಲಿ, 'ಇನ್ ಕಮ್ ಟ್ಯಾಕ್ಸ್ ಕಮೀಶನರ್' ಆದರು. 'ಲಂಡನ್ ನ ರೀಜೆಂಟ್ ಪಾರ್ಕ್' ನಲ್ಲಿ 'ಅವರ ಪುತಲಿಯೊಂದನ್ನು ಅನಾವರಣ' ಮಾಡಿದ ಸಮಯದಲ್ಲಿ ಹಣವನ್ನು ಕೊಟ್ಟರು. 'Justice of Peace,' ಆಗಿದ್ದರು. ಆ ಸಮಯದಲ್ಲಿ ಮುಖ್ಯಬೊಂಬಾಯಿನಗರ ಮತ್ತು ದ್ವೀಪದ ಹಿತಕಾರ್ಯಗಳನ್ನು ನಿಷ್ಠೆಯಿಂದ ಮಾಡಿದರು. 'Conservancy Board', ಗೆ ಸದಸ್ಯರಾದರು. 'ಕವಾಸ್ ಜಿ'ಯವರ ಹತ್ತಿರ ಯಾವಾಗಲೂ ಹಣವಿರುತ್ತಿತ್ತು. ಕೆಲವೊಮ್ಮೆ ಇಂಗ್ಲೀಷ್ ಅಧಿಕಾರಿಗಳೂ ಇವರಬಳಿ ಹಣವನ್ನು ಉಧಾರಿಯಾಗಿ ಪಡೆಯುತ್ತಿದ್ದರು. ಅದಕ್ಕಾಗಿ 'ರೆಡಿಮನಿ'ಯೆಂಬ ಹೆಸರು ಬಳಕೆಗೆ ಬಂತು. ಅದೇ ಹೆಸರನ್ನು 'ಕವಾಸ್ ಜಿ' ಯವರು, ತಮ್ಮ 'ಸರ್ ನೇಮ್',ಆಗಿ ಇಟ್ಟುಕೊಂಡರು.[೩]

ಚಿತ್ರ:Bombay University.jpg
'ಮುಂಬಯಿನ ಕೋಟೆ ವಲಯದಲ್ಲಿ ನಿರ್ಮಿಸಿರುವ ಮುಂಬಯಿ ವಿ. ವಿ. ಮುಂಭಾಗದಲ್ಲಿ ರೆಡಿಮನಿಯವರ-ಪುಥಳಿ ಇದೆ'

ಪ್ರಶಸ್ತಿಗಳು[ಬದಲಾಯಿಸಿ]

  • ಸನ್, 1871 ರಲ್ಲಿ 'CSI ಪ್ರಶಸ್ತಿ'.
  • ಸನ್, 1872 ರಲ್ಲಿ 'Kt ಪದವಿ'.

ಸಮಾಜಸೇವಕ[ಬದಲಾಯಿಸಿ]

ನಿಧನ[ಬದಲಾಯಿಸಿ]

ದೀರ್ಘಕಾಲ ಹಾಸಿಗೆಹಿಡಿದಿದ್ದ 'ಜೆಹಾಂಗೀರ್ ಕವಾಸ್ ಜಿ ರೆಡಿಮನಿ'ಯವರು, ಸನ್, ೧೮೭೮ ರಲ್ಲಿ ಕಣ್ಣುಮುಚ್ಚಿದರು. 'ರೆಡಿಮನಿ'ಯವರಿಗೆ ಸ್ವಂತ ಮಕ್ಕಳಿರಲಿಲ್ಲ. ಅವರ ಅಣ್ಣನಮಗನನ್ನು 'ದತ್ತು' ತೆಗೆದುಕೊಂಡರು.

ಉಲ್ಲೇಖಗಳು[ಬದಲಾಯಿಸಿ]

  1. A Joint Enterprise: 'Indian Elites and the Making of British Bombay'-By Preeti Chopra
  2. "Sir Cowasjee Jehangir K.C.S.I. of Bombay". Archived from the original on 2015-09-24. Retrieved 2015-02-19.
  3. Wikisource : 1911 Encyclopædia Britannica/Readymoney, Sir Cowasji Jehangir
  4. 'ಪೀಬಾಡಿ ಟ್ರಸ್ಟ್,ಲಂಡನ್'