ಸರೋಜ ಆರ್. ಆಚಾರ್ಯ

ವಿಕಿಪೀಡಿಯ ಇಂದ
Jump to navigation Jump to search

ಸರೋಜ ಆರ್. ಆಚಾರ್ಯ[ಬದಲಾಯಿಸಿ]

ಸಣ್ಣಕತೆ,ವೈಚಾರಿಕ ಲೇಖನ, ಹಾಸ್ಯ ಬರೆಹ, ಸಂಗೀತ ವಿಮರ್ಶೆಗಳ ಮೂಲಕ ಸಾಹಿತ್ಯ ಲೋಕದಲ್ಲಿ ಪರಿತವಾಗಿರುವ ಸರೋಜ ಆರ್. ಆಚಾರ್ಯ, ಇವರ ತಾಯಿ ತಂದೆಯವರು ದಕ್ಷಿಣ ಕನ್ನಡದ ಎಲ್ಲೂರಿನವರು. ತಂದೆ ತಮಿಳುನಾಡಿನ ಉದಕ ಮಂಡಲದಲ್ಲಿ ವ್ಯಾಪಾರ ನಡೆಸುತ್ತಿದ್ದರು. ಜನವರಿ ೧೧.೧೯೪೮ ತಮಿಳುನಾಡಿನಲ್ಲಿ ಹುಟ್ಟಿದ ಇವರು ತಮಿಳು ಮಾಧ್ಯಮದಲ್ಲಿ ಕಲಿತವರು.

ವಿಧ್ಯಾರ್ಹತೆ[ಬದಲಾಯಿಸಿ]

ಬಿ.ಎ ಪದವಿ, ಹಿಂದಿ ವಿಶಾರದ, ಕರ್ನಾಟಕ ಶಾಸ್ತ್ರಿಯ ಸಂಗೀತದಲ್ಲಿ ವಿದ್ವತ್ ಇವು ಇವರ ವಿಧ್ಯಾರ್ಹತೆ

ಹವ್ಯಾಸ[ಬದಲಾಯಿಸಿ]

ಪುಸ್ತಕಗಳ ಓದು,ಹೊಲಿಗೆ,ಮನೆಯನ್ನು ಓರಣವಾಗಿಡುವುದು,ಇವರ ಹವ್ಯಾಸವಾಗಿತ್ತು. ೧೯೮೫ರಲ್ಲಿ ಬ್ಯಾಂಕಿನ ಅಧಿಕಾರಿಯೊಂದಿಗೆ ವಿವಾಹವಾದ ಇವರು ಪತಿಯ ಜೊತೆಗೆ ಊರೂರು ಪ್ರಯಾಣದಿಂದ,ಹಲವರ ಒಡನಾಟದಿಂದ ಕನ್ನಡ ಬರವಣೆಗೆ ಪ್ರೇರಣೆಯಾಯಿತು.

ಕಥಾ ಸಂಕಲನ[ಬದಲಾಯಿಸಿ]

  • ವ್ಯವಸ್ಥೆ
  • ಅಲ್ಲಿದೆ ನಮ್ಮನೆ ೨೦೦೨

ಕಥೆಗಳು[ಬದಲಾಯಿಸಿ]

  • ಜೂಸ್
  • ಪ್ರತಿಬಿಂಬ

ಪತ್ರಿಕೆ[ಬದಲಾಯಿಸಿ]

  • ತುಷಾರ
  • ಮಯೂರ
  • ತರಂಗ
  • ಸುಧಾ
  • ಉದಯವಾಣಿ
  • ಅಪರಂಜಿ

ಮುಂತಾದ ಪತ್ರಿಕೆಗಳಲ್ಲಿ ವೈಚಾರಿಕ, ಹಾಸ್ಯ, ಕಥೆ, ಕವನಗಳು ಪ್ರಕಟಗೊಂಡಿದೆ. ಆಂಗ್ಲಭಾಷಾ ಪತ್ರಿಕೆ ರೀಡರ್ಸ್ ಡೈಜೆಸ್ಟ್ ನಿಂದ ಭಾಷಾಂತರಿಸಿದ ಲೇಖನಗಳು ಪುಸ್ತಕ ಪ್ರಪಂಚ ಮಾಸಪತ್ರಿಕೆಯಲ್ಲಿ ಒಂದು ವರ್ಷ ಪ್ರಕಟಗೊಂಡಿವೆ. ಇವರು ರಾಗಧನ ಶ್ರೀ ಸಂಗೀತ ಮಾಸ ಪತ್ರಿಕೆಯ ಸಂಪಾದಕೀಯ ಮಂಡಳಿಯ ಸದಸ್ಯೆ ಸರೋಜರವರ ಹೆಚ್ಚಿನ ಕತೆಗಳು ಮಧ್ಯಮ ವರ್ಗದ ಸ್ತ್ರಿಯರ ವಿವಿಧ ಮುಖಗಳನ್ನು ಹೃದ್ಯವಾಗಿ ಚಿತ್ರಿಸುತ್ತವೆ. ಹೀಗೆ ವಿವಿಧ ಧ್ವಂದ್ವಗಳ ವಿಶ್ಲೇಷಣೆಗಳನ್ನು ಕಥೆಯಾಗಿ ಮಾಡುತ್ತಾರೆ. ಸಾಹಿತ್ಯದಷ್ಟೇ ಸಂಗೀತದಲ್ಲೂ ಇವರ ವಿಶೇಷ ಪರಿಣಿತಿ ಉಳ್ಳವರು.