ವಿಷಯಕ್ಕೆ ಹೋಗು

ಸರಸ್‍ಗಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸರಸ್‍ಗಡ್ ಕೋಟೆಯು ಭಾರತದ ಮಹಾರಾಷ್ಟ್ರ ರಾಜ್ಯದ ರಾಯಗಡ್ ಜಿಲ್ಲೆಯಲ್ಲಿದೆ. ಸಮುದ್ರ ಮಟ್ಟದಿಂದ ಈ ಕೋಟೆಯ ಎತ್ತರ 490 ಮೀಟರ್‌ನಷ್ಟಿದೆ.

ಸರಸ್‍ಗಡ್ ಕೋಟೆಯು ಸುಧಾಗಡ್ ಕೋಟೆಯ ಅವಳಿಯಾಗಿದೆ.[] ಇದನ್ನು ಇದರ ನಾಲ್ಕು ಶಿಖರಗಳಿಂದ ಗುರುತಿಸಬಹುದು. ಹಾಗಾಗಿ ಇದನ್ನು ಮುಖ್ಯವಾಗಿ ಸುತ್ತಮುತ್ತಲಿನ ಪ್ರದೇಶವನ್ನು ಪರಿಶೀಲಿಸಲು ಕಾವಲು ಸ್ಥಳವಾಗಿ ಬಳಸಲಾಗುತ್ತಿತ್ತು. ಕೋಟೆಯ ನಿರ್ಮಾಣವು ಈಗ ಉತ್ತಮ ಸ್ಥಿತಿಯಲ್ಲಿಲ್ಲ ಆದರೆ ಬೃಹತ್ ಕಲ್ಲಿನ ಮೆಟ್ಟಿಲುಗಳು ನೋಡಬೇಕಾದ ಸಂಗತಿಯಾಗಿದೆ. ದಕ್ಷಿಣದಿಂದ ಬರುವ ದಾರಿಯಲ್ಲಿ ಕಲ್ಲಿನಲ್ಲಿ ಕೆತ್ತಿದ 111 ಮೆಟ್ಟಿಲುಗಳಿವೆ. ಈ ಕಡೆಯಿಂದ ಬರುವ ಬಾಗಿಲನ್ನು 'ದಿಂಡಿ ದರ್ವಾಜಾ Archived 2019-04-22 ವೇಬ್ಯಾಕ್ ಮೆಷಿನ್ ನಲ್ಲಿ.' ಎಂದು ಕರೆಯಲಾಗುತ್ತದೆ. ಹತ್ತಿರದ ಹಳ್ಳಿ ಪಾಲಿಯಿಂದ ಈ ಕೋಟೆಯ ಮೇಲ್ಭಾಗಕ್ಕೆ ಎರಡು ಮಾರ್ಗಗಳಿವೆ.

ನೋಡಬೇಕಾದ ಸ್ಥಳಗಳು

[ಬದಲಾಯಿಸಿ]

ಮೇಲ್ಭಾಗದಲ್ಲಿ ಶಿವ ದೇವಾಲಯವು ಈ ಪ್ರದೇಶದ ಸುತ್ತಲಿನ ಎಲ್ಲಾ ಪರ್ವತ ಶ್ರೇಣಿಗಳ ಅತ್ಯುತ್ತಮ ಪರಿದೃಶ್ಯಕ ನೋಟವನ್ನು ಒದಗಿಸುತ್ತದೆ. ಸುಧಾಗಡ್, ಸಾಂಕ್ಷಿ ಕೋಟೆ, ಸಾಗರಗಡ್ ಮತ್ತು ತೈಲಬೈಲವನ್ನು ಸರಸ್‌ಗಡ್‍ನ ತುದಿಯಿಂದ ಸುಲಭವಾಗಿ ವೀಕ್ಷಿಸಬಹುದು. ಸೈನಿಕರು ಮತ್ತು ಇತರ ಉದ್ದೇಶಗಳಿಗಾಗಿ ಬಳಸಲಾಗುತ್ತಿದ್ದ ಅನೇಕ ಗುಹೆಗಳಿವೆ. ಏಕೆಂದರೆ ಕೋಟೆಯು ಅದರ ಮೇಲ್ಭಾಗದಲ್ಲಿ ಲಭ್ಯವಿರುವ ಅತ್ಯಂತ ಕಡಿಮೆ ಪ್ರದೇಶವನ್ನು ಹೊಂದಿದೆ. ಸುಮಾರು ಹತ್ತು ಪುಷ್ಕರಿಣಿಗಳನ್ನು ಬಂಡೆಗಳಲ್ಲಿ ಕೊರೆಯಲಾಗಿದೆ. ಇವು ವರ್ಷವಿಡೀ ತಂಪಾದ ನೀರಿನ ಪೂರೈಕೆಯನ್ನು ಒದಗಿಸುತ್ತವೆ, ಇದು ಯಾವುದೇ ಕೋಟೆಗೆ ಬಹಳ ಮುಖ್ಯವಾಗಿದೆ.

ಇತಿಹಾಸ

[ಬದಲಾಯಿಸಿ]

ಇದು 1485ರಲ್ಲಿ[] ಅಹ್ಮದ್‌ನಗರದ ಮಲಿಕ್ ಅಹ್ಮದ್ ನಿಜ಼ಾಮ್ ಷಾ I ತನ್ನ ಕೊಂಕಣ ದಂಡಯಾತ್ರೆಗಳಲ್ಲಿ ವಶಪಡಿಸಿಕೊಂಡ ಕೋಟೆಗಳಲ್ಲಿ ಒಂದಾಗಿದೆ. ಈ ಕೋಟೆಯ ರಕ್ಷ್ಣಾ ಗೋಡೆಗಳನ್ನು ದುರಸ್ತಿ ಮಾಡಲು ಶಿವಾಜಿ ಮಹಾರಾಜರು 2000 ಹೋನ್‍ಗಳನ್ನು (ಶಿವಾಜಿ ಮಹಾರಾಜರ ಕಾಲದಲ್ಲಿ ಕರೆನ್ಸಿಯಾಗಿ ಬಳಸಲಾಗುತ್ತಿದ್ದ ಚಿನ್ನದ ನಾಣ್ಯ) ನೀಡಿದರು.[] ವಸೈ ವಿರುದ್ಧದ ವಿಜಯದ ನಂತರ, ಚಿಮಾಜಿ ಅಪ್ಪನು 1739ರಲ್ಲಿ[] ವಸಾಯಿಯಿಂದ ತಂದ ಪೋರ್ಚುಗೀಸ್ ಗಂಟೆಯನ್ನು ಬಲ್ಲೇಶ್ವರ ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿದನು. ಸ್ವಾತಂತ್ರ್ಯ ಬರುವವರೆಗೆ, ಈ ಕೋಟೆಯು ಭೋರ್ ರಾಜಪ್ರಭುತ್ವದ ಪ್ರದೇಶದಲ್ಲಿತ್ತು.

ಹತ್ತಿರದಲ್ಲಿ

[ಬದಲಾಯಿಸಿ]

ಅಷ್ಟವಿನಾಯಕರಲ್ಲಿ ಒಂದಾದ ಪಾಲಿಯಲ್ಲಿರುವ ಬಲ್ಲಾಳೇಶ್ವರನು ತನ್ನ ಭಕ್ತನ ಹೆಸರಿನಿಂದ ಪ್ರಸಿದ್ಧನಾಗಿದ್ದಾನೆ ಮತ್ತು ಬ್ರಾಹ್ಮಣನ ವೇಷವನ್ನು ಹೊಂದಿರುವ ಏಕೈಕ ಗಣೇಶ. ಈ ಸ್ಥಳವು ಸರಸ್‍ಗಡ್ ಕೋಟೆ ಮತ್ತು ಅಂಬಾ ನದಿಯ ನಡುವೆ ನೆಲೆಸಿದೆ.

ಉಲ್ಲೇಖಗಳು

[ಬದಲಾಯಿಸಿ]
  1. Gunaji, Milind (2005). Offbeat Tracks in Maharashtra. Popular Prakashan. p. 103. ISBN 978-81-7154-669-5.
  2. ೨.೦ ೨.೧ PATHAK, ARUNCHANDRA. "Sarasgad". www.gazetteers.maharashtra.gov.in. Govt. of Maharashtra. Retrieved 1 May 2020.
  3. "Sarasgad, Medium Grade, Western Ghats, India, Adventure, Trekking". Archived from the original on 20 May 2017.