ವಿಷಯಕ್ಕೆ ಹೋಗು

ಸಮುದ್ರದೊಳಗೆ ದ್ವಾರಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ

[ಬದಲಾಯಿಸಿ]

ದ್ವಾರಕ (ಸಂಸ್ಕೃತದಲ್ಲಿ ದ್ವಾರಕಾವತಿ ) ಭಾರತದಲ್ಲಿ ಕಂಡ ಅತ್ಯಂತ ಪುರಾತನ ಸಪ್ತನಗರಿಗಳಾದ ಅಯೋಧ್ಯ , ಮಥುರ, ಹರಿದ್ವಾರ, ಬನಾರಸ್, ಕಂಬೆ , ಉಜ್ಜಯನಿ , ನಗರಿಗಳ ಜೊತೆಗೆ ಒಂದಾಗಿದೆ. ಪುರಾಣ ಪ್ರಸಿದ್ಧ ಈ ನಗರಿಯು ಕೃಷ್ಣನ ನಗರಿಯಾಗಿತ್ತು ಎಂಬುದು ಪ್ರತೀತಿ. ಈ ನಗರಿಯು ಗೋಮತಿ ನದಿ ಮತ್ತು ಅರಬ್ಬಿ ಸಮುದ್ರದ ಸಂಗಮದಲ್ಲಿ ಇದ್ದೀತು ಎಂದು ಹೇಳಲಾಗಿದೆ. ಪುರಾಣಗಳ ಪ್ರಕಾರ ಶ್ರೀಕೃಷ್ಣನು ದ್ವಾರಕೆಯನು ನಿರ್ಮಿಸಿದನೆಂದು ಹಾಗೂ ಮಹಾಭಾರತದಲ್ಲಿ ಶ್ರೀಕೃಷ್ಣನು ಹೇಳುವ ಪ್ರಕಾರ ಅವನ ಸಾಮ್ರಾಜ್ಯವು ಅವನ ಕಾಲ ನಂತರ ಸಮುದ್ರದ ಅಲೆಗೆ ಸಿಕ್ಕಿ ಅಥವಾ ಸಮುದ್ರದ ಮಟ್ಟ ಹೆಚ್ಚಾಗಿ ಮುಳುಗಿಹೋಗುತ್ತದೆ ಎಂದು ಹೇಳಿದ್ದನು.

ಪುರಾಣಗಳಲ್ಲಿ ದ್ವಾರಕೆಯ ಉಲ್ಲೇಖ

[ಬದಲಾಯಿಸಿ]

ಪುರಾಣಗಳಲ್ಲಿ ದ್ವಾರಕೆಯ ಬಗ್ಗೆ ಬಹಳ ಮನೋಹರವಾಗಿ ಚಿತ್ರಿಸಿದ್ದಾರೆ, ಜರಾಸಂಧ ಮತ್ತು ಕಾಲಯವನನ ಆ ಕ್ರಮಣದಿಂದ ಯಾದವ ಜನಾಂಗವನ್ನು ಪಾರು ಮಾಡಬೇಕೆಂದು, ಶ್ರೀಕೃಷ್ಣನು ಯಾದವರೊಡನೆ ಮಥುರೆಯನ್ನು ಬಿಟ್ಟು ಸೌರಾಷ್ಟ್ರದ ದಡಕ್ಕೆ ಬಂದು ಸೇರಿದರು, ನಂತರ ಅಲ್ಲಿ ತಮ್ಮ ರಾಜಧಾನಿಯನ್ನು ನಿರ್ಮಿಸಲೆಂದು ದೇವಶಿಲ್ಪಿ ವಿಶ್ವಕರ್ಮನಿಗೆ ಮೊರೆಯಿಟ್ಟರು . ಆದರೆ ವಿಶ್ವಕರ್ಮನು , ಈ ಕಾರ್ಯ ಸಮುದ್ರದೇವ ಸ್ವಲ್ಪ ಭೂಮಿಯನ್ನು ಕೊಟ್ಟರೆ ಮಾತ್ರ ಸಾಧ್ಯ ಎಂದನು. ಅದರಂತೆಯೇ ಶ್ರೀ ಕೃಷ್ಣನು ಸಮುದ್ರದೇವನನ್ನು ಕುರಿತು ಪ್ರಾರ್ಥಿಸಿದಾಗ ಸಮುದ್ರ ದೇವನು ಕೃಷ್ಣನಿಗೆ ೧೨ ಯೋಜನಾ ಅಳತೆಯ ಭೂಮಿಯನ್ನು ಕೊಟ್ಟನಂತೆ. ನಂತರ ದೇವಶಿಲ್ಪಿ ವಿಶ್ವಕರ್ಮ ದ್ವಾರಕೆಯನ್ನು ಬಂಗಾರದಿಂದ ನಿರ್ಮಿಸಿದನಂತೆ.

ದ್ವಾರಕೆಯ ಬಗ್ಗೆ ಕೆಲವು ಪಂಡಿತರು , ಹಲವಾರು ಹಿಂದೂ ಶಾಸ್ತ್ರಗಳ ಅಧಾರದ ಮೇಲೆ , ಆ ಸ್ಥಳವನ್ನು ಬಹಳ ಪುರಾತನವಾದದ್ದು , ಸಹಸ್ರಾರು ವರುಷಗಳ ಹಳೆಯದು ಎಂದು ತಿರ್ಮಾನಿಸಿದ್ದರು. ಆಗ ಅವರ ಅಭಿಪ್ರಾಯಗಳನ್ನು ಅಲ್ಲಿನ ಸಂಶೋಧಕರು, ತಳ್ಳಿ ಹಾಕಿದರು . ದ್ವಾರಕೆಯ ಅವಶೇಷಗಳು ದೊರಕುವ ಮುನ್ನ ದ್ವಾರಕೆಯ ಕೇವಲ ಕಾಲ್ಪಿತ ನಗರಿಯೆಂದು ಕೆಲವು ವಿಮರ್ಶಕರು ಪರಿಗಣಿಸಿದ್ದರು, ಮತ್ತು ಅದರ ಅವಶೇಷಗಳನ್ನು ಹುಡುಕುವುದು ನಿರರ್ಥಕ ಎಂದು ಹೇಳಿದ್ದರು ಹಾಗು ಕುರುಕ್ಷೇತ್ರ ಯುದ್ದ ಕೇವಲ ಸಂಸಾರದ ತಿಕ್ಕಾಟವನ್ನು ಯುದ್ದದ ರೀತಿ ಉ ತ್ಪ್ರೇಕ್ಷಿ ಸಿದ್ದಾರೆ ಎಂದಿದ್ದರು.

ಡಾ || ಎಸ್.ಅರ್.ರಾವ್ ರವರ ಕಾರ್ಯಚರಣೆಗಳು

[ಬದಲಾಯಿಸಿ]

ದ್ವಾರಕೆಯ ಕಾರ್ಯಚರಣೆಯನ್ನು ಮೊದಲಿಗೆ ಡೆಕ್ಕೆನ್ ಶಿಕ್ಷಣಾಲಯ ನಡೆಸಿತ್ತು. ನಂತರ ,ಈ ಸಂಶೋಧನ ಕಾರ್ಯವನ್ನು ಭಾರತದ ಹೆಸರಾಂತೆ ಪ್ರಖ್ಯಾತ ಪುರಾತನ ವಿಷಯದ ಸಂಶೋಧಕರಾದ ಡಾ || ಎಸ್.ಅರ್. ರಾವ್ ರವರು ,ಈ ಸಂಶೋಧನ ಕಾರ್ಯದ ಮುಂದಾಳತ್ವವನ್ನು ವಹಿಸಿದರು.

ಡಾ || ಎಸ್.ಅರ್.ರಾವ್ ರವರು ಬಹು ಸಂಖ್ಯಾ ಹರಪ್ಪನ್ ನಗರಿಯನ್ನು ಹಾಗೂ ಲೋತಾಲ್ ಎಂಬ ಸಮುದ್ರ ತೀರ ನಗರಿಯನ್ನು ಗುಜರಾತಿನಲ್ಲಿ ಪತ್ತೆಹೆಚ್ಚಿದ್ದಾರೆ . ಇದರ ಜೊತೆಗೆ ಅವರು ಬೆಡ್ಸ (ಮಧ್ಯ ಪ್ರದೇಶದ ವಿಧಿಶ ) ಎಂಬ ಪ್ರದೇಶದಲ್ಲಿ ಕ್ರಿ.ಪೊ . ೩೦೦ ವರ್ಷಗಳ ಹಳೆಯ ದೇವಾಲಯವನ್ನು ಪತ್ತೆಹಚ್ಚಿದ್ದಾರೆ . ಅಲ್ಲಿ ಕೃಷ್ಣ ಬಲರಾಮರ ಪತಾಕೆಗಳು , ದೇವಾಲಯವನ್ನು ಪತ್ತೆ ಹಚ್ಚಿದ್ದಾರೆ ,ಹಾಗು ಕೃಷ್ಣ ಸುತ ಪ್ರದ್ಯುಮ್ನ , ಮೊಮ್ಮಗ ಅನಿರುದ್ಧ ಮತ್ತು ಸಾತ್ಯ ಕಿಯರ ಕುರುಹು ಸಿಕ್ಕಿದೆ . ಇನ್ನು ಅವರ ಇತ್ತೀಚಿನ ಸಂಶೋಧನೆಗಳಲ್ಲಿ ಅಂದರೆ ಸುಮಾರು ೫೭೪ ಇಸವಿಯ ಹಳೆಯ ಸಂಮತನ ಸಿಂಹಾದಿತ್ಯೆ ಎಂಬ ಪ್ರದೇಶ ಮತ್ತು ಪಶ್ಚಿ ಮ ದಡದ ಸೌರಾಷ್ಟ್ರ ಮತ್ತು ಕೆಲವು ಕೃಷ್ಣ ವಾಸಿಸಿದ ರಾಜ್ಯಗಳ ಬಗ್ಗೆ ಪತ್ತೆಹಚ್ಚಿದ್ದಾರೆ .

ದ್ವಾರಕೆಯ ಬಗ್ಗೆ ಕೆಲವು ಪಂಡಿತರು , ಹಲವಾರು ಹಿಂದೂ ಶಾಸ್ತ್ರಗಳ ಅಧಾರದ ಮೇಲೆ , ಆ ಸ್ಥಳವನ್ನು ಬಹಳ ಪುರಾತನವಾದದ್ದು , ಸಹಸ್ರಾರು ವರುಷಗಳ ಹಳೆಯದು ಎಂದು ತಿರ್ಮಾನಿಸಿದ್ದರು. ಆಗ ಅವರ ಅಭಿಪ್ರಾಯಗಳನ್ನು ಅಲ್ಲಿನ ಸಂಶೋಧಕರು, ತಳ್ಳಿ ಹಾಕಿದರು . ದ್ವಾರಕೆಯ ಅವಶೇಷಗಳು ದೊರಕುವ ಮುನ್ನ ದ್ವಾರಕೆಯನ್ನು ಕೇವಲ ಕಾಲ್ಪಿತ ನಗರಿಯೆಂದು ಕೆಲವು ವಿಮರ್ಶಕರು ಪರಿಗಣಿಸಿದ್ದರು, ಮತ್ತು ಅದರ ಅವಶೇಷಗಳನ್ನು ಹುಡುಕುವುದು ನಿರರ್ಥಕ ಎಂದು ಹೇಳಿದ್ದರು ಹಾಗು ಕುರುಕ್ಷೆತ್ರ ಯುದ್ದ ಕೇವಲ ಸಂಸಾರದ ತಿಕ್ಕಾಟವನ್ನು ಯುದ್ದದ ರೀತಿ ಉ ತ್ಪ್ರೇಕ್ಷಿ ಸಿದ್ದಾರೆ ಎಂದಿದ್ದರು.

ಆದರೆ ಡಾ || ಎಸ್.ಅರ್.ರಾವ್ ರವರು ಮೂಲಗ್ರಂಥಗಳಲ್ಲಿ ಕಂಡಿರುವುದನ್ನು ಅಲ್ಲ ಗಳೆಯಬಾರದು ಎಂದು ಹೇಳಿದ್ದರು. ಈ ಅನ್ವೇಷಣೆಗಾಗಿ ಮೊದಲು ಎಸ್.ಆರ್.ರಾವ್ ರವರ ತಂಡ ಮೊದಲಿಗೆ ಮೂಲಗ್ರಂಥಗಳಲ್ಲಿ ಇರುವ ಉಲ್ಲೇಖಗಳ ಬಗ್ಗೆ ಪರಿಶೀಲಿಸಿದರು . ಹಲವಾರು ಪುರಾತನ ಗ್ರಂಥಗಳನ್ನೇ ಪರಾಮರ್ಶೆಗೆ ಒಳಪಡಿಸಿ ಅದರ ಜೊತೆಗೆ ಸಂಶೋಧನೆಯನ್ನು ಪುಷ್ಟೀಕರಿಸಲಾಗಿದೆ.

ಈ ಸಂಶೋಧನೆ ಹಲವಾರು ಉದ್ದೇಶಗಳಿಂದಾಗಿ ನಡೆಸಿರುವುದು ಎಂದು ಡಾ || ಎಸ್.ಅರ್.ರಾವ್ ರವರು ಹೇಳುತ್ತಾರೆ ಸಮುದ್ರದೊಳಗಡೆ ದ್ವಾರಕಾ , ನಗರಿಯ ಹುಡುಕಾಟ , ದ್ವಾರಕಾನಗರಿಯು ನಿಜವಾಗಿಯೂ ಇತ್ತೆ?ಅದು ಮುಳುಗಿತ್ತೇ? ಎಂಬ ವಿಷಯಕ್ಕಾಗಿ ಮಾತ್ರ ಅಲ್ಲದೆ , ಮಹಾಭಾರತ ನಡೆದಿರುವ ಕಾಲವನ್ನು ತಿಳಿಯಲ ಸಹಕಾರಿಯಾಗುತ್ತದೆಯೆಂದು , ಡಾ || ಎಸ್.ಅರ್.ರಾವ್ ರವರು ಹೇಳುವಂತೆ ಕೆಲವು ಸಂಶೋಧಕರು ಹಾಗೂ ಭಾರತದ ನೌಕಾಪಡೆ ಇದರ ಕುರಿತು ಸಮುದ್ರದೊಳಗಿನ ಪಶ್ಪಿಮ ದಡದಲ್ಲಿ ತನಿಖೆ ನಡೆಸಿದಾಗ ಎಲ್ಲರಲ್ಲೂ ಶತಶತಮಾನಗಳಿಂದ ಕಾಡಿದ ಪ್ರಶ್ನೆಗಳಿಗೆ ಉತ್ತರ ದೊರೆಯುವವು ಎಂಬ ನಂಬಿಕೆ ಮತ್ತು ಅದರ ಸತ್ಯಾಸತ್ಯತೆಗಳು ಲೋಕಕ್ಕೆ ತಿಳಿಸಬೇಕೆಂಬ ಆಸಕ್ತಿಯಿಂದ, ಈ ಯೋಜನೆ ಕೈ ಹಿಡಿದಿದ್ದರು.

ಡಾ || ಎಸ್.ಆರ್.ರಾವ್ ರವರು ಹೇಳುವಂತೆ , ಈ ಕಾರ್ಯಚರಣೆ ಅವರಿಗೊಂದು ಸವಾಲಾಗಿತ್ತು ಮತ್ತು ಅವರು ಹಲವಾರು ವಿಷಯಗಳ ಬಗ್ಗೆ ಗಮನಹರಿಸಬೇಕಾಗಿತ್ತು. ೧.ದೊರಕಿದ ಕುರುಹುಗಳ ಸ್ವರೂಪಗಳು ಮಹಾಭಾರತದಲ್ಲಿ ದ್ವಾರಕೆಯ ಬಗ್ಗೆ ನೀಡಿರುವ ಸ್ವರುಪಗಳಿಗೆ ಹೊಂದಾಣಿಕೆಯಾಗುತ್ತೆವೆಯೇ?

೨.ಮಹಾಭಾರತ ಮಹಾಕಾವ್ಯದಲ್ಲಿ ವಿವರಿಸಿರುವಂತೆ ದೊರಕಿರುವ ಕುರುಹುಗಳನ್ನು ಪುಷ್ಟೀಕರಿಸಿ ನೋಡುವುದು.

೩.ಜೊತೆಗೆ ಪುರಾತನ ಗೋಮತಿ ನದಿ , ಸಮುದ್ರವನ್ನು ಸೇರುವ ನಿರ್ದಿಷ್ಟಜಾಗದ ಅನ್ವೇಷಣೆಯಾಗಬೇಕಿತ್ತು.

೪.ಕೊನೆಯದಾಗಿ ದ್ವಾರಕಾನಗರಿ ಮುಳುಗಿದ ಕಾರಣವನ್ನು ಪತ್ತೆ ಹಚ್ಚುವುದು ಮತ್ತೊಂದು ಸಮಸ್ಯೆಯಾಗಿತ್ತು.

ಕಾರ್ಯಚರಣೆಗಳು

[ಬದಲಾಯಿಸಿ]

ದ್ವಾರಕೆಯ ಕಾರ್ಯಚರಣೆಯನ್ನು ಮೊದಲಿಗೆ ಡೆಕ್ಕೆನ್ ಶಿಕ್ಷಣಾಲಯ ನಡೆಸಿತ್ತು. ಡೆಕ್ಕನ್ ಶಿಕ್ಷಣಾಲಯದ ಕಾರ್ಯಚರಣೆಯ ನಂತರ ಡಾ || ಎಸ್.ಅರ್.ರಾವ್ ರವರ ತಂಡದ ಕಾರ್ಯಚರಣೆ ೧೯೮೩ ರಿಂದ ಶುರುವಾಯಿತು . ಈ ಕಾರ್ಯಚರಣೆಯನ್ನು ಎಂ.ಎ.ಯು.ಎನ್.ಐ.ಒ (ಮೆರೈನ್ , ಆರ್ಚಿಯೋಲಾಜಿ ಅಫ಼್ ನ್ಯಾಶನಲ್ ಇನ್ಸ್ ಟಿಟ್ಯೊ ಟ್ ಆಫ಼್ ಒಶಿಯನೋಗ್ರಾಫ಼ಿ) ನಡೆಸಿತು.

ಈ ಕಾರ್ಯಚರಣೆಗಾಗಿ ಅವರು ಹಲವು ಅಧುನಿಕತಂತ್ರಜ್ಙಾನವಾದ ಈಕೊ-ಸೌಂಡರ್ಸ್,ಮಡ್ ಪೆನಿಟ್ರೇಟರ್ಸ್,ಸಬ್ ಬಾಟಮ್ ಪ್ರೊಫೈಲರ್ಸ್,ಮತ್ತು ಅಂಡರ್ ವಾಟರ್ ಮೆಟಲ್ ಡಿಟೆಕ್ಟಾರ್ಸ್ಗಳನ್ನು ಬಳಸಿದ್ದಾರೆ. ಡಾ|| ರಾವ್ ರವರು ಹೇಳುವ ಪ್ರಕಾರ ಮೊದಲಿಗೆ ಸಮುದ್ರದ ದಡದಲ್ಲಿಯೇ ಕೆಲವು ಕುರುಹುಗಳು ದೊರಕಿವೆ ನಂತರ ಸಮುದ್ರದೊಳಗಡೆ ೩೦ ಅಡಿ ಆಳದಲ್ಲಿ ಪರಿಶೀಲಿಸಿದಾಗ ೪ ಸಾವಿರ ಕಿ.ಮಿ. ದೂರದವರೆಗೂ ಈಡಿ ನಗರಿ ಕಂಡಿದೆ ಎಂದರು. ಈ ಅವಶೇಷಗಳ ಪ್ರಕಾರ ದ್ವಾರಕೆಯು ೧೦೪ ಕಿ.ಮಿ. ವಿಸ್ತಾರವಿದ್ದಿರಬಹುದೆಂದು ಹಾಗು ಕ್ರಿ.ಪೂ.೧೧೪೩ ನೇ ಶತಮಾನದಲ್ಲಿ ದ್ವಾರಕೆಯು ಮುಳುಗಿರಬಹುದೆಂದು ಊಹಿಸಲಾಗಿದೆ. ಕಾರ್ಯಾಚರಣೆತಯನ್ನು ಹರಿವಂಶ,ಮಹಾಭಾರತಗಳಿಗೆ ಪುಷ್ಟೀಕರಿಸಿರುವುದರಿಂದ ಅಲ್ಲಿ ಬರುವ ದ್ವಾರಕಾ ನಗರಿಯ ವಿವರಣೆಯ ಜೊತೆಗೆ ಅನುಮೋದಿಸಿದ್ದಾರೆ. ದ್ವಾರಕೆಯನ್ನು ಬಂಗಾರದ ನಗರಿಯೆಂದು ಮಹಾಭರತ,ಸ್ಕಂದಪುರಾಣ,ವಿಷ್ನು ಪುರಾಣ ಮತ್ತು ಹರಿವಂಶಗಳಲ್ಲಿ ಹೆಳಿದ್ದಾರೆ. ಸಮುದ್ರದೊಳಗದಡೆಯ ಅನ್ವೇಶಣೆ,ಮಾಹಿತಿ ಮತ್ತು ಐಹಿಕ ವಸ್ತುಗಳನ್ನು ಸಂಸ್ಕ್ರತ ಸಾಹಿತ್ಯದಲ್ಲಿ ಕಂಡ ದ್ವಾರಕಾ ನಗರಿಯೊಡನೆ ಪುಷ್ಟೀಕರಿಸಿ ನೋಡಿದರೆ ಅಲ್ಲಿಯೂ ಸಹ ದ್ವಾರಕ ನಗರಿಯು ಸಮುದ್ರದ ಸೆಳೆತಕ್ಕೆ ಸಿಲುಕಿ ಮುಳುಗಿ ಹೋಗಿರುವ ಬಗ್ಗೆ ಉಲ್ಲೇಖವಿದೆ. ಮಹಾಭರತದಲ್ಲಿ ಹೇಳಿರುವಂತೆ ಒಮ್ಮೆ ಸಮುದ್ರದಲ್ಲಿ ಅಲೆ ಹೆಚ್ಚಾಗಿ ತೀರಕ್ಕೆ ರಭಸವಾಗಿ ಬಡಿಯುತ್ತಿರುವಾಗ ಸಮುದ್ರದ ಅಂಚಿನ ಕಟ್ಟೆ ಹೊಡೆದು ನೀರು ದ್ವಾರಕೆಯೊಳಗೆ ನುಗ್ಗಿ ಇಡೀ ನಗರವನ್ನು ನುಂಗಿತು ಎಂದು ಹೇಳಲಾಗಿದೆ, ಮತ್ತು ರಾವ್ ರವರು ಹೇಳುವ ಪ್ರಕಾರ ಮಹಾಭಾರತಗಳಲ್ಲಿ ಹೇಳಿರುವ ನಗರಿಗೂ, ದೊರೆತಿರುವ ಅವಶೇಷಗಳಿಗು ಹೊಂದಾಣಿಕೆಯಾಗುತ್ತವೆ.

ಪತ್ತೆಯಾದ ಅವಶೇಶಗಳು

[ಬದಲಾಯಿಸಿ]
  • ಸಮುದ್ರದೊಳಗಡೆ ಸಿಕ್ಕ ಕೆಲವು ಕುರುಹುಗಳನ್ನು ಪತ್ತೆ ಹಚ್ಚಿದಾಗ ಅವು ೩೬೦೦ ವರ್ಷಗಳ ಪುರಾತನವಾದವು ಎಂದು ಹೇಳಿದ್ದಾರೆ.

ದ್ವಾರಕ ನಗರಿಯು ಉತ್ತರದ ಸಂಕೋಧರದಿಂದ ಹಿಡಿದು ದಕ್ಷಿಣದ ಒಖಾಮಂಡಿಯವರೆಗು ಮತ್ತು ಪೂರ್ವದಲ್ಲಿ ಪಿಂದರದವರೆಗೂ ವಿಸ್ತರಿಸಿತ್ತು. ಪೂರ್ವದಲ್ಲಿ ೩೦ ರಿಂದ ೪೦ ಮಿ. ಎತ್ತರವಿರುವ ಗಿರಿಯನ್ನೇ ಮಹಾಭರತದಲ್ಲಿ ಪ್ರಸ್ತಾಪಿಸಿರುವ ರೈವತಕ ಗಿರಿಯೆಂದು ಪರಿಗಣಿಸಲಾಗಿದೆ ಹಾಗೆಯೇ ಮಹಾಭರತದಲ್ಲಿ ಪ್ರಸ್ತಾಪಿಸಿರುವ ಪ್ರಸಾದವು ದ್ವಾರಕೆಯ ಕೋಟೆಗೆ ಸೇರಿರಬಹುದೆಂದು ತೀರ್ಮಾನಿಸಲಾಗಿದೆ

  • ಮಹಾಭರತದಲ್ಲಿ ಹೇಳಿರುವಂತೆ ದ್ವಾರಕೆಯಲ್ಲಿ ಸದಾ ದ್ವಜಾ ಪತಾಕೆಗಳು ವಿಜೃಂಭಿಸುತ್ತಿದ್ದುದ್ದರ ಬಗ್ಗೆ ಮಾಹಿತಿ ಇದೆ. ಸಮುದ್ರ ತಳ ಕಾರ್ಯಾಚರಣೆಯ ಜೊತೆಗೆ ಅದನ್ನು ಪುಷ್ಟೀಕರಿಸಿದರೆ ಸಮುದ್ರ ತಳದಲ್ಲಿ ಕಲ್ಲುಗಳ ಮೇಲೆ ಬಾವುಟಗಳ ಅಚ್ಚು ದೊರೆತಿವೆ.
  • ಸಮುದ್ರ ತಳದಲ್ಲಿ ಕಟ್ಟಡಗಳು ದೊರಕ್ಕಿದ್ದು,ಕಟ್ಟಡಗಳು ನೆಲಸಮವಾಗಿವೆ. ಕೆಲವು ಕೋಟೆಯ ಗೋಡೆಗಳು ಹಾಗು ದೃಢವಾದ ಕಲ್ಲಿನ್ನಿಂದ ಕಟ್ಟಿರುವ ಕೋಟೆಯ ಬುರುಜುಗಳು, ರಕ್ಷಣಾ ಗೋಡೆಗಳು ಅಲ್ಲಿ ಕಂಡು ಬಂದಿವೆ.
  • ಕಾರ್ಯಾಚರಣೆಯಲ್ಲಿ ಬಹುಸಂಖ್ಯಾ ಆಯತಾಕಾರದ ಕಲ್ಲುಗಳ್ಳುಳ್ಳ ಗೋಡೆಗಳು ಸಿಕ್ಕಿದೆ ಅವುಗಳ್ಲಲ್ಲಿ ಕೆಲವು ಮಣ್ಣಿನಲ್ಲಿ ಉದುಗಿ ಹೋಗಿವೆ.
  • ಕೆಲವು ಹೋಳಪಿರುವ ಮಡಿಕೆಗಳು ದೊರಕ್ಕಿದ್ದು ಅದು ೩೫೨೦ ವರ್ಷಗಳ ಪುರಾತನವಾದ್ದದ್ದು ಬಹುಶಃ ಕ್ರಿ.ಪೂ. ೧೫ ನೇ ೧೬ನೇ ಶತಮಾನಕ್ಕೆ ಸೇರಬಹುದು ಎನ್ನಲಾಗಿದೆ.
  • ಅವಶೇಷಗಳಲ್ಲಿ ಮೂರು ಕಬ್ಬಿಣದ ಆಣಿ ಹಾಗು ಒಂದು ಚ್ಚಿಕ್ಕ ಕಬ್ಬಿಣದ ಬುರುಡೆ ಸಿಕ್ಕಿರುವುದರಿಂದ, ಆಗ ಕಬ್ಬಿಣದ ಬಳಕೆ ಅತೀ ಕಡಿಮೆ ಇರಬಹುದು ಎಂದು ನಿರ್ಧರಿಸಲಾಗಿದೆ.
  • ಹರಿವಂಶದಲ್ಲಿ ಹೇಳಿರುವಂತೆ ದೊರಕಿರುವ ಕುರುಹುಗಳೊಡನೆ ಪುಷ್ಟೀಕರಿಸಿ ನೋಡಿದಾಗ ಅಲ್ಲಿ ದ್ವಾರಕೆಯ ನಗರ ವಾಸಿಗಳು ಧರಿಸುವ ಮುದ್ರೆ ಬೆಳಕಿಗೆ ಬಂದಿದೆ. ಆ ಮುದ್ರೆಯು ಮೂರು ತಲೆಯುಳ್ಳ ಗೂಳಿ,(ಯೂನಿಕಾರ್ನ್)ಒಂದೇ ಕೊಂಬುಳ್ಳ ಪ್ರಾಣಿ, ಹಾಗು ಮೇಕೆಯ ಅಚ್ಚುಗಳಿದ್ದ ಮುದ್ರೆಯು ದೊರಕಿದೆ. ಈ ಮುದ್ರೆಯನ್ನು ಕ್ರಿ.ಪೂ.೧೫ ರಿಂದ ೧೬ ನೇ ಶತಮಾನಗಳಿಗೆ ಸೇರಿರಬಹುದು ಎಂದು ಹೇಳಲಾಗಿದೆ.
  • ಅಮೇರಿಕಾದ ಭೂ ಸೂಕ್ಶ್ಮತೆ ಗ್ರಹಿಸುವ ಉಪಗ್ರಹವು ತೆಗೆದಿರುವ ಛಾಯಚಿತ್ರ ಹೇಳುವ ಪ್ರಕಾರ ಸರಸ್ವತಿ ನದಿಯು ಕ್ರಿ.ಪೂ.೨೦೦೦ನೇ ಶತಮಾನದ ಕೆಳಗೆ ಅದ್ಭುತ ನದಿಯಾಗಿತ್ತು(ಇದರ ಉಲ್ಲೇಖ ರಿಗ್ವೇದಲ್ಲಿದೆ)

ಹಿನ್ನುಡಿ

[ಬದಲಾಯಿಸಿ]

ದ್ವಾರಕೆಯ ಅಸ್ತಿತ್ವ , ಪಾಶ್ಛ್ಹಿಮಾತ್ಯ ತಜ್ಞರು ಭಾರತದಲ್ಲಿ ಕ್ರಿ.ಪೂ.೧೭೦೦(ಹಿಂದು ನಾಗರಿಕತೆ) ಮತ್ತು ಕ್ರಿ.ಪೂ.೫೫೦ಕ್ಕಿಂತ ಹಿಂದಿನ ನಾಗರಿಕತೆಯೂ ಇರಲ್ಲಿಲ್ಲ ಎಂಬ ಅವರ ಅಭಿಮತವನ್ನು ಸುಳ್ಳಾಗಿಸಿದೆ. ಆ ಯುಗದ ಬಗ್ಗೆ ಮಾಹಿತಿ ಇಲ್ಲದ ಕಾರಣ ಅದನ್ನು ಡಾರ್ಕ್ ಪೀರಿಯಡ್ (ಕತ್ತಲ ಯುಗ) ಎಂದು ಕರೆಯಲಾಗಿದೆ. ದ್ವಾರಕೆಯ ಅಸ್ತಿತ್ವದ ನಂತರ ಮಹಾಭಾರತವನ್ನು ಇತಿಹಾಸವೆನ್ನಬೇಕೊ ಬೇಡವೊ ಎಂಬುದರ ಬಗ್ಗೆ ಗೊಂದಲವೆದ್ದಿದೆ. ಆದರೆ ಎಸ್.ಅರ್ ರಾವ್ ರವರು ಕೃಷ್ಣನ ಅಸ್ತಿತ್ವ ಕಂಡಿತವಾದ್ದದ್ದು ಎಂದು ಹೇಳ್ಳಿದ್ದಾರೆ. ಈ ಅಧಾರದ ಮೇಲೆ ಕುರುಕ್ಷೇತ್ರ ಯುದ್ದ ಕ್ರಿ.ಪೂ ೧೪೭೮ ರಲ್ಲಿ ನಡೆದಿರಬಹುದೆಂದು ಹೇಳಲಾಗಿದೆ. ಜೊತೆಗೆ ರಾವ್ ರವರು ಸಮುದ್ರಮಟ್ಟ ಇನ್ನು ಹೆಚ್ಚಾಗಲಿದೆ ಎಂದು ಹೇಳಿದ್ದಾರೆ. ಎಸ್.ಅರ್ ರಾವ್ ರವರ ಮುಂದಾಳತ್ವದಲ್ಲಿ ಇತಿಹಾಸ ತಜ್ಙರು ಹಾಗು ಸಂಶೋಧಕರು ಸಮುದ್ರದೊಳಗೆ ವಸ್ತು ಸಂಗ್ರಹಾಲಯ ಸೃಷ್ಠಿಸಬೇಕೆಂದು ಸರ್ಕಾರದ ಬಳಿ ಪ್ರತಿಪಾದಿಸಿದ್ದಾರೆ. ಈ ಪ್ರತಿಪಾದನೆ ನನಸಾದಲ್ಲಿ ಪ್ರಪಂಚದ ಮೊದಲ ಸಮುದ್ರ ತಳದ ವಸ್ತು ಸಂಗ್ರಹಾಲಯವಾಗುವ ಹೆಗ್ಗಳಿಕೆಗೆ ಪಾತ್ರವಾಗುತ್ತದೆ. ಈ ಯೋಜನೆಯ ಪ್ರಕಾರ ಆರ್ಕಿಯೋಲಜಿ ಆಫ್ ದಿ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಓಶಿಯನೋಗ್ರಫಿ ಸಮುದ್ರಾಂತರ್ಯಾಮಿ ನೌಕೆಯ ಜೊತೆಗೆ ಕೋಣೆಯನ್ನು ನಿರ್ಮಿಸಿ ಪ್ರೇಕ್ಷಕರು ಗಾಜಿನ ಮೂಲಕ ವೀಕ್ಷಿಸಬಹುದೆಂದು ಯೋಜಿಸಿದ್ದಾರೆ. ಆದಷ್ಟು ಬೇಗ ಈ ಕಾರ್ಯ ನೆರವೇರಬೇಕಾಗಿದೆ.[], [], []

  1. http://www.iskcondesiretree.net/forum/topics/dwaraka-a-lost-city-recovered‎
  2. http://www.abovetopsecret.com/forum/thread657629/pg1‎
  3. http://avalon.wz.cz/Tajemno,energie/Krishnasdwarka.htm‎