ಸಮಾಧಿ (ರಚನೆ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಮಾಧಿ, ವಿಗ್ರಹದೊಂದಿಗೆ

ಸಮಾಧಿ ಅಥವಾ ಸಮಾಧಿ ಮಂದಿರ ಎಂದರೆ ಮೃತರನ್ನು ಸ್ಮರಿಸಿಕೊಳ್ಳಲು ನಿರ್ಮಿಸಲಾಗಿರುವ ಮಂದಿರ, ರಚನೆ ಅಥವಾ ಸ್ಮಾರಕ.[೧][೨][೩] ಇದು ಮೃತರ ಶವವನ್ನು ಹೊಂದಿರಬಹುದು ಅಥವಾ ಹೊಂದಿರದಿರಬಹುದು. ಹಿಂದೂ ಧಾರ್ಮಿಕ ಸಂಪ್ರದಾಯಗಳಲ್ಲಿ ಸಂತರು ಅಥವಾ ಗುರುಗಳು ಎಂದು ಪರಿಗಣಿಸಲಾದ ವ್ಯಕ್ತಿಗಳನ್ನು ಗೌರವಿಸಲು ಸಮಾಧಿ ಸ್ಥಳಗಳನ್ನು ಈ ರೀತಿಯಾಗಿ ಹಲವುವೇಳೆ ಕಟ್ಟಿರಲಾಗುತ್ತದೆ. ಅಂತಹ ಆತ್ಮಗಳು ಸಾವಿನ ಸಮಯದಲ್ಲಿ ಮಹಾಸಮಾಧಿಯ ಸ್ಥಿತಿಗೆ ಸಾಗಿದ್ದಾರೆ, ಅಥವಾ ಮೊದಲಿನಿಂದಲೂ ಸಮಾಧಿ ಸ್ಥಿತಿಯಲ್ಲಿದ್ದರು (ಪ್ರಜ್ಞೆಯ ಅದ್ವೈತಾತ್ಮಕ ಸ್ಥಿತಿ) ಎಂದು ಹೇಳಲಾಗುತ್ತದೆ.

ಸಾವಿನ ಸಮಯದಲ್ಲಿ ಬಹುತೇಕ ಹಿಂದೂ ಜನರಿಗೆ ಶವದಹನವು ಭಾರತದಲ್ಲಿನ ಸಂಪ್ರದಾಯವಾಗಿದೆ. ಸಾಮಾನ್ಯವಾಗಿ ಸಮಾಧಿಯನ್ನು ಯೋಗಾಗ್ನಿಯಿಂದ ಮೊದಲೇ ಶುದ್ಧವಾಗಿರುವ, ಅಥವಾ ಸಾವಿನ ಸಮಯದಲ್ಲಿ ಸಮಾಧಿಯ ಸ್ಥಿತಿಯಲ್ಲಿದ್ದರು ಎಂದು ನಂಬಲಾಗಿರುವ ಯೋಗಿಗಳು ಮತ್ತು ಸಂತರಂತಹ ಬಹಳ ಮಹಾನ್ ಚೇತನಗಳಿಗೆ ಮೀಸಲಾಗಿಡಲಾಗುತ್ತದೆ. ಸಮಾಧಿಯು ಶವದಹನವನ್ನು ಒಳಗೊಳ್ಳದಿರಬಹುದು.

ಉಲ್ಲೇಖಗಳು[ಬದಲಾಯಿಸಿ]

  1. "Hindi dictionary (Samadhi)". Retrieved 18 September 2014.
  2. "Oxford Dictionary - American English". Archived from the original on 2 ಏಪ್ರಿಲ್ 2015. Retrieved 18 September 2014.
  3. "Oxford Dictionary - English". Archived from the original on 26 ಆಗಸ್ಟ್ 2014. Retrieved 18 September 2014.