ವಿಷಯಕ್ಕೆ ಹೋಗು

ಸಮಂತಾ ರುತ್ ಪ್ರಭು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಮಂತಾ ರುತ್ ಪ್ರಭು
Born
ಸಮಂತಾ ರುತ್ ಪ್ರಭು

Nationalityಭಾರತೀಯ
Educationಬಿ.ಕಾಂ
Occupationನಟಿ

"ಸಮಂತಾ"ಎಂದೆ ಹೆಸರುವಾಸಿಯಾಗಿರುವ ನಟಿ "ಸಮಂತಾ ಅಕ್ಕಿನೇನಿ" ೨೮ ಏಪ್ರಿಲ್ ೧೯೮೭ ಅಲ್ಲಿ ಜನಿಸಿದರು. ಸಮಂತಾ ಒಬ್ಬ ಭಾರತೀಯ ನಟಿಯಾಗಿದ್ದು, ಅವರ ತೆಲಗು ಮತ್ತು ತಮಿಳು ಸಿನಿಮಾ ರಂಗದಲ್ಲಿ ನಟಿಯಾಗಿ ವೃತ್ತಿಜೀವನ ನಡೆಸುತ್ತಿದ್ದಾರೆ. ಅವರಿಗೆ ಮೂರು ಫಿಲಿಮ್ ಫೇರ್ ಪ್ರಶಸ್ತಿ ದೊರಕಿವೆ.[].

ಸಮಂತಾ ಹುಟ್ಟಿ ಬೆಳದದ್ದು ಚೆನೈನಲ್ಲಿ. ಅವರು ತೆಲುಗು ಮತ್ತು ಮಲಯಾಳಿ ಕುಟುಂಬಕ್ಕೆ ಸೇರಿದ್ದ ಹುಡುಗಿ. ಅವರಿಗೆ ಕಾಮರ್ಸ್ ನಲ್ಲಿ ಪದವಿ ಪಡೆದು, ಜೊತೆಯಲ್ಲಿಯೇ ಮಾಡಲಿಂಗ್ ಸಹ ಮಾಡುತ್ತಿದ್ದರು. ಅತೀ ಶೀಘ್ರದಲ್ಲಿ ಅವರಿಗೆ ಸಿನಿಮಾದಲ್ಲಿ ನಟಿಯಾಗುವ ಅವಕಾಶ ದೊರಕಿತು. "ಗೌತಮ್ ಮೆನನ್"ನ ತೆಲುಗಿನ ಚಿತ್ರವಾದ "ಯೇ ಮಾಯ ಚೇಸಾವೆ" ಚಿತ್ರವನ್ನು ೨೦೧೦ರಲ್ಲಿ ಮಾಡಿದ್ದರು. ಈ ಚಿತ್ರದಿಂದ ಅವರಿಗೆ ಅತ್ಯುತ್ತಮ ನಟಿಯಾಗಿ ಫಿಲಮ್ ಫೇರ್ ಪ್ರಶಸ್ತಿ ಮತ್ತು ನಂದಿ ಅವಾರ್ಡ್ ದೊರಕಿತ್ತು. ಸಮಂತಾ ಆಗ ತೆಲುಗು ಮತ್ತು ತಮಿಳು ಭಾಷೆಯಲ್ಲಿ ಒಟ್ಟಾಗಿ ಅತ್ಯುತ್ತಮ ನಟಿಯಾಗಿ ಫಿಲಿಮ್ ಫೇರ್ ದೊರಕಿತು. ತಮಿಳಿನಲ್ಲಿ, "ನೀದಾನೇ ಎನ್ ಪೊನ್ ವಸಂತಂ" ಚಿತ್ರಕ್ಕೆ ಪ್ರಶಸ್ತಿ. ೨೦೧೨ರಲ್ಲಿ ಮತ್ತೆ ತೆಲುಗುವಿನಲ್ಲಿ " ಎಸ್.ಎಸ್. ರಾಜಮೌಳಿ ನಿರ್ದೇಶಿಸಿದ "ಈಗ" ಚಿತ್ರಕ್ಕೆ ಕೊಡ ಅತ್ಯುತಮ ನಟಿಯಾಗಿ ಫಿಲಮ್ ಫೇರ್ ಪ್ರಶಸ್ತಿ ದೊರಕಿತು. ಈ ಚಿತ್ರಕ್ಕೆ ನಟನಾಗಿ 'ನಾನಿ' ಮತ್ತು ಕನ್ನಡದ ನಟನಾದ 'ಸುದೀಪ್' ಸಹ ಅಭಿನಯಿಸಿದ್ದಾರೆ. ಈ ಚಿತ್ರಗಳ ನಂತರ, ಸಮಂತಾ ಮುಖ್ಯ ನಟಿಯಾಗಿ "ದೂಕುಡು" ಚಿತ್ರ ಮಾಡಿದರು ೨೦೧೧ರಲ್ಲಿ. ಕೌಟುಂಬಿಕ ಚಿತ್ರವಾದ "ಸೀತಮ್ಮ ವಾಕಿಟ್ ಲೊ ಸಿರಿಮಲ್ಲೆ ಚೆಟ್ಟು" ಚಿತ್ರವನ್ನು ೨೦೧೨ರಲ್ಲಿ ಮಾಡಿದರು. ೨೦೧೩ರಲ್ಲಿ "ಅತ್ತಾರಿಂಟಿಕಿ ದಾರೇದಿ" ಚಿತ್ರವನ್ನು ತ್ರಿವಿಕ್ರಮ್ ಶ್ರೀನಿವಾಸ್ ಅವರ ನಿರ್ದೇಶನದಲ್ಲಿ ಮಾಡಿದರು. ಇವರು ಅನೇಕ ತಮಿಳು ಚಿತ್ರಗಳಲ್ಲಿ ಕೊಡ ನಟಿಸಿದ್ದಾರೆ. ೨೦೧೪ರಲ್ಲಿ "ಕತ್ತಿ" ಚಿತ್ರದಲ್ಲಿ ಮುಖ್ಯ ನಟನಾಗಿ 'ವಿಜಯ್' ನಟಿಸಿದ್ದಾರೆ.೨೦೧೬ರಲ್ಲಿ "ತೇರಿ" ಚಿತ್ರದಲ್ಲಿ ಮುಖ್ಯ ನಟ ನಟಿಯಾಗಿ "ಸಮಂತಾ" ಮತ್ತು "ವಿಜಯ್" ಹಾಗು ೨೦೧೬ ರಲ್ಲಿ "೨೪" ಎನ್ನುವ ಚಿತ್ರವನ್ನು 'ಸೂರ್ಯ' ಜೊತೆ ನಟಿಸಿದ್ದರೆ. ೨೦೧೬ರಲ್ಲಿ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ತೆಲುಗು ಚಿತ್ರ "ಅ ಆ" ಅಲ್ಲಿ ತೆಲುಗು ನಟನಾದ 'ನಿತಿನ್' ಜೊತೆ ಚಿತ್ರ ಮಾಡಿದ್ದಾರೆ. ಸಮಂತಾ ಅನ್ನು ೨೦೧೬ರಲ್ಲಿ ಬಿಡುಗದೆಯಾಗಲಿರುವ "ಜನತಾ ಗ್ಯಾರೇಜ್" ಅನ್ನುವ ತೆಲುಗು ಚಿತ್ರಕ್ಕೆ ನಾಯಕಿ ನಟಿಯಾಗಿ ಆಯ್ಕೆ ಮಾಡಿದ್ದಾರೆ. 2016 ರಲ್ಲಿ ತೆಲುಗು ನಟ ಅಕ್ಕಿನೇನಿ ನಾಗಚೈತನ್ಯರನ್ನು ವರಿಸಿದರು. [].

ಸಮಂತಾ ಅವರು ನಟಿ ಅಷ್ಟೇ ಅಲ್ಲದೆ ೨೦೧೨ರಲ್ಲಿ ಒಂದು 'ಎನ್.ಜಿ.ಓ' ಪ್ರಾರಂಭಿಸಿದರು, ಅದರ ಹೆಸರು "ಪ್ರತ್ಯುಷಾ ಸಪೊರ್ಟ್" ಇದರಿಂದ ಮಕ್ಕಳಿಗೆ ಮತ್ತು ಹೆಣ್ಣು ಮಕ್ಕಳಿಗೆ ಔಷಧಿ ಪೂರೈಕೆ ಮಾಡುವ ಮೂಲಕ ಅವರಿಗೆ ಸಹಾಯ ಮಾಡುತ್ತಾರೆ. ಸಮಂತಾ ತನ್ನ ಮತ್ತು ಇತರರ ಕಾರ್ಯಕ್ರಮಗಳಿಂದ ಬರುವ ಆದಾಯವನ್ನು ಈ 'ಎನ್.ಜಿ.ಓ'ಗೆ ಉಪಯೋಗಿಸುತ್ತಾರೆ. ಈ 'ಎನ್.ಜಿ.ಓ' ಎರಡು ಭಾಗಗಳಾಗಿ, ಒಂದು ಚೆನೈನಲ್ಲಿ ಮತ್ತೊಂದು ಆಂಧ್ರಾದಲ್ಲಿ ಇದೆ.

ಆರಂಭಿಕ ಜೀವನ ಮತ್ತು ಕುಟುಂಬ

[ಬದಲಾಯಿಸಿ]

ಸಮಂತಾ ರುತ್ ಪ್ರಭು, ಮಳಯಾಳಿ ತಾಯಿ ಹಾಗು ತೆಲಗು ತಂದೆಯವರಿಗೆ ೨೮ ಏಪ್ರಿಲ್ ೧೯೮೭ ರಂದು ಜನಿಸಿದರು. ಅವರ ಬಾಲ್ಯ ಪಲ್ಲವರಂ, ಚೆನೈನಲ್ಲಿ ಕಳೆದರು. ಅವರ ತಂದೆ ಪ್ರಭು ಹಾಗು ತಾಯಿ ನಿನೆತ್ತೇ ಅವರ ಕಿರಿಯ ಮಗಳಾಗಿ, ಇಬ್ಬರು ಸಹೋದರರು, ಜೋನತನ್ ಹಾಗು ಡೆವಿಡ್. ಅವರ ಕೌಟುಂಬಿಕ ಇನ್ನೆಲೆ ತೆಲುಗು ಮತ್ತು ಮಳಯಾಳಂ ಆಗಿದ್ದರು, ಅವರನ್ನು ತಮಿಳಿನವರು ಎಂದು ಹೇಳುತ್ತಾರೆ ಏಕೆಂದರೆ ಅವರು ತಮಿಳು ಹಾಗು ಇಂಗ್ಲೀಷ ಮಾತನಾಡಿ ಬೆಳಿದಿದಾರು.

ಸಮಂತಾ ಅವರು "ಹೋಲಿ ಎಂಜಲ್ಸ್ ಆಂಗ್ಲೋ ಇಂಡಿಯನ್ ಹೈಯರ್ ಸೆಕೆಂಡರಿ ಶಾಲೆ"ಯಲ್ಲಿ ಓದಿದ್ದರು. ತಮ್ಮ ಪದವಿಯನ್ನು ಕಾಮರ್ಸ್ ನಲ್ಲಿ "ಸ್ಟೆಲ್ಲಾ ಮೇರಿಸ್ ಕಾಲೇಜಿ, ಚೆನೈ"ನಲ್ಲಿ ಮುಗಿಸಿದರು. ಅವರ ಪದವಿಯ ಕೊನೆಯ ವರ್ಷದಲ್ಲಿ ಮಾಡಲಿಂಗ್ನಲ್ಲಿ ಒಳಗಾಗಿದ್ದು, "ನಾಯಡು ಹಾಲ್"ನಲ್ಲಿ ಕೆಲಸಮಾಡುವಾಗ, "ರವಿ ಮರ್ಮನ್"ರವರು ಸಮಂತಾ ಅವರನ್ನು ನೋಡಿದರು.

ವೃತ್ತಿ

[ಬದಲಾಯಿಸಿ]

ಸಮಂತಾ ಅವರು ತಮ್ಮ ಜೀವನದ ವೃತ್ತಿಯನ್ನು ನಟಿಯಾಗಿ ಮೊದಲನೆಯ ಭಾರಿಗೆ ಗೌತಮ್ ಮೆನನ್ ಅವರ ತೆಲಗು ಚಿತ್ರವಾದ "ಯೇ ಮಾಯ ಚೇಸಾವೆ" ೨೦೧೦ರಲ್ಲಿ ಬಿಡುಗಡೆ ಆಯಿತು. ಈ ಚಿತ್ರವು ಒಂದೇ ಸಮಯದಲ್ಲಿ ತಮಿಳು ಭಾಷೆಯಲ್ಲಿ "ವಿನಯೈತಾಂಡಿ ವರುವಾಯಾ" ಎಂದುನಿರ್ದೇಶಿಸಿ, ಅದಕ್ಕೆ ಸಂಗೀತ ನಿರ್ದೇಶಕರಾಗಿ "ಎ.ಆರ್.ರೆಹಮಾನ್" ಸಂಗೀತ ರಚಿಸಿದ್ದರೆ. ಈ ಚಿತ್ರದ ಬಿಡುಗಡೆಯ ನಂತರ ಬಹಳ ಇಳ್ಳೆಯ ಅಭಿಪ್ರಾಯ ಜನತೆಯಲ್ಲಿ ಸಮಂತಾ ಅವರ ನಟನೆಯ ಕುರಿತು ಮೂಡಿತ್ತು. ಗೌತಮ್ ಮೆನನ್ ಮತ್ತು "ಎ.ಆರ್.ರೆಹಮಾನ್" ೨೦೧೦ರಲ್ಲಿ ನೆಡೆದ ಸಾಂಸ್ಕ್ರುತಿಕ ತಮಿಳು ಕಾನ್ ಫರೆನ್ಸ್ ನಲ್ಲಿ ಸಮಂತಾ ಕೊಡ ಭಾಗವಹಿಸಿದರು. ೨೦೧೩ರಲ್ಲಿ ಸಮಂತಾ "ಸೀತಮ್ಮ ವಾಕಿಟ್ ಲೊ ಸಿರಿಮಲ್ಲೆ ಚೆಟ್ಟು" ಎಂಬ ಚಿತ್ರದಲ್ಲಿ ತೆಲಗು ಸೂಪರ್ ಸ್ಟಾರ್ ಆದ "ಮಹೇಶ್ ಬಾಬು" ಜೊತೆ ನಟಿಸಿದರು. ೨೦೧೩ರಲ್ಲಿ ಮತ್ತೊಂದು "ಜಬರ್ದಸ್ತ್" ಎಂಬ ಚಿತ್ರ "ಸಿದ್ದಾರ್ಥ" ಜೊತೆ ನಟಿಸಿದಾರೆ.ಒಂದು ವಾಣಿಜ್ಯವಾಗಿ ಗೆಲವು ಪಡೆದಿದ್ದು.

೨೦೧೩ರಲ್ಲಿ "ಪವನ್ ಕಲ್ಯಾಣ್" ಅವರ ಸಹ ನಟಿಯಾಗಿ "ಅತ್ತಾರಿಂಟಿಕಿ ದಾರೆದಿ" ಚಿತ್ರವನ್ನು ನಟಿಸಿದ್ದರೆ. ಈ ಚಿತ್ರದಿಂದ ಸಮಂತಾಗೆ "ಸೈಮಾ" ಪ್ರಶಸ್ತಿ ಹಾಗು ಸಂತೋಷಂ ಫಿಲಮ್ ಪ್ರಶಸ್ತಿ ದೊರಕಿದೆ. ೨೦೧೩ರಲ್ಲಿ ಮತ್ತೋಂದು ಚಿತ್ರ "ರಾಮಯ್ಯಾ ವಸ್ತಾವಯ್ಯ" ಚಿತ್ರದಲ್ಲಿ ಜೂನಿಯರ್ ಎನ್.ಟಿ. ರಾಮ ರಾವ್" ಜೋತೆ ಮಾಡಿದ್ದರು, ಇದು ಅಷ್ಟು ದೊಡ್ಡಾ ಪ್ರಮಾಣದಲ್ಲಿ ಜನರ ಮನಸಿನಲ್ಲಿ ಮನೆಮೂಡಲಿಲ್ಲ.

೨೦೧೪ರಲ್ಲಿ ಸಮಂತಾ ಆರು ಚಿತ್ರಗಳಲ್ಲಿ ನಟಿಸಿ, ತಮಿಳು ಸಿನಿಮಾ ರಂಗಕ್ಕೆ ಹಿಂದಿರುಗಿ ಬಂದರು. ೨೦೧೪ರ ಮೊದಲನೆಯದಾಗ ಬಿಡುಗಡೆಯಾದ ಚಿತ್ರ "ಮನಂ"ಅಲ್ಲಿ ಸಮಂತಾ ಎರಡು ಪಾತ್ರದ ನಟಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ತೆಲುಗು ಚಿತ್ರರಂಗದ ಒಂದು ಮುಖ್ಯ ಕುಟುಂಬವಾದ "ಅಕಿನೇನಿ ಕುಟುಂಬದ" ಜೋತೆ ನಟಿಸಿದ್ದರೆ. ೨೦೧೪ರಲ್ಲಿ "ನಾಗ ಚೈತನ್ಯ" ಜೊತೆಗೆ ನಟೀಸಿದ ಮತ್ತೊಂದು ಚಿತ್ರ "ಆಟೋನಗರ್ ಸೊರ್ಯ", ನಂತರ "ಅಲ್ಲುಡು ಸೀನು" ಚಿತ್ರದಲ್ಲಿ ವಿಭಿನ್ನವಾದ ಪಾತ್ರದ ಆಯ್ಕೆ ಮಾಡಿಕೊಂಡಿದ್ದಾರೆ. ತಮಿಳು ಚಿತ್ರ ರಂಗದಲ್ಲಿ ಎರಡು ದೊಡ್ಡ ಪ್ರಮಾಣದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. "ಅನ್ ಜಾನ್" ಚಿತ್ರದಲ್ಲಿ ನಟ "ಸೂರ್ಯ" ಜೊತೆಯಾಗಿ. ಇದು ಹೆಚ್ಚಗಿ ಅಭಿಮಾನಿಗಳ ಮನ ಗೆಲ್ಲಲಿಲ್ಲ. ಇನ್ನೊಂದು ಚಿತ್ರ "ಕತ್ತಿ", ಎ. ಅರ್.ಮುರುಗದಾಸ್ ನಿರ್ದೇಶಿಸಿರುವ ಚಿತ್ರವಾಗಿದ್ದು ನಟ 'ವಿಜಯ್' ಜೊತೆ ಕೆಲಸ ಮಾಡಿದರು. ಇದರ ಜೊತೆಯಲ್ಲಿ ಯೇ "ಸನ್ ಆಫ್ ಸತ್ಯಮೂರ್ತಿ" ಚಿತ್ರದಲ್ಲಿ 'ಅಲ್ಲು ಅರ್ಜುನ್' ಜೊತೆ ನಟಿಸಿದರು.

೨೦೧೫ರಲ್ಲಿ 'ವಿಜಯ್ ಮಿಲ್ ಟನ್' ನಿರ್ದೇಶಿಸಿರುವ "ಪತ್ತ್ ಎಂಡ್ರತಕುಳ್ಳ" ಚಿತ್ರದಲ್ಲಿ 'ವಿಕ್ರಮ್' ಜೊತೆ ನಟಿಸಿದರು. ೨೦೧೫ರಲ್ಲಿ ಮತ್ತೊಂದು ತಮಿಳು ಚಿತ್ರ ನಟ 'ದನುಷ' ಜೊತೆಗೆ "ತಂಗ ಮಗನ್" ವೇಲ್ ರಾಜ್ ನಿರ್ದೇಶನದಲ್ಲಿ ನಟಿಸಿದರು.

ಉಲ್ಲೇಖನಗಳು

[ಬದಲಾಯಿಸಿ]