ಸಬಲಾ ಸಂಸ್ಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಬಲಾ ಭಾರತ ದೇಶದ ಕರ್ನಾಟಕ ರಾಜ್ಯದ ಬಿಜಾಪುರ ಮೂಲದ ಎನ್‌ಜಿಒ ಆಗಿದ್ದು ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ, ರಾಜಕೀಯ ಧ್ವನಿ, ಸಾಮಾಜಿಕ ಸ್ವೀಕಾರ ಮತ್ತು ಶೈಕ್ಷಣಿಕ ಅವಕಾಶಗಳನ್ನು ಸಕ್ರಿಯಗೊಳಿಸುವ ಮೂಲಕ ಬುಡಕಟ್ಟು ಲಂಬಾಣಿ ಸೇರಿದಂತೆ "ಮಹಿಳಾ ಸಬಲೀಕರಣ" ದ ಮೇಲೆ ಪ್ರಾಥಮಿಕ ಗಮನವನ್ನು ಹೊಂದಿದೆ.

ಇತಿಹಾಸ[ಬದಲಾಯಿಸಿ]

೧೯೮೬ರಲ್ಲಿ ಮಲ್ಲಮ್ಮ ಯಾಳವಾರ ಅವರು ಸಬಲ ಸಂಸ್ಥೆಯನ್ನು ಸ್ಥಾಪಿಸಿದರು. [೧]

ಕ್ರಿಯಾ ಯೋಜನೆಗಳು[ಬದಲಾಯಿಸಿ]

ಸಬಲಾ ಕರಕುಶಲ ವಸ್ತುಗಳು[ಬದಲಾಯಿಸಿ]

ಸಬಲಾ ಕಸೂತಿ ಕೆಲಸ ಮಾಡುವ ಲಂಬಾಣಿ ಮಹಿಳೆಯರು.

ಸಾಮಾಜಿಕ ಉದ್ಯಮ, ಸಬಲಾ ಕರಕುಶಲತೆಯನ್ನು ಲಂಬಾಣಿಗಳು (ಬಂಜಾರರು) ಮತ್ತು ಇತರ ಎಲ್ಲಾ ಬಡತನದ ಅಂಚಿನಲ್ಲಿರುವ ಮಹಿಳೆಯರಿಗೆ ಆರ್ಥಿಕ ಅವಕಾಶಗಳನ್ನು ಒದಗಿಸಲು ರಚಿಸಲಾಗಿದೆ. ಸಬಲಾ ಹ್ಯಾಂಡಿಕ್ರಾಫ್ಟ್ಸ್ ಅನ್ನು ಲಿಂಕ್ಡ್ ಎಂಟರ್‌ಪ್ರೈಸ್ ಆಗಿ ಆಯೋಜಿಸಲಾಗಿದ್ದು ಕ್ರಾಫ್ಟ್ ಸೆಂಟರ್ ಮೂಲಕ ನಡೆಸಲಾಗುತ್ತಿದೆ. [೨] ಮಹಿಳೆಯರಿಗೆ ಕಸೂತಿ, ನೇಯ್ಗೆ ಮತ್ತು ಹೊಲಿಗೆ ಕಲೆಯಲ್ಲಿ ತರಬೇತಿ ನೀಡುವ ಮೂಲಕ ಕುಶಲಕರ್ಮಿಗಳಾಗುತಿದ್ದಾರೆ. ಕ್ರಾಫ್ಟ್ ಸೆಂಟರ್ ಕಾರ್ಯಾಚರಣೆಯ ಮುಖ್ಯ ಅಂಗವಾಗಿದ್ದು, ಸಬಲಾ ಕರಕುಶಲ ತಂಡವು ಪ್ರದೇಶದಾದ್ಯಂತ ಸಾಮಗ್ರಿಗಳನ್ನು ಸಾಗಿಸುದನ್ನು ಹಾಗೂ ಹೆಚ್ಚಿನ ಕೆಲಸವನ್ನು ಸ್ಥಳೀಯರ ಗ್ರಾಮಸ್ಥರಿಂದಲೇ ಮಾಡಿಸುವುದರಿಂದ ಇದು ಕುಶಲಕರ್ಮಿಗಳು ತಮ್ಮ ಉದ್ಯೋಗವನ್ನು ಉಳಿಸಿಕೊಂಡು ತಮ್ಮ ಮನೆಗಳನ್ನು ಮತ್ತು ಮಕ್ಕಳನ್ನು ನೋಡಿಕೊಳ್ಳಲು ಅನುವು ಮಾಡಿಕೊಡುತ್ತದೆ. [೩]

ಕೈ ಹೊಲಿಗೆ

ಸ್ವ-ಸಹಾಯ ಗುಂಪುಗಳು[ಬದಲಾಯಿಸಿ]

ಸಬಲ ಸಂಸ್ಥೆಯು ಈ ಪ್ರದೇಶದಲ್ಲಿ ಮಹಿಳೆಯರಿಗಾಗಿ ಹಲವಾರು ಸ್ವಸಹಾಯ ಗುಂಪುಗಳನ್ನು ಸ್ಥಾಪಿಸಿದೆ ಹಾಗೂ ಈ ಗುಂಪುಗಳು ಸಾಪ್ತಾಹಿಕ ಸಭೆಗಳ ಮೂಲಕ ಕಾರ್ಯನಿರ್ವಹಿಸುತ್ತವೆ, ಮತ್ತು ಮಹಿಳೆಯರಿಗೆ ಸಾಲವನ್ನು ತೆಗೆದುಕೊಳ್ಳಲು, ಹಣವನ್ನು ಸಂಗ್ರಹಿಸಲು ಮತ್ತು ಸಾಮಾಜಿಕ ಸಮಸ್ಯೆಗಳನ್ನು ಎದುರಿಸಲು ಅವಕಾಶ ಮಾಡಿಕೊಡುತ್ತದೆ. ಹಾಗೂ ಸಾಮಾಜಿಕ ಸಮಸ್ಯೆಗಳಾದ ಭೂಮಿಯ ಹಕ್ಕು, ಮಹಿಳೆಯ ಹಕ್ಕುಗಳು, ಬಾಲ ಕಾರ್ಮಿಕರು, ಕೌಟುಂಬಿಕ ಹಿಂಸೆ ಮತ್ತು ಬಾಲ್ಯ ವಿವಾಹಗಳ ಬಗ್ಗೆ [೪]ಚರ್ಚಿಸುವ ಮತ್ತು ಹೋರಾಟ ನಡೆಸುವ ಕೆಲಸವನ್ನು ಮಾಡುತ್ತದೆ.

ಗೀತಾಂಜಲಿ ಮಾದರಿ ಶಾಲೆ[ಬದಲಾಯಿಸಿ]

ಗೀತಾಂಜಲಿ ಮಾದರಿ ಶಾಲೆಯನ್ನು ೧೯೯೮ ರಲ್ಲಿ ಸ್ಥಾಪಿಸಲಾಗಿದ್ದು. ೧೯೯೮ ರಿಂದ ೪೦೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೀತಾಂಜಲಿ ಮಾದರಿ ಶಾಲೆಯಲ್ಲಿ ಪದವಿ ಪಡೆದಿದ್ದಾರೆ. [೫]

ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್[ಬದಲಾಯಿಸಿ]

ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್ ಮಹಿಳೆಯರಿಗಾಗಿಯೇ ಇರುವ ಬ್ಯಾಂಕ್. ೧೮ ವರ್ಷ ತುಂಬಿದ ಯಾವುದೇ ಮಹಿಳೆ ಬ್ಯಾಂಕಿನ ಸದಸ್ಯರಾಗಬಹುದು. [೬], ಬ್ಯಾಂಕ್ ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಪರವಾನಗಿ ಪಡೆದಿದ್ದು ಸುಮಾರು ೮೫೦೦ ಮಹಿಳಾ ಷೇರುದಾರರನ್ನು ಹೊಂದಿದೆ. ಇತರೆ ಬ್ಯಾಂಕುಗಳಲ್ಲಿ ಪ್ರವೇಶವನ್ನು ಹೊಂದಿರದ ಮಹಿಳೆಯರಿಗೆ ಹಣಕಾಸಿನ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಈ ಬ್ಯಾಂಕ್ ಅನ್ನು ಸ್ಥಾಪಿಸಲಾಗಿದೆ, ಮತ್ತು ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ನೀಡುವ ಉದ್ದೇಶವನ್ನು ಹೊಂದಿದೆ. ಬ್ಯಾಂಕ್ ಬಿಜಾಪುರದಲ್ಲಿ ಪ್ರಧಾನ ಕಚೇರಿಯ ಜೊತೆಗೆ ಇತರನಾಲ್ಕು ಶಾಖೆಗಳನ್ನು ಹೊಂದಿದ್ದು. ೫೦೦೦೦ ಗ್ರಾಹಕರು ಸುಮಾರು ೩೨೦ ಕೋಟಿ ವಹಿವಾಟಿಗೆ ಕೊಡುಗೆ ನೀಡುತಿದ್ದು ೨.೩ ಕೋಟಿ ಷೇರು ಬಂಡವಾಳ ಹೊಂದಿದೆ. [೭]

ಉಲ್ಲೇಖಗಳು[ಬದಲಾಯಿಸಿ]

  1. "About Us". Sabalahandicrafts.com. Archived from the original on 1 ಸೆಪ್ಟೆಂಬರ್ 2015. Retrieved 7 October 2015.
  2. "Initiatives". Sabalahandicrafts.com. Archived from the original on 1 ಸೆಪ್ಟೆಂಬರ್ 2015. Retrieved 7 October 2015.
  3. Souvenir (2006). Mahila Chaitanya. Bijapur, India. pp. 29–31.{{cite book}}: CS1 maint: location missing publisher (link)
  4. "Initiatives". Sabalahandicrafts.com. Archived from the original on 1 ಸೆಪ್ಟೆಂಬರ್ 2015. Retrieved 7 October 2015.
  5. "Geetanjali Model School, Bijapur | School | India | eListing.in". eListing.in (in ಅಮೆರಿಕನ್ ಇಂಗ್ಲಿಷ್). Retrieved 2017-06-14.
  6. Souvenir (2006). Mahila Chaitanya. Bijapur, India. pp. 29–31.{{cite book}}: CS1 maint: location missing publisher (link)
  7. "About Us". Sabala.in. Retrieved 6 October 2015.