ಸಫೇದ್ ಮಸ್ಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದು ಒಂದು ಔಷಧೀಯ ಗುಣವುಳ್ಳ ಸಸ್ಯ[೧]. ಇದು ಕಾಡಿನಲ್ಲಿ ತನ್ನಿಂದ ತಾನಾಗಿ ಬೆಳೆಯುವಂತಹ ಸಸ್ಯವಾಗಿದೆ.

ಸಫೇದ್ ಮಸ್ಲಿಯ ಗಿಡಗಳು

ಸಸ್ಯ ಪರಿಚಯ[ಬದಲಾಯಿಸಿ]

ಇದರ ವೈಜ್ಞಾನಿಕ ಹೆಸರು ಕ್ಲೊರೋಪೈಟಂ ಬೊರಿವಿಲಿಯಾನಂ. ಇದು ಲಿಲಿಯೆಸಿಯಾ ಕುಟುಂಬಕ್ಕೆ ಸೇರಿದೆ. ಇದರ ಎಲೆ ಸಪೂರವಾಗಿ,ಉದ್ದವಾಗಿರುತ್ತದೆ. ಮಳೆಗಾಲದಲ್ಲಿ ಈ ಸಸ್ಯಗಳು ಕಾಣಸಿಗುತ್ತವೆ. ಈ ಸಸ್ಯವು ಬಿಳಿ ಹೂವನ್ನು ಹೊಂದಿರುತ್ತದೆ. ಇದರ ಹೂಗಳು ಬಿಳಿಯ ಬಣ್ಣದ್ದಾಗಿರುವುದರಿಂದ ಇದನ್ನು ಸಫೇದ್ ಮಸ್ಲಿ ಎಂದು ಕರೆಯುತ್ತಾರೆ. ಇದು ಸುಮಾರು ೩೦ಸೆಂ.ಮೀ. ಇಂದ ೫೦ಸೆಂ.ಮೀ. ನಷ್ಟು ಉದ್ದ ಬೆಳೆಯುತ್ತದೆ. ೩ ರಿಂದ ೮ ತಿಂಗಳು ಇದರ ಜೀವಿತಾವಧಿ. ಸಮಾನ್ಯವಾಗಿ ಈ ಸಸ್ಯವು ಜುಲಾಯಿ ತಿಂಗಳಿನಲ್ಲಿ ಹೂ ಬಿಡುತ್ತದೆ. ಈ ಗಿಡದ ಕಾಯಿ ಬಹಳ ಸಣ್ಣದು. ಈ ಕಾಯಿಯು ಸಣ್ಣದಾದ, ಕಪ್ಪನೆಯ ಕಡಿಮೆ ಭಾರವಿರುವ ಬೀಜಗಳನ್ನು ಹೊಂದಿರುತ್ತದೆ.

ಸಸ್ಯಾಭಿವೃದ್ಧಿ[ಬದಲಾಯಿಸಿ]

ಸಸ್ಯವನ್ನು ಬೀಜ ಮತ್ತು ಕಾಂಡದಿಂದ ಪಡೆಯಬಹುದು. ಬೀಜವು ಮೊಳಕೆಯೊಡೆಯಲು ತುಂಬಾ ಸಮಯವನ್ನು ತೆಗ್ದುಕೊಳ್ಳುವುದರಿಂದ ಕಾಂಡದ ಮೂಲಕ ನಾಟಿ ಮಾಡುವುದು ಉತ್ತಮ.

ಸಫೇದ್ ಮಸ್ಲಿ
ಒಣಗಿದ ಸಫೇದ್ ಮಸ್ಲಿ

ಈ ಸಸ್ಯವು ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶದ ಕಾಡುಗಳಲ್ಲಿ ಅಧಿಕವಾಗಿ ಬೆಳೆಯುತ್ತದೆ. ಈಗ ಇದನ್ನು ವಾಣಿಜ್ಯ ಬೆಳೆಯಾಗಿ ಬೆಳೆಸಲಾಗುತ್ತದೆ. ಇತ್ತೀಚಿಗೆ ಆಂಧ್ರಪ್ರದೇಶ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಇದನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಾರೆ. ಔಷಧೀಯ ಸಸ್ಯವಾಗಿರುವುದರಿಂದ ಆಂತರಿಕ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದಕ್ಕೆ ಅಪಾರವಾದ ಬೇಡಿಕೆ ಇದೆ. ಆದರೆ ಬೇಡಿಕೆಗೆ ತಕ್ಕ ಉತ್ಪಾದನೆಯು ನಮ್ಮ ದೇಶದಲ್ಲಿ ನಡೆಯುತ್ತಿಲ್ಲ.

ಮಣ್ಣು ಮತ್ತು ಹವಾಗುಣ[ಬದಲಾಯಿಸಿ]

ಮಸ್ಲಿಯ ಬೆಳೆಗೆ ಸಾವಯವಗಳಿಂದ ಕೂಡಿದ ಮೆದು ಜೇಡಿಮಣ್ಣು ಉತ್ತಮ. ಬೆಳವಣಿಗೆಯ ಸಮಯದಲ್ಲಿ ಉತ್ತಮ ತೇವಾಂಶವಿರುವ ಬಿಸಿಲು ಬೀಳುವ ಪ್ರದೇಶ ಉತ್ತಮ. ನೀರು ಇಂಗಿ ಹೋಗುವ ಮಣ್ಣು ಕೂಡ ಉತ್ತಮ.

ಉಪಯೋಗ[ಬದಲಾಯಿಸಿ]

ಇದರ ಗಡ್ಡೆಯು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಇದರಲ್ಲಿ ಉದ್ದೀಪನಂಶ, ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಸತ್ವವು ಹೆರಳವಾಗಿದೆ.

ಇದನ್ನು ವಾತ, ಪಿತ್ತ, ರಕ್ತ ಶುದ್ಧೀಕರಣದಲ್ಲಿ ಬಳಸುತ್ತಾರೆ. ಸಕ್ಕರೆ ಕಾಯಿಲೆ, ನಪುಂಸಕತ್ವ, ನಿಶ್ಯಕ್ತಿ ಮುಂತಾದ ಸಮಸ್ಯೆಗಳಿಗೆ ಪರಿಹಾರ ಕೊಡಬಲ್ಲದು.

ಉಲ್ಲೇಖ[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2016-03-09. Retrieved 2016-03-12.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

http://www.ayurvediccommunity.com/AmaraKannada.asp http://kanaja.in/ Archived 2013-04-12 ವೇಬ್ಯಾಕ್ ಮೆಷಿನ್ ನಲ್ಲಿ.