ಸದಸ್ಯ:Yeshwanth S A/sandbox
ಎಡ್ವರ್ಡ್ ಚೇಂಬರ್ಲಿನ್ | |
---|---|
ಜನನ | ೧೮ ಮೇ ೧೮೯೯ |
ಮರಣ | 16 July 1967 | (aged 68)
ರಾಷ್ಟ್ರೀಯತೆ | ಅಮೆರಿಕನ್ |
ಎಡ್ವರ್ಡ್ ಚೇಂಬರ್ಲಿನ್
ಬಾಲ್ಯ
[ಬದಲಾಯಿಸಿ]ಎಡ್ವರ್ಡ್ ಚೇಂಬರ್ಲಿನ್ ನವರು ಮೇ-೧೮-೧೮೯೯ರಂದು ಲಾ ಕಾರ್ನರ್ ವಾಶಿಂಗಟನ್ ನಲ್ಲಿ ಜನಿಸಿದರು.ಅವರ ಪೂರ್ತಿ ಹೆಸರು ಎಡ್ವರ್ಡ್ ಹೇಸ್ಟಿಂಗ್ಸ್ ಚೇಂಬರ್ಲಿನ್.[೧]
ಜೀವನ
[ಬದಲಾಯಿಸಿ]೧೯೩೩ನೆ ಎಸವಿಯು ಆರ್ಥಿಕ ಸಿದ್ದಂತಗಳ ಬೆಳವಣಿಗೆಯ ದೃಷ್ಟಿಯಿಂದ ಬಹುಮಹತ್ವಪೂರ್ಣವಾಗಿದೆ. ಆ ವರ್ಷ ಜೋನ್ ರಾಬಿನ್ಸನ್ ಅವಳ ಅರ್ಥಶಾಸ್ತ್ರದ ಪುಸ್ತಕದ ಗ್ರಂತವು ಹೊರಬಂದು ಆರ್ಥಿಕ ಸಿದ್ಧಾಂತಗಳಿಗೆ ಹೊಸ ತಿರುವು ಕೊಟ್ಟಿತು. ಅದೇ ವರ್ಷ ಅಮೇರಿಕದ ಅರ್ಥಶಾಸ್ತ್ರಜ್ಞನೊಬ್ಬನು ಎನ್ನೋಂದು ಹೊಸ ಸಿದ್ಧಾಂತವನ್ನು ಪ್ರತಿಪಾದಿಸಿದನು. ಆಶ್ಚರ್ಯದ ಸಂಗತಿಯೆಂದರೆ ಜೋನ್ ರಾಬಿನ್ಸನ್ ಅವಳ ಸಿದ್ಧಾಂತ ಮತ್ತು ಅಮೇರಿಕದ ಅರ್ಥಶಾಸ್ತ್ರಜ್ಞ ಪ್ರತಿಪಾದಿಸಿದ ಸಿದ್ಧಾಂತ ಎವೆರಡರಲ್ಲಿ ನೂರಕ್ಕೆ ನೂರರಷ್ಟು ಸಾಮ್ಯವಿದೆ. ಅಮೇರಿಕದ ಈ ಅರ್ಥಶಾಸ್ತ್ರಜ್ಞನ ಹೆಸರು ಎಡ್ವರ್ಡ್ ಹೇಸ್ಟಿಂಗ್ಸ್ ಚೇಂಬರ್ಲಿನ್. ಅನೇಕ ರೀತಿಯಲ್ಲಿ ಚೇಂಬರ್ಲಿನ್ ನ ಸಿದ್ಧಂತವು ಜೋನ್ ರಾಬಿನ್ಸ್ ಳ ಸಿದ್ಧಾಂತಕ್ಕಿಂತ ಉನ್ನತ ಮಟ್ಟದ್ದಾಗಿದೆ.[೨] ಜೀವನ ಪರಿಚಯ: ಚೇಂಬರ್ಲಿನ್ನನ ಜನ್ಮವು ಬಡ ಕುಟುಂಬವೊಂದರಲ್ಲಾಯಿತು. ಚೇಂಬರ್ಲಿನ್ ಕಿರುವಯಸ್ಸಿನವನಿದ್ದಗಲೆ ಆತನ ತಂದೆ ಮರಣ ಹೊಂದಿದರು. ಎದರಿಂದಾಗಿ ಚೇಂಬರ್ಲಿನ್ ಎಳೆವಯಸ್ಸಿನಿಂದಲೇ ತುಂಬ ಕಷ್ಟಪಡಬೇಕಾಯಿತು. ಶಿಕ್ಷಣದ ಜೊತೆಗೆ ದುಡಿಮೆ ಮಾಡತೊಡಗಿದ. ಎದರ ಜೊತೆಗೆ ಕ್ರೀಡೆಯೆಂದರೆ ಅವನಿಗೆ ಬಹಳ ಆಸಕ್ತಿ. ಅವನ ಶಿಕ್ಷಣ ಮಿಚಿಗನ್ ಮತ್ತು ಹಾರ್ವರ್ಡ್ ವಿಶ್ವವಿದ್ಯಾನಿಲಯಗಳಲ್ಲಾಯಿತು. ೧೯೯೨ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಅವನಿಗೆ ಅಲೆನ್ ಯಂಗ್ ಎಂಬ ಕಶಾಗ್ರ ಬುದ್ಧಿಯ ಗುರುವಿನಡಿ ಕೆಲಸ ಮಾಡುವ ಸುವರ್ಣಾವಕಶ ಲಭಿಸಿತು. ೧೯೨೭ರಲ್ಲಿ ಅವನಿಗೆ ಡಾಕ್ಟೋರೇಟ್ ಪದವಿ ದೊರಕಿತು. ೧೯೩೩ರಲ್ಲಿ ಅವನ ಮೇರುಕೃತಿಯಾದ "ತಿಯರಿ ಆಫ್ ಮೊನೊ ಪೊಲಿಸ್ಟಿಕ್ ಕಾಂಪಿಟೇಶನ್" ಪ್ರಕಟವಾಯಿತು. ೧೯೫೧ರಲ್ಲಿ ಅವನು ಡೇವಿಡ್ ನೆಲ್ಸ್ ರಾಜಕೀಯ ಅರ್ಥಶಾಸ್ತ್ರದ ಪೀಟವನ್ನು ಅಲಂಕರಿಸಿದ. ತನ್ನ ಮರಣದವರೆಗೆ (೧೯೬೭) ಅವನು ಈ ಹುದ್ದೆಯಲ್ಲಿದ್ದ.
ಆರ್ಥಿಕ ವಿಚಾರಗಳು
[ಬದಲಾಯಿಸಿ]ಏಕಸ್ವಾಮ್ಯಯುತ ಪೈಪೋಟ : ಪೈಪೋಟ ಮತ್ತು ಏಕಸ್ವಾಮ್ಯ ಎವೆರಡೂ ಮಾರುಕಟ್ಟೆಗಳು ಉತ್ತರ ದಕ್ಷಿಣ ಧ್ರುವಗಳಾಗಿವೆ. ಒಂದು ಎದ್ದಲ್ಲಿ ಎನ್ನೋಂದು ಎರಲಾರದು ಎಂದು ಮೊದಲಿನಿಂದಲೂ ಅರ್ಥಶಾಸ್ತ್ರಜ್ಞರು ನಂಬಿದ್ದರು. ಬಣ್ಣಗಳ ಉದಾಹರಣೆಯಿಂದ ಹೇಳುವುದಾದರೆ ಕಪ್ಪು ಮತ್ತು ಬಿಳುಪು ಎವೆರಡೇ ಬಣ್ಣಗಳಿದ್ದವು. ಎವೆರಡು ಬಣ್ಣಗಳ ಮಿಶ್ರಣವಾದ ಬೂದಿ ಬಣ್ಣ, ಸ್ವಲ್ಪ ತಿಳಿ ಕಪ್ಪು, ಸ್ವಲ್ಪ ಮಬ್ಬು ಬಿಳಿ ಬಣ್ಣಗಳೂ ಇರುತ್ತವೆಯಷ್ಟೆ. ಅದೇ ಪ್ರಕಾರ ಮಾರುಕಟ್ಟೆಗಳಲ್ಲಿ ಪೈಪೋಟಿ ಮತ್ತು ಏಕಸ್ವಾಮ್ಯಗಳ ಮೆಶ್ರಣವಾದ ಮಾರುಕಟ್ಟೆಗಳೂ ಇರಬಹುದು ಎಂಬುದಾಗಿ ಚೇಂಬರ್ಲಿನ್ ಶಂಕಿಸುತ್ತಾನೆ. ಇದೇ ರೀತಿ ಜೋನ್ ರಾಬಿನ್ಸನ್ ಕೂಡ ಶಂಕಿಸಿದಳು. ಚೇಂಬರ್ಲಿನ್ನನು ನಾವಿರುವ ಜಗತ್ತಿನಲ್ಲಿನ ಮಾರುಕಟ್ಟೆಗಳಲ್ಲಿ ಪೈಪೋಟ ಮತ್ತು ಏಕಸ್ವಾಮ್ಯದ ಒಂದು ರಾಸಾಯನಿಕ ಸಂಯುಕ್ತತೆ ಕಂಡುಬರುತ್ತದೆ ಎಂದು ಹೇಳಿದನು. ಪೈಪೋಟಿ ಮತ್ತು ಏಕಸ್ವಾಮ್ಯಗಳು ಹಾಲು-ನೀರಿನಂತೆ ಬೆರೆತಿವೆ ಎಂಬುದಾಗಿ ಚೇಂಬರ್ಲಿನ್ ವಾದಿಸುತ್ತಾನೆ. ಈ ವೆಚಾರದಿಂದಾಗಿ ಅದುವರೆಗೆ ಆರ್ಥಿಕ ಸಿದ್ಧಾಂತಗಳಲ್ಲಿ ಮನೆಮಾಡಿಕೊಂಡಿದ್ದ ಅಸಮಧಾನ ಒಮ್ಮೆಲೇ ಹೊರಚಿಮ್ಮಿತು. ಏಕಸ್ವಾಮ್ಯಯುತ ಪೈಪೋಟಿಯುಳ್ಳ ಮಾರುಕಟ್ಟೆಯ ವೈಶಿಷ್ಟ್ಯವೇನೆಂದರೆ ವಸ್ತುಗಳ ವೈವಿಧ್ಯತೆ. ಈ ಮಾರುಕಟ್ಟೆಯಲ್ಲಿ ಅನೇಕ ಉತ್ಪಾದಕರಿದ್ದು , ಪ್ರತಿಯೊಬ್ಬ ಉತ್ಪಾದಕನು ತನ್ನ ಸರಕು ಇತರ ಉತ್ಪಾದಕರ ಸರಕುಗಳಿಗಿಂತ ಉತ್ತಮವಾದದ್ದು ಎಂಬ ಅಂಶವನ್ನು ಗ್ರಾಹಕರ ಮನಸ್ಸಿನ ಮೇಲೆ ಮುದ್ರೆಯೊತ್ತಲು ಪ್ರಯತ್ನಿಸುವನು. ಉತ್ಪಾದಕರ ಈ ಬಗೆಯ ಕೈಚಳಕವನ್ನು ಚೀಂಬರ್ಲಿನ್ ವಸ್ತುವೈವೆಧ್ಯ ಮಾಡುವ ಕ್ರಿಯೆ ಎಂದು ಕರೆಯುತ್ತಾನೆ. ವಿವೆಧ ಸರಕುಗಳಲ್ಲಿ ವ್ಯತ್ಯಾಸಗಳು ನಿಜವಾಗಿಯೂ ಇರಬಹುದು ಅಥವ ಅದೊಂದು ವಂಚನೆಯ ಕ್ರಿಯೆಯಾಗಿರಬಹುದು. ಆದರೆ ತನ್ನ ಸರಕು ಇತರರಿಗಿಂತ ಉತ್ತಮವಾದುದು ಎಂಬುದನ್ನು ಪ್ರಚುರಪಡಿಸಲು ಪ್ರತಿಯೊಬ್ಬ ಉತ್ಪಾದಕ ಪ್ರಯತ್ನಿಸುತ್ತಾನೆ. ಸರಕುನಳಲ್ಲಿನ ಈ ರೀತಿಯ ವ್ಯತ್ಯಾಸಗಳಿಂದ ಉತ್ಪಾದಕರು ತಮ್ಮ ಪ್ರತಿಸ್ಪರ್ಧಿಗಳೊಂದಿಗೆ ಬೆಲೆಯಲ್ಲಿ ಪೈಪೋಟಿ ಮಾಡದೆ ವಸ್ತುವಿನ ಗುಣದಲ್ಲಿ, ಆಕಾರದಲ್ಲಿ, ಬಣ್ಣದಲ್ಲಿ, ಗಾತ್ರದಲ್ಲಿ ಪೈಪೋಟಿ ನಡೆಸುತ್ತಾರೆ. ಈ ಪ್ರಯತ್ನದ ಉದ್ದೇಶವೆಂದರೆ ಉತ್ಪಾದಕ ತನ್ನ ಸರಕಿಗೆ ಕೆಲವು ಗ್ರಾಹಕರನ್ನು ಒಲಿಸಿಕೊಳ್ಳುವುದು. ಆಗ ಅವನಿಗೆ ತನ್ನ ಸರಕಿನ ಬೆಲೆಯ ಮೇಲೆ ಹೆಚ್ಚಿನ ನೆಯಂತ್ರಣ ಬರುತ್ತದೆ. ಒಂದುವೇಳೆ ಅವನು ತನ್ನ ಸರಕಿನ ಬೆಲೆಯನ್ನು ಸ್ವಲ್ಪ ಏರಿಸಿದರೂ ಕೆಲವು ನಿಷ್ಠಾವಂತ ಗ್ರಾಹಕರು ಅದೇವಸ್ತುವನ್ನು ಕೊಂಡುಕೊಳ್ಳುತ್ತಾರೆ. ಆದುದರಿಂದಲೇ ಏಕಸ್ವಮ್ಯಾಯುತ ಪೈಪೋಟಿಯ ಮಾರುಕಟ್ಟೆಯಲ್ಲಿ ಪ್ರತಿಯೊಂದು ಉದ್ಯಮವು ವಸ್ತುವಿನ ಪೂರೈಕೆ ಅಥವಾ ಬೆಲೆಯ ಮೇಲೆ ಒಂದು ರೀತಿಯ ಏಕಸಾಮ್ಯವನ್ನು ಪಡೆಯಲು ಅವಕಾಶವಾಗುತ್ತದೆ. ಈ ವಿಧವಾದ ಏಕಸ್ವಾಮ್ಯವನ್ನು ಪಡೆದ ಉದ್ಯಮಗಳು ಪರಸ್ಪರ ಪೈಪೋಟಿ ನಡೆಸುವುದರಿಂದ ಆ ಮಾರುಕಟ್ಟೆಗೆ "ಏಕಸ್ವಾಮ್ಯಯುತ ಪೈಪೋಟಿ" ಎಂಬ ಹೆಸರು ಪ್ರಾಪ್ತವಾಗಿದೆ. ಇಂತಹ ಒಂದು ಉದ್ಯಮವು ತನ್ನ ವಸ್ತುವಿನ ಬೆಲೆಯನ್ನು ಸ್ವಲ್ಪ ಏರಿಸಿದರೆ, ಅದು ಕೆಲವು ಗ್ರಾಹಕರನ್ನು ಮಾತ್ರ ಕಳೆದುಕೊಳ್ಳಬಹುದು. ಇದೇ ರೀತಿ ಬೆಲೆಯನ್ನು ಸ್ವಲ್ಪ ಇಳಿಸಿದರೆ ಅದು ಕೆಲವೇ ಗ್ರಾಹಕರನ್ನು ಹೊಸದಾಗಿ ಆಕರ್ಷಿಸಬಹುದು. ಆದುದರಿಂದಲೇ ಏಕಸ್ವಾಮ್ಯಯುತ ಪೈಪೋಟಿಯ ಮಾರುಕಟ್ಟೆಯಲ್ಲಿ ಬೇಡಿಕೆಯ ರೇಖೆಯ ಪ್ರಾರಂಭದಿಂದ ಕೊನೆಯವರೆಗೂ ಎಡದಿಂದ ಬಲಕ್ಕೆ ಇಳಿ ಮುಕವಾಗಿರುತ್ತದೆ. ಆದರೆ ಉದ್ಯಮವು ವಸ್ತುಗಳನ್ನು ಅಧಿಕ ಪ್ರಮಾಣದಲ್ಲಿ ಮಾರಾಟ ಮಾಡಬೇಕಾದರೆ ಬೆಲೆಯನ್ನು ಸ್ವಲ್ಪ ಇಳಿಸಬೇಕು ಎನ್ನುತ್ತಾರೆ ಚೇಂಬರ್ಲಿನ್. ಏಕಸ್ವಾಮ್ಯಯುತ ಪೈಪೋಟಿಯುಳ್ಳ ಮಾರುಕಟ್ಟೆಯಲ್ಲಿ ವಸ್ತುವಿನ ಬೆಲೆಗಳು ಪರಿಪೂರ್ಣ ಪೈಪೋಟಿಯುಳ್ಳ ಮಾರುಕಟ್ಟೆಗಿಂತ ಸ್ವಲ್ಪ ಹೆಚ್ಚಾಗಿರುತ್ತವೆ. ಅಲ್ಲದೆ ಉತ್ಪಾದನೆಯು ಕೂಡ ಆದರ್ಶ ಮಟ್ಟಕ್ಕಿಂತ ಕಡಿಮೆಯಾಗಿರುವುದು. ಇದರಿಂದ ಪ್ರತಿಯೊಂದು ಉದ್ಯಮ ಸಂಸ್ಥೆಯಲ್ಲಿ ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯ ನೆರ್ಮಾಣವಾಗುವುದು ಎಂದು ಹೇಳುತ್ತಾರೆ ಚೇಂಬರ್ಲಿನ್. ಹೆಚ್ಚುವ ಉತ್ಪಾದನಾ ಸಾಮರ್ಥ್ಯವೆಂದರೆ ಆದರ್ಶ ಮಟ್ಟದ ಉತ್ಪಾದನೆಗಿಂತ ಕಡಿಮೆ ಉತ್ಪಾದನೆ ಮಾಡುವುದು. ಚೇಂಬರ್ಲಿನ್ ಅವರು ಇಂತಹ ಕ್ರಿಯೆಯಿಂದ ಸಾಮಾಜಿಕ ಅಪವ್ಯಯ ಆಗುತ್ತದೆ ಎಂದು ಹೇಳುತ್ತಾನೆ. ವ್ಯರ್ಥ ಅಥವಾ ಅನವಶ್ಯಕ ಹೆಚ್ಚುವರಿ ಸಾಮರ್ಥ್ಯ ಉದ್ಭವಿಸುವುದಕ್ಕೆ ಪ್ರಮುಖ ಕಾರಣವೆಂದರೆ ಅನುಭೋಗಿಗಳು ವೈವಿಧ್ಯವನ್ನು ಬಯಸುತ್ತಾರೆ. ಇದರಿಂದ ಪ್ರತಿಯೊಬ್ಬ ಉತ್ಪಾದಕನ ಸರಕಿಗೆ ಸಾಕಷ್ಟು ಬೇಡಿಕೆ ಬರುವುದಿಲ್ಲ. ಆದುದರಿಂದ ಅವನು ಹೂಡಿದ ಯಂತ್ರೋಪಕರಣಗಳ ಪೋರ್ಣ ಉಪಯೋಗವಾಗಲಾರದು. ಈ ಸಂಗತಿಯನ್ನು ಚೇಂಬರ್ಲಿನ್ ಅವರು ಹೆಚ್ಚುವರಿ ಸಾಮರ್ಥ್ಯವು ಸಾಮಾಜಿಕ ಅಪವ್ಯಯವಾಗಿದೆ ಎಂದು ಹೇಳಿರುವುದು ಸರಿ ಎನಿಸುತ್ತದೆ.
ಜಾಹಿರಾತು
[ಬದಲಾಯಿಸಿ]ಇಂದಿನ ಯುಗ ಜಾಹಿರಾತಿನ ಯುಗ. ಪ್ರತಿಯೊಬ್ಬನೂ ಖ್ಯಾತಿಗಾಗಿ ಹಾತೊರೆಯುವುದರಿಂದ ಜಾಹೀರಾತಿನ ಯುದ್ಧವು ಏಕಸ್ವಾಮ್ಯಯುತೆ ಪೈಪೋಟಿ ಮಾರುಕಟ್ಟೆಯ ಅವಿಭಾಜ್ಯ ಅಂಗವಗಿದೆ. ವಸ್ತುವಿನಲ್ಲಿ ವೈವಿಧ್ಯ ಮೂಡಿದ ತಕ್ಷಣ ತನ್ನ ವಸ್ತುವು ಇತರರಿಗಿಂತ ಹೇಗೆ ವೈಶಿಷ್ಟ್ಯಮಯವಾಗಿದೆ, ಹೇಗೆ ಶ್ರೇಷ್ಠವಾಗಿದೆ ಎಂದು ಬಹಿರಂಗಪಡಿಸಲು ಉತ್ಪಾದಕ ಜಾಹೀರಾತು ಮಾಡಬೇಕಾಗುತ್ತದೆ. ಹೀಗೆ ವಸ್ತುವಿನ ವೈವಿದ್ಯ ಮತ್ತು ಜಾಹೀರಾತು ಏಕಸ್ವಾಮ್ಯಯುತ ಪೈಪೋಟಿ ಮಾರುಕಟ್ಟೆಯ ಪ್ರಧಾನ ಲಕ್ಷಣಗಳಾಗಿವೆ. ಜಾಹೀರಾತು ಬಹುವೆಚ್ಚದ್ದಾಗಿದೆ. ಚೇಂಬರ್ಲಿನ್ ಅವರು ಮೊದಲು ಬಾರಿಗೆ ಅರ್ಥಶಾಸ್ತ್ರದಲ್ಲಿ ಜಾಹೀರಾತಿನ ಬಗ್ಗೆ ವಿಶ್ಲೇಷಣೆ ಮಾಡಿದ ವ್ಯಕ್ತಿಯಾಗಿದ್ದಾರೆ. ಜಾಹೀರಾತಿನ ವೆಚ್ಚ್ವನ್ನು " ಮಾರಟದ ವೆಚ್ಚಗಳು " ಎಂದು ಕರೆಯುತ್ತಾರೆ.