ಸದಸ್ಯ:Yashaswini.r1910276

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Christ University Bangalore

ನನ್ನ ಜೀವನ[ಬದಲಾಯಿಸಿ]

ನನ್ನ ಹೆಸರು ಯಶಸ್ವಿನಿ ನಾನು ಜನಿಸಿದ್ದು ಕರ್ನಾಟಕಬೆಂಗಳೂರಿನಲ್ಲಿ , ನಾನು ಭೂಮಿಗೆ ಬಂದಿದ್ದು 11.8 2000 ಇಸವಿಯಲ್ಲಿ , ನನ್ನ ತಂದೆಯ ಹೆಸರು ಆರಾಧ್ಯ .ನನ್ನ ತಾಯಿಯ ಹೆಸರು ವನಿತ . ನಾನು ಮೊದಲಿಗೆ ನರ್ಸರಿಯನ್ನು ಓದಿದ್ದು ಪಿಎಂಎಸ್ ಸ್ಕೂಲಿನಲ್ಲಿ. ನಾನು ಬಾಲ್ಯತನ ದಲ್ಲಿ ಸ್ಕೂಲಿಗೆ ಹೋಗಲು ಬಹಳ ಹೆದರುತ್ತಿದ್ದೆ. ನನ್ನ ಅಮ್ಮ ಬಲವಂತವಾಗಿ ನನ್ನನ್ನು ಸ್ಕೂಲಿಗೆ ಬಿಟ್ಟು ಬರುತ್ತಿದ್ದರು. ಅನಂತರ ನಾನು ಸ್ಕೂಲಿನಲ್ಲಿ ಅನೇಕರನ್ನು ಫ್ರೆಂಡ್ಸ್ ಆಗಿ ಮಾಡಿಕೊಂಡು ಅವರ ಜೊತೆ ಆಟವಾಡುತ್ತಾ ಮನೆಯನ್ನು ಮರೆತನು. ನಂತರ ನನಗೆ ಸ್ಕೂಲಿಗೆ ಹೋಗುವುದು ತುಂಬಾ ಇಷ್ಟವಾಯಿತು.

ಶಾಲೆಯ ದಿನಗಳು[ಬದಲಾಯಿಸಿ]

ನಾನು ಶಿಕ್ಷಣ ಪಡೆದಿದ್ದು ಚಿನ್ಮಯ ವಿದ್ಯಾಲಯದಲ್ಲಿ. ನಮ್ಮ ಶಾಲೆಯಲ್ಲಿ ಉತ್ತಮ ಶಿಕ್ಷಣ,ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬದುಕಲು ಒಳ್ಳೆ ಸಂಸ್ಕೃತಿಯನ್ನು ಆಚಾರ-ವಿಚಾರಗಳನ್ನು ಬಹಳ ಚೆನ್ನಾಗಿ ಹೇಳಿಕೊಡುತ್ತಾರೆ. ನಮ್ಮ ಶಾಲೆಯ ಮುಖ್ಯ ಸ್ವಾಮೀಜಿ ಶ್ಲೋಕಗಳು ಭಗವದ್ಗೀತೆಯ ಪ್ರವಚನವನ್ನು ಬೋಧಿಸುತ್ತಿದ್ದರು. ನಾನು ಆರನೇ ತರಗತಿಯಲ್ಲಿ ಇದ್ದಾಗ ವಿಜ್ಞಾನ ವಿಭಾಗದಲ್ಲಿ ಭಾರತದಲ್ಲೇ 5ನೇ ಶ್ರೇಣಿಯ ಪದಕವನ್ನು ಪಡೆದಿದ್ದೆ. ನಾನು ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಅಲ್ಲಿನ ಆಟ-ಪಾಠಗಳು, ಶಿಕ್ಷಕರ ಶಿಕ್ಷಣ ಹಾಗೂ ಅವರ ಬುದ್ಧಿವಾದ, ಮತ್ತು ಸ್ನೇಹಿತರ ಒಡನಾಟವನ್ನು ಎಂದಿಗೂ ಮರೆಯಲಾಗದ ಮಧುರ ಅನುಭವ. ನಂತರ 10ನೇ ತರಗತಿ ಮುಗಿಸಿದ ನಂತರ ಶಾಲೆಯಿಂದ ಹೊರಗೆ ಬಂದಾಗ ನನ್ನ ಜೀವನದಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಂಡೆನು. ಆ ಬಾಲ್ಯತನದ ತುಂಟಾಟ, ಸ್ನೇಹಿತರ ಪ್ರೀತಿ ,ಗುರುಗಳ ಮಾರ್ಗದರ್ಶನವನ್ನು ಕಳೆದುಕೊಂಡನು. ಅನ್ನುವ ಬೇಸರ ಬಹಳ ದಿನಗಳು ನನ್ನನ್ನು ಕಾಡಿತು .ಶಾಲಾದಿನಗಳ ನಂತರದಲ್ಲಿ ಹೊರಗಿನ ಜಗತ್ತಿನ ಅನುಭವದಲ್ಲಿ ಬಹಳಷ್ಟು ಸ್ಪರ್ಧೆಗಳು ಒಬ್ಬರ ಮೇಲೆ ಒಬ್ಬರು ಸ್ಪರ್ಧೆ ಮಾಡುವುದನ್ನು , ಅಸೂಯೆ ಪಡುವುದನ್ನು ನೋಡಿದೆನು .ಈ ಬಣ್ಣದ ಪ್ರಪಂಚದಲ್ಲಿ ನಾವು ಒಳ್ಳೆಯ ವ್ಯಕ್ತಿಯಾಗಿ ಬದುಕುವುದು ಅಷ್ಟು ಸುಲಭದ ಮಾತಲ್ಲ. ಹೆಜ್ಜೆ ಹೆಜ್ಜೆಗೂ ಬಹಳಷ್ಟು ಪರೀಕ್ಷೆಗಳು, ಸಮಸ್ಯೆಗಳು, ವಿರೋಧಗಳು ಎದುರಾಗುತ್ತದೆ.

ಕಾಲೇಜ್ ಲೈಫ್[ಬದಲಾಯಿಸಿ]

ನಾನು ಶಾಲೆಯ ದಿನಗಳನ್ನು ಮುಗಿಸಿದ ನಂತರ ಜ್ಯೋತಿ ನಿವಾಸ್ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದು ವ್ಯಾಸಂಗವನ್ನು ಮಾಡಿದೆ. ಅಲ್ಲಿ ನನ್ನ ಮೊದಲನೇ ದಿನವೇ ನನಗೆ ಬಹಳ ಕಹಿಯ ಅನುಭವವಾಯಿತು. ಅಲ್ಲಿ ಯಾರೋ ಒಬ್ಬರು ಸ್ನೇಹಿತರು ಸಿಗಲಿಲ್ಲ .ಮೊದಲನೇ ದಿನ ಬಹಳ ಒಂಟಿತನದ ಅನುಭವ ಆಯ್ತು. ಅನಂತರದಲ್ಲಿ ಅಲ್ಲಿನ ಶಿಕ್ಷಕರು ನನಗೆ ಬಹಳ ಧೈರ್ಯ ತುಂಬಿ ಪ್ರೀತಿ ಮತ್ತು ಪಾಲನೆಯನ್ನು ಕೊಟ್ಟು ಭರವಸೆಯಿಂದ ಬದುಕುವುದನ್ನು ಕಲಿಸಿದರು. ನಿಧಾನವಾಗಿ ಎಲ್ಲರ ಜೊತೆ ಸಹಜವಾಗಿ ಬೇರೆತೇನು. ನಂತರ ಎಲ್ಲರೂ ನನ್ನ ಸ್ನೇಹಿತರಾದರು. ಮನಸ್ಸಿದ್ದರೆ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಅನ್ನುವ ಪಾಠವನ್ನು ಕಲಿತೆನು. ನಂತರ ಕಾಲೇಜಿನಲ್ಲಿ ಬೆಸ್ಟ್ಅಕೌಂಟೆಂಟ್ ಎಂಬ ಸ್ಪರ್ಧೆಯಲ್ಲಿ ಎರಡನೇ ಸ್ಥಾನವನ್ನು ಪಡೆದನು. ಇದು ನನ್ನ ವಿದ್ಯಾರ್ಥಿ ಜೀವನದಲ್ಲಿ ಬಹಳ ಖುಷಿ ತಂದ ದಿನ. ನಾನು ಮೊಟ್ಟಮೊದಲ ಬಾರಿಗೆ ಕಾಲೇಜು ಮೆಟ್ಟಲು ಏರಿದ ಮೇಲೆ ಸಾಧಿಸಿದ ಮೊದಲ ಸಾಧನೆ. ನಾನು ದ್ವಿತೀಯ ಪಿಯುಸಿಯಲ್ಲಿ ವಾರ್ತಾ ವರದಿಗಾರಿಯಾಗಿ ಕೆಲಸ ಮಾಡಿದೆನು. ನಾನು ಬಹಳಷ್ಟು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೆ. ಅವುಗಳಲ್ಲಿ ಮುಖ್ಯವಾಗಿ ನಾಟಕ ,ಕ್ರಿಸ್ಮಸ್ ನಲ್ಲಿ ಹಾಡುವ ಸ್ಪರ್ಧೆ, ಕಾಮರ್ಸ್ ಮತ್ತು ಅನೇಕ ಕ್ರೀಡೆಗಳಲ್ಲಿ ಭಾಗವಹಿಸಿದೆ. ನಮ್ಮ ಜೀವನದಲ್ಲಿ ಸ್ನೇಹಿತರು ಮುಖ್ಯ ಪಾತ್ರವನ್ನು ವಹಿಸುತ್ತಾರೆ ಈ ಸಮಾಜದಲ್ಲಿ ನಾವು ಒಳ್ಳೆಯ ವ್ಯಕ್ತಿಯಾಗಿ ಬದುಕಬೇಕು ಅಂದರೆ ನಾವು ಸೇರುವ ಸಂಗ ಬಹಳ ಚೆನ್ನಾಗಿರಬೇಕು. ನಾನು ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಲು ನನ್ನ ಸ್ನೇಹಿತೆ ಕೀರ್ತನ ಬಹಳ ಪ್ರೋತ್ಸಾಹ ನೀಡಿದಳು. ನನ್ನ ಒಳಗಡೆ ಮರೆಯಾಗಿರುವ ಕಲೆಯನ್ನು ನನ್ನ ಸ್ನೇಹಿತೆ ಗುರುತಿಸಿ ಅದನ್ನು ಇನ್ನಷ್ಟು ಮುಂದುವರಿಸಲು ಬಹಳ ಸಹಯೋಗ ಕೊಟ್ಟಳು. ನಮ್ಮ ಮನೆ ಒಂದು ಕೂಡುಕುಟುಂಬ ಆಗಿದೆ. ಅದರಲ್ಲಿ ನಮ್ಮ ಅಜ್ಜಿ ,ತಾತ ,ಚಿಕ್ಕಪ್ಪ, ಚಿಕ್ಕಮ್ಮ ,ತಂಗಿ ,ಅಪ್ಪ - ಅಮ್ಮ ಎಲ್ಲ ಒಟ್ಟಿಗೆ ಇದ್ದೇವೆ. ನಾವೆಲ್ಲರೂ ಪರಸ್ಪರ ಒಬ್ಬರಿಗೊಬ್ಬರು ಬಹಳ ಸಹಯೋಗಿ ಆಗಿ ಆತ್ಮೀಯವಾಗಿ ಇದ್ದೇವೆ. ಎಂತಹುದೇ ಪರಿಸ್ಥಿತಿ ಬಂದರೂ ಹಣಕಾಸಿನ ಪರಿಸ್ಥಿತಿ ಬಂದರೂ ಎಲ್ಲರೂ ಒಟ್ಟಿಗೆ ಸೇರಿ ನಿಭಾಯಿಸುತ್ತೇವೆ. ನಮ್ಮ ಮನೆಯಲ್ಲಿ ನಮ್ಮಜ್ಜಿ ತಾತ ಹಿರಿಯರು. ಅವರು ನಮಗೆ ಪ್ರತಿನಿತ್ಯ ಒಳ್ಳೊಳ್ಳೆ ಕಥೆಗಳನ್ನು ಹೇಳುತ್ತಾರೆ. ನಮ್ಮ ಅಜ್ಜಿ ಪ್ರತಿನಿತ್ಯ ನನಗೆ ತಿಂಡಿ ಮಾಡಿಕೊಡುತ್ತಾರೆ. ಹಾಗೂ ನಾನು ನನ್ನ ತಾತನ ಜೊತೆ ದಿನ ದೇವಸ್ಥಾನಕ್ಕೆ ಹೋಗುತ್ತೇನೆ. ನನ್ನ ಅಜ್ಜಿ ತಾತ ನನಗೆ ಒಳ್ಳೆ ಫ್ರೆಂಡ್ಸ್ನಾ ಆಗಿದ್ದಾರೆ. ನಾನು ಕಾಲೇಜಿನ ರಜಾದಿನಗಳಲ್ಲಿ ನನ್ನ ಹವ್ಯಾಸಗಳು ಕವನಗಳನ್ನು ಬರೆಯುವುದು, ಜನರಲ್ಲಿ ಸ್ಪೂರ್ತಿ ತರಿಸುವ ಲೇಖನಗಳನ್ನು ಬರೆಯುವುದು ಮಾಡುತ್ತಿದ್ದೆ. ಹಾಗೂ ಪಿಯಾನೋ, ಕೀಬೋರ್ಡ್ ಅನ್ನು ನುಡಿಸುವ ಅಭ್ಯಾಸವನ್ನು ಮಾಡುವೆ. ನಾನು ನಂತರ ರಜಾದಿನಗಳಲ್ಲಿ ವ್ಯಾಯಾಮ, ವಾಕಿಂಗ್ ,ಬೆಳಗಿನ ಗಾಳಿಯನ್ನು ಸೇವಿಸುವುದು ಇದು ನನ್ನ ಪ್ರತಿದಿನದ ಅಭ್ಯಾಸ. ನಾನು ನನ್ನ ದ್ವಿತೀಯ ಪಿಯುಸಿಯಲ್ಲಿ ಶೇಕಡ 88 ಪರ್ಸೆಂಟ್ ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾದೇನು. ನಂತರ ನಾನು ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಪ್ರವೇಶ ಪಡೆದು ಬಿಕಾಂ ಮೊದಲನೇ ವರ್ಷದಲ್ಲಿ ಓದುತ್ತಿದ್ದೇನೆ. ನಾನು ನನ್ನ ಜೀವನದಲ್ಲಿ ಚಾರ್ಟೆಡ ಅಕೌಂಟೆಂಟ್ ಆಗಬೇಕೆಂಬ ಗುರಿಯನ್ನು ಇಟ್ಟುಕೊಂಡಿದ್ದೇನೆ. ಇದನ್ನು ತಲುಪಲು ಹಗಲು ರಾತ್ರಿ ಓದುವ ಅಭ್ಯಾಸ ಮಾಡುತ್ತಿದ್ದೇನೆ.

ವಂದನೆಗಳು