ವಿಷಯಕ್ಕೆ ಹೋಗು

ಸದಸ್ಯ:Yakshitha/ನನ್ನ ಪ್ರಯೋಗಪುಟ/50

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಸ್ತುತ ,CIS -A2K ಐದು ಭಾರತೀಯ ಭಾಷೆಗಳ ವಿಕಿಮೀಡಿಯಾ ಸಮುದಾಯಗಳೊಂದಿಗೆ (ಕನ್ನಡ , ಕೊಂಕಣಿ , ಮರಾಠಿ , ಒಡಿಯಾ ಮತ್ತು ತೆಲುಗು) ಕೆಲಸ ಮಾಡುತ್ತಿದೆ, ಮತ್ತು ಒಂದು focus project area ದಲ್ಲಿ (ಪಂಜಾಬ್ ಸಮುದಾಯದೊಂದಿಗೆ ವಿಕಿಸೋರ್ಸ್) ಮೇಲೆ ಉಲ್ಲೇಖಿಸಲಾದ ಸಮುದಾಯಗಳೊಂದಿಗೆ ಕೆಲಸ ಮಾಡುವಾಗ ನಮ್ಮ ಗಮನಕ್ಕೆ ಬಂದಿದ್ದೇನೆಂದರೆ , ಈ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳಲ್ಲಿ ಸಮಾನತೆ ಇದೆ . ಹಾಗಾಗಿ ನಾವು ಈ "ಭಾರತೀಯ ಭಾಷೆಗಳಿಗಾಗಿ ವಿಕಿಸೋರ್ಸ್ ಕೈಪಿಡಿ" ತಯಾರಿಸಲು ತೀರ್ಮಾನಿಸಿದೆವು.

ಮೊದಲಿಗೆ ನಾವು ಪ್ರತಿ ಭಾಷೆಯ ವಿಕಿಸೋರ್ಸನ್ನು ಪರಿಶೀಲಿಸಿ ಅದರ ಸ್ಥಿತಿಗತಿಯನ್ನು ನೋಡಿದೆವು (noted) . ಅನಂತರ ಇಂಡಿಕ್ ವಿಕಿಪೀಡಿಯನ್ನರ ಜೊತೆ ವಿಕಿಸೋರ್ಸ್ ಸಂಬಂಧಿತವಾಗಿ ಅವರು ಎದುರಿಸುತ್ತಿರುವ ವಿಷಯಗಳ ಬಗ್ಗೆ ಮಾತಾಡಿದೆವು . ಈ ಕೈಪಿಡಿಯ ಬಗ್ಗೆ ಕೂಡ ಅವರ ಹಿನ್ನುಣಿಕೆ (feedback) ಕೇಳಿದೆವು . ನಾವು ಈ ಪುಸ್ತಕವನ್ನು ಬಿಡುಗಡೆ ಮಾಡಿ ಸಮುದಾಯಗಳೊಂದಿಗೆ ವಿಕಿಸೋರ್ಸ್ ಅಭಿವೃದ್ದಿಗೊಳಿಸುವ ಅವರ ಪ್ರಯತ್ನಗಳೊಂದಿಗೆ ಕೆಲಸ ಮಾಡಲು ಶುರುಮಾಡಿದಾಗ , ನಮ್ಮ ನಿಜವಾದ ಕೆಲಸ ಪ್ರಾರಂಭವಾದಂತೆ ಎಂದು ಭಾವಿಸುತ್ತೇವೆ .

ಪರಿಚಯ: ವಿಕಿಸೋರ್ಸ್ ನವೆಂಬರ್ ೨೦೦೩ ರಲ್ಲಿ ಶುರುವಾದಾಗ ಮೊದಲು ಪ್ರಾಜೆಕ್ಟ್ ಸೋರ್ಸ್ ಬರ್ಗ್ ಎಂದು ಕರೆಯಲ್ಪಡುತ್ತಿತ್ತು. ಇದು ಪ್ರಾಜೆಕ್ಟ್ ಗುಟೆನ್ ಬರ್ಗ್[೧] ಎಂಬುದರಿಂದ ಪಡೆದುಕೊಂಡ ಪದಗಳು. ಮೊದಲು ವಿಕಿಪೀಡಿಯಾದ ಲೇಖನಗಳಿಗೋಸ್ಕರ ಬೇಕಾಗುವಂತಹ ಪಠ್ಯಗಳನ್ನು ಸಂಗ್ರಹ ಮಾಡಲು ಶುರುವಾದ ಇದು , ಅನಂತರ ಜಗತ್ತಿನಾದ್ಯಂತ ಸ್ವಯಂಸೇವಕರು ಒಟ್ಟಾಗಿ ರಚಿಸಿದಂತಹ ಒಂದು ಡಿಜಿಟಲ್ ಲೈಬ್ರೇರಿಯಂತಾಯಿತು. ವಿಕಿಸೋರ್ಸ್ ಬಹು ವೇಗವಾಗಿ ಬೆಳೆದು ಮೇ ೧೮ ,೨೦೦೫[೨] ರ ಹೊತ್ತಿಗೆ ವಿವಿಧ ಭಾಷೆಗಳಲ್ಲಿ ಒಟ್ಟಾರೆ ೨೦,೦೦೦ ಪಠ್ಯ ಘಟಕಗಳನ್ನು ತಲುಪಿತು . ಇದರ ಬಗ್ಗೆ ನವೀಕೃತ ಡಿಜಿಟಲೀಕೃತ ಮಾಹಿತಿಗಾಗಿ , ಇಲ್ಲಿ ನೋಡಿ[೩] .

ವಿಕಿಸೋರ್ಸ್ ನಲ್ಲಿರುವ ಮಾಹಿತಿಯು ಮುಕ್ತ ಪರವಾನಗಿ ಹೊಂದಿದ್ದಾಗಿದೆ . ಅಂದರೆ , ಆ ಮಾಹಿತಿಯನ್ನು ಅಧ್ಯಯನ ಮತ್ತು ಅನ್ವಯಿಕೆಗಾಗಿ ಬಳಸಿಕೊಳ್ಳಬಹುದು ಮತ್ತು ಮುಕ್ತವಾಗಿ ನಕಲು ಮಾಡಿಕೊಳ್ಳಬಹುದು , ಹಂಚಬಹುದು ಮತ್ತು ತಿದ್ದಬಹುದು(ಸಂಪಾದನೆ) [೪].

ಮುಕ್ತ ಪರವಾನಗಿ ಹೊಂದಿರುವ ಸಾಮಗ್ರಿಗಳು ಹಾಗೂ ಸಾರ್ವಜನಿಕ ಡೊಮೈನ್ ನಲ್ಲಿ ಲಭ್ಯವಿರುವ ಸಾಮಗ್ರಿಗಳಿಗೂ ವ್ಯತ್ಯಾಸವಿದೆ. ಸಾರ್ವಜನಿಕ ಡೊಮೈನ್ ನಲ್ಲಿ ಯಾವುದೇ exclusive ಹಕ್ಕುಸ್ವಾಮ್ಯ ಅನ್ವಯವಾಗದೇ ಇರುವಂತದ್ದಾಗಿರುತ್ತದೆ [೫]. ಮುಕ್ತ ಪರವಾನಗಿಯಂತೆ ಅಲ್ಲ.

ಪರಿವಿಡಿ
ಹಕ್ಕುಸ್ವಾಮ್ಯ
ಹಕ್ಕುಸ್ವಾಮ್ಯ ಸ್ಥಿತಿ ಪರಿಶೀಲನೆ
ಅಪ್ಲೊಡ್
ಪರಿವಿಡಿ
OCR
ಕರಡುತಿದ್ದುವಿಕೆ ಮತ್ತು ದೃಢೀಕರಿಸುವಿಕೆ
Transclusion
ವಿಕಿಡೇಟಾ ಸಂಪರ್ಕ ಜೋಡಣೆ

ಹಕ್ಕುಸ್ವಾಮ್ಯ(ಕಾಪಿರೈಟ್) ಹಕ್ಕುಸ್ವಾಮ್ಯ ಎಂಬ ಪದದಿಂದ ನಮಗೇನು ತಿಳಿಯುತ್ತದೆ?

ಹಕ್ಕುಸ್ವಾಮ್ಯ ವೆಂದರೆ ಕೃತಿಯ ಲೇಖಕರಿಗೆ ಅವರ ಮೂಲರಚನೆಗಳಿಗೆ ಕೊಟ್ಟಿರುವಂತಹ ಕಾನೂನಾರ್ತಕ ಹಕ್ಕುಗಳಾಗಿರುತ್ತವೆ. ವಿಸ್ತಾರವಾಗಿ ಹೇಳುವುದಾದದರೆ , ಹಕ್ಕುಸ್ವಾಮ್ಯ ಎಂಬುದು , ಸಾಹಿತ್ಯ ,ಸಂಗೀತ ಮತ್ತು ಕಲಾಕೃತಿಗಳ ಮೂಲ ರಚನೆಗಳಿಗೆ ಅನ್ವಯವಾಗುವಂತದ್ದಾಗಿರುತ್ತದೆ . ಈ ಹಕ್ಕುಗಳ composition ಆ ಮೂಲ ರಚನೆಗಳ ಸ್ವರೂಪಕ್ಕನುಗುಣವಾಗಿ ಬದಲಾಗುವಂತದ್ದಾಗಿರುತ್ತದೆ. ಈ ಹಕ್ಕುಗಳು ಆ author ಗಳಿಗೆ ಇರುವಂತಹ ಆರ್ಥಿಕ ಮತ್ತು ನೈತಿಕ ರಕ್ಷಣೆ ಎಂದೂ ಸಹ ಅರ್ಥೈಸಬಹುದು [೬].

ಆರ್ಥಿಕ ಹಕ್ಕುಗಳು ಆ ಕೃತಿಯ ಆರ್ಥಿಕ ಮೌಲ್ಯವನ್ನು ಕಾಪಾಡುತ್ತದೆ [೭] . ಉದಾಹರಣೆಗೆ ಹಕ್ಕುಸ್ವಾಮ್ಯ ಹೊಂದಿದ ಕೃತಿಯ ಜೊತೆಗಿನ ಸಂಪರ್ಕವನ್ನು (ಮಾಲಿಕತ್ವವನ್ನು) ಕಾಪಾಡಿಕೊಳ್ಳಲು , ಸಂರಕ್ಷಿಸಿಕೊಳ್ಳಲು ಬೇಕಾದಂತಹ ಕ್ರಮಗಳನ್ನು ತೆಗೆದುಕೊಳ್ಳಲು ಅನುವುಮಾಡಿಕೊಡುತ್ತದೆ. ಉದಾಹರಣೆಗೆ ತನ್ನ ಕೃತಿಯನ್ನು ಅನಾಮಧೇಯವಾಗಿ ಅಥವಾ ಬೇರೆ ಹೆಸರಿನಿಂದ ಪ್ರಕಟಿಸುವುದು [೮] .


ಸಾರಾಂಶ:

[ಬದಲಾಯಿಸಿ]
ಪದ(term) ವಿವರಣೆ
ಹಕ್ಕುಸ್ವಾಮ್ಯ ವಿವಿಧ ಕ್ಷೇತ್ರದ ಜನರಿಗೆ ತಮ್ಮ ಕೃತಿಗಳನ್ನು ಅನುವಾದ ಹಾಗೂ ಸಾರ್ವಜನಿಕ ಅಭಿಪ್ರಾಯದ area ಗಳಲ್ಲಿ ಮರುಸೃಷ್ಟಿ ಅಥವಾ reproduce ಮಾಡಲು ಒದಗಿಸುವಂತಹ ಹಕ್ಕುಗಳು
ಜಂಟಿ authorship ಕೃತಿ ಒಂದೇ ಉದ್ದೇಶಕ್ಕಾಗಿ ಎರಡು ಅಥವಾ ಹೆಚ್ಚಿನ author ಗಳು ಒಂದಾಗಿ ಮಾಡುವ ಕೆಲಸ. ಅದು ಆ author ಗಳಲ್ಲಿ ಯಾವ ಭಿನ್ನಾಭಿಪ್ರಾಯಕ್ಕೆ ಎಡೆ ಮಾಡಿ ಕೊಡದಿರುವಂತಾದ್ದಾಗಿರುತ್ತದೆ.
ಭಾರತದಲ್ಲಿ ಹಕ್ಕುಸ್ವಾಮ್ಯ
ರಕ್ಷಣೆ ಇರುವಂತಹ ಕೃತಿಗಳ ದರ್ಜೆಗಳು(classes)?
* ಮೂಲ ಸಾಹಿತ್ಯ , ನಾಟಕ , ಸಂಗೀತ ಮತ್ತು ಕಲಾಕೃತಿಗಳು
ಸಿನಮಾಟೋಗ್ರಾಫ್ ಫೈಲುಗಳು ಮತ್ತು ಧ್ವನಿಗ್ರಹಣಗಳು
ಕಲಾಕೃತಿ * ಚಿತ್ರಕಲೆ , sculpture , ಶಿಲ್ಪಕಲೆ , ರೇಖಾಚಿತ್ರ
(diagram, ನಕಾಶೆ , ಚಾರ್ಟ್/ರೂಪುರೇಖೆ)
ಫೋಟೋಗ್ರಾಫ್ ಅಥವಾ engraving - ಕೃತಿಗಳು ಕಲಾತ್ಮಕ ಇರಬಹುದು ಇಲ್ಲದಿರಬಹುದು
* ವಾಸ್ತುಶಿಲ್ಪ ಕೃತಿ
* ಯಾವುದೇ ಕಲೆ ಮತ್ತು ಕುಶಲ ಕರ್ಮಿ ಕೆಲಸುಗಳು
ಸಂಗೀತ ಕೃತಿ * ಸಂಗೀತ ಮತ್ತು ಅದರ ಗ್ರಾಫಿಕಲ್ notation ಒಳಗೊಂಡಿರುವ ಯಾವುದೇ ಕೃತಿ. ಆದರೆ ಅದು ಆ ಸಂಗೀತದೊಂದಿಗೆ ಹಾಡುವಂತಹ , ಮಾತಾಡುವಂತಹ ಅಥವಾ perform ಮಾಡುವಂತಹ ಯಾವುದೇ ಪದ ಅಥವಾ ಕ್ರಿಯೆಯನ್ನು ಒಳಗೊಂಡಿರಬಾರದು. ಹಕ್ಕುಸ್ವಾಮ್ಯಮನ್ನು ಹೊಂದಲು ಆ ಸಂಗೀತವು ಲಿಖಿತರೂಪದ ದಾಖಲೆ ಹೊಂದಿರಬೇಕಂತಿಲ್ಲ.
ಧ್ವನಿಗ್ರಹಣ ಯಾವುದೇ ಮಾಧ್ಯಮದಲ್ಲಿ ಮಾಡಿದಂತಹ ಅತವಾ ಯಾವುದೇ method ಮೂಲಕ ಕೇಳಿಸಬಹುದಾದಂತೆ ಮಾಡಿರುವ ಶಬ್ದ/ ಧ್ವನಿ ಗ್ರಹಣ ದಾಖಲೆಗಳು.
ಸಿನೆಮಾಟೋಗ್ರಾಫಿ - ಫಿಲಂ ದೃಶ್ಯ ದಾಖಲೆಗಳು - ಯಾವುದೇ ಮಾಧ್ಯಮದಲ್ಲಿ ಬಂದು ಪ್ರಕ್ರಿಯೆ ಮೂಲಕ ಚಲಿಸುವಂತಹ ದೃಶ್ಯಗಳನ್ನು ಯಾವುದೇ mean ಬಳಸಿ ಮಾಡಿದ್ದು ಮತ್ತು ಆ ದೃಶ್ಯದೊಂದಿಗೆ ಶಬ್ದಗ್ರಹಣವನ್ನು ಒಳಗೊಂಡಿರುವಂತದ್ದು.(Some text to be translated)
ಸರ್ಕಾರಿ ಕೆಲಸಗಳು
(ದಾಖಲೆಗಳು)
ಈ ಕೆಳಗಿನವುಗಳ ನಿರ್ದೇಶನ ಅಥವಾ ನಿಯಂತ್ರಕಾದಲ್ಲಿ ರಚಿಸಿದ ಅಥವಾ ಪ್ರಕಟಿಸಿದ ಕೃತಿಗಳು
* ಸರ್ಕಾರ ಅಥವಾ ಸರ್ಕಾರದ ಯಾವುದೇ ಇಲಾಖೆ
* ಭಾರತದ ಯಾವುದೇ ಶಾಸಕಾಂಗ
* ಭಾರತದ ಯಾವುದೇ ಕೋರ್ಟ್ , ಪೀಠ(tribunal), ಅಥವಾ ಇತರ ನ್ಯಾಯಾಧಿಕಾರಿಗಳು
ಭಾರತೀಯ ಕೃತಿಗಳು ಸಾಹಿತ್ಯ , ನಾಟಕ ಅಥವಾ ಸಂಗೀತ ಕೃತಿ
* ಕರ್ತೃವು ಭಾರತದ ಪ್ರಜೆಯಾಗಿರುವಂತದ್ದು
* ಭಾರತದಲ್ಲಿ ಮೊದಲು ಪ್ರಕಟವಾಗಿರುವಂತದ್ದು
* ಅಪ್ರಕಟಿತ ಕೃತಿಯಾಗಿದ್ದಲ್ಲಿ , ಆ ಕೃತಿಯನ್ನು ರಚಿಸುವಾಗ ಕರ್ತೃವು ಭಾರತೀಯ ಪ್ರಜೆಯಾಗಿರುವಂತದ್ದು.

ಹಕ್ಕುಸ್ವಾಮ್ಯದ ಸ್ಥಿತಿಗತಿಯ ಪರಿಶೀಲನೆ

[ಬದಲಾಯಿಸಿ]

ಯಾವುದೇ ಸಾಹಿತ್ಯ ಕೃತಿ , ಚಿತ್ರ , ವೀಡಿಯೋ ಮುಂತಾದವುಗಳನ್ನು ವಿಕಿಮೀಡಿಯಾ ಕಾಮನ್ಸ್ ಗೆ ಅಪ್ಲೋಡ್ ಮಾಡುವ ಮೊದಲು ಅದು ಎರಡೂ ದೇಶಗಳಲ್ಲಿ ಮುಕ್ತ ಪರವಾನಗಿಯ ವರ್ಗದಡಿಯಲ್ಲಿ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು.

  • ಪುಸ್ತಕ ಎಲ್ಲಿ ಪ್ರಕಟಣೆ / ಪ್ರಕಾಶನಗೊಂಡಿದೆ - ಅಂದರೆ ಬಹುತೇಕ ಭಾರತೀಯ ಭಾಷೆಗಳ ಪುಸ್ತಕಗಳು / ಕೃತಿಗಳು ಪ್ರಕಾಶನಗೊಳ್ಳುವ ಬಾರತ ದೇಶದಲ್ಲಿ
  • ಸರ್ವರ್ ಹೋಸ್ಟ್ ಮಾಡುವಂತಹ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ದೇಶದಲ್ಲಿ .

ಭಾರತದಲ್ಲಿ ಪ್ರಕಾಶನಗೊಂಡ ಕೃತಿಗಳು

[ಬದಲಾಯಿಸಿ]

ಭಾರತದಲ್ಲಿ ಆ ಕೃತಿಯು ಸಾರ್ವಜನಿಕ ಡೊಮೈನಿನ ಅಡಿಯಲ್ಲಿ ಇದೆಯೇ ಎಂಬುದನ್ನು ತಿಳಿಯಲು , ಅದು ಇಂಡಿಯನ್ ಕಾಪಿರೈಟ್ ಆಕ್ಟ್ ೧೯೫೭ [೯] ರ ಅಡಿಯಲ್ಲಿಯೇ ಎಂದು ಪರಿಸೀಲಿಸಬೇಕು . ಆ ಆಕ್ಟ್ ಏನು ಹೇಳುವುದೆಂದರೆ ,

  • ಅನಾಮಧೇಯ ಕೃತಿಗಳು , ಫೋಟೋಗ್ರಾಫ್ ಗಳು , ಸಿನೆಮೆಟೋಗ್ರಾಫಿ ಕೆಲಸಗಳು, ಶಬ್ದ / ಧ್ವನಿಗ್ರಹಣಗಳು , ಸರ್ಕಾರಿ ಕೆಲಸಗಳು , ಕಾರ್ಪೊರೇಟ್ authorship ಅಥವಾ ಅಂತರಾಷ್ಟ್ರೀಯ ಸಂಸ್ಥೆಗಳ ಕೆಲಸಗಳು/ಕೃತಿಗಳು ಅವು ಮೊದಲ ಬಾರಿಗೆ ಪ್ರಕಟಣೆಗೊಂಡ ೬೦ ವರ್ಷಗಳ ನಂತರ ಸಾರ್ವಜನಿಕ ಡೊಮೈನಿಗೆ ಬರುತ್ತವೆ. ಅವು ಪ್ರಕಟಣೆಗೊಂಡ ವರ್ಷದ ಮುಂದಿನ (ನಂತರದ) ಕ್ಯಾಲೆಂಡರ್ ವರ್ಷದಿಂದ ಲೆಕ್ಕವನ್ನು ಪರಿಗಣೆ ಮಾಡಬೇಕು . (ಉದಾಹರಣೆಗೆ ಪ್ರಸ್ತುತ ೨೦೨೦ ರಲ್ಲಿ , ಜನವರಿ ೧, ೧೯೬೦ ಕ್ಕಿಂತ ಮೊದಲು ಪ್ರಕಟಣೆಗೊಂಡವು ಸಾರ್ವಜನಿಕ ಡೊಮೈನಿನಡಿ ಬರುತ್ತವೆ)
  • Posthumous works (ಮೇಲೆ ಹೇಳಿದ್ದಕ್ಕಿಂತ ಹೊರತಾದವು) ಅವು ಪ್ರಕಾಶನಗೊಂಡ ತಾರೀಖಿನಿಂದ ೬೦ ವರ್ಷಗಳ ನಂತರ ಸಾ.ಡೊ.ಗೆ ಬರುತ್ತವೆ.
  • ಉಳಿದ ಕೃತಿಗಳು ಕೃತಿಕಾರನ ಮರಣದ ೬೦ ವರ್ಷಗಳ ನಂತರ ಸಾ.ಡೊ.ಗೆ ಬರುತ್ತವೆ. ೧೯೪೧ ಕ್ಕಿಂತ ಮೊದಲು ಮರಣ ಹೊಂದಿದ ಕೃತಿಕಾರನ ಕೃತಿಗಳು ೫೦ ವರ್ಷಗಳ ನಂತರ ಸಾ.ಡೊ.ಗೆ ಬಂದಿವೆ ಮತ್ತು ಅವುಗಳ ಹಕ್ಕುಸ್ವಾಮ್ಯಗಳನ್ನು ಮರುಸ್ಥಾಪಿಸಲಾಗಿಲ್ಲ (not restored)
  • ಅಧಿಕೃತ ಗೆಜೆಟ್ : ಅಧಿಕೃತ ಗೆಜೆಟ್ ಗಳಲ್ಲಿ ಪ್ರಕಟಣೆಗೊಂಡ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪಠ್ಯ , ಶಾಸಕಾಂಗದ Act ಗಳು , ಯಾವುದೇ ನ್ಯಾಯಾಂಗ authority ಯ ಆದೇಶ ಅಥವಾ ತೀರ್ಪುಗಳು , ಶಾಸಕಾಂಗಕ್ಕೆ ಮಂಡನೆಯಾದಂತಹ ಯಾವುದೇ ಸರ್ಕಾರಿ ವರದಿಗಳು ಹಕ್ಕುಸ್ವಾಮ್ಯ ಮುಕ್ತವಾಗಿರುತ್ತವೆ.

ಸಂಬಂಧಿತ authority ಇಂದ ಅವುಗಳ ಮರುಮುದ್ರಣ (reproduction) ಅಥವಾ ಪ್ರಕಟಣೆಯ ಪ್ರತಿಬಂಧಿಸಲ್ಪಟ್ಟಿರಬಾರದು /ನಿಷೇಧಿತವಾಗಿರಬಾರದು.

  • U.S. ಕಾಪಿರೈಟ್ ಆಫೀಸ್ ನಲ್ಲಿ ಅದು ಜನವರಿ ೧ , ೧೯೨೩ ಕ್ಕಿಂತ ಮೊದಲು ಪ್ರಕಟಗೊಂಡಿರಬೇಕು ಅಥವಾ ನೋಂದಾಯಿತವಾಯಿರಬೇಕು.
  • ಮೊದಲು ಭಾರತದಲ್ಲಿ ಪ್ರಕಟಣೆಯಾಗಿ ನಂತರ ೩೦ ದಿನಗಳ ಒಳಗೆ ವ ದೇಶದಲ್ಲಿ ಪ್ರಕಟಣೆಯಾಗಿರಬಾರದು.
  • ಹಕ್ಕುಸ್ವಾಮ್ಯದ ಸೂಚನೆಯಿಲ್ಲದೇ ೧ ಮಾರ್ಚ್ ೧೯೮೯ ಕ್ಕಿಂತ ಮುಂಚೆ ಮೊದಲ ಬಾರಿಗೆ ಪ್ರಕಾಶನಗೊಂಡಿರುವಂತದ್ದು . ಅತವಾ ಹಕ್ಕುಸ್ವಾಮ್ಯದ renewal ಮಾಡದೇ ೧೯೬೪ ಕ್ಕಿಂತ ಮುಂಚೆ ಪ್ರಕಾಶನಗೊಂಡಿರುವಂತದ್ದು ಅಥವಾ ೧ ಜನವರಿ ೧೯೯೬ ರಲ್ಲಾದ ಉರುಗ್ವೆ ಒಪ್ಪಂದದಂತೆ [೧೦] ಭಾರತವು U.S. ದೇಶದೊಂದಿಗೆ ಹಕ್ಕುಸ್ವಾಮ್ಯ ಸಂಬಂಧಗಳನ್ನು ಒಡಂಬಡಿಕೆ (establish) ಮಾಡಿಕೊಳ್ಳುವುದಕ್ಕಿಂತ ಮೊದಲು ಭಾರತದಲ್ಲಿ ಸಾರ್ವಜನಿಕ ಡೊಮೈನಿನಲ್ಲಿ ಇದ್ದಂತದ್ದು.

ಇದನ್ನು ಹೀಗೆ summarize ಮಾಡಬಹುದು .

ಕೃತಿಕಾರನ ಮರಣ ಪ್ರಕಟಣೆಯ ತಾರೀಖು ಪರವಾನಗಿ ವಿಕಿಕಾಮನ್ಸ್ ಗೆ ಅಪ್ಲೋಡ್ ಮಾಡಬಹುದೇ
< ೧೯೧೮ < ೧೯೧೮ ಹೌದು
< ೧೯೨೩ < ೧೯೨೩ ಹೌದು
< ೧೯೨೩ ೧೯೨೩-೧೯೪೦ ಹೌದು
< ೧೯೨೩ ೧೯೪೧-೧೯೫೮ ಇಲ್ಲ
೧೯೨೩-೪೦ < ೧೯೨೩ ಹೌದು
೧೯೨೩-೪೦ ೧೯೨೩-೪೦ ಹೌದು
೧೯೨೩-೪೦ ೧೯೪೧-೧೯೫೮ ಇಲ್ಲ
೧೯೪೧-೫೮ <೧೯೨೩ ಹೌದು
೧೯೪೧-೫೮ ೧೯೨೩-೧೯೪೦ ಇಲ್ಲ
೧೯೪೧-೫೮ ೧೯೪೧-೧೯೫೮ ಇಲ್ಲ
ಮಾಹಿತಿ ಇಲ್ಲ <೧೯೨೩ ಹೌದು
ಮಾಹಿತಿ ಇಲ್ಲ ೧೯೨೩-೧೯೪೦ ಹೌದು
ಮಾಹಿತಿ ಇಲ್ಲ ೧೯೪೧-೧೯೫೮ ಇಲ್ಲ
ಯಾವುದೇ ವರ್ಷ >೧೯೫೮ ಹಕ್ಕುಸ್ವಾಮ್ಯ ಹೊಂದಿದ್ದು ಇಲ್ಲ
>೧೯೫೮ ಯಾವುದೇ ತಾರೀಖು ಇಲ್ಲ

ಅಪ್ಲೋಡ್ (NS:File)

[ಬದಲಾಯಿಸಿ]

ಒಂದು ಕೃತಿಯ ಹಕ್ಕುಸ್ವಾಮ್ಯದ ಸ್ಥಿತಿಯನ್ನು ಪರಿಶೀಲಿಸಿದ ನಂತರ ಮುಂದಿನ ಹಂತವೆಂದರೆ ಅದನ್ನು ವಿಕಿಮೀಡಿಯಾ ಕಾಮನ್ಸ್ ಗೆ [೧೮] ಅಪ್ಲೋಡ್ ಮಾಡುವುದು . ಅಲ್ಲಿಗೆ ಒಂದು ಪುಸ್ತಕವನ್ನು ಅಪ್ಲೋಡ್ ಮಾಡಲು ಹಲವು ದಾರಿಗಳಿವೆ.

ಅಪ್ಲೋಡ್ ಉಪಕರಣಗಳು (ಟೂಲ್ಸ್)

[ಬದಲಾಯಿಸಿ]

ಅಪ್ಲೋಡ್ ವಿಜಾರ್ಡ್ [೧೯] ಇದು ವಿಕಿಮೀಡಿಯಾ ಕಾಮನ್ಸ್ ನ default upload tool ಆಗಿದ್ದು ಇದರಲ್ಲಿ ನಿಮ್ಮ ಕಂಪ್ಯೂಟರಿಂದ ಒಂದು ಬಾರಿಗೆ ೫೦ ಫೈಲುಗಳನ್ನು ಅಪ್ಲೊಡ್ ಮಾಡಬಹುದು . ಈ ಅಪ್ಲೋಡ್ ವಿಜಾರ್ಡ್ ಬಳಕೆ ಹೇಗೆ ಎಂಬುದರ ಬಗ್ಗೆ ವಿವರವಾಗಿ ತಿಳಿಯಲು upload wizard ಪುಟವನ್ನು [೨೦] ನೋಡಬಹುದು.

IA- ಅಪ್ಲೋಡ್ ಟೂಲ್[೨೧]

[ಬದಲಾಯಿಸಿ]

ಇದು Internet Archive ನಿಂದ ವಿಕಿಮೀಡಿಯಾ ಕಾಮನ್ಸ್ ಗೆ ಫೈಲುಗಳನ್ನು ವರ್ಗಾಯಿಸಲು ಇರುವಂತಹ ಟೂಲ್ . ಇದು ಕೇವಲ Djvu ಮಾದರಿಯಲ್ಲಿರುವ ಕಡತಗಳನ್ನು ಮಾತ್ರ ಕಾಂನ್ಸ್ ಗೆ ಅಪ್ಲೋಡ್ ಮಡುತ್ತದೆ .[೧೮] [೧೯] [೨೦] [೨೧]

--20 (b)- 13) ಟರ್ಮಿನಲ್ ತಡರೆಯಿರಿ ಮತ್ತು ಈ ಕೆಳೆಗಿನ command run ಮಾಡಿ .
python do-ocr.py
ಈ ತಂತ್ರಾಂಶವು Linux OS ನಲ್ಲಿ ಮಾತ್ರ ಕೆಲಸ ಮಾಡುತ್ತದೆ . Google Drive API ನಿಮ್ಮ ಭಾಷೆಯನ್ನು ಬೆಂಬಲಿಸುತ್ತದೋ ಇಲ್ಲವೋ ಎಂದು ಪರಿಶೀಲಿಸಿಕೊಳ್ಳಿ.

ಗೂಗಲ್ OCR ಟೂಲ್

[ಬದಲಾಯಿಸಿ]

ಗೂಗಲ್ OCR ಟೂಲ್ ಪೇಜ್ ನೇಮ್ ಸ್ಪೇಸ್ ಟೂಲ್ ಬಾರ್ ಬಟನ್ ಸೇರಿಸುತ್ತದೆ . ಅದು ಪ್ರಸ್ತುತ ಪುಟದ ಚಿತ್ರದಿಂದ ಪಠ್ಯವನ್ನು ತೆಗೆದುಕೊಳ್ಳುತ್ತದೆ. ಇದು Google cloud version API [೩೫] OCR ಮೂಲಕ ನಡೆಯುತ್ತದೆ . ಈ ಸೇವೆಯಲ್ಲಿ ಲಭ್ಯವಿರುವ [೩೬] ಭಾಷೆಗಳನ್ನು ಪರಿಶೀಲಿಸಿಕೊಳ್ಳಿ ಈ : OCR ಗುಂಡಿಯನ್ನು ಒತ್ತುವುದರ ಮೂಲಕ ಪ್ರತಿ ಪುಟದ OCR ಆಗಿರುವ ಪಠ್ಯವನ್ನು ಪಡೆಯಿರಿ. ಸೂಚನೆ : OCR ಆಗಿರುವ ಪಠ್ಯವು ೧೦೦ /- ನಿಖರವಾಗಿರುವುದಿಲ್ಲ. ಅಕ್ಷರ ದೋಷಗಳನ್ನು ಸರಿಪಡಿಸುವುದಕ್ಕೋಸ್ಕರ manual proofreading ಮಾಡಬೇಕಾಗುತ್ತದೆ.



[೩೫]_ _ _ _ _
[೩೬]_ _ _ _ _

ಕರಡು ಪರಿಶೀಲನೆ(Proof Reading) (NS: Page ಅಲ್ಲಿ)

[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಪ್ರತಿಯೊಂದು ಪುಟವನ್ನು ಓದಿ ಪರಿಶೀಲನೆ ಮಾಡಲು ಒಂದು ಏರ್ಪಾಡು ಇದೆ . ಮೂಲ ಸ್ಕ್ಯಾನ್ ಮಾಡಿದ ಪುಟದಂತೆಯೇ ಪಠ್ಯವನ್ನು ಅದೇ ಶೈಲಿಯಲ್ಲಿ ಉಳಿಸಿಕೊಳ್ಳಲು ಈ ಪ್ರಕ್ರಿಯೆಯ ಸಾಧ್ಯವಾದಷ್ಟೂ ಮಟ್ಟಿಗೆ ಸಹಾಯವಾಘುತ್ತದೆ . ಇದಕ್ಕಾಗಿ ಹಲವು ಟೆಂಪ್ಲೇಟುಗಳು ಬಳಸಲ್ಪಡುತ್ತವೆ.

HTML tags ವಿವರಣೆ
ಪಠ್ಯವನ್ನು ಬಲಬದಿಗೆ ಇರಿಸಲು
ಪಠ್ಯವನ್ನು ಎಡಬದಿಗೆ ಇರಿಸಲು
ಟೆಂಪ್ಲೇಟು:Running Header ಒಂದೇ ಸಾಲಿನಲ್ಲಿ ಮೂರು ಪಠ್ಯಭಾಗಗಳನ್ನು ಎಡ , ಮಧ್ಯ ಮತ್ತು ಬಲಬದಿ ಇರಿಸಲು
ಪಠ್ಯವನ್ನು ನಡುಭಾಗದಲ್ಲಿ ಇರಿಸಲು
ಟೆಂಪ್ಲೇಟು:Block Center ಒಂದು ಪೂರ್ಣ ಪಠ್ಯದ block ಅನ್ನು ಮಧ್ಯಭಾಗದಲ್ಲಿ ಇರಿಸಲು
ಟೆಂಪ್ಲೇಟು:Block center...... ಪಠ್ಯವು ನಂತರದ ಪುಟದಲ್ಲಿ ಮುಂದುವರೆದಿರುವ ಸಂದರ್ಭದಲ್ಲಿ ಒಂದು ಪೂರ್ಣ ಪಠ್ಯದ block ಅನ್ನು ಮಧ್ಯಭಾಗದಲ್ಲಿ ಇರಿಸಲು
ಟೆಂಪ್ಲೇಟು:Gap ಒಂದು ಪ್ಯಾರಾದ ಶುರುವಿನಲ್ಲಿ ಅಥವಾ ಎರಡು ಪದಗಳ ನಡುವೆ ಜಾಗ ಬಿಡಲು
ಟೆಂಪ್ಲೇಟು:Hyphenated word......... ಪುಟದಲ್ಲಿ ಒಂದು ಪದವು hyphenate ಆಗಿ ಕಾಣಲು ಮತ್ತು ಆ ಪಠ್ಯವು transclude ಆದನಂತರ hyphen ತೆಗೆಯಲು
* ಟೆಂಪ್ಲೇಟು:Hyphenated word start
* ಟೆಂಪ್ಲೇಟು:Hyphenated word end
{{{1}}}, ಟೆಂಪ್ಲೇಟು:X-smaller,ಟೆಂಪ್ಲೇಟು:Xx-smaller ಸಣ್ಣಗಾತ್ರದ ಅಕ್ಷರಗಳನ್ನು ಪಡೆಯಲು
{{{1}}}, ಟೆಂಪ್ಲೇಟು:X-larger,ಟೆಂಪ್ಲೇಟು:Xx-larger ದೊಡ್ಡಗಾತ್ರದ ಅಕ್ಷರಗಳನ್ನು ಪಡೆಯಲು
ಟೆಂಪ್ಲೇಟು:Nop ಪಟವೊಂದರ ಸ್ಕ್ಯಾನ್ ನಲ್ಲಿ ಒಂದು ಪ್ಯಾರಾ ಕೊನೆಗೊಂಡಾಗ ಮತ್ತು ಅದೇ ಅಧ್ಯಾಯದ ಹೊಸ ಒಂದು ಪ್ಯಾರಾ ಮುಂದಿನ ಪುಟದಲ್ಲಿ ಶುರುವಾದಾಗ ಪಠ್ಯದ ನಡುವೆ ಒಂದು 'ಬ್ರೇಕ್ ' ಕೊಡಲು
ಟೆಂಪ್ಲೇಟು:Double height Row ಎರಡು ಸಾಲುಗಳ ನಡುವೆ ಜಾಗ ಕೊಡಲು
ಟೆಂಪ್ಲೇಟು:Rule ಒಂದು black horizontal rule ಹಾಕಲು

ಹೆಚ್ಚಿನ ಸಂಕೀರ್ಣ ಫಾರ್ಮ್ಯಾಟಿಂಗ್ ಗಾಗಿ ಇನ್ನೂ ಹಲವಾರು ಟೆಂಪ್ಲೇಟುಗಳಿವೆ [೩೭]

ಕವನಗಳನ್ನು ,

 

ಎಂಬ html tag ನಡುವೆ ಬರೆಯಬೇಕು . ಟೆಂಪ್ಲೇಟು:Block Center ಅಥವಾ

ಟೆಂಪ್ಲೇಟುಗಳನ್ನು ಬಳಸಿ ಅದನ್ನು ಮಧ್ಯಭಾಗದಲ್ಲಿರಿಸಬಹುದು .

ವಿಭಾಗ (section) ಗಳಿಗೆ , <.......> ಎಂದು ಶುರುಮಾಡಿ <.......>ಎಂದು ಕೊನೆಗೊಳಿಸಬಹುದು.
ಪ್ರೂಫ್ ರೀಡಿಂಗ್ ನಂತರ , ಕೆಂಪು ಗುಂಡಿಯನ್ನು ಹಳದಿಗೆ ಬದಲಾಯಿಸಿ. ಪ್ರೂಫ್ ರೀಡಿಂಗ್ ನಲ್ಲಿ ಏನಾದರೂ ಸಮಸ್ಯೆ ಇದ್ದು , ಇನ್ನೂ ಪರಿಶೀಲನೆ ಅಗತ್ಯವಿದ್ದರೆ ನೀಲಿ ಗುಂಡಿಗೆ ಬದಲಾಯಿಸಿ. ಪುಟದಲ್ಲಿ ಯಾವುದೇ ಪಠ್ಯವಿರದೇ ಖಾಲಿ ಇದ್ದಲ್ಲಿ ಬೂದು (grey) ಬಣ್ಣದ ಗುಂಡಿಗೆ ಬದಲಾಯಿಸಿ.
ಕರಡು ಪರಿಶೀಲಿಸಿದ ಪುಟಗಳನ್ನು ಮಾತ್ರ ದೃಢೀಕರಿಸಬಹುದು . ಕರಡು ಪರಿಶೀಲನೆ ಮಾಡಿದವರು ದೃಢೀಕರಿಸಲು ಸಾಧ್ಯವಿಲ್ಲ . ಹಾಗಾಗಿ ಇಬ್ಬರು ಅಗತ್ಯ. ದೃಢೀಕರಣ ಎಂದರೆ ಆ ಪುಟ ೧೦೦% ದೋಷರಹಿತವಾಗಿದೆ ಮತ್ತು ಇನ್ನೂ ಪರಿಶೀಲನೆ ಅಗತ್ಯ ಇಲ್ಲ ಎಂದರ್ಥ. ದೃಢೀಕರಣಕ್ಕಾಗಿ ಹಳದಿ ಬಣ್ಣದಿಂದ ಹಸಿರು ಬಣ್ಣಕ್ಕೆ ಬದಲಾಯಿಸಬೇಕು.

Transclusion (in NS:O)

[ಬದಲಾಯಿಸಿ]

ವಿಕಿಸೋರ್ಸ್ ಸಂಪಾದಕರು OCR ಮತ್ತು ಪ್ರೂಫ್ ರೀಡಿಂಗ್ ಗಳನ್ನು ಪೇಜ್ ನೇಮ್ ಸ್ಪೇಸ್ ನಲ್ಲಿ ಮಾಡುತ್ತಾರೆ. ಆದರೆ ಓದುಗರಿಗೋಸ್ಕರ ಪುಸ್ತಕಗಳ ಪಠ್ಯವನ್ನು ಮುಖ್ಯ ನೇಮ್ ಸ್ಪೇಸ್ ನಲ್ಲಿ ಇರಿಸಬೇಕಾಗುತ್ತದೆ. ಓದುಗರು ಹಿನ್ನಲೆಯಲ್ಲಿನ ಸಂಪಾದನೆಗೆ ಹೋಗಿ ನೋಡುವ ಅಗತ್ಯವಿಲ್ಲ . ಉದಾಹರಣೆಗೆ , ಒಂದು abc.djvu ಎಂಬ ಪುಸ್ತಕದ ಅದ್ಯಾಯ ೧ ಪುಟ ಸಂಖ್ಯೆ X ಇಂದ ಪುಟ ಸಂಖ್ಯೆ Y ವರೆಗೆ ಇದ್ದಲ್ಲಿ , ಅದರಲ್ಲಿನ ಪಠ್ಯವನ್ನು ಮುಖ್ಯ ನೇಮ್ ಸ್ಪೇಸ್ ನಲ್ಲಿ ಕಾಣುವಂತೆ ಮಾಡಲು (ಪುಟದ ಶೀರ್ಷಿಕೆ abc/ ಅಧ್ಯಾಯ ೧ ಎಂದು ಇರಬೇಕು) , ಈ ಕೆಳಗಿನ syntax ಬಳಸಿ <pages index="abc.djvu" from =x to y/> ೧ ನೇ ಅಧ್ಯಾಯವು ಪುಟ ಸಂಖ್ಯೆ X ನಲ್ಲಿರುವ p ವಿಭಾಗದಿಂದ ಶುರುವಾಗಿ ಪುಟ ಸಂಖ್ಯೆ Y ನಲ್ಲಿರುವ q ವಿಭಾಗದಲ್ಲಿ ಕೊನೆಯಾದರೆ , ಅದನ್ನು ಮುಖ್ಯ ನೇಮ್ ಸ್ಪೇಸ್ ನಲ್ಲಿ ಕಾಣುವಂತೆ ಮಾಡಲು , ಕೆಳಗಿನ syntax ಬಳಸಬೇಕು <page ......................./>

ವಿಕಿಡೇಟಾಗೆ ಜೋಡಿಸುವುದು

[ಬದಲಾಯಿಸಿ]

ಮುಖ್ಯ ನೇಮ್ ಸ್ಪೇಸ್ ನಲ್ಲಿ ರಚಿಸಲಾದ ಪುಟಗಳನ್ನು ವಿಕಿಡೇಟಾಗೆ ಜೋಡಿಸಬೇಕು . ಪ್ರತಿಯೊಂದು ಕೆಲಸ (work) ಕುಡ ನಿರ್ದಿಷ್ಟ (unique) ಮೆಟಾಡೇಟಾ ಹೊಂದಿರುತ್ತದೆ . ಹಾಗಾಗಿ ವಿಕಿಸೋರ್ಸ್ ನ ಪ್ರತಿಯೊಂದು work ಕೂಡ ಅದರದ್ದೇ ಒಂದು 'ಐಟಂ' ಪಡೆಯುತ್ತದೆ. ವಿಕಿಡೇಟಾಗೆ ಸೇರಿಸಬೇಕಾದ property ಗಳನ್ನು ಈ ಕೆಳಗಿನಂತಿವೆ