ಸದಸ್ಯ:Yakshitha/ನನ್ನ ಪ್ರಯೋಗಪುಟ

ವಿಕಿಪೀಡಿಯ ಇಂದ
Jump to navigation Jump to search
ಸುಮೇದ್ ಮುದ್ಗಲ್ಕರ್
ಜನ್ಮನಾಮ
ಸುಮೇದ್ ವಾಸುದೇವ್ ಮುದ್ಗಲ್ಕರ್

೨ ನವೆಂಬರ್ ೧೯೯೬
ರಾಷ್ಟ್ರೀಯತೆIndian
ಬೇರೆ ಹೆಸರುಗಳುBeatking, ಸುಮ
ವಿದ್ಯಾಭ್ಯಾಸMaharashtra Institute of Technology, ಪುಣೆ
ವೃತ್ತಿನಟ, Dancer
ಸಕ್ರಿಯ ವರ್ಷಗಳು೨೦೧೨ -

ಸುಮೇದ್ ಮುದ್ಗಲ್ಕರ್ (ಜನನ : ೨ ನವೆಂಬರ್ ೧೯೯೬) ಒಬ್ಬ ಭಾರತೀಯ ಚಲನಚಿತ್ರ, ದೂರದರ್ಶನ ನಟ ಮತ್ತ ನರ್ತಕ. ಇವರು ಚಾನೆಲ್ ವಿ ಟಿವಿಯ ಧಾರಾವಾಹಿಯಾದ ದಿಲ್ ದೋಸ್ತಿಯಲ್ಲಿ ಒಂದು ನೃತ್ಯದ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಸ್ಟಾರ್‌ ಭಾರತ್‌ ನ ರಾಧಾಕೃಷ್ಣ್ ಎಂಬ ಧಾರವಾಹಿಯಲ್ಲಿ ಶ್ರೀ ಕೃಷ್ಣ ಮತ್ತು ಚಕ್ರವರ್ತಿ ಅಶೋಕ್ ಸಾಮ್ರಾಟ್‌ ನಲ್ಲಿನ ಶುಶಿಮ್ ಎಂಬ ಪಾತ್ರಕ್ಕಾಗಿ ಸುಮೇದ್‌ ಹೆಸರುವಾಸಿಯಾಗಿದ್ದಾರೆ.

ನೃತ್ಯ ವೃತ್ತಿಜೀವನ[ಬದಲಾಯಿಸಿ]

ಮುದ್ಗಲ್ಕರ್ ಎಂದಿಗೂ ತರಬೇತಿಗೆ ಒಳಗಾಗಲಿಲ್ಲ. ಅಂತರ್ಜಾಲದಲ್ಲಿ ಪ್ರದರ್ಶನಗಳನ್ನು ನೋಡುವ ಮೂಲಕ ಇವರು ನೃತ್ಯವನ್ನು ಕಲಿತಿದ್ದಾರೆ. ಇವರು ೨೦೧೨ ರಲ್ಲಿ ಮರಾಠಿ ರಿಯಾಲಿಟಿ ಶೋ ಡ್ಯಾನ್ಸ್ ಮಹಾರಾಷ್ಟ್ರ ಎಂಬುದರಲ್ಲಿ ನೃತ್ಯಾಲೋಕಕ್ಕೆ ಪಾದಾರ್ಪಿಸಿದರು ಮತ್ತು ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದರು. ಇವರು ೨೦೧೩ ರಲ್ಲಿ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಸೀಸನ್ ೪ ರಲ್ಲಿ ಭಾಗವಹಿಸಿ, ಅಲ್ಲಿ ಅವರು ಫೈನಲ್ ಗೆ ತಲುಪಿದರು. ಶ್ರುತಿ ಮರ್ಚೆಂಟ್ ರವರಿಂದ ಬೀಟ್ಕಿಂಗ್ ಎಂಬ ಬಿರುದನ್ನೂ ಪಡೆದರು.

ವೃತ್ತಿಜೀವನ[ಬದಲಾಯಿಸಿ]

ಮುದ್ಗಲ್ಕರ್ ಚಾನೆಲ್ ವಿ ನ ದಿಲ್ ದೋಸ್ತಿ ಡ್ಯಾನ್ಸ್ ಎಂಬ ಯುವ ನೃತ್ಯ ಪ್ರದರ್ಶನದಲ್ಲಿ ತಮ್ಮ ನಟನೆಯನ್ನು ಪ್ರಾರಂಭಿಸಿದರು. ಅಲ್ಲಿ ಇವರು ರಾಘವ್ (ರಾಘವೇಂದ್ರ ಪ್ರತಾಪ್) ಪಾತ್ರದಲ್ಲಿ ನಟಿಸಿದರು. ನಂತರ ಇವರು ಭಾರತೀಯ ಐತಿಹಾಸಿಕ ಧಾರವಾಹಿಯಾದ ಚಕ್ರವರ್ತಿ ಅಶೋಕ ಸಾಮ್ರಾಟ್ ನಲ್ಲಿ ಯುವರಾಜ್ ಸುಶಿಮ್ ಎಂಬ ನಕಾರಾತ್ಮಕ ಪಾತ್ರದಲ್ಲಿ ನಟಿಸಿದಕ್ಕೆ ಹೆಸರುವಾಸಿಯಾಗಿದ್ದಾರೆ.

ಸುಮೇದ್ ಮುಂದೆ ಮರಾಠಿ ಚಿತ್ರರಂಗಕ್ಕೆ ೨೦೧೬ ರ ವೆಂಟಿಲೇಟರ್ ಚಿತ್ರದಲ್ಲಿ ಕರಣ್ ಪಾತ್ರದಲ್ಲಿ ನಟಿಸಿವುದರ ಮೂಲಕ ಪ್ರವೇಶಿಸಿದರು. ನಂತರ ಇವರು ಮಾನ್ಜಾ ಎಂಬ ಧಾರವಾಹಿಯಲ್ಲಿ ಕಾಣಿಸಿಕೊಂಡರು. ಇದು ಪ್ರಮುಖ ನಟನಾಗಿ ನಟಿಸಿದ ಇವರ ಮೊದಲನೇ ಚಿತ್ರ. ಇವರು ವಿಕ್ಕಿ ಎಂಬ ಮನೋರೋಗಿಯ ಪಾತ್ರದಲ್ಲಿ ಇಲ್ಲಿ ನಟಿಸಿದ್ದಾರೆ. ೨೦೧೮ ರಲ್ಲಿ, ಸುಮೇದ್ ಬಕೆಟ್ ಲೀಸ್ಟ್ ಯಲ್ಲಿ ಸಲೀಲ್ ಪಾತ್ರವನ್ನು ನಿರ್ವಹಿಸಿದರು.

೧ ನೇ ಅಕ್ಟೋಬರ್ ೨೦೧೮ ರಿಂದ ಸ್ಟಾರ್ ಭಾರತ್‌ನಲ್ಲಿ ಪ್ರಾರಂಭವಾದ ಸ್ವಸ್ತಿಕ್ ಪಿಕ್ಚರ್‌ಸ್ ನ ರಾಧಾಕೃಷ್ಣ್ ಎಂಬ ಧಾರವಾಹಿಯಲ್ಲಿ ಸುಮೇದ್ ಭಗವಾನ್ ಕೃಷ್ಣನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇವರು ಸಂಸ್ಕೃತಿ ಬಾಲ್ಗುಡೆ ರವರ ಜೊತೆಗೆ ಬೇಖಬಾರ್ ಕಶಿ ತು ಎಂಬ ಮರಾಠಿ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ಫಿಲ್ಮೋಗ್ರಾಫಿ[ಬದಲಾಯಿಸಿ]

ವರ್ಷ ಸಿನಿಮಾ ಪಾತ್ರ ಭಾಷೆ ಟಿಪ್ಪಣಿ
೨೦೧೬ ವೆಂಟಿಲೇಟರ್ ಕರಣ್ ಮರಾಠಿ
೨೦೧೭ ಮಾನ್ಜಾ ವಿಕ್ಕಿ ಮುಖ್ಯ ಪಾತ್ರ
೨೦೧೮ ಬಕೆಟ್‌ ಲೀಸ್ಟ್ ಸಲೀಲ್

ದೂರದರ್ಶನ[ಬದಲಾಯಿಸಿ]

ವರ್ಷ ಪ್ರದರ್ಶನ ಪಾತ್ರ ಚಾನೆಲ್ ಟಿಪ್ಪಣಿ
೨೦೧೪ ದಿಲ್ ದೋಸ್ತಿ ಡಾನ್ಸ್ ರಾಘವೇಂದ್ರ ಪ್ರತಾಪ್ ಚಾನೆಲ್ ವಿ
೨೦೧೩-೨೦೧೪ ಡಾನ್ಸ್ ಇಂಡಿಯಾ ಡಾನ್ಸ್ ೪ ನೇ ಸರಣಿ ಸ್ಪರ್ಧಿ ಝೀ ಟಿವಿ
೨೦೧೫-೨೦೧೬ ಚಕ್ರವರ್ತಿ ಅಶೋಕ್ ಸಾಮ್ರಾಟ್ ಸುಶಿಮ್ ಕಲರ್ಸ್ ಟಿವಿ ನಕಾರಾತ್ಮಕ ಪಾತ್ರ
೨೦೧೮ - ಪ್ರಸ್ತುತ ರಾಧಾಕೃಷ್ಣ್ ಶ್ರೀ ಕೃಷ್ಣ ಸ್ಟಾರ್ ಭಾರತ್ ಮುಖ್ಯ ಪಾತ್ರ
೨೦೧೯ ಜಗ್ ಜನನಿ ವೈಷ್ಣೋ ದೇವಿ - ಕಹಾನಿ ಮಾತ ರಾನಿ ಕಿ ನಿರೂಪಕ ಸ್ಟಾರ್ ಭಾರತ್ ವಾಯ್ಸ್ ಓವರ್

ಪ್ರಶಸ್ತಿಗಳು ಮತ್ತು ನಾಮನಿರ್ದೇಶನ[ಬದಲಾಯಿಸಿ]

ಮಹಾರಾಷ್ಟ್ರಚ ಫೇವರೇಟ್ ಕಾನ್ ಅವಾರ್ಡ್ಸ್ ೨೦೧೭ ರಲ್ಲಿ ಮಾನ್ಜಾ ಧಾರವಾಹಿನಲ್ಲಿನ ಪಾತ್ರಕ್ಕಾಗಿ ಅತ್ಯುತ್ತಮ ನಟನ ವರ್ಗದಲ್ಲಿ ನಾಮನಿರ್ದೇಶನಗೊಂಡಿದ್ದರು. ರೇಡಿಯೊ ಸಿಟಿ ಸಿನಿ ಅವಾರ್ಡ್ಸ್ ನಲ್ಲಿ ಇವರು ಅತ್ಯುತ್ತಮ ನಟ, ಬೆಸ್ಟ್ ಮೇಲ್ ಡೆಬ್ಯೂಟ್ ಮತ್ತು ಮಾನ್ಜಾ ದಲ್ಲಿನ ಪಾತ್ರಕ್ಕಾಗಿ ಅತ್ಯುತ್ತಮ ಖಳನಾಯಕ ಎಂದಾಗಿ ಮೂರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಸುಮೇದ್ ತಮ್ಮ ಮಾನ್ಜಾ ಚಿತ್ರಕ್ಕಾಗಿ ೨೦೧೮ ರಲ್ಲಿ ಸಂಸ್ಕೃತಿ ಕಲಾದರ್ಪಣ್ ಅವಾರ್ಡ್ಸ್ ಮತ್ತು ಮರಾಠಿ ಫಿಲ್ಮ್‌ಫೇರ್ ಅವಾರ್ಡ್ಸ್ ನಲ್ಲಿ ಅತ್ಯುತ್ತಮ ನಟನ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದರು. ರ ಹೊಸ ಮುಖ ಎಬಿಪಿ ಟೆಲಿಬ್ರೇಶನ್ ಪ್ರಶಸ್ತಿಗಳು.

೨೦೧೯ ರಲ್ಲಿ, ಇವರು ರಾಧಾಕೃಷ್ಣ ಧಾರವಾಹಿಯ ತಮ್ಮ ಸಹನಟಿ ಮಲ್ಲಿಕಾ ಸಿಂಗ್ ರವರೊಂದಿಗೆ ಅತ್ಯುತ್ತಮ ತೆರೆಯ ದಂಪತಿ (ಜ್ಯೂರಿ) ಗಾಗಿ ಭಾರತೀಯ ಟೆಲಿ ಪ್ರಶಸ್ತಿಯನ್ನು ಗೆದ್ದರು.[೧] ನಂತರ, ಅದೇ ವರ್ಷದಲ್ಲಿ, ರಾಧಾಕೃಷ್ಣ್ ನಲ್ಲಿನ ಕೃಷ್ಣನ ಪಾತ್ರಕ್ಕಾಗಿ ಅತ್ಯುತ್ತಮ ನಟನಿಗಾಘಿ ಗೋಲ್ಡ್ ಅವಾರ್ಡ್[೨][೩] ಗೆದ್ದರು .ಅಲ್ಲದೆ, ಇವರು ಕೃಷ್ಣನ ಪಾತ್ರಕ್ಕಾಗಿ ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟನಿಗಾಗಿ ೨೦೧೯ ರ ಏಷ್ಯನ್ ಅಕಾಡೆಮಿ ಕ್ರಿಯೇಟಿವ್ ಅವಾರ್ಡ್ಸ್ ನಲ್ಲಿ ಭಾರತದಿಂದ ಪ್ರಾದೇಶಿಕ ವಿಜೇತರಾಗಿದ್ದರು.[೪] ಇವರು ೨೦೧೯ ರ ನ್ಯೂಸ್ ಇಂಡಿಯಾ 18[೫] ಸ್ಟಾರ್ಡಮ್ ಪ್ರಶಸ್ತಿಗಳಲ್ಲಿ ಮಲ್ಲಿಕಾ ಸಿಂಗ್ ರವರೊಂದಿಗೆ ಮೋಸ್ಟ್ ಪಾಪ್ಯುಲರ್ ಜೋಡಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. "Indian Telly Awards 2019 Winners: Complete list of winners". timesofindia.indiatimes.com. Retrieved 4 July 2020.
  2. "ZEE5". comingsoon.zee5.com. Retrieved 4 July 2020.
  3. https://www.youtube.com/watch?v=n3Pn1CThUak
  4. "2019 REGIONAL WINNERS". Asian Academy Creative Awards. Retrieved 4 July 2020.
  5. "News18 India Stardom Awards 2019: Stars Scorch the Red Carpet". News18. 7 November 2019. Retrieved 4 July 2020.