ಸದಸ್ಯ:Vijay Vihar/ನನ್ನ ಪ್ರಯೋಗಪುಟ/2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೇಮ್ಸ್ ವ್ಯಾಟ್ಸನ್


ಜೇಮ್ಸ್ ವ್ಯಾಟ್ಸನ್

ಜೇಮ್ಸ್ ಡೀವಿ ವಾಟ್ಸನ್ (ಏಪ್ರಿಲ್ ೬, ೧೯೨೮) ಅವರು ಅಮೇರಿಕದ ಪ್ರಖ್ಯಾತ ತಳಿಶಾಸ್ತ್ರಜ್ಞ, ಪ್ರಾಣಿಶಾಸ್ತ್ರಜ್ಞ ಜೊತೆಗೆ ಆಣ್ವಿಕ ಜೀವಶಾಸ್ತ್ರಜ್ಞ ಕೂಡ ಹೌದು. ಇವರು ೧೯೫೮ ರಲ್ಲಿ ಫ್ರಾನ್ಸಿಸ್ ಕಿಕ್ ಮತ್ತು ರೋಸಲಿಂಡ್ ಅವರ ಸಹಯೋಗದೊಂದಿಗೆ ನಡೆಸಿದ ಡಬಲ್ ಸ್ಟ್ರಾಂಡೆಡ್ ಡಿ ಎನ್ ಎ ಹಾಗೂ "ಮಾಲಿಕ್ಯುಲಾರ್ ಸ್ಟ್ರಕ್ಚರ್ ಆಫ್ ನ್ಯೂಕ್ಲಿಕ್ ಆಸಿಡ್ಸ್ ಅಂಡ್ ಇಟ್ಸ್ ಸಿಗ್ನಿಫಿಕೇನ್ಸ್ ಫಾರ್ ಇನ್ಫಾರ್ಮೇಷನ್ ಟ್ರಾನ್ಸ್ಫರ್ ಇನ್ ಲೀವಿಂಗ್ ಆರ್ಗಾನಿಸ್ಮಸ್"ಎಂಬ ಪ್ರಬಂಧವನ್ನು ಮಂಡಿಸಿದ್ದಕ್ಕೆ ಇವರಿಗೆ ೧೯೬೨ರ ಶಾರೀರಿಕ ಹಾಗೂ ಔಷಧ ವಿಭಾಗದಡಿಯಲ್ಲಿ ನೊಬೆಲ್ ಪ್ರಶಸ್ತಿ ದೊರೆತಿದೆ.

ಆರಂಭಿಕ ಜೀವನ ಮತ್ತು ವಿದ್ಯಾಭ್ಯಾಸ[ಬದಲಾಯಿಸಿ]

ಜೇಮ್ಸ್ ಡೀವಿ ವ್ಯಾಟ್ಸನ್ ಅವರು ಏಪ್ರಿಲ್ ೬, ೧೯೨೮ರಂದು ಚಿಕಾಗೋ ದಲ್ಲಿ ಜನಿಸಿದರು , ಇವರ ತಂದೆ ಜೇಮ್ಸ್ ಡಿ ವ್ಯಾಟ್ಸನ್ ಹಾಗು ತಾಯಿ ಜೀನ್ ( ಮಿಶೇಲ್ ) ಅವರ ಏಕೈಕ ಪುತ್ರನಾಗಿ ಬೆಳೆಯುತ್ತಾರೆ. ವ್ಯಾಟ್ಸನ್ ರವರು ಚಿಕಾಗೋ ದ ದಕ್ಷಿಣ ಭಾಗದ ಸಾರ್ವಜನಿಕ ಶಾಲೆಗಳಲ್ಲಿ ಅಧ್ಯಯನ ಮಾಡಿದರು ಅವುಗಳೆಂದರೆ ಹೋರೇಸ್ ಗ್ರಾಮರ್ ಶಾಲೆ ಹಾಗು ಸೌತ್ ಷೋರ್ ಪ್ರೌಢಶಾಲೆ ಯ ವಿದ್ಯಾಭ್ಯಾಸ ಮುಗಿಸಿದರು. ಅವರು ತಂದೆಯ ಬಳಿಯಿಂದ ಕಲಿತ ಹವ್ಯಾಸ ಎಂದರೆ 'ಪಕ್ಷಿವೀಕ್ಷಣೆ' ಅದರಲ್ಲಿ ಅವರ ಬಹಳ ಕುತೂಹಲದಿಂದ ಕೂಡಿರುತ್ತಿತ್ತು. ಇದರ ಪ್ರಭಾವದಿಂದ ಇವರು ಮುಂದಿನ ದಿನಗಳಲ್ಲಿ ಪಕ್ಷಿಶಾಸ್ತೃ ಓದಲು ನಿರ್ಧರಿಸಿದರು. ವ್ಯಾಟ್ಸನ್ ಅವರು 'ಕ್ವಿಜ್ ಕಿಡ್ಸ್' ಎಂಬ ರೇಡಿಯೋ ಷೋ ನಲ್ಲಿ ಭಾಗವಹಿಸಿ ಗೆದ್ದು 'ಲಿಬೆರಲ್ ಪಾಲಿಸಿ ಯೂನಿವರ್ಸಿಟಿ' ಯ ಅಧ್ಯಕ್ಷರಾದ ರಾಬರ್ಟ್ ಹುಚಿನ್ಸ್ ಅವರ ಸಹಾಯದಿಂದ ಶಿಷ್ಯವೇತನ ಪಡೆದು ಕೇವಲ ೧೫ನೇ ವಯಸ್ಸಿಗೆ ಚಿಕಾಗೋ ವಿಶ್ವವಿದ್ಯಾಲಯ ದಲ್ಲಿ ದಾಖಲುಗೊಂಡರು.


೧೯೪೬ರಲ್ಲಿ ಎರ್ವಿನ್ ಶ್ರಾಡಿಂಜರ್ ಎಂಬ ಖ್ಯಾತ ಲೇಖಕರು ಬರೆದಿರುವ 'ವಾಟ್ ಇಸ್ ಲೈಫ್?' ಎಂಬ ಪುಸ್ತಕವನ್ನು ಓದಿದ ನಂತರ ವ್ಯಾಟ್ಸನ್ ಅವರು ತಮ್ಮ ಗುರಿಯನ್ನು 'ಪಕ್ಷಿಶಾಸ್ತ್ರ' ದಿಂದ 'ತಳಿಶಾಸ್ತ್ರ' ಕ್ಕೆ ಬದಲಾಯಿಸುತ್ತಾರೆ. ಇವರು ಚಿಕಾಗೋ ವಿಶ್ವವಿದ್ಯಾಲಯದಿಂದ ೧೯೪೭ರಲ್ಲಿ 'ಪ್ರಾಣಿ ಶಾಸ್ತ್ರ' ಬಿ ಎಸ್ ಪದವಿ ಪಡೆದು ನಂತರ ಇಂಡಿಯಾನ ವಿಶ್ವವಿದ್ಯಾಲಯಕ್ಕೆ ಸೇರಿಕೊಳ್ಳುತ್ತಾರೆ ಅಲ್ಲಿಂದ ತಮ್ಮ ಮಾರ್ಗದರ್ಶಕರಾದ 'ಸಲ್ವಂಡರ್ ಲುರಿಯ' ಅವರ ಸಹಾಯದಿಂದ ೧೯೫೦ ರಲ್ಲಿ ಪಿಹೆಚ್.ಡಿ ಪದವಿ ಪಡೆದು ಇಂಡಿಯಾನ ವಿಶ್ವವಿದ್ಯಾಲಯ ದಿಂದ ಹೊರ ನಡೆಯುತ್ತಾರೆ.

1953 ರಲ್ಲಿ ಲಂಡನ್ ನ್ಯಾಷ್ನಲ್ ಸೈನ್ಸ್ ಮ್ಯೂಸಿಯಂನಲ್ಲಿ ಕ್ರಿಕ್ ಮತ್ತು ವ್ಯಾಟ್ಸನ್ ನಿರ್ಮಿಸಿದ ಡಿಎನ್ಎ ಮಾದರಿ.

ಸಂಶೋಧನೆ ಹಾಗೂ ವೃತ್ತಿ ಜೀವನ[ಬದಲಾಯಿಸಿ]

ಲುರಿಯ, ಡೆಲ್ಬರ್ಕ್ ಮತ್ತು ಫಾಜ್ ಗ್ರೂಪ್

ವಾಸ್ತವವಾಗಿ ವ್ಯಾಟ್ಸನ್ ಅವರು ಆಣ್ವಿಕಜೀವಶಾಸ್ತ್ರ ಕ್ಕೆ ಬರಲು ಕಾರಣ ಅವರ ಪಿಹೆಚ್.ಡಿ ಪದವಿಗೆ ಮಾರ್ಗದರ್ಶಕರಾಗಿದ್ದ ಸಲ್ವಂಡರ್ ಲುರಿಯ. ಲುರಿಯ ಅವರೂ ಸಹ ತಮ್ಮ 'ಲುರಿಯ-ಡೆಲ್ಬ್ರಿಕ್ ಎಕ್ಸ್ಪೆ ರಿಮೆಂಟ್'ಗೆ ೧೯೬೯ರಲ್ಲಿ ನೊಬೆಲ್ ಪ್ರಶಸ್ತಿ ಪಡೆದರು. ಇವರ ಈ ಸಂಶೋಧನೆಯ ಭಾಗವಾಗಿ ವ್ಯಾಟ್ಸನ್ ಅವರು ಕೂಡ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದರು. ಈ ಸಂಶೋಧನೆಯಲ್ಲಿ ಅವರು ವೈರಾಣುಗಳಿಂದ ಸೋಂಕಿಗೊಳಗಾದ ಬ್ಯಾಕ್ಟೀರಿಯಾದ ಉಪಯೋಗದ ಬಗ್ಗೆ ಕುರಿತು ಅಧ್ಯಯನ ನಡೆಸಿದರು ಇದನ್ನು ಬ್ಯಾಕ್ಪೀರಿಯೋಫಾಜ್ ಎಂದು ಕರೆಯುತ್ತಾರೆ. ವ್ಯಾಟ್ಸನ್ ಮತ್ತು ಮ್ಯಾಕ್ಸ್ ಡೆಲ್ಬ್ರಿಕ್ ಅವರು ಈ ಸಂಶೋಧನೆಯ ಮುಖ್ಯಸ್ಥರಾಗಿದ್ದರು. ಬಳಿಕ ಅವರು ಕೋಪನ್ಹ್ಯಾಗನ್ ವಿಶ್ವವಿದ್ಯಾಲಯಗೆ ೧೯೫೦ರ ಸೆಪ್ಟೆಂಬರ್ ನಲ್ಲಿ ಸೇರಿಕೊಂಡು ಅಲ್ಲಿ ಕೆಲದಿನಗಳ ಕಾಲ ಸಂಶೋಧನಾ ವಿಭಾಗದಲ್ಲಿ ಕಾರ್ಯನಿರ್ವಹಿಸಿದರು, ಇದು ಇವರ ಪೋಸ್ಟ್ ಡಾಕ್ಟೋರಲ್ ಸಂಶೋಧನೆ ಆಗಿತ್ತು.

ಡಬಲ್ ಹೆಲಿಕ್ಸ್ ಡಿ ಏನ್ ಎ ಆವಿಷ್ಕಾರ.

೧೯೫೩ರ ಮಾರ್ಚ್ ತಿಂಗಳ ಮಧ್ಯದಲ್ಲಿ ರೋಸಲಿಂಡ್ ಫ್ರಾಂಕ್ಲಿನ್ ಮತ್ತು ಮಾರಿಸ್ ವೆಲ್ಕಿಂಸ್ ಅವರ ಸಹಾಯದೊಂದಿಗೆ 'ವ್ಯಾಟ್ಸನ್-ಕ್ರಿಕ್ ಡಬಲ್ ಹೆಲಿಕ್ಸ್ ಸ್ಟ್ರಕ್ಚರ್ ಆಫ್ ಡಿ ಏನ್ ಎ' ಯನ್ನು ಆವಿಷ್ಕರಿಸಿದರು. ಈ ಆವಿಷ್ಕಾರದ ಬಗ್ಗೆ ಕುರಿತು ' ಸರ್ ಲಾರೆನ್ಸ್ ಬ್ರಾಗ್' ನಿರ್ದೇಶಕರು, ಕಾವೇಂಡಿಷ್ ಪ್ರಯೋಗಾಲಯ. (ವ್ಯಾಟ್ಸನ್ ಮತ್ತು ಕ್ರಿಕ್ ಆವಿಷ್ಕಾರ ಮಾಡಿದ ಪ್ರಯೋಗಾಲಯ) ಅವರು ಏಪ್ರಿಲ್ ೮, ೧೯೫೩ ರಂದು ಬೆಲ್ಗಿಯಂ ನಲ್ಲಿ ನಡೆದ 'ಸೂಲ್ವಯ್ ಕಾನ್ಫೆರೆನ್ಸ್ ಆನ್ ಪ್ರೋಟೀನ್ಸ್' ನಲ್ಲಿ ಸಾರ್ವಜನಿಕವಾಗಿ ಘೋಷಿಸಿದರು ಆದರೆ ಇದು ಪತ್ರಿಕೆಗಳಲ್ಲಿ ಪ್ರಕಟವಾಗಲಿಲ್ಲ ಬಳಿಕ ವ್ಯಾಟ್ಸನ್ ಮತ್ತು ಕ್ರಿಕ್ ಸೇರಿ "ಮಾಲಿಕ್ಯುಲಾರ್ ಸ್ಟ್ರಕ್ಚರ್ ಆಫ್ ನ್ಯೂಕ್ಲಿಕ್ ಆಸಿಡ್ಸ್ ಅಂಡ್ ಇಟ್ಸ್ ಸಿಗ್ನಿಫಿಕೇನ್ಸ್ ಫಾರ್ ಇನ್ಫಾರ್ಮೇಷನ್ ಟ್ರಾನ್ಸ್ಫರ್ ಇನ್ ಲೀವಿಂಗ್ ಆರ್ಗಾನಿಸ್ಮಸ್" ಎಂಬ ಸಂಶೋಧನಾ ಪತ್ರಿಕೆಯನ್ನು 'ನೇಚರ್' ಎಂಬ ವೈಜ್ಞಾನಿಕ ಪತ್ರಿಕೆಗೆ ಮುದ್ರಿಸಲು ನೀಡಿ ತಮ್ಮ ಪೇಟೆಂಟ್ ಕಾಯ್ದಿರಿಸಿಕೊಂಡರು.

ಹಾರ್ವರ್ಡ್ ವಿಶ್ವವಿದ್ಯಾಲಯ[ಬದಲಾಯಿಸಿ]

೧೯೫೬ ರಲ್ಲಿ ವ್ಯಾಟ್ಸನ್ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಜೀವಶಾಸ್ತ್ರ ವಿಭಾಗದಲ್ಲಿ ಸ್ಥಾನ ಪಡೆದರು. ಹಾರ್ವರ್ಡ್ನಲ್ಲಿ ಅವರ ಕೆಲಸವು 'ಆರ್ ಎನ್ ಎ ಮತ್ತು ಆನುವಂಶಿಕತೆ ಮಾಹಿತಿಯ ವರ್ಗಾವಣೆಯಲ್ಲಿ ಅದರ ಪಾತ್ರ'ಇದರ ಮೇಲಾಗಿತ್ತು. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ, ವ್ಯಾಟ್ಸನ್ ನೊಬೆಲ್ ಪ್ರಶಸ್ತಿಯನ್ನು ಗೆದ್ದ ನಂತರ ವೇತನದಲ್ಲಿ $ ೧೦೦೦ ಹೆಚ್ಚಳವನ್ನು ನಿರಾಕರಿಸಲಾಗಿದೆ ಎಂದು ವ್ಯಾಟ್ಸನ್ ಹೇಳಿಕೊಂಡಿದ್ದಾನೆ. ಜೀವವಿಜ್ಞಾನ ದಿಂದ ಆಣ್ವಿಕ ಜೀವವಿಜ್ಞಾನದ ಕಡೆಗೆ ಅವರು ಗಮನವನ್ನು ಕೇಂದ್ರೀಕರಿಸಿದರು, ಪರಿಸರ ವಿಜ್ಞಾನ, ಅಭಿವೃದ್ಧಿ ಜೀವಶಾಸ್ತ್ರ, ಟ್ಯಾಕ್ಸಾನಮಿ, ಶರೀರವಿಜ್ಞಾನ, ಮುಂತಾದ ವಿಭಾಗಗಳು ಸ್ಥಗಿತಗೊಂಡಿತು ಮತ್ತು ಆಣ್ವಿಕ ಜೀವಶಾಸ್ತ್ರ ಮತ್ತು ಜೀವರಸಾಯನಶಾಸ್ತ್ರದ ಆಧಾರವಾಗಿರುವ ವಿಭಾಗಗಳು ಒಮ್ಮೆ ಮಾತ್ರ ಪ್ರಗತಿ ಸಾಧಿಸಬಹುದೆಂದು ತಿಳಿಸಿದರು. ದೆ. ೧೯೬೮ ರವರೆಗೆ ಕೋಲ್ಡ್ ಸ್ಪ್ರಿಂಗ್ ಹಾರ್ಬರ ಪ್ರಯೋಗಾಲಯದ ನಿರ್ದೇಶಕತ್ವವನ್ನು ವಹಿಸಿಕೊಂಡರೂ, ವ್ಯಾಟ್ಸನ್ ೧೯೮೮ರವರೆಗೂ ಹಾರ್ವರ್ಡ್ ಬೋಧನಾ ವಿಭಾಗದ ಸದಸ್ಯರಾಗಿದ್ದರು. ಹಾರ್ವರ್ಡ್ನಲ್ಲಿ ವ್ಯಾಟ್ಸನ್ರ ವೈಜ್ಞಾನಿಕ ಕೊಡುಗೆಗಳ ಬಗ್ಗೆ ಸ್ವಲ್ಪ ಮಟ್ಟಿಗೆ ಮಿಶ್ರಣವಾಗಿದೆ. ಹಾರ್ವರ್ಡ್ನಲ್ಲಿ ತನ್ನ ಎರಡು ದಶಕಗಳಲ್ಲಿ ಅವರ ಅತ್ಯಂತ ಗಮನಾರ್ಹ ಸಾಧನೆಗಳು ಆ ಸಮಯದಲ್ಲಿ ಅವರು ಕಂಡುಹಿಡಿದಿದ್ದಕ್ಕಿಂತ ಹೆಚ್ಚಾಗಿ ವಿಜ್ಞಾನದ ಬಗ್ಗೆ ಬರೆದಿದ್ದಾರೆ.

ಪ್ರಕಟಣೆಗೊಂಡ ಪುಸ್ತಕಗಳು[ಬದಲಾಯಿಸಿ]

  • ೧.ದಿ ಮಾಲಿಕ್ಯುಲರ್ ಬಯಾಲಜಿ ಆಫ್ ದಿ ಜೀನ್.
  • ೨.ಮಾಲಿಕ್ಯುಲರ್ ಬಯಾಲಜಿ ಆಫ್ ದ ಸೆಲ್.
  • ೩.ಪುನಸ್ಸಂಯೋಜಿತ ಡಿಎನ್ಎ.
  • ೪.ದ ಡಬಲ್ ಹೆಲಿಕ್ಸ್

೧೯೬೮ ರಲ್ಲಿ ವ್ಯಾಟ್ಸನ್ ದಿ ಡಬಲ್ ಹೆಲಿಕ್ಸ್ ಅನ್ನು ಬರೆದರು, ಅವರ ಆಧುನಿಕ ಗ್ರಂಥಾಲಯ ಮಂಡಳಿಯು ಅವರ ೧೦೦ ನೆಯ ಅತ್ಯುತ್ತಮ ನಾನ್ಫಿಕ್ಷನ್ಸ್ ಪುಸ್ತಕಗಳಲ್ಲಿ ಏಳನೇ ಸ್ಥಾನದಲ್ಲಿದೆ.ಡಿಎನ್ಎ ರಚನೆಯ ಆವಿಷ್ಕಾರವಲ್ಲದೆ, ಅವರ ಕೆಲಸವನ್ನು ಸುತ್ತುವರೆದಿರುವ ವ್ಯಕ್ತಿತ್ವಗಳು, ಘರ್ಷಣೆಗಳು ಮತ್ತು ವಿವಾದಗಳ ಬಗ್ಗೆ ಕೆಲವೊಮ್ಮೆ ನೋವಿನ ಕಥೆ ಈ ಪುಸ್ತಕದಲ್ಲಿದೆ. ವ್ಯಾಟ್ಸನ್ ಅವರ ಮೂಲ ಶೀರ್ಷಿಕೆ "ಹಾನೆಸ್ಟ್ ಜಿಮ್" ಆಗಿದ್ದು, ಆ ಪುಸ್ತಕವು ಅವನ ದೃಷ್ಟಿಕೋನದಿಂದ ಡಬಲ್ ಹೆಲಿಕ್ಸ್ನ ಆವಿಷ್ಕಾರವನ್ನು ವಿವರಿಸುತ್ತದೆ ಮತ್ತು ಆ ಸಮಯದಲ್ಲಿ ಅವನ ಅನೇಕ ಖಾಸಗಿ ಭಾವನಾತ್ಮಕ ಅನಿಸಿಕೆಗಳನ್ನು ಒಳಗೊಂಡಿತ್ತು. ಪುಸ್ತಕದ ಪ್ರಕಟಣೆಯ ಸುತ್ತ ಕೆಲವು ವಿವಾದಗಳು. ವ್ಯಾಟ್ಸನ್ ಅವರ ಪುಸ್ತಕ ಮೂಲತಃ ಹಾರ್ವರ್ಡ್ ಯುನಿವರ್ಸಿಟಿ ಪ್ರೆಸ್ನಿಂದ ಪ್ರಕಟಿಸಲ್ಪಟ್ಟಿತು, ಆದರೆ ಫ್ರಾನ್ಸಿಸ್ ಕ್ರಿಕ್ ಮತ್ತು ಮಾರಿಸ್ ವಿಲ್ಕಿನ್ಸ್ ಇತರರು ಇದರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು. ವ್ಯಾಟ್ಸನ್ ಅವರ ವಿಶ್ವವಿದ್ಯಾನಿಲಯವು ಯೋಜನೆಯನ್ನು ಕೈಬಿಟ್ಟಿತು ಮತ್ತು ಪುಸ್ತಕವನ್ನು ವಾಣಿಜ್ಯಿಕವಾಗಿ ಪ್ರಕಟಿಸಲಾಯಿತು.

ಇತರೆ ಅಂಗಸಂಸ್ಥೆ[ಬದಲಾಯಿಸಿ]

ವ್ಯಾಟ್ಸನ್ ಅವರು ಯುನೈಟೆಡ್ ಬಯೋಮೆಡಿಕಲ್, ಇಂಕ್. ನಿರ್ದೇಶಕ ಮಂಡಳಿಯ ಮಾಜಿ ಸದಸ್ಯರಾಗಿದ್ದಾರೆ, ಇದನ್ನು ಚಾಂಗ್ ಯಿ ವಾಂಗ್ ಸಂಸ್ಥಾಪಿಸಿದರು. ೧೯೯೯ ರಲ್ಲಿ ಮಂಡಳಿಯಿಂದ ನಿವೃತ್ತಿ ಹೊಂದಿದರು. ೨೦೦೭ ರ ಜನವರಿಯಲ್ಲಿ ವ್ಯಾಟ್ಸನ್ ಚಾಂಪಲಿಮಾಡ್ ಫೌಂಡೇಶನ್ನ ಅಧ್ಯಕ್ಷ ಲಿಯೊನರ್ ಬೆಲೆಜಾ ಅವರ ಆಹ್ವಾನವನ್ನು ಸ್ವೀಕರಿಸಿ ಅಲೆನ್ ಇನ್ಸ್ಟಿಟ್ಯೂಟ್ ಫಾರ್ ಬ್ರೇನ್ ಸೈನ್ಸ್ಗೆ ವ್ಯಾಟ್ಸನ್ ಇನ್ಸ್ಟಿಟ್ಯೂಟ್ ಸಲಹೆಗಾರರಾದರು

ವೈಯಕ್ತಿಕ ಜೀವನ[ಬದಲಾಯಿಸಿ]

ವ್ಯಾಟ್ಸನ್ ನಾಸ್ತಿಕ.೨೦೦೩ ರಲ್ಲಿ, ಅವರು ಹ್ಯೂಮನಿಸ್ಟಿಕ್ ಮ್ಯಾನಿಫೆಸ್ಟೋಗೆ ಸಹಿ ಮಾಡಿದ 22 ನೊಬೆಲ್ ಪ್ರಶಸ್ತಿ ವಿಜೇತರುಗಳಲ್ಲಿ ಒಬ್ಬರಾಗಿದ್ದರು.

ಮದುವೆ ಮತ್ತು ಕುಟುಂಬ[ಬದಲಾಯಿಸಿ]

ವ್ಯಾಟ್ಸನ್ ಎಲಿಜಬೆತ್ ಲೂಯಿಸ್ನನ್ನು ೧೯೬೮ ರಲ್ಲಿ ವಿವಾಹವಾದರು.ಇವರಿಗೆ ಇಬ್ಬರು ಪುತ್ರರು, ರುಫುಸ್ ರಾಬರ್ಟ್ ವ್ಯಾಟ್ಸನ್ ಮತ್ತು ಡಂಕನ್ ಜೇಮ್ಸ್ ವ್ಯಾಟ್ಸನ್.

ಪ್ರಶಸ್ತಿಗಳು ಮತ್ತು ಗೌರವ[ಬದಲಾಯಿಸಿ]

ವ್ಯಾಟ್ಸನ್ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ:

  • ಬೇಸಿಕ್ ಮೆಡಿಕಲ್ ರಿಸರ್ಚ್,೧೯೬೦ ರ ಆಲ್ಬರ್ಟ್ ಲಸ್ಕರ್ ಪ್ರಶಸ್ತಿ.
  • ೧೯೮೫ ರಲ್ಲಿ ಇ ಎಮ್ ಬಿ ಒ ಸದಸ್ಯತ್ವ
  • ೨೦೦೧ರಲ್ಲಿ ಬೆಂಜಮಿನ್ ಫ್ರ್ಯಾಂಕ್ಲಿನ್ ಮೆಡಲ್ ಫಾರ್ ಡಿಸ್ಟಿಂಗ್ವಿಶ್ಡ್ ಅಚೀವ್ಮೆಂಟ್ ಇನ್ ದಿ ಸೈನ್ಸಸ್.
  • ಚಾರ್ಲ್ಸ್ ಡಾನಾ ಪ್ರಶಸ್ತಿ,೧೯೯೪.
  • ರಾಯಲ್ ಸೊಸೈಟಿಯ ಕೋಪ್ಲಿ ಮೆಡಲ್,೧೯೯೩
  • ಸಿ ಎಸ್ ಹೆಚ್ ಎಲ್ ಹೆಲಿಕ್ಸ್ ಮೆಡಲ್ ಹೊನೊರೆ,೨೦೦೮
  • ೧೯೬೦ ರ ಜೈವಿಕ ರಸಾಯನಶಾಸ್ತ್ರದಲ್ಲಿ ಎಲಿ ಲಿಲ್ಲಿ ಪ್ರಶಸ್ತಿ.
  • ನ್ಯೂಯಾರ್ಕ್ ಅಕಾಡೆಮಿ ಆಫ್ ಸೈನ್ಸಸ್ ಫೆಲೋ.
  • ಗೈರ್ಡ್ನರ್ ಫೌಂಡೇಶನ್ ಅಂತರರಾಷ್ಟ್ರೀಯ ಪ್ರಶಸ್ತಿ, ೨೦೦೨
  • ಹೀಲ್ಡ್ ಪ್ರಶಸ್ತಿ.
  • ಗೌರವಾನ್ವಿತ ಫೆಲೋ,ಹೇಸ್ಟಿಂಗ್ಸ್ ಸೆಂಟರ್, ಸ್ವತಂತ್ರ ಜೈವಿಕ ನೀತಿ ಸಂಶೋಧನಾ ಸಂಸ್ಥೆ.
  • ಗೌರವ ನೈಟ್ ಕಮ್ಯಾಂಡರ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ (ಕೆಬಿಇ),೨೦೦೨
  • ಹೋಪ್ ಫಂಡ್ಸ್ ಫಾರ್ ಕ್ಯಾನ್ಸರ್ ರಿಸರ್ಚ್: ವೈಜ್ಞಾನಿಕ ಸಾಧನೆಗಾಗಿ ಎಕ್ಸಲೆನ್ಸ್ನ ಜೇಮ್ಸ್ ಡಿ. ವ್ಯಾಟ್ಸನ್ ಪ್ರಶಸ್ತಿ ೨೦೧೪
  • ಐರಿಶ್ ಅಮೇರಿಕಾ ಹಾಲ್ ಆಫ್ ಫೇಮ್,
  • ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆಯ ಜಾನ್ ಕಾಲಿನ್ಸ್ ವಾರೆನ್ ಪ್ರಶಸ್ತಿ
  • ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸಸ್ನಿಂದ ಪರಮಾಣು ಜೀವಶಾಸ್ತ್ರದಲ್ಲಿ ಜಾನ್ ಜೆ. ಕಾರ್ಟಿ ಅವಾರ್ಡ್
  • ಉತ್ಕೃಷ್ಟತೆಗಾಗಿ ಕೌಲ್ ಫೌಂಡೇಶನ್ ಪ್ರಶಸ್ತಿ.
  • ಲಿಬರ್ಟಿ ಮೆಡಲ್, ೨೦೦೦
  • ಲೋಮೊನೋಸೊವ್ ಚಿನ್ನದ ಪದಕ, ೧೯೯೪
  • ಲೊಟೋಸ್ ಕ್ಲಬ್ ಮೆಡಲ್ ಆಫ್ ಮೆರಿಟ್,೨೦೦೪
  • ಮೆಂಡಲ್ ಮೆಡಲ್, ೨೦೦೮.
  • ರಾಷ್ಟ್ರೀಯ ಜೈವಿಕ ತಂತ್ರಜ್ಞಾನ ವೆಂಚರ್ ಪ್ರಶಸ್ತಿ
  • ನ್ಯಾಷನಲ್ ಮೆಡಲ್ ಆಫ್ ಸೈನ್ಸ್,೧೯೯೭
  • ನ್ಯೂಯಾರ್ಕ್ ಅಕಾಡೆಮಿ ಆಫ್ ಮೆಡಿಸಿನ್ ಪ್ರಶಸ್ತಿ,೧೯೯೯
  • ಶರೀರಶಾಸ್ತ್ರ ಅಥವಾ ಔಷಧಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ,೧೯೬೨
  • ಒತ್ಮರ್ ಚಿನ್ನದ ಪದಕ, ೨೦೦೫.
  • ಅಧ್ಯಕ್ಷೀಯ ಪದಕ ಸ್ವಾತಂತ್ರ್ಯ,೧೯೭೭
  • ರಿಸರ್ಚ್ ಕಾರ್ಪೊರೇಶನ್ ಪ್ರೈಜ್
  • ಯುನಿವರ್ಸಿಟಿ ಆಫ್ ಚಿಕಾಗೋ ಅಲುಮ್ನಿ ಮೆಡಲ್,೧೯೯೮
  • ಯೂನಿವರ್ಸಿಟಿ ಕಾಲೇಜ್ ಲಂಡನ್ ಪ್ರಶಸ್ತಿ,೨೦೦೨

ವೃತ್ತಿಪರ ಮತ್ತು ಗೌರವಾನ್ವಿತ ಸಂಬಂಧಗಳು[ಬದಲಾಯಿಸಿ]

  • ಅಮೆರಿಕನ್ ಅಕಾಡೆಮಿ ಆಫ್ ಆರ್ಟ್ಸ್ ಅಂಡ್ ಸೈನ್ಸಸ್
  • ಅಮೆರಿಕನ್ ಅಸೋಸಿಯೇಶನ್ ಫಾರ್ ಕ್ಯಾನ್ಸರ್ ರಿಸರ್ಚ್
  • ಅಮೆರಿಕನ್ ಫಿಲಾಸಫಿಕಲ್ ಸೊಸೈಟಿ
  • ಅಮೇರಿಕನ್ ಸೊಸೈಟಿ ಆಫ್ ಬಯೊಲಾಜಿಕಲ್ ಕೆಮಿಸ್ಟ್ಸ್
  • ಅಥೇನಿಯಮ್ ಕ್ಲಬ್ನ ಸದಸ್ಯ, ಲಂಡನ್
  • ಕೇಂಬ್ರಿಜ್ ವಿಶ್ವವಿದ್ಯಾಲಯ (ಗೌರವ ಫೆಲೋ, ಕ್ಲೇರ್ ಕಾಲೇಜ್, ಕೇಂಬ್ರಿಡ್ಜ್)
  • ಡ್ಯಾನಿಷ್ ಅಕಾಡೆಮಿ ಆಫ್ ಆರ್ಟ್ಸ್ ಅಂಡ್ ಸೈನ್ಸಸ್
  • ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್
  • ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯ (ನ್ಯೂಟನ್-ಅಬ್ರಹಾಂ ವಿಸಿಟಿಂಗ್ ಪ್ರೊಫೆಸರ್)
  • ೧೯೮೫ರಲ್ಲಿ ಯುರೋಪಿಯನ್ ಮಾಲಿಕ್ಯುಲರ್ ಬಯಾಲಜಿ ಸಂಘಟನೆಯ ಸದಸ್ಯತ್ವ
  • ೧೯೮೧ ರಲ್ಲಿ ರಾಯಲ್ ಸೊಸೈಟಿಯ ವಿದೇಶಿ ಸದಸ್ಯರಾಗಿ ಚುನಾಯಿತರಾದರು.
  • ರಷ್ಯನ್ ಅಕಾಡೆಮಿ ಆಫ್ ಸೈನ್ಸಸ್.
  • ಇಂಟರ್ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್, ಮ್ಯೂನಿಚ್.


ಗೌರವ ಪದವಿಗಳು[ಬದಲಾಯಿಸಿ]

  • ಡಿಎಸ್ಸಿ, ಯುನಿವರ್ಸಿಟಿ ಆಫ್ ಚಿಕಾಗೋ, ಯುಎಸ್, ೧೯೬೧
  • ಡಿಎಸ್ಸಿ, ಇಂಡಿಯಾನಾ ಯುನಿವರ್ಸಿಟಿ, ಯುಎಸ್,೧೯೬೩
  • ಎಲ್ ಎಲ್ ಡಿ, ನೊಟ್ರೆ ಡೇಮ್ ವಿಶ್ವವಿದ್ಯಾಲಯ, ಯುಎಸ್, ೧೯೬೫
  • ಡಿ.ಎಸ್.ಸಿ, ಲಾಂಗ್ ಐಲ್ಯಾಂಡ್ ಯುನಿವರ್ಸಿಟಿ (ಸಿಡಬ್ಲ್ಯೂ ಪೋಸ್ಟ್), ಯುಎಸ್, ೧೯೭೦
  • ಡಿ.ಎಸ್.ಸಿ, ಅಡೆಲ್ಫಿ ಯುನಿವರ್ಸಿಟಿ, ಯುಎಸ್, ೧೯೭೨
  • ಡಿಎಸ್ಸಿ, ಬ್ರಾಂಡೀಸ್ ವಿಶ್ವವಿದ್ಯಾಲಯ, ಯುಎಸ್,೧೯೭೩
  • ಡಿ.ಎಸ್.ಸಿ, ಆಲ್ಬರ್ಟ್ ಐನ್ಸ್ಟೀನ್ ಕಾಲೇಜ್ ಆಫ್ ಮೆಡಿಸಿನ್, ಯುಎಸ್, ೧೯೭೪
  • ಡಿ.ಎಸ್.ಸಿ, ಹಾಫ್ಸ್ಟ್ರಾ ಯುನಿವರ್ಸಿಟಿ, ಯುಎಸ್, ೧೯೭೬
  • ಡಿ.ಎಸ್.ಸಿ, ಹಾರ್ವರ್ಡ್ ಯುನಿವರ್ಸಿಟಿ, ಯುಎಸ್,೧೯೭೮
  • ಡಿಎಸ್ಸಿ, ರಾಕ್ಫೆಲ್ಲರ್ ಯುನಿವರ್ಸಿಟಿ, ಯುಎಸ್, ೧೯೮೦
  • ಡಿ.ಎಸ್ಸಿ, ಕ್ಲಾರ್ಕ್ಸನ್ ಕಾಲೇಜ್ ಆಫ್ ಟೆಕ್ನಾಲಜಿ, ಯುಎಸ್,೧೯೮೧
  • ಡಿಎಸ್ಸಿ, ಸನ್ನಿ ಅಟ್ ಫಾರ್ಮಿಂಗ್ಡೇಲ್, ಯುಎಸ್,೧೯೮೩
  • ಎಮ್ ಡಿ, ಬ್ಯೂನಸ್ ಐರೆಸ್, ಅರ್ಜೆಂಟೀನಾ,೧೯೮೬
  • ಡಿಎಸ್ಸಿ, ರುಟ್ಜರ್ಸ್ ವಿಶ್ವವಿದ್ಯಾಲಯ, ಯುಎಸ್, ೧೯೮೮
  • ಡಿಎಸ್ಸಿ, ಬಾರ್ಡ್ ಕಾಲೇಜ್, ಯುಎಸ್, ೧೯೯೧
  • ಡಿಎಸ್ಸಿ, ಸ್ಟೆಲೆನ್ಬೋಸ್ಚ್ ವಿಶ್ವವಿದ್ಯಾಲಯ, ದಕ್ಷಿಣ ಆಫ್ರಿಕಾ, ೧೯೯೩
  • ಡಿಎಸ್ಸಿ, ಫೇರ್ಫೀಲ್ಡ್ ಯುನಿವರ್ಸಿಟಿ, ಯುಎಸ್, ೧೯೯೩
  • ಡಿ.ಎಸ್.ಸಿ, ಯುನಿವರ್ಸಿಟಿ ಆಫ್ ಕೇಂಬ್ರಿಡ್ಜ್, ಯುನೈಟೆಡ್ ಕಿಂಗ್ಡಮ್,೧೯೩೩

ಉಲ್ಲೇಖಗಳು[ಬದಲಾಯಿಸಿ]

 [೧]
[೨]
[೩]
[೪]

[೫] [೬] [೭] [೮]

  1. https://en.wikipedia.org/wiki/James_Watson
  2. https://www.nobelprize.org/nobel_prizes/medicine/laureates/1962/watson-bio.html
  3. https://www.ted.com/talks/james_watson_on_how_he_discovered_dna
  4. http://www.dnaftb.org/19/bio.html
  5. https://www.google.co.in/search?q=DNA:+The+Secret+of+Life&stick=H4sIAAAAAAAAAONgFuLQz9U3MDEpL1PiArHMDCtTLJK0BBxLSzLyi0LynfLzs_3zcioB8PhIfCoAAAA&sa=X&ved=0ahUKEwinu8qf2LPZAhWMo48KHfvnAEAQxA0ImwIwIg&biw=1440&bih=839
  6. https://www.google.co.in/search?sa=X&biw=1440&bih=839&q=The+Double+Helix&stick=H4sIAAAAAAAAAONgFuLQz9U3MDEpL1PiBLGMC82S8rQEHEtLMvKLQvKd8vOz_fNyKgG4RKmNKQAAAA&npsic=0&ved=0ahUKEwj_mJK327PZAhXEto8KHYdKAsQQ-BYIKA&tbs=kac:1,kac_so:0
  7. https://www.theguardian.com/commentisfree/2014/dec/01/dna-james-watson-scientist-selling-nobel-prize-medal
  8. https://www.washingtonpost.com/news/speaking-of-science/wp/2014/12/01/nows-your-chance-to-buy-james-watsons-nobel-prize-because-racism/?utm_term=.e70a54a8858c