ಸದಸ್ಯ:Vidyashree IHM/ನನ್ನ ಪ್ರಯೋಗಪುಟ
ಸೋರಿಯಾಸಿಸ್
[ಬದಲಾಯಿಸಿ]ಸೋರಿಯಾಸಿಸ್ ಎಂದರೆನು?
[ಬದಲಾಯಿಸಿ]ಸೋರಿಯಾಸಿಸ್ ಅಂದರೆ ಸಾಂಕ್ರಾಮಿಕವಲ್ಲದ ದೀರ್ಘಕಾಲೀನ ಚರ್ಮರೋಗ. ಚರ್ಮದ ಮೇಲೆ ಕೆಂಪಾದ, ಪರೆ ಪರೆಯಾದ ಕಲೆ ಉಂಟಾಗುತ್ತದೆ. ವರ್ಷಗಟ್ಟಲೇ ಈ ರೋಗ ಲಕ್ಷಣಗಳು ಬಾಧಿಸಬಹುದು. ಜೀವನಪೂರ್ತಿ ಇದು ಆಗಾಗ್ಗ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಅಲ್ಲದೇ ಮಹಿಳೆ ಮತ್ತು ಪುರುಷ ಎಂಬ ಭೇದಭಾವವಿಲ್ಲದೇ ಎಲ್ಲರಲ್ಲೂ ಕಾಣಿಸಿಕೊಳ್ಳುತ್ತದೆ
ಸೋರಿಯಾಸಿಸ್ ಉಂಟಾಗಲು ಕಾರಣಗಳೇನು?
[ಬದಲಾಯಿಸಿ]ಸ್ಪಷ್ಟ ಕಾರಣ ಇನ್ನೂ ತಿಳಿದಿಲ್ಲ. ಸದ್ಯಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ ಎರಡು ಪ್ರಮುಖ ಕಾರಣಗಳಿಂದ ಸೊರಿಯಾಸಿಸ್ ಉಂಟಾಗುತ್ತದೆ.1. ಆನುವಂಶಿಕವಾಗಿ ಬಂದ ಗುಣ 2. ರೋಗನಿರೋಧಕ ವ್ಯವಸ್ಥೆಯ ಪ್ರತಿಸ್ಪಂದನ ನಿರ್ದಿಷ್ಟ ವಂಶವಾಹಿ ನಕ್ಷೆಯನ್ನು ಹೊಂದಿರುವ ವ್ಯಕ್ತಿಗಳಲ್ಲಿ ದೇಹದ ರೋಗನಿರೋಧಕ ವ್ಯವಸ್ಥೆ ತಪ್ಪಾಗಿ ಸಂದೇಶ ಕಳುಹಿಸುತ್ತದೆ. ಇದರಿಂದ ಚರ್ಮದ ಕೋಶಗಳು ಅತಿ ವೇಗವಾಗಿ ವೃದ್ಧಿಯಾಗುತ್ತವೆ. ಆ ಕೋಶಗಳು ಚರ್ಮದ ಮೇಲೆ ಪದರ, ಪದರವಾಗಿ ಕುಳಿತುಕೊಳ್ಳುತ್ತವೆ. ಅದನ್ನು ಶೀಘ್ರವಾಗಿ ಉದುರಿಸಲು ದೇಹಕ್ಕೆ ಸಾಧ್ಯವಾಗುವುದಿಲ್ಲ. ಆದರೆ, ಸೋರಿಯಾಸಿಸ್ ಹೊಂದಿರುವ ಬಹಳಷ್ಟು ಜನರ ಕುಟುಂಬದಲ್ಲಿ ಈ ರೋಗ ಇರುವುದಿಲ್ಲ.
ಕೆಂಪಾದ,ಪರೆಪರೆಯಾದ ಪದರ ಕಾಣಿಸಿಕೊಳ್ಳಲು ಕಾರಣವೇನು?
ಚರ್ಮದ ಹೊರ ಪದರದಲ್ಲಿ ಜೀವಕೋಶಗಳ ಸಂಖ್ಯೆ ಯದ್ವಾತದ್ವಾ ಹೆಚ್ಚುವುದೇ ಈ ರೋಗಕ್ಕೆ ಕಾರಣವಾಗಿರುತ್ತದೆ. ಸಾಮಾನ್ಯವಾಗಿ ಚರ್ಮದ ಕೋಶಗಳು ಸತ್ತಮೇಲೆ ದೇಹದಿಂದ ಉದುರಿಹೋಗುತ್ತವೆ. ಈ ಪ್ರಕ್ರಿಯೆಗೆ ಸುಮಾರು ನಾಲ್ಕು ವಾರ ಹಿಡಿಯುತ್ತದೆ. ಸೋರಿಯಾಸಿಸ್ ಹೊಂದಿರುವವರ ದೇಹ ಪ್ರತಿ ೩,೪ ದಿನಗಳಿಗೊಮ್ಮೆ ಚರ್ಮದ ಕೋಶಗಳನ್ನು ಉದುರಿಸುತ್ತದೆ. ಚರ್ಮದ ಮೇಲೆ ಕುಳಿತ ಈ ಹೆಚ್ಚುವರಿ ಕೋಶಗಳು ಸೋರಿಯಾಸಿಸ್ ಕಲೆ ಉಂಟು ಮಾಡುತ್ತದೆ.
ಸೋರಿಯಾಸಿಸ್ ಗುರುತಿಸುವುದು ಹೇಗೆ?
ಕೆಂಪಾದ, ತುರಿಸುವ, ಪದರ ಪದರಾದ ಚರ್ಮ, ಚರ್ಮ ದಪ್ಪಗಾಗುವುದು, ಒಡೆಯುವುದು ಸೋರಿಯಾಸಿಸ್ ಲಕ್ಷಣಗಳು. ಚರ್ಮ ಒಡೆಯುವುದು, ಅಂಗಾಲು, ಅಂಗೈ ಹೊಪ್ಪಳ ಏಳುವುದು ಸಹ ಸೋರಿಯಾಸಿಸ್ ಸ್ವರೂಪವಾಗಿದೆ. ಈ ಲಕ್ಷಣಗಳು ಪ್ರಬಲವಾಗಿಲ್ಲದೇ ಇರಬಹುದು. ತೀವ್ರವಾಗಿದ್ದಾಗ ದೇಹದ ಅಂದಗೆಡಿಸಬಹುದು, ಅಂಗವೈಕಲ್ಯಕ್ಕೂ ಕಾರಣವಾಗಬಹುದು.
ವಿವಿಧ ಬಗೆಯ ಸೋರಿಯಾಸಿಸ್ಗಳು ಯಾವುವು?
ಚರ್ಮದ ಮೇಲಿನ ಗಾಯದ ಆಳ, ಚರ್ಮದ ಮೇಲೆ ಕಲೆ ಇರುವ ಭಾಗದ ಆಧಾರದ ಮೇಲೆ ಈ ರೋಗವನ್ನು ಹಲವು ವಿಧದಲ್ಲಿ ವಿಂಗಡಿಸಬಹುದು. ಎರಿತ್ರೊಡರ್ಮಿಕ್: ಸೋರಿಯಾಸಿಸ್ನಿಂದ ಚರ್ಮ ಕೆಂಪಗಾಗಿ ಊದಿಕೊಳ್ಳುತ್ತದೆ. ಪ್ಲೇಕ್ ಸೋರಿಯಾಸಿಸ್: ಇದು ಅತ್ಯಂತ ಸಾಮಾನ್ಯವಾದ ಸೋರಿಯಾಸಿಸ್. (ಈ ರೋಗ ಹೊಂದಿರುವ ಶೇ ೮೦ ರಷ್ಟು ಜನ ಈ ವಿಧದ ರೋಗ ಲಕ್ಷಣ ಹೊಂದಿರುತ್ತಾರೆ.) ಚರ್ಮದ ಮೇಲ್ಮೈ ಕೆಂಪಾಗಿ ಉಬ್ಬಿಕೊಳ್ಳುತ್ತದೆ. ಉಬ್ಬಿದ ಈ ಭಾಗದಿಂದ ಬಿಳಿಯ ಪದರ ಬೆಳೆಯುತ್ತದೆ. ಮೊಣಕಾಲು, ಮುಂಗೈ, ನೆತ್ತಿ, ದೇಹದ ಮೇಲ್ಭಾಗ, ಉಗುರುಗಳಲ್ಲಿ ಸಾಮಾನ್ಯವಾಗಿ ಈ ಲಕ್ಷಣ ಕಾಣಿಸಿಕೊಳ್ಳುತ್ತದೆ. ಚರ್ಮದ ಇತರ ಯಾವುದೇ ಭಾಗದಲ್ಲೂ ಸಹ ಇದು ಕಾಣಿಸಿಕೊಳ್ಳಬಹುದು.ಇನ್ವರ್ಸ್ ಸೋರಿಯಾಸಿಸ್ ಚರ್ಮದ ಪದರಗಳಲ್ಲಿ ಮೆತ್ತನೆಯ ಕೆಂಪಾದ ಚರ್ಮದ ಉಬ್ಬು ಕಾಣಿಸಿಕೊಳ್ಳುತ್ತದೆ ಗುಟ್ಟಾಟೆ ಸೋರಿಯಾಸಿಸ್ ದ್ರವದ ಹನಿಯಂತೆ ಕಾಣುವ ಸಣ್ಣ, ಸಣ್ಣ ಚರ್ಮದ ಉಬ್ಬು ಕಾಣಿಸಿಕೊಳ್ಳುತ್ತದೆ.ಪುಸ್ತುಲರ್ ಸೋರಿಯಾಸಿಸ್ ಬಿಳಿಯ ದಪ್ಪನೆಯ ದ್ರವ್ಯದಿಂದ ಕೂಡಿದ ಬೊಕ್ಕೆ ಉಂಟಾಗುತ್ತದೆ.ಸೋರಿಯಾಸಿಸ್ ಆರ್ಥ್ರೈಟಿಸ್ (ಕೀಲೂತ) ರ್ಯು ಮಾ ಟಾಯ್ಡ್ ಆರ್ಥ್ರೈಟಿಸ್ (ಕೀಲೂತ) ಹಾಗೂ ಸೋರಿಯಾಸಿಸ್ ಲಕ್ಷಣಗಳನ್ನು ಹೊಂದಿರುವ ಸಂದುವಾತವಿದು.
ಸೋರಿಯಾಸಿಸ್ಗೆ ಕಾರಣವಾಗುವ ಅಥವಾ ಅದನ್ನು ಹೆಚ್ಚಿಸುವ ಅಂಶ ಯಾವುದಾದರೂ ಇದೆಯೇ?
ಸೋರಿಯಾಸಿಸ್ ಇರುವ ವ್ಯಕ್ತಿಗಳಲ್ಲಿ ಕೆಲ ಅಂಶಗಳು ಚರ್ಮದ ಮೇಲೆ ಪದರ ಬೆಳೆಯಲು ಕಾರಣವಾಗಬಹುದು. ಚರ್ಮಕ್ಕೆ ಹಾನಿ (ರಾಸಾಯನಿಕಗಳು, ಸೋಂಕು, ತರಚುವುದು, ಬಿಸಿಲಿನಲ್ಲಿ ಸುಟ್ಟು ಹೋಗುವುದು ಇತ್ಯಾದಿ), ಮದ್ಯಪಾನ, ಧೂಮಪಾನ, ಹಾರ್ಮೋನ್ಗಳ ಬದಲಾವಣೆ, ಊತವನ್ನು ತಡೆಯುವ ಕೆಲ ನಿರ್ದಿಷ್ಟ ಔಷಧಗಳು ಹಾಗೂ ಮನಸ್ಸಿನ ಒತ್ತಡ ರೋಗವನ್ನು ಹೆಚ್ಚಿಸಲು ಕಾರಣವಾಗಬಹುದು.
ರೋಗದಿಂದ ಆಗುವ ದೀರ್ಘಕಾಲೀನ ಪರಿಣಾಮಗಳೇನು?
ಸೋರಿಯಾಸಿಸ್ ವ್ಯಕ್ತಿಗಳಲ್ಲಿ ದೈಹಿಕ ಹಾಗೂ ಭಾವನಾತ್ಮಕ ಪರಿಣಾಮಗಳನ್ನು ಉಂಟು ಮಾಡುತ್ತದೆ. ಆರ್ಥ್ರೈಟಿಸ್ (ಕೀಲೂತ) ಅಥವಾ ಸಂದಿವಾತವಿರುವ ಕೆಲ ವ್ಯಕ್ತಿಗಳಲ್ಲಿ ಸಂದುಗಳು ಊದಿಕೊಂಡು ವ್ಯಕ್ತಿಗೆ ನಡೆಯಲು ಸಾಧ್ಯವಾಗುವುದಿಲ್ಲ ಹಾಗೂ ಸಹಿಸಲಸಾಧ್ಯವಾದ ನೋವು ಉಂಟು ಮಾಡುತ್ತದೆ.
ಸೋರಿಯಾಸಿಸ್ ಸಾಂಕ್ರಾಮಿಕವೇ?
ಇಲ್ಲ, ಸೋರಿಯಾಸಿಸ್ ಸಾಂಕ್ರಾಮಿಕವಲ್ಲ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ.
ರೋಗ ನಿಯಂತ್ರಣ
ಬಿಸಿಲಿಗೆ ಮೈಒಡ್ಡುವುದು ಸೇರಿದಂತೆ ಚರ್ಮಕ್ಕೆ ಆಗುವ ಹಾನಿಯನ್ನು ತಡೆಯಬೇಕು
ಮದ್ಯಪಾನ ಹಾಗೂ ಧೂಮಪಾನವನ್ನು ತ್ಯಜಿಸಬೇಕು.
- ಮೈಗೆ ಒಗ್ಗದ ಔಷಧಗಳನ್ನು ಸೇವಿಸಬಾರದು.
- ಮನಸ್ಸಿನ ಒತ್ತಡ ನಿಯಂತ್ರಿಸಬೇಕು.
- ನೀರಿಗೆ ಮೈ ಒಡ್ಡುವುದನ್ನು ನಿಲ್ಲಿಸಬೇಕು. ಸ್ನಾನ, ಈಜು ಎಲ್ಲವನ್ನೂ ಕಡಿಮೆ ಅವಧಿಯಲ್ಲಿ ಮುಗಿಸಬೇಕು.
- ಚರ್ಮ ತುರಿಸಿಕೊಳ್ಳಬಾರದು.
- ಚರ್ಮಕ್ಕೆ ಉಜ್ಜುವಂತಹ ಬಟ್ಟೆ ಧರಿಸಬಾರದು.
- ಸೋಂಕು ಹಾಗೂ ಮತ್ತಿತರ ಕಾಯಿಲೆಯಾದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು
ರೋಗಕ್ಕೆ ಪಥ್ಯ
ವ್ಯಕ್ತಿಗೆ ಇಷ್ಟವಾಗುವ ಆಹಾರ ಸೇವಿಸುವುದು ಒಳ್ಳೆಯದು. ಇತರ ಜನರಂತೆ ಉತ್ತಮ ಜೀವನಶೈಲಿ ಹಾಗೂ ಆಹಾರ ಪದ್ಧತಿ ಸೋರಿಯಾಸಿಸ್ ಇರುವ ವ್ಯಕ್ತಿ ಉತ್ತಮ ಜೀವನ ಸಾಗಿಸಲು ನೆರವಾಗುತ್ತದೆ. ಹಲವು ವ್ಯಕ್ತಿಗಳು ತಿಳಿಸುವಂತೆ ಕೆಲವೊಂದು ಆಹಾರಗಳು ತಮ್ಮ ಚರ್ಮದ ಸ್ಥಿತಿಯನ್ನು ಉತ್ತಮ ಅಥವ ಕೆರಳಿಸುತ್ತದೆ. ಸೋರಿಯಾಸಿಸ್ ವುಳ್ಳ ವ್ಯಕ್ತಿಗಳಿಗೆ ನಿರ್ದಿಷ್ಟ ಆಹಾರಕ್ರಮವಿರುವುದಿಲ್ಲ. ಆದರೂ ಕೆಲ ಆಹಾರಕ್ರಮಗಳನ್ನು ಸೂಚಿಸಲಾಗಿದೆ.