ಸದಸ್ಯ:Vidyashree IHM

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Vidyashree IHM.jpg
Vidyashree IHM

ಜನನ[ಬದಲಾಯಿಸಿ]

ನನ್ನ ಹೆಸರು ವಿದ್ಯಾಶ್ರೀ ಐ.ಹೆಚ್.ಎಂ ನನ್ನ ಜನನ ಏಪ್ರಿಲ್ ೮-೧೯೯೭ ಸ್ಥಳ ದಾವಣಗೆರೆ ಜಿಲ್ಲೆ.ನನ್ನ ತಂದೆ ಮಲ್ಲಿಕಾರ್ಜುನ್ ಐ.ಹೆಚ್.ಎಂ ತಾಯಿ ಸುಮಂಗಲ ನನ್ನ ತಂದೆ ವೃತ್ತಿಯಲ್ಲಿ ಪ್ರಾಧ್ಯಾಪಕರು ಹಾಗೂ ತಾಯಿ ಶಿಕ್ಷಕಿ.ನಾನು ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಾಗಡಿ ತಾಲೂಕಿನ ಸೆಂಟ್ ಮೈಕೆಲ್ ಶಾಲೆಯಲ್ಲಿ ಮುಗಿಸಿದೆ.ನನಗೆ ತಣಿತ ಶಿಕ್ಷಕಿಯಾದ ವನಜಾ ರವರು ತುಂಬಾ ಇಷ್ಟ.ನನ್ನನ್ನು ತುಂಬಾ ಪ್ರೋತ್ಸಾಹಿಸುತ್ತಿದ್ದರು.ಪ್ರಾಂಶುಪಾಲರಾದ ಮರಿಯಾ ಲೈಲಾ ರವರು ನನ್ನನ್ನು ತುಂಬಾ ಪ್ರೀತಿಸುತ್ತಿದ್ದರು.

ಶಾಲಾ ದಿನಗಳು[ಬದಲಾಯಿಸಿ]

ನಾನು ಹತ್ತನೆ ತರಗತಿಯನ್ನು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದೆನು.ಇದಕ್ಕೆ ನನ್ನ ತಾಯಿಯೇ ಕಾರಣ.ನಂತರ ಪದವಿಪೂರ್ವ ಶಿಕ್ಷಣವನ್ನು ಭಗವಾನ್ ಮಹಾವೀರ್ ಜೈನ್ ಕಾಲೇಜಿನಲ್ಲಿ ಮಾಡಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದೆನು.ನನ್ನ ತಂದೆ ಮತ್ತು ಅಣ್ಣ ನನಗೆ ಓದಲು ತುಂಬಾ ಪ್ರೋತ್ಸಾಹಿಸಿದ್ದಾರೆ.ನನ್ನ ಅಣ್ಣ ಈಗ ಯು.ವಿ.ಸಿ.ಈ ಯಲ್ಲಿ ಓದುತ್ತಿದ್ದಾನೆ.ಪದವಿಪೂರ್ವ ಶಿಕ್ಷಣದ ನಂತರ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆದೆನುಆದರೆ ನನಗೆ ಅಭಿಯಂತರ ಅಥವಾ ವೈದ್ಯಕೀಯ ಶಿಕ್ಷಣ ಮಾಡುವ ಇಷ್ಟವಿಲ್ಲದ ಕಾರಣ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಎಸ್ಸಿ ಮಾಡಲು ನಿರ್ಧರಿಸಿದೆನು.ನಾನು ಇಲ್ಲಿ ಜೀವಶಾಸ್ತ್ರ ವಿಭಾಗದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದೇನೆ.ನಾನು ಎಂ.ಎಸ್ಸಿ ಹಾಗೂ ಪಿ.ಎಚ್.ಡಿ ಮಾಡಿ ಪ್ರಾದ್ಯಾಪಕಳಾಗಬೇಕೆನ್ನುವುದು ನನ್ನ ಬಾಲ್ಯದಿಂದ ನನಗಿರುವ ಏಕೈಕ ಗುರಿ.ನಾನು ಈಗ ಜೋಸೆಫ್ ನಿಶಾಂತ್ ರವರ ಬಳಿ ಕೀಬೋರ್ಡ್ ಕಲಿಯುತ್ತಿದ್ದೇನೆ.

ಹವ್ಯಾಸ[ಬದಲಾಯಿಸಿ]

ಹವ್ಯಾಸ ಪುಸ್ತಕ ಓದುವುದು,ಆಟ ಆಡುವುದುಮತ್ತು ಸಿನಿಮಾ ನೋಡುವುದು.ನಾನು ಓದಿರುವ ಪುಸ್ತಕಗಳು 'ಮೂಕಜ್ಜಿಯ ಕನಸುಗಳು','ನಮ್ಮಮ್ಮ ಎಂದರೆ ನನಗಿಷ್ಟ' ಮುಂತಾದವುಗಳು.ನನ್ನ ಬದುಕಿನ ಮೇಲೆ ತುಂಬಾ ಪ್ರಭಾವ ಬೀರಿದ ಚಲನಚಿತ್ರ'ಭಕ್ತ ಪ್ರಹ್ಲಾದ'.ನನ್ನ ಸ್ಪೂರ್ತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ರವರು ಬರೆದಿರುವ 'ವಿಂಗ್ಸ್ ಆಫ್ ಫೈಯರ್' ಪುಸ್ತಕ ತುಂಬಾ ಪ್ರಭಾವಿತವಾಗಿದೆ.ನಾನು ಯಾವುದೇ ವೈಜ್ಞಾನಿಕವಾಗಿ ಚಿಂತಿಸಲು ಇಚ್ಛಿಸುತ್ತೇನೆ.ನಾನು ಪರಿಸರ ಪ್ರೇಮಿ,ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಡುವುದಕ್ಕೆ ಪ್ರಯತ್ನಿಸುತ್ತೇನೆ.ನನಗೆ ತುಂಬಾ ಸಂತಸ ನೀಡಿದ ದಿನ ನನ್ನ ಎಂಟನೆ ತರಗತಿಯ ಹುಟ್ಟುಹಬ್ಬದ ದಿನ.ನಾನು ಹೆಚ್ಚು ಸಮಯವನ್ನು ಸ್ನೇಹಿತರ ಜೊತೆ ಕಳೆಯಲು ಇಚ್ಛಿಸುತ್ತೇನೆ.ನನ್ನ ಆತ್ಮೀಯ ಗೆಳತಿ ಶೃಂಗ.ನಾನು ಮುಂದೆ ಸಮಾಜಕ್ಕೆ ಏನಾದರೂ ಒಳ್‍ಳೆಯದನ್ನು ಮಾಡಲು ಪ್ರಯತ್ನಿಸುತ್ತೇನೆ.
This user is a member of WikiProject Education in India



ಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ: