ಸದಸ್ಯ:Vidyashree.v.

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಕಿರು ಪರಿಚಯ[ಬದಲಾಯಿಸಿ]

ನನ್ನ ಹೆಸರು ವಿದ್ಯಾಶ್ರೀ. ವಿ. ನಾನು ಕರ್ನಾಟಕದ ಚಿತ್ರದುರ್ಗ ಜೆಲ್ಲೆ , ಚಿತ್ರದುರ್ಗ ನಗರದಲ್ಲಿ ವಾಸವಾಗಿರುವ ಶ್ರೀಮತಿ ಉಷಾ ಮತ್ತು ಶ್ರೀ ಜೆ.ಎಸ್. ವೆಂಕಟೇಶ್ ದಂಪತಿಯ ಹಿರಿಯ ಪುತ್ರಿ. ನನ್ನ ತಂದೆ ತಾಯಿಗಳಿಗೆ ನಾನು ಮತ್ತು ನನ್ನ ಸೋದರಿ ಸೇರಿ ಇಬ್ಬರು ಹೆಣ್ಣು ಮಕ್ಕಳು. ನನ್ನ ತಂಗಿ

ದಿವ್ಯಾಶ್ರೀ ವಿ. ಚಿತ್ರದುರ್ಗ ದಲ್ಲಿ ಮೊದಲನೇ ಪಿ.ಯು. ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

ನನ್ನ ತಂದೆಯವರು ವಿದ್ಯುತ್ ಗುತ್ತಿಗೆದಾರರು ಮತ್ತು ವಿದ್ಯುತ್ ಸಾಮಗ್ರಿಗಳ ಮಾರಾಟಗಾರರು ,ತಾಯಿ ಗೃಹಿಣಿ . ಇವರು ಚಿತ್ರುದುರ್ಗ ದಲ್ಲೇ ನೆಲೆಸಿದ್ದಾರೆ.

ಬಾಲ್ಯ[ಬದಲಾಯಿಸಿ]

ನಾನು ನನ್ನ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಚಿತ್ರದುರ್ಗದ ಶ್ರೀ ಪಾರ್ಶವನಾಥ ವಿದ್ಯಾಸಂಸ್ಥೆಯಲ್ಲಿ ಪೂರೈಸಿ, ಪದವಿ ಪೂರ್ವ ಶಿಕ್ಷಣವನ್ನು ಚಿತ್ರದುರ್ಗ ದ ಎಸ್.ಜೆ.ಎಂ. ಕಾಲೇಜಿನಲ್ಲಿ ಮುಗಿಸಿರುತ್ತೇನೆ. ಮೊದಲಿನಿಂದಲೂ ನನಗೆ ಎಲ್ಲ ರೀತಿಯ ಸಾಂಸ್ಕೃತಿಕ ಸ್ಪರ್ಧೆ , ವಿಚಾರ ಸಂಕಿರಣ , ಚರ್ಚಾ ಸ್ಪರ್ದೆ ಗಳಲ್ಲಿ ಭಾಗವಹಿಸುವುದು ತುಂಬಾ ಖುಷಿಯ ವಿಷಯ. ಮೊದಲನೇ ತರಗತಿಯಿಂದ ಹಲವಾರು ಬಾರಿ ಮೊದಲ ಬಹುಮಾನ ಗಳನ್ನು ಸಹ ಪಡೆದಿರುತ್ತೇನೆ. ಇತ್ತೀಚೆಗೆ ಚಿತ್ರದುರ್ಗ ನಗರಸಭೆ ವತಿಯಿಂದ ಆಯೋಜಿಸಿದ್ದ ಸ್ವಚ್ಚ ಭಾರತ ಅಭಿಯಾನದಲ್ಲಿ ಚರ್ಚಾ ಸ್ಪರ್ಧೆ ಯಲ್ಲಿ ಮೊದಲ ಬಹುಮಾನ ಪಡೆದು ಸನ್ಮಾನಿಸಲ್ಪಟ್ಟಿದ್ದು ಬಹು ಹೆಮ್ಮೆಯ ಸಂಗತಿ. ೧೦ನೇ ತರಗತಿ ಹಾಗೂ ಎರಡನೇ ಪಿ.ಯು. ಪರೀಕ್ಷೆಯಲ್ಲಿ ಅತ್ಯತ್ತಮ ಶ್ರೇಣೀಯಲ್ಲಿ ತೇರ್ಗಡೆ ಹೊಂದಿದ ನನಗೆ ಹಲವಾರು ಸಂಘ ಸಂಸ್ಥೆ ಗಳಿಂದ ಸನ್ಮಾನ ಮಾಡಿ ,ಸ್ಮರಣಿಕೆಯನ್ನು ನೀಡಿರುವುದು ನಾನು ಮರೆಯಲಾಗದ ಘಟನೆ..

ನಾನು ಒಬ್ಬ ಐ.ಎ.ಎಸ್. ಅಧಿಕಾರಿಯಾಗಿ , ಜನಸೇವೆ ಮಾಡಬೇಕೆಂಬುದು ನನ್ನ ಕನಸು ಹಾಗೂ ಗುರಿ. ಇದಕ್ಕೆ ನನ್ನ ಹೆತ್ತವರ ಬೆಂಬಲ ಸಹ ಇದೆ. ಈ ಉದ್ದೇಶದಿಂದಲೇ ಉತ್ತಮ ಶಿಕ್ಷಣ ಪಡೆಯಲೆಂಬ ಉದ್ದೇಶದಿಂದ, ನನ್ನ ತಂದೆ ಅತ್ಯುತ್ತಮ ಕಾಲೇಜುಗಳ ಬಗ್ಗೆ ತಿಳಿದುಕೊಂಡು , ಕ್ರೈಸ್ತ ಕಾಲೇಜೆಗೆ ಸೇರಿಸಿದ್ದಾರೆ. ನಾನು ೧೦ನೇ ತರಗತಿಯಲ್ಲಿ ಶೇ೮೬ ಅಂಕ ಪಡೆದರೂ ಸಹ ನನ್ನ ಗುರಿ ಸಾಧನೆಗೋಸ್ಕರ ಕಲಾವಿಭಾಗವನ್ನೇ ಆರಿಸಿಕೊಂಡೆ.

ನಾನು ಬೆಲೆದ ಊರು[ಬದಲಾಯಿಸಿ]

ಇನ್ನು ನನ್ನ ಊರಿನ ಬಗ್ಗೆ ಹೇಳಬೇಕೆಂದರೆ, ಚಿತ್ರದುರ್ಗ ಒಂದು ಐತಿಹಾಸಿಕ, ಸಾಂಸ್ದೃತಿಕ , ನಗರ. ಚಿತ್ರದುರ್ಗದ ಏಳುಸುತ್ತಿನ ಕೋಟೆ ನೋಡಲು ದೇಶ ವಿದೇಶಗಳಿಂದ ಪ್ರಾವಾಸಿಗರು ಬರುತ್ತಾರೆ. ಈ ಕೋಟೆಯ ಸುಭದ್ರತೆಯನ್ನು ನೋಡಿ ಆಶ್ಚರ್ಯ ಪಡುತ್ತಾರೆ. ಹೈದರಾಲಿಯಂತಹವನಿಗೂ ಕೂಡ ಈ ಎಷ್ಟೋ ತಿಂಗಳುಗಟ್ಟಲೆ ಪ್ರಯತ್ನ ಪಟ್ಟರೂ ಈ ಅಭೇದ್ಯವಾದ ಕೋಟೆ ಪ್ರವೇಶಿಸಲು ಸಾಧ್ಯವಾಗಲಿಲ್ಲ ಎಂದರೆ ಇದು ಎಷ್ಟು ಸುಭದ್ರ ಎಂದು ಊಹಿಸಬಹುದು. ಇನ್ನು ಮೋಸದಿಂದ ಹಿಂಭಾಗದಿಂದ ಹೈದರಾಲಿಯ ಸೈನಿಕರು ಕಳ್ಳ ಕಿಂಡಿಯ ಮೂಲಕ ಪ್ರವೇಶಿಸಲು ಪ್ರಯತ್ನಿಸಿದಾಗ ಅವರ ತಲೆಗಳು ವೀರ ವನಿತೆ ಓಬವ್ವನ ಒನಕೆ ಹೊಡೆತಕ್ಕೆ ಪುಡಿ,ಪುಡಿಯಾದದ್ದು ವೀರೋಚಿತ ಇತಿಹಾಸ . ಹಾಗೇ ಚಿತ್ರುದುರ್ಗ ಸಾಂಸ್ಕೃತಿಕ ನಗರ ಸಹ. ವರ್ಷ ಪೂರ್ತಿ ಒಂದಿಲ್ಲೊಂದು ಕಾರ್ಯಕ್ರಮಗಳು ನಡೆಯತ್ತಲೇ ಇರುತ್ತವೆ. ಅದರಲ್ಲು ಗಣಪತಿ ಉತ್ಸವ, ಹಿಂದೂ ಮಹಾಗಣಪತಿ ಉತ್ಸವ ಕ್ಕೆ ಇಡೀ ದೇಶದ ಎಲ್ಲೆಡೆಯಿಂದ ಜನ ಸೇರುತ್ತಾರೆ. ನಂತರ ಹಿಂದೆಯೇ ದಸರಾ ಉತ್ಸವ ಪ್ರಾರಂಭವಾಗಿ ಕಲೆ, ಸಾಹಿತ್ಯ ವಿಚಾರ್ಓಷ್ಠಿಗಳು ನಡೆಯುತ್ತವೆ . ಇದರಲ್ಲಿ ನಾಡಿನ ಹೆಸರಾಂತ ಕವಿಗಳು, ಇತಿಹಾಸಕಾರರು , ವಿಧ್ವಾಂಸರು ಭಾಗವಹಿಸುತ್ತಾರೆ. ಪ್ರತಿ ವರ್ಷ ಇಲ್ಲಿಯ ಮುರುಘಾ ಮಠದಿಂದ ಅತ್ಯುತ್ತಮ ಸಮಾಜ ಸೇವಕರಿಗೆ ಬಸವಶ್ರೀ ಪ್ರಶಸ್ತಿಯಿಂದ ಸನ್ಮಾನಿಸಲಾಗುತ್ತದೆ. ಇನ್ನು ನಾಯಕನಹಟ್ಟಿ ತಿಪ್ಪೇಸ್ವಾಮಿ ದೇವಸ್ಥಾನ, ಹೊಳಲ್ಕೆರೆಯ ಬಯಲು ಗಣಪತಿ, ಹಾಗೂ ಹಾಲು ರಾಮೇಶ್ವರ ಕ್ಷೇತ್ರಗಳು ಧಾರ್ಮಿಕ ಶ್ರದ್ದಾ ಕೇಂದ್ರಗಳಾಗಿ ಪ್ರಸಿದ್ಧಿಯಾಗಿವೆ.

ನಾನು ಈಗ ಓದುತ್ತಿರುವ ಕ್ರೈಸ್ತ್ ಕಾಲೇಜಿನಲ್ಲಿ ಅತ್ಯುತ್ತಮ ಶಿಕ್ಷಣ ಸೌಲಭ್ಯ ಇದ್ದು , ಇದು ನನ್ನ ಜೀವನದ ಗುರಿ ಸಾಧಿಸಲು ತುಂಬಾ ಸಹಾಯವಾಗುತ್ತದೆಂದು ಭಾವಿಸಿದ್ದೇನೆ.

ಜೀವನದ ಗುರಿ[ಬದಲಾಯಿಸಿ]

ನಾನು ಯಾವಾಗಲೂ ಒಬ್ಬ ಪ್ರಾಮಾಣಿಕ ವ್ಯಕ್ತಿಯಾಗಿರಬೇಕೆಂದು ಬಯಸುತ್ತೇನೆ. ಹಾಗೇ ಬೇರೆಯವರಲ್ಲು ಈ ಭಾವನೆಯನ್ನು ಕಾಣಲು ಬಯಸುತ್ತೇನೆ. ನಾನು ನಿಷ್ಠಾವಂತ ಅಧಿಕಾರಿಯಾಗಿ , ಈ ದೇಶದ ಕಟ್ಟಕಡೆಯ ವ್ಯಕ್ತಿಗೂ ಸಹ ಸಿಗಬೇಕಾದ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಸಮಾಜ ಸೇವಾ ವ್ಯಕ್ತಿಯಾಗಬೇಕೆಂದು, ಹಾಗೂ ಎಲ್ಲದಕ್ಕಿಂತ ಹೆಚ್ಚಾಗಿ ನನ್ನ ಹೆತ್ತವರಿಗೆ, ವಿದ್ಯೆ ಕಲಿಸಿದ ಗುರುಗಳಿಗೆ, ಮಾರ್ಗ ದರ್ಶನ ನೀಡಿದ ಹಿರಿಯರಿಗೆ ಒಳ್ಳೆ ಹೆಸರು, ಗೌರವ ತರುವ ಹೆಮ್ಮೆಯ ನಾಗರೀಕಳಾಗಬೇಕೆಂಬುದೇ ನನ್ನ ಮಹದಾಸೆ.

ವಿದ್ಯಾಶ್ರೀ. ವಿ.