ವಿಷಯಕ್ಕೆ ಹೋಗು

ಸದಸ್ಯ:Vidyasagar984/ನನ್ನ ಪ್ರಯೋಗಪುಟ/1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೆಲೆನ್ ಕ್ಯಾಲ್ಕಟ್
ಹೆಸರು ಹೆಲೆನ್ ಕ್ಯಾಲ್ಕಟ್
ಜನನ ೧೯೮೮
ಸ್ಥಳ ಕೆನಡಾ
ವೃತ್ತಿ ಕವಯತ್ರಿ
    ಹೆಲನ್ ಕ್ಯಾಲ್ಕಟ್ ಅವರು ೧೯೮೮ ರಲ್ಲಿ ಜನಿಸಿದರು. ಇವರು ಒಬ್ಬರು ಆಂಗ್ಲ ಕವಯತ್ರಿ, ಬರಹಗಾರ್ತಿ, ನೃತ್ಯಗಾರ್ತಿ ಮತ್ತು ಪತ್ರಕರ್ತೆ.
    ಹೆಲನ್ ಕ್ಯಾಲ್ಕಟ್ ಅವರ ಬರಹ ಶೈಲಿಯನ್ನು ಮಾರಿಯೊ ಪೆಟ್ರುಕ್ಕಿ ಅವರು " ಆಮಾಲಾಗ್ರ ಮತ್ತು ರಾಜಿಯಾಗದ ಶೈಲಿ " ಎಂದು ಮತ್ತು ರಾಬರ್ಟ್ ಪೀಕ್ ಅವರು " ಎಮಿಲಿ ಡಿಕ್ಕಿನ್ಸನ್ ಅವರ  ಶೈಲಿ ಮತ್ತು ಹೊಸ ಹಾಗು ಆಶ್ಚರ್ಯಮಯವಾದ ಶೈಲಿ " ಎಂದು  ಬಣ್ಣಿಸಿದ್ದಾರೆ.

ಪ್ರಕಟಣೆ

[ಬದಲಾಯಿಸಿ]
    ಹೆಲನ್ ಕ್ಯಲ್ಕಟ್ ಅವರು " ಸಡನ್ ರೈನ್ಫ಼ಾಲ್ " ಅಂದರೆ " ಹಠಾತ್ ಮಳೆ " ಎಂಬ ಕವಿತೆಯೊಂದಿಗೆ ಪಾದಾರ್ಪಣೆ ಮಾಡಿದರು.  ಈ ಕವಿತೆಯು ಅವರು ೨೩ ವರ್ಷವಿದ್ದಾಗ, ಬ್ರಿಟೀಷ್ ಪ್ರಕಟಣಾ ಸದನ ' ಪೆರ್ಡಿಕಾ 'ದ ಮುಖ್ಯ ನಾಮದಲ್ಲಿ ಪ್ರಕಟವಾಯಿತು. ಈ ಕವಿತೆಯನ್ನು ಪಿಬಿಎಸ್ ಪಾಂಫ಼್ಲೆಟ್ ಅವಾರ್ಡ್ ಓನ್ ಪಬ್ಲಿಕೇಷನ್ ಎಂಬ ಪ್ರಶಸ್ತಿಗೆ ಆಯ್ಕೆಯಾಗಿತ್ತು, ಮತ್ತು ೨೦೧೬ ರಲ್ಲಿ ವಾಟರ್ಸ್ತೊನ್ ನ ಅತ್ಯುತ್ತಮ ಮಾರಾಟವಾದ ಕರಪತ್ರ ಸಂಗ್ರಹ ಎಂದು ಪಟ್ಟಿಮಾಡಲಾಯಿತು.

[]

ಹೆಲನ್ ಕ್ಯಾಲ್ಕಟ್ ಅವರು ಕ್ಲೇಂಟ್ ಹಿಲ್ಸ್ ನ್ಯಾಷನಲ್ ಟ್ರಸ್ಟ್ ಅವರಿಂದ ಆಯ್ಕೆಗೊಂಡ ಮೊದಲ ವ್ರೈಟರ್-ಇನ್-ರೆಸಿಡೆನ್ಸಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು ಮತ್ತು ೨೦೧೫-೨೦೧೬ ರಲ್ಲಿ ಪೋಯೆಟ್ -ಇನ್-ರೆಸಿಡೆನ್ಸಿ ಎಂಬ ಹೆಗ್ಗಳಿಕೆಯನ್ನು ಲಾಫ಼್ ಬೊರಾಗ್ ಯೂನಿವರ್ಸಿಟಿಯಿಂದ ಪಡೆದು ಪ್ರಶಸ್ತಿಗೆ ಪಾತ್ರರಾದರು. ಹೆಲನ್ ಕ್ಯಾಲ್ಕಟ್ ಎನ್.ಎ.ಡಬ್ಳ್ಯು.ಇ. ,ಪೋಯೆಟ್ರಿ ಬೈಹಾರ್ಡ್ ಮತ್ತು ಪೋಯೆಟ್ರಿ ಇಂಟರ್ನ್ಯಾಷನಲ್ಗಾಗಿ ಕೆಲಸ ಮಾಡಿದ್ದಾರೆ. ಇವರು ವೇಲ್ಸ್ ಆರ್ಟ್ಸ್ ರಿವ್ಯೂ, ಬೇರ್ ಫ಼ಿಕ್ಷನ್, ಸ್ಯಾಬೋಟೇಜ್ ಮತ್ತು ದಿ ಟೈಮ್ಸ್ ಲಿಟರರಿ ಸಪ್ಲಿಮೆಂಟ್ನಂತಹ ಜರ್ನಲ್ಗಳಿಗಾಗಿ ಸಾಹಿತ್ಯ ವಿಮರ್ಷೆಗಳನ್ನು ಬರೆಯುತ್ತಿದ್ದರು.

    ಹೆಲೆನ್ ಕ್ಯಾಲ್ಕಟ್ ತರಬೇತಿ ಪಡೆದ ಕಲಾವಿದೆ ಮತ್ತು ನೃತ್ಯ ನಿರ್ದೇಶಕರಾಗಿದ್ದರು, ಅವರು ಯೋಜನಾ ಕಾರ್ಪೊರೆಲ್ ಅಥವಾ ದೈಹಿಕ ಬರವಣಿಗೆಗೆ ಸಹ ಸಂಸ್ಥಾಪಕರಾಗಿದ್ದರು.
    ಜುಲೈ ೨೦೧೪ ರಲ್ಲಿ ಲಂಡನ್ ನ ಅಂತರರಾಷ್ಟ್ರೀಯ ಉತ್ಸವದಲ್ಲಿ ಅಧೀಕೃತವಾಗಿ ಯೋಜನೆಯನ್ನು ಪ್ರಾರಂಭಿಸಲಾಯಿತು.  ನಂತರದ ದಿನಗಳಲ್ಲಿ ಬರ್ಮಿಂಗ್ಯ್ಹ್ಮಾಮ್ ಸಾಹಿತ್ಯ ಉತ್ಸವದಲ್ಲಿ ಪ್ರದರ್ಶನ ನೀಡಲಾಯಿತು, ಒವೆನ್ ಶಿಯರ್ಸ್ ಪದ್ಯ ' ಲಾಸ್ಟ್ ಆಕ್ಟ್ ' ಅಂದರೆ ' ಕೊನೆಯ ಕ್ರೀಯೆ 'ನಿಂದ ಸ್ಪೂರ್ತಿ ಪಡೆದ ಪಠ್ಯ ಆಧಾರಿತ ನೃತ್ಯ ಸಂಯೋಜನೆ ಮಾಡಲಾಯಿತು.  ಈ ಸಂಯೊಜನೆಯಿಂದ ಕವನ ಸಮಾಜ, ಎನ್.ಎ.ಡಬ್ಲ್ಯು.ಇ., ಮೊದಲ ಕತೆಗಳಿಗೆ ಬೋಲ್ಟನ್ ವಿಶ್ವ ವಿದ್ಯಾನಿಲಯವು ಅನುಮೋದನೆ ನೀಡಿದೆ.
    ಹೆಲೆನ್ ಕ್ಯಾಲ್ಕಟ್ ಸ್ವತಂತ್ರ ನೃತ್ಯ ನಿರ್ದೇಶನ ಮತ್ತು ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಾರೆ.  ಅವರು ಯು.ಕೆ. ಅಂದರೆ ಯುನೈಟೆಡ್ ಕಿಂಗ್ಡಮ್ ನ ದೊಡ್ಡ ಕಂಪೆನಿಗಳು ಅಂದರೆ ಬ್ರುಹತ್ ಸಂಸ್ಥೆಗಳೊಂದಿಗೆ ಸಹಭಾಗಿತ್ವವನ್ನು ನಿರ್ವಹಿಸುತ್ತಾರೆ.  ಉದಾಹರಣೆಗಾಗಿ ಬರ್ಮಿಂಗ್ಯ್ಹ್ಮಾಮ್ ಹಿಪ್ರೊಡ್ರೋಮ್, ಬಿಲ್ಲಿ ಡೆಫ಼್ ಮೂವಿಂಗ್ ರೀಡರ್, ಆರ್.ಇ.ಪಿ. ದಿ ಇನ್ಸ್ಟಿಟ್ಯೂಟ್ ಆಂಡ್ ಅದರ್ಸ್.  ಇವರು ಜನವರಿ ೨೦೧೬ ರಲ್ಲಿ ಸ್ಥಾಪಿತವಾದ ಉದಯೋನ್ಮುಖ ಸಂಸ್ಥೆಯ ಅಂದರೆ ಕಂಪೆನಿಯ ಪ್ರಾದೇಶಿಕ ಧ್ವನಿಯ ರಂಗಭೂಮಿಯಲ್ಲಿ ನಿವಾಸ ನೃತ್ಯ ನಿರ್ದೇಶಕರಾಗಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]

[]

ಹವ್ಯಾಸಗಳು

[ಬದಲಾಯಿಸಿ]
    ಹೆಲೆನ್ ಹ್ಯಾಲ್ಕಟ್ ಸಂಸ್ಕೃತಿ ಮತ್ತು ಕಲೆಗಳು ತುಂಬಿದ ಮಡಕೆ ಎಂದು ಹೇಳಬಹುದು ಏಕೆಂದರೆ ಇವರಿಗೆ ಹಲವಾರು ಕಲೆಗಳ ಮೇಲೆ ಹಿಡಿತವಿತ್ತು, ಅವುಗಳಲ್ಲಿ ನೃತ್ಯ , ನೃತ್ಯ ಸಂಯೋಜನೆ , ಕವಿತೆ , ನೃತ್ಯ ವಿದ್ಯಾಭ್ಯಾಸ , ಸಂಗೀತ ಮತ್ತು ಇತ್ಯಾದಿ. ಇವರಿಗೆ ಪ್ರಕೃತಿಯ ಮೇಲೆ ತುಂಬಾ ಕಾಳಜಿ ಇರುವುದರಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುತ್ತಾರೆ.
  1. https://commons.wikimedia.org/wiki/File:Helen_calcutt.JPG
  2. https://uk.linkedin.com/in/helencalcutt