ಸದಸ್ಯ:Vibha712/ನನ್ನ ಪ್ರಯೋಗಪುಟ
ಪವಿತ್ರ ಲೋಕೇಶ್
[ಬದಲಾಯಿಸಿ]ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದರಾದ ಮೈಸೂರು ಲೋಕೇಶ ಇವರ ತಂದೆ. ಜೋಗಿ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸುವ ನಟ ಆದಿ ಲೋಕೇಶ ಇವರ ಸಹೋದರ. ಪವಿತ್ರ ಲೋಕೇಶ, ಚಲನಚಿತ್ರ ಮತ್ತು ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಗುಪ್ತಗಾಮಿನಿ ಇವರು ನಟಿಸಿರುವ ಜನಪ್ರಿಯ ಕಿರುತೆರೆ ಧಾರಾವಾಹಿಗಳಲ್ಲಿ ಒಂದಾಗಿದೆ. ಜನುಮದ ಜೋಡಿ ಚಿತ್ರದಲ್ಲಿ ಇವರ ಅಭಿನಯ ಜನಮೆಚ್ಚುಗೆ ಪಡೆದಿದೆ.
ಪರಿಚಯ
[ಬದಲಾಯಿಸಿ]ಪವಿತ್ರ ಲೋಕೇಶ್ ಅವರು ಭಾರತದ ಚಲನಚಿತ್ರ ನಟಿ. ಅವರು ಹೆಚ್ಚಾಗಿ ತಮಿಳು, ತೆಲುಗು ಮತ್ತು ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ಕೆಲವು ಧಾರವಾಹಿಗಳಲ್ಲಿಯೂ ಅಭಿನಯಿಸಿದ್ದಾರೆ. ೨೦೦೮ರಲ್ಲಿ ಅವರು ಅಭಿನಯಿಸಿದ್ದ "ಸತ್ಯ ಇನ್ ಲವ್" ಚಿತ್ರಕ್ಕಾಗಿ ಅವರು ಹೆಚ್ಚಾಗಿ ಗುರುತಿಸಲ್ಪಟ್ಟರು. ಅವರಿಗೆ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ದೊರಕಿದೆ. ಕನ್ನಡ ಚಲನಚಿತ್ರಗಳಲ್ಲಿ ಅವರು ಪ್ರಖ್ಯಾತ ನಟಿ ಎನಿಸಿದ್ದಾರೆ. ಕನ್ನಡ ಚಿತ್ರೋದ್ಯಮದಲ್ಲಿ ಉತ್ತಮ ನಟಿಯಾಗಿದ್ದಾರೆ.
ಆರಂಭಿಕ ಜೀವನ
[ಬದಲಾಯಿಸಿ]thumb|ಪವಿತ್ರ ಲೋಕೇಶ್, ಅವರ ಪತಿ ಸಚಿಂದ್ರ ಪ್ರಸಾದ್ ಮತ್ತು ಅವರ ಮಗಳು ವಿಸ್ಕ್ರುತ ಪವಿತ್ರ ಲೋಕೇಶ್ ಅವರು ಜನಿಸಿದ್ದು ೧೯ನೇ ಫೆಬ್ರುವರಿ ೧೯೭೯ರಂದು.[೧] ಅವರು ತಮ್ಮ ೧೬ನೆಯ ವಯಸ್ಸಿನಲ್ಲಿ ಚಲನಚಿತ್ರಗಳಲ್ಲಿ ಅಭಿನಯಿಸಲು ಪ್ರಾರಂಭಿಸಿದರು.ಅವರ ತಂದೆಯ ನಿಧನದನಂತರ ಅವರಿಗೆ ಚಲನಚಿತ್ರದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿತು. ಪವಿತ್ರ ಲೋಕೇಶ್ ಅವರು ೨೦೦೮ರಲ್ಲಿಯೇ ಸಚಿಂದ್ರ ಪ್ರಸಾದ್ ಎಂಬ ನಟರೊಂದಿಗೆ ವಿವಾಹವಾದರು.
ಶಿಕ್ಶಣ
[ಬದಲಾಯಿಸಿ]ಮಹಾಜನಸ್, ಮೈಸೂರಿನಿಂದ ಬಿ.ಕಾಂ. ಪದವಿಯನ್ನು ಪಡೆದಿದ್ದಾರೆ.[೨]
ವೃತ್ತಿ
[ಬದಲಾಯಿಸಿ]ಪವಿತ್ರ ಲೋಕೇಶ್‍ರವರು ಹಲವಾರು ಕಲಾತ್ಮಕ ಚಲನಚಿತ್ರಗಳಲ್ಲಿ ನಟಿಸಿದ್ದರು.ಗಿರೀಶ್ ಕಸರವಳ್ಳಿಯವರ ಕೆಲವು ಕಲಾತ್ಮಕ ಚಲನಚಿತ್ರಗಳಲ್ಲಿ ನಟಿಸಿದ್ದರು.[೩] ಪವಿತ್ರ ಲೊಕೇಶ್‍ರವರು ೧೯೯೫ರಲ್ಲಿ ಎನ್.ಟಿ.ಜಯರಾಮ್ ರೆಡ್ಡಿ ನಿರ್ದೇಶಿಸಿದ ಅಂಬರೀಶ್‍ರವರ ಕನ್ನಡ ಚಲನಚಿತ್ರ "ಮಿಸ್ಟರ್ ಅಭಿಶೇಕ್" ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದರು. ಅದೇ ವರ್ಷ್ ದಲ್ಲಿ ಅವರಿಗೆ ಹೆಚ್.ಆರ್.ಭಾರ್ಗವ ಅವರು ನಿರ್ದೇಶಿನಿದ, ವಿಶ್ನುವರ್ಧನ್‍ರವರು ಅಭಿನಯಿಸಿದ "ಬಂಗಾರದ ಕಳಶ" ಎಂಬ ಚಿತ್ರದಲ್ಲಿ ಅಭಿನಯಿಸಲು ಅವಕಾಶ ದೊರೆಯಿತು.
ಚಲನಚಿತ್ರಗಳು
[ಬದಲಾಯಿಸಿ]ಅಂದಿನಿಂದ ಇಂದಿನವರೆಗು ಅವರು ನಟಿಸಿರುವ ಕೆಲವು ಕನ್ನಡ ಚಲನಚಿತ್ರಗಳು :
ಕನ್ನಡ ಚಲನಚಿತ್ರಗಳು
[ಬದಲಾಯಿಸಿ]- "ಜನುಮದ ಜೋಡಿ"(೧೯೯೬)
- "ಉಲ್ಟಾ ಪಲ್ಟಾ"(೧೯೯೭)
- "ತವರಿನ ತೇರು"(೧೯೯೭)
- "ಮಾವನ ಮಗಳು"(೧೯೯೭)
- "ಕುರುಬನ ರಾಣಿ"(೧೯೯೮)
- "ಜಗತ್ ಕಿಲಾಡಿ"(೧೯೯೮)
- "ಹಬ್ಬ"(೧೯೯೯)
- "ಯಜಮಾನ"(೨೦೦೦)
- "ಶಿವಪ್ಪ ನಾಯಕ"(೨೦೦೧)
- "ನಮ್ಮ ಸಂಸಾರ ಆನಂದ ಸಾಗರ"(೨೦೦೧)
- "ಮುಸ್ಸಂಜೆ"(೨೦೦೧)
- "ಹುಚ್ಚ"(೨೦೦೧)
- "ಅಮ್ಮ"(೨೦೦೧)
- "ನಾನು ನಾನೇ"(೨೦೦೨)
- "ಮೇಕಪ್"(೨೦೦೨)
- "ಸ್ವಾತಿಮುತ್ತು"(೨೦೦೩)
- "ಬಾಲ ಶಿವ"(೨೦೦೩)
- "ರಾಜ ನರಸಿಂಹ"(೨೦೦೩)
- "ನಿಜ"(೨೦೦೪)
- "ಮೊಂಡ"(೨೦೦೪)
- "ಆಕಾಶ್"(೨೦೦೫)
- "ರಾಕ್ಶಸ"(೨೦೦೫)
- "ಪಾಂಡವರು"(೨೦೦೬)
- "ಮಸ್ತಿ"(೨೦೦೭)
- "ಇ ಪ್ರೀತಿ ಒಂಥರಾ"(೨೦೦೭)
- "ನಾಯಿ ನೆರಳು"(೨೦೦೭)
- "ಮಂದಾಕಿಣಿ"(೨೦೦೮)
- "ಮೊಗ್ಗಿನ ಜಡೆ"(೨೦೦೮)
- "ಮಿಸ್ಟರ್ ಗರಗಸ"(೨೦೦೮)
- "ಸವಾರಿ"(೨೦೦೯)
- "ಕನಸೆಂಬೋ ಕುದುರೆಯನೇರಿ"(೨೦೧೦)
- "ಅನಿಶ್ಚಿತ"(೨೦೧೦)
- "ಆಟ"(೨೦೧೧)
- "ದುಡ್ಡೆ ದೊಡ್ಡಪ್ಪ"(೨೦೧೧)
- "ಕಾಲ್ಗೆಜ್ಜೆ"(೨೦೧೧)
- "ಪ್ರಾರ್ತನೆ"(೨೦೧೨)
- "ಸ್ನೇಹ ಯಾತ್ರೆ"(೨೦೧೩)
- "ಬರ್ಫಿ"(೨೦೧೩)
- "ಚಿರಾಯು(೨೦೧೩)
- "ಡವ್"(೨೦೧೫)
- "ಲೊಡ್ಡೆ"(೨೦೧೫)
- "ಎಂದೆಂದಿಗು"(೨೦೧೫)
- "ಗಂಗಾ"(೨೦೧೫) ಮುಂತಾದವು.
ಹೀಗೆ ಇವರು ಸುಮಾರು ೧೫೦ ಕನ್ನಡ ಚಲನಚಿತ್ರಗಳಲ್ಲಿ ಪಾತ್ರ ವಹಿಸಿದ್ದಾರೆ.
ತೆಲುಗು ಚಲನಚಿತ್ರಗಳು
[ಬದಲಾಯಿಸಿ]ಪವಿತ್ರ ಲೋಕೇಶ್ ಅವರು ಕಳೆದ ಎರಡು ವರ್ಷಗಳಿಂದ ತೆಲುಗು ಚಲನಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಅವರಿಗೆ "ರೇಸ್ ಗುರ್ರಂ", "ಮಳ್ಳಿ ಮಳ್ಳಿ ಇದಿ ರಾನಿ ರೋಜು", "ಲಕ್ಶ್ಮೀ ರಾವೆ ಮಾ ಇಂಟಿಕಿ" ಚಲನಚಿತ್ರಗಳು ಯಶಸ್ಸನ್ನು ತಂದು ಕೊಟ್ಟಿವೆ. ಅವರು ಪೋಷಕ ನಟಿಯಾಗಿ ಯಶಸ್ವಿ ತೆಲುಗು ಚಿತ್ರಗಲಳಾದ " ಸನ್ ಆಫ್ ಸತ್ಯಮೂರ್ತಿ", "ಟೆಂಪರ್", "ಪಂಡಗ ಚೇಸ್ಕೊ" ಮತ್ತು "ಬ್ರೂಸ್ಲಿ"ಯಲ್ಲಿ ಅಭಿನಯಿಸಿದ್ದಾರೆ. ಅವರು ಬಾಲಕೃಷ್ಣರವರ ಚಿತ್ರ "ಡಿಕ್ಟೇಟರ್" (೨೦೧೬) ಹಾಗು "ಕೃಷ್ಣಾಷ್ಟಮಿ"ಯಲ್ಲಿ(೨೦೧೬) ಅಭಿನಯಿಸಿದ್ದಾರೆ. ಅವರು ತಾಯಿ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.[೪]
ಮುಕ್ತಾಯ
[ಬದಲಾಯಿಸಿ]ಈ ಪಾತ್ರಗಳಲ್ಲಿ ಅವರ ಅಭಿನಯ ನೈಜವಾಗಿರುತ್ತದೆ. ಅವರ ಉತ್ತಮ ಅಭಿನಯ ಅವರಿಗೆ ಹೆಸರು, ಗೌರವ, ಕೀರ್ತಿಯನ್ನು ತಂದು ಕೊಟ್ಟಿದೆ. ಒಟ್ಟಾರೆ ಅವರೊಬ್ಬ ಉತ್ತಮ ಪ್ರಖ್ಯಾತ ಅಬಿನೇತ್ರಿಯೆಂದು ಹೆಸರು ಮಾಡಿದ್ದಾರೆ.