ಸದಸ್ಯ:Veeresh Handigi/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀ ಚನ್ನಮಲ್ಲಿಕಾರ್ಜುನರ ಬದುಕು


	ಶ್ರೀ ಚನ್ನಮಲ್ಲಿಕಾರ್ಜುನರು ವೀರಶೈವ ಸಮಾಜದ ಧರ್ಮ, ಸಾಹಿತ್ಯ, ಸಂಸ್ಕೃತಿ ಕುರಿತು ವಿಶೇಷ ಕಳಕಳಿಯುಳ್ಳವರಾಗಿದ್ದರು. ಪ್ರತಿಯೊಬ್ಬರಿಗೂ ಧರ್ಮದ ಅರಿವು ಇರಬೇಕು. ಸಾಹಿತ್ಯದ ಪರಿಚಯವಿರಬೇಕು. ಸಂಸ್ಕೃತಿಯನ್ನು ಅಳವಡಿಸಿಕೊಂಡವರಾಗಿರಬೇಕು. ಈ ಉದಾತ್ತ ಧ್ಯೇಯ ಇರಿಸಿಕೊಂಡ ಚನ್ನಮಲ್ಲಿಕಾರ್ಜುನರು ಪತ್ರಿಕೆ ಮತ್ತು ಗ್ರಂಥಗಳ ಪ್ರಕಟನೆ ಮೂಲಕ ಪ್ರಸಾರ ಮಾಡುವ ಪರಮೊದ್ದೇಶವನ್ನಿರಿಸಿಕೊಂಡಿದ್ದರು. ಜೊತೆಗೆ ಅಲ್ಲಲ್ಲಿ ತಮ್ಮ ಅಧ್ಯಯನ ಪೂರ್ಣ ಉಪನ್ಯಾಸಗಳನ್ನು ನೀಡುತ್ತ ಜನಜಾಗೃತಿಗೈಯುತ್ತಿದ್ದರು. ಪತ್ರಿಕೆ ಹಾಗೂ ಗ್ರಂಥಗಳ ಪ್ರಕಟನೆ ಅವಿಭಾಜ್ಯವಾಗಿ ಚನ್ನಮಲ್ಲಿಕಾರ್ಜುನರ ಬದುಕಿನಲ್ಲಿ ಬಿರುಕಿಲ್ಲದೆ ಬೆರೆತುಕೊಂಡಿದ್ದವು. 
	ಚನ್ನಮಲ್ಲಿಕಾರ್ಜುನರು ತಮ್ಮ ಬಾಳಿನುದ್ದಕ್ಕೂ ಸದ್ಧರ್ಮವಂತರಾಗಿಯೇ ಬದುಕಿದರು. ಬರಹದಂತೆ ಬದುಕು. ಬದುಕಿದಂತೆ ಬರಹವಿದ್ದವರು ಅಪರೂಪ. ಅಂಥ ಅಪರೂಪದ ಬರಹಗಾರರಲ್ಲಿ ಚನ್ನಮಲ್ಲಿಕಾರ್ಜುನರೂ ಒಬ್ಬರಾಗಿದ್ದರು. ಅವರ ಬದುಕು ಬರಹ ಒಂದೇ ಆಗಿದ್ದಿತು. ಅವರದು ಶರಣ ಜೀವನ. ಅವರು ನಿಜವಾದ ಶಿವಾನುಭಾವಿಗಳಾಗಿದ್ದರು. ಅನೇಕ ಮಹಾತ್ಮರ ಸಾನ್ನಿಧ್ಯ, ಸಂಪರ್ಕ, ಕೃಪೆಯಿಂದಾಗಿ ತಮ್ಮ ಪರಿಶುದ್ಧ ಜೀವನವನ್ನು ರೂಪಿಸಿಕೊಂಡರು. ಧರ್ಮ, ತತ್ವಗಳು ಕೇವಲ ಬಾಯಿಯಿಂದ ಹೇಳುವುದಕ್ಕಾಗಿ ಅಲ್ಲ, ಬದುಕಿನಲ್ಲಿ ಅಳವಡಿಸಿಕೊಳ್ಳುವುದಕ್ಕಾಗಿ ಎಂಬುದನ್ನು ತಮ್ಮ ನಿತ್ಯದ ನಡೆ ನುಡಿಯಲ್ಲಿ ತೋರಿಸಿಕೊಟ್ಟವರು. ಸತತಾಭ್ಯಾಸ, ಅಪಾರ ಪರಿಶ್ರಮ, ಎಂಥ ಅಡೆತಡೆ ಬಂದರೂ ಅವುಗಳನ್ನು ಎದುರಿಸಿ ಕೈಕೊಂಡ ಉದಾತ್ತ ಮಣಿಹಗಳನ್ನು ಪೂರೈಸುವ ಅದಮ್ಯ ಛಲ, ಸತ್ಯಾನ್ವೇಷಣೆ, ತೀವ್ರ ಕುತೂಹಲ ಅವರಲ್ಲಿದ್ದವು. ಅಂತೆಯೇ ಕನ್ನಡ, ಸಂಸ್ಕೃತ, ಇಂಗ್ಲೀಷ್ ಭಾಷೆಗಳಲ್ಲಿಯ ಕೃತಿಗಳನ್ನು ಅಧ್ಯಯನ ಮಾಡಿ ತಾವು ಸಂಗ್ರಹಿಸಿದ ಜ್ಞಾನ ಸಂಪತ್ತನ್ನು ಇತರರಿಗೆ ಪತ್ರಿಕೆ ಹಾಗೂ ಗ್ರಂಥಗಳ ಮೂಲಕ ದಾಸೋಹಗೈದ ಪ್ರಯತ್ನ ಪ್ರಶಂಸನೀಯ. 
	ಈ ದಿಸೆಯಲ್ಲಿ ಅವರ ಜೀವನ, ಸಾಧನೆ ಅರಿಯುವುದು ಅವಶ್ಯ. 
ಹಾವೇರಿಯ ಹಿನ್ನೆಲೆ:
	ಚನ್ನಮಲ್ಲಿಕಾರ್ಜುನರ ಪೂರ್ವಜರು ಮೂಲತಃ ಹಾವೇರಿಯವರು. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹಾವೇರಿ ಅಂದಿನ ಧಾರವಾಡ ಜಿಲ್ಲೆಯ ಬಹು ದೊಡ್ಡ ತಾಲೂಕು ಕೇಂದ್ರವಾಗಿ ವ್ಯಾಪಾರ - ವ್ಯವಹಾರಗಳಿಗೆ ಪ್ರಸಿದ್ಧವಾಗಿತ್ತು. ಇದು ಧಾರವಾಡ ಜಿಲ್ಲೆಯಿಂದ ಬೇರ್ಪಟ್ಟು 1997 ಅಗಸ್ಟ 15 ರಂದು ಹೊಸ ಜಿಲ್ಲೆಯಾಗಿ ಸ್ಥಾಪಿತಗೊಂಡು ಏಳು ತಾಲೂಕುಗಳನ್ನು ಹೊಂದಿದೆ. ಜಿಲ್ಲೆಯ ಒಟ್ಟು ವಿಸ್ತೀರ್ಣ 4,262.7 ಚ.ಕಿ.ಮೀ. 1991 ರ ಜನಗಣತಿಯ ಪ್ರಕಾರ 11,21,714 ಜನಸಂಖ್ಯೆಯನ್ನು ಹೊಂದಿದೆ. ಭೌಗೋಳಿಕವಾಗಿ ಈ ಜಿಲ್ಲೆಯು ಹೆಚ್ಚಿನ ಪ್ರಮಾಣದಲ್ಲಿ ಸಣ್ಣಪುಟ್ಟ ಗುಡ್ಡ - ಬೆಟ್ಟಗಳ ಪ್ರದೇಶವಾಗಿದ್ದು ಕಪ್ಪು ಮಣ್ಣಿನ ಭೂಮಿಯನ್ನು ಹೊಂದಿದೆ. 


.............................




	ಹಾವೇರಿಯು ಪ್ರಾಚೀನ ಶಾಸನಗಳಲ್ಲಿ ಪಾವರಿ, ಹಾವರಿ, ಹಾವೇರಿ, ನಳಪದಿ ಎಂದು ಉಲ್ಲೇಖಗೊಂಡಿದೆ. ರಾಷ್ಟ್ರಕೂಟರ ಚಕ್ರವರ್ತಿ ಮೂರನೇ ಕೃಷ್ಣನ ಕಾಲದ ಒಂದು ಶಿಲಾಶಾಸನದ ಪ್ರಕಾರ ಹಾವೇರಿಯು ಹತ್ತನೆಯ ಶತಮಾನಕ್ಕಿಂತ ಹಿಂದೆಯೇ ಅಸ್ತಿತ್ವದಲ್ಲಿತ್ತು. ಕಲ್ಯಾಣದ ಚಾಲುಕ್ಯ, ಕಳಚೂರಿ, ಹೊಯ್ಸಳ ಮತ್ತು ಸೇವುಣ ಅರಸರ ಆಳ್ವಿಕೆಗೆ ಇದು ಒಳಪಟ್ಟಿತ್ತು. ಹದಿನೆಂಟನೆಯ ಶತಮಾನದ ಆರಂಭಕ್ಕೆ ಪೇಶ್ವೆ ಅರಸರ ಪ್ರಯತ್ನದಿಂದಾಗಿ ಹಾವೇರಿ ಪ್ರಸಿದ್ಧ ವ್ಯಾಪಾರ ಕೇಂದ್ರವಾಯಿತು. 1905ರಲ್ಲಿ ತಾಲೂಕು ಕೇಂದ್ರವಾಯಿತು.1 ಇತ್ತೀಚಿನವರೆಗೂ ಇದು ಯಾಲಕ್ಕಿ ಸಂಸ್ಕರಣ ಕೇಂದ್ರವಾಗಿ ಪ್ರಖ್ಯಾತಿಯಾಗಿತ್ತು. ಮಲೆನಾಡಿನ ಹಾಸನ ಜಿಲ್ಲೆಯ ಸಕಲೇಶಪುರ ಭಾಗದಿಂದ ಯಾಲಕ್ಕಿಯನ್ನು ತರಿಸಿಕೊಂಡು ಹಾವೇರಿಯಲ್ಲಿ ಸಂಸ್ಕರಣ ಮಾಡಲಾಗುತ್ತಿತ್ತು. ಸುಂದರ ಯಾಲಕ್ಕಿ ಮಾಲೆಗಳಿಗೆ ಈಗಲೂ ಹೆಸರಾಗಿದೆ.2 ಹೀಗೆ ಮಲೆನಾಡಿನೊಂದಿಗೆ ಬಯಲು ನಾಡಿನ ಹಾವೇರಿಯ ಸಂಪರ್ಕ ಬೆಳೆದು ಬಂದಿತ್ತು. 
	ಚನ್ನಮಲ್ಲಿಕಾರ್ಜುನರು ಮೂಲತಃ ಹಾವೇರಿಯ ಕೋರಿಶೆಟ್ಟಿ ಮನೆತನದವರು ವ್ಯಾಪಾರಿ ವೃತ್ತಿಯವರು. ಚನ್ನಮಲ್ಲಿಕಾರ್ಜುನರ ಅಜ್ಜಂದಿರು ತಮ್ಮ ಮಗ ನೂರೊಂದಪ್ಪನೊಡನೆ ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ವ್ಯಾಪಾರ ಕೇಂದ್ರ ಶಿರಾಳಕೊಪ್ಪಕ್ಕೆ ಬಂದರು. 
ಶಿರಾಳಕೊಪ್ಪದ ಹಿನ್ನೆಲೆ : 
	ಶಿರಾಳಕೊಪ್ಪ ಪ್ರಾಚೀನ ಕಾಲದಿಂದಲೂ ಬಹು ಪ್ರಸಿದ್ಧವಾದ ಮಲೆನಾಡಿನ ವ್ಯಾಪಾರಿ ಕೇಂದ್ರ. ಇದಕ್ಕೆ ಮಲೆನಾಡಿನ ಅಗಸೆ (ಗೇಟ್‌ವೇ ಆಫ್ ಮಲೆನಾಡು) ಎಂದು ಕರೆಯುತ್ತಿದ್ದರು. ಬಳ್ಳಿಗಾವೆಯ ಪಕ್ಕದಲ್ಲಿಯೇ ಇರುವ ಈ ಊರು ವೀರ ಬಣಂಜುಗಳ ಮುಖ್ಯ ಕೇಂದ್ರಗಳಲ್ಲೊಂದು. ಐಹೊಳೆಯಿಂದ ಅಣ್ಣಿಗೆರೆ, ಲಕ್ಷ್ಮೇಶ್ವರ, ಹಾನಗಲ್ಲು, ಆಲೂರು, ಬಳ್ಳಿಗಾವಿ, ಅರಸಿಕೆರೆ, ಬೆಂಗಳೂರು, ಹರದನ ಹಳ್ಳಿ, ಮಧುರೆಯವರೆಗೆ ವೀರಬಣಂಜುಗಳು ಎತ್ತುಗಳ ಕಂಟಲಿಯ ಮೇಲೆ ಸಾಮಗ್ರಿಗಳನ್ನು ಸಾಗಿಸಿ ವ್ಯಾಪಾರ ಮಾಡುತ್ತಿದ್ದರು. ಶಿರಾಳಕೊಪ್ಪ ಕೇಂದ್ರದಿಂದ ಮಲೆನಾಡಿನ ವಸ್ತುಗಳಾದ ಯಾಲಕ್ಕಿ, ಮೆಣಸು, ಶುಂಠಿ, ಅಡಿಕೆ, ಅರಣ್ಯೋತ್ಪನ್ನ ವಸ್ತುಗಳು ಮೊದಲಾದವುಗಳನ್ನು ತುಂಬಿಕೊಂಡು ವಾಲೋಜಿ, ಚಿತ್ತೂರುಗಳ ಮೂಲಕ ಮದ್ರಾಸು ನಗರದವರೆಗೂ ವ್ಯಾಪಾರ ಮಾರ್ಗವೊಂದಿತ್ತು. ವಿವಿಧ ವರ್ಗದ ಸೆಟ್ಟಿಗಳು ಬಣಕ್ಕೆ ಸಾವಿರ ಎತ್ತುಗಳ ಮಾಲೀಕರಾಗುತ್ತಿದ್ದರು. ಈ ವ್ಯಾಪಾರಸ್ಥರಿಗೆ ಸಮಾಜದಲ್ಲಿ ಬಹಳ ಮಾನ ಮನ್ನಣೆಯಿತ್ತು. ಲಾಭವನ್ನು ಧಾರ್ಮಿಕ ವಿಧಿ ವಿಧಾನಗಳನ್ನನುಸರಿಸಿ ವಸ್ತುಗಳ ಮೇಲೆ ಇಡುತ್ತಿದ್ದರಲ್ಲದೆ ಧನದಾಸೆಯಿಂದ ಮನಸ್ಸಿಗೆ ಬಂದಷ್ಟು ಲಾಭ ತಕ್ಕೊಳ್ಳುವ ಪದ್ಧತಿ ಇವರದಾಗಿರಲಿಲ್ಲ. ಎತ್ತುಗಳ ಸಂಗಡ ಹೋಗುವ ವೀರಬಣಂಜು ಸಂಘದ ಹರದರೆಲ್ಲ ಶೂರರಾಗಿರುತ್ತಿದ್ದರು. ಕವಣೆಕಲ್ಲು ಹೊಡೆಯುವುದರಲ್ಲಿ ನಿಪುಣರು. ಇವರು ಪಯಣಗಳ ಮೇಲೆ ಪಯಣ ಮಾಡಿ ತಮ್ಮ ಸಮಯಾಚಾರಕ್ಕೆ ಕಾಲವಾದಾಗ ಹೊಳೆ ಅಥವಾ ಹಳ್ಳ, ಸರೋವರ, ಕೆರೆ, ಹೊಂಡಗಳಿರುವ ಸ್ಥಳಗಳಲ್ಲಿ ಬೀಡು ಬಿಟ್ಟು ಡೇರೆಹೊಡೆದು ಸಾಮಾನು ಸರಂಜಾಮುಗಳನ್ನೆಲ್ಲ ಇಳಿಸಿ, ಎತ್ತುಗಳನ್ನು ಮೇಯಲು ಬಿಟ್ಟು ತಾವು ತಮ್ಮ ಪೂಜೆ, ಪ್ರಸಾದ, ವ್ಯವಹಾರಗಳನ್ನು ಮುಗಿಸುತ್ತಿದ್ದರು. ಇವರು ಇಳಿದ ಕೆಲವು ಸ್ಥಳಗಳು ಸಂತೆಯ ಮಾಳಗಳೂ ಆಗಿರುತ್ತಿದ್ದವು. ತಮ್ಮ ಸಮಯಾಚಾರಕ್ಕಾಗಿ ಈ ವೀರಬಣಂಜುಗಳು ತಮ್ಮ ಲಾಭಾಂಶದಿಂದ ಕೆಲವು ಮಠಗಳನ್ನು ನಿರ್ಮಾಣಗೊಳಿಸಿ ಅಲ್ಲಿ ಸಮಯಾಚಾರದ ಸ್ವಾಮಿಗಳನ್ನು ನೇಮಕ ಮಾಡಿಕೊಂಡು ಅವರಿಂದ ತೀರ್ಥ ಪ್ರಸಾದ ಸ್ವೀಕರಿಸುತ್ತಿದ್ದರು. ಕೆರೆ ಕುಂಟೆಗಳನ್ನು ಕಟ್ಟಿಸುತ್ತಿದ್ದರು. ವೀರಶೆಟ್ಟಿ ಒಡ್ಡು ಎಂದು ಹೇಳುವ ಕೆರೆಯೊಂದು ಬಳ್ಳಿಗಾವಿ ತಾಳಗುಂದಗಳ ಮಧ್ಯದಲ್ಲಿದೆ. ಈ ಕೆರೆಯನ್ನು ವೀರಬಣಂಜುಗಳು ತಮ್ಮ ಎತ್ತುಗಳಿಗೆ ನೀರು ಕುಡಿಸಲು ಅವುಗಳ ಮೈ ತೊಳೆಯಲು ನಿರ್ಮಾಣಗೊಂಡಿತೆಂದು ಹೇಳಲಾಗುತ್ತಿದೆ. ಶಿರಾಳಕೊಪ್ಪ ಕೇಂದ್ರ ಸ್ಥಳವಾದ್ದರಿಂದ ಇಲ್ಲಿ ಸಾವಿರಾರು ಎತ್ತುಗಳು ಯಾವಾಗಲೂ ಇರುತ್ತಿದ್ದವು. ನೀರು ಕುಡಿದು ಈಜಾಡಿ ಪಕ್ಕದ ವಿಪುಲವಾದ ಹುಲ್ಲುಗಾವಲಿನಲ್ಲಿ ಮೇಯುತ್ತಿದ್ದುವಂತೆ. ಶಿರಾಳಕೊಪ್ಪದ ಪೇಟೆಯಿಂದಲೇ ಬನವಾಸಿ, ಬಳ್ಳಿಗಾವಿ, ತಾಳಗುಂದ ಮೊದಲಾದ ಪ್ರಸಿದ್ಧ ಐತಿಹಾಸಿಕ ಸ್ಥಳಗಳ ನಾಗರಿಕರಿಗೆ, ರಾಜ ಮಹಾರಾಜರಿಗೆ ಅವಶ್ಯಕ ವಸ್ತುಗಳು ಪೂರೈಸಲ್ಪಡುತ್ತಿದ್ದವು. ಶ್ರೀಮಂತ ವ್ಯಾಪಾರಿಗಳಿಂದ ತುಂಬಿದ ಈ ಶಿರಾಳಕೊಪ್ಪಕ್ಕೆ ಸಿರಿವೊಳಲು ಎಂಬ ಅನ್ವರ್ಥಕ ನಾಮವೂ ಉಂಟಾಯಿತು. ಶಾಸನಗಳಲ್ಲಿ ಸಿರಿವೊಳಲು ಎಂದೇ ಈ ಊರು ಪ್ರಸಿದ್ಧವಾಗಿದೆ. ಇಂದಿಗೂ ವೀರಬಣಂಜುಗಳ ವಂಶಜರು ಈ ಭಾಗದಲ್ಲಿದ್ದಾರೆ. ಅವರಲ್ಲಿ ಅನೇಕರು ಈ ವ್ಯಾಪಾರದಿಂದ ವಿಮುಖರಾಗಿ ಬೇರೆ ಬೇರೆ ವೃತ್ತಿಯಲ್ಲಿ ನಿರತರಾಗಿದ್ದಾರೆ. ಕೋರಿಯವರು ಕೋರಿಶೆಟ್ಟರು, ಶೀಲವಂತರು, ಬಣಜಿಗರು, ವಾಲಿಸೆಟ್ಟಿ, ಪಟ್ಟಣಸೆಟ್ಟಿ, ಬಣಕಾರಸೆಟ್ಟಿ ಮುಂತಾದ ಅನೇಕ ಪ್ರಕಾರಗಳು ಈ ವ್ಯಾಪಾರಿ ಜನಗಳ ಪ್ರಭೇದಗಳು. ಈಗ ಅವರ ವಂಶಜರನ್ನು ನಾವು ಶಿರಾಳಕೊಪ್ಪದ ನಾಡಿನಲ್ಲಿ ಗುರುತಿಸಬಹುದು. ಶಿರಾಳಕೊಪ್ಪದಿಂದ ಒಂದು ಮಾರ್ಗ ಮದ್ರಾಸು ಮತ್ತು ಮಧುರೆಗಳ ಕಡೆಗೆ ಹೋದರೆ, ಬೈಲು ಸೀಮೆಯ ಅನೇಕ ಪದಾರ್ಥಗಳು ಸೊರಬ, ಸಾಗರಗಳ ಮಾರ್ಗವಾಗಿ ಭಟಕಳ, ಹೊನ್ನಾವರಗಳಿಗೂ, ಬನವಾಸಿ ಶಿರಸಿಗಳ ಮಾರ್ಗವಾಗಿ ಕುಮಟಾ, ಗೋಕರ್ಣಗಳ ಕಡೆಗೂ ರವಾನಿಸಲ್ಪಡುತ್ತಿದ್ದವು. ಹೀಗೆ ಅನೇಕ ಕಡೆಗಳಿಂದ ಒಂದುಗೂಡುವ ಕೇಂದ್ರ ವ್ಯಾಪಾರ ಸ್ಥಳವಾದ ಶಿರಾಳಕೊಪ್ಪದ ಕೀರ್ತಿ ಆಕರ್ಷಣೀಯವಾದುದಾಗಿತ್ತು.3
	ಶಿರಾಳಕೊಪ್ಪಕ್ಕೆ ಬಂದ ಚನ್ನಮಲ್ಲಿಕಾರ್ಜುನರ ವಂಶಜರು ವ್ಯಾಪಾರ ದೃಷ್ಟಿಯಿಂದ ಬಂದರೋ ಹೇಗೆ ತಿಳಿದುಬರುವುದಿಲ್ಲ. ನನ, ಬಾಲ್ಯ, ಶಿಕ್ಷಣ:
	ಚನ್ನಮಲ್ಲಿಕಾರ್ಜುನರ ತಂದೆ ನೂರೊಂದಪ್ಪನವರು ಶಿರಾಳಕೊಪ್ಪದಲ್ಲಿ ಕೂಲಿಮಠದ ಅಯ್ಯಗಳಾಗಿ ತಿಂಗಳಿಗೆ 5ರೂ.ಗಳ ಸಂಬಳದ ಮೇಲೆ ಸೇವೆ ಮಾಡತೊಡಗಿದರು. ನೂರೊಂದಪ್ಪನವರಿಗೆ ಇಬ್ಬರು ಮಕ್ಕಳು. ಹಿರಿಯ ಮಗನೇ ಚನ್ನಮಲ್ಲಪ್ಪ. ಇನ್ನೊಬ್ಬ ಸಿದ್ಧಲಿಂಗಪ್ಪ. ಚನ್ನಮಲ್ಲಪ್ಪನವರು ಕ್ರಿ. ಶ. ಸು. 1874ನೇ ಸಾಲಿನಲ್ಲಿ ಜನಿಸಿರಬಹುದೆಂದು ಅವರ ಶಿಷ್ಯರಾದ ಡಿ. ಎಸ್. ಗುರುಬಸಪ್ಪನವರು ಹೇಳಿದುದನ್ನು ಎರೆಸೀಮೆ ಚನ್ನಪ್ಪನವರು ಉಲ್ಲೇಖಿಸಿದ್ದಾರೆ.4 ಇದನ್ನೇ ಚನ್ನಮಲ್ಲಪ್ಪನವರ ಜನನ ವರ್ಷ ಎಂದು ತಿಳಿಯಬಹುದಾಗಿದೆ. 
	ಅವರ ತಂದೆ ತಾಯಂದಿರು ಅತ್ಯಂತ ಆಚಾರಶೀಲರು, ಶಿವಾನುಭಾವಿಗಳು, ಅವರ ಸಂಸ್ಕಾರ ಬಲದಿಂದ ಚನ್ನಮಲ್ಲಪ್ಪನವರು ಬಾಲ್ಯದಿಂದಲೇ ಶಿವಾನುಭವ ಸಂಪನ್ನರಾಗಿ ಬೆಳೆದರು. ಸ್ನಾನ, ಪೂಜೆ ಇಲ್ಲದೆ ಎಂದೂ ಪ್ರಸಾದ ಸ್ವೀಕರಿಸುತ್ತಿರಲಿಲ್ಲ. ಸ್ವಲ್ಪ ದೊಡ್ಡವರಾದ ಮೇಲೆ ತಂದೆ ನೂರೊಂದಪ್ಪನವರು ಇವರನ್ನು ತಮ್ಮ ಶಾಲೆಗೆ ಸೇರಿಸಿಕೊಂಡು ವಿದ್ಯಾಭ್ಯಾಸ ಮಾಡಿಸಿದರು. ಮುಂದೆ ನೂರೊಂದಪ್ಪನವರ ಗಾವಟಿ ಶಾಲೆ ಸರಕಾರಿ ಶಾಲೆಯಾಯಿತು. ಚನ್ನಮಲ್ಲಪ್ಪನವರು ಲೋವರ್ ಸೆಕೆಂಡರಿ ಪರೀಕ್ಷೆಯ ತರಗತಿಯಲ್ಲಿ ಓದುತ್ತಿರುವಾಗ ಶಾಲಾ ತನಿಖಾಧಿಕಾರಿಗಳು ಶಾಲೆಗೆ ಬಂದರು. ಅವರಿಗೆ ಬಾಲಕ ಚನ್ನಮಲ್ಲಪ್ಪನ ಪ್ರತಿಭೆ ಜಾಣ್ಮೆಗಳು ಮೆಚ್ಚುಗೆಯಾದವು. ಆಗ ಶಾಲೆಗೆ ಬೇಕಾಗಿದ್ದ ಒಬ್ಬ ಶಿಕ್ಷಕನ ಹುದ್ದೆಯನ್ನು ಓದುತ್ತಿರುವ ಬಾಲಕ ಚನ್ನಮಲ್ಲಪ್ಪನಿಗೆ ಕೊಟ್ಟು, ಓದುತ್ತ ಉಪಾಧ್ಯಾಯ ವೃತ್ತಿಯನ್ನು ಮಾಡುವ ಅವಕಾಶ ಕಲ್ಪಿಸಿದರು. ಅದೇ ವರ್ಷ ಚನ್ನಮಲ್ಲಪ್ಪನವರು ಲೋವರ್ ಸೆಕೆಂಡರಿ ಪರೀಕ್ಷೆಯಲ್ಲಿ ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾಗಿ ಕ್ರಿ. ಶ. 1889 ನೇ ಸಾಲಿನಲ್ಲಿ ಪೂರ್ಣಾವಧಿ ಶಿಕ್ಷಕ ಹುದ್ದೆಯನ್ನು ತಾವು ಓದಿದ ಸ್ಕೂಲಿನಲ್ಲಿಯೇ ಪಡೆದರು. ಮುಂದೆ ಅಪ್ಪರ್ ಸೆಕೆಂಡರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 1912ರಲ್ಲಿ ಶಿರಾಳಕೊಪ್ಪದಲ್ಲಿ ಎ. ವ್ಹಿ. ಸ್ಕೂಲ ಆದ ಮೇಲೆ ಆ ಸ್ಕೂಲಿನ ಅಸಿಸ್ಟಂಟ್ ಮಾಸ್ಟರ್ ಆಗಿ, ಮುಂದೆ ಹೆಡ್ ಮಾಸ್ಟರ ಆದರು. 
	ಸುಮಾರು 1924ರಲ್ಲಿ ಇವರು ನಿವೃತ್ತಿ ವೇತನವನ್ನು ಹೊಂದಲು ಅರ್ಹರಾದಾಗ ಹೆಡ್ ಮಾಸ್ಟರ ಹುದ್ದೆಯಿಂದ ಮಾಹೆಯಾನ 25 ರೂ. ಗಳ ನಿವೃತ್ತಿ ವೇತನದ ಮೇಲೆ ಕೆಲಸದಿಂದ ನಿವೃತ್ತರಾದರು5 ಎಂದು ಡಿ. ಎಸ್. ಗುರುಬಸಪ್ಪನವರು ಹೇಳಿದ್ದಾರೆ. 
	ಚೆನ್ನಮಲ್ಲಪ್ಪನವರಿಗೆ ಬಾಲ್ಯದಿಂದ ಓದುವುದರಲ್ಲಿ ಎಷ್ಟು ಆಸಕ್ತಿಯಿತ್ತೋ ಅಷ್ಟೇ ಆಸಕ್ತಿ, ಉತ್ಸಾಹ ವ್ಯಾಪಾರ ಮಾಡುವುದರಲ್ಲಿಯೂ ಇತ್ತು. ಪ್ರಾಥಮಿಕ 3, 4, 5ನೆಯ ತರಗತಿಯಲ್ಲಿ ಓದುವಾಗ ತಂದೆ ನೂರೊಂದಪ್ಪನವರು ಮಗನನ್ನು ಸಂತೆಯಲ್ಲಿ ಬೆಂಕಿ ಪೊಟ್ಟಣಗಳನ್ನು ಮಾರಲಿಕ್ಕೆ ಕಳುಹಿಸುತ್ತಿದ್ದರಂತೆ. ಆ ವ್ಯಾಪಾರದಲ್ಲಿ ಪ್ರತಿ ವಾರವೂ ಚನ್ನಮಲ್ಲಪ್ಪನವರಿಗೆ ಚೆನ್ನಾಗಿ ಲಾಭವಾಗುತ್ತಿತ್ತು. ಆಗ 1 ಆಣೆಗೆ ಒಂದು ಡಜನ್ ಬೆಂಕಿ ಪೊಟ್ಟಣಗಳ ಮಾರಾಟದ ಕಾಲ. ಚನ್ನಮಲ್ಲಪ್ಪನು ಒಂದು ಚೀಲದಲ್ಲಿ ಬೆಂಕಿಪೊಟ್ಟಣ ತುಂಬಿಕೊಂಡು ರಾಗವಾಗಿ ಹಾಡುತ್ತ ಮಾರುತ್ತಿದ್ದ. ಜನರು ಆಕರ್ಷಿತರಾಗಿ ನೂರೊಂದಪ್ಪ ಮಾಸ್ತರ ಮಗನೆಂದು ಪ್ರೀತಿಯಿಂದ ಇವನ ಹತ್ತಿರವೇ ಬೆಂಕಿಪೊಟ್ಟಣ ಕೊಂಡುಕೊಳ್ಳುತ್ತಿದ್ದರಂತೆ. ಈ ವ್ಯಾಪಾರದ ಅಭಿರುಚಿಯೇ ಮುಂದೆ ಅವರು ದೊಡ್ಡವರಾಗಿ ಉಪಾಧ್ಯಾಯರಾದ ಮೇಲೆ ಹೆಚ್ಚಾಗಿ ಅನೇಕ ಬಗೆಯ ವ್ಯಾಪಾರ ಮಾಡುತ್ತಿದ್ದರಂತೆ. ಎಣ್ಣೆ, ರಾಗಿ, ಬತ್ತ, ಬೆಣ್ಣೆ ಮೊದಲಾದ ವ್ಯಾಪಾರವು ಇವರು ತಮ್ಮ ಉಪಾಧ್ಯಾಯ ವೃತ್ತಿಯ ಬಿಡುವಿನ ಸಮಯದ ಹವ್ಯಾಸವಾಗಿತ್ತು. ವ್ಯಾಪಾರ ಮಾಡುವವರಿಗೆ ಹಣಕೊಟ್ಟು ವ್ಯಾಪಾರ ಮಾಡಿಸಿ ಲಾಭಾಂಶವನ್ನು ಅವರಿಂದ ಪಡೆಯುತ್ತಿದ್ದರು. ಸುಗ್ಗಿಯಲ್ಲಿ ಅಗ್ಗವೆಂದು ಕಂಡುಬಂದ ಕಾಳು ಕಡಿಗಳನ್ನು ಅಳೆಸಿ, ಸಂಗ್ರಹ ಮಾಡಿ ಮಳೆಗಾಲದಲ್ಲಿ ಮಾರಾಟ ಮಾಡುತ್ತಿದ್ದರಂತೆ ಒಮ್ಮೆ ಬೆಲ್ಲವನ್ನು ಸಂಗ್ರಹಿಸಿಟ್ಟು ಮಳೆಗಾಲದಲ್ಲಿ ಮಾರಾಟ ಮಾಡಬೇಕೆನ್ನುವಷ್ಟರಲ್ಲಿ ಬೆಲ್ಲದ ಧಾರಣಿ ಕುಸಿದು ಹೋಗಲು, ಹಾನಿಯಾಗುವುದೆಂದು ಹಾಗೇ ಬಿಟ್ಟರಂತೆ. ಆದರೆ ತೀವ್ರ ಮಳೆಗಾಲದ ಪರಿಣಾಮವಾಗಿ ಸಂಗ್ರಹಿಸಿದ ಬೆಲ್ಲವೂ ನೀರಾಗಿ ಹರಿದು ಬಹಳ ನಷ್ಟ ಹೊಂದಿದರಂತೆ, ಜವಳಿ ಅಂಗಡಿ ಮಾಡಿದರೆ ಬಹಳ ಲಾಭವೆಂದು ಬೇರೆಯವರು ಹೇಳಿದುದನ್ನು ಕೇಳಿ, ತಿಳಿದು ಜವಳಿಯನ್ನು ತರಿಸಿ ವ್ಯಾಪಾರ ಪ್ರಾರಂಭ ಮಾಡಿದರಂತೆ. ಜವಳಿಯನ್ನು ಗಜ ಕಡ್ಡಿಯಿಂದ ಅಳತೆ ಮಾಡಿ ಹರಿದು ಕೊಡುವಾಗ ಬಹಳ ತೊಂದರೆ ಪಡುತ್ತಿದ್ದರಂತೆ. ಇದಕ್ಕೆ ಕಾರಣ ಬಲಗೈ ಊನವಾಗಿತ್ತು. ಮೈಲಿ ಬೇನೆ ಪರಿಣಾಮವಾಗಿ ಬಲಗೈ ಪೂರ್ಣ ನಷ್ಟವಾಗಿರದಿದ್ದರೂ ತುಂಡಾಗಿತ್ತು. ಹಸ್ತಭಾಗ ನೇರವಾಗಿರದೇ ಸೊಟ್ಟಾಗಿ ಮಣಿಕಟ್ಟಿಗೆ ಅಂಟಿಕೊಂಡಿತ್ತು. ಬಲಗಣ್ಣು ಕುರುಡಾಗಿತ್ತು. ಬಲಗಾಲು ಡೊಂಕಾಗಿತ್ತು.6 
	ಜವಳಿ ಅಂಗಡಿ ವ್ಯವಹಾರ ತಮ್ಮ ದೇಹಧರ್ಮಕ್ಕೆ ಹೊಂದಿಕೊಳ್ಳದ ವ್ಯಾಪಾರವೆಂದು ಅದನ್ನು ಕೈ ಬಿಟ್ಟರು. ಅಂಗವಿಕಲತೆಗೆ ಕಾರಣವೇನೆಂಬುದನ್ನು ಮುಂದೆ ತಮ್ಮ ಶಿಷ್ಯ ಚನ್ನಪ್ಪ ಎರೆಸೀಮೆ ಅವರಿಗೆ ಸ್ವತಃ ಚನ್ನಮಲ್ಲಿಕಾರ್ಜುನರೇ ಹೀಗೆ ಹೇಳಿದ್ದಾರೆ. ಶಿರಾಳಕೊಪ್ಪದ ನಮ್ಮ ಮನೆಯಲ್ಲಿ ಮದುವೆಯ ಸಂಭ್ರಮ. ನಾನಿನ್ನೂ ಆಗ ನಾಲ್ಕೈದು ವರ್ಷದ ಹುಡುಗ. ಮೈ ತುಂಬ ಮೈಲಿ ಬೇನೆಯಿಂದ ನರಳುತ್ತಿದ್ದೆ. ಮದುವೆಗೆ ಬಂದವರು ನೋಡಿ ಅಸಹ್ಯ ಪಟ್ಟುಕೊಳ್ಳಬಾರದೆಂದು ಒಂದು ಕೊಠಡಿಯಲ್ಲಿ ನನ್ನನ್ನು ಹಾಕಿ ಮನೆಯವರೆಲ್ಲ ಮದುವೆಯ ಸಂಭ್ರಮದಲ್ಲಿ ಮುಳುಗಿ ಹೋಗಿದ್ದರು. ನನಗೆ ಗಲಾಟೆ ಗಿಲಾಟೆ ಮಾಡಿ ಗೀಡಿಯೇ ಹುಷಾರ್ ಎಂದು ಬೆದರಿಸಿ ಬಿಟ್ಟಿದ್ದರು. ಕೊಠಡಿಯಲ್ಲಿ ನಾನು ಹೆದರಿಕೊಂಡು ಬಿದ್ದುಕೊಂಡಿದ್ದೆ. ಮೈಕಡಿತವನ್ನು ತಾಳಲಾರದೇ ಮೈಕೈಗಳನ್ನು ತುರಿಸಿಕೊಂಡೆ, ಮೈಯೆಲ್ಲ ದೊಡ್ಡ ದೊಡ್ಡ ಗಾಯದಿಂದ ಕೂಡಿ ಹೋಯಿತು. ಬಲಗೈ ಮುಂಗೈ ಹತ್ತಿರ ದೊಡ್ಡ ಗಾಯವಾಗಿ ಕಿಚಿಕಿಚಿ ಎನ್ನುವಂತಾಯಿತು. ಮದುವೆಯೆಲ್ಲ ಮುಗಿದು ಬೀಗರೆಲ್ಲ ಹೊರಟು ಹೋದ ಮೇಲೆ ಕೊಠಡಿ ಬಾಗಿಲನ್ನು ತೆರೆದು ನನ್ನನ್ನು ಹೊರಗೆ ತಂದು ಹಾಕಿದರು. ಆಗ ನಮ್ಮ ತಂದೆ ತಾಯಿಯರು ನಾನು ಬದುಕುವುದೇ ಇಲ್ಲವೆಂದು ನಿರ್ಧರಿಸಿಬಿಟ್ಟರು. ಬಲಗೈ ತೀರ ಅಸಹ್ಯವಾಗಿ ಗಾಯದಿಂದ ಬಾತುಕೊಂಡು ಇದು ಉದುರಿಯೇ ಹೋಗುತ್ತದೆಂದು ತೀರ್ಮಾನಿಸಿಬಿಟ್ಟರು. ಹೇಗೋ ಈಶ್ವರೇಚ್ಛೆಯಿಂದ ದಿನೇ ದಿನೇ ಗಾಯಗಳೆಲ್ಲ ಮಾದು ನಾನು ಬದುಕಿಕೊಂಡೆ. ಆ ಮೈಲಿ ಬೇನೆಯೇ ನನ್ನ ಅಂಗಾಂಗಳು ವಿಕಾರ ಹೊಂದಲು ಕಾರಣವಾಯಿತು.7
	ಬರುಬರುತ್ತ ಉಳಿದ ವ್ಯಾಪಾರವನ್ನೂ ಕೈಬಿಟ್ಟರು. ಇವರ ಒಡನಾಡಿ ಆ ಊರಿನ ಪ್ರಸಿದ್ಧ ವ್ಯಾಪಾರಿ ಸೂರಣಗಿ ಸಿದ್ಧಬಸಪ್ಪನವರ ಸಲಹೆ ಸಹಕಾರ ಪಡೆದು ವ್ಯಾಪಾರ ಮಾಡುತ್ತಿದ್ದರು. 
ಶಿಷ್ಯವರ್ಗ:
	ಶಿರಾಳಕೊಪ್ಪದ ಪ್ರಸಿದ್ಧ ವ್ಯಾಪಾರಿ ಸೂರಣಗಿ ಸಂಗಪ್ಪನವರು, ಗುರುಶಾಂತಪ್ಪನವರು, ಎಣ್ಣೆ ಚೆನ್ನಪ್ಪ ಮತ್ತು ಸಹೋದರರು, ಇನ್ನೂ ಹಲವರು ಇವರ ಶಿಷ್ಯ ವರ್ಗದವರು. ಲಿಂ. ಡಿ. ಎಸ್. ಗುರುಬಸಪ್ಪನವರು (ದಿ. ಪ್ರಿಂಟಿಂಗ್ ಆ್ಯಂಡ ಪಬ್ಲಿಷಿಂಗ್ ಡೈರೆಕ್ಟರ್ ಬೆಂಗಳೂರು) ಎಮ್ಮಿಗನೂರು ಶ್ರೀಕಂಠಯ್ಯನವರು (ದಿ. ಕೋ. ಆಪರೇಟಿವ್ ರಜಿಸ್ಟ್ರಾರ್) ಉಡುಗಣಿಯ ರಾಘವೇಂದ್ರರಾವ್ ಮತ್ತು ಇಂಡಸ್ಟ್ರೀಜ್ ಆ್ಯಂಡ ಕಾಮರ್ಸ ಡೈರೆಕ್ಟರ್‌ರಾಗಿ ನಿವೃತ್ತರಾದ ಶ್ರೀ ಶಾಮಣ್ಣನವರು ಮುಂತಾದ ನೂರಾರು ಜನ ಪ್ರಖ್ಯಾತ ಅಧಿಕಾರಿಗಳಾಗಿದ್ದವರು ಚನ್ನಮಲ್ಲಪ್ಪನವರ ಶಿಷ್ಯ ವರ್ಗದವರು. ರ್ಶ ಶಿಕ್ಷಕ: 
	ಚನ್ನಮಲ್ಲಪ್ಪನವರು ಸಮಕಾಲೀನ ಶಿಕ್ಷಕರಲ್ಲಿಯೇ ಒಳ್ಳೆಯ ಸಮರ್ಥ ಶಿಕ್ಷಕರೆಂದು ಖ್ಯಾತಿ ಹೊಂದಿದ್ದರು. ಶಾಲಾ ಸಂವಿಧಾನ ಪಾಲನೆ, ಲೆಕ್ಕ ಪತ್ರ ಇಡುವಿಕೆ, ಪ್ರಾಮಾಣಿಕ ನಡವಳಿಕೆ, ಕರ್ತವ್ಯದಲ್ಲಿ ಶ್ರದ್ಧೆ ಇವುಗಳಿಂದಾಗಿ ಯಾವ ಅಧಿಕಾರಿಗಳೂ ವಿಶೇಷ ತನಿಖೆ ಮಾಡುತ್ತಿರಲಿಲ್ಲ. ನಿಮ್ಮನ್ನು ತನಿಖೆ ಮಾಡುವ ಮಟ್ಟಕ್ಕೆ ನಾವು ಇನ್ನೂ ಏರಿಲ್ಲವೆಂದು ಕೆಲವು ಅಧಿಕಾರಿಗಳೂ ಅನ್ನುತ್ತಿದ್ದರಂತೆ. ವಿದ್ಯಾರ್ಥಿಗಳಿಗೆ ಒಂದು ಸಲ ಪಾಠ ಹೇಳಿ ತಿಳಿಸಿದರೆ ಸಾಕು. ಇನ್ನೊಂದು ಸಲ ಆ ಪಾಠವನ್ನು ಹೇಳುವ ಅಗತ್ಯವಿರುತ್ತಿರಲಿಲ್ಲ. ಗಣಿತದಲ್ಲಿ ಉತ್ತಮ ಬೋಧನಾ ಸಾಮರ್ಥ್ಯ ಪಡೆದಿದ್ದರು. ಭೂಗೋಳ, ಚರಿತ್ರೆಯ ಪಾಠದಲ್ಲಿ ನಕಾಶೆ ಮೊದಲಾದವುಗಳನ್ನು ಉಪಯೋಗಿಸಿ ಹೇಳುತ್ತಿದ್ದರೆ ವಿಷಯ ಕಣ್ಮುಂದೆ ಕಟ್ಟಿದಂತಾಗುತ್ತಿತ್ತು ಎಂದು ಅವರ ಶಿಷ್ಯ ವರ್ಗ ಹೇಳುತ್ತಿತ್ತು. ವೇದಾಂತ ತತ್ವಗಳನ್ನು ಅನೇಕ ಸುಂದರ ಉಪಮಾನ ಮೂಲಕ ಹೇಳಿ ವಿದ್ಯಾರ್ಥಿಗಳಲ್ಲಿ ನೀತಿ ನಿಯಮಗಳ ಭದ್ರ ತಳಹದಿ ಹಾಕುತ್ತಿದ್ದರು. ಲೋವರ್ ಸೆಕೆಂಡರಿ ತರಗತಿಯಲ್ಲಿನ ವಿದ್ಯಾರ್ಥಿಗಳಿಗೆ ಹಗಲು ರಾತ್ರಿ ಕಷ್ಟಪಟ್ಟು ಯಾವ ಪ್ರತಿಫಲವನ್ನು ಪಡೆಯದೇ ಪಾಠ ಹೇಳಿ ಪರೀಕ್ಷೆಗೆ ಅಣಿಗೊಳಿಸುತ್ತಿದ್ದರು. ಅಂತೆಯೇ ಪ್ರತಿವರ್ಷ ಶೇ. 85 ರಿಂದ 90ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಿರಾಳಕೊಪ್ಪದ ಶಾಲೆಗೆ ಕೀರ್ತಿ ತರುತ್ತಿದ್ದರು. ಮನೆಯಲ್ಲಿ ರಾತ್ರಿ ವಿದ್ಯಾರ್ಥಿಗಳನ್ನು ಕರೆಸಿ ಇಂಗ್ಲೀಷ, ಗಣಿತ ಮುಂತಾದ ಕಠಿಣ ವಿಷಯಗಳನ್ನು ಬೋಧಿಸುತ್ತಿದ್ದರು. ಹೀಗೆ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿ ಅಲ್ಲಿಯ ಜನರ ಗೌರವದ ಮಾಸ್ತರ ಆಗಿ ಚೆನ್ನಮಲ್ಲಪನವರು ಮನ್ನಣೆಗಳಿಸಿದರು.

ಶಿಷ್ಯ ವಾತ್ಸಲ್ಯ: 
	ಚನ್ನಮಲ್ಲಿಕಾರ್ಜುನರಿಗೆ ಶಿರಾಳಕೊಪ್ಪದಲ್ಲಿ ಒಳ್ಳೆಯ ಗದ್ದೆ, ಹೊಲ, ಎರಡು ಮನೆಗಳಿದ್ದು ಆಸ್ತಿ ಬಹಳ ಬೆಲೆಯುಳ್ಳದಾಗಿತ್ತು. ಸುಮಾರು 120 ರೂಪಾಯಿ ಕಂದಾಯ ಕೊಡುತ್ತಿದ್ದರು. ಈ ಆಸ್ತಿಯನ್ನು ನೋಡಿಕೊಂಡು ಹೋಗಲು ಯಾರೂ ಇದ್ದಿರಲಿಲ್ಲ. ಉತ್ತಮ ಗದ್ದೆ ಬೀಳು ಬಿದ್ದಿತ್ತು. ಶಿರಾಳಕೊಪ್ಪದಿಂದ 4 ಮೈಲು ದೂರವಿರುವ ಕುಮಶಿ ಎಂಬ ಗ್ರಾಮದ ಹತ್ತಿರವೂ 3-4 ಎಕರೆ ಒಳ್ಳೆಯ ಗದ್ದೆ ಇದ್ದಿತು. ಯಾವುದರ ಸಾಗುವಳಿ ಆಗದೇ ವ್ಯರ್ಥವಾಗಿ ಕಂದಾಯ ಕಟ್ಟುತ್ತಿದ್ದರು. ಮನೆಗಳನ್ನು ಊರಿನಲ್ಲಿರುವ ಇಬ್ಬರಿಗೆ ವಾಸವಾಗಿದ್ದು, ರಿಪೇರಿ ಮಾಡಿಕೊಂಡು ಇರಬೇಕೆಂದು ತಿಳಿಸಿದ್ದರು. ಆ ಪ್ರಕಾರವಾಗಿ ಮನೆಗಳನ್ನೇನೋ ಅಚ್ಚುಕಟ್ಟಾಗಿ ಇಟ್ಟುಕೊಂಡಿದ್ದರು. ಗದ್ದೆಗಳನ್ನು ಕೋರಿನಂತೆ ಮಾಡಲು ಕೊಟ್ಟಿದ್ದರು. ಆದರೆ ಸರಿಯಾಗಿ ಮಾಡದೇ ಉತ್ಪತ್ತಿಯ ಅರ್ಧಭಾಗವನ್ನು ಕೋಡುತ್ತಿರಲಿಲ್ಲ. ಎರೆಸೀಮೆ ಚನ್ನಪ್ಪ ವಿದ್ಯಾರ್ಥಿಯಾಗಿದ್ದಾಗ ಅವರನ್ನು ದತ್ತಕ ತೆಗೆದುಕೊಳ್ಳಬೇಕು ಎಂದು ಬಯಸಿ ತಂದೆ - ತಾಯಿ ಒಪ್ಪಿಗೆ ಪಡೆದುಕೊಂಡು ಬರಲು ಬಸ್ ಚಾರ್ಜಕೊಟ್ಟು ಕಳಿಸಿದರು. ವಿದ್ಯಾರ್ಥಿಯ ತಂದೆ - ತಾಯಿ ಒಪ್ಪಿಗೆ ಕೊಡಲಿಲ್ಲ. 
	ಮುಂದೆ ಕೆಲಕಾಲ ಚನ್ನಮಲ್ಲಿಕಾರ್ಜುನರ ಸಂಪರ್ಕ ವಿದ್ಯಾರ್ಥಿ ಚನ್ನಪ್ಪನವರಿಗೆ ತಪ್ಪಿ ಹೋಯಿತು. 
	1943 ನೇ ಇಸ್ವಿ ವಿದ್ಯಾರ್ಥಿ ಚನ್ನಪ್ಪ ಶಿವಮೊಗ್ಗದ ನಾರ್ಮಲ್ ಸ್ಕೂಲ್ ಸೇರಿ ವಿದ್ಯಾಭ್ಯಾಸ ಮಾಡುವ ತಯಾರಿಯಲ್ಲಿದ್ದರು. ಆ ಸ್ಕೂಲ್‌ನಲ್ಲಿ ವರ್ನಾಕ್ಯುಲರ್ ಟೀಚರ್ಸ್ ಸರ್ಟಿಫಿಕೇಟ್ (ಗಿ.ಖಿ.ಅ.) ಪರೀಕ್ಷೆಗೆ ಖಾಸಗಿಯಾಗಿ ಸೇರಿ ವಿದ್ಯಾಭ್ಯಾಸ ಮಾಡುವವರಿಗೆ 7 ರೂ ಸ್ಕಾಲರ್‌ಶಿಪ್ ಸಿಗುತ್ತಿತ್ತು. ಸ್ಕೂಲಿನ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ತನಗೊಂದು ವಿದ್ಯಾರ್ಥಿಸ್ಥಾನ ದೊರಕಿಸಿಕೊಡಲು ವಿನಂತಿಸಿ ಅರ್ಜಿ ಬರೆದರು. ಅವರು ಧಾರವಾಡ ಜಿಲ್ಲೆಯವರು ಇದ್ದುದರಿಂದ ಬೇರೆ ಸ್ಟೇಟ್‌ದವನೆಂದು ಸ್ಕಾಲರಶಿಫ್ ಮಾತ್ರ ಸಿಗುವುದಿಲ್ಲ. ಫೀ ಕೊಟ್ಟು ಕಲಿಯಬೇಕೆಂದರು. ಹೀಗಾಗಿ ಅವರು ಮತ್ತೆ ಚನ್ನಮಲ್ಲಿಕಾರ್ಜುನರನ್ನು ಕಂಡು ವಿಷಯ ತಿಳಿಸಿದರು. ಆಗ ಚನ್ನಮಲ್ಲಿಕಾರ್ಜುನರು, ನೀನು ಇದೇ ಸ್ಟೇಟ್‌ನವನೆಂದು ಮಾಡಲು ಒಂದು ಯೋಚನೆ ಇದೆ ಎಂದು ಹೇಳಿ ಕುಮಶಿಯ 2 ಎಕರೆ ಗದ್ದೆಯನ್ನು ಚನ್ನಪ್ಪನವರ ಹೆಸರಿಗೆ ಖಾತೆ ಮಾಡಿಸಿ ಮೈಸೂರು ಸ್ಟೇಟ್‌ನಲ್ಲಿ 12 ರೂಪಾಯಿ ಕಂದಾಯ ಕಟ್ಟುವ ರೈತನನ್ನಾಗಿ ಸೊರಬ ತಾಲೂಕು ಕಚೇರಿಯಲ್ಲಿ ನೊಂದಣಿ ಮಾಡಿಸಿದರು. ಸ್ಕೂಲಿನಲ್ಲಿ ಪ್ರವೇಶ ದೊರೆಯುವಂತೆ ಅನುಕೂಲ ಕಲ್ಪಿಸಿದರು. ಇದು ನಿಷ್ಠಾವಂತನಾಗಿ ತಮ್ಮಲ್ಲಿ ಸೇವೆ ಸಲ್ಲಿಸಿದ ಶಿಷ್ಯನ ಬಗ್ಗೆ ಇರುವ ವಾತ್ಸಲ್ಯವನ್ನು ವ್ಯಕ್ತಪಡಿಸುತ್ತದೆ. ಶಿಷ್ಯನ ಶ್ರೇಯೋಭಿವೃದ್ಧಿಗಾಗಿ ಶಿಕ್ಷಕರೊಬ್ಬರು ಮಾಡಿದ ತ್ಯಾಗ ನಿಜಕ್ಕೂ ಅಪೂರ್ವ. 
	ಮುಂದೆ ಚೆನ್ನಪ್ಪನವರು ಗಿ.ಖಿ.ಅ. ಮುಗಿಸಿ ತುಮಕೂರು ಜಿಲ್ಲೆಯ ತೊಂಡಗೆರೆ ಗ್ರಾಮದಲ್ಲಿ 1946ನೇ ಅಗಸ್ಟ 24 ರಿಂದ ಉಪಾಧ್ಯಾಯ ವೃತ್ತಿಯಲ್ಲಿ ತೊಡಗಿದರು.  ವಿದ್ಯಾರ್ಥಿ ನಿಲಯ: 
	ಚನ್ನಮಲ್ಲಿಕಾರ್ಜುನರು ಹಳ್ಳಿಯ ಬಡ ಹುಡುಗರ ವಿದ್ಯಾಭ್ಯಾಸಕ್ಕಾಗಿ ಅನುಕೂಲ ಒದಗಿಸಲು 1941ರಲ್ಲಿ ತಮ್ಮ ಸ್ವಯಾರ್ಜಿತ ಆಸ್ತಿಯನ್ನೆಲ್ಲ ಮಾರಿ ತಮ್ಮ ಹುಟ್ಟೂರಾದ ಶಿರಾಳಕೊಪ್ಪದಲ್ಲಿ ಸಿದ್ಧೇಶ್ವರ ನಿಲಯ ಎಂಬ ಪ್ರಸಾದನಿಲಯ ಕಟ್ಟಿಸಿ ಮಕ್ಕಳಿಗೆ ಉಚಿತ ಪ್ರಸಾದ ಮತ್ತು ವಸತಿಗಳನ್ನು ಕಲ್ಪಸಿದರು. ನಿಲಯದ ವ್ಯವಸ್ಥೆ ಸುಗಮವಾಗಿ ಸಾಗಲು ಒಂದು ಟ್ರಸ್ಟನ್ನು ಮಾಡಿದರು. ಇದು ಅವರ ತ್ಯಾಗ ಮತ್ತು ನಿಸ್ವಾರ್ಥ ಜೀವನದ ದ್ಯೋತಕವಾಗಿದೆ. 
	ಈ ಮಹೋಪಕಾರ ಕಾರ್ಯವನ್ನು ಗಮನಿಸಿ ಶಿರಾಳಕೊಪ್ಪ ಮತ್ತು ಆ ಪ್ರಾಂತದ ಕೆಲ ಮಹನೀಯರು ಸಿದ್ಧೇಶ್ವರ ನಿಲಯವನ್ನು ಪ್ರಾರಂಭಿಸಲು 11-12-1941ರಲ್ಲಿ ಸೂರಣಗಿ ಸಂಗಪ್ಪನವರು ಮುನಸಿಪಲ್ ವೈಸ್ ಪ್ರಸಿಡೆಂಟ್ ಇವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಈ ನಿಲಯದ ಸಂಚಾಲನೆಯ ಬಗ್ಗೆ ಟಿ. ಗುರುಶಾಂತಪ್ಪನವರು, ಕೆ. ಬಂಗಾರಪ್ಪನವರು, ಪಟೇಲ ಶಿವಾಜಿಗೌಡರು ಅವರನ್ನೊಳಗೊಂಡು ಒಂದು ಸಮಿತಿಯನ್ನು ಏರ್ಪಡಿಸಿದರು. ಶಿರಾಳಕೊಪ್ಪದಲ್ಲಿರುವ ಬತ್ತದ ಯಂತ್ರಗಳು (ಖಛಿ ಒಟಟ) ಮಂಡಿಗಳು, ಮುಂತಾದವುಗಳಿಂದ ಚೀಲಕ್ಕೆ ಒಂದು ಹಿಡಿಯಂತೆ ಪತ್ತೆಯ ರೂಪದಲ್ಲಿಯೂ ಮತ್ತು ರೈತರೇ ಮೊದಲಾದವರಿಂದ ಧನ ಧಾನ್ಯದ ರೂಪದಲ್ಲಿ ಸಹಾಯ ಪಡೆದುಕೊಂಡು ಭೋಜನಾದಿ ಸೌಕರ್ಯಗಳನ್ನು ಒದಗಿಸಬೇಕೆಂದು ನಿರ್ಧರಿಸಿದರು. ಇದರ ಫಲವಾಗಿ 18-1-1942ರಿಂದ ಮಾಧ್ಯಮಿಕ ಶಾಲೆಗೆ ಹಳ್ಳಿಗಳಿಂದ ಬರುವ 55 ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಕಾಲದ ಉಪಹಾರವಾಗಿ ಮೊಸರನ್ನವನ್ನು ಬೇಸಿಗೆ ರಜೆ ಪ್ರಾರಂಭವಾಗುವವರೆಗೂ ಕೊಡಲಾಯಿತು. 1942 ರಿಂದ ಹಳ್ಳಿಗಳಲ್ಲಿ ಸಮಿತಿಯವರು ಸುಮಾರು 500 ರೂ ಬೆಲೆ ಬಾಳುವ ಭತ್ತ ಸಂಗ್ರಹಿಸಿದುದರಿಂದಲೂ ನಿಲಯದ ಆಶ್ರಯ ಬಯಸಿದ ವಿದ್ಯಾರ್ಥಿಗಳಿಂದ ತಿಂಗಳಿಗೆ 1 ರಿಂದ 3 ರೂ.ಗಳವರೆಗೆ ಶುಲ್ಕ ವಸೂಲಿ ಮಾಡಿದುದರಿಂದಲೂ 4-5-1942 ರಿಂದ ಗ್ರಾಮಾಂತರದ ಮಕ್ಕಳಿಗೂ ಭೋಜನದ ಏರ್ಪಾಡಾಯಿತು. 
	ಮುಂದೆ ಟ್ರಸ್ಟ್ ಕಮೀಟಿಯ ಸದಸ್ಯರಲ್ಲಿ ಬದಲಾವಣೆಯಾಯಿತು. ಚನ್ನಮಲ್ಲಿಕಾರ್ಜುನರು ಅಧ್ಯಕ್ಷರಾಗಿ ಎಣ್ಣೆಯ ವೀರಪ್ಪನವರು ಸೆಕ್ರೆಟರಿಯಾಗಿ, ಟಿ. ಗುರುಶಾಂತಪ್ಪನವರು, ಮಂಚಿಕೊಪ್ಪದ ಮಠದ ಹಾಲಯ್ಯನವರು, ಬಿಸಲಹಳ್ಳಿ ಪಟೇಲ ಮಹಾದೇವಪ್ಪನವರು ಸದಸ್ಯರಾದರು.
	ಚನ್ನಮಲ್ಲಿಕಾರ್ಜುನರು ಆಗಾಗ್ಗೆ ಅದರ ಆದಾಯ ವೆಚ್ಚಗಳನ್ನು ಪರಿಶೀಲಿಸಿ ಸೂಕ್ತ ಸಲಹೆಗಳನ್ನು ನೀಡುತ್ತಿದ್ದರು. 
	ಧರ್ಮಬೋಧಪರ ಗ್ರಂಥ ಭಂಡಾರವನ್ನು ಈ ವಿದ್ಯಾರ್ಥಿ ನಿಲಯಕ್ಕೆ ಒದಗಿಸಿದರು. ಮಾಯಿದೇವರ ಶತಕತ್ರಯ, ಶೂನ್ಯ ಸಂಪಾದನೆ ಮುಂತಾದ ಸದ್ಗ್ರಂಥಗಳನ್ನು ಕುರಿತು ಪ್ರವಚನ ಮಾಡಲು ಪಂಡಿತರನ್ನು ನೇಮಕ ಮಾಡಬೇಕೆಂದು ವಿಶ್ವಸ್ಥ ಸಮಿತಿ ಪತ್ರ (ಖಿಡಿಣ ಆಜ)ದಲ್ಲಿ ಬರೆದರು. ಶಾಲಾ ಮಕ್ಕಳ ಪ್ರಗತಿಯ ಬಗೆಗೆ ಚನ್ನಮಲ್ಲಿಕಾರ್ಜುನರು ಅಪರಿಮಿತ ಆಸ್ಥೆ, ಅನುಕಂಪ ಹೊಂದಿದ್ದರೆಂಬುದಕ್ಕೆ ಇದು ನಿದರ್ಶನ.
ಸಾಮಾಜಿಕ ಚಟುವಟಿಕೆ:
	ಚನ್ನಮಲ್ಲಿಕಾರ್ಜುನರು ಶಿಕ್ಷಣ, ಧರ್ಮ, ಸಾಹಿತ್ಯ ಸೇವೆಯ ಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿಯೂ ಕ್ರಿಯಾಶೀಲರಾಗಿ ಭಾಗವಹಿಸುತ್ತಿದ್ದರು. 20ನೆಯ ಶತಮಾನದ 1-2 ನೆಯ ದಶಕಗಳಲ್ಲಿ ಪ್ರಾರಂಭವಾದ ಸಹಕಾರ ಚಳುವಳಿಯಲ್ಲಿ ಭಾಗವಹಿಸಿದರು. ತತ್ಫಲವಾಗಿ ಶಿರಿಯಾಳಕೊಪ್ಪದಲ್ಲಿ ಒಂದು ಸಹಕಾರ ಸಂಘವನ್ನು ಸ್ಥಾಪಿಸಿ ಅದರ ಮುಖ್ಯ ಸಂಚಾಲಕರಾಗಿ ಕಾರ್ಯಮಾಡಿ ಜನ ಸಾಮಾನ್ಯರಿಗೆ ಅಮೋಘವಾದ ಸೇವೆಯನ್ನು ಸಲ್ಲಿಸಿದುದು ಗಮನಾರ್ಹ. ಹಳ್ಳಿ ಪಟ್ಟಣಗಳ ಜನಸಾಮಾನ್ಯರ ಎಲ್ಲ ಸಮಸ್ಯೆಗಳಿಗೆ ಇವರಲ್ಲಿ ಪರಿಹಾರ ಸಿಗುತ್ತಿದ್ದಿತು. 
	ಆಗ ವರ್ಷಕ್ಕೊಮ್ಮೆ ದಸರಾ ಮಹೋತ್ಸವ ಸಂದರ್ಭದಲ್ಲಿ ಸಹಕಾರ ಸಂಘಗಳ ಸಭೆಯು ಮೈಸೂರಿನಲ್ಲಿ ಜರುಗುತ್ತಿತ್ತು. ಆ ಸಭೆಗೆ ಎಲ್ಲ ಸಹಕಾರ ಸಂಘಗಳಿಂದ ಚುನಾಯಿತ ಪ್ರತಿನಿಧಿಗಳನ್ನು ಕಳುಹಿಸುವಂತೆ ಒಂದು ವರ್ಷದ ಸಭೆಗೆ ಶಿರಿಯಾಳಕೊಪ್ಪದ ಸಂಘದಿಂದ ಚನ್ನಮಲ್ಲಿಕಾರ್ಜುನರನ್ನು ಚುನಾಯಿಸಿ ಕಳುಹಿಸಿದ್ದರು. ಆ ಸಭೆಗೆ ಆಗಿನ ಯುವರಾಜ ಶ್ರೀಕಂಠೀರವ ನರಸಿಂಹರಾಜ ಒಡೆಯರು ಅಧ್ಯಕ್ಷರಾಗಿದ್ದರು. ಸಹಕಾರಿ ತತ್ವದ ಒಂದು ಮಹತ್ವದ ವಿಷಯದ ಮೇಲೆ ಚನ್ನಮಲ್ಲಿಕಾರ್ಜುನರು ಯಾವುದೇ ಪೂರ್ವ ತಯಾರಿ ಇಲ್ಲದೆ ಅಮೋಘವಾದ ಭಾಷಣ ಮಾಡಿದರು. ಸಭಿಕರೆಲ್ಲರು ಇವರ ಭಾಷಣವನ್ನು ಏಕಚಿತ್ತದಿಂದ ಕೇಳಿ ಆನಂದಿತರಾದರು. 
	ಅಧ್ಯಕ್ಷತೆ ವಹಿಸಿದ್ದ ಯುವರಾಜರ ಮೇಲೆ ಚನ್ನಮಲ್ಲಿಕಾರ್ಜುನರ ಭಾಷಣವು ತುಂಬಾ ಪ್ರಭಾವ ಬೀರಿತ್ತು. ಸಭೆ ಮುಗಿದ ನಂತರ ತಮ್ಮನ್ನು ಕಾಣಲು ತಮ್ಮ ಪರಿವಾರದ ಮೂಲಕ ಚನ್ನಮಲ್ಲಿಕಾರ್ಜುನರಿಗೆ ಹೇಳಿ ಕಳುಹಿಸಿದರು. ಸಭೆ ಮುಗಿದ ನಂತರ ಚನ್ನಮಲ್ಲಿಕಾರ್ಜುನರದು ಯುವರಾಜರನ್ನು ಸಮೀಪಿಸಲು ತುಂಬಾ ಪ್ರಯತ್ನಿಸಿದರೂ ಅವರ ದರ್ಶನ ಸಾಧ್ಯವಾಗಲಿಲ್ಲ. ಹಾಗೆಂದು ಚನ್ನಮಲ್ಲಿಕಾರ್ಜುನರು ನಿರಾಶರಾಗಲಿಲ್ಲ. ಅಷ್ಟಕ್ಕೆ ತೃಪ್ತರಾದರು. ಈ ದರ್ಶನದಿಂದ ಅವರಿಗೆ ಇನ್ನೂ ಯಾವ ಸುದೈವವು ಕಾದಿತ್ತೋ ತಿಳಿಯದು. ಇನ್ಯಾರಾದರೂ ಆಗಿದ್ದರೆ ವಿಶ್ವ ಪ್ರಯತ್ನ ಮಾಡಿ ದರ್ಶನ ಪಡೆದುಕೊಂಡು ಜೊತೆಗೆ ಆರ್ಥಿಕ ಮುಂತಾಗಿ ಲಾಭವನ್ನು ಹೊಂದುತ್ತಿದ್ದರು’’8 ಎಂದು ಡಿ.ಎಸ್.ಗುರುಬಸಪ್ಪನವರು ಹೇಳಿದ ಮಾತು ಚನ್ನಮಲ್ಲಿಕಾರ್ಜುನರ ಪ್ರತಿಫಲ ಬಯಸದ ನಿಸ್ವಾರ್ಥ ಜೀವನಕ್ಕೆ ಹಿಡಿದ ಕನ್ನಡಿಯಾಗಿದೆ.
ಶಿವಾನುಭವ ಪ್ರವಚನಕಾರ:
	ಚನ್ನಮಲ್ಲಪ್ಪನವರು ತಮ್ಮ ಊರು ಶಿರಾಳಕೊಪ್ಪದಲ್ಲಿಯೇ ಆದಿತ್ಯವಾರ ಮೊದಲಾದ ರಜೆಯ ದಿನಗಳಲ್ಲಿ ಶಿವಾನುಭವ ಪ್ರವಚನ ಪ್ರಾರಂಭಿಸುತ್ತಿದ್ದರು. ಇವರ ಶಿವಾನುಭವ ಪ್ರವಚನದ ಅಭಿವೃದ್ಧಿಗೆ ಶಿರಾಳಕೊಪ್ಪದ ಸುಪ್ರಸಿದ್ಧ ಶಿವಾನುಭಾವಿಗಳೂ ಸಂಗೀತ ಸಾಹಿತ್ಯ ವಿದ್ವಾಂಸರೂ ಆದ ಎಮ್ಮಿಗನೂರು ಗದಿಗಯ್ಯನವರು ಕಾರಣರಾದರು. ಅಂದು ಕರ್ನಾಟಕದಲ್ಲಿ ಗದಿಗಯ್ಯನವರು ಮೇಲ್ಮಟ್ಟದ ಸಂಗೀತ ವಿದ್ವಾಂಸರಾಗಿದ್ದರು. ಗದುಗಿನ ಪಂಚಾಕ್ಷರ ಗವಾಯಿಗಳು ಗದಿಗಯ್ಯನವರಲ್ಲಿಯೇ ಸಂಗೀತ ಪಾಠವನ್ನು, ಶಿವಾನುಭಾವ ಪ್ರವಚನ ಅನುಭವವನ್ನು ಪಡೆದವರು. ಈ ಗದಗಯ್ಯನವರೇ ಚನ್ನಮಲ್ಲಪ್ಪನವರ ಮೇಲೆ ಅತ್ಯಂತ ಪ್ರಭಾವ ಬೀರಿದ ವ್ಯಕ್ತಿಯಾಗಿದ್ದರು. ಗದಗಯ್ಯನವರು ಅಲ್ಲದೇ ಆಗ ಶಿರಾಳಕೊಪ್ಪದ ಭಾಗದಲ್ಲಿ ಶಿವಾನುಭವ ಪ್ರವಚನ ಕ್ರಾಂತಿ ಮಾಡಿದವರು ಮುಖ್ಯವಾಗಿ ಗೊಗ್ಗೆಹಳ್ಳಿ ಸೋಮನಾಥ ಶಾಸ್ತ್ರಿಗಳು, ಕಬ್ಬೂರ ಶರಣರು ಹಾಗೂ ಶ್ರೀ ಚನ್ನಮಲ್ಲಪ್ಪನವರು. ಶಿರಾಳಕೊಪ್ಪದ ವಿರಕ್ತಮಠ, ಶಿರಾಳಕೊಪ್ಪಕ್ಕೆ 3 ಮೈಲು ದೂರವಿರುವ ಬಿಳವಾಣಿ ಮರಡಿ, ನೀರಲಗಿ ದೇವಾಲಯ, ಅನಿಮಿಷಾರ್ಯರ ಕೊಪ್ಪಲು ಮುಂತಾದ ಕಡೆಗಳಲ್ಲಿ ಶಿವಾನುಭವ ಪ್ರವಚನ ಕಾರ್ಯಕ್ರಮ ಜರುಗುತ್ತಿದ್ದವು. ಈ ಗೋಷ್ಠಿಗಳಲ್ಲಿ ಮುಖ್ಯವಾಗಿ ಹಾನಗಲ್ಲ ವಿರಕ್ತಮಠದ ಶ್ರೀ. ನಿ. ಪ್ರ. ಕುಮಾರ ಮಹಾಸ್ವಾಮಿಗಳು ಇದ್ದೇ ಇರುತ್ತಿದ್ದರು. ವಿಶೇಷ ಸಂದರ್ಭಗಳಲ್ಲಿ ಕೆಳದಿ ಮಠದ ಶ್ರೀ ರೇವಣಸಿದ್ಧ ಶಿವಯೋಗಿಗಳೂ ಬೀಳಗಿ ಸ್ವಾಮಿಗಳು, ಅನಂತಪುರದ ಲಿಂಗಸ್ವಾಮಿಗಳು ಭಾಗವಹಿಸುತ್ತಿದ್ದರು. ಆಗ ಹಾನಗಲ್ಲ ಶ್ರೀಗಳವರ ಸೇವೆಯಲ್ಲಿ ನವಿಲುಗುಂದದ ಗವಿಮಠದ ಶ್ರೀ ಬಸವಲಿಂಗ ಸ್ವಾಮಿಗಳು, ನಾಗನೂರು ರುದ್ರಾಕ್ಷಿ ಮಠದ ಶ್ರೀ ಶಿವಬಸವ ಸ್ವಾಮಿಗಳು ಇದ್ದರು. ಮಹಾಶಿವಾನುಭಾವಿಗಳಾಗಿದ್ದ ಕಬ್ಬೂರು ಲಿಂಗಪ್ಪ ಶರಣರ ಆಳವಾದ ಅನುಭವವು ಚನ್ನಮಲ್ಲಪ್ಪನವರಿಗೆ ದೊರಕಿದುದು ಅವರ ಪುಣ್ಯ ವಿಶೇಷ. ಈ ಅನುಭಾವ ಮಥನದಿಂದ ಚನ್ನಮಲ್ಲಪ್ಪನವರ ಶಿವಾನುಭಾವ ಜ್ಞಾನ ಅತ್ಯುಚ್ಚ ಮಟ್ಟ ತಲುಪಿತ್ತು. ಏರಿದರೆ ಅರಿವು, ಇಳಿದರೆ ಕ್ರಿಯೆ ಎನ್ನುವ ಮಟ್ಟಕ್ಕೆ ಹೋಯಿತು.9
	ಚನ್ನಮಲ್ಲಪ್ಪನವರು ಕನ್ನಡ ಮತ್ತು ಸಂಸ್ಕೃತ ಎರಡೂ ಭಾಷೆಗಳಲ್ಲಿ ಉತ್ತಮ ಪಾಂಡಿತ್ಯ ಹೊಂದಿದ್ದರಿಂದ ಶಿವಾನುಭಾವ ಶಾಸ್ತ್ರಗ್ರಂಥಗಳಾದ ಮೊಗ್ಗೆಯ ಮಾಯಿದೇವರ ಶತಕತ್ರಯ, ಅನುಭವ ಸೂತ್ರ, ಚನ್ನಬಸವಣ್ಣನವರ ಕರಣಹಸಿಗೆ, ಮಿಶ್ರಾರ್ಪಣ, ಮಂತ್ರಗೋಪ್ಯ, ಬಸವಾದಿ ಪ್ರಮಥರ ವಚನ ಶಾಸ್ತ್ರಗಳನ್ನು ಆಳವಾಗಿ ಅಧ್ಯಯನ ಮಾಡಿ ಜಿಜ್ಞಾಸುಗಳ ಯಾವ ಸಂಶಯವನ್ನೇ ಆಗಲಿ ನಿವಾರಿಸುವ ಅದ್ಭುತ ಸಾಮರ್ಥ್ಯ ಪಡೆದಿದ್ದರು. ಅಂತೆಯೇ ಮಹಾಮಹಿಮರಾದ ಹಾನಗಲ್ಲ ಕುಮಾರ ಸ್ವಾಮಿಗಳವರ ಸಂಪೂರ್ಣ ಕೃಪೆಗೆ ಪಾತ್ರರಾಗಿ ಅವರಿಂದ 1912 ರಲ್ಲಿ ಅನುಗ್ರಹ ಪಡೆದು ಅವರ ಅಪ್ಪಣೆಯ ಮೇರೆಗೆ ಜೀವನ ಪರ್ಯಂತ ಶಿವಾನುಭವ ಪ್ರಚಾರ ಕಾರ್ಯದಲ್ಲಿ ತಮ್ಮ ಸರ್ವಸ್ವವನ್ನು ತೊಡಗಿಸುವ ಸಂಕಲ್ಪ ಮಾಡಿದರು. ತಾವು ಮುಂದೆ ಹೊರಡಿಸಿದ ಸದ್ಧರ್ಮ ದೀಪಿಕೆ ಮಾಸಪತ್ರಿಕೆಯ ಮುಖಪುಟದ ಮೇಲೆ ಪರಮ ಪೂಜ್ಯರಾದ ಶ್ರೀ ನಿ. ಪ್ರ. ಸದಾಶಿವ ಸ್ವಾಮಿಗಳು (ಶ್ರೀ ಕುಮಾರ ಸ್ವಾಮಿಗಳು) ಶಿವಯೋಗ ಮಂದಿರ ಇವರ ಸ್ಮಾರಕದಲ್ಲಿ ನಡೆಯಿಸುವ ಪತ್ರವಿದು ಎಂದು ಮುದ್ರಿಸಿದುದು ಗುರುವಿನ ಆಜ್ಞೆಯನ್ನು ಸಾಕಾರಗೊಳಿಸಿದ ಸಂಕೇತವೆನಿಸಿದೆ. 
	ಬಹಳ ಹಿಂದೆಯೇ ಚನ್ನಮಲ್ಲಿಕಾರ್ಜುನರಿಗೆ ಹಾನಗಲ್ಲ ಕುಮಾರ ಸ್ವಾಮಿಗಳ ಸಂಪರ್ಕವಾಗಿತ್ತು. 1912ರಲ್ಲಿ ಕುಮಾರಸ್ವಾಮಿಗಳಿಂದ ಅನುಗ್ರಹ ದೀಕ್ಷೆ ಪಡೆದ ಮೇಲೆ ಸತತ ಅವರ ಸಂಪರ್ಕವಿಟ್ಟುಕೊಂಡೆ ಬಾಳಿದರು.
	1908ರಲ್ಲಿ ಬಾಗಿಲುಕೋಟೆಯಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭೆಗೆ ಹಾನಗಲ್ಲ ಕುಮಾರ ಶಿವಯೋಗಿಗಳು ಆಗಮಿಸಿ ಶಿವಯೋಗ ಮಂದಿರ ಸ್ಥಾಪಿಸಲು ಯೋಚಿಸಿದ ಸಂದರ್ಭದಲ್ಲಿ ಚನ್ನಮಲ್ಲಪ್ಪನವರು ಸ್ಥಾಪನೆ ಅವಶ್ಯಕತೆಯ ಕುರಿತು ಪ್ರವಚನ ಮಾಡಿದರು. ನಂತರ 1909ರಲ್ಲಿ ಶಿವಯೋಗ ಮಂದಿರವು ಸ್ಥಾಪನೆಯಾಯಿತು.
	ಶ್ರೀ. ನಿ. ಪ್ರ. ಚನ್ನವೀರಸ್ವಾಮಿಗಳು ಮೂಡಿ ಮತ್ತು ಬನವಾಸಿ ಮಠ ಅವರು ಕ್ರಿ. ಶ. 1959ರಲ್ಲಿ ಮೂಡಿ ಗ್ರಾಮದ ನದಿ ದಂಡೆಯ ಮೇಲಿರುವ ಬಿಲ್ವ ವನದಲ್ಲಿ ಅನುಷ್ಠಾನ ಮಾಡುವ ಕಾಲಕ್ಕೆ ಚನ್ನಮಲ್ಲಪ್ಪನವರು ತಾವು ತಿಳಿದುಕೊಂಡ ಶಿವಮಂತ್ರ ಜಪಾನುಷ್ಠಾನ ವಿಧಾನವನ್ನು ತಿಳಿಸಿದರು. ಮಹಾಮಂತ್ರವನ್ನು ಹೇಗೆ ಜಪಿಸಬೇಕು ಮತ್ತು ಆ ಮಂತ್ರದ ಋಷಿ, ಛಂದಸ್ಸು, ಅಧಿದೇವತಾಶಕ್ತಿ ಕೀಲಕಗಳನ್ನು ತಿಳಿಸಿ ಮಾರ್ಗದರ್ಶನ ಮಾಡಿದ ಮಹಾನುಭಾವಿಗಳು ಎಂದು ಮೂಡಿ ಶ್ರೀಗಳು ಸ್ಮರಿಸಿದ್ದಾರೆ. ಷಣ್ಮುದ್ರೆಗಳಲ್ಲದೆ ವೀರಶೈವ ಸಿದ್ಧಾಂತದ ತಿರುಳಾದ 32 ಉದ್ಧಾರಣೆಗಳನ್ನು ಚನ್ನಮಲ್ಲಪ್ಪನವರು ಚೆನ್ನಾಗಿ ತಿಳಿದುಕೊಂಡವರಾಗಿದ್ದರು. ಶಿವಾನುಭವದ ಜಟಿಲ ಮತ್ತು ಗಹನವಾದ ವಿಷಯಗಳ ಮೇಲೆ ಚರ್ಚಿಸುವಲ್ಲಿ ಅವರದು ಎತ್ತಿದ ಕೈ. 1958ರಲ್ಲಿ ಶ್ರೀ. ನಿ. ಪ್ರ. ಚನ್ನವೀರ ಸ್ವಾಮಿಗಳ ಪಟ್ಟಾಭಿಷೇಕ ಕಾಲಕ್ಕೆ ಅಲ್ಲಿಯೇ ಇದ್ದು ಮಂತ್ರಗೌಪ್ಯ ಕರಣಹಸಿಗೆ, ಹಾಗೂ ಶಿವಾನುಭವ ಸೂತ್ರಗಳನ್ನು ಸೂಕ್ತ ರೀತಿಯಲ್ಲಿ ಅನುಭಾವ ಮಾಡಿದರೆಂದು ಮೂಡಿ ಶ್ರೀಗಳು ಜ್ಞಾಪಿಸಿಕೊಂಡಿದ್ದಾರೆ.10 ಹೀಗೆ ಹಲವು ಮಠಾಧಿೀಶರಿಗೆ ಚನ್ನಮಲ್ಲಿಕಾರ್ಜುನರು ಪೂಜಾನುಷ್ಠಾನ ಮಾಡುವ ಬಗೆಯಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು. 
ಚನ್ನಮಲ್ಲಿಕಾರ್ಜುನರ ವ್ಯಕ್ತಿತ್ವ:
	20ನೆಯ ಶತಮಾನದ ವೀರಶೈವ ಸಂಸ್ಕೃತಿಗೆ ಕಾಣಿಕೆ ಸಲ್ಲಿಸಿದ ಪ್ರಮುಖ ತ್ರಿಮೂರ್ತಿಗಳೆಂದು ಡಾ. ಫ. ಗು. ಹಳಕಟ್ಟಿ, ಹರ್ಡೇಕರ ಮಂಜಪ್ಪ, ಚನ್ನಮಲ್ಲಿಕಾರ್ಜುನರನ್ನು ಡಾ. ಜ.ಮರುಳಸಿದ್ಧಯ್ಯ ಅವರು ಬಣ್ಣಿಸುತ್ತ ಹೀಗೆ ಹೇಳಿದ್ದಾರೆ: ವೀರಶೈವಕ್ಕೆ ಮೂರು ಕಣ್ಣುಗಳಾಗಿದ್ದು, ಸರ್ವರಿಗೂ ಮುಕ್ಕಣ್ಣ ಸ್ವರೂಪವಾಗಿ ಮಾನ್ಯರೆನಿಸಿದವರೆಂದರೆ ಶಿವಶರಣರ ಸಂಸ್ಕೃತಿಯ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ಮೀಸಲಾಗಿಟ್ಟು ಇಡೀ ವಚನ ಶಾಸ್ತ್ರವನ್ನು ಹೊರತಂದು, ವಿಮರ್ಶಿಸಿ, ಶ್ರಮಿಸಿ, ಮಹಾನುಭಾವರಾಗಿ, ಲಿಂಗೈಕ್ಯರಾದ, ‘ಶಿವಾನುಭವ ಪತ್ರಿಕೆ (ಮಾಸಿಕ) ಸಂಪಾದಕರಾಗಿ 12ನೆಯ ಶತಕದ ಶಿವಶರಣರ ಧಾರ್ಮಿಕ ಚಟುವಟಿಕೆಗಳನ್ನು ಪ್ರಕಟಿಸಿ ವಿನೂತನ ಕ್ರಾಂತಿ ಎಸಗಿದ ಸದ್ಗಹಸ್ಥ, ಶಿವಶರಣರಾವ ಬಹಾದ್ದೂರ ವಚನ ಪಿತಾಮಹ ಡಾ. ಶ್ರೀ ಫಕ್ಕೀರಪ್ಪ ಗುರುಬಸಪ್ಪ ಹಳಕಟ್ಟಿ ವಿಜಾಪೂರ ಇವರು ಮತ್ತು ಶರಣ ಸಂದೇಶ (ವಾರಪತ್ರಿಕೆ) ಸಂಪಾದಕರಾಗಿ ತಮ್ಮದೇ ಆದ ಉದಾತ್ತ ಸಂಶೋಧನಾತ್ಮಕ ಗ್ರಂಥ ಹಾಗೂ ಬೋಧೆಗಳಿಂದ ಶರಣರ ಕ್ರಾಂತಿಯನ್ನು ಬೆಳಗಿಸಿ, ನೈಷ್ಠಿಕ ಬ್ರಹ್ಮಚಾರಿಗಳಾಗಿ ಬಾಳಿ ಲಿಂಗೈಕ್ಯರಾದ ಶ್ರೀ ಹರ್ಡೇಕರ ಮಂಜಪ್ಪನವರು ಆಲಮಟ್ಟಿ ಇವರು ಹಾಗೂ ಸದ್ಧರ್ಮ ದೀಪಿಕೆ ಪತ್ರಿಕೆಯ ಸಂಪಾದಕರಾಗಿ ವಿಶಿಷ್ಟ ರೀತಿಯ ವಿಮರ್ಶೆಗಳಿಂದಲೂ ಸುಮಾರು 50ಕ್ಕೂ ಮಿಗಿಲಾಗಿದ್ದ ಗ್ರಂಥ ಸಂಪಾದನೆಗಳಿಂದಲೂ ಸದ್ಧರ್ಮವನ್ನು ಮೆರೆಯಿಸಿದ ಗೃಹಸ್ಥರಾಗಿ ಶಾಲಾ ಮಾಸ್ತರರಾಗಿದ್ದು, ಬಳಿಕ ನೈಷ್ಠಿಕರಾಗಿ ಸ್ವಯಂಪಾಕಿಗಳಾಗಿದ್ದ ಲಿಂಗೈಕ್ಯ ಶ್ರೀ ಚನ್ನಮಲ್ಲಿಕಾರ್ಜುನ ಮಾಸ್ತರರು ಈ ತ್ರ್ಯಕ್ಷರೆ ಈ ಶತಕದ ಸಂಸ್ಕೃತಿಯ ರಕ್ಷಕರಲ್ಲಿ ಬಹು ಪ್ರಮುಖರು. ವಾಙ್ಮಯ ಸೇವೆಯಲ್ಲಿ ಅವಿಸ್ಮರಣಿಯರಾದ ಧರ್ಮವೀರರು11 ಎಂದು ಕೊಂಡಾಡಿದ್ದಾರೆ.ನ್ನಪ್ಪತ್ರಯರು:
	ಹಲಸಂಗಿ ಚನ್ನಮಲ್ಲಪ್ಪನಂತೆ ಈ ಚನ್ನಮಲ್ಲಪ್ಪನೂ ಒಬ್ಬ ಜ್ಞಾನಭಿಕ್ಷು ಸಂಸಾರದ ತಾಪತ್ರಯ, ಉಚ್ಚ ಶಿಕ್ಷಣದ ಅಭಾವ, ಅನಾನುಕೂಲ ಪರಿಸ್ಥಿತಿ ಇರುವಾಗಲೂ ಈ ಇಬ್ಬರು ಚನ್ನಮಲ್ಲಪ್ಪ ಅವರು ತೋರಿದ ಜ್ಞಾನಾರ್ಜನೆಯ ಹಂಬಲವು ಅತ್ಯಂತ ಪ್ರಶಂಸನೀಯವಾದುದು. ಈ ಗುಂಪಿಗೆ ಸೇರುವ ಆಧುನಿಕ ಕರ್ನಾಟಕದ ಇನ್ನೊಬ್ಬ ವ್ಯಕ್ತಿ ಉತ್ತಂಗಿ ಚನ್ನಪ್ಪ. ಬಹುಶಃ ಈ ಹೆಸರಿನಲ್ಲಿಯೇ ಏನೋ ವಿಶೇಷವಿದ್ದಂತಿದೆ. ಇಂದಿನ ತರುಣ ಮತ್ತು ಪ್ರೌಢ ವ್ಯಾಸಂಗಿಗಳು ವ್ಯಾಸಂಗ ರಂಗದಲ್ಲಿದ್ದರೂ ರಾಜಕಾರಣ ಮಾಡಿಯೇ ಪ್ರತಿಷ್ಠೆ ಪಡೆಯಬೇಕೆನ್ನುವವರು ಈ ಚನ್ನಪ್ಪತ್ರಯರ ಮಾದರಿಯನ್ನು ಅನುಸರಿಸುವುದಾದರೆ ಕನ್ನಡದ ಭಾಗ್ಯ ತೆರೆದಂತಾಗುವುದು’’ ಎಂದು ಪ್ರೊ. ಸ. ಸ. ಮಾಳವಾಡ ಅವರು ಈ ಮೂವರು ಮಹಾನುಭಾವರನ್ನು ಪರಸ್ಪರ ಹೋಲಿಸಿ ಹೇಳಿದ್ದಾರೆ.12
	ಈ ಮೂವರಲ್ಲಿ ನಾಮ ಮಾತ್ರ ಸಾದೃಶ್ಯವಿರದೆ ಅವರು ಕೈಕೊಂಡ ಶರಣ ಸಾಹಿತ್ಯದ ಸಂಶೋಧನೆ ಪ್ರಕಟನೆಯಲ್ಲಿಯೂ ಸಾದೃಶ್ಯವಿದ್ದುದು ಕಂಡು ಬರುತ್ತದೆ. 
	ಶ್ರೀ ಫ. ಗು. ಹಳಕಟ್ಟಿ, ಶ್ರೀ ಮಧುರಚನ್ನ, ಶ್ರೀ ಚನ್ನಮಲ್ಲಿಕಾರ್ಜುನ ಈ ಒಬ್ಬೊಬ್ಬರ ಸೇವೆಯು ತಮ್ಮದೇ ಆದ ನಿಲುವಿನಿಂದ ಪ್ರಭಾವಪೂರ್ಣವಾಗಿದೆ. ವಿಶ್ವವಿದ್ಯಾನಿಲಯಗಳು ಒಳಗೊಂಡಿರುವ ಸಂಶೋಧನ ಕೇಂದ್ರಗಳ ಮಹತ್ವದ ಮಣಿಹವನ್ನು ಮೀರಿಸುವಂತೆ ಈ ಪುಣ್ಯ ಪುರುಷರ ಕಾರ್ಯ ಸಾಧನೆಗಳ ವ್ಯಾಪ್ತಿ - ದೀಪ್ತಿ ಇದೆ’’ ಎಂದು ಚ.ಸುಂದರೇಶನ್ ಅವರು ಹೇಳಿದುದು ಅಕ್ಷರಶಃ ಸತ್ಯ.13
	ಚನ್ನಮಲ್ಲಿಕಾರ್ಜುನರ ಪ್ರತಿಭೆ, ಪಾಂಡಿತ್ಯ ಹಾಗೂ ಕಾರ್ಯಕ್ಷಮತೆ ಕುರಿತು ಅವರನ್ನು ಸ್ವತಃ ಆತ್ಮೀಯತೆಯಿಂದ ಕಂಡು ಬೆಂಬಲಿಸಿದ ಶ್ರೀ ಮೂಜಗಂ (ಶ್ರೀ ಜಗದ್ಗುರು ಗಂಗಾಧರ ರಾಜಯೋಗಿಂದ್ರ ಮಹಾಸ್ವಾಮಿಗಳು, ಮೂರು ಸಾವಿರಮಠ, ಹುಬ್ಬಳ್ಳಿ) ಅವರ ಈ ಅಭಿಪ್ರಾಯ ಪರಿಭಾವನಾರ್ಹ. 
	ನಾಡಿನಲ್ಲಿ ವಚನ ಪಿತಾಮಹ ಫ. ಗು. ಹಳಕಟ್ಟಿಯವರು ವಚನ ಸಾಹಿತ್ಯ ಸಂಶೋಧನೆಯಲ್ಲಿ ಅಗ್ರಗಣ್ಯರಾಗಿದ್ದಂತೆ ಚನ್ನಮಲ್ಲಿಕಾರ್ಜುನರೂ ಸಹ ಸಂಶೋಧನೆ ಮಾಡುವಲ್ಲಿ ಪರಿಣಿತರಾಗಿದ್ದರು. ಇವರ ಸಾಹಸ ಅತ್ಯದ್ಭುತವಾದುದು. ಇವರ ಶರೀರವು ವಿದ್ರೂಪಗೊಂಡಿದ್ದರೂ ಕಾರ್ಯತತ್ಪರತೆಯಲ್ಲಿ ನಿಷ್ಠೆಯಿಂದ ಕಾರ್ಯ ಮಾಡತಕ್ಕವರು. ಸತ್ಯ, ಶುದ್ಧ  ಕಾಯಕದಲ್ಲಿ ನಿರತರು. ಆಚಾರ ವಿಚಾರ ಸಂಪನ್ನರು. ಎಲೆಯ ಮರೆಯ ಹೂವಿನಂತೆ ಅವರ ಜೀವನ. ಲಿಂಗೈಕ್ಯ ಹಾನಗಲ್ಲ ಕುಮಾರ ಶಿವಯೋಗಿಗಳೆಂದರೆ ಅವರಿಗೆ ಪಂಚಪ್ರಾಣ. ಬಾಲ್ಯದಿಂದಲೂ ಹರಿತ ಬುದ್ಧಿ, ಕುಮಾರ ಶಿವಯೋಗಿಗಳ ಮಾರ್ಗದರ್ಶನದಂತೆ ನಡೆಯುತ್ತಿದ್ದರು. ಸಂಸ್ಕೃತ, ಇಂಗ್ಲೀಷ, ಕನ್ನಡದಲ್ಲಿ ಅಪಾರ ಪಾಂಡಿತ್ಯ ಪಡೆದವರಾಗಿದ್ದರು. ಅವರಿಗೆ ಯಾವ ಪದವಿ ಇರದಿದ್ದರೂ ಪದವಿ ಪಡೆದವರಿಗಿಂತ ಸಾವಿರಪಟ್ಟು ಜ್ಞಾನ ಸಂಪಾದಿಸಿದರು. ಸತತಾಭ್ಯಾಸ ಅವರ ಜೀವನದ ಉಸಿರಾಗಿತ್ತು. ಅವರಂತಹ ಆದರ್ಶ ಸಂಶೋಧಕರು ಇಂದು ಸಿಗುವುದು ದುರ್ಲಭ. ಅವರು ಸಾಕಷ್ಟು ಆರ್ಥಿಕ ತೊಂದರೆಯಲ್ಲಿದ್ದರೂ ಸಹ, ವಚನ ಹಾಗೂ ಇನ್ನುಳಿದ ಪುಸ್ತಕಗಳ ಸಂಶೋಧನೆಯಲ್ಲಿಯೇ ಕಾಲ ಕಳೆಯುತ್ತಿದ್ದರು. ಮಹಾತ್ಮಾ ಬಸವಣ್ಣನವರು ಹಾಗೂ ರೇವಣಸಿದ್ಧರ ಕಾಲ ನಿರ್ಣಯದ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿದ್ದರು. ಅವರು ಗೈದ ಸಂಶೋಧನೆಯು ಉಳಿಯಲೆಂಬ ಉದ್ದೇಶದಿಂದ ಲಿಂ. ಹಾನಗಲ್ಲ ಕುಮಾರ ಶಿವಯೋಗಿಗಳ ಸವಿನೆನಹಿನಲ್ಲಿಯೇ ‘ಸದ್ಧರ್ಮ ದೀಪಿಕೆ ಮಾಸ ಪತ್ರಿಕೆಯನ್ನು ಹೊರಡಿಸುತ್ತಿದ್ದರು.14
	ನುರಿತ ಲೇಖಕರಾದ ಅಥಣಿಯ ಮೋಟಗಿ ಮಲ್ಲಿಕಾರ್ಜುನರು ಚನ್ನಮಲ್ಲಿಕಾರ್ಜುನರ ವ್ಯಕ್ತಿತ್ವವನ್ನು ಕುರಿತು ಹೀಗೆ ಹೇಳಿದ್ದಾರೆ : ಮಾನವೋನ್ನತಿಗಾಗಿ, ಇಡೀ ತಮ್ಮ ಜೀವಮಾನವನ್ನೇ ಧಾರೆಯಾಗಿ ಎರೆದು, ಅವಿಶ್ರಾಂತ ಶ್ರಮವಹಿಸುತ್ತಿರುವ ಚನ್ನಮಲ್ಲಿಕಾರ್ಜುನರ ವಿಷಯ - ವಿನಯದಲ್ಲಿ ವಿಲೀನಗೊಂಡು ಪರಿಶೋಭಿಸುವ ವಿದ್ವತ್‌ಪೂರ್ಣತೆಯೂ, ವಿಭೂಷಣದಲ್ಲಿ ರೂಪುಗೊಂಡ ಸುಕೋಮಲ ಸದ್ಗುಣವೂ, ಸೌಜನ್ಯದಲ್ಲಿ ಸಮಗೊಂಡ ಅವಿರಳ ಸಾರಳ್ಯ - ಈ ತ್ರಿವೇಣಿ ಸಂಗಮದಿಂದ ಪುಟಗೊಂಡು ಹೊರ ಹೊರಟ ಇವರ ಪರತತ್ವ ವಿಚಾರದ ಕ್ರಾಂತಿಯ ಕಿಡಿಗಳು ಬುದ್ಧಿಯೋಗಕ್ಕೆ ಮೀರಿದ ಒಳ್ಳೇ ಕರ್ಮ ಕೌಶಲದಲ್ಲಿ ರೂಪುಗೊಳ್ಳುತ್ತವೆ. ಮತ್ತು ವಿನೂತನವಾಗಿಯೂ, ಪ್ರಾಚ್ಯಕ್ಕೆ ಅತೀ ಪ್ರಾಚ್ಯವಾಗಿಯೂ ತೋರಿ, ಸತ್ಯದ ಬೆಳಕಿನಲ್ಲಿ ಕೊನೆಗೊಳ್ಳುವ ಇವರ ಪ್ರತಿಯೊಂದು ವಿಚಾರಗಳು ಒಳ್ಳೇ ಬೆಲೆಯುಳ್ಳವುಗಳಾಗಿವೆ. ಅದರಂತೆ ಈ ಮಹನೀಯರ ದಿವ್ಯ ಜೀವನದ ಪ್ರತಿಯೊಂದು ಆಯುಷ್ಯದ ಕ್ಷಣವೂ ಬಹುಬೆಲೆಯುಳ್ಳದವುಗಳಾಗಿವೆ. ಇವರ ಸಾಹಸದ ಪ್ರಯತ್ನ ಭಗೀರಥ ಪ್ರಯತ್ನ . . . ಇವರದು ಶರಣ ಜೀವನ. ಅಲ್ಲಿ ಆ ಅನುಭವದ ಮೂಸೆಯಲ್ಲಿ ಬೆಂದು ಬಂದ ಕೇವಲ ಅಪರಂಜಿ ಚಿನ್ನದಂತೆ ಇವರ ಬದುಕು ಎಂದು ಹೇಳಬಹುದು.15
	ಕನಕಪುರದ ಬಿ. ನಂಜುಂಡಪ್ಪ ಅವರು ಚಿತ್ರಿಸಿದ ಚನ್ನಮಲ್ಲಿಕಾರ್ಜುನರ ವ್ಯಕ್ತಿತ್ವವಿದು: 
	ಶ್ರೀ ಚನ್ನಮಲ್ಲಿಕಾರ್ಜುನರ ಜೀವನದ ಎಲ್ಲಾ ಘಟನೆಗಳೂ ಅವರ ಆದರ್ಶ ವ್ಯಕ್ತಿತ್ವವನ್ನು ಮೂಡಿಸಿದೆ. ತಾವು ಮಾಡುವ ಎಲ್ಲಾ ಕಾರ್ಯಗಳು ಪರಮಾತ್ಮನ ಸೇವೆ ಎಂದು ಭಾವಿಸಿದ್ದವರು ಅವರು. ಸರಳ ಜೀವಿಗಳು ಉಡುಪು, ನಡವಳಿಕೆ ಎಲ್ಲವೂ ಅತೀ ಸರಳ. ಎತ್ತರವಲ್ಲದ ಕೃಶವಾದ ಶರೀರ. ಅಂಗವಿಕಲತೆಯುಳ್ಳವರಾದರೂ ಮಹತ್ತರ ಧ್ಯೇಯವುಳ್ಳವರು. ಹಸನ್ಮುಖಿಗಳು, ವಿನಯ ಸಂಪನ್ನರು, ಮೃದು ಭಾಷಿಗಳು, ಉದಾರ ಪ್ರವೃತ್ತಿಯವರು, ಎಲ್ಲವೂ ಶೀವಾಧಿೀನ ಎನ್ನುವವರು. ಶಾಂತ ಸ್ವಭಾವದವರು. ಅತೃಪ್ತಿ ಎಂಬುದನ್ನು ಕಂಡವರಲ್ಲ. ಅಪಾರ ಕಷ್ಟ ಸಹಿಷ್ಣುತೆಯುಳ್ಳವರು.16
	ಓ. ಎನ್. ಲಿಂಗಣ್ಣಯ್ಯ ಅವರು ಸ್ವತಃ ಚನ್ನಮಲ್ಲಿಕಾರ್ಜುನರನ್ನು ಕಾಣಲು 1957ರಲ್ಲಿ ಮೈಸೂರಿನಲ್ಲಿ ಅವರ ನಿವಾಸಕ್ಕೆ ಹೋಗಿದ್ದರು. ನನ್ನ ಜೀವನದಲ್ಲಿ ಅದೊಂದು ಚಿರಸ್ಮರಣೀಯ ದಿನ! ಎಂದಿದ್ದಾರೆ. ಚನ್ನಮಲ್ಲಿಕಾರ್ಜುನರನ್ನು ಪ್ರತ್ಯಕ್ಷ ಕಂಡು ಅವರ ವ್ಯಕ್ತಿತ್ವದ ಕುರಿತು ಹೀಗೆ ಹೇಳಿದ್ದಾರೆ: 
	ಮಧ್ಯ ವಯಸ್ಸು ಮೀರಿದ್ದ ಹಿರಿಯರೊಬ್ಬರು ಅರಾಮಾಸನದಲ್ಲಿ ಕುಳಿತು ಯಾವುದೋ ಗ್ರಂಥವನ್ನು ಅವಲೋಕಿಸುತ್ತಿದ್ದರು. ಉಟ್ಟ ಪಂಚೆೆ, ತೊಟ್ಟ ತುಂಡು ತೋಳಂಗಿ, ಬೋಳು ತಲೆ, ಕೆಳಗಡೆ ಹರಡಿದ್ದ ಓಲೆಯ ಕಟ್ಟುಗಳು, ಕರಡು ಅಚ್ಚಿನ ಹಾಳೆಗಳು. ಅಲ್ಲಲ್ಲಿ ಜೋಡಿಸಿದ್ದ ಪುಸ್ತಕಗಳು, ನೆಲದ ಮೇಲೆ ಹರಡಿದ್ದ ಒಪ್ಪ ಇಲ್ಲದ ಹಾಸುಗೆ, ಹೊದಿಕೆ, ಎದುರುಗಡೆ ಗೂಟಕ್ಕೆ ನೇತು ಹಾಕಿದ್ದ ಕೋಟು ಅದರ ಪಕ್ಕದಲ್ಲಿರಿಸಿದ್ದ ರುಮಾಲು, ಇವು ಅವರ ನಿರಾಡಂಬರದ ಜೀವನದ ಸಂಕೇತಗಳಂತಿದ್ದವು. ಆ ಸರಸ್ವತಿಯ ಕುಟೀರದಲ್ಲಿ ಲಕ್ಷ್ಮೀ ದೇವಿಗೆ ಮನ್ನಣೆಯುಂಟೇ? ಅದೊಂದು ಅಧ್ಯಾತ್ಮ ಶ್ರೀವಿಹಾರ ಎಂದು ಚನ್ನಮಲ್ಲಿಕಾರ್ಜುನರ ಸರಳ ನಿರಾಡಂಬರ ಜೀವನದ ಕುರಿತ ಚಿತ್ರಣವಿದು. ಅವರೊಬ್ಬ ಸಹೃದಯಿ, ಕರ್ಮಯೋಗಿ, ಸಾಹಿತ್ಯ ಶಿವಯೋಗಿ, ನಿರಾಂಡರ ವ್ಯಕ್ತಿ. ಶಿವಾನುಭಾವಿ ಎಂಬುದನ್ನು ನಾನು ಮನಗಂಡೆನು. ಈ ಶತಮಾನದಲ್ಲಿಯೇ ಶ್ರೀ ಚನ್ನಮಲ್ಲಿಕಾರ್ಜುನರು ವೀರಶೈವ ಸಂಶೋಧಕರಲ್ಲಿ ಅಗ್ರಗಣ್ಯರಾಗಿದ್ದಾರೆ.17
	ಚನ್ನಮಲ್ಲಿಕಾರ್ಜುನರನ್ನು ಪ್ರತ್ಯಕ್ಷ ಕಂಡ ಎಸ್. ಎಸ್. ಭೂಸರಡ್ಡಿ ಅವರು ಧಾರವಾಡ ಮುರುಘಾಮಠದಲ್ಲಿ, ಚಿತ್ರದುರ್ಗ ಬ್ರಹ್ಮನಮಠದಲ್ಲಿ ಈ ಪುಣ್ಯ ಪುರುಷರ ಪ್ರವಚನ ಕೇಳುವ, ಸೇವೆ ಮಾಡುವ ಭಾಗ್ಯ ನನ್ನದಾಗಿತ್ತು ಎಂದು ಹೃದಯದುಂಬಿ ಹೇಳಿದ್ದಾರೆ. ಅವರು ಚನ್ನಮಲ್ಲಿಕಾರ್ಜುನರ ವ್ಯಕ್ತಿತ್ವವನ್ನು ಚಿತ್ರಿಸಿದ ಬಗೆ ಇದು : ಒಂದು ಕಣ್ಣಿಲ್ಲ. ಒಂದು ಕೈ ಸೊಟ್ಟು, ಎತ್ತರದಲ್ಲಿ ಎದ್ದು ಕಾಣುವ ವ್ಯಕ್ತಿಯೂ ಅಲ್ಲ. ಆದರೆ ಮೂರ್ತಿ ಸಣ್ಣದಾದರೂ ಕೀರ್ತಿ ದೊಡ್ಡದಾಗಿತ್ತು. ಎಂತಹ ಅನಾರೋಗ್ಯದ ವಿಷಮ ಪರಿಸ್ಥಿತಿಯಲ್ಲಿಯೂ ಕೂಡ 82 ವರ್ಷ ವಯಸ್ಸಾಗಿದ್ದರೂ ಸಹ ಬಹುಶ್ರದ್ಧೆ, ನಿಷ್ಠೆ, ಭಯ ಭಕ್ತಿಯಿಂದ, ನಿಯಮ ನಿತ್ಯದಿಂದ ಲಿಂಗಪೂಜೆಯನ್ನು ಚಾಚೂ ತಪ್ಪದೇ ಮಾಡಿಕೊಳ್ಳುತ್ತಿದ್ದರು. ಇವರ ವೇಷ ಭೂಷಣಗಳು ಬಹು ಸರಳ. ಸಾದಾ ತರಗತಿಗಳಾಗಿದ್ದವು. ಯಾರೂ ಏನೇ ಅನ್ನಲಿ ಅದಕ್ಕವರು ಲಕ್ಷ್ಯ ಕೊಡುವವರೇ ಅಲ್ಲ. ಸದಾ ಪರಮಾತ್ಮನ ಧ್ಯಾನವೇ ಧ್ಯಾನ. ಶರಣರ ಜೀವನದ ಅಭ್ಯಾಸವೇ ಅಭ್ಯಾಸ. ಅಂತೆಯೇ ಇವರ ಹೃದಯದಿಂದ ಹೊರಹೊಮ್ಮಿದ ಮಾತುಗಳೆಲ್ಲವೂ ಮುತ್ತಿನ ಹಾರ. ಸ್ಫಟಿಕದ ಸಲಾಕೆ, ಜ್ಯೋತಿರ್ಲಿಂಗ, ಲಿಂಗಮೆಚ್ಚಿ ಅಹುದಹುದು ಎನ್ನುವಂತವುಗಳಾಗಿದ್ದವು.18 	
	1937ರಲ್ಲಿ ಪ್ರೊ. ಸ. ಸ. ಮಾಳವಾಡ ಅವರು ಶಿರಾಳಕೊಪ್ಪ ಕರ್ನಾಟಕ ಸಂಘದ ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಹೋದಾಗ ಚನ್ನಮಲ್ಲಿಕಾರ್ಜುನರನ್ನು ಕಂಡರು. ತೀರ ಸಾದಾ, ಅಚ್ಚುಕಟ್ಟಾಗಿಲ್ಲದ ವೇಷ ವಿರೂಪಗೊಂಡ ಅವಯವಗಳು ಕಣ್ಣಿನ ಕುರುಡು, ದುರ್ವಿಧಿಯು ಅವರಿಗೆ ಅಂಟಿಕೊಂಡು ಅವರನ್ನು ಅಟ್ಟಿಸಿಕೊಂಡು ಕಾಡುತ್ತಿರುವ ಚಿತ್ರವದು. ಆದರೆ ದುರ್ವಿಧಿಯ ಆಟವನ್ನು ಧಿೀರತನದಿಂದ ಎದುರಿಸಿದ ಕೆಚ್ಚೆದೆ, ಧಿೀರ ಮನಸ್ಸು ಅವರವಾಗಿದ್ದವು. ವೀರಶೈವ ಸಾಹಿತ್ಯಕ್ಕೆ, ಸಮಾಜಕ್ಕೆ ಸತತ ಸೇವೆ ಸಲ್ಲಿಸುವ, ದಾಸೋಹ ಭಾವದ ಪ್ರತೀಕದಂತಿದ್ದರು. ಚನ್ನಮಲ್ಲಪ್ಪ ಮಾಸ್ತರರು, ಹೊರಗಿನ ವೇಷ, ದೇಹಸೌಷ್ಟವ, ಜಾಣತನದ ಮಾತುಗಾರಿಕೆಗಳಿಂದ ಕೂಡಿರುವವರಲ್ಲಿ ಕಂಡು ಬಾರದ ಸಂಸ್ಕೃತಿ ಅವರಲ್ಲಿ ಮನೆಮಾಡಿದಂತಿತ್ತು. ಮನೆಯಲ್ಲಿ ಸ್ವಂತಕ್ಕಾಗಿ ದುಡಿಯುತ್ತಿದ್ದರು. ಸಾಹಿತ್ಯ, ಸಮಾಜ ಸೇವೆ ವೃತವನ್ನು ಕೈಗೊಂಡಿದ್ದರು.19 
ಅದ್ಭುತ ಸ್ಮರಣ ಶಕ್ತಿ:
	ಚನ್ನಮಲ್ಲಿಕಾರ್ಜುನರ ಅದ್ಭುತ ಸ್ಮರಣ ಶಕ್ತಿಯ ಕುರಿತು ಮುರಿಗೆಪ್ಪ ಈರಪ್ಪ ಎಲಿಮಾಸ್ತರ, ಧಾರವಾಡ ಅವರು ಒಂದು ಪ್ರಸಂಗವನ್ನು ಹೇಳುತ್ತಾರೆ. 
ವರು ಸಂಶೋಧನಾ ಕಾರ್ಯದಲ್ಲಿ ತೊಡಗಿ ಒಂದು ದಿನ ಶಿರಾಳಕೊಪ್ಪಕ್ಕೆ ಬ್ಯಾಡಗಿಯಿಂದ ಚಕ್ಕಡಿ ಗಾಡಿಯಲ್ಲಿ ಪ್ರವಾಸ ಮಾಡುತ್ತಿದ್ದರು. ಆ ಗಾಡಿಯಲ್ಲಿ ಇವರು ಸಂಶೋಧಿಸಿ ಬರೆದಿಟ್ಟ ಅನೇಕ ಬರಹಗಳೂ, ಮಹತ್ವದ ಗ್ರಂಥಗಳೂ ಒಂದು ಪೆಟ್ಟಿಗೆಯಲ್ಲಿ ತುಂಬಿಡಲ್ಪಟ್ಟಿದ್ದವು. ಬ್ಯಾಡಗಿಯಿಂದ ಎರಡು ಮೂರು ಮೈಲು ದೂರ ಹೋಗುವುದರೊಳಗೆ ಆ ಪೆಟ್ಟಿಗೆಯು ಉದ್ದೇಶ ಪೂರ್ವಕವಾಗಿಯೇ ಕೆಲವರಿಂದ ಅಪಹರಿಸಲ್ಪಟ್ಟಿತು. ಆಗ ಅವರು ಕಿಂಚಿತ್ತು ಅಧೈರ್ಯಪಟ್ಟುಕೊಳ್ಳದೆ ತಮ್ಮ ಜ್ಞಾಪಕಶಕ್ತಿಯ ಬಲದಿಂದಲೂ ಪುನಃ ಸಂಶೋಧನೆ ಮಾಡುವುದರ ಮೂಲಕವೂ ಆ ನಷ್ಟವನ್ನು ತುಂಬಿಕೊಂಡರೆಂಬುದು ಬಹು ಮಹತ್ವದ ಪ್ರಸಂಗವಾಗಿದೆ.20
	ಇದು ಚನ್ನಮಲ್ಲಿಕಾರ್ಜುನರ ಅಗಾಧ ಸ್ಮರಣಶಕ್ತಿ, ಧೃತಿಗೆಡದ ತಾಳ್ಮೆ ಹಾಗೂ ಪರಿಶ್ರಮದ ಪ್ರತ್ಯಕ್ಷ ನಿದರ್ಶನವಾಗಿದೆ.
ಕವಿಯಾಗಿ ಚನ್ನಮಲ್ಲಿಕಾರ್ಜುನರು:ನ್ನಮಲ್ಲಿಕಾರ್ಜುನರು ಕೇವಲ ಸಂಶೋಧಕರು, ಸಂಪಾದಕರು, ವಿಮರ್ಶಕರು ಮಾತ್ರವಾಗಿರದೆ ಸೃಜನಶೀಲ ಕವಿಗಳು ಆಗಿದ್ದಾರೆಂಬುದು ಅವರೇ ಬರೆದ ಕಂದ ಪದ್ಯಗಳಿಂದ ತಿಳಿದು ಬರುತ್ತದೆ. ಛಂದೋಬದ್ಧವಾದ ಕಂದದ ಬಂಧವೇ ಅವರಿಗೆ ಅತ್ಯಂತ ಪ್ರಿಯಾಗಿತ್ತೆಂದು ಕಾಣುತ್ತದೆ. ಮೈಸೂರಿನಿಂದ ತಮ್ಮ ಸದ್ಧರ್ಮ ದೀಪಿಕೆ ಪತ್ರಿಕೆ ಪ್ರಕಟವಾಗುವಾಗ ಸಾಮಾನ್ಯವಾಗಿ ಪ್ರತಿಸಂಚಿಕೆಯ ಮುಖಪುಟದ ಮೇಲೆ ಒಂದೊಂದು ಕಂದಪದ್ಯ ಇದ್ದೇ ಇರುತ್ತಿತ್ತು. ಒಮ್ಮೊಮ್ಮೆ ಎರಡು ಪದ್ಯಗಳಿರುತ್ತಿದ್ದವು. ನಿದರ್ಶನಕ್ಕಾಗಿ ಕೆಲವನ್ನು ಗಮನಿಸಬಹುದು. ಶರಣಮಾರ್ಗಿಗಳಾದ ಕೆಲವರ ಬಗೆಗೆ ಒಂದೊಂದು ಕಂದ ಪದ್ಯವನ್ನು ಬರೆಯುತ್ತಿದುದು ಕಂಡು ಬಂದಿದೆ. ಬೆಳಗಾವಿಯ ಶ್ರೀಮತಿ ಚನ್ನಮ್ಮ ವೀರಪ್ಪ ಉಪ್ಪಿನ ಎಂಬುವರು ಲಿಂಗೈಕ್ಯರಾದಾಗ ಅವರ ಸಂಕ್ಷಿಪ್ತ ಜೀವನ ಕಥನದೊಂದಿಗೆ ಸಂಚಿಕೆ 13ರಲ್ಲಿ ಒಂದು ಕಂದ ಪದ್ಯವನ್ನು ರಚಿಸಿದ್ದಾರೆ. 
ವರ ವೀರಣ ಪತ್ನಿಯು ತಾಂ 
ಸಿರಿ ಸಂಪದಮಂ ಪೊಂದಿರ್ದಾ ಚೆನ್ನಮ್ಮಂ 
ವರ ಗುರುವಿನ ವರದಿಂದಲಿ ೆಮೆರೆದಳ್ ಆತ್ಮಶಾಂತಿಯದಾಗಲ್ ॥ರಾಷ್ಟ್ರನಾಯಕರ ಕುರಿತು ಪದ್ಯ ಬರೆಯುತ್ತಿದ್ದರು. ಭಾರತದ ಗೌರ್ನರ್ ಜನರಲ್ ಆಗಿದ್ದ ಚಕ್ರವರ್ತಿ ರಾಜಗೋಪಾಲಾಚಾರ್ಯರನ್ನು ಕುರಿತು ಸಂಚಿಕೆ 74-75 ರಲ್ಲಿ ಪ್ರಕಟವಾಗಿದೆ. 
ಪಾಲಿಸುವಂ ಗೋಪಾಲಂಲಿಗೆ ಕಾಣಿಸದೆ ರಾಜಗೋಪಾಲಂ ನೀಂ 
ಲೋಲತೆಯಿಂ ಪ್ರತ್ಯಕ್ಷದಿ 
ಪಾಲಿಪೆ ಭಾರತವ ಜಗಕೆ ಇದು ಬಹುಚೋದ್ಯಂ ॥
	ದೇಶವು ಸ್ವಾತಂತ್ರ್ಯತೆಯಿಂ 
	ಕೋಶದ ವೃದ್ಧಿಯನು ಪಡೆದು ನಾಗರಿಕತೆಯಿಂ 
	ದಾ ಸುಖಮಿರಲೇರ್ಪಡಿಸಲು 
	ಕೇಶವ ನೀನು ಮೊದಲಿಗನಾಳ್ವರ ಪಿರಿಯಂ ॥
ಬಲು ಮಹಿಮ ಗಾಂಧಿಯಿಂದಲಿ 
ಸಲೆ ರಾಜ್ಯಭಾರ ಸೂತ್ರವನುರೆತಿಳಿದಿಹೆಯೈ ಲಿತನದಿ ಪಾಲಿಸು ಸುಖದಿ 
ನೊಲವಿನ ಭಾರತ ಜನನಿಯನೀಶ್ವರ ಕೃಪೆಯಿಂ ॥
	ನೀತಿಯುತ ಪದ್ಯಗಳು ಕೆಲವೊಮ್ಮೆ ಮುಖಪುಟದ ಮೇಲೆ ಗೋಚರಿಸುತ್ತಿದ್ದವು: 
	ಅನ್ನ ವಿಷವಾಗಿ ಕೊಲ್ವುದು 
	ತನ್ನವರೊಳು ವೈರಹುಟ್ಟಿ ಹಗೆಯಾಗಿರ್ಪರ್ 
	ಹೊನ್ನು ಮಣ್ಣಾಗಿ ಕೆಡುವುದು 
	ಪನ್ನಗಧರ ಶಿವನ ಕರುಣೆ ತಪ್ಪಿದ ಬಳಿಕಂ ॥	
							(ಸಂಚಿಕೆ 56-57)
	ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಸಂಸ್ಥಾನವನ್ನು ಅಂದಿನ ಜಯಚಾಮರಾಜ ಒಡೆಯರ ಅವರು ಆಳುತ್ತಿದ್ದರು. ಅದೇ ಸಂದರ್ಭದಲ್ಲಿ ಚನ್ನಮಲ್ಲಿಕಾರ್ಜುನರು ಸದ್ಧರ್ಮ ದೀಪಿಕೆ ಪತ್ರಿಕೆಯನ್ನು ಮೈಸೂರಿನಿಂದ ಪ್ರಕಟಿಸುತ್ತಿದ್ದರು. ಹೀಗಾಗಿ ಮಹಾರಾಜರ ವ್ಯಕ್ತಿತ್ವ ಸ್ತವನ ಪದ್ಯಗಳು ಹೆಚ್ಚಾಗಿ ಮುಖಪುಟದ ಮೇಲೆ ವಿರಾಜಿಸುತ್ತಿದ್ದವು. ಉದಾಹರಣೆಗೆ ಕೆಲವು ಪದ್ಯಗಳನ್ನು ಗಮನಿಸಬಹುದು: 
	ಅವನ ಲೀಲಾಮಾತ್ರದಿ 
	ತೀವಿಜಗಂ ಹರಣ ರಾಶಿಯಂ ಪೊರ್ದಿರ್ಕಂ 
	ಅವಿನುತ ಮಹಾದೇವನು 
	ಕಾವುಗೆ ಜಯಚಾಮರಾಜನವನಂ ಜನಮಂ  	
							(ಸಂಚಿಕೆ 62-63)
	ಸರ್ವಂ ಶುದ್ಧಂ ಭದ್ರಂ  
	ಸರ್ವಂ ಸ್ವಾತಂತ್ರ್ಯ ಪರಮ ಕರುಣಾಪೂರ್ಣಂ 
	ಪರ್ವಿಸಲುರೆ ಸ್ವತಂತ್ರವ 
	ನುರ್ವಿಗೆ ಜಯಚಾಮರಾಜಗಂ ಜನತತಿಗಂ ॥	
							(ಸಂಚಿಕೆ 64-65)
	ಶಾಂತಿಯೆ ಪರಮನಲಕ್ಷಣ - 
	ಶಾಂತಿಯುತರಿಹದಿ ಸುಖದೊಳು ಮೆರೆವರುಸತತಂ 
	ಶಾಂತಿಯ ಮೂಲನು ಪೊರೆಯಲಿ 
	ಶಾಂತದಿ ಜಯಚಾಮರಾಜನಂ ಜನಗಣಮಂ ॥		
							(ಸಂಚಿಕೆ 74-75)ಾವು ಸಂಪಾದಕರಾಗಿದ್ದ ಸದ್ಧರ್ಮ ದೀಪಿಕೆ ಪತ್ರಿಕೆಯ ಕುರಿತ ಹಾರೈಕೆಯ ಪದ್ಯವಿದು: 
	ಕನ್ನಡ ನಾಡೊಳು ಧರ್ಮದ - 
	ಬಿನ್ನಣಮಂ ಬೀರಿ ಜೀವೋನ್ನತಿಯಂ 
	ಸಮ್ಮತದಿಂ ಗೆಯ್ದಗಳು 
	ಸಮ್ಮುದವೀಯಲಿ ಸುಧರ್ಮ ದೀಪಿಕೆ ಘನದಿಂ ॥	
							(ಸಂಚಿಕೆ 53)
ಹೀಗೆ ಛಂಧೋಬದ್ಧವಾದ ಪದ್ಯಗಳನ್ನು ಬರೆಯುವುದರಲ್ಲಿಯೇ ಅವರ ಕವಿತ್ವ ಶಕ್ತಿಯ ಹೆಗ್ಗಳಿಕೆ ವ್ಯಕ್ತವಾಗುತ್ತದೆ. 
ಪರಳಿ ಪ್ರಕರಣ: 
	1924ನೇ ಇಸ್ವಿಯಲ್ಲಿ ಪರಳಿ ಜ್ಯೋತಿರ್ಲಿಂಗ ಸಂಬಂಧದಲ್ಲಿ ವ್ಯಾಜ್ಯ ನಡೆದಿತ್ತು. ವೈದ್ಯನಾಥ ಜ್ಯೋತಿರ್ಲಿಂಗವಿದ್ದುದು ಆಗಿನ ನಿಜಾಮ ಸ್ಟೇಟದಲ್ಲಿ. ವೀರಶೈವರಿಗೆ ವೇದಾಧಿಕಾರವಿಲ್ಲ. ಅವರು ಶೂದ್ರರು. ವೈದ್ಯನಾಥ ಸ್ವಾಮಿಗೆ ರುದ್ರಾಭಿಷೇಕ ಮಾಡಲು ಅವರಿಗೆ ಅಧಿಕಾರ ಇಲ್ಲ ಎಂಬುದೇ ವ್ಯಾಜ್ಯದ ಮುಖ್ಯ ಅಂಶ. ಇದು ಸಮಗ್ರ ವೀರಶೈವರ ಗಮನ ಸೆಳೆಯಿತು. ನಿಜಾಮ ಸರಕಾರವು ಈ ವ್ಯಾಜ್ಯವನ್ನು ಬಗೆಹರಿಸಲು ನಿವೃತ್ತ ಹೈಕೋರ್ಟ ನ್ಯಾಯಮೂರ್ತಿ ಶ್ರೀ ಬಾಲಮುಕುಂದರಾವ್ ಎಂಬುವರನ್ನು ನೇಮಿಸಿತು. ಈ ವ್ಯಾಜ್ಯದಲ್ಲಿ ವಾದ ಮಾಡಲು ವೀರಶೈವರ ಪರವಾಗಿ ಆಗ ಇಂದೂರಿನಲ್ಲಿದ್ದ ವೇದಭಾಷ್ಯ ಪ್ರೊಫೆಸರರಾಗಿದ್ದ ಚೌಡದಾನಪುರದ ಶ್ರೀ ಜಗದಾರ್ಯಸ್ವಾಮಿ ವೀರೂಪಾಕ್ಷ ಒಡೆಯರು ಅವರನ್ನು ಆರಿಸಿತು. ಹಾನಗಲ್ಲ ಕುಮಾರ ಸ್ವಾಮಿಗಳು ಮತ್ತಿತರ ಮಠಾಧಿೀಶರು ವಾದಮಾಡಲು ಅನೇಕ ಆಧಾರಗಳನ್ನೂ ಧನ ಸಂಗ್ರಹವನ್ನೂ ಒಡೆಯರ ಅವರಿಗೆ ಪೂರೈಸಿದರು. ಆಗ ಶ್ರೀ ಚನ್ನಮಲ್ಲಿಕಾರ್ಜುನರು ಶ್ರೀ ಕುಮಾರ ಸ್ವಾಮಿಗಳ ಮೂಲಕ ವೀರಶೈವರು ಶೂದ್ರರು ಅಲ್ಲ ಎಂಬುದಕ್ಕೆ ಅನೇಕ ಆಧಾರಗಳನ್ನು ಒದಗಿಸಿದರು. ಇದು ಚನ್ನಮಲ್ಲಿಕಾರ್ಜುನರ ಬಹುಶೃತತ್ವ ಮತ್ತು ಪಾಂಡಿತ್ಯವನ್ನು ಸೂಚಿಸುತ್ತದೆ. ಧನ ಸಂಗ್ರಹ ಕಾರ್ಯದಲ್ಲಿಯೂ ಶ್ರೀ ಕುಮಾರಸ್ವಾಮಿಗಳ ಸಂಗಡ ಶ್ರೀ ಚನ್ನಮಲ್ಲಿಕಾರ್ಜುನರೂ ವಿಶೇಷವಾಗಿ ಶ್ರಮಿಸಿದರು. ಆ ವ್ಯಾಜ್ಯದಲ್ಲಿ ವೀರಶೈವರಿಗೆ ಗೆಲುವಾಯಿತು. ವೀರಶೈವರು ವೇದಾಧಿಕಾರಿಗಳೆಂದು ಅವರಿಗೆ ರುದ್ರಾಭಿಷೇಕ ಮಾಡುವ ಅಧಿಕಾರವುಂಟೆಂದು ಹೈಕೋರ್ಟ ತೀರ್ಮಾನ ನೀಡಿತು. 
ಸಂಶೋಧನೆ: 
	ಸಂಶೋಧನಾಸಕ್ತ ಚನ್ನಮಲ್ಲಿಕಾರ್ಜುನರು ಶಿಕ್ಷಕ ವೃತ್ತಿಯಲ್ಲಿರುವಾಗಲೇ ಬಿಡುವಿದ್ದಾಗ ಬಳ್ಳಿಗಾವಿ, ತಾಳಗುಂದ, ಬನವಾಸಿ, ಬಂದಳಿಕೆ, ಏಕಾಂತ ರಾಮಯ್ಯನ ಗುಡ್ಡ, ಮುತ್ತಿಗೆ, ತೊಗರಸೆ ಮುಂತಾದ ಪ್ರಾಚೀನ ಐತಿಹಾಸಿಕ ಸ್ಥಳಗಳಿಗೆ ಹೋಗಿ ಅವುಗಳ ಐತಿಹ್ಯ ಸಂಗ್ರಹಿಸುವುದು, ಅಲ್ಲಿಯ ಶಾಸನಗಳನ್ನು ಓದುವುದು ಹಳ್ಳಿಗಳಲ್ಲಿ ಸಿಗುವ ಓಲೆಗರಿಗಳ ಗ್ರಂಥಗಳು, ಕೈಬರಹದ ಪ್ರತಿಗಳು ಮೊದಲಾದವುಗಳನ್ನು ಸಂಗ್ರಹಿಸಿಕೊಂಡು ಬರುವ ಕಾರ್ಯಮಾಡುತ್ತಿದ್ದರು. ಹಾನಗಲ್ಲ ಶ್ರೀಗಳು ಬಂದಾಗ ಅವರಿಗೆ ತಮ್ಮ ಸಂಶೋಧನೆಯ ವರದಿಯನ್ನು ಒಪ್ಪಿಸುತ್ತಿದ್ದರು. ಹಾನಗಲ್ಲ ಶ್ರೀಗಳವರು ಅಪ್ರಕಟಿತ ವೀರಶೈವ ಸಾಹಿತ್ಯವನ್ನು ಪ್ರಕಟಿಸಲು ಪ್ರೋಅಂತೆಯೇ ಹಳೆಯ ಗ್ರಂಥಗಳನ್ನು ಓದುವುದು ಅವುಗಳನ್ನು ಶುದ್ಧವಾಗಿ ಬರೆದಿಡುವ ಕಾರ್ಯದಲ್ಲಿ ಸತತ ನಿರತರಾಗಿರುತ್ತಿದ್ದರು.

ಕೌಟುಂಬಿಕ ಜೀವನ: 
	ಚನ್ನಮಲ್ಲಪ್ಪನವರು ಮೂರು ಸಲ ಲಗ್ನಮಾಡಿಕೊಂಡರು. ಆದರೂ ಇವರ ವಂಶವೃದ್ಧಿ ಆಗಲಿಲ್ಲ. ಮೊದಲ ಹೆಂಡತಿ 1911ರಲ್ಲಿಯೇ ತೀರಿಕೊಂಡರು. ಅವರ ಹೊಟ್ಟೆಯಲ್ಲಿ ಶಂಕರನೆಂಬ ಮಗ ಹುಟ್ಟಿದ್ದ ಆದರೆ ನಾಲ್ಕೈದು ವರ್ಷವಾಗುತ್ತಲೇ ತಾಯಿಗಿಂತ ಮೊದಲೇ ತೀರಿಕೊಂಡ. ಆಮೇಲೆ 1912ರಲ್ಲಿ ನಂದಿಹಳ್ಳಿಯ ಇನ್ನೊಂದು ಕನ್ಯೆಯೊಂದಿಗೆ ಲಗ್ನವಾದರು. ಅವರೂ 1917ರಲ್ಲಿ ತೀರಿಕೊಂಡರು. ಮತ್ತೆ ಯಾದವಾಡದ ಅಣವೀರಪ್ಪನವರ ಮಗಳು ಪಾರ್ವತಮ್ಮ ಎಂಬ ಕನ್ಯೆಯೊಡನೆ ಮೂರನೇ ಮದುವೆಯನ್ನು 1917ರಲ್ಲಿ ಮಾಡಿಕೊಂಡರು. ಮೂರ್ನಾಲ್ಕು ವರ್ಷಗಳಲ್ಲಿ ಅವರೂ ತೀರಿಕೊಂಡರು. ಹೀಗಾಗಿ ಅವರ ಕೌಟುಂಬಿಕ ಜೀವನ ಸುಖಕರವಾಗಿರಲಿಲ್ಲ. ಮುಂದೆ ಸನ್ಯಾಸಿ ಜೀವನವನ್ನೇ ಬದುಕಿದರು. ಅವರ ಜೀವಿತವೆಲ್ಲ ಗುರುಲಿಂಗ ಜಂಗಮ ಸೇವೆಗೆ ಮೀಸಲಾಯಿತು. ಬಾಲ್ಯದಲ್ಲಿಯೇ ಶಿಕ್ಷಕ ವೃತ್ತಿಗೆ ಸೇರಿದ್ದರಿಂದ ಸುಮಾರು 35ವರ್ಷ ಸೇವೆ ಸಲ್ಲಿಸಿ ನಿವೃತ್ತರಾದರು. ನಿವೃತ್ತರಾದ ನಂತರ ಚನ್ನಮಲ್ಲಪ್ಪನವರು ಶ್ರೀ ಚನ್ನಮಲ್ಲಿಕಾರ್ಜುನ ಎಂಬ ನಾಮಧೇಯದಿಂದ ಧರ್ಮ ಪ್ರಸಾರ ಕಾರ್ಯದಲ್ಲಿ ಪ್ರವೃತ್ತರಾಗಿದ್ದರು. ಹೀಗೆ ಹೆಸರನ್ನು ಬದಲಾಯಿಸಿದ ಬಗ್ಗೆ ಸರಕಾರದ ಗೆಜೆಟ್ಟಿನಲ್ಲಿ ಪ್ರಸಿದ್ಧ ಪಡಿಸಿ ಖಜಾನೆ ಅಧಿಕಾರಿಗಳಿಗೆ ತಿಳಿಸಿದರೆ ಮಾತ್ರ ನಿವೃತ್ತಿ ವೇತನವನ್ನು ಬದಲಿ ಹೆಸರಿನಲ್ಲಿ ಕೊಡುತ್ತಾರೆ. ಈ ಕ್ರಮವನ್ನು ಕೈಕೊಳ್ಳಲಾರದ್ದರಿಂದ ಅವರು ವರ್ಷಾನುಗಟ್ಟಲೆ ನಿವೃತ್ತಿ ವೇತನವನ್ನು ಪಡೆಯಲಾಗಲಿಲ್ಲ. ಅವರ ವೈರಾಗ್ಯ ಜೀವನಕ್ಕೆ ಈ ಹೆಚ್ಚಿನ ಹಣದ ಅವಶ್ಯಕತೆಯಿರಲಿಲ್ಲ. ಈ ವಿಷಯವು ಅವರ ಶಿಷ್ಯರಾದ ಬೆಂಗಳೂರು ಗೌರ್ನಮೆಂಟ್ ಪ್ರಿಂಟಿಂಗ್ ಆ್ಯಂಡ್ ಪಬ್ಲಿಷಿಂಗ್ ಶಾಖೆಯ ಡೈರೆಕ್ಟರಾಗಿದ್ದ ಡಿ. ಎಸ್. ಗುರುಬಸಪ್ಪ ಅವರಿಗೆ ತಿಳಿದ ಮೇಲೆ ಹೆಸರು ಬದಲಾವಣೆ ಕ್ರಮವನ್ನು ಅನುಸರಿಸಿ ಸರಕಾರದ ಗೆಜೆಟ್‌ನಲ್ಲಿ ಪ್ರಸಿದ್ಧ ಪಡಿಸಿದ ನಂತರ ಹಿಂದಿನ ನಿವೃತ್ತಿ ವೇತನವನ್ನೆಲ್ಲ ಪಡೆದರು.21
	ಚನ್ನಮಲ್ಲಿಕಾರ್ಜುನರು ಗ್ರಂಥಾವಲೋಕನ ಮಾಡುವುದು, ಪಾಠಾಂತರಗಳನ್ನು ಗುರುತಿಸಿ ಶುದ್ಧ ಹಸ್ತಪ್ರತಿಗಳನ್ನು ಸಿದ್ಧಪಡಿಸುವುದು, ಮಾಡಿದ ಕಾರ್ಯವನ್ನು ಹಾನಗಲ್ಲ ಶ್ರೀಗಳವರ ಗಮನಕ್ಕೆ ತರುವ ಇವೇ ಮುಂತಾದ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಹಾನಗಲ್ಲ ಶ್ರೀಗಳವರು ಚನ್ನಮಲ್ಲಿಕಾರ್ಜುನರು ಸಂಪಾದಿಸಿದ ಗ್ರಂಥ ಪ್ರಕಟಣೆಗೆ ವ್ಯವಸ್ಥೆ ಮಾಡಬೇಕೆನ್ನುವಷ್ಟರಲ್ಲಿ 1930ರಲ್ಲಿ ಲಿಂಗೈಕ್ಯರಾದರು. ಗುರುವಿನ ಆಶ್ರಯ ಕಳೆದುಕೊಂಡ ಚನ್ನಮಲ್ಲಿಕಾರ್ಜುನರು ತಬ್ಬಲಿಗಳಾದರು. 
	ಗುರುಗಳಾದ ಶ್ರೀ ಕುಮಾರ ಶಿವಯೋಗಿಗಳ ಅಗಲಿಕೆಯಿಂದ ಆಘಾತವಾದರೂ ಸೈರಿಸಿಕೊಂಡು ಧೈರ್ಯ ತಂದುಕೊಂಡರು. ಕುಮಾರ ಶಿವಯೋಗಿಗಳ ಯೋಜನೆ, ಯೋಚನೆಗಳನ್ನು ಕಾರ್ಯಗತಗೊಳಿಸಲು ಸಂಕಲ್ಪ ಮಾಡಿದರು. ಕುಮಾರ ಶಿವಯೋಗಿಗಳ ನಿಕಟವರ್ತಿಗಳು ಶಿವಯೋಗ ಮಂದಿರ ಸಂಸ್ಥಾಪನಾ ಕಾರ್ಯದಲ್ಲಿ ಅವರೊಂದಿಗೆ ದುಡಿದ ಮಹಾತಪಸ್ವಿ ಹಾವೇರಿ ಹುಕ್ಕೇರಿಮಠದ ಶ್ರೀ ಶಿವಬಸವ ಸ್ವಾಮಿಗಳು ಚನ್ನಮಲ್ಲಿಕಾರ್ಜುನರ ಸಂಕಲ್ಪವನ್ನರಿತು ಸಹಾಯ ಮಾಡಲುದ್ಯುಕ್ತರಾದರು. ಶಿವಯೋಗ ಮಂದಿರದ ಒಡೆತನದಲ್ಲಿದ್ದ ಹಳೆಯ ಮುದ್ರಣಾಲಯವನ್ನು ಹಾವೇರಿಗೆ ತರಿಸಿ ಚನ್ನಮಲ್ಲಿಕಾರ್ಜುನರಿಗೆ ಸದ್ಧರ್ಮ ದೀಪಿಕೆ ಪತ್ರಿಕೆ ಹಾಗೂ ಧರ್ಮಗ್ರಂಥಗಳನ್ನು ಪ್ರಕಟಿಸಲು ಅನುಕೂಲಮಾಡಿಕೊಟ್ಟರು. ಈ ಕುರಿತು ಮುಂದೆ ಪ್ರತ್ಯೇಕ ಅಧ್ಯಾಯಗಳಲ್ಲಿ ವಿವರಿಸಲಾಗುವುದು. 
ಹಾವೇರಿಯಲ್ಲಿ ಚನ್ನಮಲ್ಲಿಕಾರ್ಜುನರ ಜೀವನ ವಿಧಾನ: 
	ಶರಣರಾದ ಚನ್ನಮಲ್ಲಿಕಾರ್ಜುನರ ಜೀವನ ವಿಧಾನ ಅತ್ಯಂತ ಸರಳವೂ, ಆಡಂಬರ ರಹಿತವೂ ಆಗಿತ್ತು. ತಲೆಗೆ ಒಂದು 5 ಮೊಳ ಉದ್ದದ ರುಮಾಲು, ಉಡಲು 5 ಮೊಳ ಉದ್ದದ ದಬ್ಬಣಕಡ್ಡಿ ಪಂಚೆೆ, ಒಳಗೆ ಒಂದು ಅರ್ಧ ತೋಳಿನ ಅಂಗಿ ಮೇಲೊಂದು ದೊಡ್ಡ ದೊಡ್ಡ ಜೇಬುಗಳುಳ್ಳ ಒರಟು ನೂಲಿನ ಉದ್ದನೆಯ ಕೋಟು. ಈ ಕೋಟಿನ ಜೇಬಿನಲ್ಲಿಯೇ ಅವರ ತೀಜೋರಿ. ಎಲ್ಲ ಜೇಬುಗಳು ಕಾಗದ ಪತ್ರ, ಅಧ್ಯಯನದ ಟಿಪ್ಪಣಿ ಮುಂತಾದವುಗಳು ಇರುತ್ತಿದ್ದವು. ಅವರಿಗೆ ಮಲಗಲು ಹಾಸಿಗೆ ಇರಲೇಇಲ್ಲ. ಹೊದೆಯಲು ಒಂದು ದೊಡ್ಡ ದುಪ್ಪಟ್ಟಿ ಇರುತ್ತಿತ್ತು. ಅದು ಎರಡು ಮಡಿಕೆಯದು. ರಾತ್ರಿ ಮಲಗುವಾಗ ಅದನ್ನು ಮೈತುಂಬ ಸುತ್ತಿಕೊಂಡು ಒಂದು ಬೆಂಚಿನ ಮೇಲೆ ಮುದುಡಿ ಮಲಗಿ ನಿದ್ರೆ ಮಾಡುತ್ತಿದ್ದರು. ಶಿವಾನುಭವ ಪ್ರವಚನ ಮುಂತಾದ ಕಾರ್ಯಕ್ರಮಗಳು ಇಲ್ಲದಿದ್ದಾಗ ಸಾಯಂಕಾಲ 6 ಗಂಟೆಗೆ ಪ್ರೆಸ್ಸಿನ ಕೆಲಸಗಾರರು ಮನೆಗೆ ಹೋದ ಮೇಲೆ ಪ್ರೆಸ್ಸಿನ ಕದ ಹಾಕಿ ಒಬ್ಬರೆ ಒಂದು ಲಾಟಿನಿನ ಮಂದ ಪ್ರಕಾಶದಲ್ಲಿ ಯೋಚನೆ ಮಾಡುತ್ತ ಕುಳಿತುಕೊಳ್ಳುತ್ತಿದ್ದರು. 9 ಗಂಟೆ ಸುಮಾರಿಗೆ ಕುಳಿತ ಬೆಂಚಿನ ಮೇಲೆಯೇ ಮುರುಡಿಕೊಂಡು ಮಲಗಿ ರಾತ್ರಿ ಒಂದುವರೆ ಗಂಟೆಗೆ ಎದ್ದು ಬರೆಯಲು ಕುಳಿತುಕೊಳ್ಳುತ್ತಿದ್ದರು. ಈ ನಿಶ್ಯಬ್ದ ವಾತಾವರಣವೇ ಅವರ ಬರವಣಿಗೆಗೆ ಪ್ರಶಸ್ತ ಕಾಲವಾಗಿರುತ್ತಿತ್ತು. ಅವರ ಒಂದು ಕಣ್ಣು ಕುರುಡಾಗಿತ್ತು. ಒಂದೇ ಕಣ್ಣಿನಿಂದ ಕೆಲಸ ಮಾಡುವಾಗ ಅದಕ್ಕೆ ಆಗಾಗ ನೋವು ಬರುತ್ತಿತ್ತು. ಅದರ ನಿವಾರಣೆಗೆ ತಮ್ಮದೇ ಆದ ಏನೇನೋ ಔಷಧೋಪಚಾರ ಮಾಡಿಕೊಳ್ಳುತ್ತಿದ್ದರು. 
	ಬೆಳಗಾಗುತ್ತಲೇ ಹಾವೇರಿಯ ಪುರಸಿದ್ಧಪ್ಪನ ಗುಡಿಯ ಆವರಣದೊಳಗೆ ಹಾಯ್ದು ಅರ್ಧ ಮೈಲು ದೂರವಿರುವ ಹಳ್ಳದ ಕಡೆಗೆ ಸಂಚಾರಕ್ಕೆ ಹೋಗಿ ಪ್ರಾಥರ್ವಿಧಿಗಳನ್ನು ತೀರಿಸಿ ಮುಖಮಾರ್ಜನ ಮಾಡಿಕೊಂಡು ಅಲ್ಲಿಯೇ ಇದ್ದ ತುಂಬೆ, ಕಣಗಿಲ, ಎಕ್ಕೆ ಮುಂತಾದ ಹೂವುಗಳನ್ನು ಶ್ರದ್ಧೆಯಿಂದ ಎತ್ತಿಕೊಂಡು ಪ್ರೆಸ್ಸಿನ ಕೆಲಸಗಾರರು ಬರುವುದರೊಳಗೆ ಬಂದು ಬಿಡುತ್ತಿದ್ದರು. ಮಧ್ಯಾಹ್ನ 12 ಗಂಟೆಯವರೆಗೆ ಬರವಣಿಗೆ, ಕರಡಚ್ಚು ತಿದ್ದುವುದು ಇನ್ನಿತರ ಮುದ್ರಣಗಳನ್ನು ಮಾಡಿಸುವುದು, ಇತ್ಯಾದಿ ಕೆಲಸಗಳನ್ನು ಮಾಡಿಸುತ್ತಿದ್ದರು. 
ಸ್ವಾವಲಂಬನ - ಸ್ವಯಂಪಾಕ:
	ಪ್ರೆಸ್ಸು ಇರುವ ವಾಲಿಮಠದ ಮುಂದೆಯೇ ಇರುವ ಭಾವಿಕಟ್ಟಿಯ ಮೇಲೆ ತಣ್ಣೀರಿನ ಸ್ನಾನ ಮಾಡುತ್ತಿದ್ದರು. ಅವರ ಬಲಗೈ ಅಶಕ್ತವಾಗಿದ್ದರಿಂದ ಎಡಗೈ ಶಕ್ತಿಯಿಂದಲೇ ಸಣ್ಣ ಬಿಂದಿಗೆಯಿಂದ ಆಳವಾದ ಭಾವಿಯಿಂದ ನೀರು ಸೇದಿ ತಂದು ಶಿವಪೂಜೆ ಮಾಡುತ್ತಿದ್ದರು. ಅನಂತರ ತಮಗೆ ಬೇಕಾದ ಪ್ರಸಾದವನ್ನು ತಾವೇ ತಯಾರಿಸಿಕೊಳ್ಳುತ್ತಿದ್ದರು. ಸೊಪ್ಪು, ತರಕಾರಿ, ಬೇಳೆ, ಅಕ್ಕಿ, ಉಪ್ಪು, ಹುಳಿ ಅದನ್ನೆಲ್ಲ ಒಂದೇ ಪಾತ್ರೆಗೆ ತುಂಬಿ ಬೇಯಿಸಿ ತೃಪ್ತಿಯಿಂದ ಪ್ರಸಾದ ಸ್ವೀಕರಿಸುತ್ತಿದ್ದರು. ಅನಾರೋಗ್ಯವಾದಾಗ ಅಡಿಗೆಯಲ್ಲಿಯೇ ಗಿಡಮೂಲಿಕೆ ಔಷಧ ಹಾಕಿ ಪ್ರಸಾದ ತಯಾರಿಸಿಕೊಳ್ಳುತ್ತಿದ್ದರು. ಕೆಲವೇಳೆ ಹಸಿಯ ತರಕಾರಿಗಳನ್ನೇ ಸೇವಿಸುತ್ತಿದ್ದರು. ನಾಲಿಗೆಯ ರುಚಿಗಾಗಿ ಪ್ರಸಾದವಲ್ಲ ದೇಹವನ್ನು ಪ್ರಸನ್ನತೆಯಿಂದ ಇಡಲು ಪ್ರಸಾದ ಎಂದು ಹೇಳುತ್ತಿದ್ದರು. ಕೆಲವೊಮ್ಮೆ ಮೆಂತೆಕಾಳಿನ ಹಿಟ್ಟಿನ ಅಂಬಲಿಯನ್ನು ಕುಡಿಯುತ್ತಿದ್ದರು. ಅವರ ಪ್ರಕಾರ ಅವರ ದೇಹ ಧರ್ಮಕ್ಕೆ ಔಷಧಿಯೂ ಆಗಿರುತ್ತಿತ್ತು.22 ಅವರು ಒಂದೇ ಹೊತ್ತು ಪ್ರಸಾದ ಸೇವಿಸುತ್ತಿದ್ದರು.
ನೀರು ಶಿವನ ಪ್ರಸಾದ!:
	ಈಗ ದೇಶದೆಲ್ಲೆಡೆ ನೀರಿನ ಅಭಾವ ಹೆಚ್ಚಾಗಿದೆ. ಕುಡಿಯಲು ಶುದ್ಧವಾದ ನೀರು ಸಿಗುವುದು ಅಪರೂಪವಾಗಿದೆ. ನೀರಿನ ರಕ್ಷಣೆಗಾಗಿ ಸರಕಾರವು ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸುತ್ತಿದೆ. ಜಲ ರಕ್ಷಣೆಗಾಗಿ ಹಲವಾರು ಸಂಘಟನೆಗಳು ಹುಟ್ಟಿಕೊಂಡು ಜನ ಜಾಗೃತಿಗೆ ಮುಂದಾಗಿವೆ. ಮಳೆ ನೀರು ರಕ್ಷಣೆಗೆ ಯೋಜನೆಗಳನ್ನು ರೂಪಿಸಲಾಗಿದೆ. ಕುಡಿಯುವ ನೀರು ಸಮರ್ಪಕವಾಗಿ ದೊರೆಯದೇ ಹಲವಾರು ಹಳ್ಳಿಗಳಲ್ಲಿ ಹಾಹಾಕಾರ ಎದ್ದಿರುವುದನ್ನು ಕಾಣಬಹುದಾಗಿದೆ. ಇಂತಹ ಸಂದರ್ಭಗಳಲ್ಲಿ ಶ್ರೀ ಚನ್ನಮಲ್ಲಿಕಾರ್ಜುನರು ನೀರಿನ ಮಹತ್ವವನ್ನು ವಿವರಿಸಿದ ಪ್ರಸಂಗವನ್ನು ಇಲ್ಲಿ ನೆನೆಯಬಹುದು. 
	ಒಮ್ಮೆ ಹಾವೇರಿಯ ಹುಕ್ಕೇರಿ ಮಠದ ಶ್ರೀಗಳು ಇವರ ಸೇವೆ ಮಾಡಿಕೊಂಡು ಪ್ರೆಸ್ಸಿನ ಕೆಲಸ ಕಲಿತು ಅಲ್ಲಿಯೇ ಇರುವುದಕ್ಕಾಗಿ ಒಬ್ಬ ಹುಡುಗನನ್ನು ಚನ್ನಮಲ್ಲಿಕಾರ್ಜುನರಲ್ಲಿ ಇಟ್ಟರು. 
	ಹುಡುಗನು ಅತ್ಯಂತ ಉತ್ಸಾಹಿಯಾಗಿದ್ದನು. ಕೆಲಸ ಕಾರ್ಯ ಮಾಡಬೇಕು ಶರಣ ಚನ್ನಮಲ್ಲಿಕಾರ್ಜುನರ ಸೇವೆ ಮಾಡಿ ಸೈ ಎನಿಸಿಕೊಳ್ಳಬೇಕು ಎಂದು ಅವರಲ್ಲಿ ಸೇರಿದನು. ಅವನು ಮೊದಲ ದಿನ ಸ್ನಾನ ಮಾಡಿಸಲು ಶರಣ ಚನ್ನಮಲ್ಲಿಕಾರ್ಜುನರನ್ನು ಕರೆದುಕೊಂಡು ಬಾವಿಕಟ್ಟಿಗೆ ಹೋದನು. ಪ್ರತಿದಿನ ಅವರು ಸೇದುತ್ತಿದ್ದ ಸಣ್ಣ ಬಿಂದಿಗೆಯನ್ನು ಬಿಟ್ಟು ಇನ್ನೊಂದು ದೊಡ್ಡ ಕೊಡವನ್ನು ತೆಗೆದುಕೊಂಡು ಹುರುಪಿನಿಂದ ನೀರು ಸೇದಿ ಅವರ ತಲೆಯ ಮೇಲೆ ಸುರಿಯ ತೊಡಗಿದನು. ಒಂದು ಕೊಡ ನೀರನ್ನು ಸುರಿಯುತ್ತಿದ್ದಂತೆಯೇ ಹುಡುಗನನ್ನು ಅವರು ದುರುಗುಟ್ಟಿ ನೋಡಿ ನಿಲ್ಲಪ್ಪ ನಿಲ್ಲು. ಬಾವಿಯೊಳಗೆ ನೀರು ಪುಕ್ಕಟೆಯಾಗಿ ಸಿಗುತ್ತದೆಂದು ತಿಳಿದು ಮನಬಂದಂತೆ ಬಳಸಲು ನಮಗೇನು ಅಧಿಕಾರ? ಅದು ಶಿವನ ವಸ್ತು. ಅದನ್ನು ಬಳಸುವಲ್ಲಿ ವಿವೇಕ ಬೇಡವೇ? ಈ ದೊಡ್ಡ ಕೊಡದಲ್ಲಿ ಅರ್ಧಕೊಡ ನೀರು ನನ್ನ ಸ್ನಾನಕ್ಕೆ ಸಾಕು. ನೀರು ಶಿವನ ಪ್ರಸಾದವಾದುದರಿಂದ ಅವನ್ನು ಭಯಭಕ್ತಿಯಿಂದ ಅವಶ್ಯವಿದ್ದಷ್ಟು ಬಳಸಬೇಕಲ್ಲದೇ ಇನ್ನೊಬ್ಬರ ಉಪಯೋಗಕ್ಕಾಗಿ ಇರುವ ಅದನ್ನು ನಮ್ಮ ಅವಶ್ಯಕತೆಗಿಂತ ಹೆಚ್ಚಿಗೆ ಬಳಸಿದರೆ ಶಿವನ ಕೋಪಕ್ಕೆ ಒಳಗಾಗುತ್ತೇವೆ ಎಂದು ಉಪದೇಶಿಸಿದರು. ಅವರಲ್ಲಿ ಪ್ರಸಾದ ಸ್ವೀಕರಿಸಿ ಅವರ ಸೇವೆ ಮಾಡಿಕೊಂಡು ಪ್ರೆಸ್ಸಿನ ಕೆಲಸಗಳನ್ನು ಅ ಹುಡುಗನಿಗೆ ಬಹಳ ದಿನ ಮಾಡಲಾಗಲಿಲ್ಲ. ಮೊದಲ ದಿನವೇ ಅವನಿಗೆ ಸಾಕಾಗಿ ಹೋಯಿತು. ಒಂದೇ ಪಾತ್ರೆಯಲ್ಲಿ ಬೇಯಿಸಿದ ಸೊಪ್ಪು, ತರಕಾರಿ, ಅಕ್ಕಿ, ಬೇಳೆಯ ಮಿಶ್ರಣವಾಗಲಿ, ಮೆಂತೆ ಕಷಾಯವಾಗಲಿ, ಹಸಿಯ ತರಕಾರಿಯಾಗಲಿ ಹುಡುಗನಿಗೆ ಹಿಡಿಸಲೇ ಇಲ್ಲ. 
	ಆ ಹುಡುಗ ಬೇರೆ ಯಾರೂ ಅಲ್ಲ, ಚನ್ನಪ್ಪ ಎರೆಸೀಮೆ. ಈ ಪ್ರಸಂಗವನ್ನು ಎರೆಸೀಮೆ ಅವರು ಹೇಳಿ ಚನ್ನಮಲ್ಲಿಕಾರ್ಜುನರ ಜೀವನ ತತ್ವನಿಷ್ಠೆಯಿಂದ ಕೂಡಿದ ಆದರ್ಶ ಜೀವನವಾಗಿತ್ತೆಂಬುದನ್ನು ವಿವರಿಸಿದ್ದಾರೆ.23
	ಚನ್ನಮಲ್ಲಿಕಾರ್ಜುನರು ಅಂದೇ ನೀರಿನ ಮಹತ್ವವನ್ನು ಹಾಗೂ ಅದರ ಪಾವಿತ್ರ್ಯತೆಯನ್ನು ಅರಿತು ಅದರಂತೆ ನಡೆಯುತ್ತಿದ್ದುದು ಇಂದಿನವರಿಗೆ ಮಾದರಿಯಾಗಿದೆ. 
	ಶ್ರೀಚನ್ನಮಲ್ಲಿಕಾರ್ಜುನರ ತತ್ವನಿಷ್ಠೆಯಿಂದ ಕೂಡಿದ ಜೀವನ ವಿಧಾನ, ಕ್ರಿಯಾಚಾರ, ಕಾಯಕ ಸದ್ಭಾವಗಳನ್ನು ನೋಡಿ ಆ ಕಾಲದ ಎಷ್ಟೋ ಜನ ಸ್ವಾಮಿಗಳು ತಮ್ಮ ಆಚಾರದಲ್ಲಿ ಅಳವಡಿಸಿಕೊಂಡರು. ಗರ್ಭಾಷ್ಟಕದಿಂದ ಸಮಾಧಿಕ್ರಿಯಾವರೆಗಿನ ವೀರಶೈವ ಸಂಸ್ಕಾರ ಕ್ರಿಯಾಚಾರದ ಬಗೆಗೆ ಚನ್ನಮಲ್ಲಿಕಾರ್ಜುನರಂತೆ ವಿವರವಾಗಿ ತಿಳಿದುಕೊಂಡವರು ಅಪರೂಪ. ತಮ್ಮ ಜಮಾ ಖರ್ಚು ಬರೆದಿಟ್ಟ ಪುಸ್ತಕದಲ್ಲಿ ಅಕ್ಕಿ, ಬೇಳೆ, ಮುಂತಾದ ವಸ್ತುಗಳನ್ನು ಕೊಂಡುತಂದಾಗ ಅದಕ್ಕೆ ಶಿವಾರ್ಪಣದ ಸಾಮಗ್ರಿಗಳ ಬಾಬತ್ತು ಖರ್ಚು ಎಂದೇ ಬರೆದಿರುವುದು ಅವರ ಜೀವನ ಮತ್ತು ಶಿವಾನುಭವಗಳು ಅವಿನಾಭಾವವಾಗಿದ್ದವೆಂಬುದನ್ನು ಅರಿಯಬಹುದಾಗಿದೆ. 
	ಚನ್ನಮಲ್ಲಿಕಾರ್ಜುನರು ತಮ್ಮ ನಿತ್ಯದ ಆಯವ್ಯಯದ ಲೆಕ್ಕಪತ್ರವನ್ನಿಡುವುದು ಒಂದು ದಿನಚರಿಯನ್ನಾಗಿ ರೂಢಿಸಿಕೊಂಡಿದ್ದರು. ಕ್ರೌನ್ 1/8 ಆಕಾರದ ಬಿಳಿ ಹಾಳೆಯ ಪುಸ್ತಕವನ್ನು ತಾವೇ ಹೊಲಿದು ಅದನ್ನು ಜಮಾಖರ್ಚು ಬರೆದಿಡುವುದಕ್ಕೆ ಉಪಯೋಗಿಸುತ್ತಿದ್ದರು. ಮಾದರಿಗಾಗಿ ಒಂದನ್ನು ಇಲ್ಲಿ ಗಮನಿಸಬಹುದು: 
(ಪುಟ 1)
	ಶಿವಲಿಂಗ ವಿಜಯ ಮುದ್ರಣಾಲಯ
ಪ್ರಾರಂಭ : ಪ್ರಜೋತ್ಪತ್ತಿ ಸಂವತ್ಸರ ಚೈತ್ರ ಶುದ್ಧ 1, ಯುಗಾದಿ ತಾ. 20-3-31.ಮಾ	ಖರ್ಚು	ವಿವರ	
		ಶ್ರೀ ಮನ್ನಿರಂಜನವರ್ಯ ಶಿವಬಸವ ಮಹಾಸ್ವಾಮಿಗಳು ಹಾವೇರಿ ಇವರಿಂದ ಜಮಾ. ಪ್ರೆಸ್ಸಿನ ಕೆಲಸ ಆರಂಭಿಸುವ ಬಗ್ಗೆ ಎಂತ ಆಶೀರ್ವಾದ ಪೂರ್ವಕವಾಗಿ ಕೊಟ್ಟಿದ್ದು. 	
		ಸ್ವಂತ ಖಾತೆ ಜಮಾ ನಗದು 	
ಣಣ		ಗುರುಮೂರ್ತಿ ಶಾಸ್ತ್ರಿಗಳು ಕಜ್ಜರಿ ಇವರ ಹಸ್ತೆ, ರಾಚಪ್ಪ ಅಗಸಾಲಿ ಇವರ ಖಾತೆಗೆ ಜಮಾ ಕಾಗದಗಡ್ಡೆ ರಂಜಿತ ಹಾಳೆಗಳು ದ. 6॥	
	4	ರಾಚಪ್ಪ ಅಗಸಾಲಿ ಇವರ ಖಾತೆಗೆ ಖರ್ಚು. ಹಸ್ತೆ ಕಜ್ಜರಿ ಗುರುಮೂರ್ತಿಶಾಸ್ತ್ರಿಗಳು ಕಾಗದದ ಗಡ್ಡೆಯ ಬಗ್ಗೆ	
	6॥	ಮುದ್ರಣಾಲಯದ ಖಾತೆ ಖರ್ಚು ಕಾಗದದ ಗಡ್ಡೆ ರಂಜಿತ	
		ಶ್ರೀಮನ್ನಿರಂಜನವರ್ಯ ಶಿವಬಸವ ಮಹಾಸ್ವಾಮಿಗಳು ಹುಕ್ಕೇರಿಮಠ ಇವರಿಂದ ಜಮಾ ನಗದು 	
		ಶ್ರೀಮನ್ನಿರಂಜನವರ್ಯ ಶಿವಬಸವ ಮಹಾಸ್ವಾಮಿಗಳು ಹುಕ್ಕೇರಿಮಠ ಇವರಿಂದ ಜಮಾ ನಗದು 25-3-31	
		ಸ್ವಂತ ಖಾತೆ ಜಮಾ ನಗದು 26-3-31	
	4	ಮುದ್ರಣಾಲಯದ ಖಾತೆಗೆ ಖರ್ಚು. ಕಾಗದಗಡ್ಡೆ ಎರಡು. ದರ 2= ಎರಡು ಸಲ ತಂದದ್ದು	
	1	ವಿರೂಪಾಕ್ಷಯ್ಯ ಈತನಿಗೆ ನಗದು ಕೊಟ್ಟದ್ದು	
ಣಣ	15		
ಣಣ	15	ಹಿಂದಿನ ಜಮಾ	
	2=	ಸಾದಿಲ್ವಾರ್ ಖರ್ಚು - ಬೀಗ ಸ್ಕ್ಯಾನರ ಮಸಿ ನಿಬ್, ಸೋಡಾ, ಮೈದಾ
		ಗಡಿಯಾರ ರಿಪೇರಿ ಸೀಮೆಎಣ್ಣೆ ಎರಡುಸಾರೆ ಪೋಸ್ಟೇಟ್ ಕಾರ್ಡು ಕವರ	
	=	ಸ್ವಂತ ಖರ್ಚು ಬೆಣ್ಣೆಯ ಬಗ್ಗೆ 26-3-31	
		ಮುದ್ರಾಲಯ ಖಾತೆಗೆ ಜಮಾ ಚನಬಸಪ್ಪ ಬಸವಣ್ಣೆಪ್ಪ ಮುಗದೂರ ಸಾಕೀನ ಹಾವೇರಿ ಇವರಿಂದ ಜಮಾ ಮುದ್ರಣ ಮಾಡಿಕೊಟ್ಟ ಬಗ್ಗೆ 1-4-31	
ಣಣ	17		
ಣ		ಖರ್ಚು ವಜಾ	
ಣ		ಶಿಲ್ಕು	
		ತಾ. 2-4-31 ರ ಲಾಗಾಯಿತು	
ಣ		ಈ ದಿನದ ಶ್ರೀ ಶುಲ್ಕು	
		ವಿರೂಪಾಕ್ಷಯ್ಯನವರಿಗೆ ನಗದು ಕಂಪೋಜಿಟರು	
	2॥	ಮುದ್ರಣಾಲಯದ ಖಾತೆಗೆ ಖರ್ಚು ಕಾಗದಗಡ್ಡೆ 1 	
	॥	ಸಾದಿಲ್ವಾರ್ ಖಾತೆಗೆ ಖರ್ಚು ಬೀಗ 1, ಪಾಟಲಾಕು ಎರಡು ಜೊತೆ ಮಳೆ ಸಹಾ ವಗೈರೆ ಶೀಶೆ ವಗೈರೆ =	
	= 6	ಸ್ವಂತ ಖಾತೆ ಖರ್ಚು ಕ್ಷೌರದ ಬಗ್ಗೆ	
	  6	ಸಾದಿಲ್ವಾರ್ ಖಾತೆಗೆ ಖರ್ಚು ಸೀಮೆಎಣ್ಣೆ ಚಿಲ್ಲರೆ ಕೂಲಿ ವಗೈರೆ  
		= 3       = 3	
ಣ	3=		
ಣ			
ಣಣಣ		ಜಾತಾ ಶಿಲ್ಕು 	
	ಜಮಾ ಖರ್ಚಿನ ಲೆಕ್ಕವನ್ನು ಪರಿಶೀಲಿಸಿದರೆ ಚನ್ನಮಲ್ಲಿಕಾರ್ಜುನರು ಕಾಸು, ಕಾಸನ್ನು ಲಕ್ಷದಲ್ಲಿಟ್ಟು ಬರೆಯುತ್ತಿದ್ದರೆಂಬುದು ವಿದಿತವಾಗುತ್ತದೆ. ತಮ್ಮ ಶಿವಪೂಜೆಗೆ, ಪ್ರಸಾದಕ್ಕಾಗಿ ಸಾಮಾನುಗಳನ್ನು ತಂದರೆ ಅದನ್ನು ಶಿವಾರ್ಪಿತ ಖಾತೆ ಖರ್ಚು ಎಂದು ಬರೆಯುತ್ತಿದ್ದುದು ಅವರ ಜಮಾಖರ್ಚಿನ ಪುಸ್ತಕದಿಂದ ತಿಳಿದು ಬರುತ್ತದೆ. 
		ಅಂದರೆ 1 ಆಣೆ				ಅಂದರೆ 4 ಆಣೆ	
		ಅಂದರೆ 2 ಆಣೆ			॥	ಅಂದರೆ 8 ಆಣೆ	
		ಅಂದರೆ 3 ಆಣೆ			॥	ಅಂದರೆ 12 ಆಣೆ	
ಸಂತೆಯಲ್ಲಿ ಪುಸ್ತಕ ಮಾರಾಟ:
	ಚನ್ನಮಲ್ಲಿಕಾರ್ಜುನರು ಹಾನಗಲ್ ಮಠಕ್ಕೆ ಹೋದಾಗ ಕೆಲವು ವಿದ್ಯಾರ್ಥಿಗಳು ಮಠದಲ್ಲಿದ್ದುಕೊಂಡು ಓದುತ್ತಿದ್ದರು. ಅವರಲ್ಲಿ ಚನ್ನಪ್ಪ ಎರೆಸೀಮೆ ಅವರೂ ಒಬ್ಬರು. ಅವರು 6ನೇ ತರಗತಿಯಲ್ಲಿ ಓದುತ್ತಿದ್ದಾಗ ಅವರಿಗೆ ಚನ್ನಮಲ್ಲಿಕಾರ್ಜುನರ ಪರಿಚಯವಾಯಿತು. ಅವರು ತಾವು ಬರೆದ ಪುಸ್ತಕಗಳನ್ನು ಸಂತೆಯಲ್ಲಿ ಮಾರಿಕೊಂಡು ಬರಲು ಹುಡುಗರಿಗೆ ಹೇಳುತ್ತಿದ್ದರು. ಆಲೂರು ಸಂತೆ ಮಲೆನಾಡಿನಲ್ಲೆಲ್ಲ ಪ್ರಸಿದ್ಧವಾಗಿತ್ತು. ವ್ಯಾಪಾರ ದೃಷ್ಟಿಯಿಂದ ಅದು ಪ್ರಮುಖ ಕೇಂದ್ರವಾಗಿತ್ತು. ಚನ್ನಪ್ಪ ಎರೆಸೀಮೆ ಅವರು ತಾವು ಬಾಲ್ಯದಲ್ಲಿ ಚನ್ನಮಲ್ಲಿಕಾರ್ಜುನರ ಪುಸ್ತಕಗಳನ್ನು ಮಾರಾಟ ಮಾಡಿಕೊಂಡು ಬಂದ ಪ್ರಸಂಗವನ್ನು ಹೀಗೆ ನೆನಪಿಸಿಕೊಂಡಿದ್ದಾರೆ: ಚನ್ನಮಲ್ಲಿಕಾರ್ಜುನರು ತಾವು ತಂದ ಅನೇಕ ಪುಸ್ತಕಗಳ ಗಂಟನ್ನು ಬಿಚ್ಚಿ ಶತಕತ್ರಯ, ನುಲಿಯ ಚಂದಯ್ಯನ ಶಾರದ, ಕರಣ ಹಸಿಗೆ, ಕೋಳೂರು ಕೊಡಗೂಸಿನ ರಗಳೆ ಮುಂತಾದ ಅನೇಕ ಬಗೆಯ ಪುಸ್ತಕಗಳನ್ನು ಬಾಲಕ ಚನ್ನಪ್ಪನ ಕೈಗೆ ಕೊಟ್ಟು ಸಂತೆಯಲ್ಲಿ ಮಾರಿಕೊಂಡು ಬರಲು ಹೇಳಿದರು. ಮಾರಿಕೊಂಡು ಬಂದರೆ ವಿದ್ಯಾಭ್ಯಾಸದ ಖರ್ಚಿಗಾಗಿ ಸ್ವಲ್ಪ ಹಣ ಕೊಡುವುದಾಗಿ ಚನ್ನಮಲ್ಲಿಕಾರ್ಜುನರು ಹೇಳಿದರು. ಹುಡುಗರು ಇದರಿಂದ ಸ್ಫೂರ್ತಿಗೊಂಡು ಪುಸ್ತಕಗಳನ್ನು ಮಾರಾಟ ಮಾಡಲು ಸಂತೆಗೆ ಹೋದರು. ಬಾಲಕ ಚನ್ನಪ್ಪ ರಾಗಬದ್ಧವಾಗಿ ಹಾಡುತ್ತ ಜನರಿಗೆ ಆಕರ್ಷಣೆ ಆಗುವಂತೆ ಚಿಕ್ಕ ಚಿಕ್ಕ ಭಾಷಣಗಳನ್ನು ಮಾಡಿ ಜನರನ್ನು ಆಕರ್ಷಿಸಿ ಎಲ್ಲ ಪುಸ್ತಕಗಳನ್ನು ಮಾರಾಟಮಾಡಿ ಹಣ ತಂದುಕೊಟ್ಟರು. 
	ತಂದುದರಲ್ಲಿ ಸ್ವಲ್ಪ ಹಣವನ್ನೂ ಹುಡುಗರಿಗೆ ಕೊಟ್ಟು ಹೋಟೆಲ್ ತಿಂಡಿ ತಿನಿಸು ತಿನ್ನದೇ ಕಾಗದ, ಮಸಿ, ರಬ್ಬರ, ಪೆನ್ಸಿಲ್ ಕೊಂಡುಕೊಳ್ಳಲು ಬಳಸುವುದಾಗಿ ವಿದ್ಯಾರ್ಥಿಗಳು ಚನ್ನಮಲ್ಲಿಕಾರ್ಜುನರಿಗೆ ಹೇಳಿದರು. ಅದರಿಂದ ಚನ್ನಮಲ್ಲಿಕಾರ್ಜುನರು ಸಂತಸ ಪಟ್ಟರು. 
	ದಿನಸಿ ಸಾಮಾನು ಮಾರುವ ಸಂತೆ, ದನದ ಸಂತೆಯಲ್ಲಿಯೇ ಪುಸ್ತಕ ಮಾರಾಟ ಮಾಡಿದ ವಿಲಕ್ಷಣ ಸಂಗತಿಗಳಿವು. 
	ಚನ್ನಮಲ್ಲಿಕಾರ್ಜುನರು ಮೈಸೂರಿನಲ್ಲಿದ್ದಾಗ ಗ್ರಂಥ ಸಂಶೋಧನೆಗಾಗಿ ದೊಡ್ಡ ದೊಡ್ಡ ಗ್ರಂಥಾಲಯಗಳಿಗೆ ವಿಶೇಷವಾಗಿ ಪ್ರಾಚ್ಯ ಸಂಶೋಧನಾಲಯ (ಓರಿಯಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ)ಕ್ಕೆ ಶಾಸನ ಇಲಾಖೆಗೆ ಹೋಗಿ ತಮಗೆ ಬೇಕಾದ ಗ್ರಂಥಗಳನ್ನು ಓದಿ ಟಿಪ್ಪಣಿ ಮಾಡಿಕೊಂಡು ಬರುತ್ತಿದ್ದರು. ರಾತ್ರಿ ಎಲ್ಲ ತಮ್ಮ ಗ್ರಂಥ ರಚನಾ ಕಾರ್ಯ ಮತ್ತು ಸದ್ಧರ್ಮ ದೀಪಿಕೆ ಲೇಖನಗಳನ್ನು ಹೊಂದಿಸುವ, ಸಂಪಾದಿಸುವ ಕಾರ್ಯ ನಡೆಯುತ್ತಿತ್ತು. 
	ಇವರ ಈ ಶ್ರಮವನ್ನು ಅರಿತು ಪ್ರಾಚ್ಯ ಸಂಶೋಧನಾಲಯದ ಡೈರೆಕ್ಟರ್ ಆದ ಎಚ್. ದೇವೀರಪ್ಪನವರು ಅವರ ಶ್ರಮವನ್ನು ನೋಡಲಾರದೇ ಇಳಿವಯಸ್ಸಿನಲ್ಲಿ ನೀವು ಅಗ್ರಹಾರದಿಂದ ಈ ಸಂಸ್ಥೆವರೆಗೂ ನಡೆದು ಬರುವುದು ತುಂಬಾ ಶ್ರಮವಾಗುತ್ತದೆ. ನೀವು ಚೀಟಿ ಬರೆದು ಕಳಿಸಿದರೆ ಪುಸ್ತಕಗಳನ್ನು ಕೊಟ್ಟು ಕಳಿಸುತ್ತೇನೆ ಎಂದು ಹೇಳಿ ಅವರಿಗೆ ಸಹಕಾರ ನೀಡುತ್ತಿದ್ದರು. 
ಏಕೋಭಾವ :
	ಚನ್ನಮಲ್ಲಿಕಾರ್ಜುನರು ತಮ್ಮ ಹೊಲಗದ್ದೆಗಳಿಂದ, ನಿವೃತ್ತಿ ವೇತನದಿಂದ ಬಂದ ಹಣವನ್ನೆಲ್ಲ ಶಿವಾನುಭವ ಪ್ರಚಾರ ಸಾಧನಗಳಾದ ಪುಟ್ಟ ಪುಟ್ಟ ಪುಸ್ತಕ ಪ್ರಕಟನೆಗೆ ವಿನಿಯೋಗಿಸುತ್ತಿದ್ದರು. ಪುಸ್ತಕಗಳ ಮಾರಾಟವಾಗಲಿ, ಬಿಡಲಿ ಮುದ್ರಿಸಿಡುವುದು ಅವರ ಕರ್ತವ್ಯವಾಗಿತ್ತು. ಅವುಗಳ ಬೆಲೆಯಾದರೂ ಅತೀ ಕಡಿಮೆ. ಒಮ್ಮೊಮ್ಮೆ ವಿದ್ಯಾನಿಲಯಗಳಿಗೆ ಪುಸ್ತಕಗಳನ್ನು ಹೊರಿಸಿಕೊಂಡು ಹೋಗಿ ವಿದ್ಯಾರ್ಥಿಗಳಿಗೆ ಹಂಚಿ ಬರುತ್ತಿದ್ದರು. ದುಡ್ಡು ಬರದಿದ್ದರೂ ಚಿಂತೆಯಿಲ್ಲ. ಶಿವನ ಕೆಲಸವಾದರೂ ಆಯಿತಲ್ಲ ಎನ್ನುತ್ತಿದ್ದರು. ದುಡ್ಡು ಬಂದರೂ ಶಿವನ ಕಾರ್ಯ, ಬರದಿದ್ದರೂ ಶಿವನ ಕಾರ್ಯ ಎಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದರು. ಅಲ್ಲಿ ಉಂಬರೆ ಸಂಗ, ಇಲ್ಲಿ ಉಂಬರೆ ಸಂಗ ಕೂಡಲ ಸಂಗಮದೇವ ಏಕೋಭಾವ ಎಂಬ ಬಸವಣ್ಣನವರ ವಾಣಿಯಂತೆ ಅವರ ಬದುಕಿನ ರೀತಿಯಾಗಿತ್ತು. 
ಮಾನಾಪಮಾನ ಸಮಾನ: 
	ಚನ್ನಮಲ್ಲಿಕಾರ್ಜುನರು ಮೈಸೂರಿನಲ್ಲಿದ್ದಾಗ ಅವರ ಆಚಾರ, ವಿಚಾರ, ಕರ್ತವ್ಯ ನಿಷ್ಠೆ ಕುರಿತು, ಅನೇಕ ಜನ ಪ್ರಶಂಸೆ ಮಾಡಿದರೆ ಅದಕ್ಕೆ ಅವರು ಹರ್ಷ ವ್ಯಕ್ತ ಪಡಿಸದೆ ಎಲ್ಲ ಶಿವನಿಚ್ಛೆ ಎನ್ನುತ್ತಿದ್ದರು. ಹೊಗಳಿಕೆಗೆ ಹಿಗ್ಗದೆ ತೆಗಳಿಕೆಗೆ ಕುಗ್ಗದೆ ಕರ್ತವ್ಯ ನಿರತರಾಗಿರುತ್ತಿದ್ದರು.,
	ಚನ್ನಮಲ್ಲಿಕಾರ್ಜುನರು ಬೀದಿಯಲ್ಲಿ ಹೊರಟಾಗ ಹುಡುಗರು ಅವರನ್ನು ಕಂಡು ಕುರುಡ, ಚೊಂಚ ಎಂದು ಹಾಸ್ಯ ಮಾಡುತ್ತಿದ್ದರು. ಅವರು ಕೋಪಿಸಿಕೊಳ್ಳದೆ ನೀವೆಲ್ಲ ಒಳ್ಳೆಯ ಮಕ್ಕಳು ನನ್ನ ಕಣ್ಣು ಕುರುಡು ಇದೆ. ಅದಕ್ಕೆ ನೀವು ಕುರುಡು ಎನ್ನುತ್ತೀರಿ ಕೈಸೊಟ್ಟಗಿದೆ. ಚೊಂಚ ಎನ್ನುತ್ತೀರಿ ನೀವು ಸುಳ್ಳು ಹೇಳುವುದಿಲ್ಲ. ಇದ್ದುದನ್ನು ಇದ್ದಂತೆ ಹೇಳುತ್ತೀರಿ ಎನ್ನುತ್ತಿದ್ದರೆ ಹೊರತು ಕೋಪಮಾಡಿಕೊಳ್ಳುತ್ತಿರಲಿಲ್ಲ. ಪಾಲಕರು ಬಂದು ಹೀಗೆ ಅನ್ನಬಾರದು ಎಂದು ಹುಡುಗರು ಕೆನ್ನೆಗೆ ಹೊಡೆದಾಗ ಅಳುವ ಮಕ್ಕಳಿಗೆ ಚನ್ನಮಲ್ಲಪ್ಪನವರೇ ಪೆಪ್ಪರಮೆಂಟು ತರಿಸಿಕೊಟ್ಟು ಸಮಾಧಾನ ಮಾಡುತ್ತಿದ್ದರು.24
ಮೈಸೂರಿಗೆ ಸ್ಥಳಾಂತರ: 
	ಹಾವೇರಿಯಲ್ಲಿದ್ದ ಶಿವಲಿಂಗ ವಿಜಯ ಮುದ್ರಣಾಲಯವನ್ನು ಶಿವಯೋಗ ಮಂದಿರಕ್ಕೆ ಟ್ರಸ್ಟ್ ಕಮೀಟಿಯವರು ತರಿಸಿಕೊಂಡರು. ಅಲ್ಲಿಯೇ ತಮ್ಮ ಸಂಶೋಧನ ಕಾರ್ಯವನ್ನು ಮುಂದುವರಿಸಿಕೊಳ್ಳಬೇಕೆಂಬ ಚನ್ನಮಲ್ಲಿಕಾರ್ಜುನರ ಬಯಕೆ ಈಡೇರಲಿಲ್ಲ. ಗುರುಗಳಾದ ಹಾನಗಲ್ಲ ಕುಮಾರ ಶಿವಯೋಗಿಗಳಿಗೆ ಕೊಟ್ಟ ಮಾತಿನಂತೆ ಸಂಶೋಧನಾಕಾರ್ಯ ಮುಂದುವರಿಯಲೇಬೇಕಾಗಿತ್ತು. ಮೈಸೂರಿನಲ್ಲಿರುವ ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳು ಆಶ್ರಯ ಕೊಡಲು ಮುಂದೆ ಬಂದರು. ಹಾವೇರಿಯಿಂದ ಮೈಸೂರಿಗೆ ಚನ್ನಮಲ್ಲಿಕಾರ್ಜುನರ ಸಮಗ್ರ ಗ್ರಂಥ ರಾಶಿ ಓಲೆಗರಿಗಳ ಮೂಟಿಗಳು ಸಾಗಿಸಲ್ಪಟ್ಟವು. ಅಲ್ಲಿಯೇ ಇದ್ದುಕೊಂಡು ಸದ್ಧರ್ಮದೀಪಿಕೆಯ ಮುಂದಿನ ಸಂಚಿಕೆಗಳು ಹಾಗೂ ಅನೇಕ ಸಂಪಾದಿತ ಗ್ರಂಥಗಳು ಪ್ರಕಟವಾಗತೊಡಗಿದವು. (ಪತ್ರಿಕೆ ಹಾಗೂ ಗ್ರಂಥಗಳ ವಿವರಗಳನ್ನು ಮುಂದಿನ ಅಧ್ಯಾಯದಲ್ಲಿ ನಿರೂಪಿಸಲಾಗಿದೆ.)ಮ ದಿನಗಳು: 
	ಶರಣರಾದ ಚನ್ನಮಲ್ಲಿಕಾರ್ಜುನರು ತಮ್ಮ 88 ವರ್ಷಗಳ ಸಾರ್ಥಕ ಬದುಕನ್ನು ಧರ್ಮ ಪ್ರಸಾರದ ಸದುದ್ದೇಶದಿಂದ ಪತ್ರಿಕೆ ಹಾಗೂ ಅನೇಕ ಪುಸ್ತಕಗಳನ್ನು ಪ್ರಕಟಿಸಿದರು. ಶ್ರೀಗಂಧದ ಕಡ್ಡಿಯಂತೆ ತಾವು ಕಷ್ಟನಷ್ಟಗಳಲ್ಲಿ ಸುಟ್ಟುಕೊಂಡು ತಮ್ಮ ಶಿವಾನುಭವದ ಸುಗಂಧವನ್ನು ಸಮಾಜದಲ್ಲಿ ಬೀರಿದರು. 1962ನೇ ಇಸ್ವಿ ಜನೇವರಿ ತಿಂಗಳಲ್ಲಿ ಬನವಾಸಿಯಲ್ಲಿ ಏರ್ಪಡಿಸಿದ ಶಿವಾನುಭವ ಸಮ್ಮೇಳನಕ್ಕೆಂದು ಮೈಸೂರಿನಿಂದ ಬಂದರು. ವೃದ್ಧಾಪ್ಯದಿಂದ ಹಣ್ಣಾಗಿದ್ದರು. ಆರೋಗ್ಯ ಅಷ್ಟೊಂದು ಸರಿ ಇರಲಿಲ್ಲ. ಬನವಾಸಿ ಮೂಡಿಯ ಸ್ವಾಮಿಗಳು 108 ಜನ ಸ್ವಾಮಿಗಳನ್ನು ಕೂಡಿಸಿ ವಿಜೃಂಭಣೆಯಿಂದ ಮಾಡಿದ ಶಿವಾನುಭವ ಸಮ್ಮೇಳನದಲ್ಲಿ ಚನ್ನಮಲ್ಲಿಕಾರ್ಜುನರು ತಮ್ಮ ಅನಾರೋಗ್ಯವನ್ನು ಲೆಕ್ಕಿಸದೇ ಪರಿಣಾಮಕಾರಿಯಾಗಿ ಪ್ರವಚನ ಮಾಡಿದರು. ಅಂತಹ ಸ್ಥಿತಿಯಲ್ಲಿಯೇ ಧಾರವಾಡಕ್ಕೆ ಮೊಗ್ಗೆಯ ಮಾಯಿದೇವ ಪ್ರಭುವಾಣಿ ಗ್ರಂಥ ಬಿಡುಗಡೆ ನಿಮಿತ್ತ ತೆರಳಿದರು. ಧಾರವಾಡದ ಶ್ರೀ ನಿ. ಪ್ರ. ಮೃತ್ಯುಂಜಯ ಮಹಾಸ್ವಾಮಿಗಳ ಉದಾರ ನೆರವಿನಿಂದ ಪ್ರಕಟಗೊಂಡು ಅಥಣಿ ಶಿವಯೋಗಿಗಳಿಗೆ ಅರ್ಪಿಸಲ್ಪಟ್ಟ ಆ ಗ್ರಂಥದ ಬಿಡುಗಡೆ ಕಾರ್ಯಕ್ರಮ ಮುಗಿಯಿತು. ಚನ್ನಮಲ್ಲಿಕಾರ್ಜುನರು ಅಲ್ಲಿಂದ ನೇರವಾಗಿ ಶಿರಾಳಕೊಪ್ಪಕ್ಕೆ ಹೋಗಿ ಒಂದೆರಡು ದಿನ ಅಲ್ಲಿದ್ದು ಕಾರ್ಯನಿಮಿತ್ತ ಹಿರೇಕೆರೂರಿಗೆ ಹೋಗಿ ಅಲ್ಲಿಯೂ ಒಂದೆರಡು ದಿನ ಇದ್ದರು. ಆರೋಗ್ಯ ಸುಧಾರಿಸಲಿಲ್ಲ. ಫೆಬ್ರವರಿ 1 ನೇ ತಾರೀಖು ಶಿರಾಳಕೊಪ್ಪಕ್ಕೆ ಬಂದು ಆ ರಾತ್ರಿ ತಮ್ಮ ಸಿದ್ಧೇಶ್ವರ ನಿಲಯದಲ್ಲಿ ಪೂಜೆ ಮುಗಿಸಿ ಕಬ್ಬಿನ ಹಾಲನ್ನು ಮಾತ್ರ ಪ್ರಸಾದವಾಗಿ ಸ್ವೀಕರಿಸಿ ಮಲಗಿದರು. ಮೇಲೇಳಲಿಲ್ಲ. ಅವರು ನೆಲ ಹಿಡಿದು ಮಲಗಿದುದು ಅಂದೇ. ಲಿಂಗೈಕ್ಯರಾದುದು ಅಂದೆ. ಈವರೆಗೂ ಅವರು ನೆಲ ಹಿಡಿದು ಮಲಗಿರಲೇ ಇಲ್ಲ. ಶಿವಾನುಭವಿಗಳಾದ ಚನ್ನಮಲ್ಲಿಕಾರ್ಜುನರು ಇಚ್ಛಾ ಮರಣಿಗಳೆಂದೇ ಹೇಳಬೇಕು. ಮುಪ್ಪಾವಸ್ಥೆಯಲ್ಲಿಯೂ ಮತ್ತೊಬ್ಬರಿಂದ ಸೇವೆ ಮಾಡಿಸಿಕೊಳ್ಳಲಿಲ್ಲ. 
	ತಮ್ಮ ಬದುಕಿನ್ನುದ್ದಕ್ಕೂ ವೀರಶೈವ ತತ್ವ ಅನುಭಾವವನ್ನು ಅಳವಡಿಸಿಕೊಂಡು ಶಿವಾನುಭವದ ಬೆಳಕನ್ನು ಬೀರಿದ ಅವರು ಎಲ್ಲ ಕಾಲಕ್ಕೂ ಆದರ್ಶ ಮತ್ತು ಅನುಕರಣೀಯರು. 

ಅಡಿಟಿಪ್ಪಣಿಗಳು:
.	ಕಾಮತ ಸೂರ್ಯನಾಥ. ಯು. (ಸಂ), ಕರ್ನಾಟಕ ರಾಜ್ಯ ಗ್ಯಾಝೇಟಿಯರ್ ಭಾಗ -2, ಬೆಂಗಳೂರು : ಕರ್ನಾಟಕ ರಾಜ್ಯ ಸರಕಾರ, (1986), ಪು. 624.
.	ಡಾ. ಸಿದ್ಧಲಿಂಗೇಶ ಹಂಡಿಗಿ - ಗುದ್ಲೆಪ್ಪ ಹಳ್ಳಿಕೇರಿ, ರಾಜಕೀಯ ಜೀವನ ಮತ್ತು ಸಾಧನೆ, (2008), ಪು. 13. ಪ್ರ. ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. 
.	ಚನ್ನಪ್ಪ ಎರೆಸೀಮೆ- ಶಿರಾಳಕೊಪ್ಪದ ಚನ್ನಮಲ್ಲಪ್ಪನವರು, ಪು. 17, ಮಹಾನುಭಾವಿ ಚನ್ನಮಲ್ಲಿಕಾರ್ಜುನರು, (ಸಂ.) ಎಚ್. ದೇವೀರಪ್ಪ, ಚನ್ನಪ್ಪ ಎರೆಸೀಮೆ, (1983), ಪ್ರ. ಶ್ರೀ. ಜ. ಗಂಗಾಧರ ಧರ್ಮ ಪ್ರಚಾರಕ ಮಂಡಳ, ಮೂರು ಸಾವಿರಮಠ, ಹುಬ್ಬಳ್ಳಿ. 
.	ಅದೇ, ಪು. 19.
.	ಅದೇ, ಪುಟ. 62.
.	ಚನ್ನಪ್ಪ ಎರೆಸೀಮೆ, ಶಿರಾಳಕೊಪ್ಪದ ಚನ್ನಮಲ್ಲಪ್ಪನವರು, ಮಹಾನುಭಾವಿ ಶ್ರೀ ಚನ್ನಮಲ್ಲಿಕಾರ್ಜುನರು, (1983) (ಸಂ.) ಎಚ್. ದೇವೀರಪ್ಪ, ಚನ್ನಪ್ಪ ಎರೆಸೀಮೆ, ಪು. 20 ಹಾಗೂ 14-7-1996 ರಂದು ಬೆಂಗಳೂರಿನಲ್ಲಿ ಚನ್ನಪ್ಪ ಎರೆಸೀಮೆ ಸಂದರ್ಶನ ಪಡೆದಾಗ ಈ ವಿಷಯವನ್ನು ಹೇಳಿದುದು.
.	ಚನ್ನಪ್ಪ ಎರೆಸೀಮೆ, ಶಿರಾಳಕೊಪ್ಪದ ಚನ್ನಮಲ್ಲಪ್ಪನವರು, ಮಹಾನುಭಾವಿ ಚನ್ನಮಲ್ಲಪ್ಪನವರು, (1983), ಪು. 42.
.	ಸಂ. ಡಿ. ಎಸ್. ಗುರುಬಸವಪ್ಪ, ನನ್ನ ಗುರುವರ್ಯರು, ಎಚ್. ದೇವೀರಪ್ಪ, ಚನ್ನಪ್ಪ ಎರೆಸೀಮೆ (ಸಂ) ಮಹಾನುಭಾವಿ ಶ್ರೀ ಚನ್ನಮಲ್ಲಿಕಾರ್ಜುನರು (1983), ಪ್ರ. ಜ. ಗಂಗಾಧರ ಧರ್ಮ ಪ್ರಚಾರಕ ಮಂಡಳ ಮೂರುಸಾವಿರಮಠ ಹುಬ್ಬಳ್ಳಿ,  ಪು. 61.
.	ಮುರಿಗೆಪ್ಪ ಈರಪ್ಪ ಎಲಿಮಾಸ್ತರ- ಶಿವಾನುಭಾವಿ ಚನ್ನಮಲ್ಲಪ್ಪನವರು ಕೋರಿ, ಪು. 15. ಅದೇ. ಚನ್ನಪ್ಪ ಎರೆಸೀಮೆ, ಮಹಾನುಭಾವಿ ಚನ್ನಮಲ್ಲಪ್ಪನವರು, ಪು. 23. 
	ಅನಿಮಿಷಾರ್ಯನ ಕೊಪ್ಪಲು ಎಂಬಲ್ಲಿ 1914 ರಲ್ಲಿ 15 ದಿನಗಳವರೆಗೆ ಶಿವಾನುಭವಗೋಷ್ಠಿ ನಡೆದುದು ವಿಶೇಷ, ಡಾ. ಸಂಗಮೇಶ ಹಂಡಿಗಿ -ವೀರವಿರಾಗಿ ಸಮಾಜಾನುರಾಗಿ’, (2009), ಪ್ರ : ಶ್ರೀ ಜಗದ್ಗುರು ಗಂಗಾಧರ ಧರ್ಮಪ್ರಚಾರಕ ಮಂಡಳ, ಮೂರುಸಾವಿರಮಠ, ಹುಬ್ಬಳ್ಳಿ, ಪು.17.  
.	ಮೂಡಿ ಶ್ರೀಗಳವರ ಸಂದೇಶ, ಎಚ್. ದೇವೀರಪ್ಪ, ಚನ್ನಪ್ಪ ಎರೆಸೀಮೆ, ಮಹಾನುಭಾವಿ, ಶ್ರೀ ಚನ್ನಮಲ್ಲಿಕಾರ್ಜುನರು, (1983), ಪು. 9.  
.	ಅದೇ, ನಮ್ಮ ನೆಚ್ಚಿನ ಮಾಸ್ತರ, ಪು.72.
.	ಅದೇ, ಪುಣ್ಯಜೀವಿ ಚನ್ನಮಲ್ಲಪ್ಪ ಮಾಸ್ತರರು, ಪ್ರೊ. ಸ. ಸ. ಮಾಳವಾಡ, ಪು. 67.
.	ಅದೇ, ಅನುಭಾವಿ ಶ್ರೀಚನ್ನಮಲ್ಲಪ್ಪನವರು, ಚ. ಸುಂದರೇಶನ್, ಪು. 111.
.	ಶ್ರಿ. ಮೂಜಗಂ- ಮಹಾನುಭಾವಿ ಶ್ರೀ ಚನ್ನಮಲ್ಲಿಕಾರ್ಜುನರು, ಸಂ. ಎಚ್. ದೇವೀರಪ್ಪ, ಚನ್ನಪ್ಪ ಎರೆಸೀಮೆ (1983)  ಗ್ರಂಥದ ರಕ್ಷಾ ಪುಟದ ಕೊನೆಗೆ. 
.	ಸದ್ಧರ್ಮ ದೀಪಿಕೆ, ಸಂಚಿಕೆ 95 (1951), ಪು.32.
.	ಬಿ. ನಂಜುಂಡಪ್ಪ ಕನಕಪುರ, ಶರಣ ಚನ್ನಮಲ್ಲಿಕಾರ್ಜುನರ ಸಾಹಿತ್ಯ ಸೇವೆ, ಎಚ್. ದೇವೀರಪ್ಪ, ಚನ್ನಪ್ಪ ಎರೆಸೀಮೆ (ಸಂ) ಮಹಾನುಭಾವಿ ಚನ್ನಮಲ್ಲಿಕಾರ್ಜುನರು, (1983), ಪ್ರ. ಜ. ಗಂಗಾಧರ ಧರ್ಮ ಪ್ರಚಾರಕ ಮಂಡಳ, ಮೂರು ಸಾವಿರಮಠ, ಹುಬ್ಬಳ್ಳಿ, ಪು. 96.
.	ಓ. ಎನ್. ಲಿಂಗಣ್ಣಯ್ಯ, ನಾನು ಕಂಡ ಶ್ರೀ ಚನ್ನಮಲ್ಲಿಕಾರ್ಜುನರು, ಮಹಾನುಭಾವಿ ಚನ್ನಮಲ್ಲಿಕಾರ್ಜುನರು, (1983) ಪು. 81-83.
.	ಎಸ್. ಎಸ್. ಭೂಸರಡ್ಡಿ,- ವೀರಶೈವ ಶಿವಶರಣ ಸಾಹಿತಿ, ಲಿಂ. ಕೋರಿ ಚನ್ನಮಲ್ಲಪ್ಪ,   ಅದೇ, ಪು. 85.
.	ಅದೇ, ಸ. ಸ. ಮಾಳವಾಡ, ಪುಣ್ಯಜೀವಿ ಚನ್ನಮಲ್ಲಪ್ಪ ಮಾಸ್ತರರು, ಅದೇ ಪು. 66.
.	ಮುರಿಗೆಪ್ಪ ಈರಪ್ಪ ಎಲಿ ಮಾಸ್ತರ - ಮಹಾನುಭಾವಿ ಶ್ರೀ ಚನ್ನಮಲ್ಲಿಕಾರ್ಜುನರು (1983) ಎಚ್. ದೇವೀರಪ್ಪ, ಚನ್ನಪ್ಪ ಎರೆಸೀಮೆ (ಸಂ), ಪು. 16.
.	ಡಿ. ಎಸ್. ಗುರುಬಸಪ್ಪ, ನನ್ನ ಗುರುವರ್ಯರು, ಅದೇ, ಪು. 63.
.	ಪಂ. ಚನ್ನಪ್ಪ ಎರೆಸೀಮೆ- ಶರಣಶ್ರೀ ಚನ್ನಮಲ್ಲಿಕಾರ್ಜುನರು (1980), ಪ್ರ. ವೀರಶೈವ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಡಂಬಳ, ಗದಗ, ಪು. 29.
.	ಅದೇ, ಪು. 31 - 32.
.	ಚನ್ನಪ್ಪ ಎರೆಸೀಮೆ ನಾ ಕಂಡಂತೆ ಶ್ರೀ ಚನ್ನಮಲ್ಲಿಕಾರ್ಜುನರು - ಚನ್ನಪ್ಪ ಎರೆಸೀಮೆ, ಎಚ್. ದೇವೀರಪ್ಪ, (ಸಂ.) ಮಹಾನುಭಾವಿ ಚನ್ನಮಲ್ಲಿಕಾರ್ಜುನರು, ಪು. 57.


.......................


(ಏ.8ರಿಂದ 17 ಸಾವಳಗಿ ಶಿವಲಿಂಗೇಶ್ವರ ಜಾತ್ರೆ ನಡೆಯಲಿದೆ. 8 ರಂದು ಅಗ್ನಿ ಹಾಯುವ ಕಾರ್ಯಕ್ರಮ.ಸಂಜೆ ಸಮಾರಂಭ ಉದ್ಘಾಟನೆ.17 ರಂದು ಜಾತ್ರೆ ಸಮಾರೋಪ ನಡೆಯಲಿದೆ)

ಧರ್ಮ ಸಮನ್ವಯದ ಕೇಂದ್ರ ಸಾವಳಗಿ ......................... ಡಾ.ವೀರೇಶ ಹಂಡಿಗಿ ಧಾರ್ಮಿಕ ಕ್ಷೇತ್ರಗಳಲ್ಲೂ ಹಿಂದೂ ಮುಸ್ಲಿಂ ಅನ್ಯೋನ್ಯತೆಯನ್ನು ಹಲವಾರು ಕಡೆಗಳಲ್ಲಿ ಕಾಣುತ್ತೇವೆ.ಅದೇ ರೀತಿ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಸಾವಳಗಿ ಶಿವಲಿಂಗೇಶ್ವರ ಮಠ ಹಿಂದೂ ಮುಸ್ಲಿಂ ಪರಂಪರೆ ಹೋದಿರುವ ಪೀಠ. 17 ನೇ ಶತಮಾನದಲ್ಲಿ ಕಲಬುರ್ಗಿಯ ಮುಸ್ಲಿಂ ಧರ್ಮಗುರು ಖಾಜಾ ಬಂದೇನವಾಜ್ ಹುಸೇನ್ವಲಿ ಹಾಗೂ ಶಿವಲಿಂಗೇಶ್ವರರ ಮೈತ್ರಿಯ ಮಹಿಮೆಯ ಸಂಕೇತವಾಗಿ ಶಿವಲಿಂಗೇಶ್ವ ಪೀಠವು ಸಮನ್ವಯದ ಸಂದೇಶವನ್ನು ಕನ್ನಡ ನಾಡಿಗೆ ನೀಡುತ್ತಿದೆ. ಕರ್ನಾಟಕವಲ್ಲದೆ ಆಂಧ್ರ,ಮಹಾರಾಷ್ಟ್ರ ,ತಮೀಳುನಾಡಿನಲ್ಲಿ 360 ಮಠಗಳು ಹಾಗೂ 1100 ಗದ್ದುಗೆಗಳಿವೆ.ತಮಿಳುನಾಡಿನ ಆಂಬೂರಿ ಎಂಬಲ್ಲಿ ದೊಡ್ಡ ಮಠವಿದೆ. ವಾಸ್ತು ಶಿಲ್ಪ: ಸಾವಳಗಿಯ ಉತ್ತರವಾಹಿನಿಯಾಗಿ ಹರಿಯುವ ಘಟಪ್ರಭೆ ತಟದಲ್ಲಿ ಶಿವಲಿಂೀಶ್ವರರ ಮಠ ನಿರ್ಮಾಣವಾಗಿದೆ. ಹೊರನೋಟದಿಂದ ಇದೊಂದು ಮಸೀದೆಯಂತೆ ಕಾಣುತ್ತದೆ. ಈ ಮಠದ ವಿನ್ಯಾಸ ಮುಸ್ಲಿಂ ವಾಸ್ತು ಶಿಲ್ಪಕ್ಕೆ ಸಂಬಂಧಿಸಿದೆ.ಕಮಾನುಗಳು,ಗುಮ್ಮಟ,ಮೀನಾರ ಕಾಣುತ್ತದೆ.ಮಠದ ಮುಖ್ಯ ಮಹಾದ್ವಾರ ದಾಟಿ ಒಳಗೆ ಪ್ರವೇಶಿಸಿದರೆ ಜ.ಶಿವಲಿಂಗೇಶ್ವರ ಗದ್ದುಗೆ ಭವ್ಯ ಕ್ಷಿಟ್ಟಡ ಕಾಣುತ್ತದೆ. ಮಠದ ಎಡ,ಬಲ ಮತ್ತು ಹಿಂಬಾಗ ಹಿಂದೂ ಮುಸ್ಲಿಂ ಸಮ್ಮಿಶ್ರ ವಾಸ್ತು ಶಿಲ್ಪ( ಇಂಡೋ ಸಾರ್ಸೆನಿಕ್ ಸ್ಕೃಲ್ಚರ್) ಹೊಂದಿದೆ. ಭವ್ಯ ಕಟ್ಟಡವಿದೆ. ಮಠದ ಕೆಳಭಾಗದಲ್ಲಿ ಗದ್ದುಗೆ ಇದೆ. ಮೇಲಂತಸ್ತಿನಲ್ಲಿ ತೋರುಗದ್ದುಗೆ ಇದೆ. ಅದರ ಮೇಲೆ ಕೊನೆಯ ಅಂತಸ್ತಿನಲ್ಲಿ ಗುಮ್ಮಟವಿದೆ. ಹಿನ್ನೆಲೆ: ಕ್ರಿ.ಶ. 1645 ರಲ್ಲಿ ಕಲಬುರ್ಗಿ ಜಿಲ್ಲೆಯ ಕೋಳೂರಿನ ಗೌಡರಾದ ಲೀಗಬಸಪ್ಪ ಮತ್ತು ಮಲ್ಲಮ್ಮ ದಂಪತಿಗೆ ಶಿವಲಿಂಗೇಶ್ವರ ಜನಿಸಿದರು. ಬಾಲಕನಾಗಿದ್ದಾಗಲೇ ಹಲವು ಲೀಲೆಗಳನ್ನು ಮಾಡುತ್ತಲಿದ್ದರು.ದನಕರುಗಳನ್ನು ಮೇಯಿಸಲು ಕಾಡಿಗೆ ತೆರಳಿದಾಗ ಧ್ಯಾನ ಮಾಡುತ್ತಿದ್ದರು.ನಂತರದ ದಿನಗಳಲ್ಲಿ ದೀನ ದಲಿತರ ಉದ್ದಾರ ಮಾಡುತ್ತ ಭಕ್ತರ ಉದ್ಧರಿಸುತ್ತ ಹಲವರ ರೋಗಗಳನ್ನು ಗುಣಪಡಿಸುತ್ತಿದ್ದರು. ಸಾವಳಗಿ ಕಾಡು ನಾಡಾಗಿತು. ಕಲಬುರ್ಗಿಯಲ್ಲಿ ಶಾಹಿ ಬಾದಶಹರು ಆಳುತ್ತಿದ್ದರು.ಮುಸ್ಲಿಂ ಧರ್ಮಗುರು ಖಾಜಾ ಬಂದೇನವಾಜರು ಶಿವಲಿಂಗೇಶ್ವರ ಮಹಿಮೆ ಅರಿತು ತಮ್ಮ ಶಿಷ್ಯ ದೊರೆ ರೋಜರ ಸಾಹೇಬನ್ನು ಕರೆದು ಶಿವಲಿಂಗೇಶ್ವರರನ್ನು ರಿಸಿಗೆ ಆಹ್ವಾನ ನೀಡಲು ಸೂಚಿಸಿದರು.ಸೇವಕರು ಅವರನ್ನು ಭೇಟಿ ಮಾಡಲು ತೆರಳಿ ದರ್ಪದಿಂದ ವರ್ತಿಸಿದರು. ಶ್ರೀಗಳು ಬರಲಾಗುವುದಿಲ್ಲವೆಂದರು.ನಂತರ ಯುದ್ದವೇ ನಡೆಯಿತು.ಶ್ರೀಗಳ ಶಿಷ್ಯ ಕಾಳೆಗನೆಂಬ ದೈತ್ಯ ಸೈನಿಕರನ್ನು ಹೊಡೆದೋಡಿಸಿದನು. ಇದನ್ನು ಕೇಳಿದ ಬಂದೇನವಾಜರು ಹುಲಿಯ ಸವಾರಿ ಮಾಡಿ ಹಾವನ್ನು ಚಾವಟಿಗೆಯನ್ನಾಗಿಸಿಕೋಡು ಬಂದರು. ಇವರ ಬರುವಿಕೆಯನ್ನು ಅರಿತ ಶ್ರೀಗಳು ತಾವು ಕುಳಿತಿದ್ದ ಕಟ್ಟೆ ಮೂಲಕವೇ ತೆರಳಿ ಬಂದೇನವಾಜರನ್ನು ಎದುರುಗೊಳ್ಳುತ್ತಾರೆ. ಅಚ್ಚರಿಗೊಂಡ ಬಂದೇನವಾಜ್ ನಿರ್ಜೀವ ವಸ್ತುಗಳನ್ನು ನಡೆಸುವ ಇವರು ಮಹಾಪುರುಷರು ಎಂದು ಬಗೆದು ಶ್ರೀಗಳನ್ನು ಸತ್ಕರಿಸುತ್ತಾರೆ. ತಮ್ಮಲ್ಲಿದ್ದ ಶಮನ,ಟೋಪ್ಪಿಗೆ,ಶಲ್ಲೆಯನ್ನು ಉಡುಗೋರೆಯನ್ನಾಗಿ ನೀಡಿ ಉರುಸಿಗೆ ಬರಲು ಬಿನ್ನವಿಸುತ್ತಾರೆ. ಶಿವಲಿಂಗೇಶ್ವರರ ಶಿಷ್ಯೆ ಮರುಳಮ್ಮ ವೈರಾಗ್ಯ ತಾಳಿ ಶ್ರೀಗಳ ಸೇವೆಗೆ ನಿಲ್ಲುತ್ತಾಳೆ. ಅವಳ ಜೀವಂತ ಸಮಾಧಿ ಸಹ ಮಠದ ಆವರಣದಲ್ಲಿಯೇ ಇದೆ. ಗೌರವ: ಕಲಬುರ್ಗಿಯ ರೋಜದ ರಾಜರು,ಕುರುಬೆಟ್ಟದ ದೋರೆ ಇವರಿಗೆ ಭಕ್ತಿಯ ಗೌರವ ನೀಡಿದ್ದಾರೆ. ಹಸೀರು ಪೋಷಾಕು: ಮಠದ ವಿಶೇಷ ಕಾರ್ಯಕ್ರಮದಲ್ಲಿ ಪೀಠಾಧಿಪತಿಗಳು ಹಸಿರು ಪೋಷಾಕು ಧರಿಸುತ್ತಾರೆ. ಹಸಿರು ಬಣ್ಣದ ಪೇಟಾ, ಶೈಲಿ, ಶಮನ ಧರಿಸುತ್ತಾರೆ ಕೊರಳಲ್ಲಿ ಜೈತುನ್ಮಣಿಗಳನ್ನು ಹಾಕಿಕೊಳ್ಳುತ್ತಾರೆ.ಮುದ್ರ್ರೆಯುಂಗುರು ಧರಿಸುತ್ತಾರೆ. 18 ಮುಸ್ಲಿಂ ಮನೆತನಗಳು ಮಠದ ಸೇವೆಯಲ್ಲಿ ಇಂದಿಗೂ ಇವೆ. ವಿಭೂತಿ : 5 ದಿನಗಳವರೆಗೆ ಸಮಾಧಿ ಧ್ಯಾನದಲ್ಲಿ ಇರುವುದಾಗಿ ಶಿಷ್ಯೆ ಮರುಳಮ್ಮನಿಗೆ ಹೇಳಿದರು. ನಂತರ ಬಾಗಿಲು ತೆರದು ನೋಡಿದಾಗಿ 3 ವಿಭೂತಿ ಗಟ್ಟಿಗಳು ಅಲ್ಲಿದ್ದವು. ಬಲಭಾಗದ ವಿಭೂತಿಯನ್ನು ಕಲಬುರ್ಗಿ ಜಿಲ್ಲೆಯ ಸಾವಳಗಿಯಲ್ಲಿ,ಎಡ ಭಾಗದಲ್ಲಿಯದನ್ನು ಸಿದ್ಧರಾಮನ ಅರಮನೆಯಲ್ಲಿ ಹಾಗೂ ಮಧ್ಯದಲ್ಲಿರುವ ವಿಭೂತಿಯನ್ನು ಗೋಕಾಕ ಸಾವಳಗಿಯಲ್ಲಿ ಇಡಲು ಅಶರೀರವಾಣಿಯಾಗಿತು. ಕ್ರಿ.ಶ. 1752 ರಲ್ಲಿ ಶಿವಲಿಂಗೇಶ್ವರರು ಲೀನವಾದರು.

ಹೋಗೋದು ಹೇಗೆ? ಬೆಳಗಾವಿ ಜಿಲ್ಲೆಯ ಗೋಕಾಕದಿಂದ 15 ಕಿಮೀ ಅಂತರದಲ್ಲಿ ಸಾವಳಗಿ ಇದೆ. ಬಸ್ ಅನುಕೂಲವಿದೆ.


......................................................

ಎನ್ಐಡಿಗೆ ಹುಬ್ಬಳ್ಳಿಗರೂ ಫುಲ್ಫೀದಾ (ಸ್ಲಗ್) ಶುದ್ಧ ಶಾಖಾಹಾರಿ, ಆರೋಗ್ಯಕ್ಕೆ ಬಹೂಪಕಾರಿ (ಹೆಡ್)

ವೀರೇಶ ಹಂಡಿಗಿ

ಉತ್ತರ ಕರ್ನಾಟಕದ ಜನತೆಗೆ ಉತ್ತರ ಭಾರತದ ಆಹಾರ ಪರಿಚಯಿಸಲು ಇತ್ತೀಚಿನ ದಿನಗಳಲ್ಲಿ ಹೊಟೇಲ್ಗಳು ದಾಪುಗಾಲು ಹಾಕುತ್ತಿವೆ. ಹುಬ್ಬಳ್ಳಿ ನಗರದಲ್ಲಿ ಪರರಾಜ್ಯಗಳ ಅದರಲ್ಲೂ ಉತ್ತರ ಭಾರತದ ಜನತೆ ಸಹ ಹೆಚ್ಚು ಜನ ವಾಸವಾಗಿದ್ದಾರೆ.ಅವರಿಗೆ ತಮ್ಮೂರಿನ ಆಹಾರ ಸೇವಿಸಬೇಕೆನ್ನುವ ಹಂಬಲ ನೀಗಿಸಲು ಹಾಗೂ ಇಲ್ಲಿಯ ಜನತೆಗೆ ದೈನಂದಿನ ಊಟದೊಂದಿಗೆ  ಎನ್ಐಡಿ ಆಹಾರಕ್ಕೆ ಹುಬ್ಬಳ್ಳಿಗರು ಮಾರು ಹೋಗುತ್ತಿದ್ದಾರೆ.

ರುಚಿಕರ,ಉತ್ತಮ, ಕಡಿಮೆದರದಲ್ಲಿ ಎಲ್ಲಿ ಆಹಾರ ಸಿಗುತ್ತದೆಯೋ ಅಲ್ಲಿ ಯುವ ಜನತೆ ಹಾಗೂ ಕುಟುಂಭದವರು ಸಹ ಲಗ್ಗೆ ಹಾಕುವುದು ಸಾಮಾನ್ಯ.ಕಾಲೇಜುಗಳ ಸುತ್ತಮುತ್ತ ಇಂತಹ ಆಹಾರ ಸಿಗುವುದೇ ಹೆಚ್ಚು. ಸಂಜೆ ಚಾಟ್, ರಾತ್ರಿಗೆ ಎನ್ಐಡಿ ಊಟ ಅದರ ರುಚಿ ಬಲ್ಲವರೇ ಬಲ್ಲರು. ಹಿರಿಯ ಜೀವಗಳು ಸಹ ಇಂತಹ ಆಹಾರಕ್ಕೆ ಮಾರು ಹೋಗುತ್ತಿದ್ದಾರೆ. ಹೀಗಾಗಿ ವಿದ್ಯಾನಗರದ ಜಿಎನ್ಜಿ ರಸ್ಟೊರೆಂಟ್ನಲ್ಲಿ ಒಮ್ಮೆ ಕಾಲಿಟ್ಟರೆ ಘಮ ಘಮಿಸುವ ರುಚಿ,ಶುಚಿಯಾದ ಎನ್ಐಡಿ ನಿಮ್ಮ ಮುಂದೆ ಹಾಜರ್. ಗ್ರಾಹಕರ ಬೇಡಿಕೆಗನುಸಾರವಾಗಿ ಜಿಎನ್ಜಿಯಲ್ಲಿ ಶುದ್ಧ ಶಾಖಾಹಾರಿ ತರಹೆವಾರಿ ಸಲಾಡ್,ಸೂಪ್, ಎನ್ಐಡಿಯೊಂದಿಗೆ ಚೈನಿಸ್ ಫುಡ್ ನಿಮ್ಮ ಜಿಹ್ವಾ ಚಪಲವನ್ನು ತಣಿಸುತ್ತದೆ. ಜಿಎನ್ಜಿ ರಸ್ಟೊರೆಂಟ್ ಡಿಸೈನ್ ಅಖಿಲ ಭಾರತ ಮಟ್ಟದ ಯುನಿಕ್ ಆರ್ಕಿಟೆಕ್ನಲ್ಲಿ 5 ನೇ ಸ್ಥಾನ ಪಡೆದಿದೆ. ಇಲ್ಲಿಯ ಇಂಟಿರಿಯರ್ ಸಹ ಗ್ರಾಹಕರ ಗಮನ ಸೆಳೆಯುತ್ತದೆ. ಯುವ ಜನರು ಕಿಟ್ಟಿ ಪಾರ್ಟಿಗಳನ್ನು ಸಹ ಇಲ್ಲಿ ಮಾಡುತ್ತಾರೆ.ವಿದ್ಯಾರ್ಥಿಗಳಿಗಾಗಿ ಕಾಂಬಿ ಆಫರ್ ಸಹ ಇಲ್ಲಿದೆ. ಈ ಆಫರ್ಗಳನ್ನು ಇತರೆಯವರು ಸಹ ಪಡೆಯಬಹುದು. ಸಂಜೆ ಆಗುತ್ತಲೇ ವಿದ್ಯಾರ್ಥಿಗಳ ದಂಡು ಇಲ್ಲಿ ನೆರೆಯುತ್ತದೆ. ಇದೇ ಜನೆವರಿಯಿಂದ ಈ ರಸ್ಟೊರೆಂಟ್ನ್ನು ಹೊಸ ಮ್ಯಾನೇಜ್ಮೆಂಟ್ನವರು ವಹಿಸಿಕೊಂಡಿದ್ದಾರೆ. ಸ್ಟಾರ್ ಹೊಟೆಲ್ನಲ್ಲಿ ಕೆಲಸಮಾಡಿದವರು ಇಲ್ಲಿಯ ಅಡುಗೆಯ ಜವಾಬ್ದಾರಿವಹಿಸಿಕೊಂಡಿದ್ದು ಕಡಿಮೆದರದಲ್ಲಿ ರುಚಿಕರ ಆಹಾರ ನೀಡುತ್ತಿದ್ದಾರೆ. ಗ್ರಾಹಕರ ತೃಪ್ತಿಯೇ ಮುಖ್ಯ ಉದ್ದೇಶ ಇರಿಸಿಕೊಂಡ ಮಾಲೀಕರು ಕಡಿಮೆ ದರದಲ್ಲಿ ಉತ್ತಮ ಆಹಾರ,ಉತ್ತಮ ಸೇವೆ ನೀಡುವ ಹಾಗೂ ಗ್ರಾಹಕರ ಆರೋಗ್ಯ ಗಮನದಲ್ಲಿಟ್ಟಿಕೊಂಡು ಹೆಚ್ಚು ಸ್ಪೈಸಿ ಇಲ್ಲದ ಆಹಾರ ಸಿದ್ದಪಡಿಸುತ್ತಾರೆ. ವಿಶೇಷ ಫುಡ್: ಥ್ರಡ್ ಪನೀರ್, ಜೈನ್ ಫುಡ್, ಬಾರ್ಬಿಕ್ಯೂ ಪ್ಲ್ಯಾಟರ್ (ಬಿಬಿಕ್ಯೂ), ಪನೀರ್ ನಜಾಕತ್, ಸೀ ಕಬಾಬ್ ಇಲ್ಲಿಯ ವಿಶೇಷ ಆಹಾರ. ಇದರೊಂದಿಗೆ ಸೂಪ್,ಸಲಾಡ್,ಚೈನಿಸ್, ಲಿಜತ್ವೆಜ್, ರೋಟಿಯಲ್ಲಿ ಓನಿಯನ್ ಪೊಟ್ಯಾಟೊ ಚೀಜ್ ಕುಲ್ಚಾ, ಪನೀರ್ ಪೊಟ್ಯಾಟೊ ಚೀಜ್ ಕುಲ್ಚಾ, ವೆಜ್ ದಮ್ ಬಿರಿಯಾನಿ,ಕಾಟೇಜ್ ಚೀಜ್ ಆಂಡ್ ವೆಜ್ ಸ್ಟಿಕ್, ಸೀಗಪೂರ ರೈಸ್( ಟೊಮೆಟೊ ಮತ್ತು ಗಾರ್ಲಿಕ್ ಫ್ಲೆವರ್) ಇತರ ಸುಮಾರು 150 ಕ್ಕೂ ಹೆಚ್ಚು ಆಹಾರ ಇಲ್ಲಿ ಸಿಗುತ್ತದೆ.


ಮನೆಯಲ್ಲಿ ನೀವೂ ಮಾಡಬಹುದು: ಥ್ರಡ್ ಪನೀರ್: ಪನೀರ್ಗೆ ಕುದಿಸಿದ ನೂಡಲ್ಸ್ ಸುತ್ತಿ ಅದನ್ನು ಡೀಪ್ ಫ್ರೈ ಮಾಡಬೇಕು.ನಂತರ ಮಿಡಿಯಂ ಸ್ಪೈಸ್ ಸಾಸ್ನಲ್ಲಿ ಮಿಕ್ಸ್ಮಾಡಿ ಮತ್ತೊಮ್ಮೆ ಫ್ರೈ ಮಾಡಬೇಕು.ನಂತರ ಸಾಸ್ನೊಂದಿಗೆ ತಿಂದರೆ ವಾವ್ ಪೆಂಟಾಸ್ಟಿಕ್ ಎಂಬ ಉದ್ಘಾರ ಬರದೆ ಇರದು. ರೊಸ್ಟೆಡ್ ಗಾರ್ಲಿಕ್ ಸೂಪ್: ಬೆಳ್ಳುಳ್ಳಿಯನ್ನು ಫ್ರೈ ಮಾಡಿ ಹಾಲು ಮತ್ತು ಕೆನೆ ಬಳಸಿ ಸೂಪ್ ಮಾಡಲಾಗುತ್ತದೆ. ಈ ಸೂಪ್ ತಯಾರಾದ ಮೇಲೆ ಅದನ್ನು ಸೋಸಿ ತೆಗೆದು ಮತ್ತೊಮ್ಮೆ ಬೆಳ್ಳುಳ್ಳಿ ಹಾಕಬೇಕು. ಇದು ಎಲ್ಲೆಡೆ ಸಿಗದು. ಇದು ಅಪರೂಪದ ಪೇಯ.ಇದು ಆರೋಗ್ಯಕ್ಕೂ ಬಹಳ ಉತ್ತಮ. ವೆಜ್ ಸೀ ಕಬಾಬ್: ಬೇಬಿ ಕಾರ್ನ್,ಪನೀರ್ ಹೋಳುಗಳು ,ಮಶರೂಂ ,ಗೋಬಿ ಇವೆಲ್ಲವನ್ನು ತಂದೂರಿ ಒಲೆಯಲ್ಲಿ ಬೇಯಿಸಬೇಕು.ತಂದೂರಿ ಮಸಾಲ ಹಾಕಬೇಕು. ಇದು ಬಿಸಿಯಾಗಿರಲು ಸಿಗಡಿಯಲ್ಲಿಡಬೇಕು. ಸಾಸ್ನೊಂದಿಗೆ ತಿಂದರೆ ಬಲು ರುಚಿಕರ.

ಜೈನ್ ಕ್ರುಕೆಟ್ಸ್:
ಬಾಳೆಕಾಯಿ ,ಆಲೂಗಡ್ಡಿ,ಬೀನ್ಸ್, ಕ್ಯಾರೆಟ್, ಫ್ಲಾವರ್ ಮಿಶ್ರಣಮಾಡಿ  ಬ್ರೆಡ್ ಗ್ರಮ್ಸ್ನಿಂದ ರೋಲ್ ಮಾಡಿ ಡೀಪ್ಫ್ರೈ ಮಾಡಬೇಕು. ಇದನ್ನು ಪುದಿನಾ ಚಟ್ನಿ, ಟೊಮೆಟೊ ಸಾಸ್ ಹಚ್ಚಿಕೊಂಡು ತಿನ್ನಬಹುದು.

ಕೋಟ್ಸ್... ಉತ್ತಮವಾದ ಸ್ವಾದಿಷ್ಟ ಆಹಾರ ಇಲ್ಲಿ ದೊರೆಯುತ್ತದೆ. ರಿಜನೇಬಲ್ ದರದಲ್ಲಿ ಹಾಗೂ ರುಚಿಕರ ಎನ್ಐಡಿ ಊಟ ಸಿಗುತ್ತದೆ. ಉತ್ತಮ ಸೇವೆ ಸಹ ನೀಡುತ್ತಾರೆ. ಪರಊರಿನಿಂದ ಬರುವ ಸ್ನೇಹಿತರನ್ನು ಇಲ್ಲಿಯೇ ಕರೆದುಕೊಂಡು ಬರುತ್ತೇನೆ. -ರಮೇಶ ಗುಡಿ,ಕಂಟ್ರಾಕ್ಟರ್.

ಕೋಟ್ಸ್...

ನಾನು ಪ್ರತಿದಿನ ಇಲ್ಲಿಯೇ ಊಟ ಮಾಡುವೆ.ನಮ್ಮದು ಉತ್ತರ ಪ್ರದೇಶ .ಮನೆಯ ಊಟದಂತೆ ಅನಿಸುತ್ತದೆ. ಉತ್ತಮ ವಾತಾವರಣ ಇಲ್ಲಿದೆ.ಇಲ್ಲಿ ಊಟ ಮಾಡುವುದೇ ಒಂದು ಖುಷಿ. ಸೌರಭ ರಾಯ್,ಎಂಜನಿಯರಿಂಗ್ ವಿದ್ಯಾರ್ಥಿ,

ಕೋಟ್ಸ್...

ವಿದ್ಯಾನಗರದಲ್ಲಿ ವಿದ್ಯಾರ್ಥಿಗಳೇ ಹೆಚ್ಚು ಇರುವುದರಿಂದ ಅವರ ಅಭಿರುಚಿಗೆ ತಕ್ಕಂತಹ ಆಹಾರ ತಯಾರಿಸುತ್ತೇವೆ. ವಿಧ್ಯಾರ್ಥಿಗಳಿಗಾಗಿಯೇ ಆಫರ್ನಲ್ಲಿ ಊಟ ಕೊಡುತ್ತೇವೆ.ಇದನ್ನು ಇತರರು ಪಡೆಯಬಹುದು.ಗ್ರಾಹಕರಿಗೆ ಮನೆಯ ಊಟ ಎನಿಸಬೇಕು. ಉತ್ತಮ ಶುಚಿ,ರುಚಿಕರ ಆಹಾರ ಒದಗಿಸುವುದೇ ನಮ್ಮ ಗುರಿ. -ಸ್ಯಾಮಸನ್ ಪೌಲ್,ಮಾಲೀಕರು.

ಸ್ಥಳ::::ಜಿಎನ್ಜಿ ಪ್ಯೂರ್ ವೆಜ್ ರೆಸ್ಟೊರೆಂಟ್ ,ಕಫೆ. ಶಿರೂರ ಪಾರ್ಕ್ ಮುಖ್ಯ ರಸ್ತೆ,ಪ್ರಶಾಂತ ಕಾಲೊನಿ ವಿದ್ಯಾನಗರ ಹುಬ್ಬಳ್ಳಿ. ಬೆಳಗ್ಗೆ 11-30 ರಿಂದ ರಾತ್ರಿ 10-30 ರವರೆಗೆ

ಫೋಟೊ


...............................


arsid2894735 ಹೋಮ್ಮೇಡ್ಖ್ಯಾತಿಯಹೋಟೆಲ್ನಲ್ಲಿಊಟ,ಉಪಹಾರ

ನಾಲಿಗೆಚುಚಿ ತಣಿಸುವವಜೈನ್ಫುಡ್ಸ್(ಹೆಡ್)
ವೀರೇಶಹಂಡಿಗಿ,ಹುಬ್ಬಳ್ಳಿ
ಇಂದಿನಒತ್ತಡದದಿನಮಾನದಲ್ಲಿಮನೆಯಲ್ಲಿತಿಂಡಿ,ತಿನಿಸು,,ಅಡುಗೆತಯಾರಿಸುವುದುಬಲುಕಷ್ಟದಕೆಲಸಅದಕಾ್ಕಗಿಯೇಹಲವಾರುತಹರೆವಾರಿಹೊಟೇಲ್ಗಳುತಲೆಎತ್ತಿವೆ.
ಬೆಳಗೆ್ಗ ಆಫೀಸ್ಗೆತಡವಾಗುತ್ತದೆಹೊರಗೆಏನಾದರೂತಿನ್ನಬಹುದುಎಂದುಕೊಂಡುಕಂಡಕಂಡಹೊಟೇಲ್ಗೆಹೋಗದೆಉತ್ತಮರುಚಿಕರಹಾಗೂಕಡಿಮೆಣದಲ್ಲಿಎಲ್ಲಿಸಿಗುತ್ತದೆಎಂದುಎಲ್ಲರೂಹುಡುಕಾಟದಲ್ಲಿರುತ್ತಾರೆ
ಹಾಗಿದ್ದರೆನೀವೊಮ್ಮೆಗೋಕುಲ್ರಸ್ತೆಗೆಬನ್ನಿ.ಇತ್ತೀಚಿನದಿಗಳಲ್ಲಿಗೋಕುಲ್ರಸ್ತೆಫುಲ್ಬಿಜಿಯಾಗಿರುತ್ತದೆ. ಇಲ್ಲಿನಅಕ್ಷುಪಾರ್ಕ್ನಲ್ಲಿಯಜೆನ್ಫುಡ್ಸ್ನಿಮ್ಮಜೀಹ್ವಾಚಪಲತಣಿಸಲಿದೆ. ಜೆನ್ಫುಡ್ಸ್ಎಂದಾಕ್ಷಣ ಬೆಳ್ಳುಳ್ಳಿ, ಈರುಳ್ಳಿಹಾಕಿರುವುದಿಲ್ಲಎಂದುಹಿಂಜರಿಯಬೇಡಿ.ಇವುಗಳನ್ನುಬಳಸಿಯೇಇಲ್ಲಿಆಹಾರತಯಾರಿಸುತ್ತಾರೆ. ಆದರೆಇವರದುಇನ್ನೊಂದುವಿಶೇಷಎಂದರೆಇಲ್ಲಿಬಳಸುವವಸ್ತುಗಳನ್ನುಪೇಟೆಯಿಂದನೇರವಾಗಿ ತಂದುಬಳಸದೆಮನೆಯಲ್ಲಿಸ್ವಚ್ಛಗೊಳಿಸಿಬಳಸುತಾ್ತರೆ.ಕಾಳು,ಕಡಿ ಸ್ವಚ್ಛಗೊಳಿಸಿತಾವೇಗಿರಣಿಗೆಹಾಕಿಸುತ್ತಾರೆ. ಹೀಗಾಗಿ ಇಲ್ಲಿತಯಾರಾಗುವಎಲ್ಲತಿಂಡಿ ಹಾಗೂಊಟ ಮನೆಯರುಚಿಯಂತೆಯೇಇದೆ. ಅಪ್ಪಿತಪ್ಪಿಸೋಡಾಹಾಗೂಇಸ್್ಟ ಬಳಸುವುದೇಇಲ್ಲಎಂದುಮಾಲೀಕರುಹೇಳುತ್ತಾರೆ.
ಬೆಳಗಿನಸ್ಪೆಷಲ್: ಬೆಳಗೆ್ಗ ಟಿಫನ್ಗೆಪಡ್ಇಲ್ಲಿಯಸ್ಪೇಷಲ್.ಪಡ್ನೊಂದಿಗೆಕೊಬ್ರಿಚಟ್ನಿಹಚ್ಚಿಕೊಂಡುತಿಂದರೆಆಹಾಎಂಥಾರುಚಿ ಎಂದುಬಾಯಿಚಪ್ಪರಿಸಿಕೊಂಡುತಿನ್ನೊಂದತೂಗ್ಯಾರಂಟಿ. ಕೊಬ್ರಿಚಟ್ನಿಯಲ್ಲಿಪುದಿನಾ ಹಾಕಿರುತ್ತಾರೆ.ಇದರಿಂದಚಟ್ನಿಘಮಘಮಿಸುತ್ತದೆ.ಬಿಸಿಬಿಸಿಪಡ್ನೊಂದಿಗೆನಂಜಿಕೊಂಡುಒಮ್ಮೆತಿಂದುನೋಡಿ.
ಇದರೊಂದಿಗೆಇಡ್ಲಿ,ವಡಾ, ಮಸಾಲೆದೋಸೆ,ಕಾಲಿದೋಸೆ, ಪುರಿ,ಶಿರಾ,ಉಪ್ಪಿಟು್ಟ ಸಿಗುತ್ತದೆ.ಇದೆಲ್ಲವೂಎಕಾನಮಿರೇಟಿಲ್ಲಿಯೇಸಿಗಲಿದೆ. ಎಲ್ಲತರದಜನನಮ್ಮಲ್ಲಿಬರಬೇಕುಎಂಬದಷಿ್ಟಂಯಿಂದಉಳಿದೆಲ್ಲಹೊಟೆಲ್ಗಿಂತಇಲ್ಲಿದರಕಮ್ಮಿ. ಹೀಗಾಗಿ ಇಲ್ಲಿಬರುವಜನಹೆಚು್ಚ. 
ಮಧ್ಯಾಹ್ನಕೆ್ಕ ಏನೇನು?:
ರೊಟ್ಟಿ,ಅಥವಾಚಪಾತಿ, 2ತರದಬಾಜಿ ,ಪಲಾವ್,ಬಿಳಿಅನ್ನ,ಸಾಂಬಾರ್,ರೆತಾ,ಪಾಪಡ್, ಉಪ್ಪಿನಕಾಯಿಇಷೆ್ಟಲ್ಸೇರಿದಊಟಕೆ್ಕ  ಕೇವಲನಲವತ್ತುರೂ.ಮಾತ್ರ(ಸೆಲ್ಫಸರ್ವಿನಲ್ಲಿಮಾತ್ರ)ಇಲ್ಲದಿದ್ದರೆಐವತ್ತುರೂ.ಇದೆ.
20 ರೂ.ದಲ್ಲೂಒಂದಿಷು್ಟ ಊಟ ಬೇಕೆಂದರೆ2ಚಪಾತಿಅಥವಾ2 ರೊಟ್ಟಿ, ಬಾಜಿ ,ಪಲಾವ್,ರೈಸ್ಸಾಂಬಾರ್ಪಾಪಡ್ಸಿಗಲಿದೆ. ಹೀಗಾಗಿ ಮಧ್ಯಾಹ್ನದಊಟ ಹೇವಿಬೇಡವೆಂದವರಿಗೆಇದುಸೂಕ್ತ. ಇದರೊಂದಿಗೆಎನ್ಐಡಿ, ಸಿಗಲಿದೆ. ಆಲೂಪರೋಟಾ,ಪನ್ನೀರಪರೋಟಾ, ವೆಜ್ಪರೊಟಾ, ಮಸಾಲಾಪರೋಟಾ, ವೆಜ್ಬಿರಿಯಾನಿ,ಮಸಾಲಾರೆ್,ಜೀರಾರೈಸ್ಸಹಸಿಗುತ್ತದೆ.
ಸಂಜೆಗೆಏೀನು?: 
ಸಂಜೆಒಂದುಸುತ್ತುಸುತ್ತಾಡಿ ಬರುವಜನರಿಗೆಸಹಇಲ್ಲಿತರತರದಚಾಟ್ಳುಲಭ್ಯ.ಬಾಯಲ್ಲಿನೀರೂರಿಸುವಗಿರಮಿಟ್, ಬ್ರೆಡ್ಬೊಂಡಾ, ಉದ್ದಿನವಡಾ,ಕಾಂದಾಬಜಿ,ಆಲೂವಡಾ, ಬನ್ಮಿರ್ಚಿ,ನೂಡಲ್ಸ್ಸಹತಿನ್ನಬಹುದು. ಅಬಾಲವದ್ದರುಬಯಸುವಗೋಬಿಮಂಚೂರಿಯಂತೂಬಲುರುಚಿ.ಸಂಜೆಇದುಇಲ್ಲಿಹೆಚು್ಚ ಖರ್ಚಾಗುತ್ತದೆ. ಇದಕೆ್ಕ ಶುದ್ಧಎಣ್ಣೆಬಳಸುತ್ತಾರೆ.ಸಂಜೆಕುಟುಂಬದವರೊಂದಿಗೆಒಂದಿಷು್ಟ ಚಾಟ್ಸ್ತಿಂದುಖುಷಿಪಟು್ಟ ಹೋಗಲುಏನೂಅಭ್ಯಂತರವಿಲ್ಲ.
ಶುದ್ಧಸ್ವಚ್ಛವಾಗಿ ಮಾಡುವುದರಿಂದಆರೋಗ್ಯಕೆ್ಕ ಯಾವುದೇಅಡ್ಡ ಪರಿಣಾಮವಿಲ್ಲಹೀಗಾಗಿ ಯಾವಹೆದರಿಕೆಇಲ್ಲದೆಇಲ್ಲಿಗೆಬಂದುತಿನ್ನಬಹುದು.
...ಕೋಟ್......
ಕಡಿಮೆದರದಲ್ಲಿರುಚಿಕರತಿಂಡಿ ಸಿಗುವುದರಿಂದನಾನು ಆಗಾಗಇಲ್ಲಿಬರುತ್ತಿರುವೆ. ಮನೆಯಲ್ಲಿಮಾಡಿದಪದಾರ್ಥಗಳನ್ನುತಿಂದಅನುಭವಆಗುತ್ತದೆ. ಅರಾಮವಾಗಿ ಕುಳಿತುಕೊಂಡುತಿಂದುಹೋಗುತ್ತೇನೆ.ಈ ಭಾಗದಲ್ಲಿಇಷು್ಟ ಕಡಿಮೆದರದಲ್ಲಿಯಾವಅಂಗಡಿಯೂಇಲ್ಲ. ಅದಕಾ್ಕಗಿ ನಾನುಇಲ್ಲಿಬರುತ್ತೇನೆ.
-ಶತಿ. ಕೆ.ಎಸ್, ಗ್ರಾಹಕರು

...ಕೋಟ್......
ಸಂಜೆವಾಕ್ನೊಂದಿಗೆಒಂದಿಷು್ಟ ರುಚಿಕರವಾದತಿಂಡಿ ತಿನ್ನಲುಬರುತ್ತೇನೆ. ಗಿರಮಿಟ್,ಮಿರ್ಚಿಬಲೆಉ ರುಚಿಯಾಗಿದೆ.ಗೋಬಿಮಂಚೂರಿಯಂತೂಬಲುಮದುವಾಗಿರುತ್ತದೆ.ತಿನ್ನಲುಖುಷಿಎನಿಸುತ್ತದೆ. ಎಲ್ಲೂತಕ್ಷಣ ನಮ್ಮಮುಂದೆಯೇತಯಾರಾಗುತ್ತದೆಹೀಗಾಗಿ ಭಯವಿಲ್ಲದೆತಿನ್ನಬಹುದು.
-ಕುಾರಅಂಗಡಿ, ಗ್ರಾಹಕರು.
...ಕೋಟ್......
ಈ ಭಾಗದಲ್ಲಿದೊಡ್ಡ ಹೊಟೇಲ್ಗಳಿವೆ. ಎಲ್ಲರೂಅಲ್ಲಿಹೋಗಿ ತಿನ್ನಲುಆಗದು.ಅದಕಾ್ಕಗಿ ಕಡಿಮೆದರದಲ್ಲಿಕೊಡಲುಸಾಧ್ಯಎಂದಾಗಮಾಡಿಯೇಬಿಡೋಣುಎಂದುನಾವುಶುರುಮಾಡಿದ್ದೇವೆ. ಗ್ರಾಹಕರಸಂತಪ್ತರಾಗಿ ಮತ್ತೊಮ್ಮೆನಮ್ಮಲ್ಲಿಬರಬೇಕುಎಂಬಉದೆ್ಧೀಶನಮ್ಮದು.ಹೀಗಾಗಿ ಸ್ವಚ್ಛ ಹಾಗೂಶುದ್ಧಆಹಾರಕೆ್ಕ ನಾವುಹೆಚ್ಚಿನಪ್ರಾಧಾನ್ಯತೆಕೋಡುತ್ತೇವೆ.
-ಆಕಾಶ.ಪಿ.ಎಸ್.ಮಾಲೀಕರು.
ಫೋಟೊಗಳು:

......................................

ಹೋಮ್‌ಮೇಡ್ ಖ್ಯಾತಿಯ ಹೋಟೆಲ್‌ನಲ್ಲಿ ಊಟ,ಉಪಹಾರ

ನಾಲಿಗೆ ಚುಚಿ ತಣಿಸುವವ ಜೈನ್ ಫುಡ್ಸ್(ಹೆಡ್)
ವೀರೇಶ ಹಂಡಿಗಿ,ಹುಬ್ಬಳ್ಳಿ
ಇಂದಿನ ಒತ್ತಡದ ದಿನಮಾನದಲ್ಲಿ ಮನೆಯಲ್ಲಿ ತಿಂಡಿ,ತಿನಿಸು,,ಅಡುಗೆ ತಯಾರಿಸುವುದು ಬಲು ಕಷ್ಟದ ಕೆಲಸ ಅದಕ್ಕಾಗಿಯೇ ಹಲವಾರು ತಹರೆವಾರಿ ಹೊಟೇಲ್‌ಗಳು ತಲೆಎತ್ತಿವೆ.
ಬೆಳಗ್ಗೆ ಆಫೀಸ್‌ಗೆ ತಡವಾಗುತ್ತದೆ ಹೊರಗೆ ಏನಾದರೂ ತಿನ್ನಬಹುದು ಎಂದುಕೊಂಡು ಕಂಡ ಕಂಡ ಹೊಟೇಲ್‌ಗೆ ಹೋಗದೆ ಉತ್ತಮ ರುಚಿಕರ ಹಾಗೂ ಕಡಿಮೆ ಹಣದಲ್ಲಿ ಎಲ್ಲಿ ಸಿಗುತ್ತದೆ ಎಂದು ಎಲ್ಲರೂ ಹುಡುಕಾಟದಲ್ಲಿರುತ್ತಾರೆ
ಹಾಗಿದ್ದರೆ ನೀವೊಮ್ಮೆ ಗೋಕುಲ್ ರಸ್ತೆಗೆ ಬನ್ನಿ. ಇತ್ತೀಚಿನ ದಿಗಳಲ್ಲಿ ಗೋಕುಲ್ ರಸ್ತೆ ಫುಲ್ ಬಿಜಿಯಾಗಿರುತ್ತದೆ. ಇಲ್ಲಿನ ಅಕ್ಷಯಪಾರ್ಕ್‌ನಲ್ಲಿಯ ಜೆನ್ ಫುಡ್ಸ್ ನಿಮ್ಮ ಜೀಹ್ವಾ ಚಪಲ ತಣಿಸಲಿದೆ. ಜೆನ್ ಫುಡ್ಸ್ ಎಂದಾಕ್ಷಣ ಬೆಳ್ಳುಳ್ಳಿ, ಈರುಳ್ಳಿ ಹಾಕಿರುವುದಿಲ್ಲ ಎಂದು ಹಿಂಜರಿಯಬೇಡಿ.ಇವುಗಳನ್ನು ಬಳಸಿಯೇ ಇಲ್ಲಿ ಆಹಾರ ತಯಾರಿಸುತ್ತಾರೆ. ಆದರೆ ಇವರದು ಇನ್ನೊಂದು ವಿಶೇಷ ಎಂದರೆ ಇಲ್ಲಿ ಬಳಸುವ ವಸ್ತುಗಳನ್ನು ಪೇಟೆಯಿಂದ ನೇರವಾಗಿ ತಂದು ಬಳಸದೆ ಮನೆಯಲ್ಲಿ ಸ್ವಚ್ಛಗೊಳಿಸಿ ಬಳಸುತ್ತಾರೆ.ಕಾಳು,ಕಡಿ ಸ್ವಚ್ಛಗೊಳಿಸಿ ತಾವೇ ಗಿರಣಿಗೆ ಹಾಕಿಸುತ್ತಾರೆ. ಹೀಗಾಗಿ ಇಲ್ಲಿ ತಯಾರಾಗುವ ಎಲ್ಲ ತಿಂಡಿ ಹಾಗೂ ಊಟ ಮನೆಯ ರುಚಿಯಂತೆಯೇ ಇದೆ. ಅಪ್ಪಿ ತಪ್ಪಿ ಸೋಡಾ ಹಾಗೂ ಇಸ್ಟ್ ಬಳಸುವುದೇ ಇಲ್ಲ ಎಂದು ಮಾಲೀಕರು ಹೇಳುತ್ತಾರೆ.
ಬೆಳಗಿನ ಸ್ಪೆಷಲ್: ಬೆಳಗ್ಗೆ ಟಿಫನ್‌ಗೆ  ಪಡ್ ಇಲ್ಲಿಯ  ಸ್ಪೇಷಲ್.ಪಡ್‌ನೊಂದಿಗೆ ಕೊಬ್ರಿ ಚಟ್ನಿ ಹಚ್ಚಿಕೊಂಡು ತಿಂದರೆ ಆಹಾ ಎಂಥಾ ರುಚಿ ಎಂದು ಬಾಯಿ ಚಪ್ಪರಿಸಿಕೊಂಡು ತಿನ್ನೊಂದತೂ ಗ್ಯಾರಂಟಿ. ಕೊಬ್ರಿ ಚಟ್ನಿಯಲ್ಲಿ ಪುದಿನಾ  ಹಾಕಿರುತ್ತಾರೆ. ಇದರಿಂದ ಚಟ್ನಿ ಘಮಘಮಿಸುತ್ತದೆ. ಬಿಸಿಬಿಸಿ ಪಡ್‌ನೊಂದಿಗೆ ನಂಜಿಕೊಂಡು ಒಮ್ಮೆ ತಿಂದು ನೋಡಿ.
ಇದರೊಂದಿಗೆ ಇಡ್ಲಿ,ವಡಾ, ಮಸಾಲೆ ದೋಸೆ,ಕಾಲಿ ದೋಸೆ, ಪುರಿ,ಶಿರಾ,ಉಪ್ಪಿಟ್ಟು ಸಿಗುತ್ತದೆ.ಇದೆಲ್ಲವೂ ಎಕಾನಮಿ ರೇಟಿಲ್ಲಿಯೇ ಸಿಗಲಿದೆ. ಎಲ್ಲ ತರದ ಜನ  ನಮ್ಮಲ್ಲಿ ಬರಬೇಕು ಎಂಬ ದಷ್ಟಿಂಯಿಂದ ಉಳಿದೆಲ್ಲ ಹೊಟೆಲ್‌ಗಿಂತ ಇಲ್ಲಿ ದರ ಕಮ್ಮಿ. ಹೀಗಾಗಿ ಇಲ್ಲಿ ಬರುವ ಜನ ಹೆಚ್ಚು. 
ಮಧ್ಯಾಹ್ನಕ್ಕೆ ಏನೇನು?:
 ರೊಟ್ಟಿ,ಅಥವಾ ಚಪಾತಿ, 2ತರದ ಬಾಜಿ ,ಪಲಾವ್,ಬಿಳಿ ಅನ್ನ ,ಸಾಂಬಾರ್,ರೆತಾ,ಪಾಪಡ್, ಉಪ್ಪಿನಕಾಯಿ ಇಷ್ಟೆಲ್ ಸೇರಿದ ಊಟಕ್ಕೆ  ಕೇವಲ ನಲವತ್ತು ರೂ.ಮಾತ್ರ(ಸೆಲ ಸರ್ವಿನಲ್ಲಿ ಮಾತ್ರ)ಇಲ್ಲದಿದ್ದರೆ ಐವತ್ತು ರೂ.ಇದೆ.
20 ರೂ.ದಲ್ಲೂ ಒಂದಿಷ್ಟು ಊಟ ಬೇಕೆಂದರೆ 2ಚಪಾತಿ ಅಥವಾ 2 ರೊಟ್ಟಿ, ಬಾಜಿ ,ಪಲಾವ್,ರೈಸ್ ಸಾಂಬಾರ್ ಪಾಪಡ್ ಸಿಗಲಿದೆ. ಹೀಗಾಗಿ ಮಧ್ಯಾಹ್ನದ ಊಟ ಹೇವಿ ಬೇಡವೆಂದವರಿಗೆ ಇದು ಸೂಕ್ತ. ಇದರೊಂದಿಗೆ ಎನ್‌ಐಡಿ, ಸಿಗಲಿದೆ. ಆಲೂ ಪರೋಟಾ,ಪನ್ನೀರ ಪರೋಟಾ, ವೆಜ್ ಪರೊಟಾ, ಮಸಾಲಾ ಪರೋಟಾ, ವೆಜ್ ಬಿರಿಯಾನಿ,ಮಸಾಲಾ ರೆಸ್,ಜೀರಾ ರೈಸ್ ಸಹ ಸಿಗುತ್ತದೆ.
ಸಂಜೆಗೆ ಏೀನು?: 
ಸಂಜೆ ಒಂದು ಸುತ್ತು ಸುತ್ತಾಡಿ ಬರುವ ಜನರಿಗೆ ಸಹ ಇಲ್ಲಿ ತರತರದ ಚಾಟ್‌ಗಳು ಲಭ್ಯ. ಬಾಯಲ್ಲಿ ನೀರೂರಿಸುವ ಗಿರಮಿಟ್, ಬ್ರೆಡ್ ಬೊಂಡಾ, ಉದ್ದಿನ ವಡಾ,ಕಾಂದಾ ಬಜಿ,ಆಲೂ ವಡಾ, ಬನ್ ಮಿರ್ಚಿ ,ನೂಡಲ್ಸ್ ಸಹ ತಿನ್ನಬಹುದು. ಅಬಾಲವದ್ದರು ಬಯಸುವ ಗೋಬಿಮಂಚೂರಿಯಂತೂ ಬಲು ರುಚಿ.ಸಂಜೆ ಇದು ಇಲ್ಲಿ ಹೆಚ್ಚು ಖರ್ಚಾಗುತ್ತದೆ. ಇದಕ್ಕೆ ಶುದ್ಧ ಎಣ್ಣೆ ಬಳಸುತ್ತಾರೆ.ಸಂಜೆ ಕುಟುಂಬದವರೊಂದಿಗೆ ಒಂದಿಷ್ಟು ಚಾಟ್ಸ್ ತಿಂದು ಖುಷಿ ಪಟ್ಟು ಹೋಗಲು ಏನೂ ಅಭ್ಯಂತರವಿಲ್ಲ.
ಶುದ್ಧ ಸ್ವಚ್ಛವಾಗಿ ಮಾಡುವುದರಿಂದ ಆರೋಗ್ಯಕ್ಕೆ ಯಾವುದೇ ಅಡ್ಡ ಪರಿಣಾಮವಿಲ್ಲ ಹೀಗಾಗಿ ಯಾವ ಹೆದರಿಕೆ ಇಲ್ಲದೆ ಇಲ್ಲಿಗೆ ಬಂದು ತಿನ್ನಬಹುದು.
...ಕೋಟ್......
ಕಡಿಮೆ ದರದಲ್ಲಿ ರುಚಿಕರ ತಿಂಡಿ ಸಿಗುವುದರಿಂದ ನಾನು  ಆಗಾಗ ಇಲ್ಲಿ ಬರುತ್ತಿರುವೆ. ಮನೆಯಲ್ಲಿ ಮಾಡಿದ ಪದಾರ್ಥಗಳನ್ನು ತಿಂದ ಅನುಭವ ಆಗುತ್ತದೆ. ಅರಾಮವಾಗಿ ಕುಳಿತುಕೊಂಡು ತಿಂದು ಹೋಗುತ್ತೇನೆ.ಈ ಭಾಗದಲ್ಲಿ ಇಷ್ಟು ಕಡಿಮೆ ದರದಲ್ಲಿ ಯಾವ ಅಂಗಡಿಯೂ ಇಲ್ಲ. ಅದಕ್ಕಾಗಿ ನಾನು ಇಲ್ಲಿ ಬರುತ್ತೇನೆ.
-ಶತಿ. ಕೆ.ಎಸ್, ಗ್ರಾಹಕರು

...ಕೋಟ್......
ಸಂಜೆ ವಾಕ್‌ನೊಂದಿಗೆ ಒಂದಿಷ್ಟು ರುಚಿಕರವಾದ ತಿಂಡಿ ತಿನ್ನಲು ಬರುತ್ತೇನೆ. ಗಿರಮಿಟ್,ಮಿರ್ಚಿ ಬಲೆಉ ರುಚಿಯಾಗಿದೆ.ಗೋಬಿ ಮಂಚೂರಿಯಂತೂ ಬಲು ಮದುವಾಗಿರುತ್ತದೆ.ತಿನ್ನಲು ಖುಷಿ ಎನಿಸುತ್ತದೆ. ಎಲ್ಲೂ ತಕ್ಷಣ ನಮ್ಮ ಮುಂದೆಯೇ ತಯಾರಾಗುತ್ತದೆ ಹೀಗಾಗಿ ಭಯವಿಲ್ಲದೆ ತಿನ್ನಬಹುದು.
-ಕುಮಾರ ಅಂಗಡಿ, ಗ್ರಾಹಕರು.
...ಕೋಟ್......
ಈ ಭಾಗದಲ್ಲಿ ದೊಡ್ಡ ಹೊಟೇಲ್‌ಗಳಿವೆ. ಎಲ್ಲರೂ ಅಲ್ಲಿ ಹೋಗಿ ತಿನ್ನಲು ಆಗದು.ಅದಕ್ಕಾಗಿ ಕಡಿಮೆ ದರದಲ್ಲಿ ಕೊಡಲು ಸಾಧ್ಯ ಎಂದಾಗ ಮಾಡಿಯೇ ಬಿಡೋಣು ಎಂದು ನಾವು ಶುರುಮಾಡಿದ್ದೇವೆ. ಗ್ರಾಹಕರ ಸಂತಪ್ತರಾಗಿ ಮತ್ತೊಮ್ಮೆ ನಮ್ಮಲ್ಲಿ ಬರಬೇಕು ಎಂಬ ಉದ್ಧೇಶ ನಮ್ಮದು.ಹೀಗಾಗಿ ಸ್ವಚ್ಛ ಹಾಗೂ ಶುದ್ಧ ಆಹಾರಕ್ಕೆ ನಾವು ಹೆಚ್ಚಿನ ಪ್ರಾಧಾನ್ಯತೆ ಕೋಡುತ್ತೇವೆ.
-ಆಕಾಶ.ಪಿ.ಎಸ್.ಮಾಲೀಕರು.
ಫೋಟೊಗಳು: