ಸದಸ್ಯ:Veeresh Handigi

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪರಿಚಯ

ಹೆಸರು:

ವೀರೇಶ.ಎಸ್.ಹಂಡಿಗಿ


ಸಂಪರ್ಕ ವಿಳಾಸ:


ವೀರೇಶ.ಎಸ್.ಹಂಡಿಗಿ

338,ಅಕ್ಷಯ ಕಾಲೊನಿ,2 ನೇ ಹಂತ

ಗೋಕುಲ ರಸ್ತೆ, ಹುಬ್ಬಳ್ಳಿ


ಶೆಕ್ಷಣಿಕ ಅರ್ಹತೆ:

ಬಿ.ಇಡಿ,ಎಂ.ಎ,ಎಂ.ಫಿಲ್,ಪಿಎಚ್‌ಡಿ.

ಮೊಬೆಲ್ ಸಂಪರ್ಕ ಸಂಖ್ಯೆ:

9449147311


ಪತ್ರಿಕಾ ರಂಗದ ಅನುಭವ:

12 ವರ್ಷ ಪೂರ್ಣಾವಧಿ

ಸಂಯುಕ್ತ ಕರ್ನಾಟಕದಲ್ಲಿ ವರದಿಗಾರ/ ಉಪಸಂಪಾದಕ

ವಿಜಯ ಕರ್ನಾಟಕದಲ್ಲಿ ವರದಿಗಾರ/ ಉಪಸಂಪಾದಕ/ಸಧ್ಯ ಹಿರಿಯ ಉಪ ಸಂಪಾದಕನಾಗಿ ಸೇವೆ.

10 ವರ್ಷ ಅರೆಕಾಲಿಕ ಬಿಡಿ ವರದಿಗಾರನಾಗಿ ನವನಾಡು,ಕನ್ನಡಮ್ಮ, ಸಂಜೆವಾಣಿ,ಸಂಜೆ ದರ್ಪಣ, ಸಂಯುಕ್ತ ಕರ್ನಾಟಕದಲ್ಲಿ ಸೇವೆ.


ಸಂಶೋಧನೆ:

ಸದ್ಧರ್ಮ ದೀಪಿಕೆ ಪತ್ರಿಕೆ ಒಂದು ಅಧ್ಯಯನ ಸಂಪ್ರಬಂಧಕ್ಕೆ ಧಾರವಾಡ ಕವಿವಿಯಿಂದ ಎಂ.ಫಿಲ್ ಪದವಿ.

ಸಂಪಾದಕ ಚನ್ನಮಲ್ಲಿಕಾರ್ಜುನರ ಬದುಕು-ಬರಹ :ಒಂದು ಅಧ್ಯಯನ ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿವಿಯಿಂದ ಪಿ.ಎಚ್‌ಡಿ ಪದವಿ.

ಬರಹ:

    ಮೊಗ್ಗಿನ ಮಾಲೆ( ಕವನ ಸಂಕಲನ) ಸಂಪಾದಕ.
    ಯಮನೂರ ಚಾಂಗದೇವರು(ಚರಿತ್ರೆ) ಸಂಪಾದಕ.
    ಸಾಂಸ್ಕೃತಿಕ,ಸಾಹಿತ್ಯಕ ಲೇಖನ,ಚುಟುಕು,ಕವನ ಬರವಣಿಗೆ.

ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರ:

ನವಲಗುಂದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ.

ಯುವ ಸಾಹಿತ್ಯ ವೇದಿಕೆ ಕೋಶಾಧ್ಯಕ್ಷ.

ಕನ್ನಡ ಸಾಹಿತ್ಯ ಪರಿಷತ್ ಸದಸ್ಯ.

ವಚನ ಸಾಹಿತ್ಯ ಪರಿಷತ್ ಸದಸ್ಯ.

ಸೌಗಂಧ ಸಾಹಿತ್ಯ,ಸಾಂಸ್ಕೃತಿಕ ಸಂಘಟನೆಯ ಕೋಶಾಧಿಕಾರಿ.

ಧಾರವಾಡ ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ.


ಇತರೆ:

ಧಾರವಾಡ ಆಕಾಶವಾಣಿಯಲ್ಲಿ ವಿಜ್ಞಾನ ಹಾಗೂ ಯುವ ಸಮಾಚಾರದಲ್ಲಿ ವಾರ್ತಾವಾಚಕ. ಮುಂಬಯಿಯಲ್ಲಿ ನಡೆದ ವಿಶ್ವ ಕನ್ನಡ ಮತ್ತು ಸಂಸ್ಕೃತಿ ಸಮ್ಮೇಳನದಲ್ಲಿ ಭಾಷಣ,ಸನ್ಮಾನ. ಹಾಸನ ಜಿಲ್ಲಾ ಹಾರನಹಳ್ಳಿ ಕೋಡಿಮಠದಲ್ಲಿ ನಡೆದ ಹಳಕಟ್ಟಿ ವಚನೋತ್ಸವ ರಾಜ್ಯಮಟ್ಟದ 4 ನೇ ಸಮ್ಮೇಳನದಲ್ಲಿ ಉಪನ್ಯಾಸ,ಸನ್ಮಾನ. ಸಾವಳಗಿ ಶ್ರೀ ಶಿವಲಿಂಗೇಶ್ವರ ಮಠದಲ್ಲಿ ಭಾಷಣ - ಸನ್ಮಾನ. ಸಾಮಾಜಿಕ: ನಾಗರಿಕ ಬಂದೂಕು ತರಬೇತಿ ಶಿಬಿರದ ಸಂಸ್ಥಾಪಕ ಕಾರ್ಯದರ್ಶಿ. ನವಲಗುಂದ ತಾಲೂಕು ಸಾಕ್ಷರ ದೀಪ ಸಮೀತಿ ಸಂಯೋಜಕ. ಹಲವು ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನೆ.

.............................................................................................................................................................................




ನಾಟ್ಯ ಮಯೂರಿ ಶಾಂತಲೆ

ಭರತಮುನಿ ವಿರಚಿತ ನಾಟ್ಯ ಶಾಸ್ತ್ರದಲ್ಲಿ ಭರತನಾಟ್ಯವು ಪ್ರಥಮವಾಗಿ ಪ್ರಸ್ತಾಪಗೊಂಡಿದೆ. ಇದು ದಕ್ಷಿಣ ಭಾರತದಲ್ಲಿ ಪರಂಪರಾಗತವಾಗಿ ಬಂದ ನೃತ್ಯಕಲೆ ಈಗ ಎಲ್ಲೆಲ್ಲೂ ಜನಪ್ರಿಯಾಗಿದೆ. ಇದರಲ್ಲಿ ಶಿರಸ್ಸು,ಹಸ್ತ, ಕಟಿ, ಪಾದ ಮುಖಗಳ ಮೂಲಕ ವಿವಿಧ ಭಾವ ಭಂಗಿಗಳನ್ನು ವ್ಯಕ್ತಪಡಿಸುವುದು ವೈಷಿಷ್ಟ್ಯಪೂರ್ಣ ರಾಗ, ತಾಳ, ಲಯಗಳಂದಾಗಿ ಇನ್ನೂ ಆಕರ್ಷಕವೆನಿಸುತ್ತದೆ. ಭರತನಾಟ್ಯದಲ್ಲಿ ಯೋಗವೂ ಸಹಜವಾಗಿಯೇ ಒಳಗೊಂಡಿರುತ್ತದೆ. ಇದರಿಂದ ಕಲಾವಿದರ ಜೀವನ ಸಾರ್ಥಕವೆನಿಸುತ್ತದೆ. ಮೈ ಬಳುಕಿಸಿ ನಾಟ್ಯ ಮಾಡುವುದು ಅಷ್ಟೇನೂ ಸರಳವಲ್ಲ.ಅಂತಹುದರಲ್ಲಿ ಗಡಿಗೆ ಹಾಗೂ ತಟ್ಟೆಯ ಮೇಲೆ ನೃತ್ಯ ಮಾಡುವುದು ಸಾಹಸವೇ ಸರಿ.ಇಂತಹ ಸಾಹಸಮಯ ನೃತ್ಯವನ್ನು ಶಾಂತಲಾ.ಎಚ್. ಮಾಡುತ್ತಿರುವುದನ್ನು ನೋಡಿದರೆ ಎರಡು ಕಣ್ಣು ಕೂಡ ಸಾಲದು.. 6ನೇ ತರಗತಿಯಲ್ಲಿ ಓದುತ್ತಿರುವ ಈ ಬಾಲೆಯ ನೃತ್ಯದ ಹಾವಭಾವ ಮುಖದಲ್ಲಿನ ಮಂದಹಾಸವನ್ನು ನೋಡಿದರೆ ನಾಟ್ಯ ಮಯೂರಿ ಶಾಂತಲೆಯ ಚಿತ್ರಣ ಕಣ್ಣಮುಂದೆ ಬಂದು ನಿಲ್ಲುತ್ತದೆ. ವೇದಿಕೆ ಏರಿ ಆಯಾಸವಿಲ್ಲದೆ ನಿರಂತರವಾಗಿ ನೃತ್ಯ ಮಾಡುವ ಶಾಂತಲಾಗೆ ತಾಯಿ ಇಂದುಮತಿ ಬೆನ್ನೆಲುಬಾಗಿ ನಿಂತಿದ್ಧಾರೆ. ತಂದೆ ಮಹೇಶ ಹಂಜಿ ಅವರ ಪ್ರೋತ್ಸಾಹದಿಂದ ರಾಜ್ಯದ ನಾನಾ ಕಡೆಗಳಲ್ಲಿ ನೃತ್ಯ ಕಾರ್ಯಕ್ರಮ ನೀಡಿ ಗಮನ ಸೆಳೆದಿದ್ದಾಳೆ. ಶಾಲಾ ಮಟ್ಟದಿಂದ ರಾಷ್ಟ್ರಮಟ್ಟದವರೆಗಿನ ಹಲವು ಕಾರ್ಯಕ್ರಮ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾಳೆ. ಆಸಕ್ತಿ:ಶಾಲಾ ದಿನಗಳಲ್ಲಿ ಫ್ಯಾನ್ಸಿ ಡ್ರೆಸ್‌ನಲ್ಲಿ ಭಾಗವಹಿಸುತ್ತಿದ್ದ ಶಂತಲಾ ಮುಂದೆ ಗುಂಪು ನೃತ್ಯದಲ್ಲಿ ಭಾಗವಹಿಸುತ್ತಿದ್ದಳು. ಭಾರತೀಯ ನೃತ್ಯದತ್ತ ಮಕ್ಕಳನ್ನು ಬೆಳೆಸಬೇಕೆಂದು ತಂದೆ ತಾಯಿ ಮಗಳ ಆಸಕ್ತಿಗೆ ನೀರೆರೆದು ಪೋಷಿಸುತ್ತಿದ್ದಾರೆ. ಆರಂಭದ ದಿನಗಳಲ್ಲಿ ಕಂಪ್ಲಿಯ ಕವಿತಾ ವಿಶ್ವನಾಥ ಅವರ ಶಾರದಾ ನೃತ್ಯಕಲಾ ನಿಕೇತನದಲ್ಲಿ ನಾಟ್ಯಾಭ್ಯಾಸವನ್ನು ಒಂದು ವರ್ಷಗಳ ಕಾಲ ಮಾಡಿದಳು. ಇವಳ ಕಲಾ ಪ್ರತಿಭೆಯನ್ನು ಕಂಡು ಹುಬ್ಬಳ್ಳಿಯ ಸುವರ್ಣಾ ಭೂಸನೂರಮಠ ಅವರ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಿ ನ್ಯತ್ಯದ ಹಲವು ಪ್ರಕಾರಗಳನ್ನು ಕಲಿಸಿದ್ದಾರೆ. ಜಾನಪದ ನೃತ್ಯಗಳನ್ನು ಸಹ ಮಾಡುವ ಈ ಶಾಂತಲೆಗೆ ಡಿಸ್ಕೋ,ಪಾಪ್‌ಗಳಂತಹ ನೃತ್ಯ ಹಾಡುಗಳಲ್ಲಿ ಆಸಕ್ತಿ ಇಲ್ಲ. ಓದಿನೊಂದಿಗೆ ನಾಟ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವುದಾಗಿ ಹೆಮ್ಮೆಯಿಂದ ಹೇಳುತ್ತಾಳೆ. ಹುಬ್ಬಳ್ಳಿ, ಹೊಸಪೇಟೆ, ಬಳ್ಳಾರಿ, ಹಗರಿಬೊಮ್ಮನಹಳ್ಳಿ,ಸಿಂಧನೂರ, ಬೆಂಗಳೂರು,ಕೊಪ್ಪಳ ಜಿಲ್ಲಾ ಉತ್ಸವ, ಕೇಂದ್ರ ಸರಕಾರದ ಪ್ರಾಯೋಜಕತ್ವದ 5 ನೇ ಕನ್ನಡಿಗರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದಲ್ಲಿ ನಾಟ್ಯ ಮಾಡಿ ಜನಮನ ಸೆಳೆದಿದ್ದಾಳೆ. ಅಭಿನವ ಬೀಚಿ ಹಾಗೂ ತಂಡದವರೊಂದಿಗೆ ಹಾಸ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ನೃತ್ಯ ಸಂಜೆ ಕಾರ್ಯಕ್ರಮ ನೀಡಿದ್ದಾಳೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ ರಾಜ್ಯ ಮಟ್ಟದ ಕಲಾ ಪ್ರತಿಭೋತ್ಸವದ ಭರತ ನಾಟ್ಯ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆಯು ಇವಳದಾಗಿದೆ.

--ವೀರೇಶ ಹಂಡಿಗಿ (talk) ೧೪:೨೦, ೪ ಡಿಸೆಂಬರ್ ೨೦೧೩ (UTC)


............................................................................................

ಕನಸು ಸಾಕಾರದತ್ತ ರಾಜ್ ಡಾ.ವೀರೇಶ ಹಂಡಿಗಿ ಹುಬ್ಬಳ್ಳಿ

ಕನಸು ಕಾಣುವು ಸರಳ ಆದರೆ  ಅದರ ಯಶಸ್ವಿಗಾಗಿ ಹಗಲಿರುಳು ಶ್ರಮಪಡುವುದು ಅಷ್ಟೆ ಮುಖ್ಯ. ಈ ಮಾತು

ಹುಬ್ಬಳ್ಳಿಯ ಪೃಥ್ವಿರಾಜ್ ಅವರಿಗೆ ಸರಹೊಂದುತ್ತದೆ. ಹಲವು ಧಾರಾವಾಹಿಗಳ ಸಾವಿರಾರು ಕಂತುಗಳನ್ನು ನಿರ್ದೇಶನ ಮಾಡಿದ ಅವರು ತಮ್ಮದೆ ಬ್ಯಾನರ್‌ನಡಿ ಧಾರಾಾವಾಹಿ ನಿರ್ಮಿಸಬೇಕೆಂಬ ಆಸೆಯನ್ನು ಹೊಂದಿದ್ದರು. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಇದೀಗ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಪಂಚರಂಗಿ ಪೋಂವ್ ಪೋಂವ್ ಯಶಸ್ವಿಯಾಗಿ ಮುನ್ನೂರು ಕಂತಿನ ಸಮೀಪದಲ್ಲಿದ್ದಾರೆ. ಮುಲತಃ ಹುಬ್ಭಳ್ಳಿ ತಾಲೂಕು ಮಿಶ್ರಿಕೋಟಿಯವರಾದ ಪೃಥ್ವಿರಾಜ್ ಕುಲಕರ್ಣಿ ಓದಿದ್ದು ಬಿ.ಕಾಂ. ಅಣ್ಣ ಗುರುರಾಜ್ ಧಾರಾವಾಹಿಗಳ ನಿರ್ಮಾಪಕ ಹಾಗೂ ಮಾರ್ಕೆಟಿಂಗ್ ಮಾಡುತ್ತಾರೆ. ಉದಯ ಟಿವಿಯಲ್ಲಿ ಪ್ರಸಾರವಾದ ಅಣ್ಣನ ‘ಆಸರೆ’ ಧಾರಾವಾಹಿಗೆ ಲೆಕ್ಕ ಬರೆಯಲು ಬೆಂಗಳೂರಿಗೆ ಕಾಲಿಟ್ಟು 9 ತಿಂಗಳಕಾಲ ಕೆಲಸ ಮಾಡಿದರು. ಸಂಜೆ ಕೆಲಸ ಮುಗಿದ ನಂತರ ಎಡಿಟಿಂಗ್,ನಿರ್ದೇಶನದ ಬಗ್ಗೆ ತಿಳಿದುಕೊಂಡರು. ಆದರೆ ಅದರಲ್ಲಿ ಆಸಕ್ತಿ ತೋರದೆ ಹುಬ್ಬಳ್ಳಿಗೆ ವಾಪಸ್ಸಾದರು. ನಟಿ ಮೈನಾವತಿಯವರ ಪುತ್ರ ಗುರುದತ್ತ ಅವರ ಸಂಪರ್ಕದಿಂದ ಕರುತೆರೆಯತ್ತ ವಾಲಿದರು. ಸುಶೀಲ ಮೊಕಾಶಿ ಅವರು ಅಂದಿನ ಕಾವೇರಿ ಟಿವಿಗೆ ’ಹೊಸಮನೆತನ’ ಧಾರಾವಾಹಿಗೆ 11 ದಿನಗಳ ಸೆಡ್ಯೂಲ್‌ಗೆ ಸಹನಿರ್ದೆಶಕರಾಗಿ ಕೆಲಸ ಮಾಡಿದರು. ನಂತರ ರವಿ ಗರಣಿ, ಮೋಹನ ಸಿಂಗ್ ಅವರೊಂದಿಗೆ’ ಮಹಾಯಜ್ಞ’(ಕಾವೇರಿಯಲ್ಲಿ ಪ್ರಸಾರ) ಒಂದು ತಾಸಿನ ಮೆಗಾ ಸಿರಿಯಲ್‌ನಲ್ಲಿ ಕೆಲಸ ಮಾಡಿದರು. ಇದರಲ್ಲಿ ಹಿರಿಯ ನಟರಾದ ಎಂ.ಪಿ. ಶಂಕರ್,ರಾಜೇಶ,ಲೋಕೇಶ,ಮೈನಾವತಿ,ಮಾ.ಹಿರಣ್ಣಯ್ಯ,ಶ್ರೀನಗರ ಕಿಟ್ಟಿ ಇತರರಿದ್ದರು. ಆಗ ದೊಡ್ಡ ದೊಡ್ಡ ನಟರೊಂದಿಗೆ ಒಡನಾಟ ಹೆಚ್ಚಿತು. ಸುಮಾರು ಆರೇಳು ವರ್ಷಗಳ ಕಾಲ ಸಹವರ್ತಿಯಾಗಿ ದುಡಿದರು. 6 ವರ್ಷಗಳಿಂದ ಸ್ವತಂತ್ರವಾಗಿ ನಿರ್ದೇಶನಕ್ಕಿಳಿದರು. 1)ಪಾತು -ಸಾತು 2) ಸಿಲ್ಲಿ ಲಲ್ಲಿಯಲ್ಲಿ (851 ಕಂತಿನ ನಂತರ ಸಂಪೂರ್ಣ ಜವಾಬ್ದಾರಿ ಹೊತ್ತರು.)ಇದು 1165 ಕಂತುಗಳಲ್ಲಿ ಪ್ರಸಾರವಾಯಿತು.3) ಪಾಯಿಂಟ್ ಪರಿಮಳ(265 ಕಂತುಗಳಲ್ಲಿ ಪ್ರಸಾರ) 4) ಪಾರ್ವತಿ ಪರಮೇಶ್ವರ ನಿರ್ದೇಶನ ಮಾಡಿದರು.

ಪೃಥ್ವಿರಾಜ್ ಮೊದಲು ಹೆಚ್ಚಾಗಿ ಹಾಸ್ಯ ಧಾರಾವಾಹಿಗಳತ್ತ ಮುಖ ಮಾಡಿದ್ದಾರೆ. ಹಾಸ್ಯ ನಿರ್ದೇಶನದ ಕುರಿತು ವಿಜಯ ಪ್ರಸಾದ ಅವರಿಂದ ಕಲಿತರು. ರವಿ ಗರಣಿ ಹಾಗೂ ಜಿ.ಮೋಹನ್ ಸಿಂಗ್ ಅವರಿಂದ ಭಾವನಾತ್ಮಕ ನಿರ್ದೇಶನದ ಕುರಿತು ಕಲಿತರು.ಆರಂಭದಲ್ಲಿ ಭಾವನಾತ್ಮಕ ಧಾರಾವಾಹಿಗಳನ್ನು ನಿರ್ದೇಶನ ಮಾಡಿದರು. ನಂತರದ ದಿನಗಳಲ್ಲಿ ಹಾಸ್ಯ ಧಾರವಾಹಿಗಳತ್ತ ಗಮನ ಹರಿಸಿದರು. ಕಿರುತೆರೆಯೇ ಇಷ್ಟ: ಧಾರಾವಾಹಿಗಳನ್ನು ಕುಟುಂಬದ ಜನರೆಲ್ಲ ಸೇರಿ ನೋಡುತ್ತಾರೆ. ಹೀಗಾಗಿ ಇಡಿ ಕುಟುಂಬವನ್ನು ಹಿಡಿದಿಡುವ ಹಾಗೂ ಯಾವುದೂ ಅತೀ ಎನಿಸದೆ ಇರುವಂತೆ ತೋರಿಸಬೇಕಾಗುತ್ತದೆ. ತಿಳಿಹಾಸ್ಯವಿದ್ದರೆ ಒಳ್ಳೆಯದು. ಎಲ್ಲರನ್ನು ಒತ್ತಾಯಪೂರ್ವಕವಾಗಿ ನಗಿಸಲು ಸಾಧ್ಯವಿಲ್ಲ ದೇಹದ ಹಾವಭಾವ ಮುಖದಲ್ಲಿನ ಭಾವನೆಗಳನ್ನು ನೋಡಿದರೆ ನಗು ಬರಬೇಕು ಎಂಬ ವಿಚಾರ ಅವರದು.

ಪಂಚರಂಗಿ ಪೋಂವ್ ಪೋಂವ್ ಯಶಸ್ವಿಯಿಂದಾಗಿ ಪೃಥ್ವಿರಾಜ್ ಫುಲ್ ಖುಷ್ ಆಗಿದ್ದಾರೆ. ಆರಂಭದಲ್ಲಿ ಹೆದರಿಕೆ ಇತ್ತು ಇದೀಗ ಒಂದು ವರ್ಷ ಪೂರೈಸಿದೆ. ಈ ಧಾರಾವಾಹಿಗೆ ಭರತ್ ಮತ್ತು ದಕ್ಷಿಣಾಮೂರ್ತಿ ಅವರ ಸ್ಕ್ರೀಪ್ಟ್. ಕ್ಯಾಮರಾ ಪವನ ಅವರದ್ದು ಮಹೇಶ ಅವರ ಸಂಕಲನ ಉತ್ತಮವಾಗಿದೆ. ಎಲ್ಲ ಕಲಾವಿದರ ಸಹಕಾರದಿಂದ ನಾನು ಈ ಗುರಿ ಮುಟ್ಟಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಇನ್ನೊಂದು ಧಾರಾವಾಹಿ ನಿರ್ಮಿಸುವ ಸಿದ್ಧತೆಯಲ್ಲಿರುವುದಾಗಿ ಪೃಥ್ವಿರಾಜ್ ಹೇಳುತ್ತಾರೆ. ಹುಡುಕಾಟ: ಯುವ ಕಲಾವಿದರು ಹಾಗೂ ರಂಗಭೂಮಿಯಲ್ಲಿಯ ಅನುಭವವಿರುವ ಕಲಾವಿದರನ್ನು ಕಿರು ತೆರೆಗೆ ಪರಿಚಯಿಸಬೇಕು ಎಂಬ ಉದ್ದೇಶದಿಂದ ಯಾವಾಗಲೂ ಹುಡುಕಾಟದಲ್ಲಿಯೇ ಇದ್ದಾರೆ. ತೆರೆಯ ಮುಂದೆ ಒಲ್ಲೆ: ಅಜಾನುಭಾವ ಶರೀರ,ಸುಂದರ ಮುಖ ಹೀರೊ ಆಗಲು ಎಲ್ಲ ಅರ್ಹತೆಗಳಿದ್ದರೂ ಕ್ಯಾಮರಾ ಮುಂದೆ ಬೇಡ ಅನ್ನುತ್ತಾರೆ. ಕೇವಲ ಬಣ್ಣ ತುಂಬುವ ಕೆಲಸ ಮಾಡುವೆ ಅದೇ ನನಗೆ ಸಾಕು ಎನ್ನುತ್ತಾರೆ ಪ್ರಥ್ವಿರಾಜ್. ಜನರು ನಟರನ್ನು ಗುರುತಿಸುತ್ತಾರೆ. ನಿರ್ದೇಶಕರನ್ನು ಗುರುತಿಸುವುದು ಕಡಿಮೆ ಎನ್ನುವ ನೋವು ಅವರಲ್ಲಿದೆ. .............................................................


ಟೈಲರಿಗೆ ಒಲಿದ ಜಾನಪದ ಕಲೆ

ಆಧುನಿಕ ಯುಗದ ಭಾರತದಲಿ ಜಾನಪದ ಸಾಹಿತ್ಯ ಕೊರಗುತ್ತಿದೆ. ಜಾನಪದ ಕಲೆಗಳನ್ನು ಉಳಿಸುವತ್ತ ಯುಕವರು ಚಿಂತನೆ ನಡೆಸುವುದು ಇಂದಿನ ಅಗತ್ಯವಾಗಿದೆ. ಜಾನಪದ ಹೆಸರಿನಲ್ಲಿ ಅಶ್ಲೀಲತೆ ಮೆರೆಯುತ್ತಿದೆ. ಸಾಮಾಜಿಕ ಪರಿವರ್ತನೆಯಲ್ಲಿ ಜಾನಪದ ಸಾಹಿತ್ಯ ತನ್ನದೇಯಾದ ಕೊಡುಗೆ ನೀಡಿದೆ. ಜನಸಾಮಾನ್ಯರ ಹೃದಯದ ಭಾಷೆಯಲ್ಲಿಯೇ ಜಾನಪದ ಇರುವುದರಿಂದ ಅಬಾಲವೃದ್ಧರವರಿಗೂ ಇದು ತಿಳಿಯುತ್ತಿದೆ. ವಿಶ್ವವಿದ್ಯಾಲಯದ ಮಟ್ಟದಲ್ಲಿ ಅಧ್ಯಯನ ಮಾಡಿದರೆ ಸಾಲದು. ಜನರಲ್ಲಿ ಈ ಜಾನಪದ ಸಾಹಿತ್ಯ ಹರಿದಾಡದಬೇಕು. ಇಂತಹ ಮಹೋನ್ನತ ಉದ್ಧೇಶವಿರಿಸಿಕೊಂಡ ನವಲಗುಂದ ತಾಲೂಕಿನ ನಾಗನೂರ ಗ್ರಾಮದ ಇಮಾಮ್‌ಸಾಬ ವಲ್ಲೆಪ್ಪನವರದು ಅದ್ವಿತೀಯ ಸಾಧನೆ. ಐ.ಎಂ. ಟೇಲರ್ ಎಂದೇ ಪ್ರಸಿದ್ದವಾಗಿರುವ ವಲ್ಲೆಪ್ಪನವರ ವೇದಿಕೆ ಏರಿ ಡೊಳ್ಳು ಬಾರಿಸುತ್ತ ಹಾಡಿದರೆ ಕೇಳುಗರು ಮೂಕವಿಸ್ಮಿತರಾಗುತ್ತಾರೆ. ತಾಯಿ ಸೈದಮ್ಮ ಹಾಡುತ್ತಿದ್ದ ಸೋಬಾನ ಪದಗಳನ್ನು ಕೇಳಿ ಪ್ರಭಾವಿತನಾದ ಇಮಾಮಸಾಬ ಗ್ರಾಮದಲ್ಲಿಯ ಆತ್ಮಾನಂದರ ಪ್ರಭಾವ ಇವರ ಮೇಲೆ ಗಾಢವಾಗಿ ಬೀರಿದೆ. ಹೀಗಾಗಿ ಜಾನಪದ ಸಂಸ್ಕೃತಿಗೆ ತಾಯಿಯೇ ಮೊದಲ ಗುರುವಾಗಿ ಮಗನಿಗೆ ಹರಸಿದ್ದನ್ನು ನೆನೆಯುತ್ತಾರೆ. ಹೊಟ್ಟೆಪಾಡಿಗೆ ಟೇಲರಿಂಗ್ ಮಾಡಿದರೂ ಹವ್ಯಾಸ ಡೊಳ್ಳಿನ ಪದ ರಿನಾಯತ ಪದಗಳನ್ನು ಹಾಡುವುದು. ಇದೇ ಹಾದಿಯಲ್ಲಿ ಮಗ ಗೌಡನನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿದ್ದಾರೆ. 45 ವರ್ಷಗಳಿಂದ ಈ ಕಲಾಸೇವೆ ಕೈಗೊಂಡ ವಲ್ಲೆಪ್ಪನವರ ಧಾರವಾಡದ ಕರ್ನಾಟಕ ಜಾನಪದ ಕಲಾ ಅಭಿವೃದ್ಧಿ ಸಂಸ್ಥೆ ಸ್ಥಾಪಿಸಿ ರಚನಾತ್ಮಕ ಕಾರ್ಯ ಕೈಗೊಂಡಿದ್ದಾರೆ. ಜಾನಪದ ಅಕಾಡಮಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಉತ್ತರ ಕರ್ನಾಟಕ ಜನಪದ ಸಂಘದ ಕಾರ್ಯದರ್ಶಿಯಾಗಿ ಕಾರ್ಯ ಮಾಡಿದ್ದಾರೆ. ದೂರದರ್ಶನ, ರೇಡಿಯೋಗಳಲ್ಲಿ ಇವರ ಡೊಳ್ಳಿನ ಪದಗಳು ಪ್ರಸಾರಗೊಂಡಿವೆ. ಆಕಾಶವಾಣಿಯ ಬಿ ಗ್ರೇಡ್ ಕಲಾವಿದರೂ ಹೌದು. ವಿಶೇಷ ಕಾರ್ಯಕ್ರಮ ಜಾತ್ರೆಗಳಿದ್ದಲ್ಲಿ ಇವರು ತಮ್ಮ ತಂಡದೊಂದಿಗೆ ಅಲ್ಲಿ ಕಾರ್ಯಕ್ರಮ ನೀಡುತ್ತಾರೆ. ರಾಜ್ಯದ ಹಲವೆಡೆ ಕಾರ್ಯಕ್ರಮಗಳನ್ನೂ ನೀಡಿ ಸೈ ಎನಿಸಿಕೊಂಡಿದ್ದಾರೆ. ಸ್ವಂತ ರಚನೆ: ಭಾವೈಕ್ಯ ಪ್ರತಿಪಾದಕ, ನೀತಿ ಬೋಧಕವಾದ ಹಾಡುಗಳನ್ನು ಸ್ವತಃ ರಚಿಸಿ ಹಾಡುತ್ತಾರೆ. ಸಾಕ್ಷರತಾ ಯೋಜನೆಯಲ್ಲಿ ವಿದ್ಯೆಯ ಮಹತ್ವವನ್ನು ಹಳ್ಳಿ ಹಳ್ಳಿಗೆ ಹರಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರು ಇವರ ಅನೇಕ ಕಾರ್ಯಕ್ರಮಗಳಿಗೆ ನೆರವು ನೀಡಿದೆ. ಮಹಾರಾಷ್ಟ್ರ, ನಾಗಾಲ್ಯಾಂಡ್ ಹಾಗೂ ಗೌಹಾತಿಯ ದೀಮಾಪುರದಲ್ಲಿ ಡೊಳ್ಳಿನ ಹಾಡಿನ ಕಂಪು ಬೀರಿದ್ದಾರೆ. ನಿಜಗುಣ ಶಿವಯೋಗಿಗಳ ತತ್ವಪದಗಳಿಗೆ ಆತ್ಮಾನಂದರ ಅಧ್ಯಾತ್ಮ ಅನುಭವಗಳ ಪದಗಳ ರೂಪು ನೀಡಿ ಜನರ ಮುಂದೆ ಸಾದರಪಡಿಸುವ ರೀತಿಗೆ ಮರುಳಾಗದವರೇ ಇಲ್ಲ. ಹಲವಾರು ಸಂಘ ಸಂಸ್ಥೆಗಳೊಂದಿಗೆ ನಿಕಟ ಸಂಬಂಧ ಹೊಂದಿರುವ ಇಮಾಮಸಾಬ್ ಜನಪರ ಉಳಿವಿಗೆ ಟೊಂಕ ಕಟ್ಟಿ ನಿಂತಿದ್ದಾರೆ. * (ತಲೆಗೆ ಪೇಟಾ ಸುತ್ತಿ ಹಾಡಲು ಶುರು ಮಾಡಿದರೇ ಕೇಳುವುದೇ ಒಂದು ಸೊಗಸು) ಕ್ಯಾಸೆಟ್: ಡೊಳ್ಳಿನ ಹಾಡುಗಳು:ಘಿಚ್ಟ1. ಬಸವಣ್ಣ ಭಕ್ತಿ, 2. ಹುಬ್ಬಳ್ಳಿ ಹೂಗಾರ 3. ಇಂದು ನಾಳೆ ಯಾಕೆ ಚಿಂತಿ 4. ಹಾಡು ಬಾ ಗೆಳೆಯ 5. ಡೊಳ್ಳಿನ ಪದಗಳು 6. ನಾಗನೂರಿನ ಡೊಳ್ಳನ ಪದಗಳು. 7. ಅತ್ತೆ ಮನೆಯ ಸೊಸೆ (ರೈತರ ಪದಗಳು) 8. ಬಡತನದ ಕಥೆ ಕೇಳಿರಿ (ರಿವಾಯತ ಪದ) ವಿಡಿಯೋ ಸಿಡಿ ಡೊಳ್ಳಿನ ಹಾಡುಗಳು:ಘಿಚ್ಟ1. ಗುರುವಿನ ಗುಲಾಮ. 2. ಜಾನಪದ ಸೊಗಡು, 3. ಭಾವೈಕ್ಯತೆಯ ಬುತ್ತಿ. 4. ಭಕ್ತಿ ಭಂಡಾರ. 5. ಅನುಭಾವ ಅಮೃತ. ಇ8ವರ ಡೊಳ್ಳಿನ ಹಾಡುಗಳು ಉತ್ತರ ಕರ್ನಾಟಕದಲ್ಲಿ ಜನಜನನಿತವಾಗಿವೆ. ಜನಪರ ಸಾಹಿತ್ಯ ಜನರ ಬಾಯಲ್ಲಿ ನಿರಂತರ ನಲಿದಾಡಬೇಕು. ಸಿನಿಮಾ ಹಾಡುಗಳಲ್ಲಿ ಇವುಗಳು ಕೊಚ್ಚಿ ಹೋಗಬಾರದು. ಇವುಗಳಿಗೆ ಸಂಘ ಸಂಸ್ಥೆಗಳ ಸಹಕಾರ, ಸರಕಾರದ ನೆರವು ದೊರೆತರೆ ಜಾನಪದ ಸಾಹಿತ್ಯ ಉಳಿದು ಬೆಳೆದು ಮುಂದಿನ ತಲೆಮಾರಿಗೂ ದೊರೆಯಲಿ ಎಂಬುದು ಪಿ.ಸಿ. ವಲ್ಲೆಪ್ಪನವರ ಅನಿಸಿಕೆ.

ವೀರೇಶ ಹಂಡಿಗಿ

....................................................................


ರದ್ದಿಯಿಂದಲೇ ಜೀವನ

ಖಾಜಾ ಕಲ್ಲೇವಾಲಿ ರದ್ದಿ ಪೇಪರ್ ವ್ಯಾಪಾರಿ, ಹುಬ್ಬಳ್ಳಿ

ನಿರೂಪಣೆ: ವೀರೇಶ ಹಂಡಿಗಿ ರದ್ದಿ ಪೇಪರ್ ವ್ಯಾಪಾರ ಮಾಡಾಕ ದಿನಾ 10 ಕಿ.ಮೀ. ಗಿಂತ ಹೆಚ್ಚು ದೂರ ಅಡ್ಡಾಡತಿನಿ. ದಿನಾ ನಸಿಕಿನ್ಯಾಗ 6ಕ್ಕೆ ಮನಿ ಬಿಡತೀನಿ.ತಂಡಿ ಇದ್ರು ಅಷ್ಟ ಇರಲಿಲ್ಲ ಅಂದ್ರು ಅಷ್ಟ ಏಳಬೇಕ್ರಿ. ಡಿಪೋದಾಗ ಹೊಸ ಪ್ಲಾಸ್ಟಿಕ್ ಚೆರಗಿ, ಬಕಿಟ್, ಟಬ್ ತಗೊಂಡು 7 ಗಂಟೆ ಅಂದ್ರ ವ್ಯಾಪಾರ ಸುರು ಮಾಡ್ತಿನ್ರಿ. ಮಕ್ಳು ಇನ್ನು ಮಲಗಿರತಾವು ನಾನು ಮನಿ ಬಿಟ್ಟಿರತೀನಿ. ಒಮ್ಮೇ ಮಕ್ಳನ್ನು ಸಂಜಿ ಮುಂದ ನೋಡೂದು.ನಸಿಕಿನ್ಯಾಗ ಮನ್ಯಾಗ ಏನು ಮಾಡಾಕ ಆಗಾಂಗಿಲ್ಲ. ಹೊಟೇಲ್‌ದಾಗ ಎನರ ತಿಂದ ಚಾ ಕುಡಿತಿನಿ. ಸಂಜೆ 4ರ ತನಕ ಅಡ್ಡಾಡಿ ಮನಿಗೆ ಹೋಗ್ತಿನಿ. ಆವಾಗ ಊಟ.ಮೊದ್ಲು ಈ ದಂಧಾ ಸುರು ಮಾಡಿದಾಗ ಬಾಳ ಅಡ್ಡಾದಿದಾಗ ಕಾಲು ನೋಯ್ತಿತ್ತು. ಇಗ ಅದು ರೂಢಿ ಆಗೆತ್ರಿ. ನನ್ನ ಮನಿ ಹಳೆ ಹುಬ್ಬಳ್ಳಿ ಮೆಹಬೂಬ ನಗರದಲ್ಲಿ ಐತಿ. ಮನ್ಯಾಗ ನಾನು, ಹೆಂಡ್ತಿ ,ಮೂರು ಗಂಡು ಮಕ್ಳು , ನನ್ನ ತಮ್ಮ ಇರತೀವಿ. ಹಿರಿ ಮಗ 3 ವರ್ಷದವಾ, ಎರಡನೆದವಾ 2 ವರ್ಷ, ಮೂರನೇದವ 1 ವರ್ಷದವಾ ಅದಾನ. ವರ್ಷಕ್ಕೊಂದು ಮಕ್ಕಳು ಆದೂರ್ರಿ. ತಮ್ಮನ ಮದುವಿ ಆಗಿಲ್ಲ.ಅವನ ಜವಾಬ್ದಾರಿ ನನ್ನ ಮ್ಯಾಲಿ ಐತಿ. ನಾನು ಸಾಲಿ ಕಲಿತಿಲ್ಲ. ನಮ್ಮಪ್ಪ ಕಾಲಿಚೀಲ (ಬಾರದಾನ) ಮಾರತ್ತಿದ್ದ. ನಾ ಆವಾಗ ಸಣ್ಣವ ಇದ್ದೆ. ನನ್ನ ಗೆಳ್ಯಾರು ರದ್ದಿ ಪೇಪರ್ ಮಾರುದನ್ನ ನೋಡ್ತೀದ್ದೆ. ಅವರ ಜೋಡಿ ಹೋಗ್ತಿದ್ದೆ. ಒಂದು ತಿಂಗಳು ಅವರ ಜೋಡಿ ಹೋದೆ. ಈ ಯಾಪಾರ ಬಗ್ಗೆ ತಿಳಕೊಂಡೆ. ಆಮ್ಯಾಗ ಸ್ವಂತ ಮಾಡಾಕ ಸುರು ಮಾಡಿದೆ. 12 ವರ್ಷದಿಂದ ರದ್ದಿ ಪೇಪರ್ ವ್ಯಾಪಾರ ಮಾಡಾಕತ್ತಿನಿ. ದಿನಕ್ಕೆ 300ರಿಂದ 400 ರೂ. ಬರತೈತಿ. ಕೆ.ಜಿ. ಪೇಪರಿಗೆ 1ರಿಂದ 1.50 ಪೈಸಾ. ಲಾಭ ಬರತೈತ್ರಿ. ಪೇಪರ್ ಮತ್ತು ರಟ್ಟು ಒಂದು ಕೆ.ಜಿ.ಗೆ 7 ರೂಪಾಯಿಗೆ ತಗೋತಿವಿ. ದನ್ನ ಬಿಟ್ಟು ಬ್ಯಾರೆ ಕೆಲಸಾ ಬರಾಂಗಿಲ್ಲರಿ. ದೇವರ ಹೆಸರ ಹೇಳಿ ದಂಧಾ ಸುರು ಮಾಡಿನ್ರಿ. ರದ್ದಿ ಪೇಪರ್ ತೂಕಾ ಮಾಡಿ ಕೊಡುವಾಗನೂ ಜನ ಸಾಕಷ್ಟ ಚೌಕಾಶಿ ಮಾಡತಾರ್ರಿ. ಏನೋ ಬಡವರು ದುಡ್ಕೋಂಡ ತಿಂತಾರ ಅನ್ನು ದೊಡ್ಡ ಮನಸ್ಸು ಮಾಡವರ್ರು ಈಗ ಬ್ಹಾಳ ಕಮ್ಮಿ ಅದಾರ್ರಿ. ಹ್ಯಾಂಗೋ ಕಲತ ಯಾಪಾರದಾಗ ಜೀವನ ನಡಸಾಕತ್ತೇನಿ. ಸ್ವಂತ ಮನಿ ಇಲ್ಲ .ಬಾಡಿಗಿ ಅದಿನಿ. 1000 ರೂ. ಬಾಡಿಗೆ ಕೊಡ್ತಿನಿ. ಜೀವನ ಬಾಳ ಕಷ್ಟಾರಿ. ನನ್ನ ತಮ್ಮ ಬೆಳದ ನಿಂತಾನ ಅವನ ಮದುವಿ ಮಾಡೋ ಜವಾಬ್ದಾರಿ ನನ್ನ ಮ್ಯಾಲೆ ಐತ್ರಿ. ದುಡದ ರೊಕ್ಕಾ ಜೀವನಕ ಸಾಟಿ ಆಕೇತಿ. ಉಳುಸೊ ಮಾತ ಇಲ್ರಿ.ತಮ್ಮನಿಗೆ ಈ ದಂಧೆ ಬ್ಯಾಡ ಏನರ ಹಚ್ಚಬೇಕಂತ ಅದೀನಿ. ದೇವರ ಕೈ ಹಿಡಿಬೇಕ ನೋಡ್ರಿ. ಬ್ಯಾರೆ ದಂಧಾ ಮಾಡಿದರ ದಿನಾ ಕೂಲಿ 200 ರೂ. ಸಿಗತೈತಿ.ಬ್ಯಾರೆ ಕೆಲಸ ಮಾಡಾಕ ಬರಾಂಗಿಲ್ಲ. ಇದರಾಗ 300ರಿಂದ 400 ಸಿಗತೈತಿ. ನಮ್ಮ ದುಡಿಮೆ ಆವತ್ತಿನ ದಿನಕ್ಕೆ ಸಾಕಾಕೈತಿ. ಒಂದಿನಾನೂ ಬಿಡುವಂಗಿಲ್ಲ. ಬಿಟ್ರ ನಡ್ಯಾಂಗಿಲ್ಲ. ದಂಧೆ ನಿಂತ್ರ ಆವತ್ತಿನ ಊಟ ಅಷ್ಟಕ್ಕಷ್ಟ ಆಕೇತಿ. ಅದಕ ಒಂದಿನಾನೂ ತಪ್ಪಿಸುವಂಗಿಲ್ಲ. ಸಾಲಿ ಕಲಿತಿದ್ರ ಏನಾರ ಮಾಡಕ ಬರ್ತಿತ್ತು. ಸಾಲಿ ಕಲಿದಾವ್ರಿಗೆ ಯಾವ ಕೆಲಸ ಬರ್ತೈತಿ ಹೇಳ್ರಿ. ಈ ಪೇಪರ್ ವ್ಯಾಪಾರಕ ಬಾಳ ಮಂದಿನೂ ಅದಾರ್ರಿ. ಹಿಂಗಾಗಿ ಲಾಭ ಕಡಿಮೆ ಆಗಾಕ ಹತ್ತೈತಿ. ಮಳಿ ಹತ್ತಿದ್ರ ದಂಧಾ ಬಂದ್ ಆಕೆತ್ರಿ. ಎಷ್ಟೊ ಸಲಾ ಲಾಭ ಕಡಿಮಿ ಆಗಿ ಒದ್ದಾಡಿನ್ರಿ. ನನ್ನ ಹಿಂದ ಮುಂದ ಯಾರ ಅದಾರ್ರಿ? ಸಹಾಯ ಮಾಡೋ ಮಂದಿ ಇಲ್ರಿ.ನಮ್ಮ ಹಬ್ಬಾ ಬಂದ್ರ ಖರ್ಚು ಹೆಚ್ಚು. ತ್ರಾಸ ಆದ್ರೂ ಚಿಂತಿ ಇಲ್ಲ ಅನಕೊಂಡು ಎಲ್ಲರಿಗೂ ಹೊಸಾ ಅರಿಬಿ ತರತೀನ್ರಿ. ಮಕ್ಳು ಹೊಸಾ ಅರಿಬಿ ಹಕ್ಕೊಂಡು ಅಡ್ಡಾಡಿದ್ರ.ಬಾಳ ಖುಷಿ ಆಕೇತ್ರಿ. ಮಕ್ಕಳನ್ನ ನೋಡಿದ್ರ ಸಾಲದ ಚಿಂತಿ,ದುಡಿಮಿ ಚಿಂತಿ ಮರಿತೈತ್ರಿ.ದಂಧೆದಿಂದ ನಾವು ಉದ್ದಾರ ಆಗೂದಿಲ್ರಿ. ಎರಡು ಹೊತ್ತು ಉಣ್ಣಾಕ ಸಿಗತೈತಿ. ಮಕ್ಕಳು ದೊಡ್ಡವರಾದ್ರ ಅವರನ್ನ ಸಂಭಾಳಿಸೋದು ಹೆಂಗ ಅನ್ನೂ ಚಿಂತಿ ಐತ್ರಿ. ಕಣ್ಣೀರ ಕಪಾಳಕ್ಕ ಬರತಾವ್ರಿ. ಜೀವನ ಬ್ಯಾಸರ ಅನಸತೈತಿ.ಕಲತವರನ್ನು ನೋಡಿದ್ರ ನಾ ಯಾಕ ಹಿಂಗಾಗಲಿಲ್ಲ ಅನಸತೈತ್ರಿ. ನಾನಾರ ಸಾಲಿ ಕಲಿಲಿಲ್ಲ. ಮಕ್ಕಳನಾರ ಕಲಿಸಬೇಕ ಅನ್ನಿಸತೈತಿ.ಸಾಲಿಗೆ ಹೋಗೊ ಮಕ್ಳನ್ನ ಕಂಡ್ರ ಪ್ರೀತಿ ಬರತೈತ್ರಿ. ದೇವರ ಕೈ ಹಿಡಿದ್ರ ಸರಳ ಆಕೇತ್ರಿ. ನನಗ ಬಂದ ಕಷ್ಟ ನನ್ನ ಮಕ್ಕಳಿಗೆ ಕೊಡಬ್ಯಾಡಪಾ ಅಂತ ಅಲ್ಲಾನ ಕೇಳ್ಕೋತಿನ್ರಿ.

...........................................................


ಗಾಳಿ ಗುದ್ದಿ ಕರೆಂಟ ತಂದ par ಯುವಕ -ಡಾ.ವೀರೇಶ ಹಂಡಿಗಿ

ರಾಷ್ಟ್ರೀಯ ಹೆದ್ದಾರಿ ಮೂಲಕ ಚಿತ್ರದುರ್ಗಕ್ಕೆ ಹೋಗುವಾಗ ಬೆಟ್ಟಗಳ ಮೇಲಿನ ಗಾಳಿಯ ಯಂತ್ರಗಳನ್ನು ನೋಡಿದ ಯುವಕನೊಬ್ಬನಿಗೆ ಮಿಂಚಿನ ಸಂಚಾರವಾಯಿತು. ಆ ಮಿಂಚಿನ ಸಂಚಾರವೇ ವಿದ್ಯುತ್ ಆಗಿ ಪರಿಣಮಿದ್ದು ಆಶ್ಚರ್ಯವೇ ಸರಿ. 10 ನೇ ವರ್ಗದಲ್ಲಿ ವಿಜ್ಞಾನದಲ್ಲಿ ಇಲೆಕ್ಟ್ರೋ ಮ್ಯಾಗ್ನೆಟಿಕ್ ಇಂಡಕ್ಷನ್ ಜನರೆಟರ್ ತಿರುಗಿದರೆ ಕರೆಟ್ ಬರುತ್ತದೆ ,ಕೆಯಿಂದ ,ನೀರಿನಿಂದ ವಿದ್ಯುತ್ ತಯಾರಿಸುವ ಕುರಿತು ತಿಳಿದುಕೊಂಡ. ಮನೆಗೆ ಬಂದು ಅದರ ಬಗ್ಗೆ ತಲೆಕೆಡಿಸಿಕೊಂಡ.ಇಂತಹ ಎಲ್ಲ ಘಟನೆಗಳು ಒಬ್ಬ ಯುವಕನ ಮೇಲಾದಾಗ ಆತನ ಮನಸ್ಥಿತಿ ಒಂದು ಹಂತಕ್ಕೆ ಬಂದು ನಿಂತಿತು. ಇಂತಹ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಅದಮ್ಯ ಛಲ ಹೊತ್ತ.ಅಂದಿನಿಂದಲೇ ಕಾರ್ಯಪ್ರವತ್ತನಾದ. ಇಂಥ ಛಲ ಹೊಂದಿದವನೇ ಶಿಶಿಧರ ಆನಂದಮಠ. ಇವನ ವಿದ್ಯುತ್ ಹುಚ್ಚು ಮನೆಗೆ ಬೆಳಕು ಹಚ್ಚಿತು.ಇವನ ಹುಮ್ಮಸ್ಸಿಗೆ ಮಾವ ಶಿವಾನಂದ ಸಾಲಿಮಠ ಬೆನ್ನೆಲುಬಾಗಿ ನಿಂತರು. ಶಶಿಧರ ಹುಬ್ಬಳ್ಳಿಯ ವೌಂಟ್ ಫರಾನ್ ಪಾಲಿಟೆಕ್ನಿನಲ್ಲಿ ಇಲೆಕ್ಟ್ರಿಕಲ್ ಆ್ಯಂ ಇಲೆಕ್ಟ್ರಾನಿಕ್‌ನಲ್ಲಿ ಮೂರನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದಾನೆ. ಹುಬ್ಬಳ್ಳಿಯ ಮೊಡಕಾ ಬಜಾರನಲ್ಲಿ ತಿರುಗಿ ಕಂಡದ್ದನ್ನೆಲ್ಲ ಖರೀದಿಸಿ ತಂದ. ಫ್ಯಾನ್ ಮಾಡಿದ ಅದರಿಂದ ಗಾಳಿ ವಿದ್ಯುತ್ ಪಡೆಯುವತ್ತ ಶ್ರಮಿಸಿದ. ಒಟ್ಟರೆ 3 ವಿಂಡ ಟಬ್ರೆನ್ ತಯಾರಿಸಿ ಮನೆಯ ಮೇಲೆ 20 ಅಡಿ ಎತ್ತರದಲ್ಲಿ ಅಳವಡಿಸಿದ. ಫ್ಯಾನ್ ತಿರುಗಿ ವಿದ್ಯುತ್ ಉತ್ಪತ್ತಿಯಾದಾಗ ಇವನಲ್ಲಿ ವಿದ್ಯುತ್ ಸಂಚಾರ. ಮನೆಗೂ ಸ್ವಂತ ತಯಾರಿಸಿದ ವಿದ್ಯುತ್ ಹರಿದ ಸಂಭ್ರಮ. ಮನೆ ಮಂದಿಗೆಲ್ಲ ಸಂತಸದಿಂದ ಆತನ ಜಾನ್ಮೆಯನ್ನು ಹೊಗಳಿದ್ದೆ ಹೊಗಳಿದ್ದು.

ಅಕ್ಷಯ ಕಾಲೊನಿಯ ಸಾಲಿಮಠ ಅವರು ಮನೆಗೆ ಇದೀಗ ಹೆಸ್ಕಾಂನವರ ವಿದ್ಯುತ್ ಬಳಸುತ್ತಿಲ್ಲ. ಅಳಿಯ ನೀಡಿದ ವಿದ್ಯುತ್ ಮನೆಬೆಳಗುತ್ತಿದೆ. ಮತ್ತು ಹಣ ಉಳಿತಾಯವೂ ಆಗಿದೆ. ಟಿವಿ.ಟ್ಯುಬ್ ಲೆಟುಗಳು, ಫ್ಯಾನ್, ನೀರೆತ್ತುವ ಮೋಟಾರ್ ಎಲ್ಲವೂ ಸರಾಗವಗಿ ಕಾರ್ಯ ನಿರ್ವಹಿಸುತ್ತಿವೆ.

ಪ್ರತಿ ಗಂಟೆಗೆ 4 ಕಿಮಿ ಗಾಳಿ ವೇಗದ ಗಾಳಿ ಬೀಸಿದಾಗ ಒಂದು ಟ್ಬ್ರೆನ್ 400 ವ್ಯಾಟ್ , ಇನ್ನು 2 ಟ್ಬ್ರೆನ್ 40 ವ್ಯಾಟ್ ವಿದ್ಯುತ್ ಉತ್ಪಾದಿಸುತ್ವೆ.ಒಟ್ಟಾರೆಯಾಗಿ 440 ವ್ಯಾಟ ಪ್ರತಿಗಂಟೆಗೆ ವಿದ್ಯುತ್ ಉತ್ಪಾದನೆ ಯಾಗುತ್ತದೆ. ಬ್ಯಾಟರಿಯಲ್ಲಿ 2 ಯುನಿಟ್ ಸಂಗ್ಹಿಸುತ್ತದೆ. ತಿಂಗಳಿಗೆ 120 ಯುನಿಟ್ ವಿದ್ಯುತ್ ಸಂಗ್ರಹವಾಗುತ್ತದೆ. 60-65 ಸಾವಿರ ವೆಚ್ಚ: ಇಂದಹ ವಿಂಡ್ ಟಬ್ರೆನ್ ಸ್ಥಾಪಿಸಿದರೆ 60-65 ಸಾವಿರ ರೂ. ಖರ್ಚು ಆಗುತ್ತದೆ 30-35 ವರ್ಷಗಳವರೆಗೆ ಯಾವುದೇ ಖರ್ಚು ಬರಲಾರದು. ಇದು ಪರಿಸರ ಪೂರಕವಾಗಿದೆ. ಆನರೇಟರ್ ಇನ್ವೆಟರ್ ಬದಲು ಇಬನ್ನು ಬಳಸಿದರೆ ಉತ್ತಮ ಎನ್ನುತ್ತಾರೆ ಶಶಿಧರ. ಉತ್ಪಾದನೆ ಹೇಗೆ?: ವಿಂಡ್ ಟಬ್ರೆನ್‌ನಿಂದ ವಿದ್ಯುತ್ ಶಕ್ತಿ ಬ್ಯಾಟರಿಗೆ ಹೋಗುತ್ತದೆ. ಅಲ್ಲಿಂದ ಇನ್ವೆಟರ್‌ನಲ್ಲಿ ಸಂಗ್ರಹಿಸಿ ಮನೆಗೆ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗುತ್ತದೆ.

ಇನ್ನಷ್ಟು ಸಂಶೋಧನೆ: ಬಹುಮಹಡಿ ಕಟ್ಟಡದಲ್ಲಿ ನೀರಿನ ಟ್ಯಾಂಕ್ ತುಂಬಿದ್ದು ಗೊತ್ತಾಗಲು ವಾಟರ್ ಇಂಡಿಕೇಟರ್ ಅಳವಡಿಸಲಾಗಿದೆ. ಇದನ್ನು ಮಾರುಕಟ್ಟೆ ಬೆಲೆಯಲ್ಲಿ 3500 ರಿಂದ 7000 ರೂವರೆಗೆ ತಯಾರಿಸಿದರೆ ನಾವೇ ತಯಾರಿಸಿದರೆ 700 ರಿಂದ 1000 ರೂ.ದಲ್ಲಿಯೇ ಇದನ್ನು  ಮಾಡಲಾಗಿದೆ.

ಮುಂದಿನ ಗುರಿ:ಗಾಳಿಯಿಂದ ಹೊದಲ್ಲಿ ಪಂಪ್‌ಸೆಟ್ ಆರಂಬಿಸುವ ಕುರಿತು ಯೋಜನೆ ಹಾಕಿಕೊಂಡಿದ್ದೇನೆ.ಅದರ ಪ್ರಯತ್ನದಲ್ಲಿದ್ದೇನೆ ಎಂದು ಶಶಿಧರ ಹೇಳುತ್ತಾರೆ. ನೆಸರ್ಗಿಕವಾಗಿ ಗಾಳಿ ಮತ್ತು ಸೂರ್ಯನ ಬೆಳಕಿನಿಂದ ವಿದ್ಯುತ್ ಪಡೆಯುವದರಿಂದ ರಾಷ್ಟ್ರೀಯ ಉಳಿತಾಯವಾಲಿದೆ.


_____ಬಾಕ್ಸ_____. ಇಂತಹ ಪ್ರಯತ್ನವನ್ನು ಯಲ್ಲರೂ ಮಾಡಿದರೆ ವಿದ್ಯುತ್ ಅಭಾವವನ್ನು ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಜನರು ಯೋಚಿಸಿದರೆ ಉತ್ತಮ ಎಂದು ಶಿವಾನಂ ಸಾಲಿಮಠ ಅಭಿಪ್ರಾಯ ವ್ಯಕ್ತಡಿಸುತ್ತಾರೆ. ............................................................................



ಕಾಮನೆಗಳನ್ನು ಈಡೇರಿಸುವ ರಾಮಲಿಂಗ ಕಾಮಣ್ಣ

+ಡಾ.ವೀರೇಶ ಹಂಡಿಗಿ ಹುಬ್ಬಳ್ಳಿ

ಹೋಳಿ ಹುಣ್ಣಿಮೆ ಬಂದರೆ ಸಾಕು ಯುವ ಸಮುದಾಯ ಕುಣಿದು ಕುಪ್ಪಳಿಸುತ್ತದೆ. ರಂಗು ರಂಗಿನ ಬಣ್ಣಗಳನ್ನು ಒಬ್ಬರಿಗೊಬ್ಬರು ಎರಚಿ ಸಂತಸ ಪಡುವ ದಿನ. ಈ ದಿನದ ಧಾರ್ಮಿಕ ವಿದಿ ವಿಧಾನಗಳನ್ನು ಆಚರಣೆಯ ಉದ್ಧೇಶಗಳನ್ನು ಒಂದಿಷ್ಟು ಅವಲೋಕಿಸೋಣ.

ಶಿವ ಪಾರ್ವತಿಯರಿಂದ ಹುಟ್ಟಿವ ಷಣ್ಕುಖನಿಂದ ಮೂರುಲೋಕ ಕಂಠಕ ತಾರಕಾಸುರ ರಾಕ್ಷಸನ ಸಂಹಾರ ಮಾಡಬೇಕಾದುದರಿಂದ ಶಿವ ಪಾರ್ವತಿಯ ಮದುವೆ ಮಾಡಬೇಕು. ಕಾರಣ ಶಿವನ ತಪಸ್ಸನ್ನು ಭಂಗ ಮಾಡಲು ವಿಷ್ಣು ವಿನ ಮಗ ಮನ್ಮಥನಿಗೆ ಎಲ್ಲ ದೇವತೆಗಳು ಹೇಳುತ್ತಾರೆ. ಆಗ ಮನ್ಮಥನು ಪುಷ್ಪ ಬಾಣ  ಬಿಟ್ಟು ಶಿವನ ತಪಸ್ಸನ್ನು ಭಂಗ ಮಾಡುತ್ತಾನೆ. ಶಿವ ಸಿಟ್ಟಿಗೆದ್ದು ತನ್ನ ಮೂರನೇ ಕಣ್ಣಿನಿಂದ ಸುಡುತ್ತಾನೆ. ಇದರ ದ್ಯೋತಕವಾಗಿ ಕಾಮ ದಹನವನ್ನು ಹೋಳಿ ಹಬ್ಬವನ್ನಾಗಿ ಆಚರಿಸುವ ಪರಂಪರೆ ಬೆಳೆದು ಬಂದಿದೆ. ಈಕಾಮದಹನ ಪ್ರಸಂಗವು ಮಹಾಕವಿ ಕಾಳಿದಾಸ ‘ಕುಮಾರ ಸಂಭವ’ ಹಾಗೂ ಹರಿಹರನ ‘ಗಿರಿಜಾ ಕಲ್ಯಾಣ’ದಲ್ಲಿ ಉಲ್ಲೇಖಿಸಲಾಗಿದೆ.

ನವಲಗುಂದದಲ್ಲಿಯ ವಿಶೇಷ:ನವಲಗುಂದದಲ್ಲಿಯ ಆಚರಣೆ ರಾಜ್ಯದಲ್ಲಿಯೇ ವಿಶಿಷ್ಟ ರೀತಿಯದು. ಜನರು ಶಿವ ಪಾರ್ವತಿಯನ್ನು ಪೂಜಿಸುವುದು ಸಾಮಾನ್ಯ ಆದರೆ ಇಲ್ಲಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಕಾಮನ ಉಪಾಸನೆಯನ್ನು ಮಾಡುವುದು ವಿಶಿಷ್ಟ. ಚಾವಡಿ,ಸಿದ್ಧಾಪೂರ ಒಣಿ, ಮಾದರ ಓಣಿ, ತೆಗ್ಗಿನಕೇರಿ, ಹಳ್ಳದ ಒಣಿ, ಗೌಡರ ಓಣಿ,ಮಚ್ಚಿಗರ ಓಣಿ, ಅಕ್ಕಿಯವರ ಓಣಿ, ರಾಮಲಿಂಗ ಓಣಿ ಮುಂತಾದ ಕಡೆಗೆ ಕಾಮಣ್ಣನನ್ನು ಪ್ರತಿಷ್ಠಾಪಿಸಲಾಗಿರುತ್ತದೆ.ಇವುಗಳಲ್ಲಿ ರಾಮಲಿಂಗ ಓಣಿಯಲ್ಲಿ ಪ್ರತಿಷ್ಠಾಪಿಸಿದ ಕಾಮಣ್ಣನಿಗೆ ಬಹಳ ಮಹತ್ವವಿದೆ.

ಹರಕೆ:

ಮಕ್ಕಳಾಗಲು ಅನೇಕರು ಬೆಳ್ಳಿಯ ತೋಟ್ಟಿಲನ್ನು , ಮದುವೆ ಆಗಲು ಬೆಳ್ಳಿಯ ಬಾಸಿಂಗವನ್ನು ಹರಕೆಯ ರೂಪದಲ್ಲಿ ಅರ್ಪಿಸುತ್ತಾರೆ. ಈ ಹಿಂದೆ ನಾರು ಬೇನೆ ವ್ಯಾಪಕವಾಗಿದ್ದಾಗ ಅದರ ನಿವಾರಣೆಗಾಗಿ ಬೆಳ್ಳಿಯ ನಾರನ್ನು ನೀಡಿದ್ದುಂಟು. ಅನೇಕರು ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಈಗಲೂ ಹರಕೆ ಹೊರುತ್ತಾರೆ. ರಾಶಿಗಟ್ಟಲೇ ಬೆಳ್ಳಿಯ ಬಾಸಿಂಗ ಹಾಗೂ ತೊಟ್ಟಿಲುಗಳು ಇರುವುದನ್ನು ಕಾಣಬಹುದು.

ತಯಾರಿಸಿದ ಬಗೆ:

ಕಾಮಣ್ಣನಿಗೆ ಜೀವಕಳೆ ತುಂಬಬೇಕೆಂದು ಒಬ್ಬ ಶಿಲ್ಪಿ ಒಂದೊಂದು ಬಿಂದು ನಕ್ಷತ್ರದಲ್ಲಿ ಒಂದೊಂದು ಬಗೆಯ ಕಟ್ಟಿಗೆಯಿಂದ ನಿರ್ಮಿಸತೊಡಗಿದ ಕೊನೆಗೆ ಮೂರ್ತಿಯ ತಲೆಯ ಹಿಂಬಾಗದಲ್ಲಿ ಎರಡು ರಂಧ್ರಗಳು ಉಳಿದವು. ಅವನ್ನು ವಿಶಿಷ್ಟ ಕಟ್ಟಿಗೆಯಿಂದ ಪೂರ್ಣಗೊಳಿಸುವುದರೊಳಗೆ ಶಿಲ್ಪಿ ಕಾಲವಾದನು. ಈ ರಂಧ್ರ ಹಾಗೆ ಉಳಿದವು. ಈರಂಧ್ರಗಳನ್ನು ಮುಚ್ಚಲು ಯಾವ ನಕ್ಷತ್ರ ಮತ್ತು ಯಾವ ಕಟ್ಟಿಗೆ ಬೇಕೆಂಬುದು ನಿಗೂಢವಾಗಿಯೇ ಉಳಿಯಿತು. ಆದರೂ ಈ ಕಾಮಣ್ಣನ ಮುಖಚರ್ಯೆ ಅತ್ಯಂತ ಸುಂದರವಾಗಿದೆ.ಗಂಭೀರ ಮೀಸೆಯುಳ್ಳ ಹಸನ್ಮುಖದಿಂದ ಅತ್ಯಂತ ಸ್ಪೂರದ್ರೂಪಿಯಾಗಿ ಜೀವಂತ ಎದ್ದು ಬರುವಂತೆ ಗೋಚರಿಸುತ್ತದೆ. ಚೆಲುವ ಗಂಡು ಮಕ್ಕಳಿಗೆ ರಾಮಲಿಂಗ ಕಾಮಣ್ಣನಂತೆ ಚೆಲುವ ಎಂದು ಹೇಳುವ ವಾಡಿಕೆಯಿದೆ.

ಪ್ರತಿಷ್ಠಾಪನೆ:

ಸುಮಾರು ಶತಮಾನದಷ್ಟು ಪ್ರಾಚೀನತೆ ಹೊಂದಿದ ಕಾಮಣ್ಣನನ್ನು ರಾಮಲಿಂಗ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸುತ್ತಾರೆ. ಈ ಕಾಮಣ್ಣನನ್ನು ಮಾ.23 ರಂದು ಏಕಾದಶಿ ರಾತ್ರಿ ನಿಂತಬಂಗಿಯಲ್ಲಿರುವುದುನ್ನು ಪ್ರತಿಷ್ಠಾಪಿಸುತ್ತಾರೆ.ದ್ವಾದಶಿಯಂದು ಬೆಳಗ್ಗೆಯಿಂದ ದರ್ಶನಕ್ಕೆ ಲಭ್ಯ. ನಂತರ ಮಾ.27ರಂದು ಹುಣ್ಣೆಮೆ ದಿನ ಲಕ್ಷಾಂತರ ಭಕ್ತರು ಕಾಮಣ್ಣನ ದರ್ಶನ ಪಡೆದು ಹರಕೆ ಸಲ್ಲಿಸುತ್ತಾರೆ. ಭಕ್ತರು ತೆಂಗಿನಕಾಯಿಯೊಂದಿಗೆ ಬಾಸಿಂಗವನ್ನು ಅರ್ಪಿಸಿ ಧನ್ಯರಾಗುತ್ತಾರೆ. ರಾಜ್ಯದ ನಾನಾ ಭಾಗದಿಂದ ಭಕ್ತರು ಆಗಮಿಸುತ್ತಾರೆ. ಹುಣ್ಣಿಮೆ ಮರುದಿನ ಮಾ.28 ರಂದು ಬಣ್ಣದ ಓಕುಳಿ ಆಡುತ್ತಾರೆ. ಪಟ್ಟಣದಲ್ಲಿ ಪ್ರತಿಷ್ಠಾಪಿಸಿದ ಕಾಮಣ್ಣಗಳ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಜೆ ನಡೆಯುತ್ತದೆ. ಅಬಾಲವದ್ಧರವರೆಗೆ ಎಲ್ಲರು ಹಲಗೆಯನ್ನು ನಾದಮಯವಾಗಿ ಬಾರಿಸುತ್ತಾರೆ. ಮೆರವಣಿಗೆ ನಂತರ ರಾತ್ರಿ ಕಾಮದಹನದೊಂದಿಗೆ ಹೋಳಿಹುಣ್ಣಿಮೆ ಮುಕ್ತಾಯವಾಗುತ್ತದೆ. ಮರುಹುಟ್ಟು:

ಯುಗಾದಿಯ ಪ್ರತಿಪದೆಯಂದು ರಾಮಲಿಂಗ ಕಾಮಣ್ಣ ಮರುಹುಟ್ಟು ಪಡೆಯುತ್ತಾನೆ ಎಂಬ ಪ್ರತೀತಿ ಇರುವುದರಿಂದ ಕುಳಿತ ಭಂಗಿಯಲ್ಲಿ ಕಾಮಣ್ಣನನ್ನು ಪ್ರತಿಷ್ಠಾಪಿಸುತ್ತಾರೆ. ಒಟ್ಟಾರೆ ನವಲಗುಂದದಲ್ಲಿ ಹೋಳಿ ಹುಣ್ಣಿಮೆಯನ್ನು ಭಕ್ತಿಯಿಂದ ವೈಶಿಷ್ಟ್ಯಪೂರ್ಣವಾಗಿ ಆಚರಿಸುತ್ತಾರೆ.

..................................................................


ಚುಟುಕು ಪರರಿಚಯ

ಜಿ.ಎಸ್ ಅನ್ನದಾನಿ- -ಡಾ.ವೀರೇಶ ಹಂಡಿಗಿ. ಒಂದು ಪುಟದಲ್ಲಿ ಬರೆಯುವುದನ್ನು ಕೆಲವೇ ಶಬ್ದಗಳಲ್ಲಿ ಸ್ವಾರಸ್ಯಕರವಾಗಿ ಹಾಗೂ ಮನಕ್ಕೆ ಮುದ ನೀಡುವಂತೆ ಬರೆಯುವುದೇ ಚುಟುಕು.

ಚುಟುಕು ಸಾಹಿತ್ಯ ಕ್ಷೇತ್ರದಲ್ಲಿ ದಿನಕರ ದೇಸಾಯಿ ,ಎಂ. ಅಕ್ಬರ್‌ಅಲಿ ಅವರ ಹೆಸರು ಸ್ಮರಣೀಯ. ಇಂಥವರ ಸಾಲಿನಲ್ಲಿ ರೋಣ ತಾಲೂಕಿನ ರಾಜೂರ ಗ್ರಾಮದ ಜಿ.ಎಸ್.ಅನ್ನದಾನಿ(ಎ.ಎಸ್. ಗಂಜಿಹಾಳ) ಸಹ ಒಬ್ಬರು.
ಅನ್ನದಾನಿ ಅವರು ಶಾಲಾದಿನಗಳಲ್ಲಿಯೇ ಸಾಹಿತ್ಯಕ ಬರವಣಿಗೆ ಆರಂಭಿಸಿದವರು. ಗ್ರಾಮ ಸೇವಕ ವೃತ್ತಿ ಆರಂಭಿಸಿ ಕ್ಷೇತ್ರಾಭಿವೃದ್ಧಿ ಅಧಿಕಾರಿಯಾಗಿ ನಿವೃತ್ತಿ ಹೊಂದಿದವರು. ಚುಟುಕು ಸಾಹಿತ್ಯದೊಂದಿಗೆ ಉತ್ತಮ ಕಥೆಗಾರರೂ ಹೌದು.

3 ಕಥಾ ಸಂಕಲನಗಳಾದ ಸಂತಃಶಕ್ತಿ, ಬೆಳಕು ಬೆಳಕನೆ ಕೂಡಿತು, ರಥದ ಕುದುರೆಗಳು ಹಾಗೂ 4 ಚುಟುಕು ಕೃತಿಗಳಾದ ರುದ್ರವೀಣೆ, ಹರಳು ಮುತ್ತು, ಕರ್ನಾಟಕದ ಕಥೆ,ಚಿತ್ರಾನ್ನ ಹಾಗೂ ಒಂದು ಕವನ ಸಂಕಲನ ದೀವಿಗೆಯನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ನಾಡಿನ ಹಲವಾರು ಪತ್ರಿಕೆಗಳು, ವಿಶೇಷ ಸಂಚಿಕೆಗಳಲ್ಲಿ ಇವರ ಬರಹಗಳು ಬೆಳಕು ಕಂಡಿವೆ. ಕರ್ನಾಟಕ ರಾಜ್ಯ ಚುಟುಕು ಪರಿಷತ್ ಮೈಸೂರಿನಲ್ಲಿ ನಡೆದ ಸಮಾಂಭದಲ್ಲಿ ಚುಟುಕು ರತ್ನ-2000 ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇವರ ಬರಹದಲ್ಲಿ ಗ್ರಾಮೀಣ ಸೊಗಡು ಎದ್ದು ಕಾಣುತ್ತದೆ. ಗ್ರಾಮೀಣ ಜನರು ಕಂಡುಂಡ ಬವಣೆಗಳನ್ನು ತಮ್ಮ ಸಾಹಿತ್ಯದಲ್ಲಿ ಬಳಸಿದ್ದಾರೆ. ಇವರ ಚುಟುಕುಗಳು ಹರಿತವಾದ ಹಾಗೂ ತಿಳಿಹಾಸ್ಯದಿಂದ ಕೂಡಿವೆ. ಗ್ರಾಮ ಸೇವಕರಾಗಿದ್ದಾಗಲೇ ಗ್ರಾಮ ಸೇವಕರನ್ನು ಒಂದೆಡೆ ಸಂಘಟಿಸಿ,ಗ್ರಾಮ ಸೇವಕ ಗ್ರಂಥಮಾಲೆ ಸ್ಥಾಪಿಸಿದರು. ಇದರ ಮೂಲಕ ಹಲವಾರು ವೌಲಿಕ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯಿಸಿದರು. ವಿಜಾಪುರದ ಮಿತ್ರಭಾರತಿ ಪ್ರಕಾಶನ ಸಮಿತಿಯ ಸಂಸ್ಥಾಪಕ ಸದಸ್ಯರಾಗಿ ಹಲವಾರು ಸಾಹಿತಿಗಳ ಕೃತಿಗಳನ್ನು ಬೆಳಕಿಗೆ ತರುವಲ್ಲಿ ಶ್ರಮಿಸಿದ್ದಾರೆ.


.........................


ಮರೆಯಲಾಗದ ಮೂಜಗಂ

  • ಡಾ.ವೀರೇಶ ಹಂಡಿಗಿ, ಹುಬ್ಬಳ್ಳಿ

ವೀರಶೆವ ಧರ್ಮದಲ್ಲಿ ಮಠಾಧಿಪತಿ ಕವಿಗಳದೇ ಒಂದು ಪರಂಪರೆ ಇದೆ. 12 ನೇ ಶತಮಾನದ ಬಸವಾದಿ ಶರಣರ ಸಾಹಿತ್ಯ ಸುಗ್ಗಿಯ ನಂತರ 16 ನೇ ಶತಮಾನದಲ್ಲಿ ತೋಂಟದ ಸಿದ್ಧಲಿಂಗೇಶ್ವರರು 17 ನೇ ಶತಮಾನದಲ್ಲಿ ಎಳಂದೂರು ಮಠಾಧ್ಯಕ್ಷ ಷಡಕ್ಷರದೇವ, ಜೇವರಗಿಯ ಷಣ್ಮುಖ ಶಿವಯೋಗಿಗಳು 18ನೇ ಶತಮಾನದಲ್ಲಿ ಮುಪ್ಪಿನ ಷಡಕ್ಷರಿ, ಮುಳಗುಂದದ ಬಾಲಲೀಲಾ ಮಹಾಂತ ಶಿವಯೋಗಿಗಳು,19ನೇ ಶತಮಾನದಲ್ಲಿ ಘನಮಠದ ನಾಗಭೂಷಣ ಶಿವಯೋಗಿಗಳು ಆಗಿ ಹೋಗಿದ್ದಾರೆ. ಈ ಪರಂಪರೆಯಲ್ಲಿ 20 ನೇ ಶತಮಾನದಲ್ಲಿ ಗೂಳೂರು ಮಠದ ಶ್ರೀ ಜಚನಿ ಅವರು ಹಾಗೂ ಹುಬ್ಬಳ್ಳಿಯ ಮೂರುಸಾವಿರ ಮಠದ ಶ್ರೀ ಮೂಜಗಂ ಅವರು ಉಲ್ಲೇಖನಾರ್ಹರು. ’ನಾನಷಿ ಕುರುತೇ ಕಾವ್ಯಂ’ ಋಷಿ ಅಲ್ಲದವನು ಕಾವ್ಯ ರಚಿಸಲಾರ. ಮೂಜಗಂ ಅವರು ಋಷಿಗಳೂ ಹೌದು ಕವಿಗಳೂ ಹೌದು.ಅವರದು ಬಹುಮುಖ ಪ್ರತಿಭೆ. ಸತತ ಕ್ರಿಯಾಶೀಲರು,ಶಿಕ್ಷಣ,ವೆದ್ಯಕೀಯ,ಸಾಮಾಜಿಕ,ಸಾಂಸ್ಕೃತಿಕ,ಪತ್ರಿಕೋದ್ಯಮ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಬಿಡುವಿಲ್ಲದೆ ತೊಡಗಿಕೊಂಡರೂ ಅವರ ಕವಿಮನ ಅವಕಾಶ ಸಿಕ್ಕಾಗಲೆಲ್ಲ ಸ್ಫೂರಣಗೊಂಡು ಕಾವ್ಯ, ವಚನ,ಗದ್ಯ ಪ್ರಕಾರಗಳಲ್ಲಿ ಅನೇಕ ಗ್ರಂಥ ರಚನೆಗೆ ಕಾರಣವಾಯಿತು.

ಜನನ:

ಹಾಸನ ಜಿಲ್ಲೆಯ ಒಂದು ಪುಟ್ಟಹಳ್ಳಿ ಸಸಿವಾಳದಲ್ಲಿ ಜನನ ಚಿತ್ತರಗಿ ಇಲಕಲ್ ಶ್ರೀ ವಿಜಯಮಹಾಂತ ಶಿವಯೋಗಿಗಳು ಜನಿಸಿದ ಪುಣ್ಯ ಕ್ಷೇತ್ರವದು.ಇಲ್ಲಿಯ ಕೊಳಗಲ್ಲ ಹಿರೇಮಠದ ಮರುಳಸಿದ್ಧಯ್ಯ ಹಾಗೂ ಚನ್ನವ್ವ ಅವರ ಪುಣ್ಯ ಗರ್ಭದಲ್ಲಿ 1927 ಫೆಬ್ರವರಿ11 ರಂದು ಜನಿಸಿದ ಮಗುವಿಗೆ ಮಹಾಂತೇಶನೆಂದು ನಾಮಕರಣ ಮಾಡಿದರು. ಹಾನಗಲ್ಲ ಕುಮಾರ ಶಿವಯೋಗಿಗಳ ಭವಿಷ್ಯವಾಣಿಯಂತೆ ಜನಿಸಿದ ಈ ಮಹಾಂತೇಶನು ಮುಂದೆ ಸಾಹಿತ್ಯ ಲೋಕದಲ್ಲಿ ಶ್ರೀ ಮೂಜಗಂ ಎಂದು ಪ್ರಖ್ಯಾತರಾದರು. 5 ವರ್ಷದ ಮಗುವಾಗಿದ್ದಾಗಲೇ ಮಹಾಂತೇಶನನ್ನು ಶಿವಯೋಗಮಂದಿರಕ್ಕೆ ವಟುವಾಗಿ ಕೊಡಲು ಅಪ್ಪಣೆ ಮಾಡಿದರು. ಆ ಪ್ರಕಾರ ತಂದೆ ತಾಯಿಗಳು ಬಾಲ ಮಹಂತೇಶನನ್ನು ಶಿವಯೋಗಮಂದಿರಕ್ಕೆ ಅರ್ಪಿಸಿದರು. ಅಲ್ಲಿ ಮಹಾಂತೇಶ ಹೋಗಿ ’ಮಂಹಾತಾರ್ಯ’ರಾದರು. ಪೂರ್ವಾಶ್ರಮದ ತಂದೆ,ತಾಯಿಯನ್ನು ಮರೆತು ಕುಮಾರಶಿವಯೋಗಿಗಳೆ ತಂದೆ ತಾಯಿ ಎಂದು ಅವರ ವಾತ್ಸಲ್ಯದ ಮಾರ್ಗದರ್ಶನದಲ್ಲಿ ಬೆಳೆದರು. ಅವರ ವಿಶಿಷ್ಟ ಲಕ್ಷಣಗಳಿಂದಾಗಿ ಚಿತ್ತರಗಿ ಇಲಕಲ್ ಮಠದ ಮರಿದೇವರಾಗಿ ನೇಮಿಸಲ್ಪಟ್ಟರು.

ಶಿಕ್ಷಣ:

ಪ್ರಾಥಮಿಕ ಶಿಕ್ಷಣ ಪೂರೆಸುವಾಗ ಬಸಪ್ಪ ಅಂಗಡಿ, ಹಾಗೂ ಶ್ರೀ ಶಿವಬಸಪ್ಪ ಮಾಗಿ ಇವರು ಶಿಕ್ಷಕರಾಗಿದ್ದರು. ಇವರ ಅಸಾಧಾರಣ ಪ್ರತಿಭೆ ಕಂಡು ಪ್ರೋತ್ಸಾಹಿಸುತ್ತಿದ್ದರು. ಕಂಚಗಲ್ ಬಿದರೆಯ ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು ಇವರಿಗೆ ಯೋಗಾಸನಗಳನ್ನು ಕಲಿಸುತ್ತಿದ್ದರು. ಮುಂದೆ ಇವರೊಬ್ಬ ಮಹಾಪುರುಷರಾಗುವರಿಂದು ಭವಿಷ್ಯ ನುಡಿದಿದ್ದರು. ಅಲ್ಲಿಯ ಶಿಕ್ಷಣ ಪೂರೆಸಿ ಮುಂದೆ ಹೆಚ್ಚಿನ ಅಧ್ಯಯನಕ್ಕಾಗಿ ಕಾಶಿಗೆ ತೆರಳಿದರು. ಅಲ್ಲಿ ಜಯದೇವರಮಠ ಹಾಗೂ ಮಹೇಶ್ವರಾನಂದಮಠಗಳು ಇವರಿಗೆ ವಾಸಸ್ಥಳಗಳಾಗಿದ್ದವು.ಅಲ್ಲಿರುವಾಗಲೇ ಅನೇಕ ಕವನಗಳನ್ನು ರಚಿಸಿದರು. ಸಂಸ್ಕೃತ ಮತ್ತು ಹಿಂದಿಯಲ್ಲಿ ವಿಶೇಷ ಪ್ರಾವಿಣ್ಯತೆ ಪಡೆದರು. ಕಾವ್ಯತೀರ್ಥ, ಸಾಹಿತ್ಯ ರತ್ನ,ವೇದಾಂತಾಚಾರ್ಯ ಪದವಿಗಳನ್ನು ಪಡೆದರು. ಬನಾರಸ ವಿಶ್ವವಿದ್ಯಾಲಯದಿಂದ ಇಂಟರ್‌ದವರೆಗೆ ಆಂಗ್ಲಭಾಷಾ ಶಿಕ್ಷಣ ಪಡೆದರು. 

ಕಾಶಿಯಲ್ಲಿ ವ್ಯಾಸಂಗ ಮಾಡುವಾಗಲೇ ಹುಬ್ಬಳ್ಳಿಯ ಶ್ರೀಮನ್ನಿರಂಜನ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳ ಕಪಾ ದಷ್ಟಿ ಇವರ ಮೇಲೆ ಬಿತ್ತು. ತಮ್ಮ ಪೀಠಕ್ಕೆ ಮಹಾಂತದೇವರೇ ಯೋಗ್ಯ ವಟುಗಳೆಂದು ನಿರ್ಣಯಿಸಿದರು. ತಮ್ಮ ಯೋಗ್ಯ ಉತ್ತರಾಧಿಕಾರಿಯನ್ನು ತಾವಿರುವಾಗಲೇ ಮಾಡಬೇಕೆಂದು ಮಹಂತದೇವರನ್ನು ಕಾಶಿಗೆ ತಾರು(ಟೆಲಿಗ್ರಾಂ) ಮಾಡಿ ಬರಮಾಡಿಕೊಂಡರು. ನೀವೆ ನಮ್ಮ ಜಗದ್ಗುರು ಪೀಠದ ಉತ್ತರಾಧಿಕಾರಿಗಳಾಬೇಕು ಎಂದು ತಮ್ಮ ಮನದಿಂಗಿತವನ್ನು ವ್ಯಕ್ತಪಡಿಸಿದರು. ಚಿತ್ತರಗಿ ಇಲಕಲ್ ಪೀಠದ ಮರಿದೇವರಾಗಿ ಭಕ್ತರು ತಮ್ಮ ಶೆಕ್ಷಣಿಕ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಅವರು ಒಪ್ಪಿಕೊಂಡರೆ ತಮ್ಮ ಸಮ್ಮತಿ ಇದೆ ಎಂದು ಹೇಳಿದರು. ಚಿತ್ತರಗಿ ಇಲಕಲ್ ಪೀಟದ ಭಕ್ತರೆಲ್ಲ ಸೇರಿ ವಿಚಾರವಿನಿಮಯ ಮಾಡಿ ಹುಬ್ಬಳ್ಳಿಯ ದೊಡ್ಡ ಜಗದ್ಗುರು ಪೀಟಕೆ ಅಧಿಕಾರಿಗಳಾಗುತ್ತಾರೆ ಎಂದು ಬಿಟ್ಟುಕೊಡಲು ಒಪ್ಪಿಕೊಂಡರು. ದಿ.2-11-1957 ರಂದು ವಿಜಯಮಹಾಂತದೇವರು ಮೂರುಸಾವಿರ ಮಠದ ಭಾವಿ ಜಗದ್ಗುರುಗಳಾಗಿ ಹುಬ್ಬಳ್ಳಿ ವಿಜಯ ಮಹಾಂತಸ್ವಾಮಿಗಳು ಎಂದು ಅಭಿದಾನದಿಂದ ಹಿರಿಯ ಜಗದ್ಗುರು ಗುರುಸಿದ್ಧರಾಜಯೋಗೀಂದ್ರರ ಮಾರ್ಗದರ್ಶನದಲ್ಲಿ ಮುನ್ನಡೆದರು.

ಪಟ್ಟಾಭಿಷೇಕ:

ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳು ದಿನಾಂಕ 17-2-1958 ರಂದು ಮಹಾಶಿವರಾತ್ರಿಯಂದು ಲಿಂಗೆಕ್ಯರಾದರು.ಮುಂದೆ 2 ತಿಂಗಳ ನಂತರ1958 ಮೇ 1 ರಂದು ಸಮಸ್ತ ಭಕ್ತರ ಸರ್ವಾನುಮತದಿಂದ ವಿಜಯಮಹಾಂತದೇವರಿಗೆ ’ಶ್ರೀಮನ್ಮಹಾರಾಜ ನಿರಂಜನ ಜಗದ್ಗುರು ಗಂಗಾಧರರಾಜಯೋಗೀಂದ್ರ ಮಹಾಸ್ವಾಮಿಗಳು’ ಎಂಬ ನೂತನ ಅಭಿದಾನದೊಂದಿಗೆ ನಿರಾಭಾರ ಜಗದ್ಗುರು ಪಟ್ಟಾಭಿಷೇಕವಾಯಿತು.

ಶೆಕ್ಷಣಿಕ ಸೇವೆ:

ಶೀಕ್ಷಣದಿಂದಲೇ ಮನವನ ಸರ್ವಾಂಗೀಣ ಉನ್ನತಿ ಎಂಬುದನ್ನು ಮನದಂದ ಶ್ರೀ ಮೂಜಗಂ ಅವರು ಶಿಶುವಿಹಾರ,ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಮಹಿಳಾ ಮಹಾವಿದ್ಯಾಲಯ,ಮಹಿಳಾ ಕೆಗಾರಿಕಾ ಸಂಸ್ಥೆ,ಶ್ರೀ ಜಗದ್ಗುರು ಹಿಂದಿ ವಿದ್ಯಾಲಯ,ಶ್ರೀ ಜಗದ್ಗುರು ಗಂಗಾಧರ ಸಂಸ್ಕೃತ ಕಾಲೇಜು,ಹುಕ್ಕೇರಿಯಲ್ಲಿ ಆಂಗ್ಲಮಾದ್ಯಮ ಶಾಲೆ,ಹುಬ್ಬಳ್ಳಿಯಲ್ಲಿ ವಿಜಯಮಹಾಂತ ಲಲಿತಕಲಾ ಮಹಾವಿದ್ಯಾಲಯಗಳನ್ನು ಶ್ರೀ ಜಗದ್ಗುರು ಮೂರುಸಾವಿರ ಮಠ ವಿದ್ಯಾವರ್ಧಕ ಸಂಘ ಸ್ಥಾಪಿಸುವ ಮೂಲಕ ಶಿಕ್ಷಣ ಸಂಸ್ಥೆಗಳನ್ನು ಪ್ರವರ್ಧಮಾನಕ್ಕೆ ಬರುವಂತೆ ನೋಡಿಕೊಂಡರು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಹಿಳಾ ವಸತಿ ನಿಲಯ,ಜಗದ್ಗುರು ಗುರುಸಿದ್ಧೆಶ್ವರ ಜನರಲ್ ಹಾಸ್ಟೇಲ್ ಸ್ಥಾಪಿಸಿದರು. ಶ್ರೀ ಜಗದ್ಗುರು ಗುರುಸಿದ್ಧೇಶ್ವರ ಗ್ರಂಥಾಲಯನ್ನು ಪ್ರರಂಭಿಸಿದರು. ಸಾಹಿತ್ಯ ಸಾಧನೆ: ಧರ್ಮ,ಸಾಹಿತ್ಯ,ಸಂಸ್ಕೃತಿ ಸಂವರ್ಧನೆಗೆ ಪತ್ರಿಕೋದ್ಯಮವೇ ಶ್ರೇಷ್ಟ ಮಾದ್ಯಮವೆಂದು ಬಗೆದು 1968 ಆಗಷ್ಟ 1 ರಂದು ’ಪರಂಜ್ಯೊತಿ’ ಮಾಸ ಪತ್ರಿಕೆಯನ್ನು ಪ್ರಾರಂಭಿಸಿದರು. ಅದರ ಪ್ರಕಟಣೆಗಾಗಿ ಸ್ವಂತ ಮುದ್ರಣಾಲಯ ಸ್ಥಾಪಿಸಿದರು. ಸ್ವಯಂ ಸಾಹಿತಿಗಳಾದ ಜಗದ್ಗುರುಗಳು ವೀರಶೆವ ಧರ್ಮದ ಕುರಿತ ಗ್ರಂಥಕ್ಕೆ ನಗದು ಪ್ರಶಸ್ತಿ ನೀಡುವ ಮೂಲಕ ಸಾಹಿತಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಿದರು. ಈ ಪರಂಪರೆ ಇಂದಿಗೂ ಸಾಗಿಬಂದಿದೆ. ಮೂಜಗಂ ಅವರು ಶಿವಯೋಗ ಮಂದಿರದಲ್ಲಿ ಸಾಧಕರಾಗಿದ್ದಾಗಲೇ ಶ್ರೀ ವಿಜಯ ಮಹಾಂತೇಶ ಲಾವಣಿ1944 ರಲ್ಲಿ ರಚಿಸಿದರು. ಮೊಗ್ಗೆಯ ಮಾಲೆ, ಶ್ರೀ ಬಸವೇಶ್ವರ ನಾಮಾವಳಿ,ಶ್ರೀ ಮರುಳ ಸಿದ್ಧೇಶ್ವರ ನಾಮಾವಳಿ, ಅಪ್ಪಯ್ಯ ಸ್ವಾಮಿಗಳ ಜೀವನ ಚರಿತ್ರೆ,ಪಥಿಕ, ಯೋಗಿರಾಜ ಆಫ್ ಕರ್ನಾಟಕ(ಇಂಗ್ಲಿಷ) ನಮ್ಮ ವಿದೇಶ ಪ್ರವಾಸ,ಜೇನ ಹನಿ, ಶಿವಯೋಗಮಂದಿರ.ಚಿತ್ಕಿರಣ,ವಿವಿಧತಾಮೆ ಏಕತಾ(ಹಿಂದಿ).ಆಶೀರ್ವಾಣಿ ಭಾಗ2, ಹೋಗಿರಣ, ಹೂಬಳ್ಳಿ,ಪೂರ್ಣಜ್ಞ ವಚನಗಳು ಹೀಗೆ ಅವರ ಸಾಹಿತ್ಯ ಕತಿಗಳ ಸಂಚಯನವಾಗಿದೆ. ಇದರಲ್ಲಿಯ ಕೆಲವು ಕತಿಗಳನ್ನುಅವಲೋಕಿಸಬಹುದು. ಮೊಗ್ಗೆಯಮಾಲೆ(ಕವನ ಸಂಕಲನ-1966): ಮೂಜಗಂ ಅವರು ತಮ್ಮ ವಿದ್ಯಾರ್ಥಿಜೀವನದ ಸುಮಾರು 15-16 ನೇ ವಯಸ್ಸಿನಲ್ಲಿ ರಚಿಸಿದರು. ದ್ವಿತೀಯ ಆವತ್ತಿ 1972 ರಲ್ಲಿ ಪ್ರಕಟವಾಗಿದೆ. ಪೂಮಾಲೆ: ಶ್ರೀಗಳು ಕಾಶಿಯಲ್ಲಿದ್ದಾಗ ಹೆಣೆದ ಕಂದ ಪದ್ಯಗಳ ಮಾಲೆ ಇದಾಗಿದೆ. 94 ಕಂದ ಪದ್ಯಗಳಿವೆ. ’’ಭಾವನೆಗೆ ತಕ್ಕಂತೆ ಮೇಳೆಸಿದ ಈ ಕಂದಗಳ್‌ತನಿರಸದುಕ್ಕಂದಗಳ್’’ ಎಂದು ಡಾ.ಡಿ.ಎಸ್. ಕರ್ಕಿ ಅವರು ಶ್ಲಾಘಿಸಿದ್ದಾರೆ. ಶ್ರೀ ಜಚನಿ ಅವರು ಮುನ್ನುಡಿ ಬರೆದು’’ ಇದನ್ನು ಕಟ್ಟಿದ ಕವಿ ಒಳ್ಳೆಯ ಮಾಲೆಗಾರ.... ಮಾಲೆಯನ್ನು ಮಾರಿ ಹಣಗಳಿಸುವ ಮಲೆಗಾರನಲ್ಲ. ತನ್ನ ಗುರುವಿನಲ್ಲಿ ತನಗಿರುವ ಭಕ್ತಿಯನ್ನು, ಭಾವವನ್ನು ಈ ಪದ್ಯದ ಮೂಲಕ ಸಾರಿದ್ದಾನೆ.’’ ಎಂದು ಪ್ರಶಂಸಿದ್ದಾರೆ. ಪಥಿಕ(ಕವನ ಸಂಕಲನ):ಈ ಕತಿ ಮೂಡಿಬಂದಾಗ ಕವಿ ಇನ್ನೂ ಚಿತ್ತರಗಿ ಮಹಾಂತದೇವರಾಗಿದ್ದರು. ಅಂದಿನ ಅವರ ಚಿತ್ತರಗಿ ಚಿತ್ತವೇ ಚಿತ್ರವಾಗಿ ಮೂಡಿದೆ. ’ಪಥಿಕ’ದ ಕವಿತೆಗಳಲ್ಲಿ ಎಂದು ಹೇಳಬಹುದು.ಕವಿತೆಗಳಲ್ಲಿ ಭಾವಕ್ಕೆ ತಕ್ಕಂತೆ ಛಂದಸ್ಸು ಹೊಂದಿಕೊಂಡಿದೆ. ಮಂದಾನಿಲ,ಉತ್ಸಾಹಲಯಗಳು ಅಲ್ಲಲ್ಲಿ ಸ್ಪಂದಿಸಿವೆ ಎಂದಿದ್ದಾರೆ ಕವಿವರ್ಯ ಡಾ.ಡಿ.ಎಸ್. ಕರ್ಕಿ.ಪ್ರೊ.ಸ.ಸ ಮಾಳವಾಡ ಅವರು ಕವನಗಳಲ್ಲಿ ನವೋದಯ ಕಾಲದ ದಷ್ಟಿ ಸ್ಪಷ್ಟವಾಗಿದೆ. ಮಾನವನು ಪರಮಸತ್ಯದ ಯಾತ್ರಿಕನೇ ಅಹುದು’’ ಎಂದಿದ್ದಾರೆ. ಅಲ್ಲಲ್ಲಿ ರೂಪಕ ಉಪಮೆಗಳು ಮಿಂಚಿ ಕಾವ್ಯಕ್ಕೆ ಕಸುವನ್ನು ತಂದಿದೆ. ರತ್ಮಪಕ್ಷಿ: ಆತ್ಮ ಪಕ್ಷಿಯ ಸುಂದರ ದಾರ್ಶನಿಕ ರೂಪಕವಾಗಿದೆ.ಶ್ರೀ ಜಚನಿ ಅವರು ಈ ಕತಿಯ ಕುರಿತು’’ ಬನದ ಹಕ್ಕಿ ಮನದ ಹಕ್ಕಿಯಾಗಿ ರೂಪುಗೊಂಡಿದೆ.ನಿಜ ಕಂಡ ನಿಜಗುಣ ಶೀವಯೋಗಿಗೆ ಕೋಗಿಲೆ ಮನವಾಗಿ ರೂಪುಗೊಂಡಿದ್ದರೆ ಶ್ರೀ ಮೂಜಗಂ ಅವರಿಗೆ ರನ್ನವೆಳಗಿನ ಜ್ಞಾನವಾಗಿ ರೂಪುಗೊಂಡು ದಷ್ಟಾಂತ ದಿವ್ಯತೆ ಗೇರಿದೆ.ವಿಹಗವಾಗಿ ವಿಹರಿಸುತ್ತಿದೆ’’ ಎಂದಿದ್ದಾರೆ. ಚಿತ್ಸುಮನ(ವಚನಸಂಕಲನ-1973 ಪ.ಮು): ಇದು ತತೀಯ ಮುದ್ರಣವನ್ನು ಕಂಡಿದೆ.12ನೇ ಶತಮಾನದ ವಚನಗಳ ಪ್ರಭಾವದಿಂದ ಸ್ಫೂರ್ತಿಗೊಂಡು ಮೂಜಗಂ ಅವರು’ಭ್ರೂಲತಾಪುರೀಶ ಕರ್ತ ಜಗದ್ಗುರು ಗುರುಸಿದ್ದೇಶ್ವರ’ ಅಂಕಿತದಲ್ಲಿ 230 ವಚನಗಳನ್ನು ಬರೆದಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಶ್ರೀಗಳವರು ಪ್ರಸ್ತುತ ಸಮಾಜದ ಕುರಿತು ವಚನ ಬರೆದಿದ್ದಾರೆ.

ಸಮಾಜವು ಒಡೆದ ಗಡಿಗೆಯಂತಾಗಿಹುದಯ್ಯ ಸಮಾಜವು ಬಲವಿಲ್ಲದ ರೋಗಿಯಂತಾಗಿಹುದಯ್ಯ ಸಮಾಜವು ತಂತಿ ಇಲ್ಲದ ವೀಣೆಯಂತಾಗಿಹುದಯ್ಯ ಸಮಾಜವು ಧೂಳು ಮುಸುಕಿದ ಕನ್ನಡಿಯಂತಾಗಿಹುದಯ್ಯ ಇದು ಕಾರಣ ಬಲವು ಒಗ್ಗಟ್ಟಿಲ್ಲದ ಸಮಾಜ ಬರಿ ಮಾತುಗಾರ ಮಾಲೆಯಾಗಿಹುದು ನೋಡಾ... ಒಗ್ಗಟ್ಟಿಲ್ಲದ ಸಮಾಜದ ಸ್ಥತಿಯನ್ನು ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ಖ್ಯಾತ ವಿದ್ವಾಂಸ ಡಾ.ಆರ್.ಸಿ. ಹಿರೇಮಠ ಅವರು ಮುನ್ನುಡಿ ಬರೆದು’’ ಇಲ್ಲಿ ಅಧ್ಯಾತ್ಮದ ಹೊನಲಿದೆ. ಸಾಹಿತ್ಯದ ಪ್ರವಾಹವಿದೆ. ತತ್ತ್ವಜ್ಞಾನದ ಮಡುವಿದೆ. ಸಮಾಜ ವಿಮರ್ಶೆಯ ಕಣವಿದೆ. ಇಂತಹ ಅನರ್ಘ್ಯ ರತ್ನಗಳನ್ನು ಸೂರೆಗೆದ ಜಗದ್ಗುರುಗಳವರ ದಿವ್ಯ ಸನ್ನಿಧಿಗೆ ಭಕ್ತಿ ಪುರಸ್ಸಾರ ಪ್ರಣಾಮಗಳು’’ ಎಂದು ಹದಯತುಂಬಿ ಹೇಳಿದ್ದಾರೆ.

ಚಿತ್ಸುಮನ ಕತಿಯನ್ನು ’ಹಾಟ್ಸ್ ಬ್ಲಾಸಮ್ಸ್’’ ಎಂದು ಪ್ರೊ. ಮೆನಜಿಸ್ ಹಾಗೂ ಎಸ್.ಎಂ.ಅಂಗಡಿ ಅವರು ಇಂಗ್ಲಿಷಗೆ ಅನುವಾದಿಸಿದ್ದಾರೆ. ಮೂಜಗಂ ಅವರು ವಿದೇಶ ಪ್ರವಾಸದಲ್ಲಿದ್ದಾಗ ಬೆಲ್ಜಿಯಂ ದೇಶದ ಲ್ಯೂವೆನ್‌ದಲ್ಲಿ ನೆರವೇರಿದ ದ್ವಿತೀಯ ವಿಶ್ವಧರ್ಮಗಳ ಶಾಂತಿ ಪರಿಷತ್‌ನಲ್ಲಿ ದಿ.31-8-1974 ರಂದು ಡಾ.ಹೊಮರ.ಎ.ಜಾಕ್ ಅವರಿಂದ ಈ ಗ್ರಂಥವು ಬಿಡುಗಡೆಯಾದುದು ಕರ್ನಾಟಕದ ಮಠಾಧಿಪತಿಗಳ ಇತಿಹಾಸದಲ್ಲಿ ಒಂದು ಹೊಸ ಸಾಧನೆ ಎಂದು ವಿದ್ವಾಂಸರು ಪ್ರಶಂಸಿಸಿದ್ದಾರೆ.

ಪೂರ್ಣಜ್ಞನ ವಚನಗಳು: ಕನ್ನಡದಲ್ಲಿ ಧರ್ಮಜ್ಞ,ಸಾರಜ್ಞ ಮುಂತಾದ ಕವಿಗಳು ಅಲ್ಲಲ್ಲಿ ತ್ರಿಪದಿ ಛಂದದಲ್ಲಿ ಕವನಗಳನ್ನು ಬರೆದಿದ್ದಾರೆ. ಆದರೆ ಸರ್ವಜ್ಞನ ನಂತರ ಜೀವನದಲ್ಲಿ ಆಳವಾಗಿ,ವ್ಯಾಪಕವಾಗಿ ಅರಿದು ಪೂರ್ಣಜ್ಞ ಅಂಕಿತದಲ್ಲಿ ತ್ರಿಪದಿ ಛಂದದಲ್ಲಿ ವಿಪುಲವಾಗಿ ಬರೆದ ಏಕೆಕ ವ್ಯಕ್ತಿ ಶ್ರೀ ಮೂಜಗಂ.ಒಟ್ಟು 3211 ವಚನಗಳಿವೆ. ಸರ್ವಜ್ಞ, ಬಸವಾದಿ ಶರಣರ ವಚನಗಳ ಪ್ರಭಾವನ್ನು ಇಲ್ಲಿ ಕಾಣಬಹುದು. ಆದರೂ ಪೂರ್ಣಜ್ಞ ವಚನಗಳಲ್ಲಿ ಕವಿಯ ಅನುಭವ,ಅನುಭಾವ,ಅಭಿವ್ಯಕ್ತಿಗೊಂಡು ವಿಶಿಷ್ಟತೆಯನ್ನು ಮೆರೆದಿವೆ. ಇಲ್ಲಿಯ ವಚನಗಳಲ್ಲಿ ಕವಿಯ ವೆಯಕ್ತಿಕತೆ ಹಾಗೂ ದಾರ್ಶನಿಕತೆ ಮತ್ತು ನೆತಿಕತೆಯ ಚಿತ್ರಣವನ್ನು ಕಾಣಬಹುದು. ಸಾಮಾಜಿಕ,ರಾಜಕೀಯ,ಶೆಕ್ಷಣಿಕ,ಆರ್ಥಿಕ,ವೆಜ್ಞಾನಿಕ ಮುಂತಾದ ಕ್ಷೇತ್ರಗಳ ವೆವಿದ್ಯಪೂರ್ಣ ವಿಚಾರಗಳಿವೆ,ನಾಡು ನುಡಿಯ ಕುರಿತ ಅಭಿಮಾನ ಕಳಕಳಿ ವ್ಯಕ್ತವಾಗಿದೆ. ಕವಿಯ ಆತ್ಮಕಥನ,ಹಾಗೂ ಆತ್ಮ ನಿವೇದನೆ ತುಂಬ ಮಾರ್ಮಿಕವಾಗಿ ಮೂಡಿಬಂದಿವೆ. ಶಶಿವಾಳ ನಮ್ಮೂರು ಹಸಿರುಲಕ್ಷ್ಮಿಯ ತವರು ಎಸೆವ ತೆಂಗಿನ ತೋಟ ಕಂಗಳಿಗೆ ಮಾಟ ಹಸಿರ ಸಗ್ಗವದು ಪೂರ್ಣಜ್ಞ ಸೂತ್ರಧಾರಿಯು ನೀನು ಪಾತ್ರಧಾರಿಯು ನಾನು ಎತ್ತೆತ್ತಲೋ ಹರಿವ ಚಿತ್ತವನು ರಮಿಸಿ ಶಕ್ತಿ ನಿಡಯ್ಯ ಪೂರ್ಣಜ್ಞ

ವಿಷಯ ವೆವಿದ್ಯತೆಯಿಂದ,ಸ್ವಾನುಭವದಿಂದ,ಪೂರ್ಣಜ್ಞ ವಚನಗಳು ಕನ್ನಡ ಸಾಹಿತ್ಯದಲ್ಲಿ ಶಾಶ್ವತವಾಗಿ ನಿಲ್ಲಬಲ್ಲ ಶಕ್ತಿ ಸಾಮರ್ಥ್ಯ ಪಡೆದಿವೆ.

ಎಡೆಬಿಡದೆ ಧರ್ಮಪ್ರಚಾರ ,ಸಹಕರ ಸಂಸ್ಥೆಗಳ ನಿರ್ಮಾಣ ಶೆಕ್ಷಣಿಕ ,ಸಾಮಾಜಿಕ ಚಟುವಟಿಕೆಗಳಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡಿದ್ದರೂ ಅವರ ಅಂತರಂಗದಲ್ಲಿ ಹುದುಗಿದ್ದ ಕಾವ್ಯ ಶಕ್ತಿ ಕಾರಂಜಿಯಂತೆ ಪುಟಿದು ಸಾಹಿತ್ಯ ಕತಿಗಳ ನಿರ್ಮಾಣಕ್ಕೆ ಕಾರಣವಾದುದು ಅಚ್ಚರಿಯೇ ಸರಿ. ಪುಸ್ತಕ ಪ್ರೇಮಿಗಳಾದ ಶ್ರೀಗಳು ತಮ್ಮ ಸ್ವಂತ 30 ಕತಿಗಳನ್ನು ಪ್ರಕಟಿಸಿದ್ದು ಅಲ್ಲದೆ ಬೇರೆ ಬೇರೆ ವಿದ್ವಾಂಸರ 500ಕ್ಕೂ ಹೆಚ್ಚು ಕತಿಗಳನ್ನು ಪ್ರಕಟಿಸಿ ಪ್ರೋತಾಹಿಸಿದುದನ್ನು ಮರೆಯುವಂತಿಲ್ಲ. ಮೂಜಗಂ ಬದುಕು ಬರಹ ಕುರಿತು ಡಾ.ಮಹಾಂತೇಶ ದೋಟಿಹಾಳ ಹಾಗೂ ಡಾ.ರಾಜೇಂದ್ರ ಯರನಾಳೆ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದುದು ಮೂಜಗಂ ಅವರ ಸಾಹಿತ್ಯದ ಹಿರಿಮೆಗೆ ಸಾಕ್ಷಿ. ವಿಶ್ರಾಂತಿ ಉಪಚಾರಕ್ಕೆ ಘಟಪ್ರಭೆಗೆ ತೆರಳಿದ ಶ್ರೀಗಳವರು ದಿ.27-5-2003 ರಂದು ತಮ್ಮ 76 ನೇ ವಯಸ್ಸಿನಲ್ಲಿ ಲಿಂಗೆಕ್ಯರಾದರು. ಕಾಯವಳಿದರೂ ತಮ್ಮ ಕತಿಗಳ ಮೂಲಕ ಅವರು ಅಜರಾಮರರಾಗಿದ್ದಾರೆ.

............................................

ಕನ್ನಡ ‘ಮರೆ’ತರೆ ‘ಗುದ್ದಿ’ ಎಚ್ಚರಿಸುವ ವೆಂಕಟೇಶ ವೀರೇಶ ಹಂಡಿಗಿ ಹುಬ್ಬಳ್ಳಿ ಕರ್ನಾಟಕ ಏಕೀಕರಣವಾದರೂ ಕನ್ನಡದ ನೆಲ,ಜಲ,‘ಾಷೆ ಉಳಿವಿಗೆ ಹೋರಾಟಗಳನ್ನು ಇನ್ನೂ ನಡೆಸುವ ಅನಿವಾರ್ಯತೆ ಈ ನಾಡಿನಲ್ಲಿರುವುದು ದುರಂತದ ಸಂಗತಿ. ಪ್ರತಿ ರಂಗದಲ್ಲಿಯೂ ಹೋರಾಟ ಮಾಡಬೇಕಿದೆ.ಇದು ಸಂಘ ಸಂಸ್ಥೆಗಳು ಹಾಗೂ ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವೂ ಹೌದು. ಇಲ್ಲೊಬ್ಬ ನಮ್ಮ ನಡುವೆ ಸದ್ದಿಲ್ಲದೆ ಕನ್ನಡಕ್ಕಾಗಿ ಹೋರಾಡುತ್ತಲೇ ಇದ್ದಾರೆ. ಕನ್ನಡ ಮರೆತರೆ ಗುದ್ದಿ ಎಚ್ಚರಿಸುವ ವೆಂಕಟೇಶ ಮರೆಗುದ್ದಿ ಇತರರಿಗೆ ಮಾದರಿ. ಇವರ ಅಡ್ಡ ಹೆಸರಿಗೆ ಇವರ ಬದುಕು ಸಾರ್ಥಕವೆನ್ನಬಹುದು. ಅಪ್ಪಟ ಕನ್ನಡದಲ್ಲಿಯೇ ಮಾತು. ದೂರವಾಣಿ,ಜಂಗಮವಾಣಿ,ಸಂಖ್ಯೆಗಳ ಬಳಕೆ ಎಲ್ಲವೂ ಕನ್ನಡದಲ್ಲಿಯೇ. ಇದನ್ನು ಅವರು ಕೇವಲ ಪ್ರಚಾರಕ್ಕೆ ಮಾಡುತ್ತಿಲ್ಲ ಅವರು ಮನದಾಳದಿಂದ ಮಾಡುತ್ತಾರೆ. ಕನ್ನಡಕ್ಕಾಗಿ ಅವರು ಹಲವಾರು ಜನರೊಂದಿಗೆ ಜಗಳ ಕಾದಿದ್ದಾರೆ. ಹೊಡೆತವನ್ನು ತಿಂದಿದ್ದಾರೆ. ಒಂದು ಬಾರಿ ಪ್ರಾಣಕ್ಕೂ ಕುತ್ತು ತಂದುಕೊಂಡಿದ್ದರು. ಸ್ವಂತ ಹಣ ಖರ್ಚು:

ಕನ್ನಡದ ಕೆಲಸವೆಂದು ಹಲವರಿಂದ ಹಣ ಸಂಗ್ರಹಿಸಿ ಕಾರ್ಯಕ್ರಮ ಮಾಡುವುದಿಲ್ಲ. ತಮ್ಮ ಗಳಿಕೆಯ ಶೇ.5 ರಿಂದ 10 ರಷ್ಟನ್ನು ಕನ್ನಡದ ಕೆಲಸಕ್ಕಾಗಿ ಮೀಸಲಿರಿಸುತ್ತಾರೆ.

ಮನೆ ಮೇಲೆ ಕನ್ನಡ ‘್ವಜ: ಹುಬ್ಬಳ್ಳಿಯ ವೆಂಕಟೇಶ ಕಾಲೊನಿಯಲ್ಲಿರುವ ಇವರ ಮನೆ ಸರ್ವಜ್ಞ ಕನ್ನಡಿಗರನ್ನು ಸ್ವಾಗತಿಸುತ್ತಾನೆ. ಮನೆ ಮೇಲೆ ಯಾವಾಗಲೂ ಕನ್ನಡದ ‘್ವಜ ಹಾರುತ್ತಿರುತ್ತದೆ. ಮನೆಯ ಗಹ ಪ್ರವೇಶ ಸಂದ‘ರ್ದಲ್ಲಿ ಕನ್ನಡದ ಜ್ಞಾನ ಪೀಠ ಪುರಸ್ಕೃತರ ಫೋಟೊ ಇಟ್ಟು ಪೂಜಿಸಿ ಗಹ ಪ್ರವೇಶ ಮಾಡಿದ್ದಾರೆ. ಮನೆಯ ಹಾಲ್‌ಗೆ ಅಲ್ಲಮಪ್ರ‘ು ಸ‘ಾಂಗಣ ಎಂದು ಹೆಸರಿಸಿದ್ದಾರೆ. ಅಲ್ಲಿಯೇ ಹಲವಾರು ಕನ್ನಡದ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಅಡುಗೆ ಮನೆಗೆ ಅಕ್ಕ ಮಹಾದೇವಿ ಹೆಸರು,ಕೊಣೆಗೆ ಪಂಪ,ರನ್ನ ನ ಹೆಸರಿಸಿದ್ದಾರೆ.ಮಹಡಿ ಏರಿದಾಗ ಲಕ್ಷ್ಮೀಶ, ರಾಘವಾಂಕ,ಕುಮಾರವ್ಯಾಸ, ಹೆಸರಿನ ಕೊಣೆ ಇವೆ. ಈ ಮನೆಯಲ್ಲಿ ಕನ್ನಡದ ಪುಸ್ತಕ,ಸಿಡಿ,ಕ್ಯಾಸೆಟ್‌ಗಳು ಸಿಗುತ್ತವೆ. ಪ್ರೇರಣೆ: ವೆಂಕಟೇಶ ಅವರ ಸಹೋದರ ಮಹಾರಾಷ್ಟ್ರ ಸರಕಾರದ ಪಿಡ್ಲ್ಯುಡಿ ಯಲ್ಲಿ ಸೇವೆಯಲ್ಲಿದ್ದರು. ಅಲ್ಲಿ ಕೂಲಿಯಾಳುಗಳ ಹಣ ಕನ್ನಡದಲ್ಲಿಯೇ ಎಣಿಸುತ್ತಿದ್ದರು. ಆಗ ಅಲ್ಲಿನ ಜನರು ಇದನ್ನು ವಿರೋಸಿದರು. ಇದರಿಂದ ಬೆಸತ್ತು ಸರಕಾರಿ ಸೇವೆಗೆ ತೀಲಾಂಜಲಿಯಿಟ್ಟರು. ನಂತರ ಮಿಲಿಟರಿಗೆ ಸೇರಿದರು. ಪುಣೆಯಲ್ಲಿದ್ದಾಗ ಕನ್ನಡಿಗರನ್ನು ಕೀಳಾಗಿ ಕಾಣುತ್ತಿದ್ದರು. ಇದನ್ನು ಕಂಡು ರೋಸಿ ಹೋಗಿದ್ದ ವೆಂಕಟೇಶ ಕನ್ನಡದ ಕೆಚ್ಚನ್ನು ಬೆಳೆಸಿಕೊಳ್ಳಬೇಕು .ಏನೇ ಮಾಡಿದರೂ ಕನ್ನಡದ ಕೆಲಸವನ್ನೇ ಮಾಡಬೇಕು ಎಂದು ನಿ‘ರ್ರಿಸಿದ್ದಾಗಿ ಹೇಳುತ್ತಾರೆ. ಪುಣೆಯಲ್ಲಿದ್ದಾಗ ಅಲ್ಲಿನ ಒಂದು ರಾಜಕೀಯ ಸಂಘಟನೆಯ ಕಾರ್ಯಕರ್ತರು ಇವರ ಕನ್ನಡಾಭಿಮಾನಕ್ಕೆ ವಿರೊ‘ವ್ಯಕ್ತಪಡಿಸಿ ಮನೆಗೆ ನುಗ್ಗಿ ಹಲ್ಲೆಗೆ ಮುಂದಾಗಿದ್ದರು. ಹುಬ್ಬಳ್ಳಿಯತ್ತ ಪಯಣ: ಹೊಟ್ಟೆಪಾಡಿಗಾಗಿ ಅಕ್ಕಸಾಲಿಗ ಕೆಲಸ ಹುಡುಕುತ್ತ ಹುಬ್ಬಳ್ಳಿಗೆ ಬಂದರು.ಅಂದು ಲೆಕ್ಕ ಪತ್ರಗಳನ್ನೆಲ್ಲ ಮರಾಠಿಯಲ್ಲಿ ಬರೆಯುತ್ತಿದ್ದರು. ಆದರೆ ವೆಂಕಟೇಶ ಕನ್ನಡದಲ್ಲಿ ಬರೆಯುತ್ತಿದ್ದರು.ಹೀಗಾಗಿ ಇವರಿಗೆ ಅಕ್ಕಸಾಲಿಗ ಅಂಗಡಿಯಲ್ಲಿ ಯಾರೂ ಕೆಲಸ ಕೊಡಲಿಲ್ಲ.ನಂತರ ಸ್ವಂತ ಬಲದಿಂದ ಅಂಗಡಿ ಆರಂಭಿಸಿದರು. ಇವರು ತಯಾರಿಸುತ್ತಿದ್ದ ಬೋರಮಾಳ ಬಹಳ ಪ್ರಸಿದ್ದಿ ಪಡೆದಿತ್ತು. ಮಾರುಕಟ್ಟೆಯಲ್ಲಿ ಮರೆಗುದ್ದಿ ಬೋರಮಾಳ ಎಂದೇ ಖ್ಯಾತಿಯಾಗಿತ್ತು. ವೀರಪುಲಿಕೇಶಿ ಸಂಘಟನೆ: ಶಾಲಾ ದಿನಗಳಲ್ಲಿ ವೀರಪುಲಕೇಶಿಯ ಪಾಠ ಕೇಳಿ ಪ್ರ‘ಾವಿತರಾಗಿದ್ದರು. ನಂತರದ ದಿನಗಳಲ್ಲಿ ವೀರಪುಲಕೇಶಿ ಕನ್ನಡ ಬಳಗ ಕಟ್ಟಿದರು.ಈ ಸಂಘಟನೆಯಿಂದ 205 ಕಾರ್ಯಕ್ರಮಗಳನ್ನು ಸ್ವಂತ ಖರ್ಚಿನಲ್ಲಿಯೇ ಮಾಡಿದರು. ಯಾರಿಂದಲೂ ಹಣ ಕೇಳುವುದಿಲ್ಲ.ಮನೆ ಮನೆಯಲ್ಲಿ ಕನ್ನಡದ ಕಂಪು ಕಾರ್ಯಕ್ರಮವನ್ನು ತಾವೇ ಖುದ್ದಾಗಿ ನಿರ್ವಹಿಸಿದ್ದಾರೆ. ಮಗಳ ಮದುವೆಯಲ್ಲಿ ‘ಸಾಹಿತ್ಯ ತಾಂಬೂಲ’ ಪುಸ್ತಕ ಪ್ರಕಟಿಸಿ ವಿತರಿಸಿದರು. ಹುಬ್ಬಳ್ಳಿಯಲ್ಲಿ ಕನ್ನಡದ ನಾಮಫಲಕ ಹಾಕಿರುವ ಮಾಲೀಕರನ್ನು ಅವರ ಅಂಗಡಿ ಮುಂದೆಯೇ ಸನ್ಮಾನಿಸಿ ‘ವೀರ ಕನ್ನಡಿಗ’ ಪ್ರಶಸ್ತಿ ನೀಡಿ ಗೌರವಿಸುತ್ತಾರೆ. ಲಕ್ಷ ಪತ್ರ ಚಳವಳಿ: ಕನ್ನಡ ಶಾಸ್ತ್ರೀಯ ‘ಾಷೆಗಾಗಿ ಲಕ್ಷ ಪತ್ರ ಚಳವಳಿ ನಡೆಸಿದ್ದು ಅವಿಸ್ಮರಣೀಯ. ಇದರಿಂದ ಕೇಂದ್ರ ಸರಕಾರದ ಗಮನವನ್ನು ಸಹ ಸೆಳೆದಿದ್ದಾರೆ. ಇದೀಗ ಅರವತ್ತು ದಾಟಿದರೂ ಅರಳು ಮರುಳಾಗಿಲ್ಲ ಕನ್ನಡಕ್ಕಾಗಿ ಎಲ್ಲರನ್ನು ಮರುಳು ಮಾಡುತ್ತಾರೆ. ಕನ್ನಡ ಗಡಿಯಾರ: ಕನ್ನಡ ಅಂಕಿಗಳಿರುವ ಗೋಡೆ ಗಡಿಯಾರವನ್ನು ತಾವೇ ಸ್ವಂತ ಖರ್ಚಿನಿಂದ ಮಾಡಿಸಿದ್ದಾರೆ. ಅದರಲ್ಲಿ ಸುಂದರ ಪದ್ಯವನ್ನು ಸಹ ಅಚ್ಚು ಹಾಕಿಸಿದ್ದಾರೆ. ಕನ್ನಡದ 1,2,3,4 ಅಂಕಿಗಳು ಬರುವಂತೆ ಪದ್ಯ ಇಲ್ಲಿದೆ. ‘ಸಗ್ಗದ ಮುತ್ತಿನ ಕನ್ನಡ ಬಳ್ಳಿ ಕಾವ್ಯ ಶ್ರೀಗಂ‘ ಹೆಮ್ಮೆಯ ವ್ಯಾಪಕ ವೆ‘‘ವದ ಕರ್ನಾಟಕ ಚಂದ’ ಈ ಸಾಲು ಹಲವಾರು ಸಾಹಿತಿಗಳನ್ನು ಆಕರ್ಷಿಸಿದೆ. ಈ ಗಡಿಯಾರವನ್ನು ತಮ್ಮ ಮನೆಯ ಕಾರ್ಯಕ್ರಮಗಳಿಗೆ ಆಗಮಿಸಿದ ಅತಿಥಿಗಳಿಗೆ ಕಾಣಿಕೆಯಾಗಿ ನೀಡಿದ್ದಾರೆ. ಹೊಡೆತ: 1978-79ರಲ್ಲಿ ಹುಬ್ಬಳ್ಳಿ ದುರ್ಗದಬೆ‘ಲ್‌ನಲ್ಲಿ ಗಣೇಶೋತ್ಸವ ಸಂದ‘ರ್ದಲ್ಲಿ ಮರಾಠಿ ಹಾಡುಗಳನ್ನು ಹಾಕಿದ್ದರು.ಆಗ ಅಲ್ಲಿ ತೆರಳಿ ಕನ್ನಡದ ಹಾಡುಗಳನ್ನು ಹಾಕಿರಿ ಎಂದಾಗ ಅಲ್ಲಿದ್ದವರೆಲ್ಲ ಸೇರಿ ಇವರನ್ನು ಹೊಡೆದರು. ಆದರೂ ಪಟ್ಟು ಬಿಡದೆ ಅವರಿಗೆ ತಿಳಿಹೇಳಿ ಕನ್ನಡದ ಕ್ಯಾಸೆಟ್ ಕೊಟ್ಟು ಕನ್ನಡದ ಹಾಡನ್ನು ಹಾಕಿಸಿದ್ದಾಗಿ ಹೇಳುತ್ತಾರೆ. ಇಂತಹ ಘಟನೆಗಳಿಂದಾಗಿ ಮನೆಯಲ್ಲಿ ಎಲ್ಲರೂ ಬೇಜಾರು ಮಾಡಿಕೊಂಡು ಇಂತಹ ಹವ್ಯಾಸ ಬಿಡಲು ಕೇಳಿಕೊಂಡರು.ಪಟ್ಟು ಬಿಡಲಿಲ್ಲ ಇದರಿಂದಾಗಿ ಕೆಲವು ನೆಂಟರಿಂದ ದೂರವಾಗಬೇಕಾಯಿತು. ನನ್ನ ಮನಸ್ಥಿತಿ ಅರಿತು ಹೆಂಡತಿ ಮಕ್ಕಳು ಎಲ್ಲ ಕೆಲಸಗಳಿಗೆ ಬೆನ್ನೆಲುಬಾಗಿ ನಿಂತರು. ಹೋರಾಟ: ರಾಜ್ಯಾದ್ಯಂತ ದೂರದರ್ಶನ ಕನ್ನಡ ಪ್ರಸಾರವಾಗಬೇಕು ಎಂಬ ಹೋರಾಟ, ದ್ವಿತೀಯ ಪಿಯುಸಿಯಲ್ಲಿ ಕರ್ನಾಟಕ ಇತಿಹಾಸ ಸೇರಿಸಲು ಹೋರಾಟ,ಆಲಮಟ್ಟಿ ಅಣೆಕಟ್ಟಿನ ಬಚಾವತ್ ತೀರ್ಪು ಜಾರಿಗೆ, ಕಾವೇರಿ ನೀರು ಹೋರಾಟ, ಗೋಕಾಕ ಚಳವಳಿ,ನೆ‘ರುತ್ಯ ರೆ‘ಲ್ವೆ ಹೋರಾಟ, ಕನ್ನಡ ನಾಮಫಲಕ ಅಳವಡಿಸಲು,ಹೆ‘ಕೋರ್ಟ್ ಪೀಠ, ಅವಳಿ ನಗರ ಅಭಿವದ್ಧಿಗಾಗಿ ಇಂತಹ ಹಲವಾರು ಹೋರಾಟಗಳಲ್ಲೂ ಮುಂಚೂಣಿಯಲ್ಲಿ ನಿಂತರು. ಪ್ರಶಸ್ತಿ: ಹು-‘ಾ ಪಾಲಿಕೆಯಿಂದ ಕನ್ನಡ ರಾಜ್ಯೋತ್ಸವ ಪುರಸ್ಕಾರ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್‌ನಿಂದ ಕರ್ನಾಟಕ ‘ೂಷಣ ಪ್ರಶಸ್ತಿ,ವಿಜಾಪುರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ ಹಾಗೂ ಹಲವಾರು ಸಂಘ ಸಂಸ್ಥೆಗಳು ಇವರನ್ನು ಸತ್ಕರಿಸಿವೆ. ಅನಕ ಅಭಿಮಾನಿ: ಹಿರಿಯ ಸಾಹಿತಿ ಅ.ನ.ಕ ಅವರ ಅಪ್ಪಟ ಅಭಿಮಾನಿ. ಪ್ರತಿವರ್ಷ ಅನಕ ಅವರ ಜನ್ಮದಿನ ಆಚರಿಸುತ್ತಾರೆ.ಹೀಗಾಗಿ ಕನ್ನಡದ ಕೆಲಸವೆಂದರೆ ಅಲ್ಲಿ ಮರೆಗುದ್ದಿ ಮರೆಯದೇ ಹಾಜರಿರುತ್ತಾರೆ. ದೇಗೇಗೌಡರು ಪ್ರ‘ಾನಿಯಾದಾಗ ಮಾರುಕಟ್ಟೆಯಲ್ಲಿ ಸಿಹಿಹಂಚಿದ್ದಾರೆ.ಕನ್ನಡಿಗ ಪ್ರ‘ಾನಿ ಹುದ್ದೆ ಅಲಂಕರಿಸಿದ್ದಾರೆ. ಇದು ರಾಜ್ಯಕ್ಕೆ ಹೆಮ್ಮೆಯ ವಿಷಯ ಎಂದರು. ಕನ್ನಡಿಗರು ದೇಶದ ಉನ್ನತ ಹುದ್ದೆಯಲ್ಲಿರಲಿ.ನಮಗೆ ಯಾವ ಪಕ್ಷದವರೇ ಆಗಲಿ ಕನ್ನಡಿಗರನ್ನು ದೇಶದ ಜನ ನೋಡುವಂತಾಗಬೇಕು. ಎಲ್ಲೆಡೆ ಕನ್ನಡ ಮೊಳಗಬೇಕು ಎಂಬುದು ಅವರ ಆಶಯ. ಕನ್ನಡಕ್ಕಾಗಿ ಕೆ‘ ಎತ್ತು ಕೆ‘ ಕಲ್ಪವಕ್ಷವಾಗುತ್ತದೆ ಎಂಬಂತೆ ಕನ್ನಡಿಗರು ಬೆಳೆಯಲಿ.ಕನ್ನಡದ ಕೆಲಸಕ್ಕೆ ಮರೆಗುದ್ದಿ ಅವರ ಕೆ‘ ಬಲಪಡಿಸೋಣ. ಜೆ‘ ಕರ್ನಾಟಕ ಮಾತೆ.


..........................................................

ರಂಗ‘ೂಮಿಯಲ್ಲಿ ಬದುಕು ಕಟ್ಟಿಕೊಂಡ ಬಸವರಾಜ

ವೀರೇಶ ಹಂಡಿಗಿ ಹುಬ್ಬಳ್ಳಿ

ಮಹಾ‘ಾರತದ ‘ುರ್ಯೋ‘ನನ ಚಿತ್ರಣ ಕಣ್ಮುಂದೆ ಬರಬೇಕು ಎಂದರೆ ದಿ.ಕಂದಗಲ್ ಹನುಂತರಾಯರ ರಕ್ತರಾತ್ರಿ ನಾಟಕ ಓದಬೇಕು. ಈಪಾತ್ರವನ್ನು ನೋಡಿದಾಗ ಬೆವರು ಇಳಿಯುತ್ತದೆ. ಹೃದಯ ಡವಡವ ಹೊಡೆದುಕೊಳ್ಳುತ್ತದೆ. ಇಂತಹ ಪಾತ್ರವನ್ನು ನೇರವಾಗಿ ನೋಡಿದರೆ ನೋಡುಗನ ಮನಸ್ಥಿತಿ ಹೇಗಿರುತ್ತದೆ ಒಂದು ಕ್ಷಣ ಯೋಚಿಸಿ...

ಅಜಾನುಬಾಹು ದೇಹ,ಗಡಸು ‘್ವನಿ ಕಣ್ಣರಳಿಸಿ ನೋಡುವ ರೀತಿ ಇವೆಲ್ಲವನ್ನು ಲೀಲಾಜಾಲವಾಗಿ ಮಾಡುವ ಬಸವರಾಜ ತೀರ್ಲಾಪೂರ(ದೊಟಿಕಲ್) ಅಪರೂಪದ ರಂಗಕರ್ಮಿ.

‘ುರ್ಯೋ‘ನನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದಂತೆ ಇವರ ಅಭಿನಯ.ಯಾವ ಮೈಕು ಬೇಡ ಅಷ್ಟು ಎತ್ತರದ ‘್ವನಿ. ಪೌರಾಣಿಕ ಪಾತ್ರಗಳಿಗೆ ಹೇಳಿಮಾಡಿಸಿದಂತಹ ವ್ಯಕ್ತಿತ್ವ ಇವರದು. ಮಹಾ‘ಾರತದ ಪಾತ್ರಗಳನ್ನು ಮಾಡಬೇಕಾದರೆ ಸ್ಪಷ್ಟ ಉಚ್ಚಾರ ಬೇಕು.ಸಂಸ್ಕೃತ,ಹಳಗನ್ನಡ ‘ಾಷೆ ಜ್ಞಾನ ಬೇಕು.‘ಾಷೆಯ ಏರಿಳಿತ ಅರಿತಿರಬೇಕು.ಅಂದಾಗ ಆ ಪಾತ್ರ ಹಾಗೂ ಮಾತಿಗೆ ಒಂದಿಷ್ಟು ಘನತೆ ಬರುತ್ತದೆ. ಇವರ ಮಾತುಗಳಲ್ಲಿ ಗುಡುಗು ಮಿಂಚು ಹೊಡೆದಂತೆ ‘ಾಸವಾಗುತ್ತದೆ.ಪೌರಾಣಿಕ ಪಾತ್ರಗಳನ್ನು ಲೀಲಾಜಾಲವಾಗಿ ನಿರ್ವಹಿಸುತ್ತಾರೆ. ಅವರು ಪರಕಾಯ ಪ್ರವೇಶ ಮಾಡಿದಂತೆ ಪಾತ್ರಗಳಲ್ಲಿ ಒಂದಾಗಿ ಹೋಗುತ್ತಾರೆ.ಅಂತಹ ಅದ್ಭುತ ಕಲಾವಿದ ಹುಬ್ಬಳ್ಳಿಯ ಬಸವರಾಜ. ಬಾಲ್ಯ: ತಂದೆ ಹಾಸ್ಯ ಕಲಾವಿದ ನವಲಗುಂದ ತಾಲೂಕಿನ ಪಡೆಸೂರ ಗ್ರಾಮದ ದಿ.ಸಿದ್ದಣ್ಣ ದೊಟಿಕಲ್ ಅವರು 1964 ರಲ್ಲಿ ತೀರಿಕೊಂಡಾಗ ತಾಯಿಯ ತವರು ತೀರ್ಲಾಪುರ ಗ್ರಾಮಕ್ಕೆ ಬಸವರಾಜ ಬಂದು ನೆಲೆ ನಿಂತರು. ಪಡೆಸೂರಿನಲ್ಲಿ ಯಡೆಯೂರು ಸಿದ್ದಲಿಂಗೇಶ್ವರ ನಾಟ್ಯ ಸಂಘದಲ್ಲಿ ತಂದೆಯವರು ಪಾತ್ರ ಮಾಡುತ್ತಿದ್ದರು. ಬಾಲ್ಯದಲ್ಲಿಯೇ ತಂದೆಯ ನಟನೆಯನ್ನು ನೋಡುತ್ತಲೇ ಬೆಳೆದವರು.

ಬಸವರಾಜ ಎಸ್‌ಎಸ್‌ಎಲ್‌ಸಿ ಸಹ ಮಾಡಲಿಲ್ಲ.ಶಾಲೆಯಲ್ಲಿ ನಾಟಕದಲ್ಲಿ ಅಭಿನಯಿಸುತ್ತಿದ್ದರು. ನಂತರದ ದಿನಗಳಲ್ಲಿ ಡ್ರೈವರ್ ಕೆಲಸ ಆರಮಭಿಸಿದರು.ಲಾರಿ,ಟ್ರ್ಯಾಕ್ಟರ್,ರೋಡ್ ರೋಲರ್ ನಡೆಸುತ್ತ ಬದುಕು ನಡೆಸಿದರು. ಅಪಘಾತವೊಂದರಲ್ಲಿ ಪೆಟ್ಟು ತಿಂದು ಡ್ರೈವರ ಕೆಲಸಕ್ಕೆ ತೀಲಾಂಜಲಿ ಇತ್ತರು.

ರಂಗ‘ೂಮಿಯತ್ತ ಬದುಕು: ನವಲಗುಂದದಲ್ಲಿ ಗೋಕಾಕ ಕಂಪನಿ ಬಂದಿತ್ತು.ಅಲ್ಲಿ ಒಬ್ಬ ಕಲಾವಿದನ ಕೊರತೆ ಇತ್ತು. ಅದನ್ನು ನೀಗಿಸಲು ಕಂಪನಿಯವರು ಹುಡುಕಾಟದಲ್ಲಿದ್ದರು. ಬಸವರಾಜನ ನಟನೆ ಬಗ್ಗೆ ತಿಳಿದ ಕಂಪನಿಯವರು ಒಪ್ಪಿಸಿ ಕರೆತಂದು ಬಣ್ಣ ಹಚ್ಚಿದರು.ಅಲ್ಲಿಂದ ಇಲ್ಲಿಯವರೆಗೆ ಅಖಂಡ 36 ವರ್ಷಗಳ ಕಾಲ ಬಣ್ಣದ ಲೋಕದಲ್ಲಿ ತೇಲುತ್ತಿದ್ದಾರೆ. ಕಂಪನಿಯಲ್ಲಿ ಜೀವನ: ಹಿರಿಯ ರಂಗಕರ್ಮಿ ಗುಡಗೇರಿ ಬಸವರಾಜ ಅವರ ನಾಟಕ ರಂಗದಲ್ಲಿ ಪೂರ್ಣಾವ ಕಲಾವಿದರಾಗಿ ಸೇವೆ ಸಲ್ಲಿಸತೊಡಗಿದರು. ಗುಡಗೇರಿ ಬಸವರಾಜ ಅವರು ಇವರನ್ನು ಬಹಳ ಆತ್ಮೀಯವಾಗಿ ಕಂಡುಕೊಂಡರು.ಇವರ ಅಭಿನಯವನ್ನು ಒರೆಗೆ ಹಚ್ಚುವಂತಹ ಪಾತ್ರಗಳನ್ನು ನೀಡುತ್ತಿದ್ದರು. ಹಾಗೂ ಅವರನ್ನು ಹುರಿದುಂಬಿಸುತ್ತಿದ್ದರು. ಸತ್ಯ ಸತ್ತಿತು ನಾಟಕದ ‘ರ್ಮಪುತ್ರ,ರೈತನ ಮಕ್ಕಳು ,ದುಡ್ಡಿನ ದರ್ಪ, ಗೌಡರ ಗಂಗಿಯ ಪರ್ವತಗೌಡ, ಸಿಂ‘ೂರ ಲಕ್ಷ್ಮಣದಲ್ಲಿ ಭೀಮನಗೌಡ ಪಾತ್ರಗಳು ಇವರನ್ನು ಉತ್ತುಂಗಕ್ಕೆ ಏರಿಸಿದವು. ಗುಡಗೇರಿ ಬಸವರಾಜ ಅವರ ನಿ‘ನದ ನಂತರ ಕಂಪನಿಯಿಂದ ಹೊರಬಂದ ಅವರು ಬೇರೆ ಬೇರೆ ನಾಟಕಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಹಿರಿ,ಕಿರು ತೆರೆ:

ಚಿತ್ರರಂಗ  ಹಾಗೂ ಹಿರಿ ಹಾಗೂ ಕಿರು ತೆರೆಯು ಇವರ ಅಭಿನಯ ಕಂಡು ಕೈಬೀಸಿ ಕರೆಯಿತು. ಅಲ್ಲಿ ಅವರು ರೀ ಟೇಕ್ ಇಲ್ಲದೆ ಅಭಿನಯಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.

ಸಂಗ್ಯಾ ಬಾಳ್ಯಾ, ಶ್ರೀ ಗುಡ್ಡಾಪುರ ದಾನಮ್ಮ ದೇವಿ, ಚೆಲ್ಲಿದರೋ ಮಲ್ಲಿಗೆಯಾ, ವೀರಪರಂಪರೆ,ಸರ್ಕಲ್ ರೌಡಿ,,ಲಡ್ಡು ಮುತ್ಯಾ, ಕೋಟೆ, ಐಪಿಎಸ್ ರಾಗಿಣಿ,ಹಿರಿಯ ನಿರ್ದೆಶಕ ಪಿ.ಶೇಷಾದ್ರಿ ಅವರ ಡಿಸೆಂಬರ 1 ಹಾಗೂ ಬಿಡುಗಡೆಗೆ ಸಿದ್ಧವಾದ ಉಪೇಂದ್ರ ಅವರ ನಾಮ ಚಿತ್ರ ಹಾಗೂ ಇತರ 4 ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಬಸವರಾಜ ಲೀಲಾಜಾಲವಾಗಿ ಅಭಿನಯಿಸುವ ಚತುರ ಕಲಾವಿದ ಎಂದು ಇವರ ಅಭಿನಯ ಕಂಡು ಹಿರಿಯ ನಿರ್ದೇಶಕ ಶೇಷಾದ್ರಿ ಹೇಳುತ್ತಾರೆ. ಕಿರು ತೆರೆಯ ಶ್ರೀ ರಾಘವೇಂದ್ರ ವೈ‘ವ, ಸಿಲ್ಲಿ ಲಲ್ಲಿ, ಪಾಪ ಪಾಂಡು, ಎಂಥಾ ಲೋಕವಯ್ಯಾ, ನಾಕು ತಂತಿ,ತಕಮಿತಾ ಮುಂತಾದ ‘ಾರಾವಾಹಿಗಳಲ್ಲಿ ಮಿಂಚಿದ್ದಾರೆ. ಹೀಗೆ ಹಿರಿ ಹಾಗೂ ಕಿರು ತೆರೆಯಲ್ಲಿಯೂ ನಟಿಸುತ್ತ ಕನ್ನಡ ಸೇವೆ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕದ ಪಾತ್ರಗಳು ಇದ್ದರೆ ಚಿತ್ರರಂಗದವರಿಗೆ ನೆನಪಾಗುವುದು ಈ ಬಸವರಾಜನೇ. ಹೀಗಾಗಿ ಹಳ್ಳಿಯಿಂದ ರಾಜ‘ಾನಿವರೆಗೆ ಇವರು ಹೆಸರು ಚಿರಪರಿಚಿತ ಬಿರುದು:

ಇವರ ಅಭಿನಯ ಕಂಡು ಹಲವಾರು ಬಿರುದುಗಳು ಇವರನ್ನರಸಿ ಬಂದಿವೆ. ನಟ ನಕ್ಷತ್ರ, ನಟ ನೃಪತುಂಗ, ರಂಗ ‘ೃವತಾರೆ, ನಟ ಕುವರ,ಅಭಿನಯ ದಿಗ್ಗಜ ಬಿರುದುಗಳು ಇವರ ಮುಡಿಗೇರಿವೆ. ಪ್ರಶಸ್ತಿ ಹೆಸರು ಬಂದರೂ ಇವರಿಗೆ ಹಮ್ಮು ಬಿಮ್ಮುಗಳಿಲ್ಲ.ಎಲ್ಲರೊಂದಿಗೆ ಸ್ನೇಹದಿಂದಲೇ ಬೆರೆಯುತ್ತಾರೆ. ಸರಕಾರದ ಯಾವ ಯೋಜನೆಗಳ ಲಾ‘ ಪಡೆಯದೆ ಕಲಾ ಪೋಷಕರ ನೆರವಿನಿಂದಲೇ ಜೀವನ ಕಟ್ಟಿಕೊಳ್ಳುತ್ತಿದ್ದಾರೆ.

ಯಾರ ದುಂಬಾಲು ಬೀಳದೆ ತಮ್ಮ ನಟನೆಯಿಂದಲೇ ಮೇಲೆದ್ದು ಬಂದವರು.ಇಷ್ಟೆಲ್ಲ ಸಿನಿಮಾ,ಟಿವಿಗಳಲ್ಲಿ ಪಾತ್ರ ಮಾಡಿದರೂ ಅವರ ಹೆಚ್ಚಿನ ಒಲವು ರಂಗ‘ೂಮಿಗೆ ಮೀಸಲು. ಚಿತ್ರರಂಗದಲ್ಲಿ ಅವಕಾಶ ಸಿಕ್ಕ ಕೂಡಲೇ ರಂಗ‘ೂಮಿ ಮರೆಯಬಾರದು.ರಂಗ‘ೂಮಿಯೇ ಮೂಲ ಕಲಾ ಕೇಂದ್ರ. ಇಲ್ಲಿ ಯಶಸ್ವಿಯಾದರೆ ಎಲ್ಲ ಕಡೆಗೂ ಯಶಸ್ಸು ತಾನಾಗಿಯೇ ಬರುತ್ತದೆ. ಯುವಜನತೆ ರಂಗ‘ೂಮಿಯತ್ತಬರಬೇಕು ಸಿನಿಮಾ ಹುಚ್ಚಿನಿಂದ ನೇರವಾಗಿ ಅಲ್ಲಿಗೆ ಹೋಗುತ್ತಾರೆ. ಹಾಗೆ ಹೋಗದೇ ರಂಗ‘ೂಮಿಯಲ್ಲಿ ತರಬೇತಿ ಪಡೆದು ಹೋಗಬೇಕು ಎಂದು ಯುವ ಕಲಾವಿದರಿಗೆ ಬಸವರಾಜ ಕಿವಿಮಾತು ಹೇಳುತ್ತಾರೆ.

ರಂಗ ಕುಟುಂಬ: ಪತ್ನಿ ಪರಿಮಳಾ ಕಲಾವಂತ ಅವರು ಸಹ ರಂಗ‘ೂಮಿಯಲ್ಲಿ ಸಕ್ರಿಯವಾಗಿದ್ದಾರೆ.ಮಹಿಳಾ ತಂಡ ಕಟ್ಟಿಕೊಂಡು ನಾಟಕಗಳನ್ನು ಮಾಡುತ್ತಾರೆ. ನಾಟಕ ಅಕಾಡೆಮಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮಗಳು ಅಂಜಲಿದೇವಿ ದೋಟಿಕಲ್ ಒದಿನೊಂದಿಗೆ ರಂಗ ಚಟವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತೆರೆಯ ಹಿಂದಿನ ಎಲ್ಲ ಕೆಲಸಗಳನ್ನು ನಿರ್ವಹಿಸುತ್ತಾಳೆ.

ನಮ್ಮ ಸಂಸ್ಕೃತಿ ರಂಗ‘ೂಮಿಯಲ್ಲಿದೆ ಅದನ್ನು ಆರಾಸಬೇಕು ತಾಯಿಯಂತೆ ನೋಡಬೇಕು.ಚಿತ್ರರಂಗ ಹೆಂಡತಿಯಂತೆ ಆಕರ್ಷಣೆ. ಹೀಗಾಗಿ ತಾಯಿಯನ್ನು ಮರೆಯಬಾರದು ಎಂದು ಕಿರಿಯರಿಗೆ ಪಾಠ ಮಾಡುತ್ತಾರೆ. ಇವರ ರಂಗ ಪಯಣ ಹೀಗೆಯೇ ನಿರಂತರವಾಗಿ ನಡೆಯಲಿ. ರಂಗ‘ೂಮಿ ಕಲಾವಿದರರಿಗೆ ಸರಕಾರ ನೆರವು ನೀಡಲಿ ಎಂಬುದೇ ಎಲ್ಲ ಕಲಾ ಆಸಕ್ತರ ಅಭಿಲಾಷೆ.










.....................................................................

ಕನ್ನಡ ‘ಮರೆ’ತರೆ ‘ಗುದ್ದಿ’ ಎಚ್ಚರಿಸುವ ವೆಂಕಟೇಶ ವೀರೇಶ ಹಂಡಿಗಿ ಹುಬ್ಬಳ್ಳಿ ಕರ್ನಾಟಕ ಏಕೀಕರಣವಾದರೂ ಕನ್ನಡದ ನೆಲ,ಜಲ,‘ಾಷೆ ಉಳಿವಿಗೆ ಹೋರಾಟಗಳನ್ನು ಇನ್ನೂ ನಡೆಸುವ ಅನಿವಾರ್ಯತೆ ಈ ನಾಡಿನಲ್ಲಿರುವುದು ದುರಂತದ ಸಂಗತಿ. ಪ್ರತಿ ರಂಗದಲ್ಲಿಯೂ ಹೋರಾಟ ಮಾಡಬೇಕಿದೆ.ಇದು ಸಂಘ ಸಂಸ್ಥೆಗಳು ಹಾಗೂ ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವೂ ಹೌದು. ಇಲ್ಲೊಬ್ಬ ನಮ್ಮ ನಡುವೆ ಸದ್ದಿಲ್ಲದೆ ಕನ್ನಡಕ್ಕಾಗಿ ಹೋರಾಡುತ್ತಲೇ ಇದ್ದಾರೆ. ಕನ್ನಡ ಮರೆತರೆ ಗುದ್ದಿ ಎಚ್ಚರಿಸುವ ವೆಂಕಟೇಶ ಮರೆಗುದ್ದಿ ಇತರರಿಗೆ ಮಾದರಿ. ಇವರ ಅಡ್ಡ ಹೆಸರಿಗೆ ಇವರ ಬದುಕು ಸಾರ್ಥಕವೆನ್ನಬಹುದು. ಅಪ್ಪಟ ಕನ್ನಡದಲ್ಲಿಯೇ ಮಾತು. ದೂರವಾಣಿ,ಜಂಗಮವಾಣಿ,ಸಂಖ್ಯೆಗಳ ಬಳಕೆ ಎಲ್ಲವೂ ಕನ್ನಡದಲ್ಲಿಯೇ. ಇದನ್ನು ಅವರು ಕೇವಲ ಪ್ರಚಾರಕ್ಕೆ ಮಾಡುತ್ತಿಲ್ಲ ಅವರು ಮನದಾಳದಿಂದ ಮಾಡುತ್ತಾರೆ. ಕನ್ನಡಕ್ಕಾಗಿ ಅವರು ಹಲವಾರು ಜನರೊಂದಿಗೆ ಜಗಳ ಕಾದಿದ್ದಾರೆ. ಹೊಡೆತವನ್ನು ತಿಂದಿದ್ದಾರೆ. ಒಂದು ಬಾರಿ ಪ್ರಾಣಕ್ಕೂ ಕುತ್ತು ತಂದುಕೊಂಡಿದ್ದರು. ಸ್ವಂತ ಹಣ ಖರ್ಚು:

ಕನ್ನಡದ ಕೆಲಸವೆಂದು ಹಲವರಿಂದ ಹಣ ಸಂಗ್ರಹಿಸಿ ಕಾರ್ಯಕ್ರಮ ಮಾಡುವುದಿಲ್ಲ. ತಮ್ಮ ಗಳಿಕೆಯ ಶೇ.5 ರಿಂದ 10 ರಷ್ಟನ್ನು ಕನ್ನಡದ ಕೆಲಸಕ್ಕಾಗಿ ಮೀಸಲಿರಿಸುತ್ತಾರೆ.

ಮನೆ ಮೇಲೆ ಕನ್ನಡ ‘್ವಜ: ಹುಬ್ಬಳ್ಳಿಯ ವೆಂಕಟೇಶ ಕಾಲೊನಿಯಲ್ಲಿರುವ ಇವರ ಮನೆ ಸರ್ವಜ್ಞ ಕನ್ನಡಿಗರನ್ನು ಸ್ವಾಗತಿಸುತ್ತಾನೆ. ಮನೆ ಮೇಲೆ ಯಾವಾಗಲೂ ಕನ್ನಡದ ‘್ವಜ ಹಾರುತ್ತಿರುತ್ತದೆ. ಮನೆಯ ಗಹ ಪ್ರವೇಶ ಸಂದ‘ರ್ದಲ್ಲಿ ಕನ್ನಡದ ಜ್ಞಾನ ಪೀಠ ಪುರಸ್ಕೃತರ ಫೋಟೊ ಇಟ್ಟು ಪೂಜಿಸಿ ಗಹ ಪ್ರವೇಶ ಮಾಡಿದ್ದಾರೆ. ಮನೆಯ ಹಾಲ್‌ಗೆ ಅಲ್ಲಮಪ್ರ‘ು ಸ‘ಾಂಗಣ ಎಂದು ಹೆಸರಿಸಿದ್ದಾರೆ. ಅಲ್ಲಿಯೇ ಹಲವಾರು ಕನ್ನಡದ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಅಡುಗೆ ಮನೆಗೆ ಅಕ್ಕ ಮಹಾದೇವಿ ಹೆಸರು,ಕೊಣೆಗೆ ಪಂಪ,ರನ್ನ ನ ಹೆಸರಿಸಿದ್ದಾರೆ.ಮಹಡಿ ಏರಿದಾಗ ಲಕ್ಷ್ಮೀಶ, ರಾಘವಾಂಕ,ಕುಮಾರವ್ಯಾಸ, ಹೆಸರಿನ ಕೊಣೆ ಇವೆ. ಈ ಮನೆಯಲ್ಲಿ ಕನ್ನಡದ ಪುಸ್ತಕ,ಸಿಡಿ,ಕ್ಯಾಸೆಟ್‌ಗಳು ಸಿಗುತ್ತವೆ. ಪ್ರೇರಣೆ: ವೆಂಕಟೇಶ ಅವರ ಸಹೋದರ ಮಹಾರಾಷ್ಟ್ರ ಸರಕಾರದ ಪಿಡ್ಲ್ಯುಡಿ ಯಲ್ಲಿ ಸೇವೆಯಲ್ಲಿದ್ದರು. ಅಲ್ಲಿ ಕೂಲಿಯಾಳುಗಳ ಹಣ ಕನ್ನಡದಲ್ಲಿಯೇ ಎಣಿಸುತ್ತಿದ್ದರು. ಆಗ ಅಲ್ಲಿನ ಜನರು ಇದನ್ನು ವಿರೋಸಿದರು. ಇದರಿಂದ ಬೆಸತ್ತು ಸರಕಾರಿ ಸೇವೆಗೆ ತೀಲಾಂಜಲಿಯಿಟ್ಟರು. ನಂತರ ಮಿಲಿಟರಿಗೆ ಸೇರಿದರು. ಪುಣೆಯಲ್ಲಿದ್ದಾಗ ಕನ್ನಡಿಗರನ್ನು ಕೀಳಾಗಿ ಕಾಣುತ್ತಿದ್ದರು. ಇದನ್ನು ಕಂಡು ರೋಸಿ ಹೋಗಿದ್ದ ವೆಂಕಟೇಶ ಕನ್ನಡದ ಕೆಚ್ಚನ್ನು ಬೆಳೆಸಿಕೊಳ್ಳಬೇಕು .ಏನೇ ಮಾಡಿದರೂ ಕನ್ನಡದ ಕೆಲಸವನ್ನೇ ಮಾಡಬೇಕು ಎಂದು ನಿ‘ರ್ರಿಸಿದ್ದಾಗಿ ಹೇಳುತ್ತಾರೆ. ಪುಣೆಯಲ್ಲಿದ್ದಾಗ ಅಲ್ಲಿನ ಒಂದು ರಾಜಕೀಯ ಸಂಘಟನೆಯ ಕಾರ್ಯಕರ್ತರು ಇವರ ಕನ್ನಡಾಭಿಮಾನಕ್ಕೆ ವಿರೊ‘ವ್ಯಕ್ತಪಡಿಸಿ ಮನೆಗೆ ನುಗ್ಗಿ ಹಲ್ಲೆಗೆ ಮುಂದಾಗಿದ್ದರು. ಹುಬ್ಬಳ್ಳಿಯತ್ತ ಪಯಣ: ಹೊಟ್ಟೆಪಾಡಿಗಾಗಿ ಅಕ್ಕಸಾಲಿಗ ಕೆಲಸ ಹುಡುಕುತ್ತ ಹುಬ್ಬಳ್ಳಿಗೆ ಬಂದರು.ಅಂದು ಲೆಕ್ಕ ಪತ್ರಗಳನ್ನೆಲ್ಲ ಮರಾಠಿಯಲ್ಲಿ ಬರೆಯುತ್ತಿದ್ದರು. ಆದರೆ ವೆಂಕಟೇಶ ಕನ್ನಡದಲ್ಲಿ ಬರೆಯುತ್ತಿದ್ದರು.ಹೀಗಾಗಿ ಇವರಿಗೆ ಅಕ್ಕಸಾಲಿಗ ಅಂಗಡಿಯಲ್ಲಿ ಯಾರೂ ಕೆಲಸ ಕೊಡಲಿಲ್ಲ.ನಂತರ ಸ್ವಂತ ಬಲದಿಂದ ಅಂಗಡಿ ಆರಂಭಿಸಿದರು. ಇವರು ತಯಾರಿಸುತ್ತಿದ್ದ ಬೋರಮಾಳ ಬಹಳ ಪ್ರಸಿದ್ದಿ ಪಡೆದಿತ್ತು. ಮಾರುಕಟ್ಟೆಯಲ್ಲಿ ಮರೆಗುದ್ದಿ ಬೋರಮಾಳ ಎಂದೇ ಖ್ಯಾತಿಯಾಗಿತ್ತು. ವೀರಪುಲಿಕೇಶಿ ಸಂಘಟನೆ: ಶಾಲಾ ದಿನಗಳಲ್ಲಿ ವೀರಪುಲಕೇಶಿಯ ಪಾಠ ಕೇಳಿ ಪ್ರ‘ಾವಿತರಾಗಿದ್ದರು. ನಂತರದ ದಿನಗಳಲ್ಲಿ ವೀರಪುಲಕೇಶಿ ಕನ್ನಡ ಬಳಗ ಕಟ್ಟಿದರು.ಈ ಸಂಘಟನೆಯಿಂದ 205 ಕಾರ್ಯಕ್ರಮಗಳನ್ನು ಸ್ವಂತ ಖರ್ಚಿನಲ್ಲಿಯೇ ಮಾಡಿದರು. ಯಾರಿಂದಲೂ ಹಣ ಕೇಳುವುದಿಲ್ಲ.ಮನೆ ಮನೆಯಲ್ಲಿ ಕನ್ನಡದ ಕಂಪು ಕಾರ್ಯಕ್ರಮವನ್ನು ತಾವೇ ಖುದ್ದಾಗಿ ನಿರ್ವಹಿಸಿದ್ದಾರೆ. ಮಗಳ ಮದುವೆಯಲ್ಲಿ ‘ಸಾಹಿತ್ಯ ತಾಂಬೂಲ’ ಪುಸ್ತಕ ಪ್ರಕಟಿಸಿ ವಿತರಿಸಿದರು. ಹುಬ್ಬಳ್ಳಿಯಲ್ಲಿ ಕನ್ನಡದ ನಾಮಫಲಕ ಹಾಕಿರುವ ಮಾಲೀಕರನ್ನು ಅವರ ಅಂಗಡಿ ಮುಂದೆಯೇ ಸನ್ಮಾನಿಸಿ ‘ವೀರ ಕನ್ನಡಿಗ’ ಪ್ರಶಸ್ತಿ ನೀಡಿ ಗೌರವಿಸುತ್ತಾರೆ. ಲಕ್ಷ ಪತ್ರ ಚಳವಳಿ: ಕನ್ನಡ ಶಾಸ್ತ್ರೀಯ ‘ಾಷೆಗಾಗಿ ಲಕ್ಷ ಪತ್ರ ಚಳವಳಿ ನಡೆಸಿದ್ದು ಅವಿಸ್ಮರಣೀಯ. ಇದರಿಂದ ಕೇಂದ್ರ ಸರಕಾರದ ಗಮನವನ್ನು ಸಹ ಸೆಳೆದಿದ್ದಾರೆ. ಇದೀಗ ಅರವತ್ತು ದಾಟಿದರೂ ಅರಳು ಮರುಳಾಗಿಲ್ಲ ಕನ್ನಡಕ್ಕಾಗಿ ಎಲ್ಲರನ್ನು ಮರುಳು ಮಾಡುತ್ತಾರೆ. ಕನ್ನಡ ಗಡಿಯಾರ: ಕನ್ನಡ ಅಂಕಿಗಳಿರುವ ಗೋಡೆ ಗಡಿಯಾರವನ್ನು ತಾವೇ ಸ್ವಂತ ಖರ್ಚಿನಿಂದ ಮಾಡಿಸಿದ್ದಾರೆ. ಅದರಲ್ಲಿ ಸುಂದರ ಪದ್ಯವನ್ನು ಸಹ ಅಚ್ಚು ಹಾಕಿಸಿದ್ದಾರೆ. ಕನ್ನಡದ 1,2,3,4 ಅಂಕಿಗಳು ಬರುವಂತೆ ಪದ್ಯ ಇಲ್ಲಿದೆ. ‘ಸಗ್ಗದ ಮುತ್ತಿನ ಕನ್ನಡ ಬಳ್ಳಿ ಕಾವ್ಯ ಶ್ರೀಗಂ‘ ಹೆಮ್ಮೆಯ ವ್ಯಾಪಕ ವೆ‘‘ವದ ಕರ್ನಾಟಕ ಚಂದ’ ಈ ಸಾಲು ಹಲವಾರು ಸಾಹಿತಿಗಳನ್ನು ಆಕರ್ಷಿಸಿದೆ. ಈ ಗಡಿಯಾರವನ್ನು ತಮ್ಮ ಮನೆಯ ಕಾರ್ಯಕ್ರಮಗಳಿಗೆ ಆಗಮಿಸಿದ ಅತಿಥಿಗಳಿಗೆ ಕಾಣಿಕೆಯಾಗಿ ನೀಡಿದ್ದಾರೆ. ಹೊಡೆತ: 1978-79ರಲ್ಲಿ ಹುಬ್ಬಳ್ಳಿ ದುರ್ಗದಬೆ‘ಲ್‌ನಲ್ಲಿ ಗಣೇಶೋತ್ಸವ ಸಂದ‘ರ್ದಲ್ಲಿ ಮರಾಠಿ ಹಾಡುಗಳನ್ನು ಹಾಕಿದ್ದರು.ಆಗ ಅಲ್ಲಿ ತೆರಳಿ ಕನ್ನಡದ ಹಾಡುಗಳನ್ನು ಹಾಕಿರಿ ಎಂದಾಗ ಅಲ್ಲಿದ್ದವರೆಲ್ಲ ಸೇರಿ ಇವರನ್ನು ಹೊಡೆದರು. ಆದರೂ ಪಟ್ಟು ಬಿಡದೆ ಅವರಿಗೆ ತಿಳಿಹೇಳಿ ಕನ್ನಡದ ಕ್ಯಾಸೆಟ್ ಕೊಟ್ಟು ಕನ್ನಡದ ಹಾಡನ್ನು ಹಾಕಿಸಿದ್ದಾಗಿ ಹೇಳುತ್ತಾರೆ. ಇಂತಹ ಘಟನೆಗಳಿಂದಾಗಿ ಮನೆಯಲ್ಲಿ ಎಲ್ಲರೂ ಬೇಜಾರು ಮಾಡಿಕೊಂಡು ಇಂತಹ ಹವ್ಯಾಸ ಬಿಡಲು ಕೇಳಿಕೊಂಡರು.ಪಟ್ಟು ಬಿಡಲಿಲ್ಲ ಇದರಿಂದಾಗಿ ಕೆಲವು ನೆಂಟರಿಂದ ದೂರವಾಗಬೇಕಾಯಿತು. ನನ್ನ ಮನಸ್ಥಿತಿ ಅರಿತು ಹೆಂಡತಿ ಮಕ್ಕಳು ಎಲ್ಲ ಕೆಲಸಗಳಿಗೆ ಬೆನ್ನೆಲುಬಾಗಿ ನಿಂತರು. ಹೋರಾಟ: ರಾಜ್ಯಾದ್ಯಂತ ದೂರದರ್ಶನ ಕನ್ನಡ ಪ್ರಸಾರವಾಗಬೇಕು ಎಂಬ ಹೋರಾಟ, ದ್ವಿತೀಯ ಪಿಯುಸಿಯಲ್ಲಿ ಕರ್ನಾಟಕ ಇತಿಹಾಸ ಸೇರಿಸಲು ಹೋರಾಟ,ಆಲಮಟ್ಟಿ ಅಣೆಕಟ್ಟಿನ ಬಚಾವತ್ ತೀರ್ಪು ಜಾರಿಗೆ, ಕಾವೇರಿ ನೀರು ಹೋರಾಟ, ಗೋಕಾಕ ಚಳವಳಿ,ನೆ‘ರುತ್ಯ ರೆ‘ಲ್ವೆ ಹೋರಾಟ, ಕನ್ನಡ ನಾಮಫಲಕ ಅಳವಡಿಸಲು,ಹೆ‘ಕೋರ್ಟ್ ಪೀಠ, ಅವಳಿ ನಗರ ಅಭಿವದ್ಧಿಗಾಗಿ ಇಂತಹ ಹಲವಾರು ಹೋರಾಟಗಳಲ್ಲೂ ಮುಂಚೂಣಿಯಲ್ಲಿ ನಿಂತರು. ಪ್ರಶಸ್ತಿ: ಹು-‘ಾ ಪಾಲಿಕೆಯಿಂದ ಕನ್ನಡ ರಾಜ್ಯೋತ್ಸವ ಪುರಸ್ಕಾರ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್‌ನಿಂದ ಕರ್ನಾಟಕ ‘ೂಷಣ ಪ್ರಶಸ್ತಿ,ವಿಜಾಪುರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ ಹಾಗೂ ಹಲವಾರು ಸಂಘ ಸಂಸ್ಥೆಗಳು ಇವರನ್ನು ಸತ್ಕರಿಸಿವೆ. ಅನಕ ಅಭಿಮಾನಿ: ಹಿರಿಯ ಸಾಹಿತಿ ಅ.ನ.ಕ ಅವರ ಅಪ್ಪಟ ಅಭಿಮಾನಿ. ಪ್ರತಿವರ್ಷ ಅನಕ ಅವರ ಜನ್ಮದಿನ ಆಚರಿಸುತ್ತಾರೆ.ಹೀಗಾಗಿ ಕನ್ನಡದ ಕೆಲಸವೆಂದರೆ ಅಲ್ಲಿ ಮರೆಗುದ್ದಿ ಮರೆಯದೇ ಹಾಜರಿರುತ್ತಾರೆ. ದೇಗೇಗೌಡರು ಪ್ರ‘ಾನಿಯಾದಾಗ ಮಾರುಕಟ್ಟೆಯಲ್ಲಿ ಸಿಹಿಹಂಚಿದ್ದಾರೆ.ಕನ್ನಡಿಗ ಪ್ರ‘ಾನಿ ಹುದ್ದೆ ಅಲಂಕರಿಸಿದ್ದಾರೆ. ಇದು ರಾಜ್ಯಕ್ಕೆ ಹೆಮ್ಮೆಯ ವಿಷಯ ಎಂದರು. ಕನ್ನಡಿಗರು ದೇಶದ ಉನ್ನತ ಹುದ್ದೆಯಲ್ಲಿರಲಿ.ನಮಗೆ ಯಾವ ಪಕ್ಷದವರೇ ಆಗಲಿ ಕನ್ನಡಿಗರನ್ನು ದೇಶದ ಜನ ನೋಡುವಂತಾಗಬೇಕು. ಎಲ್ಲೆಡೆ ಕನ್ನಡ ಮೊಳಗಬೇಕು ಎಂಬುದು ಅವರ ಆಶಯ. ಕನ್ನಡಕ್ಕಾಗಿ ಕೆ‘ ಎತ್ತು ಕೆ‘ ಕಲ್ಪವಕ್ಷವಾಗುತ್ತದೆ ಎಂಬಂತೆ ಕನ್ನಡಿಗರು ಬೆಳೆಯಲಿ.ಕನ್ನಡದ ಕೆಲಸಕ್ಕೆ ಮರೆಗುದ್ದಿ ಅವರ ಕೆ‘ ಬಲಪಡಿಸೋಣ. ಜೆ‘ ಕರ್ನಾಟಕ ಮಾತೆ.


...........................................................


ಅವಳಿ ನಗರ ಎಜುಕೇಶನ್ ಹಬ್

ಡಾ.ವೀರೇಶ್ ಹಂಡಿಗಿ,ಹುಬ್ಬಳ್ಳಿ

ಹುಬ್ಭಳ್ಳಿ -ಧಾರವಾಡ ಅವಳಿ ನಗರವು ಶೈಕ್ಷಣಿಕವಾಗಿ ಮುಂಚೂಣಿಯಲ್ಲಿದೆ. ಧಾರವಾಡವಂತೂ ವಿದ್ಯಾಕಾಶಿ ಎಂದೇ ಪ್ರಸಿದ್ಧವಾಗಿದೆ. ಧಾರವಾಡದಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯ, ಕೃಷಿ ವಿವಿ, ಕಾನೂನು ವಿವಿ ಜತೆಗೆ ಎಂಜಿನಿಯರಿಂಗ್, ವೈದ್ಯಕೀಯ, ಆಯುರ್ವೇದಿಕ್, ಹೋಮಿಯೊಪಥಿಕ್, ಹಾಗೂ ಹೊಲವು ಪದವಿ ಕಾಲೇಜು ಹಾಗೂ ಶಾಲೆಗಳು ತಲೆಎತ್ತಿವೆ.

ಧಾರವಾಡದೊಂದಿಗೆ ಹುಬ್ಬಳ್ಳಿಯೂ ಶೈಕ್ಷಣಿಕ ಕ್ರಾಂತಿಯತ್ತ ದಾಪುಗಾಲು ಹಾಕುತ್ತಿದೆ. ಹೀಗಾಗಿ ಅವಳಿನಗರ ಶೈಕ್ಷಣಿಕ ಹಬ್ ಎಂಬಂತಾಗಿದೆ.

ಅವಳಿ ನಗರದ ಸುತ್ತ ಮುತ್ತಲಿನ ಪಟ್ಟಣ,ನಗರ ಹಾಗೂ ಹೊರ ರಾಜ್ಯದ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.  ಈ ಭಾಗಕ್ಕೆ  ಕೆಎಲ್‌ಇ ಹಾಗೂ ಧರ್ಮಸ್ಥಳ ಧರ್ಮಾಧಿಕಾರಿಗಳ ನೇತೃತ್ವದ ಸಂಸ್ಥೆಗಳು ಇಲ್ಲಿ ಶೈಕ್ಷಣಿಕ ಕೇಂದ್ರಗಳನ್ನು ತೆರೆಯುವ ಮೂಲಕ ಜನರಿಗೆ ಶಿಕ್ಷಣ ನೀಡುವಲ್ಲಿ ಶ್ರಮಿಸುತ್ತಿವೆ. ಇವುಗಳ ಜತೆಗೆ ಹಲವು ಶಿಕ್ಷಣ ಸಂಸ್ಥೆಗಳು ಹಲವು ಶಾಲೆ ಕಾಲೇಜು ತೆರೆದು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿವೆ.  ಹೀಗಾಗಿ ಇವರೆಲ್ಲರ ಸೇವೆ ಸ್ಮರಣೀಯ.

ಧಾರವಾಡದಲ್ಲಿ ಹಿಂದಿ ಪ್ರಚಾರ ಸಭೆ ಸಹ ಸೇವೆ ನೀಡುತ್ತಿದೆ.ಧಾರವಾಡದಲ್ಲಿ 1831 ರಲ್ಲಿ ಪ್ರಥಮ ಕನ್ನಡ ಶಾಲೆ ಆರಮಭವಾಯಿತು. ನಂತರ 1848 ರಲ್ಲಿ ಸರಕಾರಿ ಇಂಗ್ಲಿಷ್ ಶಾಲೆ ಆರಮಭವಾಯಿತು. 1863 ರಲ್ಲಿ ಬಾಸೆಲ್ ಮಿಶನ್ ಹೈಸ್ಕೂಲ್ ಆರಮಭವಾಯಿತು. 1949 ರಲ್ಲಿ ಕವಿವಿ ,1986 ರಲ್ಲಿ ಕೃಷಿ ವಿವಿ ಆರಂಭವಾಯಿತು. ಹೀಗೆ ಧಾರವಾಡಕ್ಕೆ ಶೈಕ್ಷಣಿಕ ಇತಿಹಾಸ ಇದೆ. 1869 ರಲ್ಲಿ ಡೆ.ಚೆನ್ನಬಸಪ್ಪನವರು ಧಾರವಾಡಕ್ಕೆ ಬಂದ ನಂತರಸಸಸ ಕನ್ನಡ ಶಾಲೆಗಳು ಹೆಚ್ಚಾದವು.

1947 ರಲ್ಲಿ ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜು ಆರಂಭವಾಯಿತು. ಇದೀಗ ಕೆಎಲ್‌ಇ ವಿವಿಯಾಗಿ ಪರಿವರ್ತನೆಯಾಯಿತು. ಸುಮಾರು 50 ವರ್ಷಗಳ ಹಿಂದಿಯೇ ಕರ್ನಾಟಕ ವೈದ್ಯಕೀಯ ಕಾಲೇಜು ಆರಂಭವಾಯಿತು.

..........ಬಾಕ್ಸ್‌ಘಿ..........

ಪರಿಪೂರ್ಣ ಶಿಕ್ಷಣ :

ಅವಳಿ ನಗರ ಶೈಕ್ಷಣಿಕ ಕ್ಷೇತ್ರದ ಜತೆಗೆ ನೃತ್ಯಘಿ, ಸಂಗೀತ, ಚಿತ್ರಕಲೆಗಳ ಶಿಕ್ಷಣವೂ ಅವಳಿನಗರದಲ್ಲಿ ಸಿಗಲಿದೆ. ಹೀಗಾಗಿ ಒಂದು ವ್ಯಕ್ತಿ ಪರಿಪೂರ್ಣವಾಗಲು ಏನು ಬೇಕು ಅದೆಲ್ಲವೂ ಇಲ್ಲಿ ಸಿಗಲಿದೆ.

.........ಬಾಕ್ಸ್‌ಘಿ.........

ಧಾರ್ಮಿಕ ಶಿಕ್ಷಣ :

ಅವಳಿ ನಗರದಲ್ಲಿ ಧಾರ್ಮಿಕ ಶಿಕ್ಷಣಸಹ ಸಿಗುತ್ತದೆ.ಧಾರವಾಡದಲ್ಲಿ ಹಲವು  ಸಂಸ್ಕೃತ ಪಾಠಶಾಲೆಗಳು ಸಹ ಕಾರ್ಯನಿರ್ವಹಿಸುತ್ತಿವೆ. ಹುಬ್ಬಳ್ಳಿ ಮೂರು ಸಾವಿರ ಮಠದಲ್ಲಿ   ವಟುಗಳಿಗೆ ಶಿಕ್ಷಣ ಸಹಿತ ನೀಡಲಾಗುತ್ತಿತ್ತುಘಿ. ಇಲ್ಲಿ ಕಲಿತ ಹಲವರು ಮಠಗಳಿಗೆ ಸ್ವಾಮಿಗಳಾಗಿ ಹೋಗಿದ್ದಾರೆ.

.........ಕೋಟ್...........

ಹಲವು ಶಿಕ್ಷಣ ಸಂಸ್ಥೆಗಳು ಈ ಭಾಗದಲ್ಲಿ ಸೇವೆ ಸಲ್ಲಿಸುತ್ತಿವೆ. ಈ ಭಾಗದಲ್ಲಿ ಓದಿದ ಹಲವರು ಉನ್ನತ ಸ್ಥಾನದಲ್ಲಿದ್ದಾರೆ. ಇತ್ತೀಚಿನ ದಿನಗಳಲ್ಲಿ  ಉತ್ತರ ಭಾರತದಿಂದ ಸಹ ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಬರುತ್ತಾರೆ. ಶಿಕ್ಷಣ ನೀಡುವ ಪರಂಪರೆ ಮುಂದುವರಿದಿದೆ.

-ಡಾ. ಬಸವರಾಜ ಅನಾಮಿ,ಪ್ರಾಚಾರ‌್ಯರು, ಕೆಎಲ್‌ಇ ಐಟಿ ಕಾಲೇಜು, ಹುಬ್ಬಳ್ಳಿ

..........ಬಾಕ್ಸ್‌ಘಿ.........

ವಿಭಿನ್ನ ಶಿಕ್ಷಣ

ಅವಳಿ ನಗರದಲ್ಲಿ ವಿಭಿನ್ನ ಕಲಿಕೆಗೂ ಸಹ ಅವಕಾಶ ಹೆಚ್ಚಿದೆ.  ಈ ನಿಟ್ಟಿನಲ್ಲಿ ವಿಷನ್ ್ಲೈ ನಲ್ಲಿ ವಿಮಾನಯಾನ, ವಿಮಾನ ನಿಲ್ದಾಣ, ಪ್ರವಾಸೋದ್ಯಮ, ಹಾಗೂ ಹೋಟೆಲ್ ಉದ್ಯಮಕ್ಕೆ ಬೇಕಾದ  ಕೋರ್ಸ್‌ಗಳ ಕಲಿಕೆ ಸಹ ಪಡೆಯಬಹುದು. ಮೂರು ವರ್ಷದ ಪ್ರವಾಸೋದ್ಯಮ ನಿರ್ವಹಣೆ ಪದವಿಯನ್ನು ಸಹ ನಗರದಲ್ಲಿ ಪಡೆಯುವ ಜತೆಗೆ ಮೌಲ್ಯವರ್ಧಿತ ಕೋರ್ಸ್ ಕಲಿಯುವುದರಿಂದ ವಿದ್ಯಾರ್ಥಿಗಳು ಕಲಿಕೆ ನಂತರ ಬೇಗನೆ ಉದ್ಯೋಗದತ್ತ ತೆರಳಲು ಸಹಕಾರಿಯಾಗಲಿದೆ. ಇದಕ್ಕೆ  ಕೇಂದ್ರ ಹಾಗೂ ರಾಜ್ಯ ಸರಕಾರ ಪ್ರವಾಸೋದ್ಯಮಕ್ಕೆ ಹೆಚ್ಚು ಪ್ರೊತ್ಸಾಹ ನೀಡುತ್ತಿದೆ.

ದೇಶಪಾಂಡೆ ೌಡೇಶನ್ ಮೂಲಕ ಯುವಕ,ಯುವತಿಯರಿಗೆ ಸ್ಕಿಲ್ ತರಬೇತಿ ನೀಡಲಾಗುತ್ತದೆ. ಉದ್ಯೋಗದಲ್ಲಿ ಸ್ಕಿಲ್ ಬಳಕೆಯಾಗುವುದರಿಂದ ಹೆಚ್ಚಿನ ಸಾಮರ್ಥ್ಯ ಸಿಗಲಿದೆ. ಹೀಗೆ ಅವಳಿ ನಗರದಲ್ಲಿ ನಾನಾ ತರದ ಶಿಕ್ಷಣ ಸಿಗುತ್ತಿದೆ.

..........ಕೋಟ್.........

ನಗರದಲ್ಲಿ ಕಲಿತ ಹಲವು ಯುವಕ,ಯುವತಿಯರು ವಿಮಾನಯಾನ, ವಿಮಾನ ನಿಲ್ದಾಣ, ಪ್ರವಾಸೋದ್ಯಮ, ಹಾಗೂ ಹೋಟೆಲ್ ಮ್ಯಾನೇಜ್‌ಮೆಂಟ್ ನಲ್ಲಿ ತೊಡಗಿಸಿಕೊಂಡಿದ್ದಾರೆ.

-ರೇಶ್ಮಾಘಿ, ಹಸುಬಾಯಿ,ಹುಬ್ಬಳ್ಳಿ