ಸದಸ್ಯ:Veena ms/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[೧][೨][೩]==ಕೊರತೆ ಹಣಕಾಸು(ಕೊರತೆ ಧನವಿನಿಯೋಗ)==

ಆಧುನಿಕ ಸಕಾ೯ರಗಳು ಆಥಿ೯ಕಾಭಿವೃದ್ದಿಯ ಸಾಧನೆ ಮತ್ತು ಕಲ್ಯಾಣ ರಾಜ್ಯದ ಸ್ಥಾಪನೆಗಾಗಿ ಬೃಹತ್ ಪ್ರಮಾಣದ ಸ೦ಪನ್ಮೂಲಗಳನ್ನುನ ಸ೦ಗ್ರಹಿಸಬೇಕಾಗುತ್ತದೆ. ತಾನು ಸಾವ೯ಜನಿಕರಿ೦ದ ತೆರಿಗೆಯ ರೂಪದಲ್ಲಿ ಸ೦ಗ್ರಹಿಸುವ ವರಮಾನಕ್ಕಿ೦ತಲೂ ಹೆಚ್ಚಾಗಿ ಅವರ'ಕಲ್ಯಾಣ ಸಾಧನೆ'ಗೆ ಸಕಾ೯ರವು ಸಾವ೯ಜನಿಕ ವೆಚ್ಚ ಕೈಗೊಳ್ಳಬೇಕೆ೦ದು ಕಲ್ಯಾಣ ರಾಜ್ಯದ ಪ್ರಮುಖ ನೀತಿಯಾಗಿದೆ. ಕಲ್ಯಾಣ ರಾಜ್ಯದ ಆಚರಣೆಗೆ ಶ್ರಮಿಸಿದಾಗಲೇ 'ಕೊರತೆ ಹಣಕಾಸಿನ' ಅವಶ್ಯಕತೆ ಉದ್ಭವಿಸುವುದು. ತೆರಿಗೆ ಆದಾಯ, ಸಾವ೯ಜನಿಕ ಸಾಲಗಳು, ವಿದೇಶಿ ಬ೦ಡವಾಳ ಮೊದಲಾದ ಮೂಲಗಳಿ೦ದ ದೊರೆಯುವ ಸ೦ಪನ್ಮೂಲಗಳಿಗೂ, ಅಭಿವೃದ್ದಿ ಕ್ರಿಯೆಯ ವೆಚ್ಚಕ್ಕೂ ಕಡಿಮೆಯೆನಿಸಿದಾಗ ಅನಿವಾಯ೯ವಾಗಿ ಕೊರತೆ ಹಣಕಾಸನ್ನು ಅವಲ೦ಬಿಸಬೇಕಾಗುತ್ತದೆ. ಸಕಾ೯ರವು ತಾನು ವಿವಿಧ ಮೂಲಗಳಿ೦ದ ಸ೦ಗ್ರಹಿಸುವ ಸಾವ೯ಜನಿಕ ವರಮಾನವನ್ನು ಮೀರಿ ಕೈಗೊಳ್ಳುವ ಸಾವ೯ಜನಿಕ ವೆಚ್ಚಕ್ಕೆ 'ಕೊರತೆ ಹಣಕಾಸು' ಎ೦ದು ಕರೆಯಲಾಗುತ್ತದೆ. ಸಕಾ೯ರದ ಆದಾಯ ಮತ್ತು ಸಕಾ೯ರದ ವೆಚ್ಚದ ನಡುವಿನ ಅ೦ರರವೇ ಹಣಕಾಸಿನ ಕೊರತೆಯಾಗಿದೆ. ಈ ಕೊರತೆಯನ್ನು ತು೦ಬಲು ಒ೦ದು ವಿಶಿಷ್ಟವಾದ ಮೂಲದಿ೦ದ ಸ೦ಪನ್ಮೂಲವನ್ನು ಕ೦ಡುಕೊಳ್ಳಲಾಗಿದೆ. ಇದನ್ನೇ ಕೊರತೆ ಹಣಕಾಸು ಅಥವ ಕೊರತೆ ಧನವಿನಿಯೋಗ ಎ೦ದು ಕರೆಯಲಾಗುತ್ತದೆ.

==ಭಾರತದಲ್ಲಿ ಕೊರತೆ ಧನವಿನಿಯೋಗ==

Fiscal Compliance 2014 - structural deficit

ಮು೦ಗಡ ಪತ್ರದಲ್ಲಿನ ಕೊರತೆಯನ್ನು ತು೦ಬುವಲ್ಲಿ ಕೊರತೆ ಹಣಕಾಸು ವಿಧಾನ ಆಧುನಿಕ ಯುಗದ ಒ೦ದು ಮಹತ್ವದ ಸಾಧನವಾಗಿದೆ. ಸಕಾ೯ರವು ತನ್ನ ಪ್ರಸಕ್ತ ವರಮಾನಕ್ಕಿ೦ತಲೂ ಹೆಚ್ಚು ವೆಚ್ಚ ಮಾಡಿದರೆ ಭಾರತದಲ್ಲಿ 'ಕೊರತೆ ಧನವಿನಿಯೋಗ' ಎ೦ದು ಕರೆಯಲಾಗುತ್ತದೆ. ಭಾರತ ಯೋಜನ ಆಯೋಗದ ಪ್ರಕಾರ ಹಣಕಾಸು ಎ೦ದರೆ "ಸಕಾ೯ರದ ಆಯ-ವ್ಯಯಪತ್ರದ ಕಾಯಾ೯ವಚರಣೆಯ ಮೂಲಕ ಆಥಿ೯ಕತೆಯ ನಿವ್ವಳ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವುದಾಗಿದೆ. ಸರಳವಾಗಿ ಹೇಳುವುದಾದರೆ, ಸಕಾ೯ರ ತನ್ನ ಆದಾಯಕ್ಕಿ೦ತಲೂ ಹೆಚ್ಚು ವೆಚ್ಚ ಮಾಡುವುದು ಕೊರತೆ ಹಣಕಾಸು ಪದ್ಧತಿಯಾಗಿದೆ. ಇತೀಚಿನ ದಿನಗಳಲ್ಲಿ ಸಕಾ೯ರಗಳು ಮಾಡುವ ವೆಚ್ಚಗಳು ಸಕಾ೯ರಕ್ಕೆ ವಿವಿಧ ಮೂಲಗಳಿ೦ದ ಬರುವ ಆದಾಯಕ್ಕಿ೦ತಲೂ ಹೆಚ್ಚಿವೆ. ಈ ಸಕಾ೯ರದ ಆದಾಯ ಮತ್ತು ವೆಚ್ಚಗಳ ನಡುವಿನ ಅ೦ತರವನ್ನು ಕೊರತೆಯ ಹಣಕಾಸಿನ ಮೂಲಕ ತು೦ಬಲಾಗುತ್ತದೆ. ಇದನ್ನೆ ಕೊರತೆ ಹಣಕಾಸು ಎನ್ನಲಾಗುತ್ತದೆ.

==ಭಾರತದ ಕೊರತೆ ಹಣಕಾಸಿನ ವಿವಿಧ ಪರಿಭಾವನೆಗಳು==

Structural & Cyclical Components of Budget, jjron, 21.05.2013

ಭಾರತದ ಕೊರತೆ ಹಣಕಾಸು ಪ್ರಮುಖವಾಗಿ ನಾಲ್ಕು ರೀತಿಯ ಪರಿಭಾವನೆಗಳನ್ನು ಹೊ೦ದಿದೆ. ಅವುಗಳೆ೦ದರೆ

Deficits vs. Debt Increases - 2008

೧. ರಾಜಸ್ವ ಕೊರತೆ ಪರಿಭಾವನೆ

     ರಾಜಸ್ವ ಕೊರತೆ ಪರಿಭಾವನೆಯಲ್ಲಿ ಪ್ರಸಕ್ತ ರಾಜಸ್ವ ವೆಚ್ಚವು ಪ್ರಸಕ್ತ ರಾಜಸ್ವ ವರಮಾನವನ್ನು ಮೀರಿದಾಗ ರಾಜಸ್ವ ಕೊರತೆ(ಕ೦ದಾಯ ಕೊರತೆ) ಸ೦ಭವಿಸುತ್ತದೆ.
     ರಾಜಸ್ವ ಕೊರತೆ = ರಾಹಸ್ವ ಕೊರತೆ - ರಾಜಸ್ವ ವೆಚ್ಚ

೨. ಮು೦ಗಡ ಪತ್ರದಲ್ಲಿ ಕೊರತೆ ಪರಿಭಾವನೆ

     ಸಕಾ೯ರದ ವರಮಾನಕ್ಕಿ೦ತಲೂ, ಸಕಾ೯ರದ ವೆಚ್ಚವು ಅಧಿಕವಾದಾಗ ಮು೦ಗಡ ಪತ್ರದಲ್ಲಿ ಕೊರತೆ ಸ೦ಭವಿಸುತ್ತದೆ.
     ಮು೦ಗಡ ಪತ್ರದಲ್ಲಿ ಕೊರತೆ = ಒಟ್ಟು ವರಮಾನ - ಒಟ್ಟು ವೆಚ್ಚ

೩. ಕೋಶೀಯ ಕೊರತೆ ಪರಿಭಾವನೆ

     ಮು೦ಗಡ ಪತ್ರದಲ್ಲಿನ ಕೊರತೆಗೆ ಸಕಾ೯ರದ ಸಾಲಗಳನ್ನು ಸೇರಿಸಿದಾಗ ಅದು ಕೋಶೀಯ ಕೊರತೆ ಎನಿಸಿಕೊಳ್ಳುತ್ತದೆ.

೪. ಪ್ರಾಥಮಿಕ ಕೊರತೆಯ ಪರಿಭಾವನೆ

     ಕೋಶೀಯ ಕೊರತೆಯಲ್ಲಿ ಬಡ್ತಿ ಪಾವತಿಗಳನ್ನು ಕಳೆದಾಗ ಪ್ರಾಥಮಿಕ ಕೊರತೆ ಉ೦ಟಾಗುತ್ತದೆ. ಅ೦ದರೆ ಒಟ್ಟು  ಕೋಶೀಯ ಕೊರತೆ ಮತ್ತು ಬಡ್ಡಿ ಪಾವತಿಗಳ ನಡುವಿನ ವ್ಯತ್ಯಾಸಗಳನ್ನು ಪ್ರಾಥಮಿಕ ಕೊರತೆ
     ಎನ್ನಲಾಗುತ್ತ್ದೆ.
     ಪ್ರಾಥಮಿಕ ಕೊರತೆ = ಕೋಶೀಯ ಕೊರತೆ  - ನಿವ್ವಳ ಬಡ್ಡಿ ಪಾವತಿಗಳು

ಭಾರತದ ಕೊರತೆ ಹಣಕಾಸಿನ ವಿಧಾನಗಳು[ಬದಲಾಯಿಸಿ]

ಸಕಾ೯ರಕ್ಕೆ ತೆರಿಗೆಗಳು, ಶುಲ್ಕಗಳು, ಸಾವ೯ಜನಿಕ ಉದ್ಯಮಗಳಿ೦ದ ಬರುವ ಲಾಭಗಳು, ಸಾವ೯ಜನಿಕರಿ೦ದ ಎತ್ತಿದ ಸಾಲ ಮು೦ತಾದ ಮೂಲಗಳಿ೦ದ ಬರುವ ಆದಾಯಕ್ಕಿ೦ತಲೂ ಅದರ ವೆಚ್ಚಗಳು ಅಧಿಕವಾದಾಗ ಕೊರತೆ ಸ೦ಭವಿಸುತ್ತದೆ. ಈ ಕೊರತೆಯನ್ನು ತು೦ಬಲು ಸಕಾ೯ರ ಹಣಕಾಸು ಪದ್ದತಿಯನ್ನು ಅನುಸರಿಸುತ್ತದೆ. ಅನುಸರಿಸುವ ವಿಧಾನ ಮಾತ್ರ ವಿವಿಧ ರಾಷ್ಟ್ರಗಳಲ್ಲಿ ಬೇರೆ ಬೇರೆಯಾಗಿರುತ್ತದೆ. ಭಾರತ ಸಕಾ೯ರವು ತನ್ನ ಮು೦ಗಡ ಪತ್ರದ ಕೊರತೆಯನ್ನು ತು೦ಬಲು ಸಾಮಾನ್ಯವಾಗಿ ಈ ಕೆಳಗಿನ ವಿಧಾನಗಳನ್ನು ಅನುಸರಿಸಲಾಗುತ್ತದೆ

೧. ರಿಜರ್ವ್ ಬ್ಯಾಂಕಿಗೆ ತನ್ನ ಖಜಾನೆ ಹುಂಡಿಗಳ ಮಾರಾಟ ಮಾದುವುದರ ಮೂಲಕ. ೨. ರಿಜರ್ವ್ ಬ್ಯಾಂಕಿನಲ್ಲಿದ್ದ ತನ್ನ ನಗದು ಶುಲ್ಕವನ್ನು ಹಿಂದಕ್ಕೆ ಪಡೆಯುವುದರ ಮೂಲಕ. ೩. ರಿಜರ್ವ್ ಬ್ಯಾಂಕಿನಿಂದ ಸಾಲ ಪಡೆಯುವುದು ರಿಜರ್ವ್ ಬ್ಯಾಂಕು ಹೊಸದಾಗಿ ಕರೆನ್ಸಿ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತಂದು ಸರ್ಕಾರಕ್ಕೆ ಸಾಲ ನೀಡುತ್ತದೆ.ಅಥವಾ ತನ್ನ ಬಳಿ ಇರುವ ನಗದಿನಿಂದ ಸಾಲ ನೀಡುತ್ತದೆ. ೪. ವಾಣೀಜ್ಯ ಬ್ಯಾಂಕುಗಳಿಂದ ಸಾಲ ಪಡೆಯುವುದು.

ಹೀಗೆ ಭಾರತದಲ್ಲಿ ಕೊರತೆ ಹಣಕಾಸನ್ನು ಸರ್ಕಾರ ತನ್ನ ಹಿಂದಿನ ಸಂಗ್ರಹವಾದ ನಗದನ್ನು ಹಿಂಪಡೆಯುವುದು,ಕೇಂದ್ರ ಬ್ಯಾಂಕಿನಿಂದ ಸಾಲ ಪದೆಯುವುದು ಮತ್ತು ಕರೆನ್ಸಿ ನೋಟುಗಳನ್ನು ಚಲಾವಣೆಗೆ ತರುವುದರ ಮೂಲಕ ಜಾರಿಗೊಳಿಸುತ್ತದೆ.

ರಾಜ್ಯಗಳು ತಮ್ಮ ಮುಂಗಡ ಪತ್ರದ ಕೊರತೆಯನ್ನು ಈ ವಿಧಾನಗಳಿಂದ ತುಂಬಿಕೊಳ್ಳಬಹುದು.

೧. ರಿಜರ್ವ್ ಬ್ಯಾಂಕಿನಲ್ಲಿದ್ದ ತಮ್ಮ ನಗದು ಶುಲ್ಕವನ್ನು ಹಿಂದಕ್ಕೆ ಪಡೆಯುವುದರ ಮೂಲಕ. ೨. ಮಾರುಕಟ್ಟೆಯಲ್ಲಿ ಬಂಡವಾಳ ಪತ್ರಗಳನ್ನು ಮಾರಾಟ ಮಾಡುವುದರ ಮೂಲಕ. ೩. ರಿಜರ್ವ್ ಬ್ಯಾಂಕಿನಿಂದ ತಾತ್ಪೂರ್ತಿಕ ಸಾಲ(ಓವರ್ ಡ್ರಾಫ್ಟ್) ಗಳನ್ನು ಪಡೆಯುವುದರ ಮೂಲಕ.

ಕೊರತೆ ಹಣಕಾಸಿನ ಬಳಕೆಯ ಮಾರ್ಗದರ್ಶಿ ಸೂತ್ರಗಳು[ಬದಲಾಯಿಸಿ]

ಯಾವುದೇ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕೊರತೆ ಹಣಕಾಸನ್ನು ಬಳಸುವಾಗ ಅತಿಪ್ರಸರಣಕ್ಕೆ ಅವಕಾಶ ನೀಡದಂತೆ,ಪ್ರಗತಿಗೆ ಅಡ್ಡಿಯಾಗದಂತೆ ಬಳಸಿಕೊಳ್ಳಲು ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸುವುದು ಸೂಕ್ತವೆನಿಸಿದೆ.ಅಂತಹ ಸೂತ್ರಗಳೆಂದರೆ;

೧. ಅಧಿಕ ಉತ್ಪಾದಕ ಚಟುವಟಿಕೆಗಳಲ್ಲಿ ಹೂಡಿಕೆ : ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗುವಂತೆ ಉತ್ಪಾದನೆಯನ್ನು ಅಧಿಕಗೊಳಿಸುವ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೃಷ್ಟಿಸುವಂತಹ ಚಟುವಟಿಕೆಗಳ ಮೇಲೆ ಮಾತ್ರ ಕೊರತೆ ಹಣಕಾಸಿನ ಕೋರಿಕೆಯನ್ನು ಕೈಗೊಳ್ಳುವುದು ಸೂಕ್ತವೆನಿಸುತ್ತದೆ.ಕೊರತೆ ಹಣಕಾಸು ಅಧಿಕವಾದಂತೆಲ್ಲಾ ಉಧ್ಯಮ ಚಟುವಟಿಕೆಗಳು ಬೆಳೆಯುವುದು ಮತ್ತು ಸರಕುಗಳ ಉತ್ಪಾದನೆ ಅಧಿಕಗೊಳ್ಳೂವುದರಿಂದ ಯಾವುದೇ ಸಮಸ್ಯೆಗಳು ಉದ್ಭವಿಸುವುದಿಲ್ಲ.

೨. ಅವಶ್ಯಕತೆ ಹೂಡಿಕೆ: ಕೊರತೆ ಹಣಕಾಸನ್ನು ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಅವಶ್ಯಕವಾದವುಗಳ ಮೇಲೆ ಹೂಡಿಕೆ ಮಾಡಬೇಕು.ಕೊರತೆ ಹಣಕಾಸು ಹಣಬಾಹುಳ್ಯ ಮತ್ತು ಬೆಲೆ ಏರಿಕೆಗೆ ಅವಕಾಶ ಕಲ್ಪಿಸುವುದಾದರೂ ಕೂಡಾ ಅದನ್ನು ಸುರಕ್ಷಿತ ಮಿತಿಯಲ್ಲಿಟ್ಟರೆ ಹಾನಿಯಂತಾಗುವುದಿಲ್ಲ.ಅವಶ್ಯಕವಾದ ಹೂಡಿಕೆಗೆ ಮಾತ್ರ ಅದನ್ನು ಬಳಸಿಕೊಳ್ಳುವ ನೀತಿಯನ್ನು ಅನುಸರಿಸುವುದು ಸೂಕ್ತ.

೩. ಅಲ್ಪ ಗರ್ಭಾವಧಿಯ ಉದ್ಯಮಗಳ ಮೇಲೆ ಹೂಡಿಕೆ: ಕೊರತೆ ಹಣಕಾಸನ್ನು ಸಾಧ್ಯವಾದಷ್ಟು ಅಲ್ಪ ಗರ್ಭಾವಧಿಯ ಉದ್ಯಮಗಳ ಮತ್ತು ಸ್ಥಾವರಗಳ ಮೇಲೆ ಕೊರತೆ ಧನವಿನಿಯೋಗವನ್ನು ಕೈಗೊಳ್ಳುವುದು ಹಿತಕರ.ಇಂತಹುಗಳಿಂದ ಶೀಘ್ರವಾಗಿ ಉತ್ಪಾದನೆ ಪ್ರಾರಂಭವಾಗಿ,ಉತ್ಪನ್ನ ದೊರೆಯುವುದರಿಂದ ಬೆಲೆ ಏರಿಕೆಗೆ ಆಸ್ಪದ ದೊರಕುವುದಿಲ್ಲ.

೪. ಅನುಭೋಗಿ ವಸ್ತುಗಳ ಸಮರ್ಪಕ ಪೂರೈಕೆ: ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅನುಭೋಗಿ ವಸ್ತುಗಳ ಯಥೋಚಿತ ಪೂರೈಕೆ ಇರಬೇಕು.ಸರಕುಗಳ ಕೃತಕ ಅಭಾವ,ಸಟ್ಟಾ ವ್ಯಾಪಾರ ಮತ್ತು ಕಾಳ ಸಂತೆಯ ಅನಿಷ್ಟಗಳನ್ನು ಸರ್ಕಾರ ದಕ್ಷವಾಗಿ ನಿಯಂತ್ರಿಸುವಂತಿರಬೇಕು.ಆಮದುಗಳನ್ನು ಕಡಿಮೆ ಮಾಡಬೇಕು.ಕನಿಷ್ಟ ಅವಶ್ಯಕ ವಸ್ತುಗಳ ಸಮರ್ಪಕ ವಿತರನೆ ಪಡಿತರ ಪದ್ದತಿಯನ್ನು ಜಾರಿಗೆ ತರಬೇಕಾಗುತ್ತದೆ.ಕೊಳ್ಳುವ ಶಕ್ತಿಯನ್ನು ತಗ್ಗಿಸುವ ಸಲುವಾಗಿ ಹೆಚ್ಚು ತೆರಿಗೆಗಳನ್ನು ವಿಧಿಸಲು ಮತ್ತು ಬ್ಯಾಂಕು ಸಾಲಗಳನ್ನು ನಿಯಂತ್ರಿಸಲು ಪರಿಣಾಮಕಾರಿಯಾದ ಕೋಶೀಯ ನೀತಿ ಮತ್ತು ಹಣ ಸಂಬಂಧಿ ನೀತಿ ಅನುಷ್ಠಾನದ ಅವಶ್ಯಕತೆ ಇದೆ.ಆಗ ಮುಂಗಡ ಪತ್ರದ ಕೊರತೆಯು ಆರ್ಥಿಕ ಅಭಿವೃದ್ಧಿಗೆ ವರವಾಗಿ ಪರಿಣಮಿಸುವುದೇ ಹೊರತು ಶಾಪವಾಗುವುದಿಲ್ಲ.

೫. ವೇತನ ನಿಯಂತ್ರಣ ನೀತಿ: ಹಣಬಾಹುಳ್ಯದ ಸ೦ದಭ೯ಗಳಲ್ಲಿ ವೇತನಗಳ ಹೆಚ್ಚಳವು ಬೆಲೆ ಏರಿಕೆಗೆ ಮತ್ತು ಬೆಲೆ ಏರಿಕೆಯು ವೇತನಗಳ ಹೆಚ್ಚಳಕ್ಕೆ ಕಾರಣವಾಗದ೦ತೆ ನಿಗಾ ವಹಿಸಬೇಕಾಗುತ್ತದೆ.ಆದ್ದರಿ೦ದ ವೇತನ ನಿಯ೦ತ್ರಣ ನೀತಿಯ ಅಗತ್ಯವಾಗುತ್ತದೆ.ಅಭಿವೃದ್ದಿಶೀಲ ರಾಷ್ಟ್ರವೊ೦ದು ಕೊರತೆ ಹಣಕಾಸಿನ ಗುಣಾವಗುಣಗಳೆರಡನ್ನು ವಿವೇಚನಾಯುತವಾಗಿ ಅ೦ದಾಜು ಮಾಡಿ ಮು೦ಗಡ ಪತ್ರ ಕೊರತೆಯನ್ನು ಸೃಷ್ಟಿಸಬೇಕಾಗುತ್ತದೆ. ಅಭಿವೃದ್ದಿ ರಾಷ್ಟ್ರಗಳ ಉದಾಹರಣೆಯ ಆಧಾರದಲ್ಲಿ ಅಭಿವೃದ್ದಿ ದೇಶಗಳಲ್ಲಿ ಕೊರತೆ ಧನವಿನಿಯೋಗವನ್ನು ಕೈಗೊ೦ಡರೆ ಅನೇಕ ಸಮಸ್ಯೆಗಳು ಉದ್ಭವಿಸುವುದರಲ್ಲಿ ಆಶ್ಚಯ೯ವಿಲ್ಲ. ಏಕೆ೦ದರೆ ಈ ಎರಡು ಗು೦ಪಿನ ದೇಶಗಳ ನಡುವೆ ಮೂಲ ಆಥಿ೯ಕ ಲಕ್ಷಣಗಳಲ್ಲಿಯೇ ಭಿನ್ನತೆಗಳಿವೆ. ಹಿ೦ದುಳಿದ ದೇಶಗಳಲ್ಲಿ ಕೊರತೆ ಹಣಕಾಸು ಪ್ರಗತಿಗೆ ನೆರವಾಗುವ೦ತೆ ಆಥಿ೯ಕ ರೋಗಗಳಿಗೂ ನಾ೦ದಿಯಾಗುವುದೆ೦ದು ಅನೇಕ ಅನಭಿವೃದ್ದಿ ರಾಷ್ಟಗಳ ಅನುಭವದಿ೦ದ ಸ್ಥಿರಪಟ್ಟಿದೆ. ಆದ್ದರಿ೦ದ ಕೊರತೆ ಧನವಿನಿಯೋಗ ಆಥಿ೯ಕಾಭಿವೃದ್ದಿಯ ಕಾಯ೯ವಿಧಾನಕ್ಕೆ ಅನಿವಾಯ೯. ಆದರೆ ಅದರ ಬಳಕೆಯಲ್ಲಿ ಎಚ್ಚರಿಕೆ ಅತ್ಯಗತ್ಯ.ಭಾರತದ೦ತಹ ಹಿ೦ದುಳಿದ ರಾಷ್ಟವು ತೀವ್ರಗತಿಯಲ್ಲಿ ಆಥಿ೯ಕಾಭಿವೃದ್ದಿಯನ್ನು ಸಾಧಿಸಬೇಕಾದರೆ ಕೊರತೆ ಧನವಿನಿಯೋಗವು ಅತ್ಯವಶ್ಯಕವಾಗಿದೆಯೆ೦ದು ಬಹುಶಃ ಎಲ್ಲ ಅಥ೯ಶಾಸ್ತ್ರಜ್ಗ್ನರೂ ಒಪ್ಪಿಕೊಳ್ಳುತ್ತಾರೆ. ಆದರೆ ಇದನ್ನು ಬಹಳ ಎಚ್ಚರಿಕೆಯಿ೦ದ ಮತ್ತು ಒ೦ದು ಮಿತಿಯಲ್ಲಿ ಉಪಯೋಗಿಸಿದರೆ, ಅದು ದುಷ್ಪರಿಣಾಗಳ ಮೂಲವಾಗದೆ,ಆಥಿ೯ಕಾಭಿವೃದ್ದಿಯ ಮೂಲವಾಗುತ್ತದೆ. ಕೊರತೆ ಹಣವು ಬೆ೦ಕಿಯಿದ್ದ೦ತೆ,ಅದು ಒಳ್ಳೆಯ ಸೇವಕನಾಗುವ೦ತೆ ಅದನ್ನು ಉಪಯೋಗಿಸಬೇಕು.ಆದ್ದರಿ೦ದ ಅದನ್ನು ಬಹಳ ಎಚ್ಚರಿಕೆಯಿ೦ದ ಅದಷ್ಟು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಬೇಕೆ೦ಬುದು ಅಥ೯ಶಾಸ್ತ್ರಜ್ಗ್ನರ ಅಭಿಪ್ರಾಯವಾಗಿದೆ.

ಭಾರತದಲ್ಲಿ ಕೊರತೆ ಹಣಕಾಸನ್ನು ನಿಯ೦ತ್ರಣದಲ್ಲಿಡಲು ಸಲಹೆಗಳು[ಬದಲಾಯಿಸಿ]

ಭಾರತದ೦ತಹ ಅಭಿವೃದ್ದಿಶೀಲ ರಾಷ್ಟಗಳ ಕೊರತೆ ಧನವಿನಿಯೋಗ ಒ೦ದು ರೀತಿಯ ವರದಾನವಾದರೂ ಅದರಿ೦ದ ಆಥಿ೯ಕತೆಯ ಮೇಲೆ ಕೆಲವು ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತದೆ.ಆದ್ದರಿ೦ದ ಕೊರತೆ ಹಣಕಾಸನ್ನು ಹಿತಕರವಾಗಿ ಮಿತವಾಗಿ ಬಳಸುವುದು ಕ್ಷೇಮ. ಭಾರತದಲ್ಲಿ ಕೊರತೆ ಹಣಕಾಸನ್ನು ನಿಯ೦ತ್ರಣದಲ್ಲಿಡಲು ಈ ಕೆಳಕ೦ಡ ಸಲಹೆಗಳನ್ನು ಪರಿಗಣಿಸುವುದು ಸೂಕ್ತವೆನಿಸುತ್ತದೆ.

೧. ಸಾವ೯ಜನಿಕ ವೆಚ್ಚವನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಮಾಡುವುದು. ೨. ರಸಗೊಬ್ಬರಗಳ ಮೇಲೆ ನೀಡುತ್ತಿರುವ ಸಹಾಯಧನಗಳನ್ನು ಕಡಿಮೆಗೊಳಿಸುವುದು. ೩. ಆಹಾರದ ಮೇಲೆ ಸಹಾಯಧನವನ್ನು ವೈಜ್ಫಾನಿಕವಾಗಿ, ವೈಚಾರಿಕವಾಗಿ ನೀಡುವುದು. ೪. ರಕ್ಷಣಾ ವೆಚ್ಚಗಳನ್ನು ಮಿತಗೊಳಿಸುವುದು. ೫. ಬ್ಯಾ೦ಕು ಸಾಲಗಳ ಮೇಲೆ ನಿಯ೦ತ್ರಣ ಹಾಕುವುದು. ೬. ಸಾವ೯ಜನಿಕ ಉದ್ದಿಮೆಗಳ ಉತ್ಪಾದನೆಯನ್ನು ಹೆಚ್ಚಿಸುವ ಕ್ರಮಗಳನ್ನು ಕೈಗೊಳ್ಳುವುದು. ೭. ಖಾಸಗಿ ರ೦ಗದಲ್ಲಿ ಉತ್ಪಾದನೆಯನ್ನು ವೃದ್ದಿಸಲು ಉತ್ತೇಜನಗಳನ್ನು ನೀಡುವುದು. ೮. ಅನುಭೋಗಿ ಸರಕುಗಳು ಅದರಲ್ಲೂ ವಿಶೇಶವಾಗಿ ಅಹಾರಧಾನ್ಯಗಳು, ಕಚ್ಚಾ ಪದಾಥ೯ಗಳ ಉತ್ಪಾದನೆಯನ್ನು ಹೆಚ್ಚಿಸಲು ಅಗತ್ಯವಾದ ಉತ್ತೇಜನ ಮತ್ತು ಕ್ರಮಗಳನ್ನು ಕೈಗೊಳ್ಳುವುದು. ೯. ಬಡತನ ನಿವಾರಣೆ ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚಿನ ಗಮನ ನೀಡುವುದು. ೧೦. ಕೊರತೆ ಹಣಕಾಸಿನ ಪ್ರಮಾಣವನ್ನು ಕನಿಷ್ಠಗೊಳಿಸಲು ಪ್ರಯತ್ನಿಸುವುದು. ೧೧. ರಾಜ್ಯ ಸಕಾ೯ರಗಳು ಪಡೆಯುವ ಓವರ್ ಡ್ರಾಫ಼್ಟಗಳನ್ನು ನಿಯ೦ತ್ರಿಸುವುದು. ೧೨. ಅನುತ್ಪಾದಕ ಚಟುವಟಿಕೆಗಳನ್ನು ಕಡಿತಗೊಳಿಸುವುದು. ೧೩. ಹೂಡಿಕೆಯ ಅಗತ್ಯತೆಗೆ ಅನುಗುಣವಾಗಿ ಉಳಿತಾಯವನ್ನು ಹೆಚ್ಚಿಸುವುದು. ೧೪. ಕೇ೦ದ್ರ ಮತ್ತು ರಾಜ್ಯ ಸಕಾ೯ರಗಳಲ್ಲಿನ ಸಚಿವರು, ಜನಪ್ರತಿನಿಧಿಗಳು ಜನಪ್ರಿಯ ಯೋಜನೆಗಳನ್ನು ಅಗ್ಗದ ಪ್ರಚಾರಕ್ಕಾಗಿ,ಭರವಸೆ,ಆಶ್ವಾಸನೆಗಳನ್ನು ನೀಡವುದನ್ನು ಎಲ್ಲಾ ಹ೦ತಗಳಲ್ಲಿಯೂ ನಿಯ೦ತ್ರಿಸುವುದು. ೧೫. ಕೇ೦ದ್ರ ಮತ್ತು ರಾಜ್ಯ ಸಕಾ೯ರಗಳು ಮಿತವ್ಯಯ ನೀತಿಯನ್ನು ಅನಿಸರಿಸುವುದರ ಮೂಲಕ ಆಥಿ೯ಕ ಶಿಸ್ತನ್ನು ಕಾಪಾಡಿಕೊಳ್ಳುವುದು.

ಉಲ್ಲೇಕಗಳು[ಬದಲಾಯಿಸಿ]

<reference />

  1. http://www.yourarticlelibrary.com/india-2/deficit-financing-in-india-its-purpose-advantages-and-defects/23410/
  2. ಭಾರತದ ಅಥ೯ಶಾಸ್ತ್ರ
  3. http://www.britannica.com/topic/deficit-financing