ಸದಸ್ಯ:Varun prakash-punk/ನನ್ನ ಪ್ರಯೋಗಪುಟ
C++ ಪ್ರೋಗ್ರಾಮಿಂಗ್ ಲಾಂಗ್ವೇಜ್(ಭಾಷೆ)
ಸಿ++ ಪರಿಚಯ
[ಬದಲಾಯಿಸಿ]C ++[೧] ಪ್ರೋಗ್ರಾಮಿಂಗ್ ಭಾಷೆ ಕಡಿಮೆ ಮಟ್ಟದ ಮೆಮೊರಿ ಮ್ಯಾನಿಪುಲೇಷನ್ ಸೌಲಭ್ಯ ಹೊಂದಿದ್ದ ಮೊದಲ ಪ್ರೋಗ್ರಾಮಿಂಗ್ ಭಾಷೆ. ಇದು ಇಂಪೆರಿಟಿವ್,ಆಬ್ಜೆಕ್ಟ್-ಓರಿಎಂಟೆಡ್ ಮತ್ತು ಜೆನೆರಿಕ್ ಪ್ರೋಗ್ರಾಮಿಂಗ್ ಲಕ್ಷಣಗಳನ್ನು ಹೊಂದಿದೆ.೧೯೭೯ರಲ್ಲಿ ಜಾರ್ನೆ ಸ್ಟೌಸ್ಟ್ರೂಪ್ ಅಮೆರಿಕದ AT&T[೨] ಬೆಲ್ ಲ್ಯಾಬೋರೇಟರೀಸ್‍ನಲ್ಲಿ C++ ಪ್ರೋಗ್ರಾಮಿಂಗ್ ಭಾಷೆ ಕಂಡು ಹಿಡಿದರು.೧೯೮೫ರಲ್ಲಿ,ಸಿ ++ ಪ್ರೋಗ್ರಾಮಿಂಗ್ ಲಾಂಗ್ವೇಜ್‍ನ ಮೊದಲನೆಯ ಆವೃತ್ತಿಯು ಬಿಡುಗಡೆಯಾಗಿತ್ತು. ಇದಾದ ನಂತರ ೨೦೦೩ರಲ್ಲಿ C++03,೨೦೦೯ರಲ್ಲಿ C++11(C++0X),೨೦೧೪ರಲ್ಲಿ C++14(C++1Y) ವರ್ಷನ್ ಬೆಲ್ ಲ್ಯಾಬೋರೇಟರೀಸ್ ಬಿಡುಗಡೆಮಾಡಿದರು.
ವೈಶಿಷ್ಟ್ಯಗಳು:
[ಬದಲಾಯಿಸಿ]ಆಬ್ಜೆಕ್ಟ್-ಓರಿಎಂಟೆಡ್[೩]-C++ ಪ್ರೋಗ್ರಾಮಿಂಗ್ ಭಾಷೆ ಆಬ್ಜೆಕ್ಟ್-ಓರಿಎಂಟೆಡ್ ಲಕ್ಷಣ ಹೊಂದಿದರಿಂದ ಒಂದು ಕೋಡ್ ಬೇರೆ ರೀತಿಯಲ್ಲಿ ಮರುಬಳಕೆ ಮಾಡಬಹುದು.
ಪೋರ್ಟಬಿಲಿಟಿ-C++ ಪ್ರೋಗ್ರಾಮಿಂಗ್ ಭಾಷೆ ಮೈಕ್ರೋಸಾಫ್ಟ್ ವಿಂಡೋಸ್,ಲಿನಕ್ಸ್,ಮ್ಯಾಕ್,ಉಬುಂಟು ಮುಂತಾದ ಆಪರೇಟಿಂಗ್ ಸಿಸ್ಟಮ್‍ನಲ್ಲಿ ಕಾರ್ಯಗತಗೊಳಿಸಬಹುದು.
ಬ್ರೆವಿಟಿ- ಬೇರೆ ಪ್ರೋಗ್ರಾಮಿಂಗ್ ಭಾಷೆಗೆ ಹೋಲಿಸಿದ್ದರೆ C++ ಪ್ರೋಗ್ರಾಮಿಂಗ್ ಭಾಷೆ ಕಡಿಮೆ ಸಾಲುಗಳಲ್ಲಿ ಪ್ರೋಗ್ರಾಮ್ ನಿರ್ಮಾಣ ಮಾಡಬಹುದು.
ಮೊಡ್ಯೂಲ್ಯಾರ್ ಪ್ರೋಗ್ರಾಮಿಂಗ್-C++ ಪ್ರೋಗ್ರಾಮ್‍ನಲ್ಲಿ ಅಪ್ಡೇಟ್ ಹಾಗು ಅಡ್ಡೋನ್ಸ್ ಸುಲಬವಾಗಿ ತರಿಸಬಹುದು.
C ಕಂಪ್ಯಾಟಿಬಿಲಿಟಿ-C++ ಪ್ರೋಗ್ರಾಮಿಂಗ್ ಭಾಷೆಯಲ್ಲಿ C ಪ್ರೋಗ್ರಾಮಿಂಗ್[೪] ಕೋಡ್ ಬಳೆಸಬಹುದು.
ಸ್ಪೀಡ್-C++ ಪ್ರೋಗ್ರಾಮಿಂಗ್ ಭಾಷೆ ಕಡಿಮೆ ಸಾಲುಗಳಲ್ಲಿ ಪ್ರೋಗ್ರಾಮ್ ನಿರ್ಮಾಣ ಮಾಡಬಹುದಾಗಿದ್ದರಿಂದ ಪ್ರೋಗ್ರಾಮ್ ಎಸ್ಎಕ್ಯುಷನ್ ವೇಗವಾಗಿದೆ.
ವಿಸ್ತಾರವಾದ ಲೈಬ್ರರಿ ಫಂಕ್ಷನ್-ಡೀಫಾಲ್ಟ್ ಫಂಕ್ಷನ್ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಪ್ರೋಗ್ರಾಮ್ ನಿರ್ಮಾಣ ಸುಲಭವಾಗಿದೆ.
C++ ಟೋಕನ್:
[ಬದಲಾಯಿಸಿ]C++ ಪ್ರೋಗ್ರಾಮಿಂಗ್ ಭಾಷೆಯಲ್ಲಿರುವ ಒಂದು ಚಿಕ್ಕ ಪ್ರತ್ಯೇಕ ಘಟಕಗಳನ್ನು ಟೋಕನ್ ಎಂದು ಕರೆಯಲಾಗುತ್ತದೆ.C++ನಲ್ಲಿ ೬ ಟೋಕನ್‍ಗಳಿವೆ ೧)ಐಡೆಂಟಿಫೈಯರ್ಸ್ ೨)ಕೀವರ್ಡ್ಸ್ ೩)ಕಾನ್‍ಸ್ಟೆಂಟ್ ೪)ಲೀಟರಲ್ಸ್ ೫)ಪಂಕ್ಟುಟರ್ಸ್ ೬)ಆಪರೇಟರ್ಸ್
೧)ಐಡೆಂಟಿಫೈಯರ್ಸ್
[ಬದಲಾಯಿಸಿ]-ಐಡೆಂಟಿಫೈಯರ್ಸ್ ಅರೇ ,ವೇರಿಯೇಬಲ್ಸ್, ಫಂಕ್ಷನ್, ಇತ್ಯಾದಿ ಪ್ರೋಗ್ರಾಮಿಂಗ್ ಅಂಶಗಳಿಗೆ ನೀಡಿವ ಹೆಸರು.
೨)ಕೀವರ್ಡ್ಸ್
[ಬದಲಾಯಿಸಿ]- ವಿಶೇಷ ಅರ್ಥವನ್ನು ನೀಡುವ ಪೂರ್ವನಿರ್ಧರಿತ ಪದ.
೩)ಕಾನ್‍ಸ್ಟೆಂಟ್-
[ಬದಲಾಯಿಸಿ]ಪ್ರೋಗ್ರಾಮ್ ನಿರ್ವಹಣೆಯ ಅವಧಿಯಲ್ಲಿ ಬದಲಾಗದಿರುವ ಸ್ಥಿರಕ್ಕೆ ಕಾನ್‍ಸ್ಟೆಂಟ್ ಎಂದು ಕರೆಯುತ್ತೆವೆ.C++ನಲ್ಲಿ ೪ ಕಾನ್‍ಸ್ಟೆಂಟ್‍ಗಳಿವೆ .೧)ಇಂಟಿಜರ್ ಕಾನ್‍ಸ್ಟೆಂಟ್ ೨)ಫ್ಲೋಟಿಂಗ್ ಕಾನ್‍ಸ್ಟೆಂಟ್ ೩)ಕ್ಯಾರೆಕ್ಟರ್ ಕಾನ್‍ಸ್ಟೆಂಟ್ ೪)ಸ್ಟ್ರಿಂಗ್ ಕಾನ್‍ಸ್ಟೆಂಟ್.
೧)ಇಂಟಿಜರ್ ಕಾನ್ಸ್ಟಂಟ್-ಅಲ್ಪಭಾಗ ಇಲ್ಲದಿರುವ ಸಂಖ್ಯೆಯನ್ನು ಇಂಟಿಜರ್ ಕಾನ್‍ಸ್ಟೆಂಟ್ ಎಂದು ಕರೆಯುತ್ತೇವೆ.C++ನಲ್ಲಿ ೪ ಇಂಟಿಜರ್ ಕಾನ್‍ಸ್ಟೆಂಟ್‍ಗಳಿವೆ.೧)ಡೆಸಿಮಲ್ ಕಾನ್‍ಸ್ಟೆಂಟ್ ೨) ಓಕ್ಟಾಲ್ ಕಾನ್‍ಸ್ಟೆಂಟ್ ೩)ಹೆಕ್ಸಾಡೆಸಿಮಲ್ ಕಾನ್‍ಸ್ಟೆಂಟ್ ೪)ಅನ್ಸೈನೆಡ್ ಕಾನ್‍ಸ್ಟೆಂಟ್.
೨)ಫ್ಲೋಟಿಂಗ್ ಕಾನ್‍ಸ್ಟೆಂಟ್-ಅಪೂರ್ಣ ಸಂಖ್ಯೆಯನ್ನು ಪ್ರತಿನಿಧಿಸಲು ಫ್ಲೋಟಿಂಗ್ ಕಾನ್‍ಸ್ಟೆಂಟ್ ಬಳಸಲಾಗುತ್ತದೆ.ಇದ್ದನ್ನು ರಿಯಲ್ ಕಾನ್‍ಸ್ಟೆಂಟ್ ಎಂದು ಕರೆಯುತ್ತಾರೆ. ಇದರಲ್ಲಿ "ಮಂಟಿಸ್ಸ" ಸಂಖ್ಯೆಯ ಮೌಲ್ಯವನ್ನು ಸೂಚಿಸುತ್ತದೆ. ಎಸ್ಪೊನೆಂಟ್ ಸಂಖ್ಯೆಯ ಪ್ರಾಧಾನ್ಯವನ್ನು ಸೂಚಿಸುತ್ತದೆ.
೩)ಕ್ಯಾರೆಕ್ಟರ್ ಕಾನ್‍ಸ್ಟೆಂಟ್-ಎರಡು ಏಕ ಉದ್ಧರಣ ಚಿಹ್ನೆಯ ನಡುವೆ ಇರುವ ಪದವನ್ನು ಕ್ಯಾರೆಕ್ಟರ್ ಕಾನ್‍ಸ್ಟೆಂಟ್ ಎಂದು ಕರೆಯುತ್ತೇವೆ.
೪)ಸ್ಟ್ರಿಂಗ್ ಕಾನ್‍ಸ್ಟೆಂಟ್-ಎರಡು ಉದ್ದರಣ ಚಿಹ್ನೆಯ ನಡುವೆ ಇರುವ ಪದವನ್ನು ಸ್ಟ್ರಿಂಗ್ ಕಾನ್‍ಸ್ಟೆಂಟ್ ಎಂದು ಕರೆಯುತ್ತೆವೆ.
೫)ಪಂಕ್ಟುಟರ್ಸ್-
[ಬದಲಾಯಿಸಿ]ಸಿನ್ಟಾಟಿಕ್ ಮತ್ತು ಸಿಮಾಟಿಕ್ ಅರ್ಥ ನೀಡುವುದರಲ್ಲಿ ಪಂಕ್ಟುಟರ್ಸ್ ಪಾತ್ರ ಪ್ರಮುಖ.
"!"-ಸಮಾನವಿಲ್ಲ ಎಂಬುದ್ದನ್ನು ಪ್ರತಿನಿಧಿಸಲು 'ಈಕ್ವಲ್' ಚಿಹ್ನೆಯೊಂದಿಗೆ ಬಳಸಲಾಗುತ್ತದೆ.
"%"-ಫಾರ್ಮ್ಯಾಟ್ ಸ್ಪೇಸಿಫೈರ್ ಪ್ರತಿನಿಧಿಸಲು ಈ ಚಿಹ್ನೆಯನ್ನು ಬಳಸಲಾಗುತ್ತದೆ.
&-ಪ್ರೋಗ್ರಾಮಿಂಗ್ ಟೋಕನ್ ಪ್ರತಿನಿಧಿಸಲು ಈ ಚಿಹ್ನೆಯನ್ನು ಬಳಸಲಾಗುತ್ತದೆ.
";"-ಪ್ರೋಗ್ರಾಮಿಂಗ್ ಸಾಲನ್ನು ಅಂತ್ಯಗೊಳಿಸುದನ್ನು ಪ್ರತಿನಿಧಿಸಲು ಈ ಚಿಹ್ನೆಯನ್ನು ಬಳಸಲಾಗುತ್ತದೆ.
[]-"ಅರೇ"ಯನ್ನು ಪ್ರತಿನಿಧಿಸಲು ಈ ಚಿಹ್ನೆಯನ್ನು ಬಳಸಲಾಗುತ್ತದೆ.
{}-ಪ್ರೋಗ್ರಾಮಿಂಗ್ ಬ್ಲಾಕ್‍ನ ಆರಂಭ ಮತ್ತು ಅಂತ್ಯವನ್ನು ಪ್ರತಿನಿಧಿಸಲು ಈ ಚಿಹ್ನೆಯನ್ನು ಬಳಸಲಾಗುತ್ತದೆ.
"\"-ಎಸ್ಕೇಪ್ ಸೀಕ್ವೆನ್ಸ್ ಪ್ರತಿನಿಧಿಸಲು ಈ ಚಿಹ್ನೆಯನ್ನು ಬಳಸಲಾಗುತ್ತದ್ದೆ.
೬)ಆಪರೇಟರ್ಸ್- ಆಪರೇಟರ್ಸ್ ಲಾಜಿಕ್ ಮತ್ತು ಗಣಿತ ಆಪರೇಷನ್ ನಿರ್ವಹಿಸಲು ಕಂಪೈಲರ್ಗೆ ಸೂಚಿಸುತ್ತದೆ.C++ನಲ್ಲಿ ೩ ಆಪರೇಟರ್ಸ್‌ಗಳಿವೆ. ಯೂಣರಿ ಆಪರೇಟರ್ಸ್, ಬೈನರಿ ಆಪರೇಟರ್ಸ್ ,ಟರ್ನರಿ ಆಪರೇಟರ್ಸ್.
ಲೈಬ್ರರಿ ಫಂಕ್ಷನ್
[ಬದಲಾಯಿಸಿ]C++ನಲ್ಲಿ ಪ್ರೋಗ್ರಾಮಿಂಗ್ ಸಮಯ ಉಳಿಸಲು ಅನೇಕ ಡೀಫಾಲ್ಟ್ ಫಂಕ್ಷನ್‍ಗಳಿವೆ ಅವುಗಳೆಂದರೆ ೧)ಮ್ಯಾಥಮೆಟಿಕಲ್ ಫಂಕ್ಷನ್ ,೨)ಕ್ಯಾರೆಕ್ಟರ್ ಫಂಕ್ಷನ್, ೩)ಸ್ಟ್ರಿಂಗ್ ಫಂಕ್ಷನ್, ೪)ಕನ್ಸೋಲ್ ಇನ್‍ಪುಟ್ ಔಟ್‍ಪುಟ್ ಫಂಕ್ಷನ್.
೧)ಮ್ಯಾಥಮೆಟಿಕಲ್ ಫಂಕ್ಷನ್
[ಬದಲಾಯಿಸಿ](math.h) ಬಳಸಿ ಕೆಳಗಿರುವ ಮ್ಯಾಥಮೆಟಿಕಲ್ ಫಂಕ್ಷನ್ ಉಪಯೋಗಿಸಬಹುದು.
sin(x)-ಆಂಗಲ್‍ನ ಸೈನ್ ಮೌಲ್ಯ ಕಂಡುಹಿಡಿಯುದರಲ್ಲಿ ಸಹಾಯ ಮಾಡುತ್ತದೆ.
cos(x)-ಆಂಗಲ್‍ನ ಕೊಸೈನ್ ಮೌಲ್ಯ ಕಂಡುಹಿಡಿಯುದರಲ್ಲಿ ಸಹಾಯ ಮಾಡುತ್ತದೆ.
tan(x)-ಆಂಗಲ್‍ನ ಟ್ಯಾಂಜೆಂಟ್ ಮೌಲ್ಯ ಕಂಡುಹಿಡಿಯುದರಲ್ಲಿ ಸಹಾಯ ಮಾಡುತ್ತದೆ.
asin(x)-ಆಂಗಲ್‍ನ ಸೈನ್ ಇನ್ವೆರ್ಸ್ ಮೌಲ್ಯ ಕಂಡುಹಿಡಿಯುದರಲ್ಲಿ ಸಹಾಯ ಮಾಡುತ್ತದೆ.
acos(x)-ಆಂಗಲ್‍ನ ಕೊಸೈನ್ ಇನ್ವೆರ್ಸ್ ಮೌಲ್ಯ ಕಂಡುಹಿಡಿಯುದರಲ್ಲಿ ಸಹಾಯ ಮಾಡುತ್ತದೆ.
exp(x)- ಎಸ್ಪಿಯೊನೆಂಷಿಯಾಲ್ ಮೌಲ್ಯ ಕಂಡುಹಿಡಿಯುದರಲ್ಲಿ ಸಹಾಯ ಮಾಡುತ್ತದೆ.
log(x)-'x'ನ ಲೋಗರಿಥಿಮ್ ಮೌಲ್ಯ ಕಂಡುಹಿಡಿಯುದರಲ್ಲಿ ಸಹಾಯ ಮಾಡುತ್ತದೆ.
೨)ಕ್ಯಾರೆಕ್ಟರ್ ಫಂಕ್ಷನ್-
[ಬದಲಾಯಿಸಿ](ctype.h) ಬಳಸಿ ಕೆಳಗಿರುವ ಕ್ಯಾರೆಕ್ಟರ್ ಫಂಕ್ಷನ್ ಉಪಯೋಗಿಸಬಹುದು.
isalpha(c)-'c' ಅಕ್ಷರವಾದರೆ "ಟ್ರೂ" ಇಲ್ಲದೇಹೋದರೆ "ಫಾಲ್ಸ್" ಎಂದು ಔಟ್ಪುಟ್ ಹಿಂದಿರುಗಿಸುತ್ತದೆ.
isdigit(c)-'c' ಸಂಖ್ಯೆವಾದರೆ "ಟ್ರೂ" ಇಲ್ಲದೇಹೋದರೆ "ಫಾಲ್ಸ್" ಎಂದು ಔಟ್ಪುಟ್ ಹಿಂದಿರುಗಿಸುತ್ತದೆ.
isalnum(c)-'c' ಸಂಖ್ಯೆ ಅಥವ ಅಕ್ಷರವಾದರೆ "ಟ್ರೂ" ಇಲ್ಲದೇಹೋದರೆ "ಫಾಲ್ಸ್" ಎಂದು ಔಟ್ಪುಟ್ ಹಿಂದಿರುಗಿಸುತ್ತದೆ.
islower(c)-'c' ಲೋವರ್ ಕೇಸ್ ಲೆಟರ್ ಆದಲ್ಲಿ "ಟ್ರೂ" ಇಲ್ಲದೇಹೋದರೆ "ಫಾಲ್ಸ್" ಎಂದು ಔಟ್ಪುಟ್ ಹಿಂದಿರುಗಿಸುತ್ತದೆ.
isupper(c)-'c' ಅಪ್ಪರ್ ಕೇಸ್ ಲೆಟರ್ ಆದಲ್ಲಿ "ಟ್ರೂ" ಇಲ್ಲದೇಹೋದರೆ "ಫಾಲ್ಸ್" ಎಂದು ಔಟ್ಪುಟ್ ಹಿಂದಿರುಗಿಸುತ್ತದೆ.
toupper(c)-'c' ವೇರಿಯೇಬಲ್‍ನ ಅಪ್ಪರ್ ಕೇಸ್ ಲೆಟರ್‍ಗೆ ಪರಿವರ್ತಿಸಲು ಸಹಾಯಮಾಡುತ್ತದೆ.
tolower(c)-'c' ವೇರಿಯೇಬಲ್ ಲೋವರ್ ಕೇಸ್ ಲೆಟರ್‍ಗೆ ಪರಿವರ್ತಿಸಲು ಸಹಾಯಮಾಡುತ್ತದೆ.
೩)ಸ್ಟ್ರಿಂಗ್ ಫಂಕ್ಷನ್-
[ಬದಲಾಯಿಸಿ](string.h) ಬಳಸಿ ಕೆಳಗಿರುವ ಸ್ಟ್ರಿಂಗ್ ಫಂಕ್ಷನ್ ಉಪಯೋಗಿಸಬಹುದು.
strlen(s)- ಸ್ಟ್ರಿಂಗ್‍ನಲ್ಲಿರುವ ಅಕ್ಷರಗಳ ಸಂಖ್ಯೆಯನ್ನು ಹಿಂದಿರುಗಿಸುತ್ತದೆ.
strrev(s)-ಸ್ಟ್ರಿಂಗ್‍ನಲ್ಲಿರುವ ಅಕ್ಷರಗಳನ್ನು ರಿವರ್ಸ್ ಪದವಾಗಿ ಔಟ್ಪುಟ್ ಹಿಂದಿರುಗಿಸುತ್ತದೆ.
strupr(s)-ಸ್ಟ್ರಿಂಗ್‍ಅನ್ನು ಅಪ್ಪರ್ ಕೇಸ್ ಲೆಟರ್‍ಗೆ ಪರಿವರ್ತಿಸಲು ಸಹಾಯಮಾಡುತ್ತದೆ.
strlwr(s)-ಸ್ಟ್ರಿಂಗ್‍ಅನ್ನು ಲೋವರ್ ಕೇಸ್ ಲೆಟರ್‍ಗೆ ಪರಿವರ್ತಿಸಲು ಸಹಾಯಮಾಡುತ್ತದೆ.
ಕಂಟ್ರೋಲ್ ಸ್ಟೇಟ್‍ಮೆಂಟ್ಸ್
[ಬದಲಾಯಿಸಿ]ಕಂಟ್ರೋಲ್ ಸ್ಟೇಟ್‍ಮೆಂಟ್ಸ್ ಬಳಸಿ ಇನ್‍ಸ್ಟ್ರಕ್ಷನ್ ಅನುಕ್ರಮ ಬದಲಾಯಿಸಬಹುದು.C++ನಲ್ಲಿ ೨ ಕಂಟ್ರೋಲ್ ಸ್ಟೇಟ್‍ಮೆಂಟ್ಸ್ ಇದೆ. ೧)ಸೆಲೆಕ್ಷನ್ ಸ್ಟೇಟ್‍ಮೆಂಟ್ಸ್ ,೨)ಇಟೆರೇಷನ್ ಸ್ಟೇಟ್‍ಮೆಂಟ್ಸ್
೧)ಸೆಲೆಕ್ಷನ್ ಸ್ಟೇಟ್‍ಮೆಂಟ್ಸ್-ಇನ್‍ಸ್ಟ್ರಕ್ಷನನ್ನು ಕಂಡೀಶನ್ ಆಧಾರಿತದ ಮೇಲೆ ಎಸ್ಎಕ್ಯುಷನ್ ಮಾಡಲು ಸಹಾಯಮಾಡುತ್ತದೆ.C++ನಲ್ಲಿ ೪ ಸೆಲೆಕ್ಷನ್ ಸ್ಟೇಟ್‍ಮೆಂಟ್ಸ್ ಇದೆ.೧)ಇಫ್ ಸ್ಟೇಟ್‍ಮೆಂಟ್ಸ್ ೨)ಇಫ್-ಎಲ್ಸ್ ಸ್ಟೇಟ್‍ಮೆಂಟ್ಸ್ ೩)ನೆಸ್ಟಡ್ ಸ್ಟೇಟ್‍ಮೆಂಟ್ಸ್ ೪)ಸ್ವಿಚ್ ಸ್ಟೇಟ್‍ಮೆಂಟ್ಸ್
೧)ಇಫ್ ಸ್ಟೇಟ್‍ಮೆಂಟ್ಸ್ -ಎಕ್ಸಿಕ್ಯೂಟ್ ಮಾಡಬೇಕಾದ ಸ್ಟೇಟ್‍ಮೆಂಟ್‍ನ ಕಂಡೀಶನ್ ನಿರ್ಧರಿಸಲು ಇಫ್ ಸ್ಟೇಟ್‍ಮೆಂಟ್ಸ್ ಬಳಸಲಾಗುತ್ತದೆ.ಇದನ್ನು "ಒನ್-ವೆ ಬ್ರ್ಯಾಂಚಿಂಗ್" ಎಂದು ಕರೆಯಲಾಗುತ್ತದೆ.
೨)ಇಫ್-ಎಲ್ಸ್ ಸ್ಟೇಟ್‍ಮೆಂಟ್ಸ್-ಕಂಡೀಶನ್ ಟ್ರೂ ಆದರೆ ಒಂದು ಸೆಟ್ ಒಫ್ ಇನ್‍ಸ್ಟ್ರಕ್ಷನ್ ಇಲ್ಲದಿದ್ದರೆ ಬೇರೆ ಸೆಟ್ ಒಫ್ ಇನ್ಸ್ಟ್ರಕ್ಷನ ಎಕ್ಸಿಕ್ಯೂಟ್ ಮಾಡುತ್ತದ್ದೆ.ಇದನ್ನು "ಟೂ-ವೆ ಬ್ರ್ಯಾಂಚಿಂಗ್" ಎಂದು ಕರೆಯಲಾಗುತ್ತದೆ.
೩)ನೆಸ್ಟಡ್ ಸ್ಟೇಟ್‍ಮೆಂಟ್ಸ್-ಒಂದು ಇಫ್-ಎಲ್ಸ್ ಸ್ಟೇಟ್‍ಮೆಂಟ್ಸ್ ಒಳಗೆ ಮತ್ತೊಂದು ಇಫ್-ಎಲ್ಸ್ ಸ್ಟೇಟ್‍ಮೆಂಟ್ಸ್ ಸೇರಿಸಿದರೆ ಅದನ್ನು ನೆಸ್ಟಡ್ ಸ್ಟೇಟ್‍ಮೆಂಟ್ಸ್ ಎಂದು ಕರೆಯಲಾಗುತ್ತದೆ.
೪)ಸ್ವಿಚ್ ಸ್ಟೇಟ್‍ಮೆಂಟ್ಸ್-ಒಂದು ಕಂಡೀಶನ್‍ಗೆ ಹಲವು ಆಯ್ಕೆ ಇದ್ದರೆ ಅದನ್ನು ಸ್ವಿಚ್ ಸ್ಟೇಟ್‍ಮೆಂಟ್ಸ್ ಎಂದು ಕರೆಯಲಾಗುತ್ತದೆ.
೨)ಇಟೆರೇಷನ್ ಸ್ಟೇಟ್‍ಮೆಂಟ್ಸ್-ಕಂಡೀಶನ್ ಎಸ್ಎಕ್ಯುಷನ್ ಪುನರಾವರ್ತಿಸಲು ಇಟೆರೇಷನ್ ಸ್ಟೇಟ್‍ಮೆಂಟ್ಸ್ ಬಳಸುತ್ತೆವೆ.C++ನಲ್ಲಿ ೩ ಇಟೆರೇಷನ್ ಸ್ಟೇಟ್‍ಮೆಂಟ್ಸ್ ಇದೆ.೧) "ವೈಲ್" ಸ್ಟೇಟ್‍ಮೆಂಟ್ಸ್ ,೨) "ಡು-ವೈಲ್" ಸ್ಟೇಟ್‍ಮೆಂಟ್ಸ್ ,೩)"ಫಾರ್" ಸ್ಟೇಟ್‍ಮೆಂಟ್ಸ್.
C++ ಪ್ರೋಗ್ರಾಮಿಂಗ್ ರಚನೆ
[ಬದಲಾಯಿಸಿ]ಕಾಮೆಂಟ್ಸ್ ಸೆಕ್ಷನ್-ಪ್ರತಿ ವಿಭಾಗ ಮಾಡುತಿರುವ ಕಾರ್ಯಗಳ ಬಗ್ಗೆ ಕಾಮೆಂಟ್‍ಗಳನ್ನು ಬರೆಯಲು ಕಾಮೆಂಟ್ಸ್ ಸೆಕ್ಷನ್ ನಮಗೆ ಅವಕಾಶ ನೀಡುತ್ತದೆ.
ಲಿನ್ಕರ್ ಸೆಕ್ಷನ್- C++ನಲ್ಲಿ ಮೊದಲು ಎಕ್ಸಿಕ್ಯೂಟ್ ಆಗುವ ಡೆಫಿನಿಷನ್‍ಗಳನ್ನು ಲಿನ್ಕರ್ ಸೆಕ್ಷನ್ ಎಂದು ಕರೆಯುತ್ತೆವೆ ಉದಾಹರಣೆಗೆ(#include<iostream.h>, #include<iomanip.h>, #include<iomanip.h>, #include<conio.h>).
ಗ್ಲೋಬಲ್ ಡಿಕ್ಲೆರೇಷನ್ ಸೆಕ್ಷನ್-ಸಾಮಾನ್ಯವಾಗಿ ಈ ಭಾಗದಲ್ಲಿ ವೇರಿಯಬಲ್ ಡಿಕ್ಲೆರೇಷನ್ ಮಾಡಬಹುದು.
ಮೇನ್() ಫಂಕ್ಷನ್-ಪ್ರಮುಖವಾಗಿರುವ ಪ್ರೋಗ್ರಾಮಿಂಗ್ ಲಾಜಿಕ್ ಈ ಭಾಗದಲ್ಲಿ ಬರೆಯಬಹುದು.
ಬ್ರೆಸ್ಸ್("{}")-ಪ್ರೋಗ್ರಾಮ್‍ನ ಆರಂಭ ಮತ್ತು ಕೊನೆಯನ್ನು ಸೂಚಿಸುತ್ತದೆ.
ವೇರಿಯೇಬಲ್ ಡಿಕ್ಲೆರೇಷನ್ ಸೆಕ್ಷನ್- ಈ ಭಾಗದಲ್ಲಿ ವೇರಿಯಬಲ್ ಡಿಕ್ಲೆರೇಷನ್ ಮಾಡಬಹುದು.
ಎಸ್ಎಕ್ಯೂಟಬಲ್ ಸೆಕ್ಷನ್-ಇನ್‍ಪುಟ್ ಔಟ್‍ಪುಟ್ ಫಂಕ್ಷನ್, ಕಂಡೀಷನ್ ಸ್ಟೇಟ್‍ಮೆಂಟ್ಸ್, ಲೂಪಿಂಗ್ ಸ್ಟೇಟ್‍ಮೆಂಟ್ಸ್, ಮುಂತಾದ ಪ್ರೋಗ್ರಾಮಿಂಗ್ ಅಂಶಗಳನ್ನು ಇಲ್ಲಿ ಬರೆಯಬಹುದು.