ಸದಸ್ಯ:Varun G J/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಸ್. ನರ್ಮದಾ (೨೨ ಸೆಪ್ಟೆಂಬರ್ ೧೯೪೨ - ೩೦ ಮಾರ್ಚ್ ೨೦೦೭) ಗುರು ನರ್ಮದಾ ಎಂದು ಜನಪ್ರಿಯವಾಗಿರುವ ಇವರು ಕರ್ನಾಟಕ ಮೂಲದವರಾಗಿದ್ದು, ಭರತನಾಟ್ಯ ನಿರೂಪಕಿಯಾಗಿ ಮತ್ತು ಶಿಕ್ಷಕರಾಗಿದ್ದರು . ಇವರಿಗೆ ಅನೇಕ ಪ್ರಶಸ್ತಿಗಳು ಲಭಿಸಿದ್ದು, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮತ್ತು ಶಾಂತಲಾ ನಾಟ್ಯ ಶ್ರೀ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಜೀವನಚರಿತ್ರೆ[ಬದಲಾಯಿಸಿ]

ಎಸ್. ನರ್ಮದಾ ಅವರು ೨೨ ಸೆಪ್ಟೆಂಬರ್ ೧೯೪೨ ರಂದು ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿದರು . ವಿ.ಎಸ್.ಕೌಶಿಕ್ ಅವರಿಂದ ನೃತ್ಯದ ತರಬೇತಿಯನ್ನು ಪಡೆದರು. ಕೆಪಿ ಕಿಟ್ಟಪ್ಪ ಪಿಳ್ಳೈ ಅವರ ಪ್ರಮುಖ ಶಿಷ್ಯೆಯಾಗಿ , ಎರಡು ದಶಕಗಳಿಗೂ ಹೆಚ್ಚು ಕಾಲ ಅವರ ಮಾರ್ಗದರ್ಶನದಲ್ಲಿ ತಂಜಾವೂರು ಶೈಲಿಯ ಭರತನಾಟ್ಯವನ್ನು ಅಭ್ಯಾಸ ಮಾಡಿದ್ದರು. ಭರತನಾಟ್ಯದ ಅತ್ಯುತ್ತಮ ಶಿಕ್ಷಕಿಯಾಗಿರುವ ನರ್ಮದಾ ಅವರು ತಮ್ಮ ತಾಯಿಯ ಸ್ಮರಣಾರ್ಥ ಬೆಂಗಳೂರಿನಲ್ಲಿ ೧೯೭೮ರಲ್ಲಿ ಶಕುಂತಲಾ ನೃತ್ಯ ಶಾಲೆಯನ್ನು ಆರಂಭಿಸಿ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಹಲವಾರು ನೃತ್ಯಪಟುಗಳಿಗೆ ತರಬೇತಿ ನೀಡಿದ್ದಾರೆ. ಇವರ ಪ್ರಮುಖ ಶಿಷ್ಯರನ್ನು ನೋಡುವುದಾದರೆ ಲಕ್ಷ್ಮಿ ಗೋಪಾಲಸ್ವಾಮಿ , ಮಂಜು ಭಾರ್ಗವಿ , ಸತ್ಯನಾರಾಯಣ ರಾಜು, ನಿರುಪಮಾ ರಾಜೇಂದ್ರ , ಮಾಲತಿ ಅಯ್ಯಂಗಾರ್, ಪ್ರವೀಣ್ ಮತ್ತು ಅನುರಾಧಾ ವಿಕ್ರಾಂತ್.

ನರ್ಮದಾ ಅವರು ತಮ್ಮ 64 ನೇ ವಯಸ್ಸಿನಲ್ಲಿ 30 ಮಾರ್ಚ್ 2007 ರಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.