ಎಸ್.ನರ್ಮದಾ
ಎಸ್. ನರ್ಮದಾ | |
---|---|
Born | |
Died | 30 March 2007 | (aged 64)
Nationality | ಭಾರತೀಯ |
Occupation(s) | ನೃತ್ಯಗಾರ್ತಿ, ನೃತ್ಯ ಶಿಕ್ಷಕಿ |
Known for | ಭರತನಾಟ್ಯ |
Awards | ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ – ಶಾಂತಲ ನೃತ್ಯಶ್ರೀ ಪ್ರಶಸ್ತಿ |
ಎಸ್. ನರ್ಮದಾ (೨೨ ಸೆಪ್ಟೆಂಬರ್ ೧೯೪೨ - ೩೦ ಮಾರ್ಚ್೨೦೦೭) ಗುರು ನರ್ಮದಾ ಎಂದು ಜನಪ್ರಿಯವಾಗಿರುವ ಇವರು ಕರ್ನಾಟಕ, ಮೂಲದ ಭರತನಾಟ್ಯ ನರ್ತಕಿ ಮತ್ತು ಶಿಕ್ಷಕಿಯಾಗಿದ್ದವರು. ಇವರಿಗೆ ಅನೇಕ ಪ್ರಶಸ್ತಿಗಳು ಲಭಿಸಿದ್ದು, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮತ್ತು ಶಾಂತಲಾ ನಾಟ್ಯ ಶ್ರೀ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಜೀವನಚರಿತ್ರೆ
[ಬದಲಾಯಿಸಿ]ಎಸ್. ನರ್ಮದಾ ಅವರು೨೨ ಸೆಪ್ಟೆಂಬರ್ ೧೯೪೨ ರಂದು ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿದರು. ವಿ.ಎಸ್.ಕೌಶಿಕ್ ಅವರಿಂದ ಆರಂಭಿಕ ನೃತ್ಯ ತರಬೇತಿಯನ್ನು ಪಡೆದರು.. [೧] ಕೆಪಿ ಕಿಟ್ಟಪ್ಪ ಪಿಳ್ಳೈ ಅವರ ಪ್ರಮುಖ ಶಿಷ್ಯೆಯಾಗಿ, ಎರಡು ದಶಕಗಳಿಗೂ ಹೆಚ್ಚು ಕಾಲ ಅವರ ಮಾರ್ಗದರ್ಶನದಲ್ಲಿ ತಂಜಾವೂರು ಶೈಲಿಯ ಭರತನಾಟ್ಯವನ್ನು ಅಭ್ಯಾಸ ಮಾಡಿದ್ದರು. [೨]
ಭರತನಾಟ್ಯ ಶಿಕ್ಷಕಿಯಾಗಿರುವ ನರ್ಮದಾ ಅವರು ತಮ್ಮ ತಾಯಿಯ ಸ್ಮರಣಾರ್ಥ ಬೆಂಗಳೂರಿನಲ್ಲಿ ೧೯೭೮ರಲ್ಲಿ ಶಕುಂತಲಾ ನೃತ್ಯ ಶಾಲೆಯನ್ನು ಆರಂಭಿಸಿ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಹಲವಾರು ನೃತ್ಯಪಟುಗಳಿಗೆ ತರಬೇತಿ ನೀಡಿದ್ದಾರೆ. [೩] . ಇವರ ಪ್ರಮುಖ ಶಿಷ್ಯರನ್ನು ನೋಡುವುದಾದರೆ, ಲಕ್ಷ್ಮಿ ಗೋಪಾಲಸ್ವಾಮಿ, ಮಂಜು ಭಾರ್ಗವಿ, ಸತ್ಯನಾರಾಯಣರಾಜು, ನಿರುಪಮಾ ರಾಜೇಂದ್ರ, ಮಾಲತಿ ಅಯ್ಯಂಗಾರ್, ಪ್ರವೀಣ್ ಮತ್ತು ಅನುರಾಧಾ ವಿಕ್ರಾಂತ್ . [೪]
ನರ್ಮದಾ ಅವರು ತಮ್ಮ ೬೪ ನೇ ವಯಸ್ಸಿನಲ್ಲಿ ೩೦ ಮಾರ್ಚ್ ೨೦೦೭ ರಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು [೫] [೬]
ಪ್ರಶಸ್ತಿಗಳು ಮತ್ತು ಗೌರವಗಳು
[ಬದಲಾಯಿಸಿ]- ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ೨೦೦೬ [೭]
- ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ೧೯೯೮ [೭]
- ರಾಜ್ಯೋತ್ಸವ ಪ್ರಶಸ್ತಿ ೧೯೯೬ [೭]
- ಮದ್ರಾಸ್ ಸಂಗೀತ ಅಕಾಡೆಮಿಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ೧೯೯೨ [೭]
- ಕರ್ನಾಟಕ ಸರ್ಕಾರದಿಂದ ಶಾಂತಲಾ ನಾಟ್ಯ ಶ್ರೀ ಪ್ರಶಸ್ತಿ ೨೦೦೧ [೮]
- ಕ್ಯಾಲಿಫೋರ್ನಿಯಾದ, ಕರ್ನಾಟಕ ಕಲ್ಚರಲ್ ಅಸೋಸಿಯೇಷನ್, ಪ್ರಶಸ್ತಿ ನೀಡಿದೆ [೬]
ಉಲ್ಲೇಖಗಳು
[ಬದಲಾಯಿಸಿ]- ↑ name="narthaki">"Profiles - Guru Narmada is no more". narthaki.com.
- ↑ name="Akademi">"S.Narmada" (PDF). Sangeet Natak Akademi.
- ↑ name="narthaki">"Profiles - Guru Narmada is no more". narthaki.com."Profiles - Guru Narmada is no more". narthaki.com.
- ↑ name=":0">"Dance guru Narmada passes away in Bangalore". www.kutcheribuzz.com.
- ↑ "Dance guru Narmada passes away in Bangalore". www.kutcheribuzz.com."Dance guru Narmada passes away in Bangalore". www.kutcheribuzz.com.
- ↑ ೬.೦ ೬.೧ "Profiles - Guru Narmada is no more". narthaki.com."Profiles - Guru Narmada is no more". narthaki.com.
- ↑ ೭.೦ ೭.೧ ೭.೨ ೭.೩ "S.Narmada" (PDF). Sangeet Natak Akademi."S.Narmada" (PDF). Sangeet Natak Akademi.
- ↑ "Karnataka Government". www.karnataka.gov.in.