ಸದಸ್ಯ:Uma rajappa dasar/sandbox-1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಲೂಗಡ್ದೆ[ಬದಲಾಯಿಸಿ]

(ಸೊಲ್ಯಾನಂ ಟ್ಯೂಬರೋಸಂ Linn.) Potato(Solanum tuberosum Linn) ಕುಟುಂಬ:ಸೋಲನೇಸಿ

=ಸಸ್ಯಮೂಲ-ಪರಿಚಯ[ಬದಲಾಯಿಸಿ]

ಬಡವರಿಗೂ,ಬಳಲ್ಲಿದರಿಗೂ ಆಲೂಗಡ್ಡೆ ರುಚಿ ಅಂಟಿಕೊಂಡಿದೆ.ಆದ್ದರಿಂದ ಬಿ.ಜಿ.ಎಲ್.ಸ್ವಾಮಿಯವರು ಇದಕ್ಕೆ 'ಕಲ್ಪಕಂದ' ಎಂದು ಹೆಸರಿಸಿದ್ದಾರೆ.ಈ ಕಲ್ಪಕಂದವು ವಿದೇಶೀಯರ ದೈನಂದಿನ ಆಹಾರಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ.ಕರ್ಣಾಟಕದ ಹಲವು ಪ್ರದೇಶಗಲ್ಲಿ ಬಟಾಟೆ ಎಂದು ಕರೆಯಲ್ಪಡುವ ಈ ಹೆಸರು ಮೂಲದ ಪೊಟಾಟೋದಿಂದಲೇ ಬಂದದ್ದು.ನಾವು ಅಕ್ಕಿಯನ್ನೂ,ಉತ್ತರ ಭಾರತೀಯರು ಗೋದ್ದಿಯನ್ನೂ ಬಳಸುವಂತೆ,ಬೇಹಿಸಿದ,ಬಾಡಿಸಿದ, ಹುರಿದ ಆಲೂ ಪಾಶ್ಚಾತ್ಯರಿಗೆ ಅನ್ನದಂತೆ.

ಔಷಧೀಯ ಗುನಗಳು[ಬದಲಾಯಿಸಿ]

  • ಈ ಪೋಷಕಾಂಶಗಳಲ್ಲದೆ ಅವಶ್ಯಕ ಅಮೈನೋ ಆಮ್ಲಗಳು ಕೂಡ ಇರುವುದರಿಂದ ರುಚಿ ಹಿತರಕವಾಗಿದ್ದು ಎಲ್ಲಾ ತಿಂಡಿತಿನಿಸುಗಳಲ್ಲಿ ಬಳಸಬಹುದಾದ,ಸಲಾಭವಾಗಿ ದೊರೆಯುವ,ಪ್ರಪಂಚದಾದ್ಯಂತ ಬಳಕೆಯಲ್ಲಿರುವ ಗೆಡ್ಡೆ ತರಕಾರಿ.
  • ಆಲೂಗಡ್ಡೆಯನ್ನು ೩ ಭಾಗಗಳಾಗಿ ವಿಂಗಡಿಸಬವುದು.
  • ಮೊದಲನೆಯದು,ಮೇಲ್ಬಾಗದ ಸಿಪ್ಪೆ,ಎರಡನೆಯದು,ಸಿಪ್ಪೆಯ ಮೇಲ್ಬಾಗದಲ್ಲಿರುವ ತೆಳುವಾದ ಪೊರೆ,ಮೂರನೆಯದು,ಒಳ ಪಿಷ್ಟ ಭಾಗ.
  • ಮೊದಲನೆಯ ಭಾಗದಲ್ಲಿ ಖನಿಜಾಂಶಾ ಮತ್ತು ಜೀವಸತ್ವಗಳಿರುತ್ತವೆ.
  • ಎರಡನೆಯ ಪದರದಲ್ಲಿ ಸಸಾರಜನಕ ಮತ್ತು ವರ್ಣದ್ರವ್ಯ ಇರುತ್ತವೆ.
  • ಈ ವರ್ಣದ್ರವ್ಯ ನಾವು ಆಲೂಗಡ್ಡೆಯನ್ನು ಕತ್ತರಿಸಿದಾಗ ಗಾಳಿಯ ಸಂಪರ್ಕಕ್ಕೆ ಬಂದು ಆಲೂಗಡ್ಡೆಯ ಬಣ್ಣವನ್ನು ಬದಲಾಯಿಸುತ್ತದೆ.
  • ಮೂರನೇಯ ಭಾಗವು ಪಿಷ್ಟ ಮತ್ತು ನೀರಿನಿಂದ ಕೂಡಿರುತದೆ.
  • ಆದುದರಿಂದಲೇ ಆಲೂಗಡ್ಡೆಯ ಸಿಪ್ಪೆಯನ್ನು ತೆಗೆಯುದರಿಂದ ಅಥವಾ ತೊಳೆಯುದರಿಂದ ಪೋಷಕಾಂಶಗಳು ನಷ್ಟವಾಗಿ ಕೇವಲ ಪಿಷ್ಟ ಪದಾರ್ಥ ಮಾತ್ರ ಉಳಿಯುತದೆ.

ತಿಂಡಿಗಳು[ಬದಲಾಯಿಸಿ]

  • ಆಲೂ ಪಾಯಸ:ಬೇಯಿಸಿದ ಆಲೂಗಡ್ಡೆಯನ್ನು ರುಬ್ಬಿ ಹಾಲಿಗೆ ಸೇರಿಸಿ ಕುದಿಸಿ,ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಬೇಕು.ಹುರಿದ ಗೋಡಂಬಿ ಮತ್ತು ದ್ರಾಕ್ಷಿ ಸೇರಿಸಬವುದು.ಹೆಚ್ಚಿನ ರುಚಿ ಬೇಕಾದರೆ ಹಾಲಿನೊಂದಿಗೆಖೋವಾ ಸೇರಿಸಿದರೆ ವಿಶೇಷ ರುಚಿ ಬರುತ್ತದೆ.
  • ಆಲೂ ಹಲ್ವ:ಆಲೂಗಡ್ಡೆಯನ್ನು ಶುಚಿಮಾಡಿ ಬೇಯಿಸಿ ಚೆನ್ನಾಗಿ ಮಸೆದು ಸಕ್ಕರೆ ಬೆರೆಸಿ ಬಾಣಲೆಯಲ್ಲಿ ಹಾಕಿ ಒಲೆಯ ಮೇಲಿಟ್ಟು ಮಗಚುತ್ತಾ ತುಪ್ಪ ಸೇರಿಸಿದರೆ ಒಳ್ಳೆಯ ವಾಸನೆ ಬಂದು ಪಾತ್ರೆ ಬಿಡುವಾಗ ತುಪ್ಪ ಸವರಿದ ತಟ್ಟೆಗೆ ಹರಡಿ ಇಡಬೇಕು.ಆರಿದ ಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿ ಉಪಯೋಗಿಸಬವುದು.

ತಳಿಗಳು[ಬದಲಾಯಿಸಿ]

ಅಪ್-ಟು-ಡೇಟ್:ಇದು ಬಹುಬೇಗ ೯೦ ದಿನಗಳಲ್ಲಿ ಇಳುವರಿಗೆ ಬರುವ ಮತ್ತು ವಿವಿಧ ಹವಾಗುಣಗಳಿಗೆ ಹೊಂದಿಕೊಂಡು ಬೇಳೆಯುವ ಭಾರತದ ಉತ್ತಮ ತಳಿ.ಚಪ್ಪಟೆಯದ ಗೆಡ್ಡೆಗಳು ವಿಶಾಲವಾದ,ನಯವಾದ ಮೇಲ್ಮೈ ಹೊಂದಿರುತವೆ.

ಬೀಜ ಮತ್ತು ಬಿತ್ತನೆ[ಬದಲಾಯಿಸಿ]

ಈ ಬೇಳೆಯನ್ನು ಗೆಡ್ಡೆಗಳ ಮುಖಾಂತರ ಸಸ್ಯಾಭಿವ್ರದ್ಧಿ ಮಾಡಲಾಗುವುದು. ಈ ಉದೇಶಕ್ಕೆ ಇಡೀ ಗೆಡ್ಡೆ ಅಥವಾ ಗೆಡ್ಡೆಯ ಚೂರುಗಳನ್ನು ಬೀಜವಾಗಿ ಬಳಸುತ್ತಾರೆ.ಆಲೂಗಡ್ಡೆಗೆ ಮಾರಕವಾದ ರೋಗಗಳು ಗೆಡ್ಡೆಗಳ ಮುಖಾಂತರ ಹರಡುವುದರಿಂದ ರೋಗರಹಿತ ಗೆಡ್ಡೆಗಳನ್ನು ಮಾತ್ರ ಬಳಸಬೇಕು.

ನೀರಾವರಿ ಮತ್ತು ಅಂತರಬೇಸಾಯ[ಬದಲಾಯಿಸಿ]

ನಾಟಿಮಾಡಿದ ಕೂಡಲೆ ತೆಳು ನೀರಾವರಿ ಒದಗಿಸಬೇಕು.ನಂತರದ ನೀರಾವರಿಗಳನ್ನು ಮಣ್ಣು ಮತ್ತು ಹವಾಗುಣಗಳಿಗನುಗುಣವಾಗಿ ೫-೭ ದಿನಗಳ ಅಂತರದಲ್ಲಿ ಕೊಡಬೇಕು ಮತ್ತು ಕಳೆ ಬರದಂತೆ ಎಚ್ಚರ ವಹಿಸಬೇಕು.[೧]

ಉಲ್ಲೇಖ[ಬದಲಾಯಿಸಿ]

  1. ಡಾ||ಪಿ.ನಾರಾಯಣ ಸ್ವಾಮಿ,ಡಾ||ಎಲ್.ವಸಂತ ನವಕರ್ಣಾಟಕ ಪ್ರಕಾಶನ ಪುಟಸಂಖ್ಯೆ ೫