ಸದಸ್ಯ:Swathi1940562

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಸ್ವಾತಿ. ನಾನು ಹುಟ್ಟಿದ್ದು" ದಾವಣಗೆರೆಯಲ್ಲಿ" ಬೆಳೆದದ್ದು" ಬೆಂಗಳೂರಿನಲ್ಲಿ". ನನ್ನ ತಾಯಿ ಒಬ್ಬ ಶಿಕ್ಷಕಿ ,ನನಗೆ ಸರಿ ಯಾವುದು ತಪ್ಪು ಯಾವುದು ಎಂದು ಹೇಳಿಕೊಟ್ಟವರು ಹಾಗೂ ನನ್ನ ತಂದೆ ಎಚ್ಎಎಲ್ನಲ್ಲಿ ಉದ್ಯೋಗವನ್ನು ನಿರ್ವಹಿಸುತ್ತಿದ್ದಾರೆ ಇವರೇ ನನ್ನ ಮಾರ್ಗದರ್ಶಿ . ನನಗೆ ಒಬ್ಬ ಸಹೋದರಿ ಇದ್ದಾಳೆ ಅವಳು ಸಾಫ್ಟ್ವೇರ್ ಎಂಜಿನಿಯರಿಂಗ್ ಆಗಿ ಎಲ್ಎನ್ಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ .ನನ್ನ ಹದಿನಾರನೆಯ ಹುಟ್ಟು ಹಬ್ಬಕ್ಕೆ ನನ್ನ ತಂದೆ ತಾಯಿ ನನಗೆ ಒಂದು ವಿಶೇಷವಾದ ಹುಡುಗರೆಯನ್ನು ಕೊಟ್ಟರೂ ಅದು ನನ್ನ ಪ್ರೀತಿಯ ನಾಯಿ ಟಾಮಿ ಅವನು ಇಲ್ಲದೆ ನಮ್ಮ ಕುಟುಂಬ ಒಂದು ಸಂಪೂರ್ಣ ಕುಟುಂಬ ಎಂದು ಹೇಳಲು ಸಾಧ್ಯವಿಲ್ಲ ಅವನೆಂದರೆ ನಮ್ಮ ಮನೆಯಲ್ಲಿ ಎಲ್ಲರಿಗೂ ಅಚ್ಚುಮೆಚ್ಚು .ಪ್ರಾಥಮಿಕ ಶಿಕ್ಷಣವನ್ನು ಸೇಕ್ರೆಡ್ ಹಾರ್ಟ್ಸ್ ಶಾಲೆಯಲ್ಲಿ ಮಾಡಿದೆ , ಪಿಯುಸಿ ಕ್ರೈಸ್ಟ್ ಕಾಲೇಜಿನಲ್ಲಿ ಮಾಡಿದೆ. ನನಗೆ ನೃತ್ಯ ಮಾಡುವುದು ಹಾಗೂ ವಿವಿಧ ನೃತ್ಯಗಳನ್ನು ಕಲಿತುಕೊಳ್ಳುವುದು ಎಂದರೆ ಬಹಳ ಆಸಕ್ತಿ ಹಾಡುವುದು, ಚಿತ್ರ ಬಿಡಿಸುವುದು ಹಾಗೂ ಗಿಡಗಳನ್ನು ಬೆಳೆಸಿ ಅವುಗಳನ್ನು ಪೋಷಿಸುವುದು ಎಂದರೆ ನನಗೆ ತುಂಬಾ ಇಷ್ಟ .ನಾನು ಬಿಡುವಿದ್ದಾಗಲೆಲ್ಲಾ ಹಳೇ ಹಾಡುಗಳನ್ನು ಕೇಳಿ ಅವುಗಳನ್ನು ಹವ್ಯಾಸಿಸುತ್ತೇನೆ . ನಾನು ಇಲ್ಲಿಯವರೆಗೆ ಹಲವನ್ನು ನೃತ್ಯ ಪ್ರದರ್ಶನವನ್ನು ನೀಡಿದ್ದೇನೆ ಹಾಗೂ ಅದರಿಂದ ಜನರು ಮೆಚ್ಚುಗೆ ಸೂಚಿಸಿದಾಗ ಬರುವ ಆನಂದಕ್ಕೆ ಸರಿಸಾಟಿ ಇಲ್ಲ . ನೃತ್ಯ ಮಾಡುವುದೆಂದರೆ ನನಗೆ ಎಲ್ಲಿಲ್ಲದ ಖುಷಿ .ನನಗೆ ಬಾಟನಿ ವಿಷಯದಲ್ಲಿ ಪಿಎಚ್ಡಿ ಮಾಡ್ಬೇಕು ಅಂತ ಅಂದುಕೊಂಡಿದ್ದೇನೆ ಹಾಗೂ ನಾನು ಮಾಡಿಯೇ ತೀರುತ್ತೇನೆ. ಯಾವಾಗ್ಲೂ ಖುಷಿಯಾಗಿ ಎಲ್ಲರನ್ನೂ ಖುಷಿಯಾಗಿರಿ ಸಿ ನನ್ನ ತಂದೆ ತಾಯಿಗೆ ಒಬ್ಬ ಒಳ್ಳೆಯ ಮಗಳಾಗಬೇಕು ಎಂಬುದೇ ನನ್ನ ಗುರಿ .


                 ನನಗೆ ನಾಯಕಿನಾಗಬೇಕೆಂಬ ಆಸೆ ಆದ್ದರಿಂದಲೇ ನನ್ನ ಶಾಲೆಯಲ್ಲಿ  "ಕಲ್ಚರಲ್ ಕ್ಯಪ್ತನ್"  ಆಗಲೂ ಸ್ನೇಹಿತರು ಹಾಗೂ ಶಿಕ್ಷಕರು ನಿಲ್ಲಿಸಿ ಎಲೆಕ್ಷನ್ ಅಲ್ಲಿ ಗೆಲ್ಲಿಸಿದರು. ಕಾಲೇಜಿನಲ್ಲಿ ನನ್ನ ನ್ರುತ್ಯ ಬೆಳವಣಿಗೆಯನ್ನು ಕಂಡ ಶಿಕ್ಷಕರು ನನ್ನನ್ನು "ಕಲ್ಛರಲ್ ಸೆಕ್ರೆಟರಿ" ಆಗಿ ಪ್ರೋತ್ಸಾಹಿಸಿದರು.   ನಾನು ಹತ್ತನೇ ತರಗತಿಯಲ್ಲಿ ೯೩ ಪರ್ಸೆಂಟೇಜ್ ಮತ್ತು ಪಿಯು ಅಲ್ಲಿ ೭೭ ಪರ್ಸೆಂಟೇಜ್ ಗಳಿಸಿ ಪಾಸಾಗಿದೆ. ಈಗ ನನ್ನ ಶಿಕ್ಷಣವನ್ನು "ಕ್ರೈಸ್ಟ್ ಯೂನಿವರ್ಸಿಟಿ" ಕಾಲೇಜಿನಲ್ಲಿ "ಬಿಎಸ್ಸಿ ಸಿಬ್ಜ಼್"ಏನು ಮಾಡುತ್ತಿದ್ದೇನೆ. ನನಗೆ ಒಟ್ಟು 5 ಭಾಷೆಗಳು ಬರುತ್ತದೆ ಕನ್ನಡ,  ತೆಲುಗು, ತಮಿಳು,  ಹಿಂದಿ ಮತ್ತು ಇಂಗ್ಲೀಷ್. ಇದನ್ನೆಲ್ಲ ಸಾಧಿಸಲು ಕಾರಣ ನನ್ನ ತಂದೆ ತಾಯಿ.  ನಾನು ನಮ್ಮ ದೇಶದ ಮೂಲೆ ಮೂಲೆಯಲ್ಲಿ ಕೂಡ ಓಡಾಡಿದ್ದೇನೆ "ಕರ್ನಾಟಕ,  ತಮಿಳುನಾಡು,  ಕೇರಳ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಡೆಲ್ಲಿ,  ರಾಜಸ್ಥಾನ್,  ಛತ್ತಿಸ್ಗರ್" ಆದ್ದರಿಂದಲೇ ನಮ್ಮ ದೇಶದ ಪ್ರತಿಯೊಂದು ಹವ್ಯಾಸಗಳು ನನಗೆ ಗೊತ್ತು. 
                 
               ನನಗೆ ಮುಂದೆ "ಐಎಎಸ್" ಮಾಡಬೇಕೆಂಬ ಆಸೆ ಆದ್ದರಿಂದಲೇ ನಾನು ಅದಕ್ಕಾಗಿ ಈಗಿನಿಂದಲೇ ಓದಲು ಪ್ರಾರಂಭಿಸಿದ್ದೇನೆ ಇದನ್ನು ಕಂಡ ನಮ್ಮ ಪೋಷಕರು ಕೂಡ ಓದಲು ಪ್ರೋತ್ಸಾಹಿಸುತ್ತಿದ್ದಾರೆ. ನನಗೆ ಸುಮ್ಮನೆ ಇರಲು ಇಷ್ಟವಿಲ್ಲ ಆದ್ದರಿಂದಲೇ ನನ್ನನ್ನು ಯಾವುದಾದರೂ ಒಂದು ವಿಭಾಗದಲ್ಲಿ ನನ್ನ ಸಾಧನೆಗಳು ಅಥವಾ ನನ್ನ ನೂರುಪಟ್ಟು ನನ್ನನ್ನು ನಾನು ಒಡಗಿ ಕೆಲಸವನ್ನು ಮಾಡಲು ಇಷ್ಟಪಡುತ್ತೇನೆ. ನನ್ನ ಹವ್ಯಾಸಗಳು "ಗಾಡಿ ಓಡಿಸುವುದು, ಆಟವಾಡುವುದು, ಬುಕ್ ಓದುವುದು,  ಟಿವಿ ನೋಡುವುದು, ಮತ್ತು ಹಾಡುಗಳನ್ನು ಕೇಳುವುದು ".ನಾನು  ನನ್ನನ್ನು ಈಗ ನಾಟಕರಂಗ ಕಡೆ ತೊಡಗಿಸಲು ಪ್ರಯತ್ನಿಸುತ್ತಿದ್ದೇನೆ. ಇದು ನನ್ನ ಬಗ್ಗೆ ಕಿರು-ಪರಿಚಯ.

ಹಂಪೆ[ಬದಲಾಯಿಸಿ]

ಹಂಪೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಬಳಿ ಇರುವ ಊರು. ೧೩೩೬ರಿಂದ ೧೫೬೫ರವರೆಗೆ ಇದು ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿತ್ತು. ಹಂಪೆಯ ಮೊದಲನೆ ಹೆಸರು 'ಪಂಪಾ' ಎಂದಿತ್ತು. ಅಂದರೆ ತುಂಗಭದ್ರ ನದಿ ಎಂದರ್ಥ. ವರ್ಷಗಳು ಕಳೆದಂತೆ ಇದು 'ವಿಜಯನಗರ' ಮತ್ತು 'ವಿರುಪಾಕ್ಷಪುರ' ಎಂದು ಕರೆಯಲ್ಪಟ್ಟಿತು. ಹಂಪೆಯನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ. ವಿಜಯನಗರ ಸಾಮ್ರಾಜ್ಯದ ಒಡೆಯನಾದ ಕೃಷ್ಣದೇವರಾಯನ ಕಾಲದಲ್ಲಿ ಹಂಪೆ ಬಜಾರ್ ಎಂದೆನ್ನಿಸಿ ಕೊಂಡ ಬೀದಿಯಲ್ಲಿ ವಜ್ರಾಭರಣಗಳನ್ನು ತೂಕದ ಮಾದರಿಯಲ್ಲಿ ಮಾರಲ್ಪಡುತ್ತಿದ್ದರಂತೆ. ಕೃಷ್ಣದೇವರಾಯನ ರಾಜ್ಯಭಾರ ಮುಗಿದ ನಂತರ ವಿಜಯನಗರ ಸಾಮ್ರಾಜ್ಯ ತನ್ನ ಪ್ರಾಬಲ್ಯವನ್ನು ನಿಧಾನವಾಗಿ ಕಳೆದುಕೊಳ್ಳುತ್ತಾ ಬಂತು. ಕೊನೆಗೆ ತಾಳೀಕೋಟೆಯ ಯುದ್ಧದಲ್ಲಿ ಮುಸ್ಲಿಂ ಸಾಮ್ರಾಜ್ಯದಿಂದ ಬಂದ ಆಕ್ರಮಣವನ್ನು ತಡೆಯದೆ ಅಂತ್ಯಗೊಂಡಿತು. ಹಂಪೆಯಲ್ಲಿದ್ದ ಅನೇಕ ಸ್ಮಾರಕಗಳು ನಾಶವಾದವು. ಇಂದು ವಿರೂಪಾಕ್ಷ ದೇವಾಲಯ, ಹಜಾರ ರಾಮ ದೇವಸ್ಥಾನ, ಸಪ್ತಸ್ವರ ಸಂಗೀತ ಹೊರಹೊಮ್ಮಿಸುವ ಕಲ್ಲಿನ ಕಂಭಗಳು, ವಿಶ್ವವಿಖ್ಯಾತ ಕಲ್ಲಿನ ರಥ,ಮಹಾನವಮಿ ದಿಬ್ಬ, ಸಾಸಿವೆ ಕಾಳು ಗಣಪತಿ, ಉಗ್ರ ನರಸಿಂಹ, ಕಮಲ ಮಹಲ್ , ಬಡವಿ ಲಿಂಗ, ಅನೆ ಲಾಯ ಹೀಗೆ ಹಲವಾರು ಪ್ರೇಕ್ಷಣಿಯ ಸ್ಥಳಗಳನ್ನು ಹಂಪಿಯಲ್ಲಿ ನೋಡಬಹುದಾಗಿದೆ.

ಪರಿವಿಡಿ[ಬದಲಾಯಿಸಿ]

ಭೂವಿವರಣೆ[ಬದಲಾಯಿಸಿ][ಬದಲಾಯಿಸಿ]

ಹಂಪೆಯು ತುಂಗಭದ್ರಾ ನದಿಯ ತೀರದಲ್ಲಿದೆ. ಇದು ಬೆಂಗಳೂರಿನಿಂದ ೩೪೩ ಕಿ.ಮೀ., ಬಿಜಾಪುರದಿಂದ ೨೫೪ ಕಿ.ಮೀ., ಮತ್ತು ಬಳ್ಳಾರಿಯಿಂದ ೭೪ ಕಿ.ಮೀ ದೂರದಲ್ಲಿದೆ. ೧೩ ಕಿ.ಮೀ. ದೂರದಲ್ಲಿರುವ ಹೊಸಪೇಟೆ ಇಲ್ಲಿಗೆ ಅತಿ ಹತ್ತಿರದ ತಾಲ್ಲೂಕು ಕೇಂದ್ರ. ವ್ಯವಸಾಯ, ವಿರೂಪಾಕ್ಷ ಹಾಗೂ ಕೆಲವು ಇತರ ದೇವಸ್ಥಾನಗಳ ನಿರ್ವಹಣೆ ಮತ್ತು ಪ್ರವಾಸೋದ್ಯಮ, ಇವುಗಳು ಇಲ್ಲಿನ ಮುಖ್ಯ ಕೈಗಾರಿಕೆಗಳು. ಕರ್ನಾಟಕ ಸರ್ಕಾರವು ಆಯೋಜಿಸುವ ವಿಜಯನಗರ ವಾರ್ಷಿಕೋತ್ಸವವು(ಹಂಪಿ ಉತ್ಸವ) ನವೆಂಬರ್ ತಿಂಗಳಲ್ಲಿ ನಡೆಯುತ್ತದೆ.

ಹಂಪೆ ಹಾಗು ಸುತ್ತಮುತ್ತಲಿರುವ ಕೆಲವು ಮುಖ್ಯ ಸ್ಮಾರಕಗಳು[ಬದಲಾಯಿಸಿ][ಬದಲಾಯಿಸಿ]

ಮೊದಲಿಗೆ ಹಂಪಿಗೆ ಬಂದಾಗ ಇಲ್ಲಿನ ಅನೇಕ ಸ್ಮಾರಕಗಳನ್ನು ನೋಡಿ ಗಲಿಬಿಲಿಯುಂಟಾಗುವುದು ಸಹಜ. ಆದ್ದರಿಂದ ಇಲ್ಲಿನ ಸ್ಮಾರಕಗಳನ್ನು ಮತ್ತು ಇಲ್ಲಿರುವ ದೇವಸ್ಥಾನಗಳನ್ನು ನೋಡಲು ಸುಲಭವಾಗುವಂತೆ ಹಲವು ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಅವೆಂದರೆ-

  1. ಕೇಂದ್ರವಾದ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ.
  2. ನಡೆದು ನೋಡಬಹುದಾದ ದಾರಿ.
  3. ವಾಹನಗಳಲ್ಲಿ ಸಂಚರಿಸಿ ನೋಡಬಹುದಾದ ದಾರಿ.
  4. ಸೂರ್ಯಾಸ್ತದ ಸ್ಥಳಗಳು.
  5. ಅಚ್ಯುತರಾಯ ದೇಗುಲ
  6. ಆನೆಗೊಂದಿ
  7. ಅಂಜನಾದ್ರಿ ಪರ್ವತ
  8. ವಿರೂಪಾಕ್ಷೇಶ್ವರ ದೇವಾಲಯ
  9. ತುಂಗಭದ್ರ ನದಿ
  10. ಪುರಂದರ ಮಂಟಪ
  11. ವಿಜಯವಿಠ್ಠಲ ದೇಗುಲ
  12. ಕಲ್ಲಿನ ತೇರು
  13. ಉಗ್ರ ನರಸಿಂಹ
  14. ಕಡಲೆಕಾಳು ಗಣಪತಿ
  15. ಸಾಸಿವೆಕಾಳು ಗಣಪತಿ
  16. ರಾಣಿ ಸ್ನಾನಗೃಹ
  17. ಹಂಪೆ ಬಜಾರ್
  18. ಹೇಮಕೂಟ

ಬಡವಿ ಲಿಂಗ[ಬದಲಾಯಿಸಿ][ಬದಲಾಯಿಸಿ]

೯ ಅಡಿಯ ದೇವಸ್ಥಾನವಾಗಿದ್ದು, ಲಕ್ಷ್ಮಿನರಸಿಂಹ ದೇವಸ್ಥಾನದ ಸಮೀಪವೆ ಕಾಣಸಿಗುತ್ತದೆ. ಇದರ ವಿಶಿಷ್ಟತೆಯೆಂದರೆ, ಇದು ಒಂದು ಪ್ರಾಚೀನ ಕಾಲುವೆಯ ಮುಖಾಂತರ ಹರಿದು ಬರುವ ನೀರಿನಿಂದ ಸದಾಕಾಲ ಆವೃತವಾಗಿರುತ್ತದೆ. ಈ ಲಿಂಗದಲ್ಲಿ ಮೂರು ಕಣ್ಣುಗಳನ್ನು ಕೆತ್ತಲಾಗಿದ್ದು, ಭಗವಾನ ಶಿವನ ಮೂರು ನೇತ್ರಗಳನ್ನು ಪ್ರತಿನಿಧಿಸುತ್ತದೆ. ಇದು ಕೂಡ ಭೇಟಿ ಕೊಡಬಹುದಾದಂತಹ ಸ್ಥಳವಾಗಿದೆ. ಸ್ಥಳೀಯರ ನಂಬಿಕೆ ಪ್ರಕಾರ, ಹಂಪಿ ಎಂಬ ಬಡ ಬುಡಕಟ್ಟು ಜನಾಂಗದವನೊಬ್ಬ ತನ್ನ ಆಸೆಗಳನ್ನು ಈಡೇರಿಸಿದರೆ ಒಂದು ಶಿವಲಿಂಗವನ್ನು ಕಟ್ಟುತ್ತೆನೆಂದು ಮಾತು ಕೊಡುತ್ತಾನೆ. ಇದನ್ನರಿತ ಪರಮೇಶ್ವರನು ಅವನ ಆಸೆಗಳನ್ನು ಈಡೇರಿಸಲು ನಿರ್ಧರಿಸಿದ. ತದನಂತರ ಆ ಭಕ್ತನು ಈ ಬಡವಲಿಂಗವನ್ನು ನಿರ್ಮಿಸಿ ಈಶ್ವರನಿಗೆ ಅರ್ಪಿಸಿದ. ಇನ್ನೊಂದು ದಂತಕಥೆಯ ಪ್ರಕಾರ,ಈ ಲಿಂಗವು ಒಬ್ಬ ರೈತ ಮಹಿಳೆಯಿಂದ ನಿರ್ಮಿತವಾಗಿದ್ದು, ಅದಕ್ಕವಳು ಬಡವಿಲಿಂಗ ಎಂದು ನಾಮಕರಣ ಮಾಡಿದ್ದಳು ಎಂದು.

ಸಾಸುವೆಕಾಳು ಗಣೇಶ[ಬದಲಾಯಿಸಿ][ಬದಲಾಯಿಸಿ]

ಹೇಮಕೂಟ ಬೆಟ್ಟದ ಕೆಳಗಿರುವ ಸಾಸಿವೆಕಾಳು ಗಣೇಶ ಗುಡಿಗೆ ಭೇಟಿ ನೀಡಲೇ ಬೇಕು. ಸಾಸಿವೆ ಕಾಳುಗಳನ್ನು ನೆನಪಿಗೆ ತರುವಂತಹ, ಇಲ್ಲಿರುವ ಜನಪ್ರಿಯ ಗಣಪತಿ ವಿಗ್ರಹವು ೮ ಅಡಿ ಉದ್ದವಾಗಿದೆ. ಆದ್ದರಿಂದ ಭಕ್ತ ಸಮೂಹದಲ್ಲಿ, ಇದು ಸಾಸಿವೆಕಾಳು ಗಣೇಶನೆಂಬ ಹೆಸರಿನಿಂದಲೂ ಚಿರಪರಿಚಿತವಾಗಿದೆ. ಪುರಾಣದ ಪ್ರಕಾರ, ಒಮ್ಮೆ ಭಗವಂತ ಗಣೇಶನು, ಮಿತಿ ಮೀರಿ ತಿಂದಿದ್ದರ ಪರಿಣಾಮ ಹೊಟ್ಟೆ ಒಡೆಯುವಂತಾಗಿ, ಅದನ್ನು ತಡೆಯಲು ಸರ್ಪವನ್ನು ಹೊಟ್ಟೆಗೆ ಅಡ್ಡಲಾಗಿ ಸುತ್ತಿಕೊಂಡನೆಂಬುದು ಪ್ರತೀತಿ. ವಿಗ್ರಹವು ಒಂದೆ ಕಲ್ಲಿನಲ್ಲಿ ಕೆತ್ತಲ್ಪಟ್ಟಿದ್ದು, ಬಲಗೈಯಲ್ಲಿ ಮುರಿದ ಆನೆಯ ದಂತ ಮತ್ತು ಅಂಕುಶವನ್ನು ಕಾಣಬಹುದು.ಮೊದಲನೆ ಎಡಗೈ ವಂಕಿಯಾಕಾರದ ಪಾಶವನ್ನು ಹೊಂದಿದ್ದು, ಎರಡನೆ ಎಡಗೈಯ ಮತ್ತು ಸೊಂಡಿಲು ಕಲ್ಲಿನಿಂದ ಬೇರ್ಪಡಿಸಿ ಕೆತ್ತಲಾಗಿದೆ. ಸಾಸಿವೆ ಕಾಳು ಗಣೇಶ ಗುಡಿಯನ್ನು ತಲುಪಿದಾಗ, ವಿಗ್ರಹವು ವಿಶಾಲವಾದ ಆವರಣವನ್ನು ಹೊಂದಿರುವದು ಕಾಣಬಹುದು. ಅಲ್ಲಿ ಕೆತ್ತಲಾಗಿರುವ ಮಾಹಿತಿಯ ಪ್ರಕಾರ, ಇದನ್ನು ಚಂದ್ರಗಿರಿಯ ವ್ಯಾಪರಿಯೊಬ್ಬನು ಕ್ರಿ.ಶ.೧೫೦೬ರಲ್ಲಿ ವಿಜಯನಗರ ಸಾಮ್ರಾಜ್ಯದ ದೊರೆಯಾದ ಎರಡನೇ ನರಸಿಂಹನಿಗೋಸ್ಕರ ಕಟ್ಟಿದನೆಂಬದು ತಿಳಿದು ಬರುತ್ತದೆ.

ಆನೆಗೊಂದಿ (ಆನೆಗುಂಡಿ)[ಬದಲಾಯಿಸಿ][ಬದಲಾಯಿಸಿ]

ಆನೆಗುಂಡಿ ಹಳ್ಳಿಯು ಹಂಪಿಯಿಂದ ೧೦ ಕಿ.ಮೀ ದೂರದಲ್ಲಿದ್ದು, ತುಂಗಭದ್ರಾ ನದಿಯ ಉತ್ತರ ಭಾಗದ ದಡದಲ್ಲಿದೆ. ಇದು ಅಂದಿನ ವಿಜಯನಗರ ಸಾಮ್ರಾಜ್ಯದ ಪ್ರಾದೇಶಿಕ ರಾಜಧಾನಿಯಾಗಿತ್ತು. ಇದರ ಅರ್ಥ ಕನ್ನಡದಲ್ಲಿ ಆನೆಗೆ ತೋಡಿದ ಗುಂಡಿ ಎಂದಾಗುತ್ತದೆ. ಈ ಪ್ರದೇಶವು ಹಂಪಿಗಿಂತಲೂ ಪ್ರಾಚೀನವಾಗಿದ್ದು, ರಾಮಾಯಣದ ಪ್ರಕಾರ ಇದನ್ನು ಸುಗ್ರೀವನ (ಮಂಗಗಳ ರಾಜ) ರಾಜ್ಯ ಕಿಷ್ಕಿಂಧೆ ಎಂದು ನಂಬಲಾಗಿದೆ. ಸಮಯಾವಕಾಶವಿದ್ದರೆ ಪ್ರವಾಸಿಗರು ಖಂಡಿತವಾಗಿಯು ಈ ಸ್ಥಳಕ್ಕೆ ಭೇಟಿ ನೀಡಿ ಅಂಜನಾದ್ರಿ ಬೆಟ್ಟವನ್ನು ನೋಡಬಹುದು. ಈ ಬೆಟ್ಟವನ್ನು ದೇವರಾದ ಹನುಮಂತನ ಹುಟ್ಟು ಸ್ಥಳವೆಂದು ನಂಬಲಾಗಿದೆ. ಹಂಪಿಗಿಂತಲೂ ನೆಮ್ಮದಿಯಾದಂಥ ವಾತಾವರಣವನ್ನು ಆನೆಗುಂಡಿಯು ಹೊಂದಿದೆ. ಪ್ರಾಚ್ಯವಸ್ತು ಸಂರಕ್ಷಣಾ ಯೋಜನೆ ಮತ್ತು ಕಿಷ್ಕೀಂದ ಟ್ರಸ್ಟ್ ಇವುಗಳು, ಇಲ್ಲಿಗೆ ಬರುವ ಪ್ರವಾಸಿಗರಿಗೆ ಅತ್ಯುತ್ತಮವಾದ ವ್ಯವಸ್ಥೆಗಳನ್ನು ಕಲ್ಪಿಸಿದ್ದು, ಆದರಾತಿಥ್ಯವು ಮನಸೂರೆಗೊಳಿಸುತ್ತದೆ. ಹೊಸ ಸೇತುವೆ(ಬ್ರಿಡ್ಜ್) ಅನ್ನು ತುಂಗಭದ್ರಾ ನದಿಗೆ ಕಟ್ಟಲಾಗುತಿತ್ತು , ಆದರೆ ಅದು ಮುರಿದು ಬಿದ್ದಿದ್ದು ಇನ್ನೊಂದು ಕಡೆ ಸೇತುವೆ ಕಟ್ಟುವ ಕೆಲಸ ಪ್ರಗತಿಯಲ್ಲಿದೆ. ಮುಂಬರುವ ದಿನಗಳಲ್ಲಿ, ಪ್ರವಾಸಿಗರು ಆನೆಗುಂಡಿಯನ್ನು ಸುಲಭವಾಗಿ ತಲುಪಬಹುದಾಗಿದೆ. ಸದ್ಯ, ಈ ಪ್ರದೇಶವನ್ನು ಸುತ್ತು ಮಾರ್ಗದಿಂದ ತಲುಪಬಹುದಾಗಿದೆ.

ಆನೆಗುಂಡಿಯ ಕೆಲವು ಪ್ರಮುಖ ಆಕರ್ಷಣೆಗಳು[ಬದಲಾಯಿಸಿ][ಬದಲಾಯಿಸಿ]

  1. ಗಗನ ಪ್ಯಾಲೇಸ್,
  2. ಪಂಪ ಸರೋವರ ಲಕ್ಷ್ಮಿದೇವಾಲಯ,
  3. ಶ್ರೀಕೄಷ್ಣದೇವರಾಯ ಸಮಾಧಿ,
  4. ಆನೆಗುಂಡಿ ಕೋಟೆಯ ಹೆಬ್ಬಾಗಿಲು ಹಾಗು ಏಳು ತಲೆಯ ಸರ್ಪ ಇವು ಆನೆಗುಂಡಿಯ ಕೆಲವು ಪ್ರಮುಖ ಆಕರ್ಷಣೆಗಳು. ಇಷ್ಟೇ ಅಲ್ಲದೆ ಪ್ರವಾಸಿಗರು-
  5. ಶ್ರೀ ಗವಿ ರಂಗನಾಥ ಸ್ವಾಮಿ ದೇವಸ್ಥಾನ,
  6. ಗಣಪತಿ ದೇವಸ್ಥಾನ,
  7. ಚಿಂತಾಮಣಿ ಶಿವ ದೇವಸ್ಥಾನ,
  8. ಹುಚ್ಚೈಪ್ಪನ ಮಠ ಮತ್ತು ಜೈನ್ ದೇವಾಲಯಗಳಿಗೂ ಕೂಡ ಭೇಟಿ ನೀಡಬಹುದು.

ಕಮಲಾಪುರದಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯ[ಬದಲಾಯಿಸಿ][ಬದಲಾಯಿಸಿ]

ಇಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯವು, ಹಂಪಿಯ ಎರಡು ಮಾದರಿಗಳನ್ನು ಒಳಗೊಂಡಿದ್ದು, ಈ ಪ್ರದೇಶದ ಸ್ಥಳ ವಿವರಣೆಯನ್ನು ವಿವರವಾಗಿ ತಿಳಿಸುತ್ತದೆ. ಆದ್ದರಿಂದ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡಿ ತಮಗೆ ಬೇಕಾದ ಮಾಹಿತಿಯನ್ನು ಸುಲಭವಾಗಿ ತಿಳಿಯುತ್ತಾರೆ. ಸಣ್ಣ ಮಾದರಿಯು ಗ್ಯಾಲರಿಯ ಒಳಭಾಗದಲ್ಲಿದ್ದು ರಾಯಲ್ ಸೆಂಟರನ ವಿಸ್ತಾರವಾದ ವಿವರಗಳನ್ನು ನೀಡುತ್ತದೆ.ಈ ಸಂಗ್ರಹಾಲಯವು ಪ್ರಧಾನವಾಗಿ ನಾಲ್ಕು ಭಾಗಗಳನ್ನು ಹೊಂದಿದೆ. ಮೇಲೆ ವಿವರಿಸಿದ ಹಂಪಿಯ ಮಾದರಿಗಳು ಒಂದನೆ ಭಾಗದಲ್ಲಿದ್ದು, ಎರಡನೆ ಭಾಗವು ಹಂಪಿಯ ಅವಶೇಷಗಳಿಗೆ ಸಂಬಂಧಿಸಿದ ಮೂರ್ತಿಗಳು ಹಾಗು ಶಿಲ್ಪಾಕೄತಿಗಳನ್ನು ಹೊಂದಿದೆ. ಮೂರನೆ ಭಾಗವು ಆಗಿನ ಕಾಲದಲ್ಲಿ ಉಪಯೋಗಿಸಲ್ಪಡುತ್ತಿದ್ದ ಯುದ್ಧ ಸಲಕರಣೆಗಳು,ನಗನಾಣ್ಯಗಳು ಮತ್ತು ಇತರೆ ಸಾಮಗ್ರಿಗಳನ್ನು ಹೊಂದಿದೆ. ನಾಲ್ಕನೆ ಭಾಗವು ಇತಿಹಾಸದ ಪೂರ್ವ ಹಾಗು ನಂತರದ ವಸ್ತುಗಳನ್ನು ಹೊಂದಿದೆ. ಹಿರೊ ಕಲ್ಲುಗಳು, ಸತಿ ಕಲ್ಲುಗಳು,ಚಿಕ್ಕದಾದ ರಾಯಲ್ ಸೆಂಟರ್ ಪ್ರತಿರೂಪ, ಪಿಂಗಾಣಿ ವಸ್ತುಗಳು ಮತ್ತು ಗೋಡೆಯ ಅಲಂಕಾರಿಕ ವಸ್ತುಗಳನ್ನು ಹೊಂದಿದೆ. ಈ ಸಂಗ್ರಹಾಲಯವು ಪ್ರತಿ ಶುಕ್ರವಾರ ಹಾಗು ರಾಷ್ಟ್ರೀಯ ರಜಾ ದಿನಗಳಂದು ಮುಚ್ಚಿರುತ್ತದೆ. ಉಳಿದ ದಿನಗಳಲ್ಲಿ ಇದರ ಸಮಯ ಬೆಳಿಗ್ಗೆ ೧೦ ರಿಂದ ಸಂಜೆ ೫ ರ ವರೆಗೆ. ನೀವು ಹಂಪಿಗೆ ಹೋಗುತ್ತಿರಾದರೆ, ಖಂಡಿತವಾಗಿಯೂ ಇದಕ್ಕೆ ಭೇಟಿ ನೀಡಿ.

ಶ್ರೀ ಲಕ್ಷ್ಮಿನರಸಿಂಹ ದೇವಸ್ಥಾನ[ಬದಲಾಯಿಸಿ][ಬದಲಾಯಿಸಿ]

ಶ್ರೀ ಲಕ್ಷ್ಮಿನರಸಿಂಹ ಗುಡಿಯಲ್ಲಿ, ೬.೭ಮೀ. ಎತ್ತರವಿರುವ ಒಂದೆ ಕಲ್ಲಿನಲ್ಲಿ ಕೆತ್ತಲಾದ, ನರಸಿಂಹನ(ಭಗವಾನ ವಿಷ್ಣುವಿನ ಅವತಾರ) ವಿಗ್ರಹವು ಆದಿಶೇಷನ(ಎಳು ಹೆಡೆಯ ಸರ್ಪ) ಮೇಲೆ ವಿಶ್ರಮಿಸುವ ಭಂಗಿಯಲ್ಲಿದ್ದು, ಇಲ್ಲಿಗೆ ಬರುವ ಪ್ರವಾಸಿಗರಲ್ಲಿ ಹೆಸರುವಾಸಿಯಾಗಿದೆ. ಇಲ್ಲಿ ಕೆತ್ತಲಾಗಿರುವ ಮಾಹಿತಿಯ ಪ್ರಕಾರ, ಇದನ್ನು, ಕ್ರಿ.ಶ.೧೫೨೮ರಲ್ಲಿ ದೊರೆಯಾದ ಕೄಷ್ಣದೇವರಾಯನ ಆಳ್ವಿಕೆಯಲ್ಲಿ ಪೂರ್ಣಗೊಳಿಸಲಾಯಿತೆಂದು ತಿಳಿದು ಬರುತ್ತದೆ.ಮೂಲ ವಿಗ್ರಹವು ಲಕ್ಶ್ಮಿ ದೇವತೆಯು ವಿಷ್ಣುವಿನ ತೊಡೆಯಲ್ಲಿ ಕುಳಿತಿರುವ ಭಂಗಿಯಲ್ಲಿದೆ.ಆದರೆ, ಕ್ರಿ.ಶ.೧೫೬೫ರಲ್ಲಿ, ಲಕ್ಷ್ಮಿ ದೇವತೆಯ ವಿಗ್ರಹವು ನಾಶ ಹೊಂದಿದ್ದು, ಪ್ರಸ್ತುತ ಅದನ್ನು ಕಮಲಾಪುರ ಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಆದರೂ ಉಬ್ಬಿರುವ ಕಣ್ಣುಗಳನ್ನು ಚಿತ್ರಿಸಲಾಗಿರುವ ನರಸಿಂಹನ ವಿಗ್ರಹವು ಇಂದಿಗೂ ಕೂಡ ಬಹುಪಾಲು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ನರಸಿಂಹ ಹಾಗು ಲಕ್ಷ್ಮಿ ದೇವತೆಯ ವಿಗ್ರಹಗಳನ್ನು ಒಂದೆ ಕಲ್ಲಿನಿಂದ ಕೆತ್ತಲಾಗಿದೆ. ಸಾಮಾನ್ಯವಾಗಿ ದಕ್ಷಿಣ ಭಾರತದ ವಾಸ್ತುಶಿಲ್ಪಿಗಳು ಉಪಯೋಗಿಸುವ ಸಾಮಗ್ರಿಗಳ ವಿರುದ್ಧವಾಗಿ,ಸಂಗಮರು ಗ್ರಾನೈಟ್ ಕಲ್ಲುಗಳಿಂದ ಲಕ್ಷ್ಮಿನರಸಿಂಹ ದೇವಾಲಯವನ್ನು ಕಟ್ಟಿದ್ದಾರೆ. ಆದರೆ ಕೆಲವು ಸೂಕ್ಶ್ಮವಾದ ಕೆಲಸಗಳನ್ನು ಸ್ಚಿಸ್ಟ(ಒಂದು ಮೃದುವಾದ ಕಲ್ಲು)ನಿಂದ ಮಾಡಲ್ಪಟ್ಟಿದ್ದು ಗ್ರಾನೈಟ್ ಬಳಕೆ ಮಾಡಲಾಗಿಲ್ಲ. ಜಟಿಲವಾದ ವಿನ್ಯಾಸಗಳ ಅಭಾವವನ್ನು ಸರಿದೂಗಿಸಲು, ವಾಸ್ತುಶಿಲ್ಪಗಾರರು ವಿಶಾಲವಾದ ಕಟ್ಟಡವನ್ನು ನಿರ್ಮಿಸಲು ನಿಶ್ಚಯಿಸಿದ್ದಾರೆ.

ವಿರೂಪಾಕ್ಷ ದೇವಾಲಯ[ಬದಲಾಯಿಸಿ][ಬದಲಾಯಿಸಿ]

ವಿರೂಪಾಕ್ಷ ದೇವಾಲಯವು ಶಿವ ಹಾಗು ಅವನ ಸಂಗಾತಿ ದೇವತೆಯಾದ ಪಂಪಾಳಿಗೆ ಸಮರ್ಪಿತವಾಗಿದ್ದು, ಹಂಪಿಗೆ ಬರುವ ಪ್ರವಾಸಿಗರು ಇದಕ್ಕೆ ಭೇಟಿ ನೀಡಬಹುದು. ೫೦ ಮೀ. ಎತ್ತರದ ಗೋಪುರವನ್ನು ಹೊಂದಿರುವ ಈ ದೇವಾಲಯವು ತುಂಗಭದ್ರ ನದಿಯ ದಕ್ಷಿಣ ದಡದಲ್ಲಿರುವ ಹೇಮಕೂಟ ಬೆಟ್ಟದ ಕೆಳಭಾಗದಲ್ಲಿದೆ. ದಕ್ಷಿಣ ಭಾರತದ ದ್ರಾವಿಡಿಯನ್ ಮಾದರಿಯ ವಾಸ್ತುಶಿಲ್ಪವನ್ನು ಹೊಂದಿರುವ ಈ ದೇವಾಲಯವು ಇಟ್ಟಿಗೆ ಹಾಗು ಮೊರ್ಟಾರ್ ಗಳಿಂದ ರಚಿಸಲ್ಪಟ್ಟಿದೆ. ಪಂಪಾಪತಿ ದೇವಾಲಯವೆಂದೂ, ಕರೆಯಲ್ಪಡುವ ಈ ದೇವಾಲಯವು ಮುಖ ಮಂಟಪ(ರಂಗ ಮಂಟಪ), ಮುರು ಭಾಗಗಳು ಮತ್ತು ಕಂಬಗಳುಳ್ಳ ವಿಶಾಲವಾದ ಕೊಠಡಿಯನ್ನು ಹೊಂದಿದೆ. ವಿರೂಪಾಕ್ಷ ದೇವಾಲಯವು 7ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು, ಕೆತ್ತನೆಯ ಕೆಲಸವು ಸುಮಾರು ೯ ಹಾಗು ೧೧ ನೇ ಶತಮಾನಗಳ ಮಧ್ಯದಲ್ಲಿ ಮಾಡಲ್ಪಟ್ಟಿವೆ ಎಂಬುದನ್ನು ಅಲ್ಲಿ ಭೇಟಿ ನೀಡಿದಾಗ ತಿಳಿಯಬಹುದು. ಪ್ರಾರಂಭದಲ್ಲಿ, ಈ ದೇವಾಲಯವು ಕೆಲವೆ ವಿಗ್ರಹಗಳನ್ನು ಹೊಂದಿದ್ದು ಕಾಲಾಕ್ರಮೇಣ ಬೃಹದಾಕಾರವನ್ನು ಪಡೆಯಿತು. ಕ್ರಿ.ಶ.೧೫೧೦ ರಲ್ಲಿ, ಕೃಷ್ಣದೇವರಾಯರಿಂದ, ರಂಗಮಂಟಪವು ನಿರ್ಮಿಸಲ್ಪಟ್ಟಿದ್ದು ವಿಜಯನಗರದ ಶೈಲಿಯ ವಾಸ್ತುಶಿಲ್ಪವನ್ನು ಸೂಚಿಸುತ್ತದೆ. ತದನಂತರ ಕಂಬಗಳು,ದೀಪಸ್ಥಂಬಗಳು,ಸ್ತೂಪಗಳನ್ನು ನಿರ್ಮಿಸಲಾಯಿತು. ಹಿಂದು ಸಂಸ್ಕೃತಿಯನ್ನು ಬಿಂಬಿಸುವಂತಹ ಪ್ರಾಣಿ ಪಕ್ಷಿಗಳ ಕೆತ್ತನೆಗಳು ವಿರೂಪಾಕ್ಷ ದೇವಾಲಯದ ಪ್ರಮುಖ ಆಕರ್ಷಣೆ.

ಜೆನಾನಾ ಎನ್ಕ್ಲೊಸರ್[ಬದಲಾಯಿಸಿ][ಬದಲಾಯಿಸಿ]

ಎತ್ತರನೆಯ ಕಲ್ಲಿನ ಗೋಡೆಗಳಿಂದ ಸುತ್ತುವರೆಯಾಗಿ ನಿರ್ಮಿಸಲಾದ ಜೆನಾನಾ ಎನ್ಕ್ಲೊಸರ್, ಹಂಪಿಯಲ್ಲಿ ಪ್ರವಾಸಿಸುವಾಗ ನೋಡಲೆ ಬೇಕಾದ ಒಂದು ಸ್ಥಳ. ಈ ಸ್ಥಳವು ಕೇವಲ ಮಹಿಳೆಯರ ಪ್ರವೇಶಕ್ಕೆ ಮಾತ್ರವಿದ್ದು, ಅವರ ಗೌಪ್ಯತೆಯನ್ನು ಕಾಪಾಡುವ ರೀತಿಯಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ನಾಲ್ಕು ಪ್ರಧಾನ ರಚನೆಗಳಿದ್ದು, ಅವುಗಳೇ ಮಹಾರಾಣಿ ಅರಮನೆ(ಕ್ವೀನ್ಸ್ ಪ್ಯಾಲೇಸ್), ಎರಡು ನಿರೀಕ್ಷಣಾ ಗೋಪುರಗಳು ಹಾಗು ಜನಪ್ರೀಯವಾದ ಲೊಟಸ್ ಮಹಲ್. ಈ ಕಟ್ಟಡಕ್ಕೆ ಅನೇಕ ಕಿಂಡಿಗಳಿದ್ದು, ರಾಣಿಯರ ಬೇಸಿಗೆ ಅರಮನೆಯಾಗಿತ್ತು. ಕ್ವೀನ್ಸ ಪ್ಯಾಲೇಸ್ ೪೬*೨೯ ಮೀ. ಅಳತೆ ಹೊಂದಿದ್ದು ಕಟ್ಟಿಗೆ ಹಾಗು ಇತರೆ ಸಾಮಗ್ರಿಗಳಿಂದ ನಿರ್ಮಿಸಲ್ಪಟ್ಟಿದೆ.ಇತಿಹಾಸಕಾರರ ಪ್ರಕಾರ, ಈ ಸ್ಥಳವು ಕೇವಲ ಮಹಿಳೆಯರಿಗಾಗಿ ಮಾತ್ರ ಮೀಸಲಾಗಿದ್ದುದರಿಂದ, ಇದರ ರಕ್ಷಣೆಯು ನಪುಂಸಕ ಸೈನಿಕರಿಂದ ಮಾಡಲ್ಪಡುತ್ತಿತ್ತು. ಉತ್ತರ ಹಾಗು ಆಗ್ನೇಯ ದಿಕ್ಕಿನಲ್ಲಿ ಕಟ್ಟಲಾದ ಎರಡು ಕಟ್ಟಡಗಳು ನಿರೀಕ್ಷಣಾ ಗೋಪುರಗಳಾಗಿ ನಿರ್ವಹಿಸಲ್ಪಡುತ್ತಿದ್ದವು. ಈ ಕಟ್ಟಡಗಳಿಂದ ಮಹಾರಾಣಿ ಹಾಗು ಆಕೆಯ ಕುಟುಂಬದ ಸದಸ್ಯರು ಹೊರಗೆ ನಡೆಯುತ್ತಿದ್ದ ಚಟುವಟಿಕೆಗಳನ್ನು ವೀಕ್ಷಿಸುತ್ತಿದ್ದರು. ಇಂಡೊ-ಇಸ್ಲಾಮಿಕ್ ಮಾದರಿಯ ವಾಸ್ತುಶಿಲ್ಪವುಳ್ಳ ಲೊಟಸ್ ಪ್ಯಾಲೇಸ್ ರಾಜ ಮಹಿಳೆಯರು ಸಂಧಿಸಿ ದಿನಕಳೆಯುವ ಸ್ಥಳವಾಗಿತ್ತು. ರಾಜಮನೆತನದ ಆನೆಗಳು ವಿರಮಿಸುತ್ತಿದ್ದ ಸ್ಥಳವಾದ ಎಲಿಫಂಟ್ ಸ್ಟೇಬಲ್ಸ್ ಇದರ ಹಿಂಬದಿಯಲ್ಲಿದ್ದು, ಪ್ರವಾಸಿಗರು ಭೇಟಿ ನೀಡಬಹುದು.