ಸದಸ್ಯ:Sushma573

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


                                                                ಪರಿಚಯ
bengaluru

ನನ್ನ ಹೆಸರು ಸುಶ್ಮಿತಾ.ವಿ ಹುಟ್ಟಿದ್ದು ಕೋಲಾರ ಜಿಲ್ಲೆಯ ಕೆಜಿಫ್ ನಲ್ಲಿ . ನನ್ನ ತಂದೆಯ ಹೆಸರು ವೆಂಕಟೇಶ್.ಮ್ , ನನ್ನ ತಾಯಿಯ ಹೆಸರು ಮಂಜುಳಾ.ಸಿ . ವಾಸಸ್ಥಳ ಬೆಂಗಳೂರು ನಗರ , ಬೊಮ್ಮನಹಳ್ಳಿ .

ದಿ ಪ್ರೆಸಿಡೆನ್ಸಿ ಇಂಗ್ಲಿಷ್ ಸ್ಕೂಲ್ ನಲ್ಲಿ ಹತ್ತನೇ ತರಗತಿಯವರೆಗೂ ಓದಿ ಮುಗಿಸಿ . ನಂತರ   ಸಂತ ಫ್ರಾನ್ಸಿಸ್ ಪೂರ್ವ ವಿಶ್ವವಿಧಾಲಯದಲಿ ಓದಿ , ಪ್ರಸ್ತುತ ಕ್ರೈಸ್ಟ್ ಯೂನಿವೆರ್ಸಿಟಿಯಲ್ಲಿ  ಬಿ . ಕಂ ಓದುತ್ತಿದ್ದೇನೆ .

ನನ್ನ ಹವ್ಯಾಸ ನೃತ್ಯ , ಅಡುಗೆಮಾಡುವುದು , ಹಾಡು ಕೇಳುವುದು , ಪುಸ್ತಕಗಳನ್ನು ಓದುವುದು , ಗೆಳತಿಯರ ಜೊತೆ ಆಟ ಆಡುವುದು . ನನಗೆ ಐತಿಹಾಸಿಕ ಸ್ಥಳಗಳಿಗೆ ಭೇಟಿ ಕೊಡುವುದು ನನಗೆ ಬಹಳ ಇಷ್ಟ .

ನನ್ನ ಗುರಿ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನನ್ನು ಮುಗಿಸಿ ಒಂದು ಒಳ್ಳೆ ಪದವಿಯಲ್ಲಿ ಕೆಲಸಕ್ಕೆ  ಸೇರಿ ನನ್ನ  ತಾಯಿ , ತಂದೆಯನ್ನು ನನ್ನ ಅಕ್ಕ ತಂಗಿಯರನ್ನು ನೋಡಿಕೊಳ್ಳಬೇಕೆಂಬುವುದು ನನ್ನ ಆಸೆ .
kolar
                                                              ಆದರ್ಶ ವ್ಯಕ್ತಿ ಮತ್ತು ನೆಚ್ಚಿನ ಸ್ಥಳ
 
abdul kalam
mysore palace
ನನಗೆ ಡಾಕ್ಟರ್ . ಎ. ಪಿ . ಜೆ  ಅಬ್ದುಲ್ ಕಲಾಂ ಮತ್ತು  ಸ್ವಾಮಿ ವಿವೇಕಾನಂದರು ಎಂದರೆ ಬಹಳ ಇಷ್ಟ ಮುಖ್ಯವಾಗಿ ಅವರಿಬ್ಬರೂ ಜೀವನದ ಬಗ್ಗೆ ಮತ್ತು ಬದುಕಿನಲ್ಲಿ ಗುರಿಯನ್ನು ಹೇಗೆ ಮುಟ್ಟಬೇಕೆಂದು ಸಮಾಜಕ್ಕೆ ತಿಳಿಸಿಕೊಟ್ಟಿದ್ದಾರೆ .  ನನಗೆ ಬಹಳ ಪುರಾತನ ಕಾಲದ ಸ್ಥಳಗಳಿಗೆ ಹೋಗುವುದು  ತುಂಬಾ ಇಷ್ಟ , ಅದರಲ್ಲೂ ನಮ್ಮ ಕರ್ನಾಟಕದ ಪ್ರಮುಖ ಸ್ತಳಗಲ್ಲಲ್ಲಿ ಒಂದಾದ ಮೈಸೂರ್ ಅರಮನೆ ಅಲ್ಲಿ ನಡೆಯುವ ಸಂಭ್ರಮಗಳನ್ನು ನೋಡುವುದಕ್ಕೆ ಎರೆಡು ಕಣ್ಣು ಸಾಲುವುದಿಲ್ಲ , ಮುಖ್ಯವಾಗಿ  ದೇಸಾರ ಹಬ್ಬ ಬಂದಾಗ ಆ ಹತ್ತು ದಿನಗಳು ಮೈಸೂರಿಗೆ ಒಂದು ನಿಜವಾದ ಕಲೆ ಬರುತ್ತದೆ , ಅಲ್ಲಿನ ಆ ಆನೆ ಅಂಬಾರಿಯನ್ನು ಹೊತ್ತಿಕೊಂಡು ಊರಿನ ಮೆರವಣಿಗೆಗಾಗಿ ಬರಬೇಕಾದರೆ ನಮ್ಮ ಮನಸು ನಮ್ಮಲ್ಲಿ ಇರುವುದಿಲ್ಲ , ನೋಡುವುದಕ್ಕೆ ಎರಡು ಕಣ್ಣುಗಳು  ಸಾಲುವುದಿಲ್ಲ ಹಾಗಾಗಿ ನನಗೆ ಮೈಸೂರೆಂದರೆ ಬಹಳ ಇಷ್ಟ .


                                                                  ಗುಣಗಳು


ನನ್ನಲ್ಲಿರುವ ಒಂದು ಕೆಟ್ಟ ಗುಣ ಅತಿಹೆಚ್ಚಾಗಿ ಸಿಟ್ಟು ಬರುವುದು , ಮತ್ತು ನನ್ನ ಸ್ವಭಾವವೇನೆಂದರೆ ಬಡವರಿಗೆ , ಬೇರೆಯವರಿಗೆ ಸಹಾಯ ಮಾಡುವುದು . ನನಗೆ ಒಬ್ಬರ ಮೇಲೆ ಮರ್ಯಾದಿ ಹುಟ್ಟುವುದು ಯಾವಾಗೆಂದರೆ ನನ್ನ ಸ್ನೇಹಿತರಾಗಲಿ ,ಯಾರೆಯಾಗಲಿ ಮೊದಲು ಮನುಷ್ಯನ ಗುಣಕ್ಕೆ ಮರ್ಯಾದಿ ಕೊಟ್ಟಾಗ ಮಾತ್ರ ,ಜಾತಿ ಭೇದಭಾವ ಇಲ್ಲದೆ ಎಲ್ಲರನ್ನು ಒಂದೇ ಸಮವಾಗಿ ಮಾತಾಡಿಸುವುದು , ಎಲ್ಲರು ಒಂದೇ ಎಂಬ ಸ್ವಭಾವ ಉಳ್ಳವರಿಗೆ ಮಾತ್ರ ನಾನು ಮರ್ಯಾದಿಕೊಡುತೇನೆ. ನನ್ನ ಪ್ರಕಾರ ಲೋಕದಲ್ಲಿ ಜಾತಿ , ಮತ, ಬೇದಭಾವಗಳಿಗಿಂತ ಮಾನವರ ಗುಣಕ್ಕೆ ಹೆಚ್ಚು ಮುಖ್ಯತ್ವ ಕೊಡಬೇಕೆಂದು ನನ್ನ ಅಭಿಪ್ರಾಯ . ನನ್ನ ನೆಚ್ಚಿನ ವಿಷಯವೇನೆಂದರೆ ಆರ್ಥಿಕತೆಯಾಗಿದೆ .


                                                                 ಹವ್ಯಾಸಗಳು


ನನಗೆ ನೃತ್ಯದಲ್ಲಿ ಹೆಚ್ಚು ಆಸಕ್ತಿ ಇದೆ , ಶಾಲಾ ,ಕಾಲೇಜಿನಲ್ಲಿ ಹೆಚ್ಚು ಭಾಗವಹಿಸಿದ್ದೇನೆ , ಮತ್ತು ಪ್ರಸ್ತುತವಾಗಿ ನಡೆದ ಕ್ರೈಸ್ಟ್ ಯೂನಿವರ್ಸಿಟಿ ದರ್ಪಣ್ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ . ಎಷ್ಟೋ ಬಾರಿ ಶಾಲಾ ,ಕಾಲೇಜಿಗಳಲ್ಲಿ ಭಾಗವಹಿಸಿದರುಕೂಡ ನೃತ್ಯನ ಪೋಟಿಯಲ್ಲಿ ದರ್ಪಣ್ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಒಂದು ವಿಚಿತ್ರ ಹಾಗು ಹೊಸ ಅನುಭವವಾಗಿತ್ತು, ಮಾತು ನೃತ್ಯ ಅಲ್ಲದೆ ರಂಗೋಲಿ , ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಕೂಡ ಪಡೆದಿದ್ದೇನೆ . ನನಗೆ ಬರಿ ಓದುವುದರಲ್ಲಿ ಮಾತ್ರ ಅಲ್ಲದೆ ಬಡ ಮಕ್ಕಳಿಗೆ ಸೇವೆ ಸಲ್ಲಿಸುವುದರಲ್ಲಿ ತುಂಬಾ ಆಸ


                                                                  ಗುರಿ

ನನಗೆ ಸ್ನೇಹಿತರ ಜೊತೆ ಸುತ್ತುವುದು ನನಗೆ ಇಷ್ಟವಾಗುವುದಿಲ್ಲ , ೧೮ ವಯಸಿನಲ್ಲಿ ಎಷ್ಟೋ ಸಂತೋಷವಾಗಿ ಇರಬೇಕೆನ್ನುತ್ತಾರೆ , ಆದರೆ ನಾನು ಮಾತ್ರ ಯಾರೊಂದಿಗೂ ಹೋಗುವುದಿಲ್ಲ , ಇರುವ ಸ್ವಲ್ಪ ಸಮಯಾನು ಕೂಡ ನನ್ನ ಕುಟುಂಬದವರ ಜೊತೆ ಮಾತ್ರ ಕಳೆಯುತ್ತೆನೆ , ಇಲ್ಲದಿದ್ದರೆ ಮನೆಯಲ್ಲಿ ಅಮ್ಮನಿಗೆ ಸಹಾಯಮಾಡಿಕೊಡುತೇನೆ , ಅದೂ ಇಲ್ಲದಿದ್ದರೆ ಯಾವುದಾದರು ಪುಸ್ತಕ ಅಥವಾ ಪತ್ರಿಕೆಗಳನ್ನು ಓದುತ್ತೆನೆ. ನಂತರ ಅಕ್ಕ ಪಕ್ಕ ಮನೆಯಲ್ಲಿರುವ ಮಕ್ಕಳೊಂದೆಗೆ ಆಟಾಡುವುದು , ನನ್ನ ಎರಡು ಅಕ್ಕಂದಿರ ಜೊತೆ ಜಗಳವಾಡುವುದು ಮಾಡುತ್ತಿರುತೇನೆ . ನನಗೆ ನನ್ನ ಮನೆಯಲ್ಲಿ ಎಲ್ಲ ವಿಷಯದಲ್ಲೂ ಬೆಂಬಲವಾಗಿರುವುದು ನನ್ನ ಎರಡನೆಯ ಅಕ್ಕ ಮಾತ್ರ . ನನ್ನ ಅಕ್ಕ ಇಂದಾನೆ ನಾನು ಈ ಸ್ಥಿತಿಯಲ್ಲಿ ಅಂದರೆ ಈ ಒಳ್ಳೆ ಕಾಲೇಜಿನಲ್ಲಿ ಶಿಕ್ಷಣ ಪಡೆದುಕೊಳ್ಳುತಾಯಿದೀನಿ . ಅದರಿಂದ ನಾನು ನನ್ನ ಅಕ್ಕನನ್ನು ಹೆಮ್ಮೆಪಡಿಸುವಂತೆ ಓದಿ ನನ್ನ ಗುರಿಯನ್ನು ಸಾದಿಸುತೇನೆ .