ವಿಷಯಕ್ಕೆ ಹೋಗು

ಸದಸ್ಯ:Sunitha pathi/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೋಹಿತ್ ಶರ್ಮ

ಹೆಸರು

[ಬದಲಾಯಿಸಿ]

ಮೋಹಿತ್ ಶರ್ಮ ಭಾರತೀಯ ಆಟಗಾರ. ಇವರ ಪೂರ್ಣ ಹೆಸರು ಮೋಹಿತ್ ಮಹಿಪಲ್ ಶರ್ಮ.

ಇವರು ೧೮-ಸೆಪ್ಟೆಂಬರ್-೧೯೮೮ ರಂದು ಹರಿಯಾಣದ ಭಲ್ಲಬರ್ಗ್ ಎಂಬ ಸ್ಥಳದಲ್ಲಿ ಹುಟ್ಟಿದರು. ಇವರ ತಂದೆ ಮಹಿಪಲ್ ಶರ್ಮ ಹಾಗು ತಾಯಿ ಸುನಿತ ಶರ್ಮ. ಇವರಿಗೆ ಈಗ ೨೨ ವರ್ಷ.

ಆಸಕ್ತಿ

[ಬದಲಾಯಿಸಿ]

ಮೋಹಿತ್ ಶರ್ಮ ಅವರು ತಮ್ಮ ಬಿಡುವಿನ ಸಮಯದಲ್ಲಿ ಸಿನಿಮಾಗಳನ್ನು ನೋಡಲು ಇಚ್ಛಿಸುತ್ತಾರೆ ಮತ್ತು ಇವರು ಪ್ರಕೃತಿ ಪ್ರೇಮಿ. ಅವರು ತಮ್ಮ ಮಾತೃ ಭಾಷೆಯಾದ ಹಿಂದಿಗೆ ಪ್ರಾಮುಖ್ಯತೆಯನ್ನು ಕೊಡುತ್ತಾರೆ.

ವಿವಾಹ

[ಬದಲಾಯಿಸಿ]

ಮೋಹಿತ್ ಶರ್ಮರವರು ೨೦೧೬ ರಂದು ಶ್ವೇತ ಎನ್ನುವ ಹುಡುಗಿಯನ್ನು ವಿವಾಹ ಮಾಡಿಕೊಂಡರು. ಇವರ ವಿವಾಹ ಲೀಲ ಪ್ಯಾಲೆಸ್ ಎನ್ನುವ ಸ್ಥಳದಲ್ಲಿ ನಡೆಯಿತು. ಇವರ ಪತ್ನಿ ಕಲ್ಕತ್ತಾದಲ್ಲಿ ಹೋಟೆಲ್ ಮ್ಯಾನೇಜ್ ಮೆಂಟ್ ಅನ್ನು ಮಾಡಿದ್ದಾರೆ.

ಕ್ರಿಕೆಟ್ ಜೀವನ

[ಬದಲಾಯಿಸಿ]

ಮೋಹಿತ್ ಶರ್ಮ ನಮ್ಮ ಭಾರತೀಯ ಕ್ರಿಕೆಟ್ ತಂಡದ ಬೌಲರ್.ಇವರು ೧-ಆಗಸ್ಟ್-೨೦೧೩ರಂದು ಭಾರತೀಯ ಕ್ರಿಕೆಟ್ ಆಟಗಾರನಾಗಿ ಸೇರಿದರು.ಇವರು ನಮ್ಮ ಭಾರತಕ್ಕೆ ಹಲವಾರು ಬಾರಿ ಹೆಮ್ಮೆಯನ್ನು ತಂದುಕೊಟ್ಟಿದ್ದಾರೆ. ಮೋಹಿತ್ ಶರ್ಮ ಅವರು ಭಾರತದ ಕ್ರಿಕೆಟ್ ತಂಡವನ್ನು ಸೇರಲು ಹೆಚ್ಚು ಶ್ರಮ ಪಟ್ಟಿದ್ದಾರೆ. ಇವರು ರೈಟ್ ಆರ್ಮ್ ಫಾಸ್ಟ್ ಬೌಲರ್(ಬಲಗೈ ವೇಗದ ಬೌಲರ್) ಹಾಗು ರೈಟ್ ಹ್ಯಾಂಡೆಡ್ ಬ್ಯಾಟ್ಸ್ ಮ್ಯಾನ್.ಮೋಹಿತ್ ಶರ್ಮ ಅವರು ಮಹೇಂದ್ರ ಸಿಂಗ್ ಧೋನಿಯನ್ನು ತಮ್ಮ ಆದರ್ಶ ವ್ಯಕ್ತಿಯಾಗಿ ಪರಿಗಣಿಸಿದ್ದಾರೆ. ಈತ ರಣಜಿ ಟ್ರೋಫೀಯಲ್ಲಿ ೮ ಪಂದ್ಯಗಳಲ್ಲಿ ೩೭ ವಿಕೆಟ್ಸ್ ಗಳನ್ನು ಗಳಿಸಿದ್ದಾರೆ. ಇವರು ಐ.ಪಿ.ಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ೧೫ ಪಂದ್ಯಗಳಲ್ಲಿ ೨೦ ವಿಕೆಟ್ಸ್ ಗಳನ್ನು ಗಳಿಸಿಕೊಟ್ಟಿದ್ದಾರೆ. ಇವರು ೨೦೧೩ರ ಐ.ಪಿ.ಎಲ್ ಪಂದ್ಯದ ಸಿ.ಎಸ್.ಕೆ(ಚೆನ್ನೈ ಸೂಪರ್ ಕಿಂಗ್ಸ್) ತಂಡದಲ್ಲಿ ಆಟವಾಡಿದ್ದಾರೆ ಹಾಗು ಐ.ಪಿ.ಎಲ್(ಇಂಡಿಯನ್ ಪ್ರೀಮಿಯರ್ ಲೀಗ್) ನಲ್ಲಿ ೨೦ ವಿಕೆಟ್ಸ್ ಗಳನ್ನು ಗಳಿಸಿದ್ದಾರೆ. ೨೦೧೫ರ ೧೧ನೆಯ ಕ್ರಿಕೆಟ್ ವರ್ಲ್ಡ್(ವಿಶ್ವ) ಕಪ್ ಅನ್ನು ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್ ಜೊತೆ ಹೋಸ್ಟ್ ಮಾಡಿದರು, ಅದರಲ್ಲಿ ೧೪ ತಂಡಗಳು ೪೯ ಪಂದ್ಯಗಳನ್ನು ೧೪ ಬೇರೆ ಬೇರೆ ಸ್ಥಳಗಳಲ್ಲಿ ಆಡಿದರು, ಇದು ಮಹೇಂದ್ರ ಸಿಂಗ್ ಧೋನಿಯವರು ಎರಡನೇ ಬಾರಿ ವರ್ಲ್ಡ್(ವಿಶ್ವ) ಕಪ್ ಅನ್ನು ಎದುರಿಸಿದರು. ಈ ೨೦೧೫ ರ ವರ್ಲ್ಡ್(ವಿಶ್ವ) ಕಪ್ ಮಹೇಂದ್ರ ಸಿಂಗ್ ಧೋನಿ ನಾಯಕನಾಗಿ ತುಂಬಾ ಸವಾಲುಗಳನ್ನು ಎದುರಿಸಬೇಕಾಗಿತ್ತು. ಆ ಸಂದರ್ಭದಲ್ಲಿ ಮೋಹಿತ್ ಶರ್ಮ ಅವರು ಉತ್ತಮವಾಗಿ ಆಟವನ್ನು ಆಡಿದರು.ಮೋಹಿತ್ ಶರ್ಮ ಅವರು ಆಟವಾಡುವಾಗ ಎಡ ಪಾದಕ್ಕೆ ಗಾಯವಾಗಿ ಅವರು ಮುಂಬರುವ ಪಂದ್ಯಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಇವರು ನಮ್ಮ ಭಾರತದ ನಾಲ್ಕನೇ ಓ.ಡಿ.ಐ ನಲ್ಲಿ ಜಿಂಬಾಂಬೆ ವಿರುದ್ಧ ಅಂತರಾಷ್ಟ್ರೀಯ ಚೊಚ್ಚಲ(ಇಂಟರ್ ನ್ಯಾಷನಲ್ ಡೆಬ್ಯುಟ್) ಮಾಡಿದ್ದಾರೆ.ಇವರು ೨೦೧೬ ರ ಐ.ಪಿ.ಎಲ್(ಇಂಡಿಯನ್ ಪ್ರೀಮಿಯರ್ ಲೀಗ್) ನಲ್ಲಿ ೧೪ ಪಂದ್ಯಗಳನ್ನು ಆಡಿ ೨೯೧ ಎಸೆತಗಳಲ್ಲಿ ೧೬೬ ರನ್ ಗಳನ್ನು ಪಡೆದಿದ್ದಾರೆ. ಇವರ ಆರ್ಥಿಕ(ಎಕೋನಮಿ) ೮.೩೯ ಮತ್ತು ಸರಾಸರಿ(ಆವ್ರೇಜ್) ೩೧.೩೦ಆಗಿತ್ತು, ಹಾಗು ೨೦೧೫ರಲ್ಲಿ ೧೬ ಪಂದ್ಯಗಳನ್ನು ಆಡಿ ೩೪೨ ಎಸೆತಗಳಲ್ಲಿ ೪೮೧ ರನ್ ಗಳನ್ನು ಪಡೆದಿದ್ದಾರೆ ಮತ್ತು ೧೪ ವಿಕೆಟ್ಸ್ ಗಳನ್ನು ತೆಗೆದರು. ಇವರ ಆರ್ಥಿಕ(ಎಕೋನಮಿ) ೮.೪೩ ಮತ್ತು ಸರಾಸರಿ(ಆವ್ರೇಜ್) ೩೪.೩೫. ೨೦೧೪ ರಲ್ಲಿ ೧೬ ಪಂದ್ಯಗಳಲ್ಲಿ ಭಾಗವಹಿಸಿ ೩೨೩ ಎಸೆತಗಳಲ್ಲಿ ೪೫೨ ರನ್ ಗಳನ್ನು ಮತ್ತು ೨೩ ವಿಕೆಟ್ಸ್ ಗಳನ್ನು ಪಡೆದಿದ್ದಾರೆ ಹಾಗು ಇವರ ಆರ್ಥಿಕ(ಎಕೋನಮಿ) ೮.೩೯ ಮತ್ತು ಸರಾಸರಿ(ಆವ್ರೇಜ್) ೧೯.೬೫. ೨೦೧೩ರಲ್ಲಿ ೧೫ ಪಂದ್ಯಗಳಲ್ಲಿ ಭಾಗವಹಿಸಿ ೩೦೪ ಎಸೆತಗಳಲ್ಲಿ ೩೨೬ ರನ್ ಗಳನ್ನು ಗಳಿಸಿಕೊಟ್ಟಿದ್ದಾರೆ ಹಾಗು ೨೦ ವಿಕೆಟ್ಸ್ ಗಳನ್ನು ತೆಗೆದು ಕೊಟ್ಟಿದ್ದಾರೆ. ಇವರ ಆರ್ಥಿಕ(ಎಕೋನಮಿ) ೬.೪೩ ಮತ್ತು ಸರಾಸರಿ(ಆವ್ರೇಜ್) ೧೬.೩೦.

ಸಾಧನೆ

[ಬದಲಾಯಿಸಿ]

ಇವರು ೨೦೧೬ರ ಐ.ಪಿ.ಎಲ್(ಇಂಡಿಯನ್ ಪ್ರೀಮಿಯರ್ ಲೀಗ್) ನಲ್ಲಿ ಕಿಂಗ್ಸ್ ೧೧ ಪಂಜಾಬ್ ತಂಡಕ್ಕಾಗಿ ಆಟವಾಡಿದರು ಹಾಗು ಅದೇ ವರ್ಷದ ಐ.ಪಿ.ಎಲ್ ನಲ್ಲಿ ಗುಜರಾತ್ ಲಯನ್ಸ್ ರವರ ವಿರುದ್ಧ ಉತ್ತಮವಾಗಿ ಆಟವಾಡಿದರು, ಆ ಪಂದ್ಯದಲ್ಲಿ ಅವರು 'ಬ್ರೆಂಡಮ್ ಮೆಕ್ಯುಲಮ್' ಅವರನ್ನು ಕೇವಲ ಒಂದೇ ರನ್ನಿನಲ್ಲಿ ಸೋಲಿಸಿದರು ಹಾಗು ಸುರೇಶ್ ರೈನರವರನ್ನು ೧೮ ರನ್ನ್ ಗಳಲ್ಲಿ ಸೋಲಿಸಿದರು. ಇವರ ಶ್ರಮದಿಂದ ಮತ್ತು ಉತ್ತಮ ಆಟದಿಂದ ಅಂದು ಪಂಜಾಬ್ ತಂಡ ವಿಜಯಗಳಿಸಿತು. ಇವರನ್ನು ಪಂಜಾಬ್ ತಂಡದವರು ೬.೫ ಕೋಟಿಗೆ ತೆಗೆದುಕೊಂಡರು. ಇವರನ್ನು ಕೆ.ಕೆ.ಆರ್ ತಂಡವೂ ಕೂಡ ಬಿಡ್ ಮಾಡಿದರು ಆದರೆ ಇವರು ಪಂಜಾಬ್ ತಂಡಕ್ಕೆ ಆಯ್ಕೆಯಾದರು. ೨೦೧೫ರಲ್ಲಿ ಇವರು ಸಿ.ಎಸ್.ಕೆ(ಚೆನ್ನೈ ಸೂಪರ್ ಕಿಂಗ್ಸ್) ತಂಡದಲ್ಲಿದ್ದರು ನಂತರ ಇವರು ಪಂಜಾಬ್ ತಂಡಕ್ಕೆ ಬಂದರು. ನಮ್ಮ ಈಗಿನ ಕ್ರಿಕೆಟ್ ತಂಡದ ನಾಯಕನಾದ ಮಹೇಂದ್ರ ಸಿಂಗ್ ಧೋನಿಗೆ ಮೋಹಿತ್ ಶರ್ಮ ಅಚ್ಚುಮೆಚ್ಚಿನ ಆಟಗಾರ. ಮೋಹಿತ್ ಶರ್ಮ ಅವರು ೨೦೧೫ರ ವಿಶ್ವ(ವರ್ಲ್ಡ್) ಕಪ್ ನಲ್ಲಿ ಹೆಚ್ಚಿನ ವಿಕೆಟ್ ಗಳನ್ನು ಪಡೆದ ಬೌಲರ್ ಆಗಿ ಮೂರನೇ ಸ್ಥಾನದಲ್ಲಿದ್ದರು.ಇವರು ೨೦೧೨-೧೩ ರ ರಣಜಿ ಟ್ರೋಫಿಯಲ್ಲಿ ಭಾರತದ ಅತ್ಯುತ್ತಮ ಬೌಲರ್ ಎಂದು ಹೆಸರು ಗಳಿಸಿದರು. ಇವರು ವಿಶ್ವ(ವರ್ಲ್ಡ್) ಕಪ್ ನಲ್ಲಿ ಜಿಂಬಾಂಬೆ[] ಮತ್ತು ಆಸ್ಟ್ರೇಲಿಯಾಗಳ ವಿರುದ್ಧ ಆಟವಾಡಿ ೮ ಪಂದ್ಯಗಳಲ್ಲಿ ೧೩ ವಿಕೆಟ್ ಗಳನ್ನು ಗಳಿಸಿದರು. ಮೋಹಿತ್ ಶರ್ಮ ಅವರು ೨೧ ಓ.ಡಿ.ಐ(ಒನ್ ಡೇ ಇಂಟರ್ ನ್ಯಾಷ್ನಲ್ ಮ್ಯ್ಯಾಚ್) ಗಳಲ್ಲಿ ೪ ಟಿ೨೦ ಪಂದ್ಯಗಳನ್ನು ಆಡಿದ್ದಾರೆ. ಇವರು ಆಡಿದ ಆಟಗಳಲ್ಲೇ ಈ ಪಂದ್ಯದಲ್ಲಿ ಬಹಳ ಉತ್ತಮವಾಗಿ ಆಟವಾಡಿದರು. ಮೋಹಿತ್ ಶರ್ಮ ಅವರು ಐ.ಪಿ.ಎಲ್(ಇಂಡಿಯನ್ ಪ್ರೀಮಿಯರ್ ಲೀಗ್) ನಲ್ಲಿ ಪಂಜಾಬ್ ತಂಡಕ್ಕಾಗಿ ೬೧ ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ. ಮೋಹಿತ್ ಶರ್ಮ ಅವರು ಸಂದೀಪ್ ಪಟಿಲ್[] ರವರ ನಂತರ ಭಾರತದ ಎರಡನೆಯ ಅಡ್ಜಡ್ಜ್ ಡ್ ಮ್ಯಾನ್ ಆಫ್ ದ ಮ್ಯಾಚ್( ಪ್ರಶಸ್ತಿ ಮನುಷ್ಯ) ಎಂಬ ಹೆಸರು ಗಳಿಸಿದ್ದಾರೆ. ಮೋಹಿತ್ ಶರ್ಮ ಅವರು ನಾನು ಧೋನಿಯವರಿಂದ ತಾಳ್ಮೆ ಮತ್ತು ತಂತ್ರಗಳನ್ನು ಕಲಿತಿದ್ದೇನೆ ಎಂದು ಮತ್ತು ವಿರಾಟ್ ಕೊಹ್ಲಿಯವರಿಂದ ಸವಾಲನ್ನು ಹಾಗು ವಿರೇಂದ್ರ ಶೇವಾಗ್ ಎಂದರೆ ಬಹಳ ಇಷ್ಟ, ಅವರೊಂದಿಗೆ ಸಮಯವನ್ನು ಕಳೆಯಲು ಬಹಳ ಇಷ್ಟ ಪಡುತ್ತೇನೆ ಎಂದು ಹೇಳಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]