ಸದಸ್ಯ:Sujanac1/ನನ್ನ ಪ್ರಯೋಗಪುಟ/cc
ಸಿಫಿಲಿಸ್
ಸಿಫಿಲಿಸ್ ಒಂದು ಲೈಂಗಿಕವಾಗಿ ಹರಡುವ ಸೋಂಕು. ಟ್ರೆಪೋನೆಮ ಪಾಲಿಡೆಮ್[೧] ಎಂಬ ಬ್ಯಾಕ್ಟೀರಿಯಂ, ಸಿಫಿಲಿಸ್ ಸೋಂಕನ್ನು ಉಂಟುಮಾಡುತ್ತದೆ. ರೋಗದ ಲಕ್ಷಣಗಳು ಅದರ ಹಂತದ ಮೇಲೆ ಅವಲಂಭಿಸಿರುತ್ತದೆ(ಪ್ರಾಥಮಿಕ,ಮಾಧ್ಯಮಿಕ,ಲೇಟೆಂಟ್,ತೃತೀಯ). ಪ್ರಾಥಮಿಕ ಹಂತದಲ್ಲಿ ಮೇಹವ್ರಣ (ಸ್ಥಿರವಾದ,ನೋವುರಹಿತ,ನವೆ ಇಲ್ಲದ ಮತ್ತು ಚರ್ಮದ ಹುಣ್ಣು) ಒದಗಿಸುತ್ತದೆ.ಮಾಧ್ಯಮಿಕ ಸಿಫಿಲಿಸ್‌ನಲ್ಲಿ ಅಡಿಭಾಗದಲ್ಲಿ ಮತ್ತು ಅಂಗೈಯಲ್ಲಿ ತುರಿಕೆಯುಂಟಾಗುತ್ತದೆ.ಕೆಲವೊಮ್ಮೆ ಜನನದ್ವಾರದಲ್ಲಿ ಮತ್ತು ಬಾಯಿ ಭಾಗದಲ್ಲಿ ಹುಣ್ಣು ಉಂಟಾಗುತ್ತದೆ.ವರ್ಷಾನುಗಟ್ಟಳೆ ದೇಹದಲ್ಲಿ ಉಳಿಯುವ ಸಿಫಿಲಿಸ್‌ನ ಲೇಟೆಂಟ್ ಹಂತದಲ್ಲಿ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ.ತೃತೀಯ ಹಂತದಲ್ಲಿ ಮೃದುವಾದ ಕ್ಯಾನ್ಸರಸ್ ಅಲ್ಲದ ಬೆಳವಣಿಗೆಗಳು,ನರವೈಜ್ಞಾನಿಕ ಮತ್ತು ಹೃದಯಕ್ಕೆ ಸಂಬಂಧಿತ ಲಕ್ಷಣಗಳು ಕಂಡು ಬರುತ್ತವೆ.ಸಿಫಿಲಿಸ್ ರೋಗವನ್ನು "ದ ಗ್ರೇಟ್ ಇಮಿಟೇಟರ್"ಎಂದು ಕರೆಯಲಾಗುತ್ತದೆ.ಏಕೆಂದರೆ ಸದರಿ ರೋಗವು,ವಿವಿಧ ರೋಗಗಳ ಲಕ್ಷಣಗಳನ್ನು ದೇಹದಲ್ಲಿ ಉಂಟುಮಾಡುತ್ತದೆ.ಸಿಫಿಲಿಸ್ ಸಾಮಾನ್ಯವಾಗಿ ಲೈಂಗಿಕ ಚಟುವಟಿಕೆ ಮೂಲಕ ಹರಡುತ್ತದೆ. ತಾಯಿಯಿಂದ ಮಗುವಿಗೆ ಗರ್ಭಧಾರಣೆಯ ಕಾಲದಲ್ಲಿ ಅಥವಾ ಜನ್ಮ ನೀಡುವ ಸಮಯದಲ್ಲಿ ಹರಡಿದಾಗ,ಜನ್ಮಜಾತ ಸಿಫಿಲಿಸ್ ಎಂದು ಕರೆಯಲಾಗುತ್ತದೆ.ಟ್ರೆಪೋನೆಮ ಪಾಲಿಡೆಮ್‌ನ ಉಪವರ್ಗಗಳು ಉಂಟುಮಾಡುವ ಹಲವಾರು ರೋಗಗಳಲ್ಲಿ ಯಾಲ್ಸ್ ,ಪಿಂಟ ಮುತ್ತು ಬಿಜೆಲ್ ಸೇರುತ್ತವೆ. ರಕ್ತ ಪರೀಕ್ಷೆಯ ಮೂಲಕ ರೋಗದ ನಿರ್ಣಯವನ್ನು ಮಾಡಲಾಗುತ್ತದೆ.ಬ್ಯಾಕ್ಟೀರಿಯಾದ ಪತ್ತೆದಾರಿಯನ್ನು ಡಾರ್ಕ್ ಫೀಲ್ಡ್ ಮೈಕ್ರೋಸ್ಕೋಪಿಯ ಮೂಲಕ ಮಾಡಬಹುದು.ಗರ್ಭಿಣಿಯರು ಸದರಿ ರೋಗದ ಪರೀಕ್ಷೆಯನ್ನು ಒಳಗೊಳ್ಳಬೇಕೆಂದು ರೋಗ ನಿಯಂತ್ರಣ ಕೇಂದ್ರ ಶಿಫಾರಸ್ಸು ಮಾಡುತ್ತದೆ.[೨]