ಸದಸ್ಯ:Suhaas M/ಆ್ಯಡಂಸ್ಮಿತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
         ಅರ್ಥಶಾಸ್ತ್ರದ ಪಿತಾಮಹನೆಂದು ಹೆಸರುವಾಸಿಯಾಗಿರುವ ಆ್ಯಡಂಸ್ಮಿತ್ ಒಬ್ಬ ಸ್ಕಾಟಿಷ್ ನೈತಿಕ ತತ್ವಜ್ಞಾನಿ, ರಾಜಕೀಯ ‌ಅರ್ಥಶಾಸ್ತ್ರದ ಪ್ರವರ್ತಕ ಮತ್ತು ಸ್ಕಾಟ್ಲೆಂಡ್ ಜನರ ಜ್ಞಾನೋದಯಕ್ಕೆ ಕಾರಣವಾದ ಪ್ರಮುಖ ವ್ಯಕ್ತಿ. ಇವರು "ದ ಥಿಯರಿ ಆಫ್ ಮಾರಲ್ ಸೆಂಟಿಮೆಂಟ್ಸ್" ಮತ್ತು " ಆ್ಯನ್ ಇನ್ಕೈರಿ ಇನ್ ಟು ದಿ ನೇಚರ್ ಅಂಡ್ ಕಾಸಸ್ ಆಫ್ ವೆಲ್ತ್ ಆಫ್ ನೇಷನ್ಸ್ " ಎಂಬ ಎರಡು ಅತ್ಯುತ್ತಮ ಕೃತಿಗಳಿಗೆ ಪ್ರಸಿದ್ಧರಾಗಿದ್ದಾರೆ. ಎರಡನೆಯ ಕೃತಿ,ಇವರ ಮೇರುಕೃತಿ ಮತ್ತು ಅರ್ಥಶಾಸ್ತ್ರದ ಮೊದಲ ಆಧುನಿಕ ಕೃತಿ,"ವೆಲ್ತ್ ಆಫ್ ನೇಷನ್ಸ್" ಎಂದು ಪರಿಗಣಿಸಲಾಗಿದೆ.