ಸದಸ್ಯ:Sinchita s

ವಿಕಿಪೀಡಿಯ ಇಂದ
Jump to navigation Jump to search
ಸಿಂಚಿತ
Sinchita S.jpg
ರಾಷ್ಟ್ರೀಯತೆಭಾರತೀಯ
Other namesಸಿಂಚು
ವಿದ್ಯಾಭ್ಯಾಸಬಿ ಕಾಮ್
ವೃತ್ತಿವಿಧ್ಯಾರ್ಥಿನಿ

ನನ್ನ ಕುಟುಂಬ[ಬದಲಾಯಿಸಿ]

ನನ್ನ ಹೆಸರು ಸಿಂಚಿತ ಎಸ್. ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಓದುತಿದ್ದೇನೆ. ನಾನು ಕ್ರೈಸ್ಟ್ ಸ್ಕೂಲಿನಲ್ಲಿ ಓದಿ ಒಳ್ಳೆಯ ಅಂಕವನ್ನು ಪಡೆದು ಕ್ರೈಸ್ಟ್ ಜೂನಿಯರ್ ಕಾಲೇಜಿಗೆ ಬಂದೆ .ಅಲ್ಲಿ ನಾನು ವಿದ್ಯಾಭ್ಯಾಸದ ಮಹತ್ವವನ್ನು ಕಂಡುಕೊಂಡೆ.ನನಗೆ ಓದುವುದು ಬಹಳ ಇಷ್ಟ.ಆದುದರಿಂದ ಭವಿಷ್ಯದಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ಸಂಶೋಧನೆ ಮಾಡುವ ಆಸಕ್ತಿ ಇದೆ. ನನ್ನ ಹವ್ಯಾಸಗಳು ಹಾಡುವುದು, ಕಥೆ ಮತ್ತು ಕಾದಂಬರಿ ಓದುವುದು.ನಾನು ಶಾಲೆಯಲ್ಲಿದ್ದಾಗ ಹಾಡುತ್ತಿದ್ದೆ.ಹಲವಾರು ಬಹುಮಾನಗಳನ್ನೂ ಗೆದ್ದಿದ್ದೇನೆ.ಆದರೆ ನಾನು ಕಾಲೇಜಿಗೆ ಬಂದ ಮೇಲೆ ಹಾಡುವುದನ್ನು ನಿಲ್ಲಿಸಿಬಿಟ್ಟೆ.ನನ್ನ ತಂದೆ ಮತ್ತು ತಾಯಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾರೆ. ಅವರು ಅನೇಕ ವರ್ಷ್ಗಳಿಂದ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ.ಹೀಗಾಗಿ ನನ್ನ ಹುಟ್ಟೂರು ಬೆಂಗಳೂರು.ನನಗೆ ಒಬ್ಬ ಅಣ್ಣನಿದ್ದಾನೆ.ಅವನ ಹೆಸರು ಅಭಿಜಿತ್.ಅವುನು ನನಗಿಂತ ಐದು ವರ್ಷ ದೊಡ್ದವನು.ಅವನು ನನಗೆ ಅರ್ಥಶಾಸ್ತ್ರ ಮತ್ತು ಲೆಕ್ಕಶಾಸ್ತ್ರ ಹೇಳಿಕೊಡುತ್ತಾನೆ.ನನ್ನ ಅಣ್ಣನೆಂದರೆ ನನಗೆ ಬಹಳ ಇಷ್ಟ.ನಮ್ಮಿಬ್ಬರಿಗೂ ನಾಯಿ ಸಾಕುವುದು ಬಹಳ ಇಷ್ಟ.ಆದರೆ ನಮ್ಮ ತಾಯಿಗೆ ನಾಯಿ ಸಾಕುವುದು ಇಷ್ಟವಿಲ್ಲ.ನಮ್ಮದು ಚಿಕ್ಕ ಕುಟುಂಬ.ನಮ್ಮ ಕುಟುಂಬದವರೆಲ್ಲರಿಗೂ ಯಾತ್ರಾಸ್ಥಳಗಳಿಗೆ ಭೇಟಿ ನೀಡುವುದು ತುಂಬ ಸಂತೋಷದ ವಿಷಯ. ಹೀಗಾಗಿ ನಾವುಗಳು ಈ ಬೇಸಿಗೆಯ ರಜದಲ್ಲಿ ತಮಿಳುನಾಡಿನ ಮಧುರೈ,ಸಮಯಪುರಂ, ತಂಜಾವುರ್, ಕುಂಭಕೋಣಂ, ಮತ್ತು ಚಿದಂಬರಂಗೆ ಆರು ದಿನಗಳ ಕಾಲ ಪ್ರವಾಸ ಹೋಗಿದ್ದೆವು. ಎಲ್ಲ ಪುಣ್ಯಕ್ಷೇತ್ರದ ಭಾವಚಿತ್ರಗಳನ್ನು ಸೊಗಸಾದ ಕ್ಯಾಮರಾದಲ್ಲಿ ಸೆರೆ ಹಿಡಿದು ನಾನು ಸಂಗ್ರಹ ಮಾಡಿದ್ದೇನೆ.

ಹವ್ಯಾಸ[ಬದಲಾಯಿಸಿ]

ನನಗೆ ಕಾದಂಬರಿಗಳನ್ನು ಓದುವುದು ಬಹಳ ಇಷ್ಟವೆಂದು ಮೊದಲೇ ಹೇಳಿದ್ದೆನೆ. ಈಗ ನಾನು ಅವುಗಳ ಹೆಸರುಗಳನ್ನು ಹೇಳಲು ಬಯಸುತ್ತೇನೆ. ಅವುಗಳೆಂದರೆ ಡಾ ವಿಂಸಿ ಕೋಡ್, ಪೆರಿ ಮೆಸನ್ ಕಥೆಗಳು,ಇಂಟರ್ ಪ್ರಿಟೇಷನ್ ಆಫ಼್ ಡ್ರೀಮ್ಸ್ ಮುಂತಾದವು.ನನಗೆ ಹಿಂದಿ ಚಲನಚಿತ್ರಗಳು ಮತ್ತು ಧಾರವಾಹಿಗಳನ್ನು ನೊಡುವುದೆಂದರೆ ಪಂಚಪ್ರಾಣ. ಆದರೆ ನಮ್ಮ ತಂದೆಯವರು ಅವುಗಳನ್ನು ನೋಡುತ್ತಿರುವ ಸಮಯದಲ್ಲಿ "ಓದು ಓದು" ಎಂದು ಕೂಗುತ್ತಿರುತ್ತಾರೆ.ಆದರೂ, ನಾನು ಸಂಪೂರ್ಣ ನೋಡಿದ ಮೇಲೆಯೇ ಓದಲು ಹೂಗುತ್ತೇನೆ.ನಮ್ಮ ಬಡಾವಣೆಯಲ್ಲಿ ಒಂದು ಸಾರ್ವಜನಿಕ ಗ್ರಂಥಾಲಯವಿದೆ. ಅಲ್ಲಿ ನಾನು ಪತ್ರಿಕೆಗಳನ್ನು ಓದುತ್ತೇನೆ. ಅವುಗಳೆಂದರೆ ಸುಧ,ತರಂಗ,ವಿಸ್ಡಂ,ದಿ ಹಿಂದು, ಮೊದಲಾದವುಗಳು. ಗ್ರಂಥಾಲಯವನ್ನು ಪ್ರಾರಂಭ ಮಾಡಲು ಹೆಸರಾಂತ ಕವಿಗಳಾದ ವೆಂಕಟೇಶಮೂರ್ತಿ ಅವರು ಬಂದಿದ್ದರು.ನಮ್ಮ ಕ್ರೈಸ್ಟ್ ಯೂನಿವರ್ಸಿಟಿಯಲ್ಲೂ ದೊಡ್ದ ಗ್ರಂಥಾಲಯವಿದೆ.ನಾನು ಅದರ ಪ್ರಯೋಜನವನ್ನು ಪಡೆದುಕೊಂಡಿದ್ದೆನೆ.

ಕ್ರೈಸ್ಟ್ ಯೂನಿವರ್ಸಿಟಿ[ಬದಲಾಯಿಸಿ]

ನನ್ನ ಪ್ರಾಥಮಿಕ ವಿಧ್ಯಾಭ್ಯಾಸವನ್ನು ನಾನು ಕ್ರೈಸ್ಟ್ ಸ್ಕೂಲಿನಲ್ಲಿ ಮಾಡಿದೆ. ನಂತರ ಪಿ.ಯು.ಸಿಯನ್ನೂ ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲೆ ಮಾಡಿದೆ.ಈಗ ನಾನು ಬಿ.ಕಾಂ ಅನ್ನೂ ಸಹ ಕ್ರೈಸ್ಟ್ ಕಾಲೇಜಿನಲ್ಲಿಯೇ ಮಾಡುತಿದ್ದೇನೆ. ನನ್ನ ಮುಂದಿನ ಓದನ್ನೂ ಇಲ್ಲಿಯೇ ಮಾಡಲು ಬಯಸುತ್ತೇನೆ.ಇಲ್ಲಿ ಓದಬೇಕು ಎನ್ನುವುದು ನನ್ನ ಕನಸು.

ಮುಂದಿನ ಗುರಿ[ಬದಲಾಯಿಸಿ]

ನಾನು ಬಿ.ಕಾಂ ಪದವಿ ಮುಗಿಸಿದ ಮೇಲೆ ಎಂ.ಬಿ.ಎ ಮಾಡಲು ಬಯಸಿದ್ದೇನೆ.ಎಂ.ಬಿ.ಎ ಮುಗಿಸಿದ ಮೇಲೆ ಕೆಲಸಕ್ಕೆ ಹೋಗಲು ಬಯಸುತ್ತೇನೆ.ನನಗೆ ವಿದೇಶಗಳಲ್ಲಿ ಕೆಲಸ ಮಾಡುವುದು ಇಷ್ಟವಿಲ್ಲ. ಆದ್ದರಿಂದ ನಾನು ಬೆಂಗಳೂರು ಅಥವಾ ಮೈಸೂರಿನಲ್ಲಿ ಮಾತ್ರ ಕೆಲಸ ಮಾಡಲು ಬಯಸುತ್ತೇನೆ.ಏಕೆಂದರೆ ನನ್ನ ಎಲ್ಲಾ ಸಂಬಂಧಿಕರು ಬೆಂಗಳೂರಿನಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಅವರನ್ನು ಬಿಟ್ಟು ನಾನು ಹೊರಗೆ ಹೋಗಲು ಬಯಸುವುದಿಲ್ಲ.ನಾವು ಸಂಬಂಧಿಕರೆಲ್ಲರೂ ತಿಂಗಳಿಗೊಮ್ಮೆ ಪಾರ್ಟಿ ಮಾಡುತ್ತೇವೆ. ಇದರಲ್ಲಿ ಭಾಗವಹಿಸುವುದು ನನಗೆ ಬಹಳ ಖುಷಿಯ ವಿಷಯ.ಕನ್ನಡ ವಿಕಿಪೇಡಿಯ ಯೋಜನೆ ನನಗೆ ಬಹಳ ಇಷ್ಟವಾಗಿದೆ. ಮುಂದಿನ ದಿನಗಳಲ್ಲಿ ನಾನು ಕನ್ನಡ ವಿಕಿಪೇಡಿಯಕ್ಕೆ ಮಹತ್ವದ ಲೇಖನಗಳನ್ನು ಬರೆಯಲು ಪ್ರಯತ್ನಿಸುತ್ತೇನೆ.

Indian School.pngThis user is a member of WikiProject Education in Indiaಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Sinchita s