ವಿಷಯಕ್ಕೆ ಹೋಗು

ಸದಸ್ಯ:Shreya. Bhaskar/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿರಿಯಡ್ಕ ಎಂಬ ಊರು ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಉಡುಪಿ ತಾಲೂಕಿನಲ್ಲಿದೆ.ಈ ಊರು ಬೊಮ್ಮಾರಬೆಟ್ಟು ಗ್ರಾಮಕ್ಕೆ ಸೇರಿಕೊಂಡಿದೆ.ಇಲ್ಲಿ ಪ್ರಸಿದ್ದವಾದ ಶ್ರೀ ವೀರಭದ್ರ ದೇವಸ್ಥಾನವಿದೆ.ಹಾಗೆ ಇಲ್ಲಿ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪದವಿ ತರಗತಿವರೆಗಿನ ಎಲ್ಲಾ ಶಿಕ್ಷಣ ಸಂಸ್ಥೆಗಳಿವೆ. ಹಿರಿಯಡ್ಕವು ಉಡುಪಿಯಿಂದ ೨೬ ಕಿ.ಮೀ ದಲ್ಲಿದೆ. ಹಿರಿಯಡ್ಕದಿಂದ ೩ ಕಿ.ಮೀ ದೂರಕ್ಕೆ ಹೋದಾಗ ಸ್ವರ್ಣ ನದಿಯ ಬಜೆ ಡ್ಯಾಮ್ ಇದೆ.[] ಇಲ್ಲಿ

  1. ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ
  2. ಪೊಲೀಸ್ ಸ್ಟೇಷನಿದೆ
  3. ಎಲ್ಲಾ ರೀತಿಯ ಮಳಿಗೆಗಳಿವೆ
  4. ಬಸ್ಸಿನ ವ್ಯವಸ್ಥೆಗಳು ಚೆನ್ನಾಗಿವೆ
  5. ರಸ್ತೆಗಳು ಚೆನ್ನಾಗಿದೆ

ಮಹಾತ್ಮ ಗಾಂಧೀಜಿಯವರು ಭಾರತ ದೇಶದ ರಾಷ್ಟ್ರಪಿತ.ಗಾಂಧೀಜಿಯವರು ಭಾರತ ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವ ಸಲುವಾಗಿ ಹೋರಾಟವನ್ನು ಮಾಡಿದ್ದಾರೆ.


ಉಡುಪಿ ಅಡುಗೆ[] ಉಡುಪಿಯ ಅಡುಗೆಯು ವಿಶ್ವ ಪ್ರಸಿದ್ಧವಾಗಿದೆ. ಇಲ್ಲಿನ ಜನರು ಕುಸಬಲಕ್ಕಿಯನ್ನು ಅನ್ನಕ್ಕೆ ಉಪಯೋಗಿಸುತ್ತಾರೆ. ಪತ್ರೋಡೆ,ಕಡುಬು, ಗೋಳಿಬಜೆ, ನೀರುದೋಸೆ, ಪುಂಡಿ, ಕೋಳಿರೊಟ್ಟಿ ಇವು ಗ್ರಾಮೀಣ ಪ್ರದೇಶಗಳಲ್ಲಿನ ಜನರು ತಯಾರಿಸುವ ತಿನಿಸುಗಳಾಗಿವೆ. ಇಲ್ಲಿ https://www.britannica.com/animal/snow-leopardತುಳು ಶಿವಳ್ಳಿ ಬ್ರಾಹ್ಮಣರ ಅಡುಗೆ, ಕೊಂಕಣಿ ಸಮುದಾಯದವರ ಅಡುಗೆ, ಬಂಟರ ಅಡುಗೆಯು ಜನಪ್ರಿಯವಾಗಿದೆ.


ಹಿಮ ಚಿರತೆ ಇದು ದೊಡ್ಡ ಜಾತಿಯ ಬೆಕ್ಕು. ಮಧ್ಯ ಮತ್ತು ದಕ್ಷಿಣ ಏಷ್ಯಾದ ಪರ್ವತ ಪ್ರದೇಶಗಳಲ್ಲಿ ವಾಸಿಸುವ ಪ್ರಾಣಿಯಾಗಿದೆ.ಜಗತ್ತಿನಲ್ಲಿ ಇವುಗಳ ಸಂಖ್ಯೆ ೧೦೦೦೦ಕ್ಕಿಂತ ಕಡಿಮೆ ಇದೆ. ಇವು ಸುಮಾರು ೧೮ ವರ್ಷಗಳ ಕಾಲ ಬದುಕುತ್ತವೆ. ಇವುಗಳಿಗೆ ಗರ್ಜಿಸುವ ಶಕ್ತಿ ಇಲ್ಲ. ಆಡು, ಕುರಿ, ಜಿಂಕೆ, ದನ ಮುಂತಾದ ಪ್ರಾಣಿಗಳು ಇದರ ಆಹಾರವಾಗಿದೆ. ಭಾರತದಲ್ಲಿ ಜಮ್ಮು ಕಾಶ್ಮೀರ, ಉತ್ತರಾಖಂಡ, ಹಿಮಾಚಲ ಪ್ರದೇಶ, ಸಿಕ್ಕಿಂ, ಮತ್ತು ಅರುಣಾಚಲ ಪ್ರದೇಶದಲ್ಲಿ ಹಿಮ ಚಿರತೆಗಳಿವೆ.


ಭೀಮ ಭೀಮನು ವಾಯುದೇವನ ಆಶೀರ್ವಾದದಿಂದ ಕುಂತಿಯಲ್ಲಿ ಮಧ್ಯಮನಾಗಿ ಜನಿಸಿದ್ದಾನೆ.ಇವನು ಪಾಂಡವರನ್ನು ಮತ್ತು ಅವರ ತಾಯಿಯಾದ ಕುಂತಿಯನ್ನು ಅರಗಿನ ಮನೆಯಿಂದ ರಕ್ಷಿಸಿದ್ದಾನೆ.ಮುಂದೆ ರಾಕ್ಷಸನಾದ ಹಿಡಿಂಬನನ್ನು ವಧಿಸಿ ಅವನ ತಂಗಿಯಾದ ಹಿಡಿಂಬೆಯನ್ನು ವಿವಾಹಮಾಡಿಕೊಂಡಿದ್ದಾನೆ.ಇದರಿಂದ ಭೀಮನಿಗೆ ವೃಕೋದರ ಎಂಬ ಹೆಸರಿದೆ.ಇವರಿಬ್ಬರಿಗೆ ಘಟೋತ್ಕಜನೆಂಬ ಪುತ್ರನು ಜನಿಸಿದ್ದಾನೆ.ಬಕಾಸುರನೆಂಬ ರಾಕ್ಷಸನನ್ನು ವಧಿಸಿದ್ದಾನೆ.


ಮಂಗ್ಲಾ ರಾಯ್ '' ಮಂಗ್ಲಾ ರಾಯ್ ಅವರು ಭಾರತೀಯ ಕುಸ್ತಿಪಟು. ಇವರು ೧೯೧೬ ಅಕ್ಟೋಬರ್ ನಲ್ಲಿ ಉತ್ತರ ಪ್ರದೇಶದ ಘಾಜಿಪುರ ಜಿಲ್ಲೆಯ ಜೋಗಾ ಮುಸಾಹಿಬ್ ಎಂಬ ಹಳ್ಳಿಯ ರೈತ ಕುಟುಂಬದಲ್ಲಿ ಜನಿಸಿದವರು. ಇವರ ತಂದೆ ರಾಮಚಂದ್ರ ರಾಯ್ ಮತ್ತು ಮಾವ ರಾಧಾ ರಾಯ್ ಇಬ್ಬರು ಕುಸ್ತಿಪಟುಗಳಾಗಿದ್ದರು. ಮಂಗ್ಲಾ ರಾಯ್ ಅವರು ೧೬ ವರ್ಷ ತುಂಬಿದಾಗ ಕಾನ್ ಸ್ಟೇಬಲ್ ಆಗಿ ಪೋಲೀಸು ಸೇವೆಗೆ ಸೇರಿಕೊಂಡಿದ್ದರು. ಮಂಗ್ಲಾ ರಾಯ್ ಆರು ಅಡಿ ಮೂರು ಇಂಚು ಎತ್ತರದ, ೧೬೦ಕಿಲೋ ಭಾರವನ್ನು ಹೊಂದಿದ್ದರು. ಇವರು ವಾರಣಾಸಿಯ ಹೆಸರಾಂತ ಕುಸ್ತಿ ಗುರು ಶಿವಮೂರ್ತಿ ತಿವಾರಿಯವರ ತರಬೇತಿಯಲ್ಲಿ ಆಗ್ನೇಯ ಏಷ್ಯಾದ ಕುಸ್ತಿ ಶೈಲಿಯಲ್ಲಿ ನಿಷ್ಣಾತರಾಗಿದ್ದರು. ಇವರು ಮೊದಲಿಗೆ ರಂಗೂನ್ ನ ಛಾಂಪಿಯನ್ ಗಳಾದ ಫತೇಸಿಂಗ್ ಮತ್ತು ಇಶಾನಾಥ್ ರ ಜೊತೆಗೆ ಸೆಣಸಿ ಅವರನ್ನು ಸೋಲಿಸಿದ್ದಾರೆ.ಇವರು ಪಾಕಿಸ್ತಾನದ ರುಸ್ತಮ್ ನನ್ನು ಸೋಲಿಸಿ ರುಸ್ತಮ್-ಎ -ಹಿಂದ್ ಹಾಗೂ ಹಿಂದ್ ಕೇಸರಿ ಮಂಗ್ಲಾ ರಾಯ್ ಎಂಬ ಬಿರುದು ಪಡೆದಿದ್ದಾರೆ. ಬಾಹ್ರಾಲಿ ಡಾವ್ ಎಂಬ ಪಟ್ಟು ಅವರ ನೆಚ್ಚಿನ ಪಟ್ಟಾಗಿತ್ತು. ೧೯೬೩ರಲ್ಲಿ ಇರಾನಿನ ಮೆಹರುದ್ದೀನ್ ನ ವಿರುದ್ಧ ಕೊನೆಯ ಬಾರಿಗೆ ಸೆಣಸಿ, ನಿವೃತ್ತಿ ಘೋಷಿಸಿದರು.ಇವರು ೧೯೭೬ ಜೂನ್ ೨೪ರಂದು ವಾರಣಾಸಿಯಲ್ಲಿ ನಿಧನ ಹೊಂದಿದರು.


ಪರಿಸರ ದಿನಾಚರಣೆ ೧೯೭೨ರಲ್ಲಿ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ನಿರ್ಧರಿಸಿ,೧೯೭೪ರಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನುಆರಂಭಿಸಲಾಯಿತು.ಪ್ರತೀ ವರ್ಷ ಜೂನ್ ೫ರಂದು ವಿಶ್ವಾದ್ಯಂತ ಪರಿಸರ ದಿನವನ್ನು ಅಚರಿಸಲಾಗುತ್ತದೆ.ಪ್ರತಿಯೊಬ್ಬರಲ್ಲಿಯೂ ಮನುಷ್ಯರಿಂದ ಉಂಟಾಗಿರುವ ವಾಯುಮಾಲಿನ್ಯ,ಜಾಗತಿಕ ತಾಪಮಾನ,ಪ್ಲಾಸ್ಟಿಕ್ ನಿಂದ ಉಂಟಾಗಿರುವ ಮಾಲಿನ್ಯ,ದಿನದಿಂದ ದಿನಕ್ಕೆ ಏರುತ್ತಿರುವ ಸಮುದ್ರಮಟ್ಟದಿಂದ ಜಗತ್ತು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದೇ ಈ ದಿನವನ್ನು ಆಚರಿಸುವ ಉದ್ದೇಶವಾಗಿದೆ. ಪರಿಸರವನ್ನು ರಕ್ಷಿಸಲು ಪ್ರತಿಯೊಬ್ಬರು ನೀರನ್ನು ಉಳಿಸಬೇಕು,ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಮಾಡಬೇಕು ಹಾಗೂ ಮರುಬಳಕೆ ಮಾಡಬೇಕು,ಗಿಡಮರಗಳನ್ನು ಬೆಳೆಸಬೇಕು,ಸಾರ್ವಜನಿಕ ಸಾರಿಗೆಗಳನ್ನು ಉಪಯೋಗಿಸಬೇಕು.೨೦೨೨ರಲ್ಲಿ ಸ್ವಿಡನ್ ದೇಶವು ವಿಶ್ವ ಪರಿಸರ ದಿನದ ಅತಿಥೇಯ.ಭಾರತವು ೨೦೧೧ರಲ್ಲಿ ಈ ದಿನದ ಅತಿಥೇಯವಾಗಿತ್ತು.

ಕರ್ನಾಟಕ ಪ್ರವಾಸಿ ಸ್ಥಳ
ಉಡುಪಿ ಮೈಸೂರು ವಿಜಯಪುರ ದಕ್ಷಿಣ ಕನ್ನಡ
ಶ್ರೀ ಕೃಷ್ಣ ಮಠ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಗೋಲ್ ಗುಂಬಜ಼್ ಸಸಿಹಿತ್ಲು ಬೀಚ್
ಕಾಪು ದ್ವೀಪಸ್ಥಂಭ ಮೈಸೂರು ಅರಮನೆ ವಿಜಯಪುರ ಕೋಟೆ ಕದ್ರಿ ಮಂಜುನಾಥ ದೇವಸ್ಥಾನ
ಮರವಂತೆ ಚಾಮುಂಡಿ ಬೆಟ್ಟ ಬಾರ ಕಮಾನಾ ಜಮಾಲಾಬಾದ್ ಕೋಟೆ
ಜೋಮ್ಲು ತೀರ್ಥ ಸೆಂಟ್ ಫಿಲೋಮಿನಾಸ್ ಚರ್ಚ್ ಗಗನ್ ಮಹಲ್ ಪಿಲಿಕುಳ ನಿಸರ್ಗಧಾಮ
  1. https://timesofindia.indiatimes.com/city/mangaluru/water-from-swarna-river-to-increase-storage-at-baje-dam/articleshow/75100147.cms
  2. https://www.karnataka.com/recipe-and-food/7-popular-udupi-food/