ಸದಸ್ಯ:Shreegowri/sandbox
ಗುರಿ ಸಾಧನೆ
ಗುರಿ ಎಂದರೆ ಛಲ, ಛಲವಿದ್ದರೆ ಗೆಲುವು. ಅದೇ ಶ್ರೇಯಸ್ಸು, ಆದರೆ ಗುರಿಯನ್ನು ತಲುಪುವುದು ನೂರು ಸಗರಗಳನ್ನು ದಾಟಿದಂತೆ. ಎಷ್ಟೋ ಅಡೆತಡೆಗಳನ್ನು, ಸಂಕಷ್ಟಗಳನ್ನು ದಾಟಿದರೆ ಮಾತ್ರ ಗುರಿಯನ್ನು ತಲುಪಲು ಸಾಧ್ಯ. ಹೇಗೆ ಹನುಮಂತ ಸಪ್ತಸಾಗರವನ್ನು ದಾಟುವಾಗ ಹಿಂಸೆಯನ್ನು ನೀಡುತ್ತಿದ್ದ ರಾಕ್ಷಸರನ್ನು ನಿಗ್ರಹಿಸಿ ಸೀತೆಯನ್ನು ಕಂಡನೋ ಅಂತೆಯೇ.
ಜೀವನದಲ್ಲಿ ಗುರಿಯನ್ನಿಟ್ಟುಕೊಂಡು ಸಾಗುವವರು ಅತೀ ವಿರಳ. ಹಾಗೊಂದು ವೇಳೆ ಸಾಗಿದರೂ ಅದರಲ್ಲಿ ಗೆಲುವು ಅತೀ ವಿರಳ. ಹಾಗೊಂದು ವೇಳೆ ಸಾಗಿದರೂ ಅದರಲ್ಲಿ ಗೆಲುವು ಅತೀ ವಿರಳ. ಏಕೆಂದರೆ ಎಲ್ಲರನ್ನೂ ಛಲವೆಂಬುದಿರುವುದಿಲ್ಲ. ಛಲ ಇದ್ದವರಿಗೆ ಮಾತ್ರ ಗುರಿ ಮುಟ್ಟಲು ಸಾಧ್ಯ.
ಪ್ರಾರಂಭದಲ್ಲಿ ಕಾರಂಜಿಯ ಚಿಲುಮೆಯಂತೆ ಉತ್ಸಾಹ ಚಿಮ್ಮುತ್ತಿರುತ್ತದೆ. ಗುರಿ ಸಾಧನೆಗಾಗಿ ಹಲವು ಹೆಜ್ಜೆಗಳನ್ನು ಹಲವು ರೀತಿಯಲ್ಲಿ ಇಡಬೇಕಾಗುತ್ತದೆ. ಅಲ್ಲಿ ಎರಡು-ಮೂರು ಸಲ ಎಡವುದರಲ್ಲೇ ಕೆಲವರು ಹಿಂದೆ ಸರಿಯುತ್ತಾರೆ. ಆದರೆ ಕೆಲವರು ಮಾತ್ರ ಛಲವನ್ನು ಬಿಡದ ವಿಕ್ರಮನಂತೆ ಮುಂದಕ್ಕೆ ನುಗ್ಗುತ್ತಾರೆ. ಯಾರು ನುರು ಸಲ ಎಡವಿದರೂ ಲೆಕ್ಕಿಸದೆ ಮುನ್ನುಗ್ಗುತಾರೋ ಅವರು ಮಾತ್ರ ಇದರಲ್ಲಿ ಜಯವನ್ನು ಸಾಧಿಸುತ್ತಾರೆ. ಹೇಗೆ ಒಬ್ಬ ನುರಿತ ಚದುರಂಗ ಆಟಗಾರ ಹಲವು ನಿಪುಣರೊಂದಿಗೆ ಆಡಿ ಗೆಲುವನ್ನು ಸಾಧಿಸಿ ವಿಜಯೋತ್ಸವವನ್ನು ಆಚರಿಸುತ್ತಾನೋ ಹಾಗೆ.
ಇಂತಹವರು ತಮ್ಮ ಗುರಿ ಸಾಧಿಸುವ ಹಾದಿಯಲ್ಲಿ ಅನುಭವಿಸುವ ಸಂಕಷ್ಟಗಳಿಂದ ಒಬ್ಬ ನುರಿತ ತಜ್ಞನಾಗುತ್ತಾನೆ. ಆತ ಸಮಾಜದಲ್ಲಿ ಎಂತಹ ಸಂದರ್ಭ ಬಂದರೂ ಸುಧಾರಣೆ ತರುವಲ್ಲಿ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ತೆಗೆಯಲಾರ. ತನ್ನನ್ನು ತನ್ನ ಸುತ್ತಮುತ್ತಲಿನವರನ್ನು ಒಳ್ಳೆಯ ಹಾದಿಯಲ್ಲಿ ನಡೆಸುವ ಸಾಧಕನಾಗಿರುತ್ತಾನೆ. ಇದಕ್ಕೆ ತಕ್ಕ ಉದಾಹರಣೆ ಅಣ್ಣಾ ಹಜಾರೆ.