ವಿಷಯಕ್ಕೆ ಹೋಗು

ಸದಸ್ಯ:Shravana D N/sandbox1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಪಾಯ
ಪಪಾಯ ಮರ ಮತ್ತು ಹಣ್ಣು, from Koehler's Medicinal-Plants (1887)
Papaya cross section
Scientific classification e
Unrecognized taxon (fix): Carica
ಪ್ರಜಾತಿ:
C. papaya
Binomial name
Carica papaya

ಪಪ್ಪಾಯಿ ಹಣ್ಣು

ಪಪ್ಪಾಯಿ ಒಂದು ವಿಶಿಷ್ಟ ಹಣ್ಣು. ಇದರ ವೈಜ್ಞಾನಿಕ ಹೆಸರು carica papaya. ಮಲಯಾಳದಲ್ಲಿ ಪಪ್ಪಾಯಂ, ಕಪ್ಪಾಳಂ ಎಂದೂ ಕರೆಯಲ್ಪಡುತ್ತದೆ. ಈ ಗಿಡವು 6-7 ಅಡಿ ಎತ್ತರವಿದ್ದು ಯಾವುದೇ ರೆಂಬೆಗಳನ್ನು ಹೊಂದಿರುವುದಿಲ್ಲ. ಕಾಯಿಯು ಹಸಿರಾಗಿದ್ದು ಹಣ್ಣಾದಾಗ ಹಳದಿ ಬಣ್ಣಕ್ಕೆ ತಿರುಗುತ್ತದೆ.

ಪಪಾಯ ಹಣ್ಣು

ಹೆಣ್ಣು ಮತ್ತು ಗಂಡು ಹೂಗಳು ಒಂದೇ ಗಿಡದಲ್ಲಿ ಅಥವಾ ಬೇರೆ ಬೇರೆ ಗಿಡಗಳಲ್ಲಿ ಕಂಡುಬರುತ್ತದೆ. ಹಣ್ಣಿನ ತಿರುಳು ಹಳದಿ ಅಥವಾ ಕೆಂಪು ಮಿಶ್ರಿತ ಹಳದಿ ಬಣ್ಣವನ್ನು ಹೊಂದಿರುತ್ತದೆ. ಪಪ್ಪಾಯಿ ಹಣ್ಣು ಜೀರ್ಣಕಾರಿಯಾಗಿದ್ದು ಜೀರ್ಣಾಂಗದ ಅನೇಕ ತೊಂದರೆಗಳನ್ನು ನಿವಾರಿಸುತ್ತದೆ. ಇದರಲ್ಲಿ ವಿಟಮಿನ್‌ “ಎ’ ಅಧಿಕವಾಗಿರುವುದರಿಂದ ಪಪ್ಪಾಯಿ ಸೇವನೆಯು ಕಣ್ಣಿನ ಆರೋಗ್ಯಕ್ಕೆ ಸಹಕಾರಿ. ಮಲಬದ್ಧತೆಯಿಂದ ಬಳಲುವವರು ಪ್ರತಿದಿನ ಊಟದ ನಂತರ ಪಪ್ಪಾಯಿ ಸೇವನೆ ಮಾಡಬೇಕು. ಪಪ್ಪಾಯಿ ಕಾಯಿಯಿಂದ ಪಲ್ಯ, ಸಾಂಬಾರು, ತೆಂಗಿನ ಕಾಯಿಯೊಂದಿಗೆ ಮಜ್ಜಿಗೆ ಹುಳಿಯನ್ನೂ ತಯಾರಿಸಬಹುದು. ಪಪ್ಪಾಯಿಯಲ್ಲಿ ಪ್ರೋಟೀನು, ಕೊಬ್ಬು, ಸಸಾರಜನಕ, “ಸಿ’ ಅನ್ನಾಂಗ, “ಎ’ ಜೀವಸತ್ವ, ಫಾಸ್ಪರಸ್‌, ಕಬ್ಬಿಣ ಕಾಬೋì ಹೈಡ್ರೇಟ್‌, ನಿಯಾಸಿನ್‌ ಖನಿಜಾಂಶಗಳು ಹೇರಳವಾಗಿವೆ. ತಂಪಾದ ಈ ಹಣ್ಣು ತಿಂದೊಡನ ದೇಹದಲ್ಲಿ ಹೊಸ ಲವಲವಿಕೆ ಮೂಡುತ್ತದೆ. ಕರುಳು ಹಾಗೂ ಜೀರ್ಣಾಂಗಕ್ಕೆ ಸಂಬಂಧಿಸಿದ ಯಾವುದೇ ತೊಂದರೆಯನ್ನು ಇದು ನಿವಾರಿಸಬಲ್ಲುದು. ಗ್ಯಾಸ್ಟ್ರಿಟಿಸ್‌ ಸಮಸ್ಯೆಗಿದು ಸಿದೌœಷಧ. ಪಪ್ಪಾಯಿಯು ಅದ್ಭುತವಾದ ಬೊಜ್ಜು ನಿವಾರಕ! ನಮ್ಮ ದೇಹದ ಬೆಳವಣಿಗೆಗೆ ಕ್ಯಾಲ್ಸಿಯಂ, ಮೆಗ್ನೇಶಿಯಂ, ಕಬ್ಬಿಣಾಂಶ ಹಾಗೂ ಇತರ ಹಲವು ಬಗೆಯ ಅನ್ನಾಂಗಗಳ ಆವಶ್ಯಕತೆ ಇದೆ.

  1. "Carica papaya L."