ಸದಸ್ಯ:Shivaprasad1998/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬುಧ  

ಬುಧ ಸೂರ್ಯನಿಗೆ ಅತ್ಯಂತ ಸಮೀಪವಾದ ಮತ್ತು ಸೌರಮಂಡಲದಲ್ಲಿ ಅತಿ ಸಣ್ಣದಾದಗ್ರಹವಾದ ಬುಧವು ಸೂರ್ಯನ ಸುತ್ತ ಪ್ರತಿ ೮೮ ದಿನಗಳಿಗೊಮ್ಮೆ ಪ್ರದಕ್ಷಿಣೆ ಹಾಕುತ್ತದೆ. ಸಾಮೀಪ್ಯತೆಯ ಕಾರಣದಿಂದಾಗಿ ಸೂರ್ಯನ ಪ್ರಖರತೆಯು ಬುಧವನ್ನು ಸ್ಪಷ್ಟವಾಗಿ ಕಾಣದಿರುವಂತೆ ಮಾಡುತ್ತದೆ. ಬುಧದ ಗೋಚರ ಪ್ರಮಾಣವು −೨.೦ ರಿಂದ ೫.೫ ವರೆಗೆ ಇದ್ದರೂ, ನಸುಕಿನಲ್ಲಿ ಮಾತ್ರ ಇದನ್ನು ಬರಿಗಣ್ಣಿನಿಂದ್ದ ನೋಡಬಹುದು. ಬುಧಗ್ರಹದ ಬಗ್ಗೆ ಇದುವರೆಗೂ ಬಹಳಷ್ಟು ತಿಳಿದುಬಂದಿಲ್ಲ: ಬುಧವನ್ನು ಸಮೀಪಿಸಿದ ಒಂದೇ ಒಂದು ನೌಕೆಯೆಂದರೆ ೧೯೭೪ ಮತ್ತು ೧೯೭೫ ರಲ್ಲಿ ಬುಧದ ಮೇಲ್ಮೈನ ೪೦-೫೦% ಭಾಗದ ನಕ್ಷೆಯನ್ನು ತಯಾರಿಸಿದ ಮ್ಯಾರಿನರ್ ೧೦.

ಅಪ್ಪಳಿಕೆ ಕುಳಿಗಳಿರುವ ಕಾರಣ, ಬುಧವು ಹೊರಗಿನಿಂದ ನೋಡುವುದಕ್ಕೆ ನಮ್ಮ ಚಂದ್ರನಂತೆಯೇ ಇದೆ. ಬುಧಕ್ಕೆ ಯಾವುದೇ ನೈಸರ್ಗಿಕ ಉಪಗ್ರಹಗಳಿಲ್ಲ ಮತ್ತು ಗಮನಾರ್ಹವಾದ ವಾಯುಮಂಡಲವೂ ಇಲ್ಲ. ಈ ಗ್ರಹದ ಒಳಭಾಗದಲ್ಲಿ ಕಬ್ಬಿಣದ ದೊಡ್ಡದೊಂದು ವಲಯವಿದೆ. ಭೂಮಿಯ ಕಾಂತಕ್ಷೇತ್ರದ ೧%ರಷ್ಟು ಶಕ್ತಿಯುಳ್ಳ ಕಾಂತಕ್ಷೇತ್ರವನ್ನು ಈ ಕಬ್ಬಿಣದ ವಲಯವು ಬುಧದ ಮೇಲೆ ಉಂಟುಮಾಡುತ್ತದೆ. ಬುಧದ ಮೇಲ್ಮೈ ತಾಪಮಾನವು -೧೮೦ ರಿಂದ ೪೩೦°ಸೆ. ವ್ಯಾಪ್ತಿಯಲ್ಲಿರುತ್ತದೆ. ಸೂರ್ಯನಿಗೆ ನೇರವಾಗಿ ಕೆಳಗಿರುವ ಬಿಂದುವು ಅತ್ಯಂತ ಬಿಸಿಯಾಗಿರುತ್ತದೆ ಹಾಗೂ ಧ್ರುವಗಳ ಬಳಿಯಿರುವ ಕುಳಿಗಳ ಕೆಳಭಾಗಗಳು ಬೇರೆಲ್ಲೆಡೆಗಳಿಗಿಂತ ತಣ್ಣಗಿರುತ್ತವೆ.

ಪ್ರಾಚೀನ ರೋಮನ್ನರು ವೇಗವಾಗಿ ಚಲಿಸುವ ರೋಮನ್ ದೇವತೆಯಾದ ಮರ್ಕ್ಯೂರಿಯ ಆಧಾರದ ಮೇಲೆ ಈ ಗ್ರಹಕ್ಕೆ ಹೆಸರಿಟ್ಟರು (ಬಹುಶಃ ಬುಧವು ಸೂರ್ಯನ ಸುತ್ತ ವೇಗವಾಗಿ ಚಲಿಸುವ ಕಾರಣದಿಂದಾಗಿ). ಕ್ರಿ.ಪೂ. ೫ನೇ ಶತಮಾನಕ್ಕೆ ಮುನ್ನ ಗ್ರೀಕ್ ಖಗೋಳಶಾಸ್ತ್ರಜ್ಞರು ಬುಧವನ್ನು ಎರಡು ಪ್ರತ್ಯೇಕವಾದ ಕಾಯಗಳೆಂದು ನಂಬಿದ್ದರು. ಇವುಗಳಲ್ಲಿ ಒಂದು ಕಾಯವು ಸೂರ್ಯೋದಯದ ಹೊತ್ತಿನಲ್ಲಿ ಮಾತ್ರ ಕಾಣಿಸುತ್ತದೆ ಮತ್ತು ಇನ್ನೊಂದು ಸೂರ್ಯಾಸ್ತದ ಹೊತ್ತಿನಲ್ಲಿ ಮಾತ್ರ ಕಾಣಿಸುತ್ತದೆ ಎಂದು ಅವರ ನಂಬಿಕೆಯಾಗಿತ್ತು. ಭಾರತದಲ್ಲಿ ಈ ಗ್ರಹಕ್ಕೆ ಚಂದ್ರನ ಮಗನಾದ ಬುಧನ ಹೆಸರನ್ನು ಇಡಲಾಗಿದೆ. ಚೀನಾ, ಕೊರಿಯಾ, ಜಪಾನ್ ಮತ್ತು ವಿಯತ್‌ನಾಮ್ ಸಂಸ್ಕೃತಿಗಳಲ್ಲಿ ಬುಧವನ್ನು ಜಲ ನಕ್ಷತ್ರ ಎಂದು ಕರೆಯಲಾಗುತ್ತದೆ. ಪಂಚಭೂತಗಳ ಆಧಾರದ ಮೇಲೆ ಈ ಹೆಸರನ್ನು ಇಡಲಾಯಿತು ಎನ್ನಲಾಗಿದೆ. ಯೆಹೂದಿಗಳು ಇದನ್ನು ಬಿಸಿಕಾಯದ ನಕ್ಷತ್ರವೆಂದು ಕರೆದರು 

ಸೌರಮಂಡಲದಲ್ಲಿರುವ ೪ ಘನರೂಪಿ ಗ್ರಹಗಳಲ್ಲಿ ಬುಧವೂ ಒಂದು. ಅರ್ಥಾತ್: ಭೂಮಿಯಂತೆಯೇ ಬುಧವು ಶಿಲೆ/ಖನಿಜಗಳಿಂದ ರಚಿತವಾಗಿದೆ. ಸಮಭಾಜಕದಲ್ಲಿ ೪೮೭೯ಕಿ.ಮೀ. ವ್ಯಾಸವನ್ನು ಹೊಂದಿರುವ ಬುಧವು ಈ ೪ ಘನರೂಪಿಗಳಲ್ಲಿ ಅತಿ ಸಣ್ಣದಾಗಿದೆ. ಬುಧವು ೭೦% ಲೋಹ ಮತ್ತು ೩೦% ಸಿಲಿಕೇಟ್ ವಸ್ತುಗಳನ್ನು ಒಳಗೊಂಡಿದೆ. ಪ್ರತಿ ಘನ ಸೆಂ.ಮೀ. ಗೆ ೫.೪೩ ಗ್ರಾಂ ಪ್ರಮಾಣದಲ್ಲಿ ಬುಧವು ಸೌರಮಂಡಲದಲ್ಲಿ ಎರಡನೇ ಅತಿ ಹೆಚ್ಚು ಸಾಂದ್ರತೆಯನ್ನು ಹೊಂದಿರುವ ಗ್ರಹವಾಗಿದೆ. ಇದು ಭೂಮಿಯ ಸಾಂದ್ರತೆಗಿಂತ ಸ್ವಲ್ಪವೇ ಕಡಿಮೆಯಿದೆ. ಗುರುತ್ವ ಸಂಕ್ಷೇಪಣೆಗೆ ತಿದ್ದುಪಡಿ ಮಾಡಿದಾಗ ಬುಧವು ಭೂಮಿಗಿಂತ ಹೆಚ್ಚು ಸಾಂದ್ರತೆ ಹೊಂದಿರುವುದು ಕಂಡುಬರುತ್ತದೆ (ಬುಧದ ಅಸಂಕ್ಷೇಪಿತ ಸಾಂದ್ರತೆ: ೫.೩ಗ್ರಾಂ/ಪ್ರತಿ ಘನ ಸೆಂ.ಮೀ. ಮತ್ತು ಭೂಮಿಯ ಸಾಂದ್ರತೆ ೪.೪ಗ್ರಾಂ/ಪ್ರತಿ ಘನ ಸೆಂ.ಮೀ.