ಸದಸ್ಯ:Shivamallayya/ನನ್ನ ಪ್ರಯೋಗಪುಟ1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅತ್ತಿಮರ[ಬದಲಾಯಿಸಿ]

ವರ್ಣನೆ[ಬದಲಾಯಿಸಿ]

10-15 ಮೀಟರ್ ಎತ್ತರ ಬೆಳೆಯುವ ಸದಾ ಹಸಿರು ವೃಕ್ಷ, ಎಲೆ, ಕಾಯಿ, ಫಲ, ತೊಗಟೆಯಿಂದ ಹಳದೀ ವರ್ಣದ, ಅಂಟಾದ ಹಾಲು ಬರುವುದು, ಕಾಯಿ ಹಸಿರಾಗಿದ್ದು, ಗುಂಡಾಗಿರುವುದು. ಹಣ್ಣಾದಾಗ ಕೆಂಪು ಬಣ್ಣವನ್ನು ಹೊಂದುವುದು. ಹಣ್ಣು ಮೃದುವಾಗಿರುವುದು ಮತ್ತು ಪರಿಮಳವಿರುವುದು. ಹೋಳು ಮಾಡಿದಾಗ ಒಳಗಡೆ ಇರುವೆಗಳಿರುವುವು. ಇರುವೆಗಳ ಪರಾಗಸ್ಪರ್ಶದಲ್ಲಿ ನೆರವಾಗುವುವು. ಒಳಗಡೆ ಸಣ್ಣ ಬೀಜಗಳು ನೂರಾರು ಇರುವುವು. ರೆಂಬೆಗಳ ತುಂಬಾ ಮತ್ತು ಕಾಂಡದಲ್ಲಿ ಗೊಂಚಲು ಗೊಂಚಲಾಗಳಾಗಿ ಕಾಯಿ ಬಿಡುವುದು. ಬಹು ಪರಿಚಿತ ವೃಕ್ಷ ಮತ್ತು ಸಾಲು ಮರಗಳಾಗಿ ಮತ್ತು ಊರ ಗುಂಡು ತೋಪಿನಲ್ಲಿ ಬೆಳೆಸುತ್ತಾರೆ. ಕೋತಿಗಳು, ಅಳಿಲು, ಗಿಣಿ, ಮತ್ತು ಪಶುಪಕ್ಷಿಗಳಿಗೆ ಪ್ರಿಯವಾದ ಹಣ್ಣು ಮತ್ತು ಪುಷ್ಟಿದಾಯಕವೂ ಹೌದು.

               ===ಸರಳ ಚಿಕಿತ್ಸೆಗಳು===

ಬಟ್ಟಿ ಬೀಳುವುದು[ಬದಲಾಯಿಸಿ]

ಹೊಟ್ಟೆಯಲ್ಲಿ ಗಡಗಡ ಶಬ್ದ, ನೋವು ಮತ್ತು ನೀರಿನಂತೆ ಬೇದಿಯಾಗುತ್ತಿದ್ದರೆ ಈ ಉಪಚಾರದಿಂದ ಶಮನವಾಗುವುದು. ಅತ್ತಿಮರದ ಬುಡದ ಹಾಲನ್ನು ಹೊಕ್ಕಳಿನ ಸುತ್ತ ಲೇಪಿಸುವುದು ಮತ್ತು ಗುಂಡಾದ ಮಡಿಕೆಯ ಚೂರನ್ನು ಹೊಕ್ಕಳಿನ ಮೇಲೆ ಇಡುವುದು. ಅಂಟಾಗಿರುವ ಹಾಲಿನಲ್ಲಿ ಈ ಬಿಲ್ಲೆ ಚೆನ್ನಾಗಿ ಅಂಟಿಕೊಳ್ಳುವುದು. ಇದರ ಸುತ್ತ ಬುಡದಲ್ಲಿರುವ ನಯವಾದ ಮಣ್ಣನ್ನು ಹಾಕುವುದು ಮತ್ತು ಬಟ್ಟೆ ಕಟ್ಟುವುದು.

ಬಾಯಾರಿಕೆಯಿಂದ ಕೂಡಿದ ಬಹುಮೂತ್ರಕ್ಕೆ[ಬದಲಾಯಿಸಿ]

ಚೆನ್ನಾಗಿ ಪಕ್ವವಾದ, ಹುಳುಕಿಲ್ಲದ, ಒಂದು ಹಿಡಿ ಅತ್ತಿ ಹಣ್ಣುಗಳನ್ನು ಚೆನ್ನಾಗಿ ಒಣಗಿಸಿ, ನಯವಾದ ವಸ್ತ್ರಗಾಳಿತ ಚೂರ್ಣ ಮಾಡುವುದು. 1\2 ಟೀ ಚಮಚ ಚೂರ್ಣಕ್ಕೆ ಸ್ವಲ್ಪ ಜೇನು ಬೆರೆಸಿ ನೆಕ್ಕುವುದು. ದಿವಸಕ್ಕೆ ಎರಡು ವೇಳೆ ಸೇವಿಸುವುದು.

ಬೇಧಿಯಲ್ಲಿ[ಬದಲಾಯಿಸಿ]

ಅತ್ತಿಯ ಹಾಲನ್ನು ಸಕ್ಕರೆ ಪುಡಿ ಸಮೇತ ಸೇವಿಸುವುದು.

ಗಟ್ಟಿಯಾದ ಬಾವು[ಬದಲಾಯಿಸಿ]

ಅತ್ತಿ ಎಲೆಗಳ ರಸವನ್ನು ಹಿಂಡಿ, ಜವೆ ಗೋದಿ ಹಿಟ್ಟಿನಲ್ಲಿ ಚೆನ್ನಾಗಿ ಕಲೆಸಿ ಗಟ್ಟಿಯಾದ ಬಾವುಗಳಿಗೆ ಲೇಪಿಸಿ, ಬಟ್ಟೆ ವಾಸಿಯಾಗುವುದು. ಕೀವು ಸೋರುತ್ತಿರುವ ಭಾಗಗಳಿಗೆ ಲೇಪಿಸಿದರೆ ಶೀಘ್ರವಾಗಿ ಗುಣವಾಗುವುವು.

ಗಂಡಮಾಲೆ, ಕೆನ್ನೆ ಬೀಗು[ಬದಲಾಯಿಸಿ]

ಅತ್ತಿಮರದ ಕಾಂಡಕ್ಕೆ ಗಾಯ ಮಾಡುವುದು ಮತ್ತು ಸುರಿಯುವ ಹಾಲನ್ನು ಮಡಕೆ ಚೂರಿನಲ್ಲಿ ಶೇಖರಿಸಿ, ಕೆನ್ನೆ ಬೀಗಿರುವ ಕಡೆ ಲೇಪಿಸುವುದು ಅಥವಾ ಅತ್ತಿ ಮರದ ಬೇರನ್ನು ನೀರಿನಲ್ಲಿ ತೇದು ಸ್ವಲ್ಪ ಹಿಂಗು ಮತ್ತು ಹರಳೆಣ್ಣೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಲೇಪಿಸುವುದು.

ಮೊಲೆಯ ಮೇಲಿನ ಬಾವು ಮತ್ತು ಗಂಟು[ಬದಲಾಯಿಸಿ]

ಒಂದು ಹಿಡಿ ಅತ್ತಿಯ ಹಸಿರೆಲೆಗಳನ್ನು ತಂದು ಚೆನ್ನಾಗಿ ಜಜ್ಜಿ, ಬಟ್ಟೆಯಲ್ಲಿ ಸೋಸಿ, ಒಂದು ಟೀ ಚಮಚ ರಸವನ್ನು ಶೇಖರಿಸುವುದು, ಸ್ವಲ್ಪ ಜವೆಗೋದಿಯ ಹಿಟ್ಟಿಗೆ ಈ ರಸವನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ, ಮೊಲೆಯ ಬಾವಿಗೆ ಕಟ್ಟುವುದು.

ಸಕ್ಕರೆ ಕಾಯಿಲೆಯಲ್ಲಿ[ಬದಲಾಯಿಸಿ]

ಅತ್ತಿ ಮರದ ತೊಗಟೆಯನ್ನು ನೆರಳಲ್ಲಿ ಚೆನ್ನಾಗಿ ಒಣಗಿಸಿ ವಸ್ತ್ರಗಾಳಿತ ಚೂರ್ಣ ಮಾಡುವುದು, ಎರಡು ಟೀ ಚಮಚ ಪುಡಿಯನ್ನು ಮರಳುವ ನೀರಿಗೆ ಹಾಕಿ, ಕಷಾಯ ಮಾಡುವುದು. ಆರಿದ ಕಷಾಯವನ್ನು ವೇಳೆಗೆ ಎರಡು ಟೀ ಚಮಚದಂತೆ ಬೆಳಿಗ್ಗೆ ಸಾಯಂಕಾಲ ಸೇವಿಸುವುದು.