ಸದಸ್ಯ:Shindu alex/sandbox
ಭೂ-ನೋಂದಣಿ 19ನೆ ಶತಮಾನದ ಉತ್ತರಾರ್ಧದಲ್ಲಿ ದಕ್ಷಿಣ ಭಾರತದ ಸಮಗ್ರ ರಾಜಕೀಯ ಅಧಿಕಾರವನ್ನು ಪಡೆದ ಬ್ರಿಟಿಷ್ ಸರಕಾರವು ಪರಂಪರೆಯಿಂದ ಅನುಭವಿಸಿಕೊಂಡು ಬಂದ ಭೂ ಹಿಡುವಳಿದಾರರಿಗೆ ಭೂಮಿಯ ಹಕ್ಕನ್ನು ದಾಖಲೆ ಸಹಿತ ನೀಡಿ ನಿರ್ದಿಷ್ಟ ಕಂದಾಯವನ್ನು ನಿಗದಿಗೊಳಿಸಿದೆ. ಈ ಭೂಕಂದಾಯವು ಆ ಭೂ ಪ್ರದೆಶದ ಬೆಳೆಯ ಸಂಖ್ಯೆ ಮತ್ತು ಮಣ್ಣಿನ ಮತ್ತು ಆ ಸ್ಥಳದಲ್ಲಿರುವ ಇತರ ಸ್ಥಿರ ಸ್ವತ್ತುಗಳಾದ ಮರಮಟ್ಟಗಳು ಮತ್ತು ಕಟ್ಟಡಗಳನ್ನು ಅವಲಂಬಿಸಿಕೊಂಡಿತು. ತನಗೆ ಇಷ್ಟ ಬಂದ ಖಾಯಂ ಸುಧಾರರಿಗೆ ಆ ಭೂಮಿಯನ್ನು ನಿರ್ದಿಷ್ಟ ಬೆಲೆಗೆ ನಿರ್ದಿಷ್ಟ ಸರಕಾರ ಶುಲ್ಕ ಹೊಂದಿದೆ. ವಿಕ್ರಯಿಸುವ ಹಕ್ಕನ್ನು ಭೂಮಿಯ ಹಕ್ಕದಾರನಿಗೆ ನೀಡಿ ಅದನ್ನು ನೋಂದಣಿ ಕಛೇರಿಯ ಮೂಲಕ ನೋಂದಾಯಿಸುವ ವ್ಯವಸ್ಥೆಯನ್ನು ಚಾಲ್ತಿಗೆ ತಂದರು. ಆಳುವ ಸರಕಾರ ವಿಧಿಸಿದ ಕಂದಾಯವನ್ನು ಕೊಡಲು ಸಿದ್ದನಿದ್ದ ಕೃಷಿ ನಿರ್ವಾಹಣೆಯನ್ನು ಮುನ್ನಡೆಸುವ ಸಮರ್ತ ಸಿದ್ಧ ದೇಶಿಯರಿಗೆ ಭೂಮಿಯ ಹಕ್ಕನ್ನು ಆಳುವ ಸರಕಾರ ಲಾಗಾಯ್ತಿನಿಂದ ನೀಡುತ್ತ ಬಂದಿದೆ. ಸರಕಾರಿ ಕೆಲಸಗಳಲ್ಲಿ ಜನೋಪಯೋಗಿ ಕೆಲಸಗಳನ್ನು ಭಾಗಿದಾರರಾದವರಿಗೆ ಉಚಿತವಾಗಿ ಭೂಮಿಯನ್ನು ನೀಡಿ ಆ ಭೂಮಿಯನ್ನು ನೀಡಲು ಕಾರಣವಾದ ಅಂಶಗಳನ್ನು ಕಲ್ಲಿನ ಮೇಲೆ ಕೆತ್ತಿಸಿ ಅದನ್ನು ಅದೇ ಭೂಪ್ರದೇಶದಲ್ಲಿ ಇಲ್ಲವೇ, ಸಾರ್ವಜನಿಕ ಸ್ಥಳಗಳಾದ ದೇವಸ್ಥಾನ, ಗ್ರಾಮಕಟ್ಟೆಗಳಲ್ಲಿ, ಪ್ರತಿಷ್ಠಪಿಸುತಿದ್ದುದು. ಇದನ್ನು ಶಾಸನ ಎಂದು ಕರೆಯುತ್ತಿದ್ದರು.