ಸದಸ್ಯ:Shashwatiharish

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Shashwati HarishUploaded On: 14th January 2016

ಕುಂಟುಂಬ[ಬದಲಾಯಿಸಿ]

ನನ್ನ ಹೆಸರು ಶಾಶ್ವತಿ. ನಾನು ಬೆಂಗಳೂರಿನವಳು. ಹುಟ್ತಿದ್ದೂ, ಬೆಳದಿದ್ದೂ, ಓದಿದ್ದು ಬೆಂಗಳೂರಿನ್ನಲ್ಲಿಯೇ. ನಾನು ನನ್ನ ಕುಟುಂಬದ ಜೊತೆಗೆ ಇಲ್ಲಿ ವಾಸಿಸುತಿದ್ದೀನಿ. ನನ್ನ ತಂದೆ, ತಾಯಿ ಹಾಗು ತಮ್ಮ ನನ್ನ ಕುಟುಂಬ. ನನ್ನ ತಂದೆಯ ಹೆಸರು ಹರೀಶ. ನನ್ನ ತಂದೆ ನನಗೆ ತುಂಬಾ ಪ್ರಿಯರಾದ್ದವರು. ಅವರು ಹೆಚ್.ಎ.ಎಲ್. ನಲ್ಲಿ ಕೆಲಸ ಮಾಡುತ್ತಿದ್ದರೆ. ಅವರು ನನ್ನ ಪಾಲಿಗೆ ಒಂದು ಬಹಳ ದೊಡ್ದ ವ್ಯಕ್ತಿ. ಅವರು ಏನೇ ಮಾಡಲಿ ಅಥವಾ ಜೀವನದಲ್ಲಿ ಏನೇ ಆಗಲಿ ಬಹಳ ಶಾಂತಿಯಿಂದ ಕಾರ್ಯವನ್ನು ನಿರ್ವಹಿಸುತ್ತಾರೆ. ನನ್ನ ತಾಯಿಯ ಹೆಸರು ವೀಣಾ. ಆಕೆ ಒಂದು ದೂಡ್ದ ನಿಸ್ವಾರ್ಥಿ. ಅವಳು ನನಗೆ ಒಂದು ಅತಿ ದೂಡ್ದ ಮಾರ್ಗದರ್ಶಿ. ಆಕೆ ಬಹಳ ಬುದ್ಧಿವಂತಳು.ಅವರು ವಿಜ್ನಾನ ಹಾಗು ಗಣಿತವನ್ನು ಹೇಳಿಕೊಡುತ್ತಾರೆ. ನನ್ನ ತಮ್ಮ ಈ ಮನೆಯ ಆದರ್ಶ. ಅವನ ಹೆಸರು ತೇಜಸ್. ಅವನು ಬಹಳ ತಲಹರಟೆ ಮಾಡುತ್ತಾನೆ. ಅವನು ನನ್ನನ್ನು ಬಹು ಬಾರಿ ನೊಂದಿಸಿದರೂ ಅವನು, ನನಗೆ ಸದಾ ಕಾಲ ಪ್ರಿಯನಾಗಿರುತ್ತಾನೆ. ನನ್ನ ಕುಟುಂಬ ಸದಾ ಕಾಲ ನನ್ನೂಂದಿಗೆ ಮಳೆ, ಬಿಸಿಲು, ಚಳಿಗಾಲದಲ್ಲಿ ಸ್ಥಿರವಾದ ಕಂಭದ ತರಹ ನಿಂತಿದೆ. ನಾನು ಇವತ್ತು ಈ ಮಟ್ಟಿಗೆ ಬೆಳದ ಕಾರಣವೇ ನನ್ನ ಕುಟುಂಬ.

ಬಾಲ್ಯ[ಬದಲಾಯಿಸಿ]

ನನ್ನ ಬಾಲ್ಯ ದಿವಸಗಳಾಗಲಿ ಅಥವಾ ಶಾಲಾ ದಿವಸಗಳಾಗಲಿ ನನ್ನನ್ನು ಆರ್ಕಷಿಸಲಿಲ್ಲ. ಯಾಕೆಂದರೆ ಶಾಲೆಯಲ್ಲಿ ಒಂದು ಮಗುವಿಗೆ ಎಲ್ಲ ವಿಷಯಗಳನ್ನು ಓದ ಬೇಕು ಎಂಬ ನಿಯಮ ಇರುತ್ತದೆ. ನನಗೆ ಸಮಾಜ ಶಾಸ್ತ್ರ ಬಿಟ್ಟು ಬೇರೆ ಯಾವುದೇಆದ ವಿಷಯ ತಲೆಗೆ ಹತ್ತಲಿಲ್ಲ. ನಾನಗೆ ಪ್ರತಿಬಾರಿ ಲೆಕ್ಕದಲ್ಲಿ ಹಾನಗು ವಿಜ್ನಾನದ್ಲ್ಲಿ ಕಮ್ಮಿ ಅಂಕ ದೊರೆಯುತ್ತಿತ್ತು. ನನ್ನ ಸಹಪಾಠಿಗಳೆಲ್ಲಾ ನನ್ನನ್ನು ದಡ್ದಿ ಎಂದು ಹೇಳಿ ಗೇಲಿ ಮಾದಡುತ್ತಿದ್ದರು. ಯಾರು ನನ್ನೂಂದಿಗೆ ಮಾತನಾಡಿಸುತ್ತಿರಲ್ಲಿಲ್ಲ. ಆದ್ದರಿಂದ ನಾನು ಕೆಟ್ಟ ಸಂಗದಲ್ಲಿ ಬೆಳೆದೆರೆ ನಾನು ಹಾಗೆ ಆಗುವೆನು ಅಂಥ ಅರ್ಥ ಮಾದಡಿಕೂಂಡು, ಎಲ್ಲರನ್ನು ಮೆಚ್ಚಿಸುವ ಪ್ರಯತ್ನವನ್ನು ನಿಲ್ಲಿಸಿ, ಸದಾ ಕಾಲ ನಾನು ಒಂಟಿಯಾಗಿ ಕುಳಿತಿರುತ್ತಿದ್ದೆ. ನನಗೆ ಎಂದು ನನಗೆ ಸ್ನೇಹಿತರು ಇಲ್ಲವೆಂಬ ಬೇಸರವಾಗಲ್ಲಿಲ್ಲ. ಯಾಕೆಂದರೆ ನಿಜವಾದ ಸ್ನೇಹಿತರು ನಾವು ಹೇಗೆ ಇರುತ್ತೇವೋ ನಮ್ಮನು ಹಾಗೆಯೇ ಸ್ವೀಕರಿಸುತ್ತಾರೆ, ವಿನಾಕಾರಣ ನಮ್ಮ ಕಷ್ಟಗಳ ಬಗ್ಗೆ ಗೇಲಿ ಮಾಡುವುದ್ದಿಲ್ಲಾ. ನಾನು ನನಗೆ ಸಹಿಯಾದ ಸ್ನೇಹಿತರು ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ, ಸುಮ್ಮನಾಗಿಬಿಟ್ಟೆ. ಶಾಲಾ ದಿವಸಗಳು ಮುಗಿದ ದಿನ ನನಗೆ ಬಹಳ ಆನಂದವಾಯಿತು. ಪಿ.ಯು.ಸಿ'ಯ ದಿನಗಳು ನನ್ನ ಪ್ರಕಾರ ನನ್ನ ಜೀವನದ ಅತ್ಯುತ್ತಮ ದಿನಗಳು. ನನಗೆ ಮುತ್ತಿನಂತಹ ಗೆಳೆಯರು ಸಿಕ್ಕಿದರು. ಅವರಿಲ್ಲದೆ ನನ್ನ ಜೀವನವನ್ನು ಕಲ್ಪಿಸಿಕೊಳ್ಳಲು ಸಾದ್ಯವೇ ಇಲ್ಲ.

ಶಾಲಾ ನಂತರ[ಬದಲಾಯಿಸಿ]

ನಾನು ನನ್ನ ಪಿ.ಯು.ಸಿ ಯನ್ನು ಕ್ರಿಸ್ತ ಜೂನಿಯರ್ ಕಾಲೇಜು" ನಲ್ಲಿ ಓದಿದೆನು. ಈ ಸಂಸ್ಥಯು ನನ್ನ ಭವಿಷವನ್ನು ರೂಪಿಸಿತು. ಆ ಕಾಲೇಜಿನ ಶಿಕ್ಷಕರು ಅದ್ಭುತವಾದ ರೀತಿಯಲ್ಲಿ ನನಗೆ ಪಾಠವನ್ನು ಮಾಡಿದರು.ಅವರು ಪಾಠವನ್ನು ಮಾತ್ರ ಅಲ್ಲ ನಮ್ಮಲ್ಲಿ ಜ್ನಾನವನ್ನು ಕೂಡ ಮಹತ್ವಪೂರ್ಣವಾಗಿ ತುಂಬಿದರು. ನನಗೆ ಮನೋವಿಜ್ನಾನದಲ್ಲಿ ಬಹಳ ಆಸಕ್ತಿ ಇದ್ದ ಕಾರಣ, ಶಿಕ್ಷಕರ ಸಹಾಯದಿಂದ ಒಂದು ಪುಟ್ಟ ಸಂಶೋಧನೆಯನ್ನು ನೆಡೆಸಿದೆ. ಆ ಎರಡು ವರ್ಷಗಳು ನನ್ನನ್ನು ಹೊರಗಡೆ ಇರುವ ಜಗತ್ತಿನ ಮುಖಾಂತರವನ್ನು ಮಾಡಲು ಸಿದ್ಧಗಳಿಸಿತು. ಇಂದು ನಾನು ನನಗೆ ನನ್ನ ಪ್ರಿಯವಾದ ವಿಷಯಗಳನ್ನು ಓದುತ್ತಿದ್ದೇನೆ. ನಾನು ಕ್ರಿಸ್ತ ವಿಶ್ವವಿದ್ಯಾಲಯದಲ್ಲಿ ಮನೋವಿಜ್ನಾನ, ಸಮಾಜ ಶಾಸ್ತ ಹಾಗು ಸಾಹಿತ್ಯವನ್ನು ಓದುತ್ತಿದ್ದೇನೆ. ನನಗೆ ಮನೋವಿಜ್ನಾನದಲ್ಲಿ ಬಹಳ ಆಸಕ್ತಿ ಇದೆ. ನಾನು ಜೀವನದಲ್ಲಿ ಮನೋವ್ಜ್ನಾನಿ ಆಗಬೇಕೆಂದು ಬಯಸಿದ್ದೇನೆ. ಜನರ ಮನಸ್ಸಿನ ಹಿತ ಹಾಗು ಅವರ ಮಾನಸಿಕ ಸಂತಲನ ಅವರ ಜೀವನದ ಮೇಲೆ ಬಹಳ ದೊಡ್ಡ ಪರಿಣಾಮ ಬೀರುತ್ತದೆ. ಆದ್ದರಿಂದ ಸ್ಥಿರವಿಲ್ಲದ ಮನಸ್ಸುಗಳನ್ನು ಧ್ರುಢ ಮಾಡಲು ಬಯಸುತ್ತೇನೆ. ನನಗೆ ಜೀವನದಲ್ಲಿ ಹಣದ ಮೇಲೆ ಯಾವುದೇ ಆಸಕ್ತಿಯು ಇಲ್ಲ. ಜನರ ಮೂಲ ಖುಶಿಯೇ ನನ್ನ ಜೀವನದ ಗುರಿ. ನನ್ನ ಸುತ್ತ ಮುತ್ತಿನ ಜನರು ಸಂತಸದಿಂದ ಇದ್ದರೆ ನಾನು ಕೂಡ ನನ್ನ ಜೀವನವನ್ನು ಆನಂದದಿಂದ ಬಾಳುವೆನು.

ಹವ್ಯಾಸ[ಬದಲಾಯಿಸಿ]

ನನಗೆ ಪ್ರಯಾಣವೆಂದರೆ ಬಹಳ ಇಷ್ಟ.ನನ್ನ ಜೀವನದ ಅತ್ಯಂತ ನೆನಪು-ಭರಿತ ಪ್ರಯಾಣ ಕಾಲೇಜಿನ ಮೂಲಕ ಶ್ರೀರಂಗಪಟ್ಟಣ ಹಾಗು ಟ್ಟಿಪ್ಪುವಿನ ಅರಮನೆಗೆ ಹೋಗಿದ್ದ ಪಯಣ. ಆ ಪ್ರಯಾಣದಲ್ಲಿ ಸ್ನೇಹಿತರ ಜೊತೆಗೆ ಮೆರೆದಾಡ್ಡಿದ್ದಲ್ಲದೆ ನಾನು ಟ್ಟಿಪ್ಪುವಿನ ಅರಮನೆಯನ್ನು ನೋಡಿ ಬಹಳಷ್ಟು ಕಲಿತೆ. ನನ್ನ ಪ್ರಕಾರ ದೇಶದ ಎಲ್ಲಾ ಯುವಕರಿಗೆ ತಮ್ಮ ತಮ್ಮ ರಾಜ್ಯದ ಹಾಗು ದೇಶದ ಇತಿಹಾಸವನ್ನು ತಿಳಿದಿರ ಬೇಕು. ನನಗೆ ಪ್ರಯಾಣದ ಜೊತೆಗೆ ಸಂಗೀತವೆಂದರೆ ಪಂಚಪ್ರಾಣ. ನಾನಗೆ ಶಾಸ್ತ್ರೀಯ ಸಂಗೀತದಲ್ಲಿ ಬಹಳ ಆಸಕ್ತಿ ಇದೆ. ನಾನು ಒಬ್ಬ ಒಳ್ಳೆಯ ಗಾಯಕಿಯಾಗ ಬೇಕು ಎಂಬ ಬಹಳ ಆಸೆ ಇದೆ. ನಾನು ಕಛೇರಿ ಕೊಡಲು ಬಯಸುವುದ್ದಿಲ್ಲ, ಆದರೆ ನನ್ನ ಮನಃಭರಿತಕ್ಕೆ, ನನ್ನ ತ್ರುಪ್ತಿಗಾಗಿ ಹಾಡುವ ಆಸೆಯು ನನಗೆ ಇದೆ. ಆ ಆಸೆಯ ಕಡೆಗೆ ನಾನು ಪಯಣಿಸುತ್ತಿದ್ದೇನೆ. ನಾನು ನಿರಂತರವಾನಗಿ ಸಂಗೀತ ಪಾಠವನ್ನು ಮಾದುಬವೆನು ಎಂಬ ಸಂಕಲ್ಪ ಮಾಡಿದ್ದೀನಿ.ಬರಿಯುವುದು ಕೂಡ ನನಗೆ ಬಹಲ ಇಷ್ಟ. ನಾವು ಮಾತಿನಲ್ಲಿ ಏನು ಹೇಳಬಲ್ಲೆವೊ ಅದನ್ನು ಲೇಖನದಲ್ಲಿ ಬರೆಯಲು ಸಾಧ್ಯ. ಆದ್ದರಿಂದ ನನಗೆ ಜೀವನದ ಅನುಭವಗಳ ಬಗ್ಗೆ ಬರೆಯಲು ಬಹಳ ಇಷ್ಟ.

ನಾನು ನನ್ನ ಜೀವನದಲ್ಲಿ ಮನೋವಿಜ್ನಾನಿ ಆಗ ಬೇಕೆಂಬ ಆಸೆ ಇದೆ. ಅದರಿಂದ ಬೇರೆಯವರ ಸಹಾಯವಾಗ ಬಹುದು ಎಂಬ ನಂಬಿಕೆ ನನ್ನಲ್ಲಿದೆ. ನಾನು ಬದುಕಿರುವವರೆಗೂ ಬೇರೆಯಬವರ ಸಹಾಯವನ್ನು ಮಾಡಬೇಕೆಂದು ನಾನು ನಿರ್ಧರಿಸಿದ್ದೇನೆ. ಇದೇ ನನ್ನ ಜೀವನದ ಗುರಿ.

This user is a member of WikiProject Education in India

ಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Shashwatiharish