ಸದಸ್ಯ:Sharon jansi
ನನ್ನ ಕಥೆ
ಜನನ ಹಾಗು ಬಾಲ್ಯ
ನನ್ನ ಹೆಸರು ಶಾರೋನ್ ನಾನು 2001ನೇ ಇಸವಿ ಸಪ್ಟೆಂಬರ್ ತಿoಗಳಿನಲ್ಲಿ ಸಂತ ಫಿಲೋಮಿನಾಸ್ ಆಸ್ಪತ್ರೆಯಲ್ಲಿ ಜನಿಸಿದ್ದು. ನನ್ನ ತಂದೆ ತಾಯಿ ಇಬ್ಬರು ಉದ್ಯೋಗ ಮಾಡುತಿದ್ದ ಕಾರಣ,
ಬೆಂಗಳೂರಿನ ಅರಿಕೆರೆಯಲ್ಲಿ ಮೂರು ವರ್ಷಗಳ ಕಾಲ ನಮ್ಮ ಅಜ್ಜಿ ಮತ್ತು ಅತ್ತೆ ಮಾವನವರ ಆಶ್ರಯದಲ್ಲಿ ಬೆಳೆಯುತ್ತಿರುತ್ತೇನೆ. ಮೂರು ವರ್ಷದ ನಂತರ ಆಟದ ಶಾಲೆಗೆ ಸೇರಿರುತ್ತೇನೆ. ಆರು ವರ್ಷಗಳ ನಂತರ ನನ್ನ ತಂದೆ ತಾಯಿಯ ಆಶ್ರಯದಲ್ಲಿ ಬೆಂಗಳೂರಿನ ಬನ್ನೇರ್ಘಟ್ಟ ಮುಖ್ಯ ರಸ್ತೆಯ ಹುಳಿಮಾವಿನಲ್ಲಿ
ವಾಸವಾಗಿದ್ದೇನೆ.ನನ್ನ ತಂದೆಯ ಹೆಸರು ಧನವಂತ್ ಕುಮಾರ್ ತಾಯಿಯ ಹೆಸರು ಜಾನ್ಸಿ.ನನ್ನ ತಂದೆ ರಿಯಲ್ ಎಸ್ಟೇಟ್ ಉದ್ಯೋಗ ಮಾಡುತ್ತಿದ್ದಾರೆ. ಈಗ ನನ್ನ ತಾಯಿ ಮನೆಯಲ್ಲಿ ನಮ್ಮ ಹಾರೈಕೆ ಮಾಡುತ್ತಿದ್ದಾರೆ.ನನ್ನ ತಂಗಿಯ ಹೆಸರು ಸಿoತ್ಯಾ. ನಾನು ಚೆಕ್ಕ ವಯಸ್ಸಿನಲ್ಲಿ ತಂಗಿಯ ಜೊತೆ ಆಟವಾಡುತ್ತಾ,ಓದುತ್ತಾ,ಜಗಳವಾಡುತ್ತಾ ಬೆಳೆದೆವು.ಈಗ ಅವಳು ಕಾರ್ಮೆಲ್ ಕಾನ್ವೆಂಟ್ನಲ್ಲಿ ಒoಬತ್ತನೇಯ ತರಗತಿಯಲ್ಲಿ ವ್ಯಾಸಂಗ ಮಾಡುತಿದ್ದಾಳೆ.
ಶಾಲೆಯ ದಿನಗಳು..
ನಾನು ಜಯನಗರದಲ್ಲಿ ಇರುವ ಕಾರ್ಮೆಲ್ ಕಾನ್ವೆಂಟ್ ಶಾಲೆಯಲ್ಲಿ ಯು.ಕೆ.ಜಿ ಇಂದ ದ್ವಿತೀಯ ಪಿಯುಸಿ ವರೆಗೂ ವ್ಯಾಸಂಗ ಮುಗಿಸಿದ್ದೇನೆ. ಚಿತ್ರ ಬಿಡಿಸುವುದು ನನಗೆ ತುಂಬಾ ಇಷ್ಟ.ಹಾಡು ಹಾಡುವುದು ಹಾಗು ಪುಸ್ತಕ ಓದುವುದು ನನ್ ಹವ್ಯಾಸಗಳು.ನಾನು ಮೂರನೇ ತರಗತಿಯಲ್ಲಿ ಓದುತ್ತಿದ್ದಾಗ ಕಥೆ ಹೇಳುವ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದು ನನ್ನ ತಾಯಿಗೆ ಸಂತೋಷ ಪಡಿಸಿರುತ್ತೇನೆ. ಓದುವುದರಲ್ಲೂ
ಶಾಲೆಯ ವಿವಿಧ ಚಟುವಟಿಕೆಯಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಗಳಿಸಿದ್ದೇನೆ. ಶಾಲೆ ಶುದ್ಧ ಮಾಡುವುದರಲ್ಲೂ ನನಗೆ ಆಸಕ್ತಿ ಇತ್ತು ಇದರಿಂದ ಶಾಲೆಯ ಎಲ್ಲಾ ಶಿಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದೆ. ಶಾಲೆಯಲ್ಲಿ ನನ್ನ ಗೆಳತಿಯರೊಂದಿಗೆ ಆಡಿದ ಆಟಗಳು ಮತ್ತು ಗೆಳೆತನವನ್ನು ಮರೆಯಲು ಸಾಧ್ಯವಿಲ್ಲ.ನಾನು ಚಿಕ್ಕಂದಿನಿಂದಲೂ ಯಾವುದೇ ಮನೆ ಪಾಠಕ್ಕೆ ಹೋಗದೆ ನನ್ನ ಸ್ವಂತ ಜ್ಞಾನದಿಂದಲೇ ಓದಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ವ್ಯತ್ಯಾಸ ಅಂಕ ಪಡೆದಿದ್ದೇನೆ.
ಪ್ರಸ್ತುತ ಹಾಗು ಮುಂದಿನ ವ್ಯಾಸಂಗ
ನಾನು ಓದಿದ ಶಾಲೆ ಪ್ರಥಿಷ್ಟಿತವಾಗಿತ್ತು, ಈಗ ಪ್ರಸ್ತುತ ಓದುತ್ತಿರುವ ಕ್ರೈಸ್ಟ್ ಯೂನಿವರ್ಸಿಟಿಯೂ ಸಹ ಒಂದು ಪ್ರತಿಷ್ಠಿತ ಸಂಸ್ಥೆ ಯಾಗಿರುವುದು ಹೆಮ್ಮೆಯ ವಿಷಯವಾಗಿದೆ. ಈ ನಮ್ಮ ಸಂಸ್ಥೆಯಲ್ಲಿ ಗ್ರಂಥಾಲಯ, ಕ್ರೀಡಾಂಗಣ, ಉಪಹಾರ ಕೇಂದ್ರ ಇತರ ಎಲ್ಲಾ ವಿಧವಾದ ಸೌಕರ್ಯಗಳು ಇರುವುದರಿಂದ ನಾವು ಚೆನ್ನಾಗಿ ಕಲಿಯಲು ಮತ್ತು ಬೇರೆ ಎಲ್ಲಾ ಚಟುವಟಿಕೆಯಲ್ಲಿ ಬೆಳೆಯಲು ಸಾಧ್ಯವಾಗುತ್ತಿದೆ.ನಾನು ಈಗ ಬಿಕಾಂ ಪದವಿಯಲ್ಲಿ ವ್ಯಾಸಂಗ ಮಾಡುತಿದ್ದೇನೆ ಮತ್ತು ಓದುತ್ತಿರುವ ಎಲ್ಲಾ ವಿಷಯಗಳಲ್ಲಿ ಶತ ಪ್ರತಿಶತ ಅಂಕಗಳನ್ನು ಪಡೆಯುವುದು ಹಾಗು ಇತರ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ನಮ್ಮ ವಿಶ್ವವಿದ್ಯಾಲಯದ ಕೀರ್ತಿಯನ್ನು ಹೆಚ್ಚಿಸುವುದು ನನ್ನ ಹೆಬ್ಬಯಕೆಯಾಗಿದೆ.
ನಾನು ಬಿಕಾಂ ನಂತರ ಎಂಬಿಎ ಪದವಿಯನ್ನು ಮುಗಿಸಿ ಒಳ್ಳೆ ಕಂಪನಿಯಲ್ಲಿ ವ್ಯವಸ್ಥಾಪಕ ಉದ್ಯೋಗವನ್ನು ಮಾಡವ ಗುರಿಯನ್ನು ಹೊಂದ್ದಿದ್ದೇನೆ. ನಾನು ನನ್ ತಂದೆ ತಾಯಿಯನ್ನು ಚನ್ನಾಗಿ ಸಾಕಿ ಸಮಾಜದಲ್ಲಿ ಒಳ್ಳೆ ನಾಗರಿಕಳಾಗಿ
ಸಮಾಜ ಸೇವೆಯನ್ನು ಮಾಡಲು ಸಹ ಬಯಸುತ್ತೇನೆ.