ಸದಸ್ಯ:Sharon P Varghese/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
CRISIL House Hiranandani Powai

ಕ್ರಿಸಿಲ್

ಸಂಕ್ಷೇಪಣ[ಬದಲಾಯಿಸಿ]

ಕ್ರಿಸಿಲ್ ಎಂದು ಸಂಕ್ಷಿಪ್ತವಾಗಿ ಕ್ರೆಡಿಟ್ ರೇಟಿಂಗ್ ಇನ್ಫೊಮೇಷನ್ ಸರ್ವಿಸಸ್ ಆಫ್ ಇಂಡಿಯ ಲಿಮಿಟೆಡ್ ಎಂದು ಕರೆಯುತ್ತಾರೆ.

ಇತಿಹಾಸ[ಬದಲಾಯಿಸಿ]

ಕ್ರಿಸಿಲ್ ಭಾರತದ ಪ್ರಮುಖ ರೇಟಿಂಗ್,ಆರ್ಥಿಕ ಸುದ್ದಿ,ಅಪಾಯ ಮತ್ತು ನೀತಿ ಸಲಹೆ ಕೊಡುವ ಸಂಸ್ಥೆಯಾಗಿದೆ.೧೯೮೭ ಕ್ರಿಸಿಲ್ ಸಂಘಟಿತರಾದುದರಿಂದ,ಭಾರತದ ಅಭಿವ್ರುಯಲ್ಲಿ ಒಂದು ಮುಖ್ಯ ಪಾತ್ರವನ್ನು ವಹಿಸುತ್ತಿದೆ.ಕ್ರಿಸಿಲಿನ ಬಹುದೇಕ ಷೇರ್ ಸಂಪಾದಕರು ಸ್ಟಾನ್ಡೇಟ್ಸ್ ಆಂಡ್ ಪುವರ್ಸ್(Standards and Poor's) ಆಗಿದ್ದಾರೆ.ಇದರ ಮುಖ್ಯ ಕಚೇರಿ ಮುಂಬೈನಲ್ಲಿ ಸ್ಥಾಪಿತಗೊಂಡಿವೆ.ಎನ್.ವಗುಲ್ರವರು ಕ್ರಿಸಿಲಿನ ಮೊದಲ ಅಧ್ಯಕ್ಷರಾದರು ಮತ್ತು ಪ್ರದೀಪ್ ಶಾಃ ರವರು ವ್ಯವಸ್ಥಾಪಕ ನಿರ್ದೇಶಕರಾದರು.ಕ್ರಿಸಿಲಿನ ಸಂಚಿತ ಸಾಲ ಸುಮಾರು ೭.೮ ಮಿಲ್ಲಿಯನ್ ರೂಪಾಯಿಗಳೆಂದು ಹೇಳಲಾಗಿದೆ.ಅರವತ್ತು ಶತಮಾನದಷ್ಟು ಷೇರ್ ಇರುವ ಇವರು ಭಾರತದ ರೇಟಿಂಗ್ ಸಂಸ್ಥೆಗಳ ನಾಯಕನೆಂದು ಕರೆಯಲಾಗಿದೆ.

ಸೇವೆಗಳು[ಬದಲಾಯಿಸಿ]

ಕ್ರೆಡಿಟ್ ರೇಟಿಂಗ್,ಸೂಚ್ಯಂಕಗಳು,ಅಪಾಯ ಮೌಲ್ಯಮಾಪನ,ಹೂಡಿಕೆ ಸಂಶೋಧನೆ ಮತ್ತು ಡೇಟಾ ಹಾಗೂ ಮುಂತಾದ ಸೇವೆಗಳನ್ನು ನೀಡುವುದರಲ್ಲಿ ಕ್ರಿಸಿಲ್ ವಿಶ್ವದ ಅಗ್ರಗಣ್ಯರಾಗಿದ್ದಾರೆ.ಕ್ರಿಸಿಲ್ ರೇಟಿಂಗ್ ಭಾರತದ ಒಂದೇ ರೇಟಿಂಗ್ ಸಂಸ್ಥೆಯಾಗಿದೆ.ಭಾರತದ ಸಾಲ ಮಾರುಕೆಟ್ಟುಗಳಲ್ಲಿ ಕ್ರಿಸಿಲ್ ರೇಟಿಂಗ್ ಮುಖ್ಯ ಪಾತ್ರವನ್ನು ವಹಿಸುತ್ತದೆ.ಕ್ರಿಸಿಲಿನ ಮುಖ್ಯ ಕಾರ್ಯಗಳನ್ನು ಮೂರು ವಿಭಾಗಗಳಾಗಿ ವರ್ಗಿಸಲಾಗಿದೆ.ಅವುಗಳು ೧. ರೇಟಿಂಗ್ ೨. ಸಂಶೋಧನೆ/ರಿಸರ್ಚ್ ೩. ಸಲಹ.೧.ರೇಟಿಂಗ್-ಕ್ರಿಸಿಲ್ ಸಾಲ ಮಾರುಕೆಟ್ಟಿನ ಗುರಿಯನ್ನು ಹೊಂದಲು ಒಂದು ಉತ್ತಮ ಮಾರ್ಗವಾಗಿದೆ.ಕ್ರಿಸಿಲ್,ಇದರ ಗ್ರಾಹಕರಿಗೆ ಆರ್ಥಿಕ ತೊಂದರೆಗಳು ಹಾಗೂ ವ್ಯಾಪಾರ ನಿರ್ವಹಿಸಲು ಉತ್ತಮ ಸಹಾಯ ನೀಡುತದೆ.ಇವು ಭಾರತದ ಸಾಲ ಮಾರುಕಟ್ಟೆಗಳ ಅಭಿವ್ರುದ್ದಿಯಲ್ಲಿ ಒಂದು ನಿರ್ಣಾಯಕ ಪಾತ್ರವನ್ನು ವಹಿಸಿದೆ.ಈ ಸಂಸ್ಥೆ ನವೀನ ರೇಟಿಂಗ್ ವಿಧಾನಗಳು ಹಾಗೂ ಸಾಧನೆಗಳನ್ನು ಅಭಿವ್ರುದ್ದಿಪಡಿಸಿದೆ.ಕ್ರಿಸೆಲ್ ರೇಟಿಂಗ್ ಪ್ರಪಂಚದಾದ್ಯಂತ ಗ್ರಾಹಕರಿಗೆ ತಾಂತ್ರಿಕ ಜ್ನಾನವನ್ನು ಹರಡಿಸಿದೆ.ಹಾಗೂ ರೇಟಿಂಗ್ ಸಂಸ್ಥೆಗಳನ್ನು ಮಲೇಷ್ಯ(RAM),ಇಸ್ರೇಲ್(MAALOT) ಮತ್ತು ಕೆರಿಬಿಯನಲ್ಲಿ ಸ್ಥಾಪಿಸಲು ಅತ್ಯುತ್ತಮ ಸಹಾಯ ಮಾಡಿಕೊಟ್ಟಿವೆ.೨.ಸಂಶೋಧನೆ/ರಿಸರ್ಚ್-ಇದು ಭಾರತದ ಆರ್ಥಿಕ,ಕೈಗಾರಿಕೆಗಳು ಹಾಗೂ ಕಂಪನಿಗಳಿಗೆ ಸಂಶೋಧನೆ,ವಿಶ್ಲೇಷನೆ ಮತ್ತು ಮುನ್ಸೂಚನೆಗಳನ್ನು ಒದಗಿಸಿಕೊಡುತ್ತವೆ.ಫಂಡ್ ಸೇವೆಗಳು:ಕ್ರಿಸಿಲ್ ಮ್ಯೂಚುಯಲ್ ಫಂಡಿಗೆ ಮೌಲ್ಯಮಾಪನ ಸೇವೆಗಳು ಮತ್ತು ಅಪಾಯ ಪರಿಹಾರಗಳನ್ನು ನೀಡುತ್ತವೆ.ಆರ್ಥಿಕ ಸಂಶೋಧನ ಕೇಂದ್ರ : ಇವು ಆರ್ಥಿಕ ತತ್ವಗಳನ್ನು ವ್ಯಾಪಾರ ಅನ್ವಯಗಳಿಗೆ ಅನ್ವಯಿಸುತ್ತದೆ ಹಾಗೂ ಮಾನದಂಡಗಳು ಒದಗಿಸುತ್ತದೆ ಮತ್ತು ಭಾರತದ ನೀತಿಗಳನ್ನು ಹಾಗೂ ವ್ಯಾಪಾರ ನಿರ್ಣಾಯಕರನ್ನು ವಿಶ್ಲೇಷಿಸುತ್ತದೆ.ಹೂಡಿಕೆಯ ಸಂಶೋಧನೆ: ಕ್ರಿಸಿಲ್ ಇಕ್ವಿಟಿ ಷೇರುಗಳನ್ನು ತಮ್ಮ ಸೇವೆಗಳಲ್ಲಿ ಹೊಸದಾಗಿ ಸೇರಿಸಿದಾರೆ.೩.ಸಲಹಾ-ಕ್ರಿಸಿಲ್ ಮೂಲಸೌಕರ್ಯ ಸಲಹಾ: ಇವು ಸರ್ಕಾರಕ್ಕೆ ಹಾಗೂ ಪ್ರಮುಖ ಸ್ಥಾಪನೆಗಳಿಗೆ ನೀತಿ,ನಿಯಂತ್ರಿಕ ಹಾಗೂ ವ್ಯಾಪಾರ ಮಟ್ಟದ ಸಲಹೆಗಳನ್ನು ನೀಡುತ್ತವೆ. ಹೂಡಿಕೆ ಹಾಗೂ ಅಪಾಯ ನಿರ್ವಹಣೆ ಸೇವೆಗಳು:ಕ್ರಿಸಿಲ್ ಅಪಾಯ ಪರಿಹಾರಗಳು,ಸಮಗ್ರ ಅಪಾಯ ನಿರ್ವಹಣೆ ಹಾಗೂ ಸಲಹೆಗಳನ್ನು ಬ್ಯಾಂಕ್ ಮತ್ತು ಇತರ ಸಂಸ್ಥೆಗಳಿಗೆ ನೀಡುತದೆ.ಕ್ರಿಸಿಲ್ ಸ್ವಾತಂತ್ರ ಅಭಿಪ್ರಾಯಗಳನ್ನು, ನೀತಿ ಸಲಹೆಗಳನ್ನು, ಕ್ರಿಯೆಯ ಒಳನೋಟಗಳನ್ನು ಹಾಗೂ ಪರಿಹಾರಗಳನ್ನು ೮೬ ದೇಶಗಳಲ್ಲಿ ಒಂದು ಲಕ್ಷಕ್ಕು ಹೆಚ್ಚು ಗ್ರಾಹಕರಿಗೆ ಈ ಸೇವೆಗಳನ್ನು ನೀಡುತದೆ.ಕ್ರಿಸಿಲ್ ತಮ್ಮ ಸೇವೆಗಳನ್ನು ರಾಷ್ಟ್ರೀಯ ಗ್ರಾಹಕರಿಗಲ್ಲದೆ ಅಂತರಾಷ್ಟ್ರೀಯ ಗ್ರಾಹಕರಿಗೂ ಸಲ್ಲಿಸುತದೆ.ಇವುಗಳು ಕ್ರಿಸಿಲ್ ಸಲ್ಲಿಸುವ ಸೇವೆಗಳು(ರಾಷ್ಟ್ರೀಯ ಮಾರುಕಟ್ಟೆ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆ):-ಕಾರ್ಪೊರೇಟ್ ಸಲಹಾ ಹಾಗೂ ಮೂಲಸೌಕರ್ಯ;-ಅಪಾಯ ಮೌಲ್ಯಮಾಪನ;-ಕ್ರೆಡಿಟ್ ರೇಟಿಂಗ್;-ಫಂಡ್ ಸೇವೆಗಳು;ಅಪಾಯ ನಿರ್ವಹಣೆ;-ಕೈಗಾರಿಕ,ಆರ್ಥಿಕ ಸಂಸ್ಥೆಗಳ ಸಂಶೋಧನೆ;-ಜಾಗತಿಕ ಇಕ್ವೀಟಿ ಸಂಶೋಧನಾ,ಮುಂತಾದವುಗಳು.

ಕಾರ್ಯಾಚಾರಣೆ[ಬದಲಾಯಿಸಿ]

ಕ್ರಿಸಲಿನ ವ್ಯಾಪಾರ ೮ ದೇಶಗಳಿಂದ ನೀಡಲಾಗುತ್ತದೆ.ಆ ದೇಶಗಳು-ಅಮೇರಿಕ, ಅರ್ಜೆಟಿನ, ಪೋಲ್ಯಾಂಡ್,ಬ್ರಿಟೈನ್,ಇಂಡಿಯ,ಚೀನ,ಹಾಂಗ್ ಕಾಂಗ್ ಮತ್ತು ಸಿಂಗಪೋರ್.ಇಂಡಸ್ಟ್ರಿಯಲ್ ಕ್ರೆಡಿಟ್ ಆಂಡ್ ಇಂವೆಸ್ಟ್ಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯ(ICICI) ಮತ್ತು ಯೂನಿಟ್ ಟ್ರಸ್ಟ್ ಆಫ್ ಇಂಡಿಯ(UTI)-ಇವರಿಬ್ಬರಿಂದ ಕ್ರಿಸಿಲ್ ಪ್ರಚಾರಗೊಂಡಿವೆ.೧೯೮೯ರಲ್ಲಿ ವಾಣಿಜ್ಯ ಪತ್ರವನ್ನು ರೇಟ್ ಮಾಡುವ ಪದ್ದತಿಯನ್ನು ಒಳಗೊಂಡ ಮೊಟ್ಟ ಮೊದಲ ರೇಟಿಂಗ್ ಸಂಸ್ಥೆ ಕ್ರಿಸಿಲ್ ಆಗಿದೆ.

ಕಾರ್ಯಾವಿಧಾನಗಳು[ಬದಲಾಯಿಸಿ]

ಇವು ಕ್ರಿಸಿಲ್ ರೇಟಿಂಗಿನ ಕಾರ್ಯವಿಧಾನಗಳಾಗಿವೆ:೧.ಕಂಪನಿಯ ವಿನಂತಿ-ಕ್ರಿಸಿಲಿನ ರೇಟಿಂಗ್ ಕ್ರಿಯೆ ಕಂಪನಿ ಇಚ್ಛಿಸುವ ವಿನಂತಿನ್ನು ಅನುಸರಿಸಿರುತದೆ.೨.ವಿಶ್ಲೇಷಣಾತ್ಮಕ ತಂಡಕ್ಕೆ ಹುದ್ದೆ-ವಿನಂತಿ ಲಭಿಸಿದ ನಂತರ ವಿಶ್ಲೇಷಣ ತಂಡಕ್ಕೆ ಕೆಲಸಗಳನ್ನು ನಿಯೋಜಿಸುತ್ತದೆ.ಇವು ರೇಟಿಂಗ್ ಕೆಲಸಗಳನ್ನು ನಿರ್ವಹಿಸಲು ಜವಬ್ದಾರರಾಗಿದಾರೆ.೩.ಮಾಹಿತಿ ಸಂಸ್ಕರಣೆ-ವಿಶ್ಲೇಷಣಾತ್ಮಕ ತಂಡಗಳು ಬೇಕಾದ ಎಲ್ಲ ವಿವರಗಳನ್ನು ಸಂಸ್ಕರಿಸುತದೆ.ಗ್ರಾಹಕರ ಬಗ್ಗೆ ಸ್ಪಷ್ಟೀಕರಣ ಲಭಿಸಲು ಕ್ರಿಸಿಲ್ ಅವರ ಜೊತೆ ಸಂಪರ್ಕಿಸುತದೆ.೪.ಸಂಶೋಧನೆಗಳ ಪ್ರಸ್ತುತಿ-ತಂಡದ ಸಂಶೋಧನೆಯನ್ನು ರೇಟಿಂಗ್ ಸಂಗದ ಮುಂದೆ ಪ್ರಸ್ತುತಿಸುತದೆ,ಆದನಂತರ ಮಾರ್ಗದರ್ಶನೆಯನ್ನು ನೀಡುತದೆ.೫.ನಿರ್ಧಾರಗಳ ಸಂವಹನ-ರೇಟಿಂಗ್ ಸಂಗದ ನಿರ್ಧಾರಗಳನ್ನು ಗ್ರಾಹಕರಿಗೆ ಸಂವಹಿಸುತದೆ.೬.ರೇಟಿಂಗ್ ಬದಲಾವಣೆಯ ಮೇಲ್ವಿಚಾರಣೆ-ರೇಟಿಂಗನ್ನು ಉಪಯೋಗಿಸಲು ನಿರ್ಧರಿಸಿದ ನಂತರ,ಕ್ರಿಸಿಲ್ ಇದನ್ನು ಮೇಲ್ವಿಚಾರಿಸಬೇಕು.ಅಪಾಯ ಹಾಗೂ ಸಂಶೋಧನೆ ಸಂಬಂತಿತ ವಿಷಯಗಳನ್ನು ಸಹ ಕ್ರೆಡಿಟ್ ರೇಟಿಂಗ್ ಆಂಡ್ ಇನ್ಫೊರ್ಮೇಷನ್ ಸರ್ವಿಸೆಸ್ ಆಫ್ ಇಂಡಿಯ(ಕ್ರಿಸಿಲ್) ವ್ಯವಹರಿಸುತ್ತದೆ.

CRISIL Logo-wikipedia

ಗುರಿ[ಬದಲಾಯಿಸಿ]

ಭಾರತದ ಕಂಪನಿಗಳ ಋಣಭಾರದ ಕಟ್ಟುಪಾಡನ್ನು ರೇಟ್ ಮಾಡುವುದೇ ಕ್ರಿಸಿಲಿನ ಮುಖ್ಯ ಗುರಿಯಾಗಿದೆ.ಹೂಡಿಕೆದಾರರಿಗೆ ಸಕಾಲಕ್ಕೆ ಪಾವತಿ ಅಪಾಯದ ಮಾರ್ಗದರ್ಶನೆಯನ್ನು ಹಾಗೂ ಕೆಲವು ವಿವರಗಳನ್ನು ಕ್ರಿಸಿಲ್ ರೇಟಿಂಗರ ಮೂಲಕ ಒದಗಿಸಿಕೊಡುತದೆ.ಕ್ರಿಸಿಲಿನ ರೇಟಿಂಗ್,ಸಂಸ್ಥೆಗಳ ಮಧ್ಯೆ ಕ್ರೆಡಿಟ್ ರೇಟಿಂಗ್,ವ್ಯಾಪಾರಿ ಬ್ಯಾಂಕಿಂಗ್,ದಲ್ಲಾಳಿಗಳು ಹಾಗೂ ನಿಯಂತ್ರಿಕ ಪ್ರಾಧಿಕಾರಿಗಳ ನಡುವೆ ಜಾಗೃತಿಯನ್ನು ಸೃಷ್ಟಿಸಿದೆ.ಹಾಗೂ ಸಾಲ ರೇಟಿಂಗ್ ಸೇವೆಗಳನ್ನು ಅನುಕೂಲವಾಗಿ ಮಾಡುತದೆ. [೧][೨][೩]

ಉಲ್ಲೇಖಗಳು[ಬದಲಾಯಿಸಿ]