ಸದಸ್ಯ:Sharmila. S 2210572/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಪರಿಚಯ

ಉಪಧ್ಯಾಯರಿಗೆ ನನ್ನ ನಮಸ್ಕಾರಗಳು. ನನ್ನ ಹೆಸರು ಶರ್ಮಿಳ ನಾನು ಬೆಂಗಳೂರು ಜಿಲ್ಲೆ, ಆನೇಕಲ್ ತಾಲೂಕಿನ,  ಅತ್ತಿಬೆಲೆಯಲ್ಲಿ ಜನಿಸಿದೆ .ನನ್ನ ಊರು  ಯಡವನಹಳ್ಳಿ ನನ್ನ ತಂದೆ ಹೆಸರು ಶಂಕರ್ ರಾಜು ಮತ್ತು ನನ್ನ ತಾಯಿಯ ಹೆಸರು ಭುವನೇಶ್ವರಿ .ನಾನು ನನ್ನ ತಂದೆ ತಾಯಿಯವರಿಗೆ ಮೊದಲನೆ ಸಂತಾನವಾಗಿ   ಜನಿಸಿದ್ದೇನೆ. ಹಾಗು ನನಗೆ ಒಬ್ಬ ಸಹೋದರ ನಿದ್ದಾನೆ ಅವನ ಹೆಸರು ಲಿಖಿತ್ ರಾಜು ಅವನು ಎಂಟನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

     

ಕುಟುಂಬದ ಪರಿಚಯ ಹಾಗೂ ವಿಧ್ಯಾಭ್ಯಾಸ

ನನ್ನ ತಂದೆಯವರು ಇನ್ಫೋಸಿಸ್ ಕಂಪನಿಯಲ್ಲಿ ಎಸ್ಎಲ್ಎನ್ ಕಾಂಟ್ರ್ಯಾಕ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಹಾಗೂ ನಮ್ಮ ತಾಯಿಯವರು ಟೈಲರ್ ಆಗಿ ಕೆಲಸ ಮಾಡುತ್ತಿದ್ದಾರೆ. ನಾನು ನನ್ನ ಬಾಲ್ಯ ದಿನಗಳಲ್ಲಿ ಮೂರು ವರ್ಷಗಳ ಕಾಲ ಮೈಸೂರಿನಲ್ಲಿ ವಾಸ ಮಾಡುತ್ತಿದ್ದೆವು ನಂತರ ಬೆಂಗಳೂರಿಗೆ ಬಂದು ನೆಲೆಸಿದ್ದೆವು .ನನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಬಳಗಾರನಹಳ್ಳಿ ವಿ.ಬ್ಲೂಮ್ಸ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದೆ. ಹಾಗೂ ನನ್ನ ಪ್ರಥಮ ,ದ್ವಿತೀಯ ಪಿಯುಸಿ ಯನ್ನು ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದೆ. ನಾನು ನನ್ನ ಉನ್ನತ ಶಿಕ್ಷಣಕ್ಕಾಗಿ    ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ.

                 

ಬಾಲ್ಯ ಜೀವನ

ನಾನು ನನ್ನ ಬಾಲ್ಯದಲ್ಲಿ ಬೇಸಿಗೆ ರಜೆಗಳಲ್ಲಿ ಮೈಸೂರಿನಲ್ಲಿರುವ ನಮ್ಮ ಸಂಬಂಧಿಕರ ಮನೆಗೆ ಹೋಗುತ್ತಿದ್ದೆ . ಅಮ್ಮನ ಸಹೋದರನಾದ ನಮ್ಮ ಮಾವನ ಜೊತೆ ಮೈಸೂರಿನ ಅರಮನೆ ,ಪ್ರಾಣಿ ಸಂಗ್ರಹಾಲಯ ,ಕೆಆರ್ಎಸ್ ,ನಂಜನಗೂಡು ಮುಂತಾದ ಪ್ರವಾಸ ಸ್ಥಳ ಗಳನ್ನು ನೋಡಿ ತುಂಬ ಸಂತೋಷವಾಯಿತು. ನನಗೆ ಒಬ್ಬ ಅಜ್ಜಿ ಇದ್ದರು. ಅಂದರೆ ನನ್ನ ತಾಯಿ ಅಮ್ಮ .ಅವರಿಗೆ ನಾನು ಎಂದರೆ ತುಂಬಾ ಇಷ್ಟ ನನಗೂ ಅಜ್ಜಿ ಅಂದರೆ ತುಂಬಾ ಇಷ್ಟ ಅವರು ನನ್ನನ್ನು ನನ್ನ ತಾಯಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದರು ಅವರು ನಿಧನರಾದಾಗ ನನಗೆ ಭರಿಸಲಾಗದ ನೋವುಂಟಾಯಿತು.

ನಾವು ಮೈಸೂರಿನಲ್ಲಿ ವಾಸಿಸುತ್ತಿದ್ದಾಗ ನಮ್ಮ ತಾಯಿ ನನಗೆ ಒಂದು ಬೆಕ್ಕು ಮರಿಯನ್ನು ತಂದು ಸಾಕುತ್ತಿದ್ದರು.ಅದನ್ನು ಕಂಡರೆ ನನಗೆ ತುಂಬಾ ಇಷ್ಟ ನನಗೆ ಊಟವನ್ನು ತಿನ್ನಿಸಬೇಕಾದರೆ ನನ್ನ ತಾಯಿಯವರು ಆ ಬೆಕ್ಕು ಮರಿಯನ್ನು ತೋರಿಸಿ ನನಗೆ ಊಟ ಮಾಡಿಸುತ್ತಿದ್ದರು. ಅದು ಇನ್ನು ನನಗೆ ನೆನಪಿದೆ. ನಮ್ಮ ಅಕ್ಕ ಪಕ್ಕದ ಮನೆಯವರು ನನ್ನ ತುಂಟಾಟವನ್ನು ನೋಡಿ ನನ್ನನ್ನು ಅವರ ಮನೆಗೆ ಕರೆದುಕೊಂಡು ಹೋಗಿ ನನಗೆ ತಿಂಡಿ ತಿನಿಸುಗಳನ್ನು ಕೊಡಿಸುತಿದ್ದರು ನಾನು ಚಿಕ್ಕವಳಿದ್ದಾಗ ನನಗೆ ತಿಂಡಿಗಳನ್ನು ಕೊಟ್ಟು ನನ್ನ ಬಾಯಿಂದ ಕೆಟ್ಟ ಮಾತುಗಳನ್ನು ಆಡಿಸುತ್ತಿದ್ದರು. ಅವರು ಈಗಲೂ ಕೂಡ ನಮ್ಮ ಮನೆಗೆ ಬಂದು ನಾನು ಮಾತನಾಡುತ್ತಿದ್ದ ಮಾತುಗಳನ್ನು ನೆನಪಿಸಿಕೊಂಡು ನಗುತ್ತಿರುತ್ತಾರೆ.

ನನ್ನ ಹವ್ಯಾಸ

ನನ್ನ ಹವ್ಯಾಸಗಳು ನನಗೆ ಬಹಳ ಸಂತೋಷವನ್ನು ನೀಡುತ್ತದೆ.ಪ್ರತಿಯೊಬ್ಬರೂ ತಮ್ಮದೇ ಆದ ನಿರ್ದಿಷ್ಟ ಹವ್ಯಾಸವನ್ನು ಹೊಂದಿದ್ದಾರೆ; ಒಬ್ಬ ವ್ಯಕ್ತಿಯು ಒಂದು ಅಥವಾ ಒಂದಕ್ಕಿಂತ ಹೆಚ್ಚು ಹವ್ಯಾಸಗಳನ್ನು ಹೊಂದಬಹುದು. . ಹವ್ಯಾಸಗಳು ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ನಾವು ಬಿಡುವಿರುವಾಗ ಅವು ನಮ್ಮ ಮನಸ್ಸನ್ನು ಆಕ್ರಮಿಸುತ್ತವೆ ಮತ್ತು ನಮ್ಮನ್ನು ಸಂತೋಷಪಡಿಸುತ್ತವೆ. ಹವ್ಯಾಸಗಳು ನೈಜ ಪ್ರಪಂಚದಿಂದ ನಾವು ತಪ್ಪಿಸಿಕೊಳ್ಳುವುದು ನಮ್ಮ ಚಿಂತೆಗಳನ್ನು ಮರೆತುಬಿಡುವಂತೆ ಮಾಡುತ್ತದೆ, ನಮ್ಮ ಎಲ್ಲಾ ಹವ್ಯಾಸಗಳು ನಮಗೆ ತುಂಬಾ ಉಪಯುಕ್ತವಾಗಿವೆ, ಅವು ನಮಗೆ ವಿವಿಧ ವಿಷಯಗಳ ಬಗ್ಗೆ ಬಹಳಷ್ಟು ವಿಷಯಗಳನ್ನು ಕಲಿಸುತ್ತವೆ. ನನಗೆ ಚಿತ್ರಗಳನ್ನು ಬಿಡಿಸುವ ಹವ್ಯಾಸವಿದೆ ಅದು ನನಗೆ ತುಂಬಾ ಬಹಳ ಸಂತೋಷವನ್ನು ನೀಡುತ್ತದೆ.

ವಿಭಿನ್ನ ಜನರು ತಮ್ಮ ಅಭಿರುಚಿ ಮತ್ತು ಆದ್ಯತೆಗಳ ಆಧಾರದ ಮೇಲೆ ವಿಭಿನ್ನ ಹವ್ಯಾಸಗಳನ್ನು ಹೊಂದಿರುತ್ತಾರೆ. ಕೆಲವರು ಈಜು, ಕೆಲವರು ನೃತ್ಯವನ್ನು ಇಷ್ಟಪಡುತ್ತಾರೆ ಮತ್ತು ಕೆಲವರು ಪ್ರತ್ಯೇಕವಾಗಿ ಪುಸ್ತಕವನ್ನು ಓದಲು ಬಯಸುತ್ತಾರೆ. ನಾನು ಮಾಡಲು ಇಷ್ಟಪಡುವ ಹವ್ಯಾಸ ಹೆಚ್ಚಾಗಿ ಸಂಗೀತ ಕೇಳುವುದು.

ಓದುವುದು ನನ್ನ ಹವ್ಯಾಸ. ನನ್ನ ಬಿಡುವಿನ ವೇಳೆಯಲ್ಲಿ ನಾನು ಪುಸ್ತಕಗಳನ್ನು ಓದಲು ಇಷ್ಟಪಡುತ್ತೇನೆ. ಓದುವುದು ಒಂದು ದೊಡ್ಡ ಹವ್ಯಾಸ ಎಂದು ನಾನು ಭಾವಿಸುತ್ತೇನೆ. ಆನಂದ ನೀಡುವುದರ ಜೊತೆಗೆ ನಮ್ಮ ಜ್ಞಾನವನ್ನೂ ವೃದ್ಧಿಸುತ್ತದೆ. ಓದುವಿಕೆ ಬಹಳ ಪ್ರಯೋಜನಕಾರಿ ಮತ್ತು ಕೌಶಲ್ಯ-ನಿರ್ಮಾಣಕ್ಕೆ ಸಹಾಯ ಮಾಡುವ ಅತ್ಯಗತ್ಯ ಚಟುವಟಿಕೆಯಾಗಿದೆ. ಒಳ್ಳೆಯ ಪುಸ್ತಕದ ಓದು ನಮಗೆ ಸಂತೋಷವನ್ನು ನೀಡುತ್ತದೆ ಜೊತೆಗೆ ಜೀವನವನ್ನು ಸುಗಮವಾಗಿ ಬದುಕುವ ಅನುಭವವನ್ನೂ ನೀಡುತ್ತದೆ. ಪುಸ್ತಕಗಳನ್ನು ಓದುವ ಒಂದು ಉತ್ತಮ ಪ್ರಯೋಜನವೆಂದರೆ ಅದು ನಮ್ಮ ಶಬ್ದಕೋಶವನ್ನು ಹಲವು ಒಳ್ಳೆಯ ಪದಗಳಿಂದ ಸಮೃದ್ಧಗೊಳಿಸುತ್ತದೆ. ಇದು ಆಲೋಚನೆಗಳ ಸಂಗ್ರಹಣೆಯೊಂದಿಗೆ ನಮಗೆ ಪ್ರಯೋಜನವನ್ನು ನೀಡುತ್ತದೆ, ವಿವಿಧ ರೀತಿಯ ಬರವಣಿಗೆಯ ಸ್ವರೂಪಗಳೊಂದಿಗೆ ನಮಗೆ ಪರಿಚಿತವಾಗಿಸುತ್ತದೆ, ನಮ್ಮ ಸಂವಹನ ಕೌಶಲ್ಯಗಳನ್ನು ಸುಧಾರಿಸುವಲ್ಲಿ ನನಗೆ ಸಹಾಯ ಮಾಡುತ್ತದೆ ಮತ್ತು ಅದನ್ನು ನಿರರ್ಗಳವಾಗಿ ಮಾಡುತ್ತದೆ.

ನಾನು ಈಗ ನೆನಪಿಸಿಕೊಳ್ಳಬಹುದಾದ ಅನೇಕ ನೆನಪುಗಳಿವೆ. ಅವರಲ್ಲಿ ಹೆಚ್ಚಿನವರು ನನ್ನ ಕುಟುಂಬ , ಪೋಷಕರು ಮತ್ತು ಒಡಹುಟ್ಟಿದವರಿಗೆ ಸಂಬಂಧಿಸಿರುತ್ತಾರೆ. ಏಕೆಂದರೆ ನಾನು ನನ್ನ ಬಾಲ್ಯದ ಹೆಚ್ಚಿನ ಸಮಯವನ್ನು ಅವರೊಂದಿಗೆ ಕಳೆದಿದ್ದೇನೆ.

ಸಾಧನೆಗಳು

ನನ್ನ ತರಗತಿಯಲ್ಲಿ ನಾನು ತುಂಬಾ ಸ್ಥಿರ ಮತ್ತು ಸಮಯಪ್ರಜ್ಞೆಯ ಹುಡುಗಿ.  ಸಮರ್ಪಿತ ವಿದ್ಯಾರ್ಥಿಯಾಗಿ, ನಾನು ಯಾವಾಗಲೂ ನನ್ನ ತರಗತಿಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತೇನೆ ಏಕೆಂದರೆ ನಾನು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದೇನೆ.  ಉತ್ತಮ ವಿದ್ಯಾರ್ಥಿಯಾಗಲು ನಾನು ಯಾವಾಗಲೂ ನನ್ನ ಕೌಶಲ್ಯ ಮತ್ತು ನೈತಿಕತೆಯನ್ನು ಸುಧಾರಿಸಲು ಪ್ರಯತ್ನಿಸುತ್ತೇನೆ.  ನನ್ನ ಸಹಪಾಠಿಗಳಿಗೆ ಪ್ರೀತಿ ಮತ್ತು ಸಮರ್ಪಣೆಯೊಂದಿಗೆ ಸಹಾಯ ಮಾಡುವ ಮೂಲಕ ನಾನು ಇದನ್ನು ಮಾಡುತ್ತೇನೆ.

ನಾನು ಕಾಲಕ್ಷೇಪವಾಗಿ ಕಥೆಪುಸ್ತಕಗಳನ್ನು ಅಧ್ಯಯನ ಮಾಡಲು ಇಷ್ಟಪಡುತ್ತೇನೆ.  ನಾನು ಸೈಕ್ಲಿಂಗ್ ಕಲಿಯುತ್ತಿದ್ದೇನೆ, ಇದರಿಂದ ನಾನು ಆರೋಗ್ಯವಾಗಿರುತ್ತೇನೆ.  ನನ್ನ ನಂಬಿಕೆ, ಒಬ್ಬನು ತನ್ನನ್ನು ತಾನು ಆರೋಗ್ಯವಾಗಿರಿಸಿಕೊಳ್ಳಲು ಬಹಳಷ್ಟು ಕ್ರೀಡೆಗಳನ್ನು ಅಭ್ಯಾಸ ಮಾಡಬೇಕು.  ಆರೋಗ್ಯಕರ ಮನಸ್ಸು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.  ಆದ್ದರಿಂದ, ಗಮನವನ್ನು ಕೇಂದ್ರೀಕರಿಸಲು ನಿಮ್ಮನ್ನು ಆರೋಗ್ಯವಾಗಿರಿಸಿಕೊಳ್ಳುವುದು ಬಹಳ ಮುಖ್ಯ.  ನಾನು ವಿವಿಧ ಚಲನಚಿತ್ರಗಳನ್ನು ವೀಕ್ಷಿಸಲು ತುಂಬಾ ಇಷ್ಟಪಡುತ್ತೇನೆ ಮತ್ತು ನಾನು ನೃತ್ಯ ಮಾಡಲು ಇಷ್ಟಪಡುತ್ತೇನೆ.  ಹಿಪ್-ಹಾಪ್‌ನಿಂದ ಹಿಡಿದು ಬ್ರೇಕ್‌ಡ್ಯಾನ್ಸ್‌ನವರೆಗಿನ ನೃತ್ಯದ ಹಲವು ಪ್ರಕಾರಗಳನ್ನು ನಾನು ಕಲಿತಿದ್ದೇನೆ.

ಆಸಕ್ತಿಯ ಕ್ಷೇತ್ರಗಳು

ವಿವಿಧ ನೃತ್ಯಗಳ ಪ್ರೇಮಿಯಾಗಿರುವ ನಾನು ನನ್ನ ಶಾಲೆಯಲ್ಲಿ ವಿವಿಧ ಪಠ್ಯಕ್ರಮ ಚಟುವಟಿಕೆಗಳಲ್ಲಿ ಭಾಗವಹಿಸಲು ಇಷ್ಟಪಡುತ್ತೇನೆ.  ನನ್ನ ಶಾಲೆಯು ಆಯೋಜಿಸುವ ಫೆಸ್ಟ್‌ಗಳಲ್ಲಿ ನಾನು ಸಕ್ರಿಯವಾಗಿ ಭಾಗವಹಿಸುತ್ತೇನೆ.  ಅಲ್ಲದೆ, ನಾನು ಹಲವಾರು ರಸಪ್ರಶ್ನೆಗಳ ಚರ್ಚೆಗಳು ಮತ್ತು ಟ್ಯಾಬ್ಲಾಯ್ಡ್‌ಗಳ ಭಾಗವಾಗಿದ್ದೇನೆ.  ನಾನು ರಸಪ್ರಶ್ನೆಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದೇನೆ ಮತ್ತು ನನ್ನ ಶಾಲೆಗೆ ಅನೇಕ ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದೇನೆ.  ಇದಲ್ಲದೆ, ನಾನು ಯಾವಾಗಲೂ ಶಾಲೆಗೆ ಸಮಯಪ್ರಜ್ಞೆಯನ್ನು ಇಟ್ಟುಕೊಳ್ಳಲು ಪ್ರಯತ್ನಿಸುತ್ತೇನೆ ಮತ್ತು ನನಗೆ ಅವಕಾಶ ಸಿಕ್ಕಾಗಲೆಲ್ಲಾ ಬಡವರಿಗೆ ಸಹಾಯ ಮಾಡುತ್ತೇನೆ.

ನಾನು ಈ ಜಗತ್ತಿನಲ್ಲಿ ಪತ್ತೆಯಾಗದ ವಿಷಯಗಳನ್ನು ಸಂಶೋಧಿಸಲು ಇಷ್ಟಪಡುತ್ತೇನೆ ಅದಕ್ಕಾಗಿಯೇ ನಾನು ನನ್ನ ತಂದೆಯಂತೆ ವಿಜ್ಞಾನಿಯಾಗಲು ಮತ್ತು ನನ್ನ ದೇಶಕ್ಕಾಗಿ ಕೆಲಸ ಮಾಡಲು ಬಯಸುತ್ತೇನೆ.  ಮೋಡ ಕವಿದ ವಾತಾವರಣದ ನಡುವೆ ಗುರಿಯನ್ನು ತೋರಿಸಲು ಪ್ರತಿದಿನ ಪ್ರಯತ್ನಿಸುತ್ತಿರುವ ನನ್ನನ್ನು ತುಂಬಾ ವಿನಮ್ರನನ್ನಾಗಿ ಮಾಡಿದ್ದಕ್ಕಾಗಿ ಮತ್ತು ನನ್ನ ಕುಟುಂಬಕ್ಕೆ ಮತ್ತು ನನ್ನ ಸ್ನೇಹಿತರಿಗೆ ನಾನು ಯಾವಾಗಲೂ ಕೃತಜ್ಞಳಾಗಿರುತ್ತೇನೆ.

ನಾನು 10ನೇ ತರಗತಿಯಲ್ಲಿದ್ದಾಗ ನಾನು ಹಾಗೂ ನನ್ನ ತಮ್ಮ ಇಬ್ಬರೂ ಒಂದು ಬೆಕ್ಕು ಮರೆಯನ್ನು ಸಾಕಿದ್ದೆವು. ಅದು ನೋಡಲು ತುಂಬಾ ಮುದ್ದಾಗಿತ್ತು ಅದು ನಮ್ಮ ಜೊತೆ ತುಂಬಾ ಆಟವಾಡುತ್ತಿತ್ತು ನಾವು ಮನೆಯಲ್ಲಿ ಓಡಾಡುತ್ತಿರುವಾಗ. ಅದು ಓಡಿ ಬಂದು ನಮ್ಮ ಕಾಲನ್ನು ಕಚ್ಚಲು ಬರುತ್ತಿತ್ತು ನಾವು ಅದಕ್ಕೆ ತಿಂಡಿಗಳನ್ನು ದಿನವೂ ತಿನ್ನಿಸುತ್ತಿದ್ದೆವು. ಅದು ನಮ್ಮನ್ನು ಬಿಟ್ಟು ಹೊರಗಡೆ ಹೋಗುತ್ತಿರಲಿಲ್ಲ ಹೀಗಿದ್ದಾಗ ಒಂದು ದಿನ ನನ್ನ ತಮ್ಮ ಹೊರಗಾಡೆ ಆಟವಾಡುತ್ತಿದ್ದ ಆಗ ಅವನ ಜೊತೆ ನಮ್ಮ ಬೆಕ್ಕು ಮರೆಯು ಸಹ ಆಟವಾಡುತ್ತಿತ್ತು ಆಗ ಒಂದು ನಾಯಿ ಬಂದು ಆ ಬೆಕ್ಕು ಮರಿಯನ್ನು ಕಚ್ಚಿಕೊಂಡು ಹಾಕಿತು.

             

ಪ್ರವಾಸದ ದಿನಗಳು

ನನ್ನ ಶಾಲೆಯ ದಿನಗಳಲ್ಲಿ 5ನೇ ತರಗತಿಯಲ್ಲಿ ಓದುತ್ತಿದ್ದಾಗ. ನನಗೆ ತುಂಬಾ ಸ್ನೇಹಿತರಿದ್ದರೂ ಅವರಲ್ಲಿ ಐದು ಜನ ಸ್ನೇಹಿತರಿದ್ದರು ಅವರ ಹೆಸರು ಪದ್ಮಶ್ರೀ, ಮಮತಾ,ಮೇಘನ ,ಪ್ರಿಯಾ .ನಾವು ಜೊತೆಯಾಗಿ ಶಾಲೆಗೆ ಹೋಗುತ್ತಿದ್ದೆವು ಹಾಗೂ ಜೊತೆಯಲ್ಲಿ ಓದಿಕೊಳ್ಳುತ್ತಿದ್ದೆ. ನನಗೆ ಮಹದೇವಿ ಶಿಕ್ಷಕಿ ಯವರು ಎಲ್ಲಾ ವಿಷಯದಲ್ಲೂ ಬಹಳ ಪ್ರೋತ್ಸಾಹ ನೀಡುತ್ತಿದ್ದರು. ಅವರು ನನಗೆ ಕನ್ನಡ ವಿಷಯವನ್ನು ಬೋಧನೆ ಮಾಡುತ್ತಿದ್ದರು. ಹಾಗೂ ಅವರು ಮಕ್ಕಳ ಬಗ್ಗೆ ತುಂಬಾ  ಕಾಳಜಿ ವಹಿಸುತ್ತಿದ್ದರು. ಹಾಗೂ ಶ್ರೀನಿವಾಸ್ ಸರ್ ಅವರು ನಮ್ಮ ಪ್ರಾಂಶುಪಾಲರಾಗಿದ್ದರು. ಅವರು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ತುಂಬಾ ಜವಾಬ್ದಾರಿ ಇಂದ ಕಾರ್ಯ ನಿರ್ವಹಿಸುತ್ತಿದ್ದರು. ಮತ್ತು ಶಾಲೆಯಲ್ಲಿ ನಡೆಯುತ್ತಿದ್ದ ಎಲ್ಲಾ ಕಾರ್ಯಕ್ರಮಗಳನ್ನು ಒಳ್ಳೆಯ ರೀತಿಯಲ್ಲಿ ನಡೆಸುತ್ತಿದ್ದರು .ನಾವು ,ಪ್ರಾಂಶುಪಾಲರು, ಅಧ್ಯಾಪಕರು ,ಅಧ್ಯಾಪಕಿಯರು ಎಲ್ಲರೂ ಸೇರಿ ನೃತ್ಯವನ್ನು ಮಾಡುತ್ತಿದ್ದೆವು. ಆದಿನಗಳು ನಮಗೆ ತುಂಬಾ ಸಂತೋಷದ ದಿನಗಳಾಗಿತ್ತು. ನಮ್ಮ ಪ್ರಾಂಶುಪಾಲರು ನಮ್ಮ ಶಾಲೆಯಲ್ಲಿ ಪ್ರವಾಸವನ್ನು ಕೈಗೊಳ್ಳುತ್ತಿದ್ದರೂ ಅವರು 8 ದಿನಗಳ ಪ್ರವಾಸ ಕೈಗೊಂಡಿದ್ದರು ಇದರಲ್ಲಿ ನಾನು ಸಹ ಭಾಗವಹಿಸುತ್ತಿದೆ.

         ಒಂದು ದಿನ ಎಂಟನೇ ತರಗತಿಯಲ್ಲಿ ದೆಹಲಿಗೆ ಪ್ರವಾಸಕ್ಕೆ ಕೈಗೊಂಡಿದ್ದೆವು. ಆಗ ನಾನು ನನ್ನ ಸ್ನೇಹಿತೆಯರು, ಪ್ರಾಂಶುಪಾಲರು ,ಶಿಕ್ಷಕರು ಎಲ್ಲರೂ ಅಲ್ಲಿಗೆ ಭೇಟಿ ನೀಡಿದ್ದೆವು. ನನ್ನ ಜೊತೆಯಲ್ಲಿ ನನ್ನ ಅಕ್ಕಕೂಡ ಬಂದಿದ್ದಳು. ಕೆಂಪುಕೋಟೆ, ಸುಪ್ರೀಂಕೋರ್ಟ್  ಆಗ್ರಾದಲ್ಲಿರುವ ತಾಜ್ ಮಹಲನ್ನು ನೋಡಿದ್ದೆವು. ನನಗೆ ಕ್ರೀಡೆಗಳಲ್ಲಿ ತುಂಬಾ ಆಸಕ್ತಿ ಇತ್ತು.ಕೊಕ್ಕೋ ಹಾಗೂ ಗುಂಡು ಎಸೆಯುವ ದರಲ್ಲಿ ತುಂಬಾ ಭಾಗವಹಿಸುತ್ತಿದ್ದೆ. ಕೊಕ್ಕೋ ಕ್ರೀಡೆಯಲ್ಲಿ ನಾನು ತಾಲೂಕು ಮಟ್ಟದಲ್ಲಿ ಆಟವಾಡಿ ಬಹುಮಾನವನ್ನು ಪಡೆದಿದ್ದೇನೆ. ಆದ್ದರಿಂದ ನಮ್ಮ ಪ್ರಾಂಶುಪಾಲರು ಶಿಕ್ಷಕರು ಹಾಗೂ ಸ್ನೇಹಿತರು ತುಂಬಾ ಸಂತೋಷಪಟ್ಟರು.

             ಶಾಲೆಯ ದಿನಗಳಲ್ಲಿ ನನಗೆ ಭರತ ನಾಟ್ಯದಲ್ಲಿ ಹಾಗೂ ಚಿತ್ರ ಬಿಡಿಸುವುದರಲ್ಲಿ ತುಂಬಾ ಆಸಕ್ತಿ ಇತ್ತು ಮತ್ತು ನನಗೆ ವಾರ್ತ ಪತ್ರಿಕೆಗಳು ಓದುವ ಅಭ್ಯಾಸವಿತು. ನಾನು ನನ್ನ ಭವಿಷ್ಯತ್ತಿನಲ್ಲಿ ಸಿಎ ಮಾಡಬೇಕೆಂದುಕೊಂಡಿದ್ದೇನೆ. ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿ ನನ್ನ ತಂದೆ-ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಕೊಂಡಿದ್ದೇನೆ ಹಾಗೂ ಸಮಾಜದಲ್ಲಿರುವ ಬಡವರಿಗೆ ಸಹಾಯ ಮಾಡಬೇಕೆಂದು ಕೊಂಡಿದ್ದೇನೆ ಹಾಗೂ ಸಮಾಜದಲ್ಲಿ ಒಳ್ಳೆಯ ಹೆಸರನ್ನು ಗಳಿಸಬೇಕೆಂದು ಕೊಂಡಿದ್ದೇನೆ.

ಜೀವನವು ಸಂತೋಷ ಮತ್ತು ದುಃಖ ಎರಡರ ಪಾತ್ರೆಯಾಗಿದೆ.  ಯಾವಾಗಲೂ ನಮಗೆ ಬೇಕಾದುದನ್ನು ಪಡೆಯುವುದು ಜೀವನದ ಸ್ವಭಾವವಲ್ಲ.  ಹೀಗಾಗಿ, ಒಬ್ಬನು ತನ್ನನ್ನು ತಾನು ಯಾವಾಗಲೂ ಉನ್ನತ ಮಟ್ಟಕ್ಕೆ ಪ್ರೇರೇಪಿಸುತ್ತಿರಬೇಕು.  ಎಂದಿಗೂ ಎದೆಗುಂದದೆ ಮಹಾಪುರುಷರ ಹೆಜ್ಜೆಗುರುತುಗಳನ್ನು ಅನುಸರಿಸಿ ಮತ್ತು ನಿಮ್ಮ ಗುರಿಯತ್ತ ನಿಮ್ಮನ್ನು ಕೇಂದ್ರೀಕರಿಸಿ.

ಜೀವನದಲ್ಲಿ ನಾನು ಕಲಿತ ಒಂದು ವಿಷಯವೆಂದರೆ ನನಗೆ ಎಷ್ಟು ಜೋರಾದ ಹೊಡೆತ ಬಿದ್ದಿದೆ ಎಂಬುವುದಕ್ಕಿಂತ, ಅದರಿಂದ ನಾನು ಎಷ್ಟು ಒಳ್ಳೆಯ ಗುಣ ಪಾಠವನ್ನು ಕಲಿತುಕೊಂಡೆ ಎಂಬುದು ಮುಖ್ಯ ಹಾಗೂ ನಾನು ನನ್ನ ಗುರಿಗಳನ್ನು ತಲುಪಲು ನಾನು ಮುನ್ನಡೆಯುತ್ತಾ ಸಾಗುತ್ತೇನೆ. ಮತ್ತು ಮಹತ್ವಾಕಾಂಕ್ಷೆಗಳೊಂದಿಗೆ ಸರಳ ವ್ಯಕ್ತಿಯಾಗಿ ಮುಂದುವರಿಯಬಹುದು.  ಅತ್ಯಂತ ಕೇವಲ ಹಾಗೆ ಆದರೆ ನನ್ನ ಹಿಂದಿನ ಮತ್ತು ಪೂರ್ವಸೂಚನೆಗೆ ಧನ್ಯವಾದಗಳು ನಾನು ನನ್ನ ಭವಿಷ್ಯಕ್ಕಾಗಿ ಸಿದ್ದಳಾಗಿದ್ದೇನೆ.

ನಮ್ಮ ಜೀವನದಲ್ಲಿ ಸುಖ ಹಾಗೂ ದುಃಖಗಳನ್ನು ಸಮಾನವಾಗಿ ಆಹ್ವಾನಿಸಬೇಕು ಮತ್ತು ಸುಖ ಬಂದಾಗ ನಗುನಗುತ್ತ ಇರುವುದು ಹಾಗೂ ದುಃಖ ಬಂದಾಗ ಅಳುತ್ತಾ ಇರುವುದು ಹಾಗೇ ಮಾಡಬಾರದು ಸುಖ ಬಂದಾಗ ನಾವು ಹೇಗೆ ಸಂತೋಷವಾಗಿರುತ್ತೇವೆ ಹಾಗೆ ದುಃಖ ಬಂದಾಗ ಅಷ್ಟೇ ಧೈರ್ಯದಿಂದ ಮುನ್ನಡೆಯಬೇಕು ಹಾಗೂ ಇದು ಇಷ್ಟು ನನ್ನ ಕಿರುಪರಿಚಯ ನೀಡಿದ್ದೇನೆ. ಈ ಮೇಲಿನಲ್ಲಿ ಹೇಳಿದಂತೆ ನಾನು ನನ್ನ ಪರಿಚಯವನ್ನು ಮಾಡಿಕೊಂಡಿದ್ದೇನೆ.

ಇದನ್ನು ತಾಳ್ಮೆಯಿಂದ ಓದುತ್ತಿರುವ ನಿಮಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.