ಸದಸ್ಯ:Sharanya001/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಜ್ಯ ಬಜೆಟ್ 2016-17;


ಬೆಂಗಳೂರು, ಮಾ.18- ಸಾಮಾಜಿಕ ನ್ಯಾಯ, ಕೋಮು ಸೌಹಾರ್ದತೆಗೆ ಒತ್ತು, ಕುಂಠಿತಗೊಂಡಿರುವ ಕೃಷಿ ಕ್ಷೇತ್ರಕ್ಕೆ ಆದ್ಯತೆ, ಹಳೆಯ ಯೋಜನೆಗಳ ಮುಂದುವರಿಕೆ, ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ, ಅವಕಾಶ ವಂಚಿತರ, ಶೋಷಿತರ, ದುರ್ಬಲ ವರ್ಗದವರ, ಹಿಂದುಳಿದವರ, ಮಹಿಳೆಯರ ಅಭ್ಯುದಯಕ್ಕೆ ಸಾಮಾಜಿಕ ನ್ಯಾಯ ಯೋಜನೆ ಸೇರಿದಂತೆ ಹತ್ತು-ಹಲವು ಯೋಜನೆಗಳನ್ನೊಳಗೊಂಡ 2016-17ನೆ ಸಾಲಿನ 1,63,419 ಲಕ್ಷ ಕೋಟಿ ಗಾತ್ರದ ಬಜೆಟ್‌ಅನ್ನು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಆಯವ್ಯಯವನ್ನು ಮಂಡಿಸಿದರು.ಯೋಜನಾ ಗಾತ್ರದಲ್ಲಿ ಶೇ.15.67ರಷ್ಟು ಹೆಚ್ಚಳ ಮಾಡಲಾಗಿದ್ದು, ಯೋಜನಾ ಗಾತ್ರದ ಮೊತ್ತ 85,375 ಕೋಟಿ ರೂ.ಗಳಾಗಿದೆ ಎಂದರು.11ನೆ ಬಜೆಟ್ ಮಂಡಿಸುತ್ತಿರುವ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ನಾಲ್ಕನೆ ಬಜೆಟ್ ಮಂಡಿಸುತ್ತಿದ್ದಾರೆ. ಕೃಷಿ ಕ್ಷೇತ್ರದ ಬೆಳವಣಿಗೆಯಲ್ಲಿ ಕುಂಠಿತವಾಗಿದ್ದು, ಆಹಾರ ಧಾನ್ಯ ಉತ್ಪಾದನೆಯಲ್ಲೂ ಕುಸಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವ ಗುರಿ ಹೊಂದಲಾಗಿದೆ. ಒಟ್ಟಾರೆ ಆಂತರಿಕ ಉತ್ಪನ್ನ 6.7ರಷ್ಟು ಬೆಳವಣಿಗೆ ಕಂಡಿದೆ. ಕೃಷಿ ಬೆಳವಣಿಗೆಯಲ್ಲಿ ಶೇ.4.7ರಷ್ಟು ಕುಂಠಿತವಾಗಿದೆ. ಆಹಾರ ಧಾನ್ಯ ಉತ್ಪಾದನೆ 126 ಲಕ್ಷದಿಂದ 110 ಟನ್‌ಗೆ ಕುಸಿದಿದೆ. ದೇಶದ ಜೆಡಿಪಿಯಲ್ಲಿ ರಾಜ್ಯದ ಐಟಿ ವಲಯದ ಕೊಡುಗೆ ಅಪಾರವಾಗಿದೆ. ಉದ್ಯೋಗ ವಲಯ ಶೇ.12 ರಿಂದ ಶೇ.15ಕ್ಕೆ ಏರಿಕೆಯಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ರೈತರ, ಕಾರ್ಮಿಕರ ಕಲ್ಯಾಣ ಸಮಿತಿ ರಚನೆ, ರಾಜ್ಯದ ವಿವಿಧ ಕಡೆ ವಿಶೇಷ ಕೃಷಿ ವಲಯ, ಪ್ರತಿ ಕಂದಾಯ ವಿಭಾಗದಲ್ಲಿ ಸುವರ್ಣ ಕೃಷಿ ಗ್ರಾಮ ಯೋಜನೆ, ಮುಂದಿನ ಮೂರು ವರ್ಷಗಳಲ್ಲಿ ತುಮಕೂರಿನಲ್ಲಿ ಹೊಸ ಕೆಎಸ್‌ಆರ್‌ಪಿ ಪಡೆ, ಬೆಂಗಳೂರಿನಲ್ಲಿ 3 ಸಿಎಆರ್ ಪಡೆಗಳ ಸ್ಥಾಪನೆ ಮಾಡಲಾಗುವುದು ಎಂದು ಸಿಎಂ ತಿಳಿಸಿದರು. ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ಕೆಎಸ್‌ಆರ್‌ಪಿಗಳಲ್ಲಿ ಮಹಿಳೆಯರಿಗೆ ಸುರಕ್ಷಿತ ವಸತಿ ಸೌಲಭ್ಯಕ್ಕಾಗಿ ತಲಾ ನೂರು ಮಂದಿ ಸಾಮರ್ಥ್ಯದ ವಸತಿ ನಿಲಯ ನಿರ್ಮಾಣ, ಐದು ಹೊಸ ಮಹಿಳಾ ಪೊಲೀಸ್ ಠಾಣೆ ಸ್ಥಾಪನೆ ಮಾಡಲು ಬಜೆಟ್‌ನಲ್ಲಿ ಸಿಎಂ ಪ್ರಸ್ತಾಪಿಸಿದ್ದಾರೆ ಇಳಿಕೆ : * ಜನಸಾಮಾನ್ಯರು ಬಳಸುವ ಅಲ್ಯೂಮಿನಿಯಂ ಪಾತ್ರೆಗಳು * ಹತ್ತಿ * ಕೈಯಿಂದ ತಯಾರಿಸಿದ ಕಾಗದ * ಚಟ್ನಿಪುಡಿ * ಕಾಗದದಿಂದ ಮಾಡಿದ ಆಫೀಸ್ ಫೈಲ್


  • ಆಸ್ಪತ್ರೆಗೆ ಬಳಸುವ ಗವಸುಗಳು * ಸ್ಪೀಕರ್‌ಗಳು * ಹೆಲ್ಮೆಟ್ * ಎಲ್‌ಇಡಿ ಬಲ್ಬ್ * ಕಾಫೀ, ಟೀ, ರಬ್ಬರ್ * ಡಾಯಸರ್ * ಸೆಟ್‌ಟಾಪ್ ಬಾಕ್ಸ್

ಏರಿಕೆ : * ಪೆಟ್ರೋಲ್ * ಡೀಸೆಲ್ * ತಂಪು ಪಾನೀಯಗಳು * ಡಿಟಿಎಚ್ * ಬಿಯರ್ * ಸ್ಪಿರಿಟ್ * ವಾಹನ ತೆರಿಗೆ ಇಳಿಕೆ:

  • 2016 ಏಪ್ರಿಲ್‌ನಿಂದ ಮುಂದಿನ ಒಂದು ವರ್ಷದ ವರೆಗೆ ಅಕ್ಕಿ, ಗೋಧಿ, ಬೇಳೆಕಾಳುಗಳು, ಗೋಧಿ ಪದಾರ್ಥಗಳ ಮೇಲೆ ತೆರಿಗೆ ವಿನಾಯ್ತಿ ಮುಂದುವರಿಕೆ
  • ಸಂಸ್ಕರಿಸಿದ ರಾಗಿ ಮೇಲಿನ ತೆರಿಗೆಯನ್ನು 2016ರ ಏಪ್ರಿಲ್‌ನಿಂದ ಒಂದು ವರ್ಷಕ್ಕೆ ವಿನಾಯ್ತಿ
  • ಪ್ರೆಷರ್‌ಕುಕ್ಕರ್, ಕಟ್ಲರಿ ಹೊರತುಪಡಿಸಿ ಇತರೆ ಅಲ್ಯೂಮಿನಿಯಂ ಗೃಹೋಪಯೋಗಿ ಪಾತ್ರೆಗಳಿಗೆ ತೆರಿಗೆ ವಿನಾಯ್ತಿ
  • ಹತ್ತಿ ಮೇಲಿನ ತೆರಿಗೆ ಶೇ.5ರಿಂದ ಶೇ.2ಕ್ಕೆ ಇಳಿಕೆ
  • ಕೈಯಿಂದ ತಯಾರಿಸಿದ ಕಾಗದದ ಉತ್ಪನ್ನಗಳ ಮೇಲೆ ತೆರಿಗೆ ವಿನಾಯ್ತಿ
  • ಶೇಂಗಾ, ಗುರೆಳ್ಳು, ಕೊಬ್ಬರಿ, ಬೆಳ್ಳುಳ್ಳಿ, ಅಗಸೆ, ಹುರಿಗಡಲೆಯಿಂದ ತಯಾರಿಸಿದ ಚಟ್ನಿಪುಡಿ ಮೇಲಿನ ತೆರಿಗೆ ಶೇ.14.5ರಿಂದ ಶೇ.55ಕ್ಕೆ ಇಳಿಕೆ
  • ಕಾಗದ, ಕಾಗದದ ಬೋರ್ಡ್‌ನಿಂದ ತಯಾರಿಸಿದ ಆಫೀಸ್ ಫೈಲ್ ಮೇಲಿನ ತೆರಿಗೆ ಶೇ.14.5ರಿಂದ ಶೇ.5.5ಕ್ಕೆ ಇಳಿಕೆ
  • ಅಡಲ್ಟ್ ಡಯಾಸರ್ ಮೇಲಿನ ತೆರಿಗೆ ಶೇ.14.5ರಿಂದ ಶೇ.5.5ಕ್ಕೆ ಇಳಿಕೆ
  • ರಬ್ಬರ್‌ಷೀಟ್ ಮಾಡುವ ಹಸ, ಚಾಲಿತ ಯಂತ್ರದ ಮೇಲಿನ ತೆರಿಗೆ ಶೇ.14.5ರಿಂದ ಶೇ.5.5ಕ್ಕೆ ಇಳಿಕೆ
  • ಸೆಟ್‌ಟಾಪ್ ಬಾಕ್ಸ್ ಮೇಲಿನ ತೆರಿಗೆ ಶೇ.14.5ರಿಂದ ಶೇ.5.5ಕ್ಕೆ ಇಳಿಕೆ
  • ಒಮ್ಮೆ ಮಾತ್ರ ಉಪಯೋಗಿಸುವ ಶಸ್ತ್ರ ಚಿಕಿತ್ಸೆ ಗೌನ್, ಕೋಟು, ಮಾಸ್, ಕ್ಯಾಸ್ ಮೇಲಿನ ತೆರಿಗೆ ಶೇ.14.5ರಿಂದ ಶೇ.5.5ಕ್ಕೆ ಇಳಿಕೆ
  • ಮಲ್ಟಿ ಮೀಡಿಯಾ ಸ್ಪೀಕರ್‌ಗಳ ಮೇಲಿನ ತೆರಿಗೆ ಶೇ.14.5ರಿಂದ ಶೇ.5.5ಕ್ಕೆ ಇಳಿಕೆ
  • ಹೆಲ್ಮೆಟ್ ಮೇಲಿನ ತೆರಿಗೆ ಶೇ.14.5ರಿಂದ ಶೇ.5.5ಕ್ಕೆ ಇಳಿಕೆ
  • ಎಲ್‌ಇಡಿ ಬಲ್ಬ್‌ಗಳ ಮೇಲಿನ ತೆರಿಗೆ ಶೇ.14.5ರಿಂದ ಶೇ.5.5ಕ್ಕೆ ಇಳಿಕೆ
  • ಕಾಫಿ, ಟೀ, ರಬ್ಬರ್ ಮತ್ತು ಇತರೆ ತೋಟದ ಬೆಳೆಗಳ ಮೇಲಿನ ಕೃಷಿ ವರಮಾನ ತೆರಿಗೆ ರದ್ದು


  • ವಿದ್ಯುತ್ ಚಾಲಿತ ಸಾರಿಗೆ ಹಾಗೂ ಸಾರಿಗೇತರ ವಾಹನಗಳಿಗೆ ಸಂಪೂರ್ಣ ತೆರಿಗೆ ವಿನಾಯ್ತಿ

ಬಜೆಟ್ ಹೈಲೈಟ್ಸ್  :

  • ಕನ್ನಡ ಚಿತ್ರ ಪ್ರಗತಿ ದಾಖಲಿಸಲು ಅತ್ಯುತ್ತಮ ಕಥಾ ಚಿತ್ರಗಳು, ಸೂಕ್ಷ್ಮ ಚಿತ್ರಗಳು, ಆತ್ಮಕಥಾ ಚಿತ್ರಗಳು ಸಂರಕ್ಷಿಸಿಡಲು ಸುಸಜ್ಜಿತ ಚಲನಚಿತ್ರ ಭಂಡಾರ ಸ್ಥಾಪನೆ
  • ಜನತಾ ಚಿತ್ರ ಮಂದಿರಗಳ ನಿರ್ಮಾಣಕ್ಕೆ ಪ್ರೋತ್ಸಾಹ ಧನ
  • ಪತ್ರಕರ್ತರ ಮಾಸಾಶನ 6 ಸಾವಿರದಿಂದ 8 ಸಾವಿರಕ್ಕೆ ಹೆಚ್ಚಳ
  • ವಾರ್ತಾ ಇಲಾಖೆಗೆ 156 ಕೋಟಿ ಅನುದಾನ.
  • ಮುಂದಿನ 3 ವರ್ಷಗಳಲ್ಲಿ ತುಮಕೂರಿನಲ್ಲಿ ಹೊಸ ಕೆಎಸ್‌ಆರ್‌ಪಿ ಪಡೆ ಬೆಂಗಳೂರಿನಲ್ಲಿ 3 ಸಿಎಆರ್ ಪಡೆಗಳ ಸ್ಥಾಪನೆ
  • ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ಕೆಎಸ್‌ಆರ್‌ಪಿಗಳಲ್ಲಿ ಮಹಿಳೆಯರಿಗೆ ಸುರಕ್ಷಿತ ವಸತಿ ಸೌಲಭ್ಯಕ್ಕಾಗಿ ತಲಾ 100 ಮಂದಿ ಸಾಮರ್ಥ್ಯದ ವಸತಿ ನಿಲಯ ನಿರ್ಮಾಣ.
  • 5 ಹೊಸ ಮಹಿಳಾ ಪೊಲೀಸ್ ಠಾಣೆ ಸ್ಥಾಪನೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಹಿಳಾ ಠಾಣೆ ನಿರ್ಮಿಸುವುದರಿಂದ ಸ್ಥಾಪಿಸಿದಂತಾಗುತ್ತದೆ.
  • ಪೊಲೀಸ್ ಇಲಾಖೆ ಆಧುನೀಕರಣ ಯೋಜನೆಯಡಿ 35 ಪೊಲೀಸ್ ಠಾಣೆ, ವೃತ್ತ ಕಚೇರಿ ಉಪವಿಭಾಗ ಕಚೇರಿಗಳಿಗೆ 2 ವರ್ಷಗಳಲ್ಲಿ ಕಟ್ಟಡ ನಿರ್ಮಾಣ
  • ಜನ ಸ್ನೇಹಿ ಪೊಲೀಸ್ ಠಾಣೆ ಸ್ಥಾಪಿಸಲು ತಲಾ ಒಂದು ಲಕ್ಷ ರೂ. ವೆಚ್ಚದಲ್ಲಿ ಹಾಲಿ ಇರುವ ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರಿಗೆ ಮೂಲ ಸೌಕರ್ಯಕ್ಕೆ 10 ಕೋಟಿ.
  • ಪೊಲೀಸ್ ಗೃಹ-2020 ಅಡಿಯಲ್ಲಿ 6802 ವಸತಿ ಗೃಹ ನಿರ್ಮಾಣ ಕಾರ್ಯ ಪ್ರಾರಂಭವಾಗಿದ್ದು, ಮುಂದಿನ ಆರ್ಥಿಕ ಸಾಲಿನಲ್ಲಿ ಪೂರ್ಣ.
  • ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗಾಗಿ ಆನಂದ್‌ರಾವ್ ವೃತ್ತದ ಬಳಿ ಅತಿಥಿ ಗೃಹ ನಿರ್ಮಾಣ.
  • ಹೊಯ್ಸಳ ಗರುಡ ಮಾದರಿ ವಾಹನಗಳ ಸಂಖ್ಯೆಯನ್ನು 184ರಿಂದ 384ಕ್ಕೆ ಹೆಚ್ಚಿಸಿ ಬೆಂಗಳೂರಿನ ಜತೆಗೆ ಬೇರೆ ಕಮಿಷನರೇಟ್‌ಗಳಿಗೂ ನೀಡಲಾಗುವುದು.
  • ಕಾರವಾರ ಮತ್ತು ಬಂಟ್ವಾಳದಲ್ಲಿ ಹೊಸ ಕಾರಾಗೃಹ ನಿರ್ಮಾಣ. ಕೆಎಸ್‌ಎಫ್ ವಿಶೇಷ ಅಭಿವೃದ್ಧಿ ಯೋಜನೆಯಡಿ ಕೊಳ್ಳೇಗಾಲ, ಕೊರಟಗೆರೆ, ನಿಪ್ಪಾಣಿ, ಬೆಂಗಳೂರು ಪೂರ್ವ ತಾಲ್ಲೂಕುಗಳಲ್ಲಿ ಅಗ್ನಿ ಶಾಮಕ ಠಾಣೆ ನಿರ್ಮಾಣ.
  • ರಾಯಚೂರು, ನಾಗಮಂಗಲ, ನಿಪ್ಪಾಣಿ, ಬೆಂಗಳೂರು ಪೂರ್ವ ತಾಲ್ಲೂಕು 94 ವಸತಿ ಗೃಹಗಳ ನಿರ್ಮಾಣ. ರಾಯಚೂರು ಜಿಲ್ಲಾ ಗೃಹ ರಕ್ಷಕ ತರಬೇತಿ ಕೇಂದ್ರ ನಿರ್ಮಾಣ.
  • ಒಟ್ಟಾರೆ ಒಳಾಡಳಿತ ಇಲಾಖೆಗೆ 4.462 ಕೋಟಿ ರೂ. ಅನುದಾನ ಒದಗಿಸಲಾಗಿದೆ.
  • ಎಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿಗಳ ಲೈಸೆನ್ಸ್ ನೀಡಿಕೆಯನ್ನು ಸ್ವಯಂ ಚಾಲಿತಗೊಳಿಸುವುದು.
  • ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ನಿಲ್ದಾಣ ಕಾರ್ಯಾಗಾರಗಳಲ್ಲಿ ಸಿಸಿ ಟಿವಿ ಅಳವಡಿಕೆ.
  • ಕೆಎಸ್‌ಆರ್‌ಟಿಸಿ ಈಶಾನ್ಯ-ವಾಯುವ್ಯ ಸಾರಿಗೆ ಸಂಸ್ಥೆಗಳಲ್ಲಿ ವಾಹನ ಟ್ರ್ಯಾಕಿಂಗ್ ಘಟಕ ಸ್ಥಾಪನೆ.
  • ಬಿಎಂಟಿಸಿಯಲ್ಲಿ ಇಂಟಲಿಜೆನ್ಸ್ ಸಾರಿಗೆ ವ್ಯವಸ್ಥೆ ಕಾರ್ಯಗತ, ಟಿಕೇಟಿಂಗ್‌ಗೆ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ.
  • ಬಿಎಂಟಿಸಿಗೆ 650 ಹೊಸ ಬಸ್ ಖರೀದಿ.
  • ವೈಟ್‌ಫೀಲ್ಡ್ ಸೇರಿದಂತೆ ಐಟಿ ಪ್ರದೇಶದ ಸಂಚಾರ ದಟ್ಟಣೆ ಕಡಿಮೆ ಮಾಡಲು ಬಸ್ ಖರೀದಿಗೆ ಸಹಾಯ ಧನ.