ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Sharanya001/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಳೆದ ದಶಕದಿಂದ ಈಚೆಗೆ HIV/AIDSನ ನಿರ್ವಹಣೆಯಲ್ಲಿ ಉತ್ತಮ ಪೋಷಕಾಂಶಗಳ ಆವಶ್ಯಕತೆಯು ಹೆಚ್ಚಾಗಿದೆ. AIDS ರೋಗಿಗಳಲ್ಲಿ ಕಂಡುಬರುವ ಹೆಚ್ಚಿನ ತೊಂದರೆಗಳ ವಿರುದ್ಧ ಹೋರಾಡುವಲ್ಲಿ ಪೋಷಣಾಭರಿತವಾದ ಆಹಾರ ಒಂದು ಅತ್ಯಂತ ಶಕ್ತಿಯುತವಾದ ಆಯುಧ ಎಂಬುದಾಗಿ ವೈದ್ಯಕೀಯ ಸಂಶೋಧನೆಗಳು ತೋರಿಸಿಕೊಟ್ಟಿವೆ.

ಒಳ್ಳೆಯ ಪೋಷಕಾಂಶಗಳು ಅಂದರೆ ಸಾಕಷ್ಟು ಪ್ರಮಾಣದಲ್ಲಿ ಮ್ಯಾಕ್ರೋನ್ಯೂಟ್ರಿಯೆಂಟ್ಸ್‌ ಗಳನ್ನು ಪಡೆಯುವುದು ಎಂದು ಅರ್ಥ. ಮ್ಯಾಕ್ರೋನ್ಯೂಟ್ರಿಯೆಂಟ್ಸ್‌ಗಳಲ್ಲಿ ಕ್ಯಾಲೊರಿಗಳು (ಶಕ್ತಿ), ಪ್ರೋಟೀನ್‌ಗಳು, ಕಾಬೊìàಹೈಡ್ರೇಟ್ಸ್‌ ಮತ್ತು ಕೊಬ್ಬಿನ ಆಂಶಗಳಿರುತ್ತವೆ. ಇವು ನಿಮ್ಮ ಶರೀರದ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಮೈಕ್ರೋನ್ಯೂಟ್ರಿಯೆಂಟ್ಸ್‌ ಗಳು ಅಂದರೆ ವಿಟಾಮಿನ್‌ಗಳು ಮತ್ತು ಖನಿಜಾಂಶಗಳು. ಇವು ಶರೀರದ ಜೀವಕೋಶಗಳು ಸರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತವೆ ಆದರೆ ಶರೀರದ ತೂಕ ಕಡಿಮೆಯಾಗುವುದನ್ನು ಇವು ತಡೆಯಲಾರವು. HIVಯನ್ನು ಹೊಂದಿರುವ ಅನೇಕ ಜನರಿಗೆ ಒಳ್ಳೆಯ ಪೋಷಣೆಯ ಕೊರತೆ ಬಾಧಿಸುತ್ತಿರುತ್ತದೆ. ನಿಮ್ಮ ದೇಹವು ಯಾವುದೇ ಸೋಂಕಿನ ವಿರುದ್ಧ ಹೋರಾಡುತ್ತಿರುವಾಗ, ಅದು ಹೆಚ್ಚು ಶಕ್ತಿಯನ್ನು ಉಪಯೋಗಿಸುತ್ತದೆ ಮತ್ತು ಇದಕ್ಕಾಗಿ ಸಾಮಾನ್ಯಕ್ಕಿಂತ ಹೆಚ್ಚು ಆಹಾರವನ್ನು ಸೇವಿಸಬೇಕಾಗುವುದು. ಆದರೆ ನಿಮಗೆ ಅನಾರೋಗ್ಯ ಇರುವಾಗ ನೀವು ಸಾಮಾನ್ಯಕ್ಕಿಂತ ಕಡಿಮೆ ಆಹಾರ ಸೇವಿಸುತ್ತೀರಿ.

HIV/AIDS ರೋಗಿಗಳ ಪೋಷಣೆಗೆ ಸಂಬಂಧಿಸಿದಂತೆ ಸಾಮಾನ್ಯ ನಿಯಮಗಳು 1. ಸಹಜ ದೇಹ ತೂಕವನ್ನು ಕಾಪಾಡಿಕೊಳ್ಳಿ. ನೀವು ಸೇವಿಸಬೇಕಾದ ಕ್ಯಾಲೊರಿಯ ಬಗ್ಗೆ ನಿಮಗೆ ಅರಿವಿರಲಿ ಮತ್ತು ದೇಹದ ತೂಕ ಸಹಜವಾಗಿರಲಿ.

2. ಸ್ನಾಯುಗಳನ್ನು ಬೆಳೆಸಿಕೊಳ್ಳಿ/ದೇಹ ಸಾಂದ್ರತೆಯು ತೆಳುವಾಗಿರುವಂತೆ ನೋಡಿಕೊಳ್ಳಿ. ದೇಹದ ಸಾಮರ್ಥ್ಯವನ್ನು ಹೆಚ್ಚಿಸುವ ತರಬೇತಿಯಲ್ಲಿ ತೊಡಗಿ ಅಗತ್ಯ ಅನಿಸಿದರೆ ದೇಹದ ಸ್ನಾಯುಗಳನ್ನು ಬೆಳೆಸಲು ಅಥವಾ ಕಾಪಾಡಿಕೊಳ್ಳಲು ಸ್ಟೀರಾಯ್ಡ ಅಥವಾ ಹಾರ್ಮೋನ್‌ಗಳನ್ನು ಉಪಯೋಗಿಸಿಕೊಳ್ಳಿ.

3.ಜೀರ್ಣಾಂಗವ್ಯೂಹ ಚೆನ್ನಾಗಿರಲಿ. ಜೀರ್ಣಾಂಗವ್ಯೂಹ ಅಂದರೆ ಅದು ನಿಮ್ಮ ಆರೋಗ್ಯದ ಕೇಂದ್ರ ಇದ್ದ ಹಾಗೆ. ಆಹಾರವನ್ನು ಸರಿಯಾಗಿ ಜಗಿದು ತಿನ್ನುವಂತಹ ಸರಳ ಸೂತ್ರಗಳ ಮೂಲಕ ನಿಮ್ಮ ಜೀರ್ಣಾಂಗವ್ಯೂಹದ ಕೆಲಸವನ್ನು ಸರಳಗೊಳಿಸಿಕೊಳ್ಳಿ. 1-3 ಭಾರಿ ಊಟಗಳಿಗಿಂತ 4-6 ಸಲ ಸಣ್ಣ-ಸಣ್ಣ ಪ್ರಮಾಣದ ಊಟಗಳನ್ನು ಸೇವಿಸಿದರೆ ಒಳ್ಳೆಯದು.

4.ದೇಹಕ್ಕೆ ಪೋಷಣೆ ನೀಡುವಂತಹ ಉಪಶಮನಕಾರಿ ಆಹಾರಗಳನ್ನು ಹೆಚ್ಚು ಸೇವಿಸಿ. ಸಂಸ್ಕರಿಸಿದ ಆಹಾರಗಳನ್ನು ಸೇವಿಸಬೇಡಿ.

5. ಪ್ರತಿ ದಿನವೂ 6-10 ಕಪ್‌ಗ್ಳಷ್ಟು ಕೆಫಿನ್‌ ರಹಿತ ದ್ರವಾಹಾರವನ್ನು ಸೇವಿಸಿ.

6.ಪೂರಣಗಳನ್ನು ಸೂಕ್ತ ರೀತಿಯಲ್ಲಿ ಮತ್ತು ನಿಯಮಾನುಸಾರ ಬಳಸಿ.

7.ಸಾಮಾಜಿಕ ಮತ್ತು ಭಾವನಾತ್ಮಕ ಪರಿತ್ಯಕ್ತತೆಗಳು ನಿಮ್ಮ ಆಹಾರ ಆಯ್ಕೆಗಳ ಮೇಲೆ ಋಣಾತ್ಮಕ ಪ್ರಭಾವವನ್ನು ಬೀರುವ ಕಾರಣಕ್ಕಾಗಿ,ಈ ಅಂಶಗಳನ್ನು ಸರಿಯಾಗಿ ನಿಭಾಯಿಸಿ.

ಆಹಾರ ನಿರ್ವಹಣೆ: ಹಣ್ಣು ಮತ್ತು ತರಕಾರಿಗಳು: ಹಣ್ಣು ಮತ್ತು ತರಕಾರಿಗಳು ವಿಟಾಮಿನ್‌, ಖನಿಜಾಂಶಗಳು ಮತ್ತು ಆಂಟಿಆಕ್ಸಿಡಾಂಟ್‌ಗಳ ಪ್ರಮುಖ ಮೂಲಗಳಾಗಿದ್ದು , ಇವು ಸೊಂಕುಗಳು ಮತ್ತು ರೋಗಾಣುಗಳ ವಿರುದ್ಧ ಹೋರಾಡುವ ನಿಮ್ಮ ಶರೀರದ ಸಾಮರ್ಥವನ್ನು ಹೆಚ್ಚಿಸುತ್ತವೆ. ಪ್ರತಿ ದಿನ ಐದರಿಂದ ಆರು ಸರ್ವಿಂಗ್ಸ್‌ ಅಥವಾ ಸುಮಾರು ಮೂರು ಕಪ್‌ಗ್ಳಷ್ಟು ಹಣ್ಣು ತರಕಾರಿಗಳನ್ನು ಸೇವಿಸಬೇಕು. ತಾಜಾ ಮತ್ತು ಬಣ್ಣ ಬಣ್ಣದ ಹಣ್ಣು ತರಕಾರಿಗಳನ್ನು ಅಂದರೆ ಬೆರ್ರಿಗಳು, ನಿಂಬೆ ಜಾತಿಯ ಹಣ್ಣುಗಳು, ಸೇಬು, ಕೆಂಪು ದ್ರಾಕ್ಷಿ, ಟೊಮ್ಯಾಟೋಗಳು, ಸೊಪ್ಪು-ತರಕಾರಿಗಳು, ಬ್ರಾಕಲಿ ಮತ್ತು ಮೊಳಕೆ ಬರಿಸಿದ ಹಣ್ಣು ತರಕಾರಿಗಳಲ್ಲಿ ಆಂಟಿ ಆಕ್ಸಿಡಾಂಟ್‌ಗಳು ಹೇರಳವಾಗಿ ಇರುವುದರಿಂದ, ಈ ವಿಧದವುಗಳನ್ನು ಹೆಚ್ಚು ಸೇವಿಸಬೇಕು.

ವಿಶೇಷ ಗುಣಮಟ್ಟದ ಪ್ರೊಟೀನ್‌: ತೆಳು ಅಂಗಾಂಶಗಳ ನಿರ್ಮಾಣ ಅಂಶಗಳಾದ ಅಮಿನೋ ಆಸಿಡ್‌ಗಳು ಪ್ರೊಟೀನ್‌ನಿಂದ ಸಿಗುತ್ತವೆ. ಪ್ರೊಟೀನ್‌ ಸಮೃದ್ಧ ಆಹಾರಗಳು ದೇಹದ ರೋಗ ಪ್ರತಿರೋಧಕ ವ್ಯವಸ್ಥೆಯನ್ನು ಉತ್ತಮಪಡಿಸುತ್ತವೆ, ಗ್ರಹಣ ಶಕ್ತಿ ಮತ್ತು ಅಂಗಾಂಶಗಳ ಪುನಶ್ಚೇತನಾ ವ್ಯವಸ್ಥೆಯನ್ನು ಉತ್ತಮಪಡಿಸುತ್ತವೆ. ಮೊಟ್ಟೆ, ತೆಳು ಮಾಂಸ, ಸೋಯಾ ಮತ್ತು ಹಾಲಿನ ಉತ್ಪನ್ನಗಳು ಸ್ನಾಯುಗಳ ಅಂಗಾಂಶಗಳನ್ನು ಉತ್ತಮಪಡಿಸುತ್ತವೆ ಮತ್ತು ಏಐV/ಅಐಈಖ ಚಿಕಿತ್ಸೆಯ ಅಡ್ಡ ಪರಿಣಾಮವಾಗಿ ಸಂಭವಿಸುವ ಅಕಾರಣವಾಗಿ ದೇಹದ ತೂಕ ಕಡಿಮೆಯಾಗುವ ಪ್ರಕ್ರಿಯೆಯನ್ನು ತಗ್ಗಿಸಲು ನೆರವಾಗುತ್ತವೆ. ಪ್ರೊಟೀನ್‌ ಸಮೃದ್ಧವಾಗಿರುವ ಆಹಾರಗಳು ಅಂದರೆ ಬೇಕ್‌ ಮಾಡಲಾದ ಸ್ಕಿನ್‌ಲೆಸ್‌ ಚಿಕನ್‌ ಅಥವಾ ಟರ್ಕಿ ಬ್ರೆಸ್ಟ್‌ , ಮೊಟ್ಟೆ ಮತ್ತು ತರಕಾರಿಯ ಆಮ್ಲೆಟ್‌, ಟೋಫ‌ು, ಗ್ರಿಲ್‌ ಮಾಡಲಾದ ಮೀನು ಮತ್ತು ಕಡಿಮೆ ಕೊಬ್ಬಿನ ಹಾಲು, ಯೋಗರ್ಟ್‌ ಮತ್ತು ಪನೀರ್‌.

ಇಡಿ ಧಾನ್ಯಗಳು: ಇಡಿ ಧಾನ್ಯಗಳು ನಾರು ಮತ್ತು ಪೋಷಕಾಂಶಗಳ ಅತ್ಯುತ್ತಮ ಮೂಲಗಳು. ಕಬ್ಬಿಣಾಂಶವು ಏಐV/ಅಐಈಖ ರೋಗಿಗೆ ಆವಶ್ಯಕ ಇರುವ ಅತ್ಯುತ್ತಮ ಪೋಷಕಾಂಶ. ಪುಷ್ಟಿಗೊಳಿಸಲಾಗದ ಬ್ರೆಡ್‌ಗಳು, ಕುರುಕಲು ತಿಂಡಿಗಳು ಹಾಗೂ ಸಂಕೀರ್ಣ ಆಹಾರಗಳಾದ ಇಡಿಯ ಧಾನ್ಯಗಳು ಇತ್ಯಾದಿಗಳಲ್ಲಿ ಇದು ಹೆಚ್ಚು ಇರುತ್ತದೆ. ಉತ್ತಮ ಫ‌ಲಿತಾಂಶಕ್ಕಾಗಿ, ವಿವಿಧ ರೀತಿಯ ಇಡಿ ಧಾನ್ಯಗಳನ್ನು ಬಳಸಿಕೊಳ್ಳಿ, ಅಂದರೆ ಓಟ್ಸ್‌, ಇಡಿ ಗೋಧಿ, ವೈಲ್ಡ್‌ ರೈಸ್‌, ಕಂದು ಅಕ್ಕಿ, ಬಾರ್ಲಿ, ಪಾಪ್‌ಕಾರ್ನ್ ಇತ್ಯಾದಿಗಳನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ನಿಯಮಿತವಾಗಿ ಅಳವಡಿಸಿಕೊಳ್ಳಿ. ಇಡಿ ಧಾನ್ಯದ ಆಹಾರ ವಸ್ತುಗಳನ್ನು ಖರೀದಿಸುವಾಗ, ಅದರಲ್ಲಿ ಇಡಿಯ ಧಾನ್ಯಗಳನ್ನು ಪ್ರಮುಖ ಅಂಶಗಳಾಗಿ ಬಳಸಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಆರೋಗ್ಯಕರ ಕೊಬ್ಬು: ಆಹಾರದಲ್ಲಿನ ಕೊಬ್ಬು ವಿಟಾಮಿನ್‌ ಕೆ. ಮತ್ತು ಈ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಮಾತ್ರವಲ್ಲದೆ, ಇದು ಆಹಾರದ ವೈಶಿಷ್ಟ್ಯವನ್ನೂ ಸಹ ಉತ್ತಮ ಪಡಿಸುತ್ತದೆ, ಕೂದಲು, ಚರ್ಮ ಮತ್ತು ಮೆದುಳಿನ ಚಟುವಟಿಕೆಯನ್ನು ಉತ್ತಮಪಡಿಸುತ್ತದೆ. ಪ್ರತಿ ದಿನ ಕನಿಷ್ಠ ಒಂದು ಸರ್ವಿಂಗ್‌ನಷ್ಟು ಬೀಜಗಳನ್ನು ಸೇವಿಸುವುದು ಅತ್ಯುತ್ತಮ ಎಂದು ಶಿಫಾರಸು ಮಾಡಲಾಗುತ್ತದೆ. ಆರೋಗ್ಯಕರ, ಕೊಬ್ಬಿನ ಮೂಲಗಳಾದ ಅನ್‌- ಸ್ಯಾಚುರೇಟೆಡ್‌ ಕೊಬ್ಬನ್ನೇ ಹೆಚ್ಚಾಗಿ ಆರಿಸಿಕೊಳ್ಳಿ, ಅಂದರೆ ಆಲಿವ್‌ ಎಣ್ಣೆ, ರಿಫೈಂಡ್‌ ಎಣ್ಣೆ, ಸೂರ್ಯಕಾಂತಿ ಎಣ್ಣೆ, ವಾಲ್ನಟ್‌, ಬಾದಾಮಿ, ಅವಕಾಡೋ ಮತ್ತು ಸಾಲ್ಮನ್‌, ಟ್ಯೂನಾ ಮತ್ತು ಸಾರ್ಡಿನ್‌ ನಂತಹ ಕೊಬ್ಬಿನ ಮೀನನ್ನು ಆರಿಸಿಕೊಳ್ಳಿ.

ಸ್ನಾಯಗಳ ಬೆಳವಣಿಗೆ ಮತ್ತು ದೇಹದ ಸಾಮರ್ಥ್ಯವನ್ನು ಹೆಚ್ಚಿಸಲು, ಹದ ಪ್ರಮಾಣದ ಭಾರ ಎತ್ತುವಿಕೆ, ಆರೋಬಿಕ್‌ ವ್ಯಾಯಾಮಗಳಾದ ನಡಿಗೆ, ಈಜು, ನೃತ್ಯ-ನಿಮ್ಮ ಹೃದಯದ ಗತಿಯನ್ನು ಮಾಮೂಲಿಗಿಂತ ತುಸು ಹೆಚ್ಚಿಸುವ ಯಾವುದೇ ರೀತಿಯ ವ್ಯಾಯಾಮಗಳನ್ನು ನಿಯಮಿತ ರೀತಿಯಲ್ಲಿ ಮಾಡುವುದರ ಜೊತೆಗೆ ಕ್ರಮವಾದ ಆಹಾರ ಸೇವನೆ ಉತ್ತಮ. ತಮ್ಮ ಶರೀರದ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು, ವೈರಸ್‌-ನಿರೋಧಕ ಔಷಧೋಪಚಾರಗಳ ಮೂಲಕ ವೈರಸ್‌ ಆಕ್ರಮಣವನ್ನು ತಡೆದು, ಏಐV ರೋಗಿಗಳೂ ಸಹ ದೀರ್ಘ‌ ಮತ್ತು ಪ್ರಯೋಜನಕಾರಿ ಬದುಕನ್ನು ಬಾಳಬಹುದು. HIV/AIDS ರೋಗಿಗಳಿಗೆ ಆಹಾರ ಕ್ರಮ

Start a discussion about ಸದಸ್ಯ:Sharanya001/sandbox

Start a discussion