ವಿಷಯಕ್ಕೆ ಹೋಗು

ಸದಸ್ಯ:Sharada Sridhar/ನನ್ನ ಪ್ರಯೋಗಪುಟ೨

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಿವಾನಿ ಭಟ್ನಾಗರ್ (ಮರಣ 23 ಜನವರಿ 1999)https://indianexpress.com/ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಕೆಲಸ ಮಾಡಿದ ಭಾರತೀಯ ಪತ್ರಕರ್ತೆ.

ಜೀವನ:

೧೯೯೯ ರ ಜನವರಿ ೨೩ ರಂದು ಶಿವಾನಿ ಭಟ್ನಾಗರ್ ರವರ ಹತ್ಯೆಯು ಭಾರತೀಯ ರಾಜಕೀಯದ ಉನ್ನತ ಹಂತಗಳನ್ನು ತಲುಪಿದ ಹಗರಣವೇಯಾಯಿತು. ಪ್ರಕರಣದ ತನಿಖೆ ನಡೆಸಿದ ದೆಹಲಿ ಪೊಲೀಸರು ಭಾರತೀಯ ಪೊಲೀಸ್ ಸೇವಾ ಅಧಿಕಾರಿಯಾದ ರವಿಕಾಂತ್ ಶರ್ಮಾ ರವರ ವಿರುದ್ಧ ಕೊಲೆ ಆರೋಪ ಹೊರಿಸಿದ್ದರು. ಆ ವರ್ಷದ ಆಗಸ್ಟ್ ೩ ರಂದು ಅರೆಸ್ಟ್ ವಾರಂತ್ ಹೊರಡಿಸಿಲಾಯಿತು. ತಲೆಮರೆಸಿಕೊಂಡು ಓಡಾಡುತ್ತಿದ್ದ ರವಿಕಾಂತ್ ಶರ್ಮಾ, ೨೭ ಸೆಪ್ಟೆಂಬರ್ ೨೦೦೨ ರಂದು ಪೊಲೀಸರಿಗೆ ಶರಣಾದರು. ಅವರ "ಅನ್ಯೋನ್ಯ" ಸಂಬಂಧವನ್ನು ಎಲ್ಲಿ ಭಟ್ನಾಗರ್ ರವರು ಬರ್ಹಿರಂಗಪಡಿಸುತ್ತಾರೆ ಎಂಬ ಭಯದಲ್ಲಿ ಅವರನ್ನು ಕೊಂದು ಹಾಕಿದರು. ಐಪಿಎಸ್ ಅಧಿಕಾರಿ ರವಿಕಾಂತ್ ಶರ್ಮಾ ಜೊತೆಗೆ ಶ್ರೀ ಭಗವಾನ್ ಶರ್ಮಾ, ಸತ್ಯ ಪ್ರಕಾಶ್ ಮತ್ತು ಪ್ರದೀಪ್ ಶರ್ಮಾರವರನ್ನು ಶಿವಾನಿ ಭಟ್ನಾಗರ್ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದರು. ಅವರನ್ನು ದೆಹಲಿಯ ಟ್ರಯಲ್ ಕೋರ್ಟ್ ಅಲ್ಲಿ ೧೮ ಮಾರ್ಚ್, ೨೦೦೮ ರಂದು ದೋಷಿಗಳೆಂದು ಘೋಷಿಸಲಾಯಿತು. ಇತರ ಇಬ್ಬರು ಆರೋಪಿಗಳು- ದೇವಪ್ರಕಾಶ್ ಶರ್ಮಾ ಮತ್ತು ವೇದ್ ಪ್ರಕಾಶ್ ಅಲಿಯಾಸ್ ಕಾಲು- ಇವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳ್ಳಲಾಯಿತು. ತಪ್ಪಿಗಸ್ಥರಿಗೆ ೨೪ ಮಾರ್ಚ್, ೨೦೦೮ ರಂದು ಜೀವಾವಧಿ ಶಿಕ್ಷೆ ವಿಧಿಸಲಾಯಿತು. ೧೨ ಅಕ್ಟೋಬರ್ ೨೦೧೧ ರಂದು [] ರವಿಕಾಂತ್ ಶರ್ಮಾ, ಶ್ರೀ ಭಗವಾನ್ ಶರ್ಮಾ ಮತ್ತು ಸತ್ಯ ಪ್ರಕಾಶ್ ಅವರನ್ನು ಮೇಲ್ಮನವಿಯಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಿತು. ಪ್ರದೀಪ್ ಶರ್ಮಾ ಅವರ ಶಿಕ್ಷೆಯನ್ನು ಎತ್ತಿ ಹಿಡಿಯಲಾಯಿತು. ಭಟ್ನಾಗರ್ ಅವರು [] ಪತ್ರಿಕೆಗೆ ಬರಹಗಾರರಾಗಿದ್ದರು. ಈಕೆ ರಾಕೇಶ್ ಭಟ್ನಾಗರ್ ಅವರ ಪತ್ನಿ ಮತ್ತು ತನ್ಮಯ್ ಭಟ್ನಾಗರ್ ಅವರ ತಾಯಿ. ಶಿವಾನಿ ಭಟ್ನಾಗರ್ ರವಿಕಾಂತ್ ಶರ್ಮಾ ರವರಿಗೆ ಗೆಳತಿಯಾಗಿದ್ದರು. ಇದು ರಾಕೇಶ್ ಭಟ್ನಾಗರ್ ಮತ್ತು ರವಿಕಾಂತ್ ಶರ್ಮಾ ಅವರ ಪತ್ನಿ ಮಧು ಅವರಿಗೆ ತಿಳಿದಿದ್ದ ಸಂಬಂಧವಾಗಿತ್ತು. ಬಿಜೆಪಿ ನಾಯಕ ಪ್ರಮೋದ್ ಮಹಾಜನ್ ಅವರು ಶಿವಾನಿ ಜೊತೆ ಸಂಬಂಧ ಹೊಂದಿದ್ದಾರೆಂದು ಮಧು ಆರೋಪಿಸಿದ್ದರು, ಆದ್ದರಿಂದ ಶಿವಾನಿಯ ಪತಿಯ ಆರೋಪವನ್ನು ನಿರಾಕರಿಸಲು ಅವರು ಕೊಲೆಯಲ್ಲಿ ಭಾಗಿಯಾಗಿದ್ದರು ಎಂದು ಮಧುವಿನ ಹೇಳಿಕೆಯಾಗಿತ್ತು. ಮಹಾಜನ್ ಅವರನ್ನು ದೆಹಲಿ ಪೊಲೀಸರು ತಪ್ಪಿತಸ್ಥರೆಂದು ಕಂಡುಹಿಡಿದರು. ಅವರು ಶಿವಾನಿಯೊಂದಿಗೆ ವೃತ್ತಿಪರ ಸಂಬಂಧವನ್ನು ಹೊರತುಪಡಿಸಿ ಯಾವುದೇ ರೀತಿಯ ಸಂಬಂಧವನ್ನು ಹೊಂದಿಲ್ಲ ಎಂದು ಪ್ರಮೋದ್ ಮಹಾಜನ್ ಕೂಡ ಹೇಳಿಕೆ ನೀಡಿದರು. ಶಿವಾನಿಯ ಬಳಿ ರವಿಕಾಂತ್ ಹಂಚಿಕೊಂಡ ರಾಜಕೀಯವಾಗಿ ಸೂಕ್ಷ್ಮವಾದ ಕಾನೂನು ದಾಖಲೆಗಳಿದ್ದ ಕಾರಣ ಅವಳನ್ನು ಕೊಂದನೆಂದು ವ್ಯಾಜ್ಯದಾರರು ವಾದಿಸಿದರು, ಕಾರಣ ಆ ದಾಖಲೆಗಳು ಸೇಂಟ್ ಕಿಟ್ಟಿ ಪ್ರಕರಣಕ್ಕೆ ಸಂಬಧಿಸಿದ್ದಾಗಿತ್ತು. ಆಕೆ ದಾಖಲೆಗಳನ್ನು ಹಿಂತಿರುಗಿಸಲು ಸಿದ್ಧರಿರಲಿಲ್ಲ ಹಾಗೂ ಅವನನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದ ಕಾರಣ, ರವಿಕಾಂತ್ ಶರ್ಮಾ ಅವಳನ್ನು ಕೊಲೆ ಮಾಡಿದನು ಎಂದು ವಾದಿಸಿದಾಗ, ರವಿಕಾಂತ್ ಶರ್ಮಾ ಈ ಆರೋಪಗಳನ್ನು ನಿರಾಕರಿಸಿದಾಗ ಶಿವಾನಿ ಅವರೊಂದಿಗೆ ಸಂಬಂಧ ಹೊಂದಿದ್ದಾರೆಂದು ಅವರ ಮೇಲೆ ಆರೋಪ ಹೂರಡಿಸಲಾಯಿತು. ಶಿವಾನಿ ತಮ್ಮ ಸಂಬಂಧವನ್ನು ಬಹಿರಂಗಪಡಿಸಲು ಬಯಸುತ್ತಿದ್ದರು ಆದರೆ ರವಿಕಾಂತ್ ಶರ್ಮಾ ಇದಕ್ಕೆ ಒಪ್ಪಲಿಲ್ಲ. ಶರ್ಮಾರವರು ತಮ್ಮ ಸಾಮಾಜಿಕ ಪ್ರತಿಷ್ಠೆಗೆ ಹೆದರಿ ಶಿವಾನಿ ಅವರನ್ನು ಕೊಂದು ಹಾಕಿದರು ಎಂದು ನಿರ್ಧರಿಸಲಾಯಿತು.

ನ್ಯಾಯಾಲಯದ ವಿಚಾರಣೆ:

ಅಮಾನತುಗೊಂಡಿದ್ದ ಐಪಿಎಸ್ ಅಧಿಕಾರಿ ರವಿಕಾಂತ್ ಶರ್ಮಾ ಮತ್ತು ಶಿವಾನಿ ಭಟ್ನಾಗರ್ ಅವರನ್ನು ಕೊಲ್ಲಲು ರವಿಕಾಂತ್ ಶರ್ಮಾ ನೇಮಿಸಿದ್ದ ಪ್ರದೀಪ್ ಶರ್ಮಾ ಅವರ ವಿಚಾರಣೆ ನಡೆಸಲಾಯಿತು.ಫಿರ್ಯಾದಿಗಳು ಮರಣದಂಡನೆಗೆ ಅರ್ಹರೇ ಅಥವಾ ಜೀವಾವಧಿ ಶಿಕ್ಷೆಗೆ ಅರ್ಹರೇ ಎಂಬುದರ ಕುರಿತು ವ್ಯಾಜ್ಯದಾರರು ಚರ್ಚಿಸುವುದನ್ನು ವಿಚಾರಣೆ ಒಳಗೊಂಡಿತ್ತು. ಉಳಿದ ಮೂವರು ಅಪರಾಧಿಗಳಾದ ಶ್ರೀ ಭಗವಾನ್, ವೇದ್ ಪ್ರಕಾಶ್ ಶರ್ಮಾ ಮತ್ತು ಸತ್ಯ ಪ್ರಕಾಶ್ ಅವರಿಗೂ ಜೀವಾವಧಿ ಶಿಕ್ಷೆ ನೀಡುವಂತೆ ಮನವಿ ಮಾಡಲಾಗಿದೆ. ರವಿಕಾಂತ್ ಶರ್ಮಾ ಮತ್ತು ಪ್ರದೀಪ್ ಶರ್ಮಾ ನಡುವಿನ ದೂರವಾಣಿ ದಾಖಲೆಗಳ ನಡುವೆ ಸಾಕಷ್ಟು ಪುರಾವೆಗಳು ಪತ್ತೆಯಾಗಿದ್ದು, ಶಿವಾನಿ ಸಾವಿಗೆ ಇವರಿಬ್ಬರೇ ಕಾರಣ ಎಂದು ಧೃಡವಾಯಿತು. ೨೦೯ ಕ್ಕೂ ಹೆಚ್ಚು ಸಾಕ್ಷಿಗಳು, ೪ ನ್ಯಾಯಾಧೀಶರು ಮತ್ತು ೨೦,೦೦೦ ಕ್ಕೂ ಹೆಚ್ಚು ಪುಟಗಳ ದಾಖಲೆಗಳನ್ನು ಹೊಂದಿ ನಡೆಯುತ್ತಿರುವ ೯ ವರ್ಷಗಳ ವಿಚಾರಣೆಯ ಪರಿಣಾಮವಾಗಿ ೧೨ ಅಕ್ಟೋಬರ್ ೨೦೧೧ ರಂದು ರವಿಕಾಂತ್ ಶರ್ಮಾ ಅವರನ್ನು ಒಂಬತ್ತು ವರ್ಷಗಳ ಕಾಲ ಜೈಲಿನಲ್ಲಿದ್ದ ನಂತರ ಹೈಕೋರ್ಟ್‌ಗಳು ಖುಲಾಸೆಗೊಳಿಸಿದವು (2002 ರಿಂದ-ಸ್ವತಃ ಪೊಲೀಸರಿಗೆ ಅವರೇ ಶರಣಾದರು) ಮತ್ತು ಇತರ ಅಪರಾಧಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅಪರಾಧಿಗಳಲ್ಲ ಎಂದು ಪರಿಗಣಿಸಲಾಯಿತು. ಪ್ರದೀಪ್ ಶರ್ಮಾರವರು ೨೦೦೯-೨೦೧೩ ರವರೆಗೆ (ಸುಮಾರು ನಾಲ್ಕು ವರ್ಷಗಳ ಕಾಲ) ಜೈಲು ಶಿಕ್ಷೆ ಅನುಭವಿಸಿದರು. ಶಿವಾನಿ ಅವರ ಅಪಾರ್ಟ್‌ಮೆಂಟ್ ಬ್ಲಾಕ್‌ನ ರಿಜಿಸ್ಟರ್‌ನಲ್ಲಿ ಸಿಕ್ಕಿರುವ ಕೈಬರಹದ ಸಾಕ್ಷ್ಯಾಧಾರದಿಂದಾಗಿ ಪ್ರದೀಪ್ ಅವರನ್ನು ಬಂಧಿಸಲಾಯಿತು, ಇದು ಅಪಾರ್ಟ್‌ಮೆಂಟ್ ಸಂಕೀರ್ಣದೊಳಗೆ ಹೋಗಲು ಪ್ರವೇಶವನ್ನು ಪಡೆಯಲು ಅವಕಾಶ ಮಾಡಿಕೊಟ್ಟಿತು. ಇದರೊಂದಿಗೆ ಕೂಲೆ ನಡೆದ ಸ್ಥಳ- ಶಿವಾನಿಯ ಅಪಾರ್ಟ್‌ಮೆಂಟ್‌ನಲ್ಲಿ ಆತನ ಬೆರಳಚ್ಚು ಪತ್ತೆಯಾಗಿತ್ತು. ಸಾಕ್ಷಿಯು ನಿಷ್ಪರಿಣಾಮಕಾರಿಯೆಂದು ಪರಿಗಣಿಸಲ್ಪಟ್ಟ ಅಥವಾ ವಿಶ್ವಾಸಾರ್ಹತೆಯ ಮೇಲೆ ಪ್ರಶ್ನಿಸಲ್ಪಟ್ಟ ಅನೇಕ ನಿದರ್ಶನಗಳಿದ್ದವು.ರವಿಕಾಂತ್ ಶರ್ಮಾ ಮತ್ತು ಪ್ರದೀಪ್ ಶರ್ಮಾ ನಡುವಿನ ದೂರವಾಣಿಕರೆಗಳಿಗೆ PW135/28 ಎಂದು ಅಡ್ಡಹೆಸರು ನೀಡಲಾಯಿತು. ಅದರ ಸತ್ಯತೆಯ ಬಗ್ಗೆ ನ್ಯಾಯಾಲಯವು ಸಾಕಷ್ಟು ಅನುಮಾನಗಳನ್ನು ಹೊಂದಿದ್ದರಿಂದ, ಶ್ರೀ ಭಗವಾನ್ ಅವರನ್ನು ಖುಲಾಸೆಗೊಳಿಸಲಾಯಿತು. ದೂರವಾಣಿ ಕರೆಗಳನ್ನು ಪೊಲೀಸರು ತಿರುಚಿರುವ ಸಾಧ್ಯತೆ ಇದೆ ಆದ್ದರಿಂದ ಅವುಗಳನ್ನು ಅವಲಂಬಿಸಲಾಗುವುದಿಲ್ಲ ಎಂದು ರವಿಕಾಂತ್ ಶರ್ಮಾ ಅವರು ಮನವಿ ಮಾಡಿಕೊಂಡ್ಡಿದ್ದಾಗ ಇದನ್ನು ನ್ಯಾಯಾಲಯವು ಮತ್ತಷ್ಟು ಪರಿಶೀಲಿಸಿತು. ಈ ದಾಖಲೆಗಳು ದೂರವಾಣಿ ಕಂಪನಿಯಿಂದ ನೇರವಾಗಿ ಲಭ್ಯವಾಗಿರುವ ದತ್ತಾಂಶಗಳಿಲ್ಲದ ಕಾರಣ ರವಿಕಾಂತ್ ಶರ್ಮಾ ವಿರುದ್ಧ ಯಾವುದೇ ನೇರ ಆರೋಪ ಹೊರಿಸಲು ಸಾಧ್ಯವಾಗುವುದಿಲ್ಲ ಎಂದು ನ್ಯಾಯಾಲಯವು ನಿರ್ಧರಿಸಿತು. []

ಉಲ್ಲೇಖನಗಳು

[ಬದಲಾಯಿಸಿ]