ಸದಸ್ಯ:Shankar kavya/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಪತ್ತು ನಿಯಂತ್ರಣ[ಬದಲಾಯಿಸಿ]

ಪತ್ತು ಅಥವಾ ಸಾಲದ ನಿಯಂತ್ರಣವು ಕೇಂದ್ರ ಬ್ಯಾಂಕಿನ ಅತ್ಯಂತ ಮಹತ್ವದ ಕಾರ್ಯವಾಗಿದೆ.ವಾಣಿಜ್ಯ ಬ್ಯಾಂಕುಗಲಳು ಸೃಷ್ಟಿಸುವ ಸಾಲವು ಆರ್ಥಿಕ ವ್ಯವಸ್ಥೆಯ ಮೇಲೆ ಹಲವು ರೀತಿಯ ಪರಿಣಾಮ ಬೀರುತ್ತದೆ.ಬ್ಯಾಂಕುಗಳು ಸಾಲವನ್ನು ಮಿತಿಮೀರಿ ಸೃಷ್ಟಿಸಿದಾಗ ಹಣದ ಪೂರೄಕೆ ಹೆಚ್ಚುವುದರ ಮೂಲಕ ಬೆಲೆ ಏರಿಕೆ ಸಂಭವಿಸುತ್ತದೆ.ಇದರಿಂದಾಗಿ ಆರ್ಥಿಕತೆಯಲ್ಲಿ ಹಲವಾರು ಗಂಭೀರ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ.ಆದುದರಿಂದ ವಾಣಿಜ್ಯ ಬ್ಯಾಂಕುಗಳು ಸೃಷ್ಟಿಸುವ ಸಾಲದ ಮೇಲೆ ಕೆಲಮಟ್ಟಿನ ನಿಯಂತ್ರಣ ಹೊಂದಿರುವುದು ಅವಶ್ಯವೆನಿಸುತ್ತದೆ.ರಿಸವ ಬ್ಯಾಂಕು ಆಫ್ ಭಾರತ ಸಾಲವನ್ನು ನಿಯಂತ್ರಿಸುತ್ತದೆ. ಪತ್ತು ನಿಯಂತ್ರಣದ ಅರ್ಥವಿವರಣೆ: ವಾಣಿಜ್ಯ ಬ್ಯಾಂಕುಗಳು ಸೃಷ್ಟಿಸುವ ಸಾಲದ ಹಣವನ್ನು ನಿಯಂತ್ರಿಸುವ ಕೇಂದ್ರ ಬ್ಯಾಂಕಿನ ಕಾರ್ಯವನ್ನು ಪತ್ತು ನಿಯಂತ್ರಣ ಎನ್ನಲಾಗುತ್ತದೆ.ಪತ್ತು ನಿಯಂತ್ರಣ ಕಾರ್ಯವು ಕೇಂದ್ರ ಬ್ಯಾಂಕಿನ ಹಣಕಾಸಿನ ನೀತಿಯ ಆತ್ಮವಾಗಿರುತ್ತದೆ.ಆದುದರಿಂದ ಪತ್ತು ನಿಯಂತ್ರಣ ಎಂದರೆ ಕೇಂದ್ರ ಬ್ಯಾಂಕು ತನ್ನ ಹಣಕಾಸಿನ ನೀತಿಯ ಮೂಲಕ ವಾಣಿಜ್ಯ ಬ್ಯಾಂಕುಗಳ ಸಾಲ ಸೃಷ್ಟಿ ಸಾರ್ಮಥ್ಯದ ಮೇಲೆ ಹತೋಟಿ ಹೊಂದಿರುವುದಾಗಿದ.

ಪತ್ತು ನಿಯಂತ್ರಣದ ಉದ್ದೇಶಗಳು:[ಬದಲಾಯಿಸಿ]

ಕೇಂದ್ರ ಬ್ಯಾಂಕೀನ ಪತ್ತು ನಿಯಂತ್ರಣದ ಪ್ರಮುಖ ಉದ್ದೇಶಗಳು ಈ ಕೆಳಗಿನಂತಿರುತ್ತವೆ ೧.ಸಾಮಾನ್ಯ ಬೆಲೆಯ ಮಟ್ಟದಲ್ಲಿ ಸ್ಥಿರತೆ ಕಾಪಾಡುವುದು.೨.ವಿನಿಮಯ ದರದಲ್ಲಿ ಸ್ಥಿರತೆ ಕಾಪಾಡುವುದು.೩.ಆರ್ಥಿಕ ಆವರ್ತಗಳನ್ನು ಹತೋಟಿಗೆ ತರುವುದು.೪.ಹಣದ ಮಾರುಕಟ್ಟೆಯಲ್ಲಿ ಸ್ಥಿಮಿತತೆಯ ಸಾಧನೆ.೫.ಉದ್ಯಮ ವ್ಯವಹಾರದ ಅಗತ್ಯಗಳನ್ನು ಪುರೃಸುವುದು ಮತ್ತು ೬.ಸ್ಥಿರತೆಯೊಂದಿಗೆ ಆರ್ಥಿಕ ಪ್ರಗತಿಯ ಸಾಧನೆ.[೧]

ಪತ್ತು ನಿಯಂತ್ರಣ ವಿಧಾನಗಳು:[ಬದಲಾಯಿಸಿ]

ವಾಣಿಜ್ಯ ಬ್ಯಾಂಕುಗಳು ಸೃಷ್ಟಿಸುವ ಪತ್ತಿನ ಹಣವನ್ನು ನಿಯಂತ್ರಿಸಲು ಕೇಂದ್ರ ಬ್ಯಾಂಕು ಅನೇಕ ವಿಧಾನಗಳನ್ನು ಅನುಸರಿಸುತ್ತದೆ.ಅವುಗಳನ್ನು ಒಟ್ಟಾರೆಯಾಗಿ ೧.ಸಾರ್ವತ್ರಿಕ ಅಥವಾ ಪರಿಮಾಣಾತ್ಮಕ ವಿಧಾನಗಳು ಮತ್ತು ೨.ಆಯ್ಕೆಯ ಅಥವಾ ಗುಣಾತ್ಮಕ ವಿಧಾನಗಳು ಎಂದು ಎರಡು ಭಾಗಗಳಾಗಿ ವರ್ಗೀಕರಿಸಲಾಗಿದೆ.ಇವುಗಳನ್ನು ವಿವರವಾಗಿ ಕೆಳಗೆ ಚರ್ಚಿಸಲಾಗಿದೆ.

೧.ಸಾರ್ವತ್ರಿಕ ಅಥವಾ ಪರಿಮಾಣಾತ್ಮಕ ವಿಧಾನಗಳು[ಬದಲಾಯಿಸಿ]

ಪತ್ತುನಿಯಂತ್ರಣದ ಸಾರ್ವತ್ರಿಕ ಅಥವಾ ಪರಿಮಾಣಾತ್ಮಕ ವಿಧಾನಗಳು ದೇಶದಲ್ಲಿನ ಒಟ್ಟಾರೆ ಪತ್ತಿನ ಪ್ರಮಾಣವನ್ನು ನಿಯಂತ್ರಿಸುವ ಗುರಿಹೊಂದಿರುತ್ತವೆ.ಆದ್ದರಿಂದ ಈ ವಿಧಾನಗಳು ತಮ್ಮ ಪರಿಣಾಮದಲ್ಲಿ ವ್ಯಾಪಕವಾಗಿರುತ್ತವೆ.ಈ ಕಾರಣದಿಂದಾಗಿ ಇವುಗಳನ್ನು ಸಾರ್ವತ್ರಿಕ ನಿಯಂತ್ರಣಗಳು ಎಂದು ಕರೆಯಲಾಗಿದೆ.ಪರಿಮಾಣಾತ್ಮಕ ಪತ್ತು ನಿಯಂತ್ರಣದ ಪ್ರಮುಖ ಪ್ರಕಾರಗಳೆಂದರೆ:೧.ಬ್ಯಾಂಕು ದರ ನೀತಿ,೨.ಮುಕ್ತ ಮಾರುಕಟ್ಟೆಯ ವ್ಯವಹಾರ ಮತ್ತು ೩.ಮೀಸಲು ಹಣದ ಪ್ರಮಾಣದ ಬದಲಾವಣೆ ಅಥವಾ ಚಲ ಮೀಸಲು ಅನುಪಾತ.ಇವುಗಳ ವಿವರ ಮುಂದಿನಂತಿದೆ

ಎ.ಬ್ಯಾಂಕು ದರದ ನೀತಿ:[ಬದಲಾಯಿಸಿ]

ಪರಿಮಾಣಾತ್ಮಕ ಸಾಲ ನಿಯಂತ್ರಣ ವಿಧಾನಗಳಲ್ಲೇ ಅತ್ಯಂತ ಸರಳವಾದ ಮತ್ತು ಪುರಾತನವಾದ ಸಾಲ ನಿಯಂತ್ರಣ ವಿಧಾನವೆಂದರೆ ಬ್ಯಾಂಕು ದರದ ನೀತಿಯಾಗಿದೆ.ಈ ವಿಧಾನವನ್ನು ಬ್ಯಾಂಕ್ ಆಫ಼್ ಇಂಗ್ಲೆಂಡ್ ವೊಟ್ಟ ಮೊದಲ ಬಾರಿಗೆ ಆಚರಣೆಗೆ ತಂದಿತು.ಬ್ಯಾಂಕು ದರದಲ್ಲಿ ವ್ಯತ್ಯಾಸಗಳುಂಟಾದಾಗ ಮಾರುಕಟ್ಟೆ ಬಡ್ಡಿ ದರಗಳಲ್ಲಿಯೂ ವ್ಯತ್ಯಾಸಗಳಾಗುತ್ತವೆ ಎಂಬ ತತ್ವದ ಆಧಾರದಲ್ಲಿ ಬ್ಯಾಂಕು ದರದ ನೀತಿ ಕೆಲಸ ಮಾಡುತ್ತದೆ.[೨]

ಬ್ಯಾಂಕು ದರದ ಅರ್ಥವಿವರಣೆ:[ಬದಲಾಯಿಸಿ]

ವಾಣಿಜ್ಯ ಬ್ಯಾಂಕುಗಳು ತಮಗೆ ಹಣದ ತುರ್ತು ಅವಶ್ಯಕತೆಯಿದ್ದಾಗ ತಮ್ಮ ಬಳಿಯಿರುವ ಪ್ರಥಮ ದರ್ಜೆ ಹುಂಡಿಗಳು ಮತ್ತು ಸರ್ಕಾರಿ ಭದ್ರತೆಗಳನ್ನು ಕೇಂದ್ರ ಬ್ಯಾಂಕಿನಲ್ಲಿ ವಟ್ಟಾಯಿಸುವ ಮೂಲಕ ಸಾಲ ಪಡೆಯುತ್ತವೆ.ಹಾಗೆ ಹುಂಡಿಗಳನ್ನು ವಟ್ಟಾಯಿಸಿ ಸಾಲ ನೀಡುವಾಗ ಕೇಂದ್ ಬ್ಯಾಂಕು ವಿಧಿಸುವ ಬಡ್ದಿದರಕ್ಕೆ ಬ್ಯಾಂಕು ದರ ಎಂದು ಹೆಸರು.ಆದ್ದರಿಂದ ವಾಣಿಜ್ಯ ಬ್ಯಾಂಕುಗಳು ಸಾಲ ಪಡೆಯಲು ತರುವ ಹುಂಡಿಗಳು ಅಥವಾ ಭದ್ರತೆಗಳ ಆಧಾರದಲ್ಲಿ ಸಾಲ ನೀಡುವಾಗ ಕೇಂದ್ರ ಬ್ಯಾಂಕು ವಿಧಿಸುವ ಅಧಿಕೃತ ಬಡ್ಡಿ ದರವನ್ನು ಬ್ಯಾಂಕು ದರ ಎನ್ನಲಾಗುತ್ತದೆ.ಸರಳವಾಗಿ ಇದನ್ನು ವಟ್ಟದ ದರ ಎನ್ನಬಹುದು.ವಾಣಿಜ್ಯ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಹುಂಡಿಗಳನ್ನು ವಟ್ಟಾಯಿಸುವುದರ ಮತ್ತು ಭದ್ರತೆಗಳನ್ನು ಕೊಳ್ಳುವುದರ ಮೂಲಕ ಸಾಲ ನೀಡುತ್ತವೆ.ಈ ಹುಂಡಿಗಳು ಪಕ್ವಗೊಳ್ಳುವ ಮೊದಲೇ ವಾಣಜ್ಯ ಬ್ಯಾಂಕುಗಳಿಗೆ ಹಣದ ತುರ್ತು ಅವಶ್ಯಕತೆ ಬಂದರೆ ತಮ್ಮ ಬಳಿಯಿರುವ ಹುಂಡಿಗಳು ಮತ್ತು ಭದ್ರತೆಗಳ ಆಧಾರದ ಮೇಲೆ ಕೇಂದ್ರ ಬ್ಯಾಂಕಿನಿಂದ ಸಾಲ ಪಡೆಯಲು ಪ್ರಯತ್ನಿಸುತ್ತವೆ.ಕೇಂದ್ರ ಬ್ಯಾಂಕು ಇರಿಸಿಕೊಳ್ಳುವ ಮೂಲಕ ಸಾಲ ನೀಡುತ್ತದೆ.ಹಾಗೆ ಸಾಲ ನೀಡುವಾಗ ಆ ಸಾಲದ ಮೇಲೆ ಒಂದು ನಿರ್ದಿಷ್ಟದರದ ಬಡ್ಡಿ ವಿಧಿಸುತ್ತದೆ.ಈ ಬಡ್ಡಿಯ ದರವನ್ನು ಬ್ಯಾಂಕುದರ ಎನ್ನಲಾಗುತ್ತದೆ.ಕೇಂದ್ರ ಬ್ಯಾಂಕು ಅಂತಿಮ ಋಣದಾತನಾಗಿ ವಾಣಿಜ್ಯ ಬ್ಯಾಂಕುಗಳು ಹಣಕಾಸಿನ ತೊಂದರೆಗೆ ಸಿಲುಕಿಕೊಂಡಿದ್ದಾಗ ಸಹಾಯ ಮಾಡುವುದರಿಂದ ವಾಣಿಜ್ಯ ಬ್ಯಾಂಕುಗಳು ಕೇಂದ್ರ ಬ್ಯಾಂಕಿನ ಬಳಿಗೆ ತಮ್ಮ ಹುಂಡಿ ಮತ್ತು ಭದ್ರತೆಗಳ ಆಧಾರದಲ್ಲಿ ಸಾಲ ನೀಡುವಂತೆ ಕೇಳಲು ಮುಂದಾಗತ್ತವೆ.ಈ ಆಧಾರದಲ್ಲಿ ಬ್ಯಾಂಕುದರ ನೀತಿ ಕಾರ್ಯಾಚರಣಗೆ ಬರುತ್ತದೆ.

ಬ್ಯಾಂಕು ದರದ ಕಾರ್ಯಾಚರಣೆ:[ಬದಲಾಯಿಸಿ]

ಈ ವೂದಲೇ ತಿಳಿಸಿದಂತೆ ಕೇಂದ್ರ ಬ್ಯಾಂಕಿನ ಬ್ಯಾಂಕು ದರದಲ್ಲಿನ ಬದಲಾವಣೆಗೆ ಅನುಗುಣವಾಗಿ ವಾಣಿಜ್ಯ ಬ್ಯಾಂಕುಗಳ ಮಾರುಕಟ್ಟೆ ದರಗಳಲ್ಲೂ ಬದಲಾವಣೆಗಳಾಗುತ್ತದೆ ಎಂಬ ಊಹೆಯ ಆಧಾರದಲ್ಲಿ ಬ್ಯಾಂಕು ದರ ನೀತಿಯು ಕಾರ್ಯಚರಣೆ ಮಾಡುತ್ತದೆ.ಅಂದರೆ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಸಾಲ ನೀಡುವಾಗ ವಿಧಿಸುವ ಬಡ್ಡಿದರವಾದ ಮಾರುಕಟ್ಟೆ ಬಡಿದ್ದರವು ಕೇಂದ್ರ ಬ್ಯಾಂಕಿನ ಬ್ಯಾಂಕು ದರದೊಂದಿಗೆ ನೇರ ಸಂಬಂಧ ಹೊಂದಿರುತ್ತದೆ.ಈ ಏರಿಳಿಕೆಯ ಆಧಾರದಲ್ಲಿ ವಾಣಿಜ್ಯ ಬ್ಯಾಂಕುಗಳ ಸಾಲದ ಹಣದ ಪ್ರಮಾಣವೂ ಏರಿಳಿತಕ್ಕೊಳಗಾಗುತ್ತದೆ.ಆರ್ಥಿಕ ವ್ಯವಸ್ಥೆಯಲ್ಲಿ ಬೆಲೆಯೇರಿಕೆ ಮತ್ತು ಹಣದುಬ್ಬರದ ಸನ್ನಿವೇಷ ಅಸ್ತಿತ್ವದಲ್ಲಿದ್ದಾಗ ಕೇಂದ್ರ ಬ್ಯಾಂಕು ಬ್ಯಾಂಕು ದರವನ್ನು ಏರಿಸುತ್ತದೆ.ಇದರಿಂದಾಗಿ ವಾಣಿಜ್ಯ ಬ್ಯಾಂಕುಗಳು ಕೇಂದ್ರ ಬ್ಯಾಂಕಿನಿಂದ ಸಾಲ ಪಡೆಯುವಾಗ ಹೆಚ್ಚು ಬಡ್ಡಿ ನೀಡಬೇಕಾಗುತ್ತದೆ.ಪರಿಣಾಮವಾಗಿ ವಾಣಿಜ್ಯ ಬ್ಯಾಂಕುಗಳೂ ತಮ್ಮ ಬಡ್ಡಿ ದರವನ್ನು ಹೆಚ್ಚಿಸುತ್ತವೆ.ಈ ಸನ್ನಿವೇಷದಲ್ಲಿ ವಾಣಿಜ್ಯ ಬ್ಯಾಂಕುಗಳ ಹೆಚ್ಚಿನ ಬಡ್ಡಿದರದಿಂದಾಗಿ ಉದ್ಯಮಿಗಳು ಮತ್ತು ವ್ಯಾಪಾರಸ್ಥರು ಬ್ಯಾಂಕಿನಿಂದ ಸಾಲ ಪಡೆಯಲು ಹಿಂದೇಟು ಹಾಕುತ್ತಾರೆ.ಹೀಗೆ ಬ್ಯಾಂಕು ದರದಲ್ಲಿನ ಬದಲಾವಣೆಯು ವಾಣಿಜ್ಯ ಬ್ಯಾಂಕುಗಳ ಸಾಲ ನೀಡಿಕೆ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಮೂಲಕ ಬೆಲೆಗಳ ಏರಿಳಿತಕ್ಕೆ ಕಾರಣವಾಗುತ್ತದೆ.

ಬ್ಯಾಂಕು ದರ ನೀತಿಯ ಮಿತಿಗಳು:[ಬದಲಾಯಿಸಿ]

ಬ್ಯಾಂಕು ದರದ ನೀತಿಯ ಯಶಸ್ವಿ ಕಾರ್ಯಾಚರಣೆಯುಯ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ.ಅವುಗಳ ವಿವರ ಮುಂದಿನಂತಿದೆ.

೧.ಬ್ಯಾಂಕು ದರ ಮತ್ತು ಬಡ್ಡಿಯ ದರದ ನಡುವಿನ ಸಂಬಂಧ:[ಬದಲಾಯಿಸಿ]

ಬ್ಯಾಂಕು ದರ ಮತ್ತು ವಾಣಿಜ್ಯ ಬ್ಯಾಂಕುಗಳು ವಿಧಿಸುವ ಬಡ್ಡಿಯ ದರದ ನಡುವೆ ನೇರ ಸಂಬಂಧವಿದ್ದಾಗ ಮಾತ್ರ ಬ್ಯಾಂಕು ದರ ನೀತಿ ಯಶಸ್ವಿಯಾಗುತ್ತದೆ. ಅಂದರೆ ಬ್ಯಾಂಕು ದರದ ಬದಲಾವಣೆಗಳಿಗೆ ಅನುಗುಣವಾಗಿ ವಾಣಿಜ್ಯ ಬ್ಯಾಂಕುಗಕಳು ಬಡ್ಡಿದರವೂ ಬದಲಾಗಬೇಕು. ಬ್ಯಾಂಕು ದರ ಹೆಚ್ಚಿದಾಗ ಬಡ್ಡಿದರವೂ ಹೆಚ್ಚ ಬೇಕು ಹಾಗು ಬ್ಯಾಂಕುದರ ಕಡಿಮೆಗೊಂಡಾಗ ಬಡ್ಡಿದರವೂ ಕಡಿಮೆಗೊಳ್ಳಬೇಕು. ಇಲ್ಲವಾದಲ್ಲಿ ಬ್ಯಾಂಕು ದರದ ನೀತಿಯು ನಿರೀಕ್ಷಿತ ಫ಼ಲಗಳನ್ನು ನೀಡುವಲ್ಲಿ ವಿಫ಼ಲವಾಗುತ್ತದೆ.

೨.ಯೋಗ್ಯ ಹುಂಡಿಗಳ ಲಭ್ಯತೆ:[ಬದಲಾಯಿಸಿ]

ಬ್ಯಾಂಕು ದರ ನೀತಿ ಯಶಸ್ವಿಯಾಗ ಬೇಕೆಂದರೆ ಸಾಕಷ್ಟು ಪ್ರಮಾಣದ ಯೋಗ್ಯ ಹುಂಡಿಗಳು ಮತ್ತು ಭದ್ರತೆಗಳು ಲಭ್ಯವಿರಬೇಕಾಗುತ್ತದೆ.ಆಗ ಮಾತ್ರ ಕೇಂದ್ರ ಬ್ಯಾಂಕು ಹುಂಡಿಗಳನ್ನು ಮರುವಟ್ಟಾಯಿಸುವ ಮೂಲಕ ವಟ್ಟದ ದರದಲ್ಲಿ ಏರಿಳಿತ ಮಾಡಿ ಸಾಲದ ಪ್ರಮಾಣವನ್ನು ನಿಯಂತ್ರಿಸುವುದು ಸಾಧ್ಯವಾಗುತ್ತದೆ.

೩.ವಾಣಿಜ್ಯ ಬ್ಯಾಂಕುಗಳ ವರ್ತನೆ:[ಬದಲಾಯಿಸಿ]

ವಾಣಿಜ್ಯ ಬ್ಯಾಂಕುಗಳು ತಮ್ಮ ಹುಂಡಿಗಳನ್ನು ಮರುವಾಟ್ಟಾಯಿಸಲು ಕೇಂದ್ರ ಬ್ಯಾಂಕಿಗೆ ಹೋಗುವ ಹವ್ಯಾಸ ಇಟ್ಟುಕೊಂಡಿದ್ದಾಗ ಮಾತ್ರ ಬ್ಯಾಂಕು ದರ ನೀತಿ ಯಶಸ್ವಿಯಾಗುತ್ತದೆ.ಆದರೆ ವಾಣಿಜ್ಯ ಬ್ಯಾಂಕುಗಳ ಬಳಿ ನಗದು ಹಣದ ಸಂಪನ್ಮೂಲ ವಿಪುಲ ಪ್ರಮಾಣದಲ್ಲಿ ಲಭ್ಯವಿದ್ದಾಗ ಅವುಗಳು ತಮ್ಮ ಹುಂಡಿಗಳನ್ನು ಮರುವಟ್ಟಾಯಿಸುವ ಸಂದರ್ಭವೇ ಒದಗಿ ಬರದು.

೪. ಉದ್ಯಮ ನಿರೀಕ್ಷೆಗಳು:[ಬದಲಾಯಿಸಿ]

ಬ್ಯಾಂಕು ದರದ ನೀತಿಯ ಯಶಸ್ಸು ಉದ್ಯಮ ನಿರೀಕ್ಷೆಗಳನ್ನೂ ಅವಲಂಬಿಸಿರುತ್ತದೆ.ಉದ್ಯಮಿಗಳು ಭವಷ್ಯದಲ್ಲಿ ತಮ್ಮ ಉದ್ಯಮ ವ್ಯವಹಾರಗಳಲ್ಲಿ ಉತ್ತಮ ಪ್ರತಫಲ ದೂರಕುತ್ತದೆ.ಆದರೆ ಆರ್ಥಿಕ ಮುಗ್ಗಟ್ಟಿನಂತಹ ಭರವಸೆ ರಹಿತ ವಾತಾವರಣ ಅಸ್ತಿತ್ವದಲ್ಲಿದ್ದಾಗ ಕಡಿಮೆ ಬಡ್ಡಿಯ ದರ ಇದ್ದರೂ ಸಹ ಸಾಲ ಪಡೆಯಲು ಮುಂದಾಗದಿರಬಹುದು.

೫.ನಗದು ಸಂಪನ್ಮೂಲ ಪ್ರಮಾಣ:[ಬದಲಾಯಿಸಿ]

ವಾಣಿಜ್ಯ ಬ್ಯಾಂಕುಗಳ ಬಳಿ ವಿಪುಲ ಪ್ರಮಾಣದ ನಗದು ಸಂಪನ್ಮೂಲ ಲಭ್ಯವಿದ್ದಾಗ ಬ್ಯಾಂಕು ದರ ನೀತಿ ಯಶಸ್ವಿಯಾಗುವುದಿಲ್ಲ.ಏಕೆಂದರೆ ಇಂತಹ ಸನ್ನಿವೇಷದಲ್ಲಿ ವಾಣಿಜ್ಯ ಬ್ಯಾಂಕುಗಳು ಕೇಂದ್ರ ಬ್ಯಾಂಕಿನ ಬಳಿ ತಮ್ಮ ಹುಂಡಿಗಳನ್ನು ಮರು ವಟ್ಟಾಯಿಸಲು ಹೋಗುವುದೇ ಇಲ್ಲ.

೬.ತಾರತಮ್ಯರಹಿತವಾದುದು:[ಬದಲಾಯಿಸಿ]

ಬ್ಯಾಂಕು ದರದ ನೀತಿಯು ಉತ್ಸಾದಕ ಸಾಲ ಮತ್ತು ಅನುತ್ಪಾದಕ ಸಾಲಗಳ ನಡುವೆ ಯಾವುದೇ ತಾರತಮ್ಯ ಮಾಡುವುದಿಲ್ಲ.ಅದು ಎರಡನ್ನೂ ನಿಯಂತ್ರಿಸಳ ಯತ್ನಿಸುತ್ತದೆ.ಈ ಕ್ರಮ ಆರ್ಥಿಕತೆಯ ಬೆಳವಣಿಗೆಗೆ ಮಾರಕವಾಗುತ್ತದೆ.

೭.ಕೂಲಿ,ವೆಚ್ಚ ಮತ್ತು ಬೆಲೆಗಳ ಸ್ಥಿತಿಸ್ಥಾಪಕತೆ:[ಬದಲಾಯಿಸಿ]

ಬ್ಯಾಂಕು ದರದ ನೀತಿಯು ಬಡ್ಡಿ ದರದಲ್ಲಿನ ಸ್ಥಿತಿಸ್ಥಾಪಕತ್ವವನ್ನಷ್ಟೇ ಅಲ್ಲದೆ ಕೂಲಿ,ವೆಚ್ಚ ಮತ್ತು ಬೆಲೆಗಳಲ್ಲಿನ ಸ್ಥಿತಿಸ್ಥಾಪಕತೆಯನ್ನು ಅವಲಂಬಿಸಿರುತ್ತದೆ.ಅಂದರೆ ಬ್ಯಾಂಕು ದರದಲ್ಲಿನ ಬದಲಾವಣೆಯೊಂದಿಗೆ ಕೂಲಿ,ವೆಚ್ಚ ಮತ್ತು ಬೆಲೆಗಳೂ ಬದಲಾಗುತ್ತವೆ ಎಂದು ಭಾವಿಸಲಾಗುತ್ತದೆ.

೮.ಪಾವತಿ ಶಿಲ್ಕಿನ ಅಸಮತೋಲನ ನಿವಾರಣೆ ಸಾಧ್ಯವಾಗುವುದಿಲ್ಲ:[ಬದಲಾಯಿಸಿ]

ಬ್ಯಾಂಕು ದರ ನೀತಿಯು ಪಾವತಿ ಶಿಲ್ಕಿನಲ್ಲಿನ ಅಸಮತೋಲನವನ್ನು ಸರಿಪಡಿಸಲು ವಿಫ಼ಲವಾಗುತ್ತದೆ.ಏಕೆಂದೆರೆ ಅದು ವಿದೇಶಿ ವಿನಿಮಯ ಮತ್ತು ಬಂಡವಾಳ ಚಲನೆಯ ಮೇಲಿನ ಎಲ್ಲಾನಿರ್ಬಂಧಗಳನ್ನು ತೊಡೆದು ಹಾಕುವುದನ್ನು ಅಪೇಕ್ಷಿಸುತ್ತದೆ.

ಬಿ.ಮುಕ್ತ ಮಾರುಕಟ್ಟೆ ವ್ಯವಹಾರ[ಬದಲಾಯಿಸಿ]

ಮುಕ್ತ ಮಾರುಕಟ್ಟೆ ವ್ಯವಹಾರವು ಪರಿಮಾಣಾತ್ಮಕ ಸಾಲ ನಿಯಂತ್ರಣಗಳ ಇನ್ನೊಂದು ಪ್ರಮುಖ ಅಸ್ತ್ರವಾಗಿದೆ.ಈ ವಿಧಾನವು ಪ್ರಥಮ ಜಾಗತಿಕ ಸಮರದ ತರುವಾಯು ಪ್ರಸಿದ್ದಿ ಪಡೆಯಿತು.ಈಚಿನ ದಿನಗಳಲ್ಲಿ ಕೇಂದ್ರ ಬ್ಯಾಂಕು ಈ ಅಸ್ತ್ರವನ್ನು ವ್ಯಾಪಕವಾಗಿ ಬಳಸುತ್ತಿರುವುದು ಕಂಡು ಬರುತ್ತದೆ.

ಮುಕ್ತ ಮಾರುಕಟ್ಟೆ ವ್ಯವಹಾರದ ಅರ್ಥವಿವರಣೆ:[ಬದಲಾಯಿಸಿ]

ಕೇಂದ್ರ ಬ್ಯಾಂಕು ಭದ್ರತೆಗಳು, ಹುಂಡಿಗಳು ಮತ್ತು ಸಾಲಪತ್ರಗಳನ್ನು ಉದ್ದೇಶ ಪೂರ್ವಕವಾಗಿ ಮುಕ್ತ ಮಾರುಕಟ್ಟೆಯಲ್ಲಿ ಮಾರುವ ಮತ್ತು ಕೊಳ್ಳುವ ವ್ಯವಹಾರಗಳಿಗೆ ಮುಕ್ತ ಮಾರುಕಟ್ಟೆಯ ವ್ಯವಹಾರ ಎನ್ನಲಾಗುತ್ತದೆ.ಕೇಂದ್ರ ಬ್ಯಾಂಕು ಸರ್ಕಾರಿ ಸಾಲಪತ್ರಗಳು ಮತ್ತು ಹುಂಡಿಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮತ್ತು ಕೊಳ್ಳುವ ವ್ಯವಹಾರಗಳಲ್ಲಿ ತೊಡಗಿದ ಪರಿಣಾಮವಾಗಿ ವಾಣಿಜ್ಯ ಬ್ಯಾಂಕುಗಳ ಸಾಲ ಸೃಷ್ಟಿಯ ಸಾಮರ್ಥ್ಯ ಬದಲಾವಣೆಗಳಿಗೊಳ ಪಡುತ್ತದೆ.ಅಂದರೆ ಕೇಂದ್ರ ಬ್ಯಾಂಕು ಸಾಲಪತ್ರ ಮತ್ತು ಹುಂಡಿಗಳನ್ನು ಮಾರಿದಾಗ ವಾಣಿಜ್ಯ ಬ್ಯಾಂಕುಗಳ ಸಾಲದ ಪ್ರಮಾಣ ಕಡಿಮೆಗೊಳ್ಳುತ್ತದೆ ಹಾಗು ಕೊಂಡಾಗ ಅವುಗಳ ಸಾಲದ ಪ್ರಮಾಣ ಅಧಿಕಗೊಳ್ಳುತ್ತದೆ.

ಮುಕ್ತ ಮಾರುಕಟ್ಟೆ ವ್ಯವಹಾರದ ಕಾರ್ಯ ವಿಧಾನ:[ಬದಲಾಯಿಸಿ]

ಕೇಂದ್ರ ಬ್ಯಾಂಕು ಹಣದುಬ್ಬರದ ಒತ್ತಡಗಳನ್ನು ನಿಯಂತ್ರಿಸುವ ಉದ್ದೇಶದಿಂದ ವಾಣಿಜ್ಯ ಬ್ಯಾಂಕುಗಳ ಸಾಲ ವಿಸ್ತರಣೆಯನ್ನು ನಿಯಂತ್ರಿಸುವ ಗುರಿ ಹೊಂದಿದೆ ಎಂದು ಭಾವಿಸೋಣ.ಈ ಸನ್ನಿವೇಷದಲ್ಲಿ ಅಂದರೆ ಹಣದುಬ್ಬರ ಮತ್ತು ಬೆಲೆ ಏರಿಕೆ ಅಸ್ತಿತ್ವದಲ್ಲಿರುವ ಸಂದರ್ಭದಲ್ಲಿ ಕೇಂದ್ರ ಬ್ಯಾಂಕು ಸರ್ಕಾರಿ ಸಾಲಪತ್ರಗಳು ಮತ್ತು ಮೊದಲ ದರ್ಜೆ ಹುಂಡಿಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರುತ್ತದೆ.ಮುಕ್ತ ಮಾರುಕಟ್ಟೆ ವ್ಯವಹಾರದ ಶ್ರೇಷ್ಟತೆ:ಬ್ಯಾಂಕು ದರದ ನೀತಿಗೆ ಹೋಲಿಸಿಕೊಂಡರೆ ಮುಕ್ತ ಮಾರುಕಟ್ಟೆ ವ್ಯವಹಾರ ನೀತಿಯು ಹೆಚ್ಚು ಪರಿಣಾಮಕಾರಿಯಾಗಿ ಕಾಣುತ್ತದೆ.ಬ್ಯಾಂಕು ದರದ ನೀತಿಯು ಅಂತಿಮ ಯಶಸ್ಸು ವಾಣಿಜ್ಯ ಬ್ಯಾಂಕುಗಳ ಸಹಕಾರವನ್ನು ಅವಲಂಬಿಸಿರುತ್ತದೆ.ಆದರೆ ಮುಕ್ತ ಮಾರುಕಟ್ಟೆಯ ವ್ಯವಹಾರದಲ್ಲಿ ಕೇಂದ್ರ ಬ್ಯಾಂಕಿನದು ನಿರ್ಣಾಯಕ ಪಾತ್ರವಾಗಿರುತ್ತದೆ.ಬ್ಯಾಂಕುಗಳು ಅದರ ಹತೋಟಿಗೆ ಒಳಪಡುವುದರಿಂದ ಅದು ವಾಣಿಜ್ಯ ಬ್ಯಾಂಕುಗಳನ್ನು ಸಾಲ ಪತ್ರಗಳನ್ನು ಕೊಳ್ಳುವಂತೆ ಒತ್ತಾಯಿಸಬಹುದು ಅಥವ ಕಡ್ಡಾಯಗೊಳಿಸಬಹುದು.

ಮುಕ್ತ ಮಾರಕಟ್ಟೆ ವ್ಯವಹಾರದ ಮಿತಿಗಳು:[ಬದಲಾಯಿಸಿ]

ಮುಕ್ತ ಮಾರುಕಟ್ಟೆ ವ್ಯವಹಾರದ ವಿಧಾನವು ಹಲವಾರು ದೋಷ ಅಥವಾ ಮಿತಿಗಳನ್ನು ಹೊಂದಿದೆ.ಅವುಗಳು ಕೆಳಗಿನಂತಿವೆ.

೧.ಸಾಲಪತ್ರಗಳ ಮಾರುಕಟ್ಟೆಯ ಅಭಾವ:[ಬದಲಾಯಿಸಿ]

ಮುಕ್ತ ಮಾರುಕಟ್ಟೆ ವ್ಯವಹಾರವು ಯಶಾಸ್ವಿಯಾಗಬೇಕೆಂದರೆ ಸುಸಂಘಟಿತ ಬೃಹತ್ ಸಾಲಪತ್ರ ಅಥವಾ ಭದ್ರತೆಗಳ ಮಾರುಕಟ್ಟೆ ಲಭ್ಯವಿರಬೇಕಾಗುತ್ತದೆ.ಜೊತೆಗೆ ಕೇಂದ್ರ ಬ್ಯಾಂಕಿನ ಬಳಿ ಮಾರಲು ಸಾಕಷ್ಟು ಸಂಖ್ಯೆಯ ಸಾಲಪತ್ರಗಳೂ ಲಭ್ಯಾವಿರಬೇಕಾಗುತ್ತದೆ.

೨.ಸ್ಥಿರ ನಗದು ಮೀಸಲು ಪ್ರಮಾಣ:[ಬದಲಾಯಿಸಿ]

ಮುಕ್ತ ಮಾರುಕಟ್ಟೆ ವ್ಯವಹಾರದ ಯಶಸ್ಸು ವಾಣಿಜ್ಯ ಬ್ಯಾಂಕುಗಳ ಸ್ಥಿರ ನಗದು ಮೀಸಲು ಪ್ರಮಾಣವನ್ನು ಅಪೇಕ್ಷಿಸುತ್ತದೆ. ಅಂದರೆ ಕೇಂದ್ರ ಬ್ಯಾಂಕು ಸಾಲಪತ್ರಗಳನ್ನು ಮಾರಿದಾಗ ಅಥವಾ ಕೊಂಡಾಗ ನಗದು ಪ್ರಮಾಣದಲ್ಲಿ ಆ ಪ್ರಕಾರವಾಗಿ ಏರಿಳಿತಗಳಾಗ ಬೇಕಾಗುತ್ತದೆ.

೩.ಅಧಿಕ ಬ್ಯಾಂಕುದರ:[ಬದಲಾಯಿಸಿ]

ಮುಕ್ತ ಮಾರುಕಟ್ಟೆ ವ್ಯವಹಾರ ಯಶ್ಸವಿಯಾಗಲು ಬ್ಯಾಂಕು ದರವು ಅಧಿಕವಿರಬೇಕಾಗುತ್ತದೆ.ಇಲ್ಲವಾದಲ್ಲಿ ವಾಣಿಜ್ಯ ಬ್ಯಾಂಕುಗಳು ಮುಕ್ತ ಮಾರುಕಟ್ಟೆಯಲ್ಲಿ ಕೊಂಡ ಸಾಲಪತ್ರಗಳನ್ನು ಕೇಂದ್ರ ಬ್ಯಾಂಕಿನಲ್ಲಿ ಆಧಾರವಾಗಿತಟ್ಟು ಸಾಲ ಪಡೆದುಕೊಳ್ಳುವ ಮೂಲಕ ತಮ್ಮ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆಯಿರುತ್ತದೆ.

೪.ಉದ್ಯಮ ನಿರೀಕ್ಷೆಗಳು:[ಬದಲಾಯಿಸಿ]

ಜನರ ಆಶಾಭಾವನೆ ಅಥವಾ ನಿರಾಶಾಭಾವನೆಗಳು ಮುಕ್ತ ಮಾರುಕಟ್ಟೆ ವ್ಯವಹಾರದ ಯಶಸ್ಸನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಿಹಿಸುತ್ತದೆ.ಕೇಂದ್ರ ಬ್ಯಾಂಕು ಸಾಲಪತ್ರಗಳನ್ನು ಕೊಳ್ಳುವುದರ ಮೂಲಕ ವಾಣಿಜ್ಯ ಬ್ಯಾಂಕುಗಳ ಪತ್ತು ನಿರ್ಮಾಣ ಸಾಮರ್ಥ್ಯವನ್ನು ಹೆಚ್ಚಿಸಿದರೂ ಆರ್ಥಿಕ ಮುಗ್ಗಟ್ಟಿನಂತಹ ಭರವಸೆರಹಿತ ವಾತಾವರಣದಲ್ಲಿ ಸಾಲಪಡೆತಲು ಜನರೇ ಮುಂದಾಗುವುದಿಲ್ಲ.

೫.ವಾಣಿಜ್ಯ ಬ್ಯಾಂಕುಗಳ ಸಹಕಾರ:[ಬದಲಾಯಿಸಿ]

ಕೇಂದ್ರ ಬ್ಯಾಂಕು ಚಿಂತಿಸುವ ನಿಟ್ಟಿನಲ್ಲೇ ಬ್ಯಾಂಕುಗಳು ಮತ್ತು ಸಾರ್ವಜನಿಕರು ಚಿಂತಿಸಿ ಅದಕ್ಕೆ ಸಹಕಾರ ನೀಡುವ ಮನೋಭಾವ ಹೊಂದ್ದಿದಾರೆ ಮಾತ್ರ ಮುಕ್ತ ಮಾರುಕಟ್ಟೆ ವ್ಯವಹಾರ ಯಶ್ಸಸ್ವಿಯಾಗುತ್ತದೆ.

ಸಿ.ಚಲ ಮೀಸಲು ಅನುಪಾತ[ಬದಲಾಯಿಸಿ]

ಚಲ ಮೀಸಲು ಅನುಪಾತ ಅಥವ ಬದಲಾಗುವ ನಗದು ಮೀಸಲು ಅನುಪಾತವು ಪರಿಮಾಣಾತ್ಮಕ ಸಾಲ ನಿಯಂತ್ರಣ ವಿಧಾನದ ಇನ್ನೊಂದು ಅಸ್ತ್ರವಾಗಿದೆ.ಈ ವಿಧಾನವನ್ನು ಮೊಟ್ಟ ಮೊದಲು ಬಾರಿಗೆ ಶಿಫಾರಸು ಮಾಡಿದ್ದು ಇನ್ನೊಂದು ಅಸ್ತ್ರವಾಗಿದ್ದಾರೆ.ಅವರು ತಮ್ಮ ಟ್ರೀಟೈಸ್ ಆನ್ ಮನಿ ಎಂಬ ಗ್ರಂಥದಲ್ಲಿ ಈ ವಿಧಾನವನ್ನು ಪ್ರತಿಪಾದಿಸಿದರು ಹಾಗು ಇದನ್ನು ಮೊದಲ ಬಾರಿಗೆ ಅಮೆರಿಕ ಜಾರಿಗೆ ತಂದಿತು.

ಮೀಸಲು ಅನುಪಾತದ ಅರ್ಥವಿವರಣೆ:[ಬದಲಾಯಿಸಿ]

ವಾಣಿಜ್ಯ ಬ್ಯಾಂಕುಗಳು ತಮ್ಮ ಠೇವಣೆ ಹಣದ ಒಂದು ನಿರ್ದಿಷ್ಟ ಭಾಗವನ್ನು ಕಾನೂನು ಬದ್ಡವಾಗಿ ಕೇಂದ್ರ ಬ್ಯಾಂಕಿನಲ್ಲಿಡುವುದನ್ನು ಮೀಸಲು ಅನುಪಾತ ಎನ್ನಲಾಗುತ್ತದೆ.ಇದನ್ನು ನಗದು ಮೀಸಲು ಅನುಪಾತ ಅಥವ ಕಾಯ್ದಿಟ್ಟ ಹಣ ಎನ್ನಲಾಗುತ್ತದೆ.ಈ ಮೀಸಲು ಅನುಪಾತವನ್ನು ಏರಿಳಿತಗೊಳಿಸುವ ಮೂಲಕ ಕೇಂದ್ರ ಬ್ಯಾಂಕು ವಾಣಿಜ್ಯ ಬ್ಯಾಂಕುಗಳ ಸಾಲ ನಿರ್ಮಾಣ ಸಾಮಾರ್ಥ್ಯವನ್ನು ಹತೋಟಿಯಲ್ಲಿಡಲು ಯತ್ನಿಸುತ್ತದೆ. ಹಣದುಬ್ಬರ ಅಥವಾ ಬೆಲೆ ಏರಿಕೆ ಸನ್ನಿವೇಷ ಅಸ್ತಿತ್ವದಲ್ಲಿದ್ದಾಗ ಕೇಂದ್ರ ಬ್ಯಾಂಕು ಮೀಸಲು ಅನುಪಾತವನ್ನು ಹೆಚ್ಚಿಸುತ್ತದೆ.ಆಗ ವಾಣಿಜ್ಯ ಬ್ಯಾಂಕುಗಳು ಕೇಂದ್ರ ಬ್ಯಾಂಕಿನಲ್ಲಿ ಅಧಿಕ ಪ್ರಮಾಣದ ಹಣವನ್ನು ಇಡಬೇಕಾಗುವುದರಿಂದ ಅವುಗಳ ಸಂಪನ್ಮೂಲಗಳು ಕಡಿಮೆಯಾಗುತ್ತವೆ.ಈ ಪರಿಣಾಮವಾಗಿ ಉದ್ಯಮ ಚಟುವಟಿಕೆಗಳು ಮತ್ತು ಬೆಲೆಗಳು ಕುಸಿಯುತ್ತವೆ.

ಚಲ ಮೀಸಲು ಅನುಪಾತದ ಮಿತಿಗಳು:[ಬದಲಾಯಿಸಿ]

ಚಲ ಮೀಸಲು ಅನುಪಾತ ವಿಧಾನವೂ ಸಹ ಕೆಲವೊಂದು ಮಿತಿಗಳನ್ನು ಹೊಂದಿದೆ.

೧.ಅಧಿಕ ನಗದು ಹಣ:[ಬದಲಾಯಿಸಿ]

ವಾಣಿಜ್ಯ ಬ್ಯಾಂಕುಗಳು ಅತ್ಯಧಿಕ ಪ್ರಮಾಣದ ನಗದು ಹಣವನ್ನು ಹೊಂದ್ದಿದಾಗ ಈ ವಿಧಾನ ಅಷ್ಟೊಂದು ಯಶಸ್ವಿಯಾಗುವುದಿಲ್ಲ.

೨.ತಾರತಮ್ಯಕರವಾದುದು:[ಬದಲಾಯಿಸಿ]

ಈ ವಿಧಾನ ತಾರತಮ್ಯಕರವಾದುದು.ಏಕೆಂದರೆ ಚಲ ಮೀಸಲು ಅನುಪಾತವನ್ನು ಹೆಚ್ಚಿಸಿದಾಗ ಸಣ್ಣ ಬ್ಯಾಂಕುಗಳು ಹೆಚ್ಚು ತೊಂದರೆಗೊಳಗಾಗುತ್ತವೆ.

೩.ಅಸ್ಥಿತಿಸ್ಥಾಪಕವಾದುದು:[ಬದಲಾಯಿಸಿ]

ಚಲ ಮೀಸಲು ಅನುಪಾತ ವಿಧಾನವು ಸ್ಥಿತಿಸ್ಥಾಪಕ ಗುಣ ಹೊಂದಿರುವುದಿಲ್ಲ.ಅದು ಇಡೀ ರಾಷ್ಟ್ರದ ಸಾಲದ ಪ್ರಮಾಣವನ್ನು ನಿಯಂತ್ರಿಸುವ ಉದ್ದೇಸಶ ಹೊಂದಿರುತ್ತದೆ.ಆದರೆ ಸಾಲ ಒಂದು ಪ್ರದೇಶಕ್ಕೆ ಅವಶ್ಯವಿರುತ್ತದೆ,ಇನ್ನೊಂದು ಪ್ರದೇಶಕ್ಕೆ ಅವಶ್ಯವಿರುವುದಿಲ್ಲ.

೪.ಉದ್ಯಮ ವಾತಾವರಣ:[ಬದಲಾಯಿಸಿ]

ಭರವಸೆರಹಿತ ಮುಗ್ಗಟ್ಟಿನ ನಿರಾಶಾದಾಯಕ ವಾತಾವರಣದ ಸನ್ನಿವೇಷದಲ್ಲಿ ಈ ವಿಧಾನ ಯಶಸ್ವಿಯಾಗುವುದಿಲ್ಲ.ಏಕೆಂದರೆ ಈ ಕಾಲದಲ್ಲಿ ಜನರು ಸಾಲವನ್ನು ಪಡೆಯಲು ಮುಂದೆ ಬರುವುದೇ ಇಲ್ಲ.

೫.ತೆರಿಗೆ ಸ್ವರೂಪದ್ದು:[ಬದಲಾಯಿಸಿ]

ವಾಣಿಜ್ಯ ಬ್ಯಾಂಕುಗಳು ಕೇಂದ್ರ ಬ್ಯಾಂಕಿನೊಂದಿಗೆ ಇಡುವ ನಗದು ಮೀಸಲಿಗೆ ಯಾವುದೇ ಬಡ್ಡಿ ನೀಡಲಾಗುವುದಿಲ್ಲ.ಇದರಿಂದಾಗಿ ಇದು ಬ್ಯಾಂಕುಗಳಿಗೆ ಒಂದು ರೀತಿಯ ತೆರಿಗೆ ಇದ್ದಂತಿರುತ್ತದೆ. ಇಷ್ಟೇ ಅಲ್ಲದೆ ಈ ವಿಧಾನ ಏಲ್ಲಾ ಹಣಕಾಸಿನ ಸಂಸ್ಥೆಗಳನ್ನು ಒಳಗೊಂಡಿರುವುದಿಲ್ಲ.ಇದು ಕೇವಲ ವಾಣಿಜ್ಯ ಬ್ಯಾಂಕುಗಳಿಗೆ ಮಾತ್ರ ಅನ್ವಯಿಸುವಂತಹುದು.ಜೊತೆಗೆ ಈ ವಿಧಾನ ಬ್ಯಾಂಕುಗಳು ದ್ರವತ್ವ ಮತ್ತು ಲಾಭದಾಯಕತ್ವದ ಮೇಲೆ ತೀವ್ರ ರೀತಿಯ ದುಷ್ಟರಿಣಾಮ ಬೀರುತ್ತದೆ ಹಾಗು ಬ್ಯಾಂಕುಗಳ ನಡುವೆ ಒಂದು ರೀತಿಯ ಅನಿಶ್ಚಿತತೆಗೆ ದಾರಿ ಮಾಡುತ್ತದೆ.

೨.ಗುಣಾತ್ಮಕ ಸಾಲ ನಿಯಂತ್ರಣ ವಿಧಾನಗಳು[ಬದಲಾಯಿಸಿ]

ಪರಿಮಾಣಾತ್ಮಕ ಸಾಲ ನಿಯಂತ್ರಣ ವಿಧಾನಗಳು ಒಟ್ಟಾರೆ ಸಾಲದ ಹಣದ ಪ್ರಮಾಣವನ್ನು ನಿಯಂತ್ರಿಸುವ ಗುರಿ ಹೊಂದಿರುತ್ತವೆ.ಇದರಿಂದಾಗಿ ಇವು ಸಮಾಜದ ಎಲ್ಲಾ ವರ್ಗಗಳ ಮೇಲೆ ಪರಿಣಾಮ ಬೀರುತ್ತವೆ.ಆದರೆ ಈ ವಿಧಾನಗಳ ಒಂದು ಪ್ರಮುಖ ದೋಷವೆಂದರೆ:ಅವು ಅಪೇಕ್ಷಣೇಯ ಚಟುವಟಿಕಗಳ ನಡುವೆ ಯಾವುದೇ ಭೇದವೆಣಿಸುವುದಿಲ್ಲ.ಇದರಿಂದಾಗಿ ಅಪೇಕ್ಷಿತ ಚಟುವಟಿಕೆಗಳ ನಡುವೆ ಯಾವುದೇ ಭೇದವೆಣಿಸುವುದಿಲ್ಲ.ಇದರಿಂದಾಗಿ ಅಪೇಕ್ಷಿತ ಚಟುವಟಿಕೆಗಳಿಗೆ ಸಾಲದ ಪೂರೃಸಿ ಆರ್ಥಿಕ ಪ್ರಗತಿಯನ್ನು ಪ್ರಚೋದಿಸುವ ಜೊತೆ ಜೊತೆಯಲೇ ಅನಪೇಕ್ಷಣೀಯ ಚಟುವಟಿಕೆಗಳಿಗೆ ಅಭ್ಯವಾಗುವ ಸಾಲವನ್ನು ನಿಯಂತ್ರಿಸುವ ಗುರಿಯಂದ ಗುಣಾತ್ಮಕ ಸಾಲ ನಿಯಂತ್ರಣ ಕ್ರಮಗಳನ್ನು ಪ್ರತಿಪಾದಿಸಲಾಗಿದೆ.ಇವುಗಳನ್ನುಆಯ್ದ ಸಾಲ ನಿಯಂತ್ರಣಗಳು ಎಂದೂ ಕರೆಯಲಾಗುತ್ತದೆ.ಈ ವಿಧಾನಗಳನ್ನು ದ್ವೀತಿಯ ಜಾಗತಿಕ ಸಮರದ ತರುವಾಯ ವಿವಿಧ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

ಗುಣಾತ್ಮಕ ಸಾಲ ನಿಯಂತ್ರಣಗಳ ಅರ್ಥವಿವರಣೆ:[ಬದಲಾಯಿಸಿ]

ಒಂದು ನಿರ್ದಿಷ್ಟ ಕ್ಷೇತ್ರ ಅಥವಾ ವಲಯಕ್ಕೆ ಪೊರೈಕೆಯಾಗುವ ಸಾಲದ ಪ್ರಮಾಣವನ್ನು ನಿಯಂತ್ರಿಸುವ ವಿಧಾನಗಳಿಗೆ ಗುಣಾತ್ಮಕ ಸಾಲ ನಿಯಂತ್ರಣಗಳು ಎಂದು ಹೆಸರು.ಈ ವಿಧಾನಗಳು ಆಯ್ದ ಕ್ಷೇತ್ರದಲ್ಲಿನ ಸಾಲದ ಪ್ರಮಾಣವನ್ನು ನಿಯಂತ್ರಿಸುವುದರಿಂದ ಇವನ್ನು ಆಯ್ದ ಸಾಲ ನಿಯಂತ್ರಣಗಳು ಎಂದು ಕರೆಯಲಾಗುತ್ತದೆ.ಈ ನಿಯಂತ್ರಣ ವಿಧಾನಗಳು ಉಪಯುಕ್ತ ಮತ್ತು ನಿರುಪಯುಕ್ತ ಚಟುವಟಿಕೆಗಳ ನಡುವೆ ಭೇದವೆಣಿಸುತ್ತವೆ.

ಗುಣಾತ್ಮಕ ವಿಧಾನಗಳು:[ಬದಲಾಯಿಸಿ]

ಗುಣಾತ್ಮಕ ಸಾಲ ನಿಯಂತ್ರಣ ಕ್ರಮಗಳ ಪ್ರಮುಖ ವಿಧಾನಗಳು ಈ ಕೆಳಗಿನಂತಿರುತ್ತವೆ.

೧.ಅಂಚಿನ ಅಗತ್ಯಗಳ ಬದಲಾವಣೆ:[ಬದಲಾಯಿಸಿ]

ಸಾಲಗಾರರು ಬ್ಯಾಂಕುಗಳಿಂದ ಸಾಲ ಪಡೆಯುವಾಗ ಆಧಾರವಾಗಿ ಒದಗಿಸುವ ಭದ್ರತೆಗಳ ಮೊಲ್ಯ ಮತ್ತು ಅವುಗಳ ಆಧಾರದ ಮೇಲೆ ನೀಡುಲಾಗುವ ಸಾಲದ ಮೊತ್ತಗಳ ನಡುವಿನ ವ್ಯತ್ಯಾಸಕ್ಕೆ ಅಂಚಿನ ಅಗತ್ಯ'ಎನ್ನಲಾಗುತ್ತದೆ. ಈ ಅಂಚಿನ ಅಗತ್ಯವನ್ನು ಬದಲಾಯಿಸುವ ಮೂಲಕ ಕೇಂದ್ರ ಬ್ಯಾಂಕು ವಾಣಿಜ್ಯ ಬ್ಯಾಂಕುಗಳ ಸಾಲ ನೀಡಿಕೆ ಸಾಮರ್ಥ್ಯವನ್ನು ನಿಯಂತ್ರಿಸಲು ಯತ್ನಿಸುತ್ತದೆ.

೨.ಸಾಲದ ಪಡಿತರ:[ಬದಲಾಯಿಸಿ]

ವಿವಿಧ ಕ್ಷೇತ್ರಗಳಿಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಮಾತ್ರ ಸಾಲದ ಹಣವನ್ನು ಪೂರೈಕೆ ಮಾಡುವ ಪದ್ದತಿಯನ್ನು ಸಾಲದ ಪಡಿತರ ಎನ್ನಲಾಗುತ್ತದೆ. ಈ ವಿಧಾನದಲ್ಲಿ ಕೇಂದ್ರ ಬ್ಯಾಂಕು ವಿವಿಧ ಉತ್ಪಾದನಾ ಕ್ಷೇತ್ರ ಮತ್ತು ವಲಯಗಳಿಗೆ ಇಂತಿಷ್ಟೇ ಸಾಲ ಪೂರೈಕೆಯಾಗಬೇಕು ಎಂದು ನಿಗದಿಗೊಳಿಸುತ್ತದೆ.

೩.ಅನುಭೋಗಿ ಸಾಲ ನಿಯಂತ್ರಣ:[ಬದಲಾಯಿಸಿ]

ದೀಘ ಬಾಳಿಕೆ ಬರುವ ಅನುಭೋಗಿ ಸರಕುಗಳಾದ ವಾಹನ,ಟಿ.ವಿ.ರೆಫ್ರಿಜರೇಟರ್,ವಾಷಿಂಗ್ ಮೆಷಿನ್ ಮುಂತಾದುವುಗಳ ಕೊಳ್ಳುವಿಕೆಗೆ ಪೂರೈಕೆಯಾಗುವ ಬ್ಯಾಂಕ್ ಸಾಲದ ಹಣವನ್ನು ನಿಯಂತ್ರಿಸುವುದು ಅನುಭೋಗಿ ಸಾಲ ನಿಯಂತ್ರಣವಾಗುತ್ತದೆ.

೪.ನೈತಿಕ ಪ್ರೇರಣೆ:[ಬದಲಾಯಿಸಿ]

ಕೇಂದ್ರ ಬ್ಯಾಂಕು ವಾಣಿಜ್ಯ ಬ್ಯಾಂಕುಗಳ ಮೇಲೆ ನೈತಿಕ ಒತ್ತಡ ಹೇರುವ ಮೂಲಕ ಸಾಲ ನಿಯಂತ್ರಣ ಮಾಡುವ ಕ್ರಮವನ್ನು ನೈತಿಕ ಪ್ರೇರಣೆ ಎನ್ನಲಾಗುತ್ತದೆ.ಈ ವಿಧಾನದಲ್ಲಿ ಕೇಂದ್ರ ಬ್ಯಾಂಕು ಬೋಧನೆ,ಮನವಿ,ಮನವೊಲಿಸುವಿಕೆ ಮುಂತಾದ ತನ್ನ ನೈತಿಕ ಪ್ರಭಾವವನ್ನು ಬಳಸಿ ವಾಣಿಜ್ಯ ಬ್ಯಾಂಕುಗಳು ಒಂದು ನಿರ್ದಿಷ್ಟ ಸಾಲ ನೀತಿಯನ್ನು ಅನುಸರಿಸುವಂತೆ ಪ್ರೇರೇಪಿಸಬಹುದು.

೫.ಪ್ರಚಾರ:[ಬದಲಾಯಿಸಿ]

ಕೇಂದ್ರ ಬ್ಯಾಂಕು ವ್ಯಾಪಕ ಪ್ರಚಾರ ಕ್ರಮಗಳ ಮೂಲಕ ಸಾಲದ ಹಣದ ಸೃಷ್ಟಿಯ ಪ್ರಮಾಣವನ್ನು ನಿಯಂತ್ರಿಸಲು ಯತ್ನಿಸುತ್ತದೆ.ಇಂತಹ ಪ್ರಚಾರಗಳನ್ನು ಕೇಂದ್ರ ಬ್ಯಾಂಕು ವಿವಿಧ ರೀತಿಯಲ್ಲಿ ಮಾಡುತ್ತಿರುತ್ತದೆ.ಕಾಲಕಾಲಕ್ಕೆ ಅಂಕಿ ಅಂಶಗಳ ಪ್ರಕಟಣೆ, ಮಾಸಿಕ ಹೇಳಿಕೆಗಳು, ಸಾಪ್ತಾಹಿಕ ಪ್ರಚಾರಗಳು ಮುಂತಾದುವುಗಳ ಮೂಲಕ ಮಾಡುತ್ತದೆ.

ಉಲ್ಲೇಖ[ಬದಲಾಯಿಸಿ]

  1. http://www.preservearticles.com/201012291870/credit-control-objectives.html
  2. http://www.investopedia.com/terms/b/bankrate.asp