ಸದಸ್ಯ:Seema joylin/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                         ಕಿಟಕಿ ಮಹತ್ವ

ಕಿಟಕಿ – ಒಂದು ಕೋಣೆಯಿಂದ ಮತ್ತೊಂದು ಕೋಣೆಗೆ ಇಣುಕಲು, ಮನೆ ಒಳಗಿದ್ದೇ ಹೊರಗಿನವರೊಂದಿಗೆ ಸಂಬಾಶಣೆ ನಡೆಸಲು ನಾವು ದಿನನಿತ್ಯ ಬಳಸುವ ಸರಳವಾದ ಸಾದನ. ಒಂದೇ ಮನೆಯಲ್ಲಿ ಹಲವಾರು ಗಾತ್ರದ ಕಿಟಕಿಗಳು ಕಾಣಸಿಗುತ್ತವೆ. ಉದಾಹರಣೆಗೆ ಪಡಸಾಲೆಯ ಕಿಟಕಿಗೂ ಅಡುಗೆಮನೆಯ ಕಿಟಕಿಗೂ ವ್ಯತ್ಯಾಸವಿದೆ. ಇಡೀ ಮನೆಯನ್ನು ಸ್ವಚ್ಚಗೊಳಿಸಲು ಬೇಕಾಗುವ ಸಮಯದಲ್ಲಿ ಅರ‍್ದ ಸಮಯ ಕಿಟಕಿಗಳನ್ನು ಸ್ವಚ್ಚ ಮಾಡಲು ಬೇಕಾಗುತ್ತದೆ. ಅದರ ಚೌಕಟ್ಟಿಗೆ ಹಾಕಲಾದ ಲೋಹದ ಸಲಾಕೆಗಳು, ಪಡಕಕ್ಕೆ ಜೋಡಿಸಲಾದ ಬೋಲ್ಟುಗಳು, ಗಾಜು- ಇವುಗಳಲ್ಲಿ ಸೇರಿಕೊಂಡ ದೂಳು, ಅಡುಗೆಮನೆಯ ಕಿಡಕಿಗೆ ಮೆತ್ತಿಕೊಂಡ ಎಣ್ಣೆ, ಒಗ್ಗರಣೆಯ ಜಿಗಟು, ಕಿಟಕಿ ಅಶ್ಟೇ ಅಲ್ಲದೇ ಅದಕ್ಕೆ ಹಾಕಲಾದ ಕರ‍್ಟನ್, ಈ ಕರ‍್ಟನ್‍ಗೆ ಅಂಟಿದ ಜೇಡರ ಬಲೆ- ಇವನ್ನೆಲ್ಲ ಸ್ವಚ್ಚ ಮಾಡಿದ ಅನುಬವ ಇದ್ದವರು ಕಿಟಕಿಗಳನ್ನು ಶುಚಿಗೊಳಿಸಲು ಶುರುಮಾಡಿ ಅನೇಕ ಸಲ ಅರ‍್ದಕ್ಕೆ ಬಿಡುವ ಯೋಚನೆಯನ್ನೂ ಮಾಡಿರುತ್ತಾರೆ! ನಮ್ಮ ಮನೆಯಲ್ಲಿ ಎಲ್ಲ ಗಾತ್ರದ ಕಿಟಕಿಗಳೂ ಸೇರಿ ಒಟ್ಟು 24 ಕಿಟಕಿಗಳಾಗುತ್ತವೆ. ಕೆಲವು ಕಿಟಕಿಗಳಿಗೆ ಗವಾಕ್ಶಿಗಳೂ ಇವೆ. ಒಂದೇ ವ್ಯತ್ಯಾಸವೆಂದರೆ ಗವಾಕ್ಶಿಗಳು ಸುಲಬವಾಗಿ ಕೈಗೆಟಕುವುದಿಲ್ಲ. ಕಿಟಕಿಯ ಉಪಯೋಗ ಅಶ್ಟಿಶ್ಟಲ್ಲ. ಬಾಗಿಲನ್ನು ತೆರೆದು ಅದರೆಡೆಯೇ ಒಂದು ಕಣ್ಣಿಡಬೇಕಾದ ಅವಶ್ಯಕತೆ ಕಿಟಕಿಗಳನ್ನು ತೆರೆದಾಗ ಇರುವುದಿಲ್ಲ. ಕೆಲವು ಸಂದರ‍್ಬಗಳಲ್ಲಿ ಅಪರಿಚಿತರೊಂದಿಗೆ ಕಿಟಕಿ ಮೂಲಕವೇ ಉತ್ತರಿಸುವುದು ಸುರಕ್ಶತೆಯ ಮಾರ‍್ಗವೂ ಹೌದು. ಅಶ್ಟೇ ಅಲ್ಲದೇ ಕೆಲವೊಮ್ಮೆ ಒಂದು ಕಿಟಕಿಯಿಂದ ಇನ್ನೊಂದಕ್ಕೆ ಹಗ್ಗ ಕಟ್ಟಿ ಬಟ್ಟೆ ಒಣಗಿಸಲು, ಚತ್ರಿ ಇಳಿಬಿಡಲು, ಕ್ಯಾಲೆಂಡರ್ ಹಾಕಲು, ವೈರ್ ದಾಟಿಸಲು- ಹೀಗೆ ಚಿಕ್ಕಪುಟ್ಟ ಕಾರಣಕ್ಕೂ ನಾವು ಕಿಟಕಿಯನ್ನು ಬಳಸುತ್ತೇವೆ. ಈಗೀಗ ಡ್ರಾಯಿಂಗ್ ರೂಮ್‍ಗಳಲ್ಲಿ ‘ಬೇ ವಿಂಡೊ’ ರೂಪಿಸುವುದು ಕೂಡ ಅಬಿರುಚಿಯಾಗಿದೆ. ನಾನು ಕೆಲವು ಚರ‍್ಚಗಳಲ್ಲಿ ನೋಡಿರುವಂತೆ ಎತ್ತರೆತ್ತರದ ಕಿಟಕಿಗಳನ್ನು ನಿರ‍್ಮಿಸಿ ಅವುಗಳಲ್ಲಿ ಬಹುವರ‍್ಣದ ಅಂದದ ಗಾಜುಗಳನ್ನು ಜೋಡಿಸಿರುತ್ತಾರೆ. ಕಿಟಕಿಗಳು ಗಾಳಿ, ಬೆಳಕನ್ನು ಕಟ್ಟಡದೊಳಗೆ ಬಿಟ್ಟು ಅದರ ಸೌಂದರ‍್ಯವನ್ನು ಹೆಚ್ಚಿಸುತ್ತವೆ


`ಕಿಟಕಿ' ಇಲ್ಲದ ಮನೆಯೇ ಇಲ್ಲಾ...

ಮನೆ ಎಂದರೆ ಅಲ್ಲಿ ನೈಸರ್ಗಿಕವಾಗಿ ಒಳಬರುವ ಗಾಳಿ, ಬೆಳಕಿಗೆ ಹೆಚ್ಚು ಪ್ರಾಶಸ್ತ್ಯ ಇರಲೇಬೇಕು. ಅದಕ್ಕೆ ಬಾಗಿಲು, ಕಿಟಕಿ, ಗವಾಕ್ಷಿಗಳೇ ಮಾರ್ಗ.

ಸ್ವಾಭಾವಿಕ ಹವಾ ನಿಯಂತ್ರಕಗಳಂತೆ ಕೆಲಸ ಮಾಡುವ ಕಿಟಕಿಗಳು ಇಲ್ಲದ ಮನೆಗಳನ್ನು ಊಹಿಸಿಕೊಳ್ಳಲೂ ಆಗದು. ಮನೆ ಎಂದ ಮೇಲೆ ಬಾಗಿಲು-ಕಿಟಕಿ ಇರಲೇಬೇಕು. ಮನೆಯ ಗಾತ್ರ, ವ್ಯಾಪ್ತಿ, ವಿನ್ಯಾಸಕ್ಕೆ ತಕ್ಕಂತೆ ಕಿಟಕಿಗಳ ಆಕಾರ, ಲೆಕ್ಕಾಚಾರ ರೂಪುಗೊಳ್ಳುತ್ತದೆ. `ನೈಸರ್ಗಿಕ ಗಾಳಿ, ಬೆಳಕು ಸುಳಿದಾಡಲು ಮುಕ್ತ ಅವಕಾಶವಿಲ್ಲದೇ ಇದ್ದರೆ ಅದು ಮನೆಯೇ ಅಲ್ಲ. ಹಾಗಾಗಿಯೇ ನಮ್ಮ ಮನೆಗೆ ಎಷ್ಟೊಂದು ಕಿಟಕಿಗಳಿವೆ ನೋಡಿ'... ಎಂದು ಹರ್ಷಚಿತ್ತದಿಂದ ಪ್ರತಿ ಕಿಟಕಿಯತ್ತ ಬೆರಳು ಮಾಡಿ ಅವುಗಳ ವಿಶೇಷತೆ ವಿವರಿಸಿದರು ಪಕ್ಕದ ಹೊಸ ಮನೆಯ ಮಾಲೀಕರು.

ಮನೆಗೆ ಬಾಗಿಲು ಎಷ್ಟು ಮುಖ್ಯವೋ, ಕಿಟಕಿಗಳೂ ಅಷ್ಟೇ ಮುಖ್ಯ. ಬಾಗಿಲುಗಳಿಗಿಂತ ಹೆಚ್ಚಾಗಿ ಕಿಟಕಿಗಳೇ ಪ್ರಾಧಾನ್ಯ ಪಡೆಯುತ್ತಿರುವುದು ಈಗಿನ ಟ್ರೆಂಡ್. ಅಂತೆಯೇ ಕಿಟಕಿಗಳು ಮನೆಯ ಸೌಂದರ್ಯ ಹೆಚ್ಚಿಸುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಮನೆ ನಿರ್ಮಾಣಕ್ಕೆ ವ್ಯಯಿಸುವ ಒಟ್ಟಾರೆ ಖರ್ಚಿನಲ್ಲಿ ಶೇ 15ರಷ್ಟು ಭಾಗ ಕಿಟಕಿಗಳಿಗೆಂದೇ ಮೀಸಲಿಡ ಬೇಕಾಗುತ್ತದೆ.

ಕಿಟಕಿಗಳ ಪ್ರಾಮುಖ್ಯ ಹೆಚ್ಚಾಗುತ್ತಿದ್ದಂತೆ ಹೊಸ ಹೊಸ ವಿನ್ಯಾಸಗಳೂ ರೂಪು ತಳೆಯುತ್ತಿವೆ. ಎಷ್ಟು ಹಣ ವೆಚ್ಚ ಮಾಡುತ್ತೇವೆ ಎಂಬುದರ ಮೇಲೆ ಕಿಟಕಿಗಳ ವಿನ್ಯಾಸ, ಆಕಾರ, ಬಾಳಿಕೆ ಅವಲಂಬಿಸಿರುತ್ತದೆ. ಕಿಟಕಿಗಳ ಬಳಕೆ ಕಡಿಮೆ ಆದಷ್ಟೂ ಮನೆ ನಿರ್ಮಾಣಕ್ಕೆ ಮಾಡುವ ಖರ್ಚನ್ನು ಸ್ವಲ್ಪವಾದರೂ ಕಡಿಮೆ ಮಾಡಬಹುದು. ಒಂದು ಅಡಿ ಉದ್ದ ಮತ್ತು ಎತ್ತರದ ಗೋಡೆ ಕಟ್ಟಲು 120ರಿಂದ 130 ರೂಪಾಯಿ ಖರ್ಚಾಗುತ್ತದೆ. ಅತ್ಯಂತ ಕಡಿಮೆ ದರದ ಮರ ಬಳಸಿ ಕಿಟಕಿ ಮಾಡಿಸುತ್ತೇವೆಂದರೂ ಒಂದು ಅಡಿ ಉದ್ದ-ಎತ್ತರದ ಕಿಟಕಿ ನಿರ್ಮಿಸಲು ಏನಿಲ್ಲವೆಂದರೂ 170ರಿಂದ 180 ರೂಪಾಯಿ ಖರ್ಚಾಗುತ್ತದೆ. ಅಂದರೆ, ಇಟ್ಟಿಗೆ ಗೋಡೆಗೆ ಹೋಲಿಸಿದರೆ ಕಿಟಕಿಗಳ ಅಳವಡಿಕೆ ಅಡಿ ಲೆಕ್ಕದಲ್ಲಿ ರೂ. 50ರಷ್ಟು ದುಬಾರಿ.

ಸಾಮಾನ್ಯವಾಗಿ ಕಿಟಕಿಗಳನ್ನು ತೇಗ, ಹೊನ್ನೆ, ಮತ್ತಿ, ಬೇವು ಮೊದಲಾದ ಮರಗಳ ಪಟ್ಟಿಯಿಂದ ನಿರ್ಮಿಸಲಾಗುತ್ತದೆ. ಅಲ್ಲದೆ, ಇತ್ತೀಚೆಗೆ ನಗರ ಪ್ರದೇಶಗಳಲ್ಲಿ, ಅದರಲ್ಲೂ ಕಚೇರಿ, ಫ್ಯಾಕ್ಟರಿ ಕಟ್ಟಡಗಳಲ್ಲಿ ಚೌಕಟ್ಟಿಗೆ ಸ್ಟೀಲ್, ಅಲ್ಯುಮಿನಿಯಂ ಹಾಗೂ ಮುಚ್ಚಲು ಗಾಜು ಅಥವಾ ಪ್ಲೆವುಡ್ ಬಳಸಲಾಗುತ್ತದೆ. ಹೀಗೆ ಕಿಟಕಿಗಳನ್ನು ಹಲವು ಬಗೆಯ ವಸ್ತು, ಸಾಮಗ್ರಿಗಳನ್ನು ಬಳಸಿ ನಿರ್ಮಿಸಬಹುದು. ಮನೆಯ ಪಕ್ಕದಲ್ಲೇ, ಅಂದರೆ ಮಧ್ಯೆ ಹೆಚ್ಚು ಅಂತರವಿಲ್ಲದೆ ಮತ್ತೊಂದು ಮನೆ ಇದ್ದ ಸಂದರ್ಭಗಳಲ್ಲಿ ಆ ಭಾಗದ ಗೋಡೆಗಳಿಗೆ ಕಿಟಕಿ ಅಳವಡಿಸುವುದು ವ್ಯರ್ಥ. ಪಕ್ಕದ ಮನೆಯ ಗೋಡೆ ಕಿಟಕಿಗಳಿಗೆ ಅಡ್ಡವಾಗಿ ನಿಲ್ಲುವ ಸಂಭವಗಳೂ ಹೆಚ್ಚಿರುತ್ತವೆ. ನಡುವೆ ಸ್ಥಳ ಕಡಿಮೆ ಇದ್ದರೆ ಸೂರ್ಯನ ಬೆಳಕು ಒಳಬರುವ ಸಾಧ್ಯತೆ ಬಹಳ ಕಡಿಮೆ. ಗಾಳಿಯ ಓಡಾಟವೂ ಅಷ್ಟೇನೂ ಸರಾಗವಾಗಿ ಇರದು. ಇಂತಹ ಸಂದರ್ಭದಲ್ಲಿ `ಸ್ಕೈ ಲೈಟ್'ಗಳನ್ನು ಬಿಡುವ ಪರಿಪಾಠ ಈಗೀಗ ಹೆಚ್ಚಾಗುತ್ತಿದೆ. ಅಂದರೆ ಮೇಲ್ಛಾವಣಿಯಿಂದಲೇ ಗಾಳಿ-ಬೆಳಕು ಮನೆಯೊಳಕ್ಕೆ ಹರಿದು ಬರುವಂತೆ ಮಾಡುವುದು. ಈಗಿನ ಭಿನ್ನ ವಿನ್ಯಾಸದ ಮನೆಗಳ ಕಿಟಕಿಗಳು ಗಾಳಿ-ಬೆಳಕಿನ ಪ್ರವೇಶಕ್ಕಷ್ಟೇ ಸೀಮಿತವಾಗಿಲ್ಲ. ಭಿನ್ನ ಆಕಾರ, ವಿನ್ಯಾಸಗಳಿಂದಲೂ ಮನೆಯ ಅಂದವನ್ನು ಹೆಚ್ಚಿಸಲು ನೆರವಾಗುತ್ತಿವೆ. ಹೊರ ಪ್ರಪಂಚವನ್ನು ಕಿಟಕಿಯಿಂದಲೇ ವೀಕ್ಷಿಸಲು ಅನುವಾಗುವಂತೆ ರೂಪು ತಳೆಯುತ್ತಿವೆ. ಒಂದೇ ಬಾಗಿಲಿನ ಕಿಟಕಿಯಿಂದ ಹಿಡಿದು, ಹಜಾರದ ಇಡೀ ಗೋಡೆಯನ್ನು ಆವರಿಸಿಕೊಳ್ಳುವ ಕಿಟಕಿಗಳ ಅಳವಡಿಕೆಯೂ ಇತ್ತೀಚೆಗೆ ಹೆಚ್ಚುತ್ತಿದೆ.

ಕಿಟಕಿ ಇತಿಹಾಸ

ಪಾರದರ್ಶಕ, ಅಪಾರದರ್ಶಕ ಗಾಜು, ಮರದ ಹಲಗೆ, ಪ್ಲೈವುಡ್, ಕಬ್ಬಿಣದ ಸರಳು ಮೊದಲಾದ ವಸ್ತುಗಳಿಂದ ನಿರ್ಮಾಣವಾಗುವ ಈ ಕಿಟಕಿಗಳಿಗೂ ಇತಿಹಾಸವಿದೆ. ಹರಪ್ಪಾ-ಮಹೆಂಜೆದಾರೋ ಕಾಲಘಟ್ಟದಲ್ಲೇ ಮನೆಗಳಿಗೆ ಕಿಟಕಿಗಳನ್ನು ಬಳಸಿರುವ ಕುರುಹು ಸಿಕ್ಕಿದೆ. ಆದರೆ, ಕಿಟಕಿಗಳು ಎಂದರೆ ಹೀಗೇ ಇರಬೇಕು ಎಂಬಂತಹ ಸ್ಪಷ್ಟ ಆಕಾರ ಬಂದಿದ್ದು 13ನೇ ಶತಮಾನದಲ್ಲಿ ಎನ್ನುತ್ತದೆ ಇತಿಹಾಸ.

ಇದಕ್ಕೂ ಪೂರ್ವದಲ್ಲಿ ಮನೆಯ ಗೋಡೆಗಳಿಗೆ ಗಾಳಿ ಬರಲೆಂದು ಅಲ್ಲಲ್ಲಿ ಸಣ್ಣ ಸಣ್ಣ ರಂದ್ರಗಳು ಇರುವಂತೆ ಗೋಡೆ ಕಟ್ಟುವಾಗಲೇ ಖಾಲಿ ಬಿಡುತ್ತಿದ್ದರು. ನಂತರ ಬೆಳಕಿಗಾಗಿ ಇನ್ನೂ ದೊಡ್ಡ ರಂದ್ರಗಳನ್ನು ಮಾಡುವ ಕಲ್ಪನೆ ಹುಟ್ಟಿಕೊಂಡಿತು. ದೊಡ್ಡ ರಂದ್ರಗಳಿಂದ ಚಳಿಗಾಲದಲ್ಲಿ ಮನೆಯ ಒಳಗೆ ಗಾಳಿ ಹೆಚ್ಚಾಗಿ ಬೆಚ್ಚಗಿನ ಹವೆ ಕಡಿಮೆ ಆಗುತ್ತಿದೆ ಎನಿಸಿದಾಗ ಆ ವ್ಯತ್ಯಾಸವನ್ನು ಅರ್ಥ ಮಾಡಿಕೊಂಡ ಪುರಾತನ ಜನತೆ, ದೊಡ್ಡ ರಂದ್ರಗಳಿಗೆ ಅಡ್ಡಲಾಗಿ ಬೇಕೆಂದಾಗ ತೆರೆಯುವ, ಬೇಡವಾದಾಗ ಮುಚ್ಚುವ ವ್ಯವಸ್ಥೆ ಮಾಡಿಕೊಂಡರು. ಆಗಲೇ ವೃತ್ತಾಕಾರದ ರಂದ್ರಗಳಿಗೆ ತಟ್ಟೆಯಾಕಾರದ ಮರದ ಹಲಗೆಯ ಪರಿಕಲ್ಪನೆ ಮೂಡಿತು.

ಕಾಲಾನಂತರದಲ್ಲಿ ರಂದ್ರಗಳ ಆಕಾರದ ಕಿಟಕಿಗಳು ಚೌಕಾಕಾರಕ್ಕೆ ಬದಲಾದವು. ಇನ್ನಷ್ಟು ಅಗಲವಾದ ಬಾಗಿಲುಗಳನ್ನು ಒಳಗೊಂಡ ಕಿಟಕಿಗಳು ಉಗಮವಾದವು. ಹೀಗೆ ಹಂತ ಹಂತವಾಗಿ ಕಿಟಕಿಗಳು ರೂಪುತಳೆದವು ಎಂದು ಕಿಟಕಿಗಳು ಉಗಮಗೊಂಡ ಬಗೆಯನ್ನು ವಿವರಿಸುತ್ತಾರೆ ವಾಸ್ತುಶಿಲ್ಪಿ ಪ್ರಭಾಕರ್.

ಕಿಟಕಿ ಪದ

`ವಿಂಡೋ' ಪದವು ಸ್ವೀಡನ್ನ fenster ಅಥವಾ ಜರ್ಮನಿಯ fenster ಪದದಿಂದ ಉಗಮಗೊಂಡಿದೆ. 18ನೇ ಶತಮಾನದವರೆಗೂ ಕಿಟಕಿಗಳಿಗೆ ಇಂಗ್ಲಿಷ್ನಲ್ಲಿ fenester ಪದವನ್ನೇ ಬಳಸಲಾಗುತ್ತಿತ್ತು. ಕಾಲಾನಂತರದಲ್ಲಿ ಅದಕ್ಕೆ ಬದಲಾಗಿ `ವಿಂಡೋ' ಪದ ಬಳಸಲಾಯಿತು. ಈ ಪದಕ್ಕೆ ಕನ್ನಡದಲ್ಲಿ `ಕಿಟಕಿ', `ಬೆಳಕು-ಗಾಳಿ ಬರುವ ಕಂಡಿ', `ಗವಾಕ್ಷಿ' ಎಂಬ ಅರ್ಥಗಳಿವೆ.


ವಾಸ್ತು ವಾಸ್ತವ

ಬೆಳಗಿನ ಸೂರ್ಯ ಕಿರಣಗಳಲ್ಲಿ ಸಕಾರಾತ್ಮಕ ಶಕ್ತಿ (ಪಾಸಿಟೀವ್ ಎನರ್ಜಿ) ವಿಪುಲವಾಗಿದೆ. ಇವು ಮನುಷ್ಯರ ದೇಹಕ್ಕೆ ಬಹಳ ಪ್ರಯೋಜನಕಾರಿ. ಆದರೆ ಮಧ್ಯಾಹ್ನದ ಸೂರ್ಯಕಿರಣ ನಕಾರಾತ್ಮಕ ಶಕ್ತಿ(ನೆಗೆಟೀವ್ ಎನರ್ಜಿ) ಸೂಸುತ್ತವೆ. ಭೂಮಿಯ ಆಯಸ್ಕಾಂತ ಶಕ್ತಿಯಲ್ಲಿ ಈಶಾನ್ಯ ದಿಕ್ಕು ಸಕಾರಾತ್ಮಕ ದ್ರುವದಂತೆ ಮತ್ತು ನೈರುತ್ಯ ನಕಾರಾತ್ಮಕ ದ್ರುವದಂತೆ ಕಾರ್ಯ ನಿರ್ವಹಿಸುತ್ತವೆ. ಆದ್ದರಿಂದ ಈಶಾನ್ಯ ಕಡೆಗಳಲ್ಲಿ ಅಗಲವಾದ ಕಿಟಕಿಗಳೊಂದಿಗೆ ಮತ್ತು ನೈರುತ್ಯ ದಿಕ್ಕಿನಲ್ಲಿ ಸಣ್ಣ ಕಿಟಕಿಗಳೊಂದಿಗೆ ಮನೆ ನಿರ್ಮಿಸಬೇಕು. ಈಶಾನ್ಯ ದಿಕ್ಕಿನಲ್ಲಿ ಕಿಟಕಿ ಬಾಗಿಲುಗಳ ಮೂಲಕ ಉಚ್ಚ ಶಕ್ತಿಯನ್ನು ಸುದೀರ್ಘ ಅವಧಿವರೆಗೆ ಇರಿಸಬಹುದು. ಬಾಗಿಲು ಕಿಟಕಿಗಳು ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ಉಪಸ್ಥಿತಿಯನ್ನು ಸದಾ ತೆರೆದಿಡುತ್ತವೆ ಎಂಬುದು ವಾಸ್ತ್ರುಪ್ರಿಯರ ನಂಬಿಕೆ. ಅದೇನೇ ಇರಲಿ, `ಕಿಟಕಿ' ಪದದಲ್ಲೊಂದು ಕೀಟಲೆ ಇದೆ. ಅದು ಎಡದಿಂದ ಓದಿದರೂ, ಬಲದಿಂದಲೇ ಓದಿದರೂ `ಕಿಟಕಿ'...