ಸದಸ್ಯ:Satish.sub/ಪ್ರೀತಿ ಶಂಕರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರೀತಿ ಶಂಕರ
ಜನನಸೆಪ್ಟೆಂಬರ್ ೧೯೪೭
ಮರಣಅಕ್ಟೋಬರ್ ೨೦೧೧
ವಾಸಭಾರತ
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರಗಳುಕಂಪೈಲರ್ ವಿನ್ಯಾಸ, ಔಪಚಾರಿಕ ಭಾಷಾ ಸಿದ್ಧಾಂತ ಮತ್ತು ಅಲ್ಗಾರಿದಮಿಕ್ ಕೋಡಿಂಗ್ ಸಿದ್ಧಾಂತ
ಸಂಸ್ಥೆಗಳುಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು ಮತ್ತು ಸಿ.ಆರ್‌.ಸಿ. ಪ್ರೆಸ್‌
ಅಭ್ಯಸಿಸಿದ ಸಂಸ್ಥೆಭಾರತೀಯ ತಂತ್ರಜ್ಞಾನ ಸಂಸ್ಥೆ, ದೆಹಲಿ ಮತ್ತು ಮೇರಿಲ್ಯಾಂಡ್ ವಿಶ್ವವಿದ್ಯಾಲಯ, ಅಮೆರಿಕ
ಗಮನಾರ್ಹ ಪ್ರಶಸ್ತಿಗಳು೨೦೦೭ರಲ್ಲಿ ಜಯ ಜಯಂತ್ ಪ್ರಶಸ್ತಿ ಮತ್ತು ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಇಂಜಿನಿಯರುಗಳ ಸಂಸ್ಥೆ (IEEE) ಯಿಂದ ವಿಶಿಷ್ಠ ಉಪನ್ಯಾಸಕಿ ಎಂದು ಹೆಸರಿಸಲ್ಪಟ್ಟದ್ದು
ಜೀವನ ಸಂಗಾತಿಪಿ.ಎನ್. ಶಂಕರ
ಮಕ್ಕಳುನಚಿಕೇತ್ (ಮಗ) ಮತ್ತು ಮೃದುಲಾ (ಮಗಳು)

ಪ್ರೀತಿ ಶಂಕರ (ಮೂಲ ಹೆಸರು:ಪ್ರೀತಿ ಮಾಂಟೆರೋ ; ಸೆಪ್ಟೆಂಬರ್ ೧೯೪೭ - ಅಕ್ಟೋಬರ್ ೨೦೧೧) ಒಬ್ಬ ಭಾರತೀಯ ಶಿಕ್ಷಕಿ, ಸಂಶೋಧಕಿ ಮತ್ತು ಶಿಕ್ಷಣ ತಜ್ಞೆ. ಅವರ ಸಂಶೋಧನೆಯು ಕಂಪೈಲರ್ ವಿನ್ಯಾಸ, ಔಪಚಾರಿಕ ಭಾಷಾ ಸಿದ್ಧಾಂತ ಮತ್ತು ಅಲ್ಗಾರಿದಮಿಕ್ ಕೋಡಿಂಗ್ ಸಿದ್ಧಾಂತಗಳ ಮೇಲೆ ಕೇಂದ್ರೀಕರಿಸಿದೆ. [೧]

ಆರಂಭಿಕ ಜೀವನ ಮತ್ತು ವೃತ್ತಿ[ಬದಲಾಯಿಸಿ]

ಪ್ರೀತಿ ಅವರು ಗೋವಾದ ಒಂದು ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಇನ್ನೊಸೆನ್ಸಿಯೊ ಮಾಂಟೆರೊ ಭಾರತೀಯ ಸೇನೆಯಲ್ಲಿ ಬ್ರಿಗೇಡಿಯರ್ ಆಗಿದ್ದರು ಮತ್ತು ತಾಯಿ ಸೋಫಿಯಾ [೨] ಗಣಿತ ಮತ್ತು ಫ್ರೆಂಚ್ ಶಿಕ್ಷಕಿಯಾಗಿದ್ದರು.

೧೯೫೮ರಲ್ಲಿ ಅವರ ತಂದೆ-ತಾಯಿ ಪುಣೆಯ ಖಡಕ್ವಾಸ್ಲಾದಿಂದ ಜಮ್ಮುವಿಗೆ ತೆರಳಿದರು. ಅಲ್ಲಿ ಆಕೆಯ ತಂದೆ ಸುರಂಕೋಟೆಯಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಸೇವೆ ಸಲ್ಲಿಸಿದರು. ಇದರ ಪರಿಣಾಮವಾಗಿ ಪ್ರೀತಿ ಆರು ತಿಂಗಳು ಶಾಲೆಯನ್ನು ತೊರೆದು ಅವಳ ತಾಯಿಯಿಂದ ಮನೆಯಲ್ಲಿಯೇ ಶಿಕ್ಷಣ ಪಡೆಯಬೇಕಾಯಿತು. ಕೆಲವು ವರ್ಷಗಳ ನಂತರ ಅವಳು ಪುಣೆಗೆ ಹಿಂದಿರುಗಿ ಫರ್ಗುಸನ್ ಕಾಲೇಜಿಗೆ ಸೇರಿಕೊಂಡಳು. [೩] ಇದಾದ ನಂತರ ದೆಹಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ (Indian Institute of Technology) ಸೇರಿಕೊಂಡು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಬ್ಯಾಚಲರ್ ಆಫ್ ಟೆಕ್ಟ್ನಾಲಜಿ ಪದವಿಯನ್ನು ೧೯೬೮ ರಲ್ಲಿ ಪಡೆದರರು. ಈ ಸಂಸ್ಥೆಯಿಂದ ಈ ಪದವಿ ಪಡೆದ ಪ್ರಥಮ ಮಹಿಳೆ ಎನಿಸಿಕೊಂಡಳು. ನಂತರ ಅವಳು ಮೇರಿಲ್ಯಾಂಡ್ ವಿಶ್ವವಿದ್ಯಾಲಯ, ಕಾಲೇಜ್ ಪಾರ್ಕನಿಂದ ೧೯೭೨ ರಲ್ಲಿ ಪಿ.ಎಚ್‌.ಡಿ. ಪದವಿ ಪಡೆದಳು. [೪] ಒಂದು ವರ್ಷದ ನಂತರ ಅವರು ಭಾರತಕ್ಕೆ ಮರಳಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (IISc) ಆಟೊಮೇಷನ್ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡರು. [೩]

೧೯೭೯ ರಲ್ಲಿ ಪ್ರಿತಿ ಬಿಸಿಎಚ್ ಕೋಡ್ ಅನ್ನು ಅಭಿವೃದ್ಧಿಪಡಿಸುವ ಮೂಲಕ ವಿಜ್ಞಾನ ಕ್ಷೇತ್ರಕ್ಕೆ ಪ್ರವರ್ತಕರೆನಿಸಿಕೊಂಡರು. ಈ ಬಿಸಿಎಚ್ ಕೋಡನ್ನು ಸೀಮಿತ ಕ್ಷೇತ್ರಗಳಲ್ಲಿ ವ್ಯಾಖ್ಯಾನಿಸಲಾಗಿದೆ ಮತ್ತು ಅವುಸೀಮಿತ ಉಂಗುರಗಳ ಮೇಲೆ ಕಾರ್ಯನಿರ್ವಹಿಸಿದವು. ೨೦೦೨ ರಲ್ಲಿ ಅವರು ವೈ. ಎನ್. ಶ್ರೀಕಾಂತ ಅವರ ಜೊತೆ ಸಿ.ಆರ್‌.ಸಿ. ಪ್ರೆಸ್‌ನ ಸಹ ಸಂಪಾದಕರಾಗಿ ಮತ್ತು ಪರಿಣಿತರಿಂದ ಪರಾಮರ್ಶಿಸಲ್ಪಟ್ಟ ರೆಜೋನನ್ಸ್‌ ಎಂಬ ಪತ್ರಿಕೆಯ ನಾಯಕತ್ವ ಮಂಡಳಿಯಲ್ಲಿಯೂ ಸಹ ಸೇವೆ ಸಲ್ಲಿಸಿದರು. [೨]

ವೈಯಕ್ತಿಕ ಜೀವನ[ಬದಲಾಯಿಸಿ]

ಸೈದ್ಧಾಂತಿಕ ಭೌತವಿಜ್ಞಾನಿ ವಿವೇಕ್ ಮಾಂಟೆರೊ, ಚಲನಚಿತ್ರ ನಿರ್ಮಾಪಕಿ ಮತ್ತು ಮಾಧ್ಯಮ ಅಧ್ಯಯನದ ಪ್ರಾಧ್ಯಾಪಕಿಯಾದ ಅಂಜಲಿ ಮಾಂಟೆರೋ ಹಾಗು ಅಭಿವೃದ್ಧಿ ಮತ್ತು ನಡವಳಿಕೆಯ ಶಿಶುವೈದ್ಯೆ ನಂದಿತಾ ಡಿಸೋಜಾ ಸೇರಿದಂತೆ ಪ್ರೀತಿ ಹಲವಾರು ಒಡಹುಟ್ಟಿದವರನ್ನು ಹೊಂದಿದ್ದರು. ೧೯೭೪ರಲ್ಲಿ ಅವರು ಬೆಂಗಳೂರಿನ ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್ ನಲ್ಲಿ ಸೈದ್ಧಾಂತಿಕ ದ್ರವ ಕ್ರಿಯಾತ್ಮಕ ವಿಜ್ಞಾನಿಯಾದ ಪಿ.ಎನ್. ಶಂಕರ ಅವರನ್ನು ವಿವಾಹವಾದರು. ೧೯೭೬ ರಲ್ಲಿ ಅವರು ನಚಿಕೇತ್ ಎಂಬ ಗಂಡು ಮಗು ಮತ್ತು ಮತ್ತು ೧೯೮೩ರಲ್ಲಿ ಮೃದುಲಾ ಎಂಬ ಹೆಣ್ಣು ಮಗುವಿಗೆ ಜನ್ಮ ನೀಡಿದರು. [೩]

ಪ್ರಶಸ್ತಿಗಳು[ಬದಲಾಯಿಸಿ]

೨೦೦೭ ರಲ್ಲಿ ಪ್ರೀತಿ ಶಂಕರ ಅವರು ಶೈಕ್ಷಣಿಕ ಶ್ರೇಷ್ಠತೆಗಾಗಿ ಜಯ ಜಯಂತ್ ಪ್ರಶಸ್ತಿಯನ್ನು ಪಡೆದರು. ೨೦೦೬ ಮತ್ತು ೨೦೦೯ರ ನಡುವೆ ಇವರನ್ನು ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರ್‌ಗಳ ವಿಶಿಷ್ಟ ಉಪನ್ಯಾಸಕರೆಂದು ಹೆಸಿರಿಸಲಾಯಿತು. [೨]

ಪರಂಪರೆ[ಬದಲಾಯಿಸಿ]

ಪ್ರೀತಿ ಶಂಕರ ಜನಪ್ರಿಯ ಗಣಿತ ಮತ್ತು ವಿಜ್ಞಾನ ಎಂದು ಹೆಸರಿಸಲಾದ ಗ್ರಂಥಾಲಯವು ನವನಿರ್ಮಿತಿ ಕಲಿಕಾ ಪ್ರತಿಷ್ಠಾನದ UMED ಕಟ್ಟಡದಲ್ಲಿದೆ. [೫]

ಉಲ್ಲೇಖಗಳು[ಬದಲಾಯಿಸಿ]

 

  1. "PROFESSOR PRITI SHANKAR" (PDF). Indian Academy of Sciences. Retrieved 18 November 2018.
  2. ೨.೦ ೨.೧ ೨.೨ "Priti Shankar (1947–2011)" (PDF). Current Science. 102 (3). 2012.
  3. ೩.೦ ೩.೧ ೩.೨ "From the abstract to the concrete" (PDF). Computer Science Association. Retrieved 18 November 2018.
  4. "Priti Monteiro (Shankar)". Mathematics Genealogy Project Department of Mathematics North Dakota State University. Retrieved 18 November 2018.
  5. "Priti Shankar Library". Navnirmiti Learning Foundation. Retrieved 18 November 2018.